1.ವಿಶ್ವಕಪ್ ಫೈನಲ್ ಕದನಕ್ಕಾಗಿ ಕ್ಷಣಗಣನೆ : ಆಸ್ಟ್ರೇಲಿಯಾ ವಿರುದ್ಧ ಭಾರತ ಗೆಲುವಿಗಾಗಿ ಪ್ರಾರ್ಥನೆ
ಆರು ವಾರಗಳ ಕಾಲ ನಡೆದ ಏಕ ದಿನ ವಿಶ್ವ ಕಪ್ನ (ICC World Cup 2023) ಕೊನೆಯ ಮತ್ತು ವಿಜೇತರನ್ನು ನಿರ್ಣಯಿಸುವ ಪಂದ್ಯ ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ನೆವೆಂಬರ್ 19ರಂದು ನಡೆಯಲಿದೆ. ಅಕ್ಟೋಬರ್ 5ರಂದು ಟೂರ್ನಿಯ ಉದ್ಘಾಟನಾ ಆವೃತ್ತಿಯೂ ಇದೇ ಸ್ಟೇಡಿಯಮ್ನಲ್ಲಿ ನಡೆದಿತ್ತು. ಇದೀಗ ಅದೇ ಸ್ಟೇಡಿಯಮ್ನಲ್ಲಿ ವಿಶ್ವ ವಿಜೇತರು ಯಾರೆಂಬುದು ಪ್ರಕಟವಾಗಲಿದೆ. ಸಹಜವಾಗಿ ಟೂರ್ನಿಯ ಬಲಿಷ್ಠ ಎರಡು ತಂಡಗಳಾದ ಆಸ್ಟ್ರೇಲಿಯಾ ಮತ್ತು ಭಾರತ ಫೈನಲ್ಗೇರಿದ್ದು ಇತ್ತಂಡಗಳು ಪ್ರಶಸ್ತಿಗಾಗಿ ಸೆಣಸಾಸಲಿವೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಇದನ್ನೂ ಓದಿ: ICC World Cup 2023 : ವಿಶ್ವ ಕಪ್ ಫೈನಲ್ ಪಂದ್ಯಗಳಲ್ಲಿ ದಾಖಲಾದ ಗರಿಷ್ಠ ರನ್ ಎಷ್ಟು?
ಇದನ್ನೂ ಓದಿ: ICC World Cup 2023 : ಪಂದ್ಯ ಟೈ ಆದರೆ, ಮಳೆ ಬಂದರೆ ಫಲಿತಾಂಶ ಪ್ರಕಟಿಸುವುದು ಹೇಗೆ?
ಇದನ್ನೂ ಓದಿ: ICC World Cup 2023 : ಫೈನಲ್ ಪಂದ್ಯದಲ್ಲಿ ಬ್ಯಾಟರ್ಗಳ ಅಬ್ಬರ ಖಾತರಿ; ಯಾಕೆ ಗೊತ್ತೇ?
2. ಸಿಎಂ ಪುತ್ರನ ಹಸ್ತಕ್ಷೇಪಕ್ಕೆ ಸರ್ಕಾರವೇ ಕೊಡ್ತಾ ಸಾಕ್ಷ್ಯ? : ಪಟ್ಟಿಯಲ್ಲಿದೆ ವಿವೇಕಾನಂದ ಹೆಸರು
ಪೊಲೀಸ್ ಇಲಾಖೆಯಲ್ಲಿ ಮತ್ತೆ 71 ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ (transfer) ಮಾಡಲಾಗಿದೆ. ಇದರಲ್ಲಿ ವಿವೇಕಾನಂದ ಎಂಬವರನ್ನು ಮೈಸೂರು ನಗರದ ವಿವಿ ಪುರಂ ಪೊಲೀಸ್ ಠಾಣೆಗೆ ವರ್ಗಾಯಿಸಿ ಆದೇಶ ನೀಡಲಾಗಿದೆ. ಈ ವಿವೇಕಾನಂದ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ತಮ್ಮ ತಂದೆ ಜತೆಗೆ ಮಾತನಾಡಿರುವ ವಿಡಿಯೋದಲ್ಲಿ ಉಲ್ಲೇಖಿಸಿರುವ ವ್ಯಕ್ತಿಯಾ ಎಂಬ ಚರ್ಚೆಗೆ ನಡೆದಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಇದನ್ನೂ ಓದಿ : ಯತೀಂದ್ರ ಮಾತಿಗೆ ತಾಳೆಯಾದ ವಿವೇಕಾನಂದ ವರ್ಗ, ʼಸಾಕ್ಷಿ ಇಲ್ಲಿದೆ ನೋಡಿʼ ಎಂದ ಎಚ್‌ಡಿಕೆ
ಇದನ್ನೂ ಓದಿ : ಟ್ರಾನ್ಸ್‌ಫರ್ ಆಗಿರುವ ವಿವೇಕಾನಂದ ಯಾರೆಂದೇ ಗೊತ್ತಿಲ್ಲ!; ಯತೀಂದ್ರ ಸ್ಪಷ್ಟನೆ
3.R Ashok : 2008ರಲ್ಲಿ ಬಿಜೆಪಿಗೆ ಅಧಿಕಾರ ನಿರಾಕರಿಸಿದ್ದು HDK ಅಲ್ಲ, ದೇವೇಗೌಡ್ರು; ಆರ್. ಅಶೋಕ್
ಅಂದು 2008ರಲ್ಲಿ ಬಿಜೆಪಿಗೆ ಹಸ್ತಾಂತರ ಮಾಡಲು ನಿರಾಕರಿಸಿದ್ದು ಎಚ್ ಡಿ ಕುಮಾರಸ್ವಾಮಿ ಅಲ್ಲ, ಎಚ್.ಡಿ ದೇವೇಗೌಡರು. ಹಾಗೆ ಮಾಡದೆ ಇರುತ್ತಿದ್ದರೆ ಕಾಂಗ್ರೆಸ್ ಇಂದು ಬೋರ್ಡ್ ಗೇ ಇರುತ್ತಿರಲಿಲ್ಲ ಎಂಬ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ ಪ್ರತಿಪಕ್ಷ ನಾಯಕ ಆರ್. ಅಶೋಕ್. ಎಚ್.ಡಿ. ದೇವೇಗೌಡರು ಅಂದು ಆ ತಪ್ಪನ್ನು ಮಾಡಬಾರದಿತ್ತು ಎಂದು ವಿಸ್ತಾರ ನ್ಯೂಸ್ ವಿಶೇಷ ಸಂದರ್ಶನದಲ್ಲಿ ಅವರು ಹೇಳಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
4. Yathindra Siddaramaiah : ʼಹಲೋ ಅಪ್ಪಾʼ ಆ್ಯಪ್ ಡೌನ್‌ಲೋಡ್ ಮಾಡಿ ಪೇಮೆಂಟ್ ಮಾಡಿ!
ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರ “ಲಿಸ್ಟ್” ರಾಜಕೀಯದ ವಿಡಿಯೊ ವೈರಲ್ ಆಗುತ್ತಿದ್ದಂತೆ ಪ್ರತಿಪಕ್ಷಗಳು ಈಗ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಯತೀಂದ್ರ ಸಿದ್ದರಾಮಯ್ಯ ವಿರುದ್ಧ “ಹಲೋ ಅಪ್ಪಾ, ಆ್ಯಪ್ ಡೌನ್‌ಲೋಡ್ ಮಾಡಿ ಪೇಮೆಂಟ್ ಮಾಡಿ” ಪೋಸ್ಟರ್, “ಶ್ಯಾಡೋ ಸಿಎಂ” ಪೋಸ್ಟರ್ (Shadow CM), ಇಂಧನ ಸಚಿವ ಕೆ.ಜೆ. ಜಾರ್ಜ್, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಸೇರಿದಂತೆ ಕೆಲವರ ಮೇಲೆ ಪೋಸ್ಟರ್‌ಗಳನ್ನು ರಚಿಸಿ ಸರ್ಕಾರಿ ಕಚೇರಿಗಳ ಸಹಿತ ಅಲ್ಲಲ್ಲಿ ಅಂಟಿಸಲಾಗುತ್ತಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಇದನ್ನೂ ಓದಿ : Yathindra Siddaramaiah : ‘ಅಪ್ಪಾ ಜಿ’ ಪೋಸ್ಟರ್ ಬಿಟ್ಟು ಕಾಲೆಳೆದ ಬಿಜೆಪಿ!
6. ವಿಸ್ತಾರ ಅಂಕಣ: ಭಾರತಾಂಬೆಯ ವಿರುದ್ಧ ಆಕೆಯ ತನುಜಾತೆಯನ್ನು ಎತ್ತಿಕಟ್ಟುವುದು ಏಕೆ?
“ಕೇಂದ್ರ ಸರ್ಕಾರಕ್ಕೆ ತೆರಿಗೆ ಕೊಡೋರು ಯಾರು? ಯಾರ್ರೀ ತೆರಿಗೆ ಕೊಡೋರು? ರಾಜ್ಯದ ಜನಗಳಲ್ಲವ? ಅದಕ್ಕೆ ಅಂತ ಬೇರೆ ಜನರೇನಾದರೂ ಇರುವರೇ, ಇಲ್ಲ. ನಮ್ಮ ರಾಜ್ಯದಿಂದ ಹಣ ಕೊಟ್ಟಿದ್ದೀವಿ” ಎನ್ನುವ ವಾದವೊಂದು ಹುಟ್ಟಿಕೊಂಡಿದೆ. ಹಿಂದಿ ಹೇರಿಕೆ, ಆರ್ಯ-ದ್ರಾವಿಡ ಮತ್ತಿತರ ವಾದಗಳ ಮೂಲಕ ಭಾರತ ಬೇರೆ, ರಾಜ್ಯಗಳು ಬೇರೆ ಎನ್ನುವ ತಾರತಮ್ಯ ಸೃಷ್ಟಿಸಲಾಗುತ್ತಿದೆ. ಇದರ ಬಗ್ಗೆ ವಿಶ್ಲೇಷಣೆ ನಡೆಸಿದ್ದಾರೆ ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ರಾದ ಹರಿಪ್ರಕಾಶ್ ಕೋಣೆಮನೆಯವರು ತಮ್ಮ ವಿಸ್ತಾರ ಅಂಕಣದಲ್ಲಿ. ಪೂರ್ಣ ಲೇಖನಕ್ಕೆ ಈ ಲಿಂಕ್ ಕ್ಲಿಕ್ ಮಾಡಿ
6. Halal Products: ಸಿಎಂ ಯೋಗಿ ದಿಟ್ಟ ನಿರ್ಧಾರ ’ಹಲಾಲ್’ ಉತ್ಪನ್ನಗಳ ಮಾರಾಟ ನಿಷೇಧ!.
ಹಲಾಲ್ ಕಟ್ ವಿಷಯವು ಚರ್ಚೆಗೆ ಗ್ರಾಸವಾಗಿರುವ, ಪರ-ವಿರೋಧ ಚರ್ಚೆಗಳು ಆಗಾಗ ಕೇಳಿಬರುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರವು (Uttar Pradesh Government) ರಾಜ್ಯದಲ್ಲಿ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ಮಾರಾಟವನ್ನು (Halal Certified Products) ನಿಷೇಧಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. Telangana Polls: 500 ರೂ.ಗೆ ಎಲ್‌ಪಿಜಿ, ಸ್ತ್ರೀಯರಿಗೆ ಉಚಿತ ಪ್ರಯಾಣ; ಕಾಂಗ್ರೆಸ್ ಭರ್ಜರಿ ಭರವಸೆ
ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಐದೂ ರಾಜ್ಯಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಸ್ಪರ್ಧೆಗೆ ಬಿದ್ದು ‘ಉಚಿತ ಕೊಡುಗೆ’ಗಳ (Free Bies) ಭರವಸೆಗಳನ್ನು ನೀಡುತ್ತಿವೆ. ತೆಲಂಗಾಣದಲ್ಲೂ ಕಾಂಗ್ರೆಸ್ (Telangana Polls) ಹತ್ತಾರು ಭರವಸೆಗಳನ್ನು ನೀಡಿದ್ದು, ಜನರಿಗೆ ಭರಪೂರ ಉಚಿತ ಯೋಜನೆ ಘೋಷಿಸಿದೆ. ಅದರಲ್ಲೂ, 500 ರೂಪಾಯಿಗೆ ಎಲ್‌ಪಿಜಿ ಸಿಲಿಂಡರ್, ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೇರಿ ಹಲವು ಭರವಸೆ ನೀಡಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. Digital Payment: ಗಮನಿಸಿ; ಡಿಸೆಂಬರ್ 31ರಿಂದ ಈ ಯುಪಿಐ ಖಾತೆಗಳು ಬಂದ್!
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಯಾರೂ ಜೇಬಲ್ಲಿ ದುಡ್ಡು ಇಟ್ಟುಕೊಂಡ ಓಡಾಡುತ್ತಿಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಡಿಜಿಟಲ್ ಪೇಮೆಂಟ್ (Digital Payment)ನ ಪ್ರಮಾಣ ಹೆಚ್ಚಿದೆ. ಈ ಮಧ್ಯೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಡಿಸೆಂಬರ್ 31ರಿಂದ ಕೆಲವೊಂದು ಯುಪಿಐ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. ರಾಮಮಂದಿರಕ್ಕೆ ಹೋದವರು ಮುಸ್ಲಿಮರಾಗಿ ಬರುತ್ತಾರೆ ಎಂದ ಪಾಕ್ ಮಾಜಿ ಕ್ರಿಕೆಟಿಗ; ಬೆಂಡೆತ್ತಿದ ಜನ
ರಾಮಮಂದಿರದ ಗರ್ಭಗುಡಿಯಲ್ಲಿ 2024ರ ಜನವರಿ 22ರಂದು ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪನೆ ನಡೆಯಲಿದೆ. ಇದರ ನಡುವೆ “ರಾಮಮಂದಿರಕ್ಕೆ ಹೋದವರು ಮುಸ್ಲಿಮರಾಗಿ ಹೊರಬರುತ್ತಾರೆ” ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ (Javed Miandad) ಹೇಳಿರುವ ಹಳೆಯ ವಿಡಿಯೊ (Viral Video) ಈಗ ವೈರಲ್ ಆಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. Bullock Attack : ರೊಚ್ಚಿಗೆದ್ದ ದೇವರ ಗೂಳಿ; ಕೊಂಬಿನಿಂದ ಗುದ್ದಿ ಬಸ್ಸಿನ ಮೇಲೆ ದಾಳಿ!
ದೇವರಿಗೆ ಬಿಟ್ಟ ಹೋರಿಗಳು (Bullock Attack) ಸಾಮಾನ್ಯವಾಗಿ ಜನರ ನಡುವೆ ಬೆರೆಯುತ್ತಾ ಸೌಹಾರ್ದದಿಂದ ಇರುತ್ತವೆ ಎನ್ನುವ ಪ್ರತೀತಿ ಇದೆ. ಆದರೆ, ಕೆಲವು ಕಡೆ ಈ ನಂಬಿಕೆಯನ್ನು ಮುರಿಯುವುದು ಕೂಡಾ ಇದೆ. ಕೆಲವೊಮ್ಮೆ ಶಾಂತವಾಗಿರುವ ಹೋರಿಗಳು ಕೂಡಾ ಒಮ್ಮಿಂದೊಮ್ಮೆಗೇ ಸಿಟ್ಟಿಗೇಳುವುದುಂಟು. ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಹೋರಿಯೊಂದು ಬಸ್ಸನ್ನೇ ತಡೆಹಿಡಿದಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ