Site icon Vistara News

PFIಗೆ CCB ಶಾಕ್‌ | ಕೆ.ಜಿ. ಹಳ್ಳಿ ಕೇಸಿನಲ್ಲಿ ವಶಕ್ಕೆ ಪಡೆದ 19 ಪಿಎಫ್‌ಐ ನಾಯಕರು ಇವರು, 9 ಮಂದಿ ಮಂಗಳೂರಿನವರು!

PFI

ಬೆಂಗಳೂರು: ರಾಜ್ಯದಲ್ಲಿ ಗುರುವಾರ ಮುಂಜಾನೆ ನಡೆದ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಮತ್ತು ಎಸ್‌ಡಿಪಿಐ ಕಚೇರಿ ಹಾಗೂ ನಾಯಕರ ಮೇಲಿನ ದಾಳಿಯಲ್ಲಿ ಒಟ್ಟು ೨೬ ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಇವರ ಪೈಕಿ ೭ ಮಂದಿಯನ್ನು ಎನ್‌ಐಎ ವಶಕ್ಕೆ ಪಡೆದಿದ್ದರೆ, ೧೯ ಮಂದಿಯನ್ನು ರಾಜ್ಯ ಪೊಲೀಸರು ತಮ್ಮ ವಶದಲ್ಲಿ ಇಟ್ಟುಕೊಂಡಿದ್ದಾರೆ.

ಗುರುವಾರ ಬೆಳಗ್ಗೆ ಏಳು ಜಿಲ್ಲೆಗಳ ೩೦ಕ್ಕೂ ಅಧಿಕ ಪ್ರದೇಶಗಳಲ್ಲಿ ದಾಳಿ ನಡೆದಿತ್ತು. ಎಲ್ಲ ಕಡೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ದಾಳಿ ನಡೆದಿದೆ ಎಂದು ಭಾವಿಸಲಾಗಿತ್ತು. ಆದರೆ, ಎನ್‌ಐಎ ದಾಳಿ ನಡೆಸಿರುವುದು ಬೆಂಗಳೂರು ಮತ್ತು ಮಂಗಳೂರುಗಳಲ್ಲಿ ಮಾತ್ರ. ಅದರಲ್ಲೂ ಬೆಂಗಳೂರಿನ ಪುಲಿಕೇಶಿ ನಗರದ ಪಿಎಫ್‌ಐ ಪ್ರಧಾನ ಕಚೇರಿ, ಮಂಗಳೂರಿನ ನೆಲ್ಲಿಕಾಯಿ ಮಠ ರಸ್ತೆಯಲ್ಲಿರುವ ಪಿಎಫ್‌ಐ ಕಚೇರಿಗೆ ಲಗ್ಗೆ ಇಟ್ಟಿತ್ತು. ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯಲ್ಲದೆ, ಇತರ ಏಳು ಕಡೆಗಳಲ್ಲಿ ದಾಳಿ ನಡೆಸಿ ಒಟ್ಟು ಏಳು ಮಂದಿ ನಾಯಕರನ್ನು ವಶಕ್ಕೆ ಪಡೆದಿದ್ದರೆ, ಮಂಗಳೂರಿನಲ್ಲಿ ಯಾರನ್ನೂ ವಶಕ್ಕೆ ಪಡೆದಿಲ್ಲ. ಕೇವಲ ಕಚೇರಿಯಲ್ಲಿರುವ ದಾಖಲೆಗಳನ್ನು ವಶಕ್ಕೆ ಪಡೆದಿದೆ ಅಷ್ಟೆ.

ಮಂಗಳೂರು ಸೇರಿದಂತೆ ರಾಜ್ಯದ ಏಳು ನಗರಗಳಲ್ಲಿ ಅದೇ ಹೊತ್ತಿಗೆ ರಾಜ್ಯ ಸಿಸಿಬಿ ಮತ್ತು ಪೂರ್ವ ವಲಯದ ಪೊಲೀಸರು ಏಕಕಾಲದಲ್ಲಿ ಪಿಎಫ್‌ಐ ಮೇಲೆ ಮುಗಿಬಿದ್ದಿದ್ದರು. ಈ ಪ್ರಕರಣ ಸದ್ಯಕ್ಕೆ ಬೆಂಗಳೂರು ಪೊಲೀಸರ ಸುಪರ್ದಿಯಲ್ಲಿದೆ. ಇದನ್ನು ಕೆ.ಜಿ. ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದ ದಾಳಿ ಎಂದೂ ಪ್ರಸಕ್ತ ಉಲ್ಲೇಖಿಸಲಾಗುತ್ತಿದೆ.

ಹಾಗಿದ್ದರೆ ಏನಿದು ಕೆ.ಜಿ. ಹಳ್ಳಿ ಸಂಬಂಧಿತ ಪ್ರಕರಣ?
ವರ್ಷದ ಹಿಂದೆ ಕೆ.ಜಿ. ಹಳ್ಳಿಯಲ್ಲಿ ದೊಡ್ಡ ಮಟ್ಟದ ಗಲಭೆ ನಡೆದ ಬಳಿಕ ಅಲ್ಲಿನ ಚಟುವಟಿಕೆಗಳ ಮೇಲೆ ಪೊಲೀಸ್‌ ಇಲಾಖೆ ನಿಗಾ ಇಟ್ಟಿದೆ. ಈ ವೇಳೆ ಪಿಎಫ್ಐ ಕಾರ್ಯಕರ್ತರಿಗೆ ಭಯೋತ್ಪಾದಕ ಕೃತ್ಯವೆಸಗಲು ತರಬೇತಿ ನೀಡಲಾಗುತ್ತಿದೆ ಎನ್ನುವ ಮಾಹಿತಿ ಸಿಕ್ಕಿತ್ತು. ಆ ಮಾಹಿತಿ ಆಧಾರದ ಮೇಲೆ ಕೆ.ಜಿ. ಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿ ಬಂದಿದ್ದ ಆರೋಪಿಗಳಾದ ಬೆಂಗಳೂರಿನ ನಾಸಿರ್ ಹಾಗೂ ಮನ್ಸೂರ್‌ನನ್ನು ವಶಕ್ಕೆ ಪಡೆದ ಕೆ.ಜಿ. ಹಳ್ಳಿ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದರು. ವಿಚಾರಣೆ ವೇಳೆ ಆರೋಪಿಗಳ ನೆಟ್ ವರ್ಕ್ ಕೇವಲ ಬೆಂಗಳೂರಿಗೆ ಮಾತ್ರವಲ್ಲದೇ ರಾಜ್ಯವ್ಯಾಪಿ ಇದೆ ಎಂಬ ಸ್ಫೋಟಕ ಮಾಹಿತಿ ಆರೋಪಿಗಳ ಬಾಯಿಂದ ಹೊರ ಬಿದ್ದಿತ್ತು. ಇದೆಲ್ಲ ನಡೆದಿದ್ದು ಕೆಲವು ದಿನಗಳ ಹಿಂದಷ್ಟೆ. ತುರ್ತು ಸಭೆ ನಡೆಸಿದ ಪೊಲೀಸ್‌ ಅಧಿಕಾರಿಗಳು ಒಂದೇ ದಿನದಲ್ಲಿ ಏಕಕಾಲದಲ್ಲಿ ದಾಳಿಗೆ ಸಿದ್ಧರಾದರು.
ಅದೇ ರೀತಿ ತಡರಾತ್ರಿಯೇ ರಾಜ್ಯದ ಯಾವ ಯಾವ ಸ್ಥಳಗಳಲ್ಲಿ ದಾಳಿ ಮಾಡಬೇಕು ಎನ್ನುವ ಬಗ್ಗೆ ತೀರ್ಮಾನ ಮಾಡಿ ಬೆಳಗಾಗುವುದರ ಒಳಗೆ ಬೆಂಗಳೂರು, ಮಂಗಳೂರು, ಶಿವಮೊಗ್ಗ, ಮೈಸೂರು, ಉತ್ತರ ಕನ್ನಡ, ಕೊಪ್ಪಳ, ದಾವಣಗೆರೆ ಹಾಗೂ ಕಲಬುರಗಿಯಲ್ಲಿ ಕಾರ್ಯಾಚರಣೆ ನಡೆಸಿ, ೧೯ ಮಂದಿ ಪಿಎಫ್ಐ ಸಂಘಟನೆ ಸದಸ್ಯರನ್ನು ಬಂಧಿಸಲಾಯಿತು. ಅವರೆಲ್ಲರನ್ನು ಗುರುವಾರ ಸಂಜೆಯ ಹೊತ್ತಿಗೆ ಬೆಂಗಳೂರಿಗೆ ಕರೆತರಲಾಗಿದ್ದು ಆಡುಗೋಡಿ ಟೆಕ್ನಿಕಲ್‌ ಸೆಲ್‌ನಲ್ಲಿ ಇಟ್ಟು ವಿಚಾರಣೆ ನಡೆಸಲಾಗುತ್ತಿದೆ. ಇವರು ನೀಡುವ ಮಾಹಿತಿಯ ಆಧಾರದಲ್ಲಿ ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆ ಇದೆ.

ಹಾಗಿದ್ದರೆ ಗುರುವಾರ ವಶಕ್ಕೆ ಪಡೆಯಲಾದವರು ಯಾರು?
ವಶಕ್ಕೆ ಪಡೆದ ೧೯ ಮಂದಿಯಲ್ಲಿ ಒಂಬತ್ತು ಮಂದಿ ದಕ್ಷಿಣ ಕನ್ನಡ ಜಿಲ್ಲೆಯವರೇ ಆಗಿದ್ದಾರೆ.

ಬೆಂಗಳೂರು ನಗರ(೨)
೧. ನಾಸಿರ್‌ ಪಾಷಾ, ಪಿಲ್ಲಾನಾ ಗಾರ್ಡನ್‌, ಬೆಂಗಳೂರು
೨. ಮನ್ಸೂರ್‌ ಅಹಮದ್‌, ಎಚ್‌.ಬಿ.ಆರ್‌. ಲೇಔಟ್‌, ಬೆಂಗಳೂರು

ಕಲಬುರಗಿ ಜಿಲ್ಲೆ(೧)
೩. ಶೇಕ್‌ ಇಜಾಜ್‌ ಅಲಿ, ಮೆಹಬೂಬ್‌ ನಗರ, ಕಲಬುರಗಿ

ಮೈಸೂರು ಜಿಲ್ಲೆ(೧)
೪. ಮೊಹಮ್ಮದ್‌ ಖಲೀಮುಲ್ಲಾ, ಶಾಂತಿನಗರ, ಮೈಸೂರು

ದಕ್ಷಿಣ ಕನ್ನಡ ಜಿಲ್ಲೆ(೯)
೫. ಮೊಹಮ್ಮದ್‌ ಅಶ್ರಫ್‌ ಅಂಕಜಾಲ್‌, ಕಂಕನಾಡಿ, ಮಂಗಳೂರು
೬. ಮೊಹಮ್ಮದ್‌ ಷರೀಫ್‌, ಪೆರ್ಮುದೆ, ಬಜಪೆ, ಮಂಗಳೂರು
೭. ಅಬ್ದುಲ್‌ ಖಾದರ್‌ ಪುತ್ತೂರು, ಸಾಮೆತ್ತಡ್ಕ, ಪುತ್ತೂರು, ದ.ಕನ್ನಡ
೮. ಮೊಹಮ್ಮದ್‌ ತಫ್ಸೀರ್‌, ಕರಿಂಗಾನ, ಬಂಟ್ವಾಳ ತಾಲೂಕು, ದ.ಕನ್ನಡ
೯. ಮೊಹಿಯುದ್ದೀನ್‌, ಹಳೆಯಂಗಡಿ, ಮಂಗಳೂರು, ದ.ಕನ್ನಡ
೧೦. ನವಾಜ್‌ ಕಾವೂರು, ಕಾವೂರು, ಮಂಗಳೂರು, ದ. ಕನ್ನಡ
೧೧. ಅಶ್ರಫ್‌, ಜೋಕಟ್ಟೆ, ಮಂಗಳೂರು
೧೨. ಅಬ್ದುಲ್‌ ರಜಾಕ್‌ ಕೆಮ್ಮಾರ, ಅತೂರು, ಪುತ್ತೂರು, ದ.ಕನ್ನಡ
೧೩. ಆಯೂಬ್‌ ಕೆ. ಅಗ್ನಾಡಿ, ಗಾಂಧಿ ಪಾರ್ಕ್‌, ಉಪ್ಪಿನಂಗಡಿ, ದ.ಕನ್ನಡ

ಶಿವಮೊಗ್ಗ ಜಿಲ್ಲೆ(೧)
೧೪. ಶಾಹಿದ್‌ ಖಾನ್‌, ಲಷ್ಕರ್‌ ಮೊಹಲ್ಲಾ, ಶಿವಮೊಗ್ಗ

ದಾವಣಗೆರೆ ಜಿಲ್ಲೆ(೨)
೧೫. ತಾಹಿರ್‌, ಗೌಡ್ರು ಸ್ಟ್ರೀಟ್‌, ಹರಿಹರ, ದಾವಣಗೆರೆ
೧೬. ಇಮಾನುದ್ದೀನ್‌, ಬಕ್ಕೇಶ್ವರ ಹೈಸ್ಕೂಲ್‌ ಸಮೀಪ, ದಾವಣಗೆರೆ

ಉತ್ತರ ಕನ್ನಡ ಜಿಲ್ಲೆ(೨)
೧೭. ಅಬ್ದುಲ್‌ ಅಜೀಜ್‌ ಅಬ್ದುಲ್‌, ಟಿಪ್ಪು ನಗರ, ಬನವಾಸಿ, ಶಿರಸಿ, ಉ.ಕನ್ನಡ
೧೮. ಮೌಸಿನ್‌ ಅಬ್ದುಲ್‌ ಶುಕೂರ್‌, ಟಿಪ್ಪು ನಗರ, ಬನವಾಸಿ, ಶಿರಸಿ, ಉ.ಕನ್ನಡ

ಕೊಪ್ಪಳ ಜಿಲ್ಲೆ(೧)
೧೯. ಮೊಹಮ್ಮದ್‌ ಫಯಾಜ್‌, ಕ್ವಿಲಾ ಏರಿಯಾ, ಗಂಗಾವತಿ, ಕೊಪ್ಪಳ ಜಿಲ್ಲೆ

ಹಾಗಿದ್ದರೆ ಎನ್‌ಐಎ ವಶದಲ್ಲಿ ಇರುವವರು ಯಾರು?
ಎನ್‌ಐಎ ವಶದಲ್ಲಿರುವ ಎಲ್ಲರೂ ಬೆಂಗಳೂರಿನವರೇ ಆಗಿದ್ದಾರೆ. ಇದರಲ್ಲಿ ಯಾಸಿರ್‌ ಅರಾಫತ್‌ ಹಸನ್‌ನ್ನು ಈಗಾಗಲೇ ದಿಲ್ಲಿಗೆ ಕರೆದೊಯ್ಯಲಾಗಿದೆ.
1. ಅನೀಸ್‌ ಅಹಮದ್‌, ಪಿಎಫ್‌ಐನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
೨. ಅಫ್ಸರ್‌ ಪಾಷಾ, ರಾಷ್ಟ್ರೀಯ ಕಾರ್ಯದರ್ಶಿ
೩. ಅಬ್ದುಲ್‌ ವಹೀದ್‌ ಸೇಠ್‌, ರಾಷ್ಟ್ರೀಯ ಕಾರ್ಯಕಾರಣಿ ಸಮಿತಿ ಸದಸ್ಯ
೪. ಯಾಸಿರ್‌ ಅರಾಫತ್‌ ಹಸನ್‌, ಟೆರರ್‌ ಫಂಡಿಂಗ್‌ ಮ್ಯಾನೇಜರ್‌
೫. ಮಹಮ್ಮದ್‌ ಶಕೀಬ್‌, ರಾಷ್ಟ್ರೀಯ ಮಾಧ್ಯಮ ಕಾರ್ಯದರ್ಶಿ
೬. ಮೊಹಮ್ಮದ್‌ ಫಾರುಕ್‌ ಉರ್‌ ರಹಮಾನ್‌, ಬೆಂಗಳೂರು
೭. ಶಾಹಿದ್‌ ನಾಸಿರ್‌, ಬೆಂಗಳೂರು

ಇದನ್ನೂ ಓದಿ | NIA Raid | ಪಿಎಫ್​ಐ ನಿಷೇಧ ಪ್ರಕ್ರಿಯೆಯ ಮೊದಲ ಹೆಜ್ಜೆಯೇ ಇಂದಿನ ಎನ್​ಐಎ ದಾಳಿ?

Exit mobile version