Site icon Vistara News

ಕಂಚುಗಲ್‌ ಬಂಡೇಮಠದ ಸ್ವಾಮೀಜಿ ಮಠದಲ್ಲೇ ನೇಣಿಗೆ ಶರಣು

swamiji suicide

ರಾಮನಗರ: ಇಲ್ಲಿನ ಮಠದ ಸ್ವಾಮೀಜಿಯೊಬ್ಬರು ಮಠದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಶ್ರೀ ಕಂಚುಗಲ್ ಬಂಡೇ‌‌ಮಠದ ಬಸವಲಿಂಗ ಸ್ವಾಮೀಜಿ (೪೫) ನೇಣಿಗೆ ಶರಣಾದವರು. ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಠದ ಆಪ್ತರು, ಸ್ವಾಮೀಜಿಯವರ ನಿಕಟವರ್ತಿಗಳನ್ನು ವಿಚಾರಿಸಲಾಗುತ್ತಿದ್ದು, ಸ್ವಾಮೀಜಿ ಆತ್ಮಹತ್ಯೆಯ ಹಿಂದಿನ ಕಾರಣಗಳಿಗಾಗಿ ಪೊಲೀಸರು ಶೋಧಿಸುತ್ತಿದ್ದಾರೆ. ಹಣಕಾಸಿನ ಸಮಸ್ಯೆ ಇತ್ಯಾದಿಗಳ ಹಿನ್ನೆಲೆಯಲ್ಲಿ ಶೋಧ ನಡೆದಿದೆ.

ಸೆಪ್ಟಂಬರ್‌ನಲ್ಲಿ ಬೆಳಗಾವಿಯ ಗುರು ಮಡಿವಾಳೇಶ್ವರ ಮಠದ ಶ್ರೀ ಬಸವ ಸಿದ್ದಲಿಂಗ ಸ್ವಾಮೀಜಿ ಅವರು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು.

ಇದನ್ನೂ ಓದಿ | ಯಾರೋ ಹಾರಿಸಿದ ಗಾಳಿಪಟದ ಮಾಂಜಾ ದಾರ ಬಾಲಕನ ಪ್ರಾಣ ತೆಗೆಯಿತು!

Exit mobile version