Site icon Vistara News

Road Accident | ಅಪಘಾತದಲ್ಲಿ ನರಳಾಡುತ್ತಿದ್ದವರ ಸಹಾಯಕ್ಕೆ ಬಂದ ಸಚಿವ ಬೈರತಿ, ಶಾಸಕ ಸಿ.ಟಿ.ರವಿ

road accident

ಹಾಸನ: ಅಪರಿಚಿತ ವಾಹನವೊಂದು ಬೈಕ್‌ಗೆ ಡಿಕ್ಕಿಯಾಗಿ ಸಂಭವಿಸಿದ್ದ ಅಪಘಾತದಲ್ಲಿ (Road Accident) ತೀವ್ರವಾಗಿ ಗಾಯಗೊಂಡ ಇಬ್ಬರನ್ನು ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಚಿವ ಬೈರತಿ ಬಸವರಾಜ್‌ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

ಇಲ್ಲಿನ ಚನ್ನರಾಯಪಟ್ಟಣ ತಾಲೂಕಿನ ಸಕಟಗೆರೆ ಗ್ರಾಮದ ಬಳಿ ಅಪಘಾತ ಸಂಭವಿಸಿತ್ತು. ಬೈರತಿ ಬಸವರಾಜ್‌ ಹಾಗೂ ಸಿ.ಟಿ.ರವಿ ಚಿಕ್ಕಮಗಳೂರು ಜಿಲ್ಲೆಯ ದೇವನೂರು ಕೆರೆಗೆ ಬಾಗಿನ ಅರ್ಪಿಸಲು ಬೆಂಗಳೂರಿನಿಂದ ಚನ್ನರಾಯಪಟ್ಟಣ ಮಾರ್ಗವಾಗಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಮುಖ್ಯ ರಸ್ತೆಯಲ್ಲಿ ಸಂಚರಿಸುವಾಗ ಬೈಕ್‌ಗೆ ಶ್ವಾನವೊಂದು ಅಡ್ಡ ಬಂದಿದ್ದು ಅದನ್ನು ತಪ್ಪಿಸಲು ಹೋಗಿ ಸವಾರನ ನಿಯಂತ್ರಣಕ್ಕೆ ಸಿಗದೇ ಅಪಘಾತ ಸಂಭವಿಸಿದೆ.

ಕೂಡಲೇ ಕಾರ್ಯಪ್ರವೃತ್ತರಾದ ಬೈರತಿ ಬಸವಾರಜ್‌ ಹಾಗೂ ಸಿ.ಟಿ.ರವಿ ಅವರು ಸ್ಥಳೀಯರ ಸಹಾಯದೊಂದಿಗೆ ಅಪಘಾತಕ್ಕೀಡಾದ ಗಾಯಾಳು ವ್ಯಕ್ತಿಗಳನ್ನು ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ತಮ್ಮ ಬೆಂಗಾವಲು ವಾಹನದ ಮೂಲಕ ಗಾಯಾಳುಗಳನ್ನು ಪ್ರಥಮ ಚಿಕಿತ್ಸೆಗಾಗಿ ಕಳುಹಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಸ್ವತಃ ಸ್ಥಳದಲ್ಲೇ ಇದ್ದು ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲು ಸಚಿವರು ಹಾಗೂ ಶಾಸಕರು ನೆರವಾಗಿದ್ದಾರೆ.

ಇದನ್ನೂ ಓದಿ | ಅಪಘಾತದಲ್ಲಿ ಬಾಲಕಿ ಸತ್ತ ಬಳಿಕ ಪತ್ತೆಯಾಯ್ತು ನಕಲಿ ನಂಬರ್ ಪ್ಲೇಟ್ ವಂಚನೆ

Exit mobile version