Site icon Vistara News

ವಿಸ್ತಾರ TOP 10 NEWS | ದಿಲ್ಲಿಯಲ್ಲಿ ಕರ್ನಾಟಕ ಸಿಎಂ ಆಯ್ಕೆಯಿಂದ ಸಿಬಿಐ ನಿರ್ದೇಶಕರಾಗಿ ಪ್ರವೀಣ್‌ ಸೂದ್‌ವರೆಗಿನ ಪ್ರಮುಖ ಸುದ್ದಿಗಳಿವು

vistara top 10 news congress high command to chose karnataka cm to praveen sood appointed to cbi and more news

#image_title

1. Karnataka Election Results: ರಾಜ್ಯದ ಸಿಎಂ ಆಯ್ಕೆ ನಿರ್ಧಾರ ದೆಹಲಿ ಅಂಗಳಕ್ಕೆ; ಯಾರಿಗೆ ಶುಭ ಸೋಮವಾರ?
ಕರ್ನಾಟಕದ ಮುಖ್ಯಮಂತ್ರಿ (Karnataka Election Results) ಯಾರಾಗಲಿದ್ದಾರೆ ಎಂಬ ಕುತೂಹಲ ಮುಂದುವರಿದಿದೆ. ಬೆಂಗಳೂರಿನ ವಸಂತನಗರದಲ್ಲಿರುವ ಶಾಂಗ್ರಿಲಾ ಹೋಟೆಲ್‌ನಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತವಾರಿ ರಣದೀಪ್‌ ಸುರ್ಜೇವಾಲಾ, ವೀಕ್ಷಕರು ಸೇರಿ ಹಲವು ಮುಖಂಡರು ಶಾಸಕಾಂಗ ಪಕ್ಷದ ಸಭೆ ನಡೆಸಿದ್ದು, ಮುಖ್ಯಮಂತ್ರಿ ಆಯ್ಕೆಯ ಅಂತಿಮ ನಿರ್ಧಾರವನ್ನು ಹೈಕಮಾಂಡ್‌ಗೆ ಬಿಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Karnataka Election 2023 : ಮುಖ್ಯಮಂತ್ರಿ ಆಯ್ಕೆಗೆ ಸಿಎಲ್‌ಪಿ ಸಭೆ ಶುರು; ಕೆಪಿಸಿಸಿ ಅಧ್ಯಕ್ಷರೇ ಸಿಎಂ ಆಗಲಿ ಎಂದ ಆದಿಚುಂಚನಗಿರಿ ಶ್ರೀ
ನೂತನ ಮುಖ್ಯಮಂತ್ರಿ ನೇಮಕಕ್ಕೆ ಕರ್ನಾಟಕ ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ಸಭೆಯು ನಗರದ ಖಾಸಗಿ ಹೊಟೇಲ್‌ನಲ್ಲಿ ಆರಂಭಗೊಂಡಿದೆ. ಇದೇ ಹೊತ್ತಿನಲ್ಲಿ ಕುರುಬರ ಸಂಘ, ಮಠಾದಧೀಶರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಒತ್ತಾಯಿಸಿದರೆ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಮಠಾಧೀಶರು, ಒಕ್ಕಲಿಗ ನಾಯಕರು ಸಭೆ ನಡೆಸಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಪರ ಬ್ಯಾಟಿಂಗ್‌ ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Karnataka Election Results: ಸಿಎಂ ಆಯ್ಕೆಗೆ ಕಸರತ್ತು; ಘೋಷಣೆ ಕೂಗಿ ಸಿದ್ದು, ಡಿಕೆಶಿ ಬೆಂಬಲಿಗರ ಹೈಡ್ರಾಮಾ
ಕರ್ನಾಟಕದ ನೂತನ ಮುಖ್ಯಮಂತ್ರಿ ಆಯ್ಕೆಗೆ ಕಾಂಗ್ರೆಸ್‌ (Karnataka Election Results) ಕಸರತ್ತು ನಡೆಸುತ್ತಿದೆ. ಮುಖ್ಯಮಂತ್ರಿಯ ಆಯ್ಕೆಗಾಗಿ ಬೆಂಗಳೂರಿನಲ್ಲಿರುವ ಶಾಂಗ್ರಿಲಾ ಹೋಟೆಲ್‌ನಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದೆ. ಇನ್ನು ಸಭೆ ನಡೆಯುತ್ತಿರುವಾಗಲೇ ಮುಖ್ಯಮಂತ್ರಿ ಆಯ್ಕೆ ಕುರಿತಂತೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರು ಹೋಟೆಲ್‌ ಎದುರು ಘೋಷಣೆ ಕೂಗಿದ್ದು ಹೈಡ್ರಾಮಾಕ್ಕೆ ಕಾರಣವಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Karnataka Election: ಕರ್ನಾಟಕ ಸೇರಿ ದೇಶದ ಎಷ್ಟು ರಾಜ್ಯಗಳಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದೆ?
ರಾಜ್ಯದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ (Karnataka Election) ಕಾಂಗ್ರೆಸ್‌ ಗೆದ್ದು ಬೀಗಿದೆ. ಸ್ಪಷ್ಟ ಬಹುಮತ ಪಡೆದಿದ್ದು, ಸರ್ಕಾರ ರಚಿಸಲು ಸನ್ನದ್ಧವಾಗುತ್ತಿದೆ. ಅದರಲ್ಲೂ, ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿರುವುದು ಲೋಕಸಭೆ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್‌ಗೆ ಅನುಕೂಲ ಎಂದೇ ಹೇಳಲಾಗುತ್ತಿದೆ. ಕರ್ನಾಟಕದಲ್ಲಿ ಗೆಲುವಿನೊಂದಿಗೆ ದೇಶದಲ್ಲಿ ಕಾಂಗ್ರೆಸ್‌ ಬಲವೂ ಹೆಚ್ಚಾಗಿದೆ. ಹಾಗಾದರೆ, ಕರ್ನಾಟಕದ ಗೆಲುವಿನ ಜತೆ ದೇಶದ ಯಾವ ರಾಜ್ಯಗಳಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದೆ? ಎಷ್ಟು ರಾಜ್ಯಗಳಲ್ಲಿ ಸ್ವತಂತ್ರವಾಗಿ ಅಧಿಕಾರ ರಚಿಸಿದೆ? ಎಷ್ಟು ರಾಜ್ಯಗಳಲ್ಲಿ ಮೈತ್ರಿ ಸರ್ಕಾರದ ಭಾಗವಾಗಿದೆ ಎಂಬುದರ ಮಾಹಿತಿ ಇಲ್ಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Praveen Sood: ಮುಂದಿನ ಸಿಬಿಐ ನಿರ್ದೇಶಕ ಡಿಜಿಪಿ ಪ್ರವೀಣ್‌ ಸೂದ್‌; ಕೇಂದ್ರದ ಅಧಿಕೃತ ಆದೇಶ
ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಬದಲಾಗಲಿದ್ದಾರೆ. ಏಕೆಂದರೆ ದೇಶದ ಉನ್ನತ ಹುದ್ದೆಯಲ್ಲೊಂದಾಗಿರುವ ಕೇಂದ್ರೀಯ ತನಿಖಾ ದಳದ (ಸಿಬಿಐ) ನಿರ್ದೇಶಕರ (CBI Director) ಸ್ಥಾನಕ್ಕೆ ರಾಜ್ಯ ಡಿಜಿಪಿ ಪ್ರವೀಣ್‌ ಸೂದ್‌ (Praveen Sood) ನೇಮಕಗೊಂಡಿದ್ದಾರೆ. ಈ ಬಗ್ಗೆ ಕೇಂದ್ರ ಗೃಹ ಇಲಾಖೆ ಅಧಿಕೃತ ಆದೇಶವನ್ನು ಹೊರಡಿಸಿದೆ. ಪ್ರವೀಣ್‌ ಸೂದ್‌ ಎರಡು ವರ್ಷಗಳ ಕಾಲ ಅಧಿಕಾರದಲ್ಲಿರಲಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Praveen Sood: ಪ್ರವೀಣ್‌ ಸೂದ್‌ ನಾಲಾಯಕ್‌ ಡಿಜಿಪಿ, ಅಧಿಕಾರಕ್ಕೆ ಬಂದಾಗ ತೋರಿಸ್ತೇನೆ ಎಂದಿದ್ದ ಡಿ.ಕೆ. ಶಿವಕುಮಾರ್‌!

6. Cyclone Mocha: ಬಾಂಗ್ಲಾದೇಶ-ಮ್ಯಾನ್ಮಾರ್​​ ಕರಾವಳಿಯಲ್ಲಿ ಮೋಚಾ ಅಬ್ಬರ; ಸಾವಿರಾರು ಜನರ ಸ್ಥಳಾಂತರ
ಮೋಚಾ ಚಂಡಮಾರುತ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್​​ಗಳಲ್ಲಿ ಅಬ್ಬರಿಸುತ್ತಿದೆ. ಇಲ್ಲಿನ ಕರಾವಳಿ ತೀರಕ್ಕೆ ಮೋಚಾ (Cyclone Mocha) ಅಪ್ಪಳಿಸುತ್ತಿದೆ. ಕರಾವಳಿ ಪ್ರದೇಶದ ಜನರು ಬೇರೆಡೆ ಸ್ಥಳಾಂತರಗೊಂಡು, ಆಶ್ರಯ ಪಡೆಯಿರಿ ಎಂದು ಅಲ್ಲಿನ ಹವಾಮಾನ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಮೇ 6ರಿಂದಲೇ ಈ ಮೋಚಾ ಚಂಡಮಾರುತದ ಹಾವಳಿ ಶುರುವಾಗಿದ್ದು, ಮೇ 12ರಂದು 2.30 ಗಂಟೆ ಸುಮಾರಿಗೆ ಆಗ್ನೇಯ ದಿಕ್ಕಿನ ಮಧ್ಯ ಬಂಗಾಳ ಕೊಲ್ಲಿಯ ಮೇಲೆ, ಪೋರ್ಟ್‌ಬ್ಲೇರ್‌ನ ಪಶ್ಚಿಮ-ವಾಯುವ್ಯಕ್ಕೆ 520 ಕಿಮೀ ದೂರದಲ್ಲಿ ಕೇಂದ್ರೀಕೃತವಾಗಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Opreation Samudragupta: ಆಪರೇಷನ್‌ ಸಮುದ್ರಗುಪ್ತ; 12 ಸಾವಿರ ಕೋಟಿ ಮೌಲ್ಯದ 2500 ಕೆಜಿ ಡ್ರಗ್ಸ್‌ ವಶ
ಭಾರತ, ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ, ಮಾಲ್ಡಿವ್ಸ್‌ಗೆ ಅಕ್ರಮವಾಗಿ ಮಾದಕ ವಸ್ತುಗಳನ್ನು (Drugs Case) ಸಾಗಾಣೆ ಮಾಡುತ್ತಿದ್ದವರನ್ನು ವಶಕ್ಕೆ ಪಡೆಯಲಾಗಿದೆ. ಭಾರತೀಯ ನೌಕಾಪಡೆ ಹಾಗೂ ಎನ್‌ಸಿಬಿ ಜಂಟಿಯಾಗಿ ಆಪರೇಷನ್‌ ಸಮುದ್ರಗುಪ್ತ (Opreation Samudragupta) ಹೆಸರಲ್ಲಿ ಕಾರ್ಯಾಚರಣೆ ನಡೆಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. CISCE Results 2023: ಸಿಐಎಸ್‌ಸಿಇ ಫಲಿತಾಂಶ ಪ್ರಕಟ; ಐಸಿಎಸ್‌ಇಯಲ್ಲಿ ರುಶಿಲ್‌, ಐಎಸ್‌ಸಿಯಲ್ಲಿ ರಿಯಾ ಟಾಪರ್
10ನೇ ತರಗತಿಯ ಇಂಡಿಯನ್‌ ಸರ್ಟಿಫಿಕೇಟ್‌ ಆಫ್‌ ಸೆಕೆಂಡರಿ ಎಜುಕೇಷನ್‌ (ICSE) ಹಾಗೂ 12ನೇ ತರಗತಿಯ ಇಂಡಿಯನ್‌ ಸ್ಕೂಲ್‌ ಸರ್ಟಿಫಿಕೇಟ್‌ (ISC) ಪರೀಕ್ಷೆಯ ಫಲಿತಾಂಶವನ್ನು ಕೌನ್ಸಿಲ್‌ ಫಾರ್‌ ಇಂಡಿಯನ್‌ ಸ್ಕೂಲ್‌ ಸರ್ಟಿಫಿಕೇಟ್‌ ಎಕ್ಸಾಮಿನೇಷನ್‌ (CISCE Results 2023) ಪ್ರಕಟಿಸಿದೆ. ಐಸಿಎಸ್‌ಇಯಲ್ಲಿ ರುಶಿಲ್‌ ಕುಮಾರ್‌ ದೇಶಕ್ಕೇ ಮೊದಲ ರ‍್ಯಾಂಕ್‌ ಪಡೆದರೆ, ಐಎಸ್‌ಸಿಯಲ್ಲಿ ರಿಯಾ ಅಗರ್ವಾಲ್‌ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. IPL 2023: ಆರ್​ಸಿಬಿ ವಿರುದ್ಧ ರಾಜಸ್ಥಾನ್​ಗೆ ಹೀನಾಯ ಸೋಲು
ಆರ್​ಸಿಬಿ ತಂಡದ ಘಾತಕ ಬೌಲಿಂಗ್​ ದಾಳಿಗೆ ಸರ್ವಪತನ ಕಂಡ ರಾಜಸ್ಥಾನ್​ ರಾಯಲ್ಸ್​ ಅತ್ಯಂತ ಹೀನಾಯ ಸೋಲು ಕಂಡಿದೆ. ಜೈಪುರದ ಮಾನ್​ಸಿಂಗ್​ ಸವಾಯ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಭಾನುವಾರ ಮೊದಲ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ನಡೆಸಿದ ರಾಯಲ್​ ಚಾಜೆಂಜರ್ಸ್​ ಬೆಂಗಳೂರು ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 171 ರನ್​ ಬಾರಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್​ ಕೇವಲ 10.3 ಓವರ್​ಗಳಲ್ಲಿ 59 ರನ್​ಗೆ ಸರ್ವಪತನ ಕಂಡಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. 26 ಬಾರಿ ಮೌಂಟ್​ ಎವರೆಸ್ಟ್​ ಏರಿ ದಾಖಲೆ ಬರೆದ ನೇಪಾಳಿ ಶೆರ್ಪಾ; ಇವರ ಕುಲಕಸುಬೇ ಪರ್ವತಾರೋಹಣ!
ನೇಪಾಳದ ಪರ್ವತ ಪ್ರದೇಶಗಳಲ್ಲಿರುವ ಸ್ಥಳೀಯ ಜನಾಂಗವಾದ ಶೆರ್ಪಾಗಳ ಕುಲಕಸುಬು ಅಪಾಯಕಾರಿಯಾದದ್ದು. ಮೌಂಟ್ ಎವರೆಸ್ಟ್ (Mount Everest) ಸೇರಿ ಆ ಭಾಗದ ವಿವಿಧ ಪರ್ವತಕ್ಕೆ ಟ್ರೆಕ್ಕಿಂಗ್ ಮಾಡಲು ಬರುವವರಿಗೆ ಮಾರ್ಗದರ್ಶನ ಮಾಡುವುದೇ ಇವರ ಕೆಲಸ ಆಗಿರುತ್ತದೆ. ಹೀಗೆ ಪರ್ವತಾರೋಹಣಕ್ಕೆ ಬಂದವರನ್ನು ಟ್ರೆಕ್ಕಿಂಗ್ ಮಾಡಿಸುತ್ತ, ತಾವೂ ಬೆಟ್ಟ ಏರುವುದು ಸುಲಭವಲ್ಲ. ಅತ್ಯಂತ ಎತ್ತರದ ಪರ್ವತಗಳನ್ನು ಅವರು ಅದೆಷ್ಟೋ ಸಲ ಹತ್ತಿ ಇಳಿಯಬೇಕಾಗುತ್ತದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version