Site icon Vistara News

Students Missing case | ರಾಯಚೂರಿನಲ್ಲಿ ಮಿಸ್‌ ಆದ ಹುಡುಗಿಯರು ಹುಬ್ಬಳ್ಳಿಯಲ್ಲಿ ಪತ್ತೆ

missing

ಹುಬ್ಬಳ್ಳಿ/ರಾಯಚೂರು: ರಾಯಚೂರಿನ ಬಾಲಕಿಯರ ಸರ್ಕಾರಿ ಕಾಲೇಜು ಕ್ಯಾಂಪಸ್‌ನಿಂದ ಜುಲೈ 23ರಂದು ನಾಪತ್ತೆಯಾಗಿದ್ದ (Students Missing case) ನಾಲ್ವರು ವಿದ್ಯಾರ್ಥಿನಿಯರು 300 ಕಿ.ಮೀ ದೂರದ ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದಾರೆ. ಅಲ್ಲಿಂದ ಗೋವಾಕ್ಕೆ ತೆರಳಲು ಯೋಜನೆ ಹಾಕಿಕೊಂಡಿದ್ದರು ಎನ್ನಲಾಗಿದೆ.

ಒಂದೇ ಕಾಲೇಜಿನ ಬೇರೆ ತರಗತಿಯ ವಿದ್ಯಾರ್ಥಿನಿಯರು, ಒಂದೇ ದಿನ ನಾಪತ್ತೆಯಾಗಿದ್ದು ಪೋಷಕರು ಹಾಗೂ ಕಾಲೇಜು ಆಡಳಿತ ಮಂಡಳಿಯ ಆತಂಕಕ್ಕೆ ಕಾರಣವಾಗಿತ್ತು. ಹುಡುಗಿಯರ ಮಿಸ್ಸಿಂಗ್‌ ಕೇಸ್‌ ಬೆನ್ನತ್ತಿದ್ದ ಪೊಲೀಸರು ತನಿಖೆ ಚುರುಕುಗೊಳಿಸಿದರು. ಪೋಷಕರು ದೂರು ನೀಡುತ್ತಿದ್ದಂತೆ ಪಕ್ಕದ ಆಂಧ್ರ, ತೆಲಂಗಾಣ ಗಡಿ ಭಾಗ ಸೇರಿ ಎಲ್ಲ ಠಾಣೆಗಳಿಗೂ ನಾಪತ್ತೆ ಮಾಹಿತಿ ರವಾಸಿದರು.  

ನಾಪತ್ತೆಯಾದ ನಾಲ್ವರಲ್ಲಿ ಇಬ್ಬರು ವಿದ್ಯಾರ್ಥಿನಿಯರು ರಾಯಚೂರಿನಿಂದ 300 ಕಿ.ಮೀ ದೂರವಿರುವ ಹುಬ್ಬಳ್ಳಿಯಲ್ಲಿ ಇರುವ ಬಗ್ಗೆ ಮಾಹಿತಿ ಲಭಿಸಿ, ಅವರನ್ನು ರಕ್ಷಿಸಿದ್ದರು. ಬಳಿಕ ಇನ್ನಿಬ್ಬರ ಪತ್ತೆಗೆ ಬಲೆ ಬೀಸಿದ್ದ ಪೊಲೀಸರಿಗೆ ಮಧ್ಯಾಹ್ನದೊಳಗೆ ಅವರು ಸಿಕ್ಕಿದ್ದು, ಪೋಷಕರ ಬಳಿ ಬಿಡಲಾಗಿದೆ. ಮಕ್ಕಳು ಮತ್ತೆ ಮನೆ ಸೇರಿದ್ದರಿಂದ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

ಪೊಲೀಸ್‌ ಕಾರ್ಯಾಚರಣೆಯಲ್ಲಿ ನಾಲ್ವರು ಗೋವಾಗೆ ತೆರಳಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಇವರಷ್ಟೇ ಹೋಗಿದ್ದಾರಾ? ಅಥವಾ ಯಾರಾದರೂ ಇವರನ್ನು ಕರೆದೊಯ್ದಿದ್ದರಾ ಎಂಬುದು ತನಿಖೆ ಬಳಿಕ ತಿಳಿಯಲಿದೆ.

ಇದನ್ನೂ ಓದಿ | Students Missing case | ಸರ್ಕಾರಿ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆ; ಪೋಷಕರಲ್ಲಿ ಆತಂಕ

Exit mobile version