ICC World Cup 2023 : 12 ವರ್ಷಗಳ ಐಸಿಸಿ ಪ್ರಶಸ್ತಿ ಬರ ನೀಗಿಸುವುದೇ ಭಾರತ? - Vistara News

ಕ್ರಿಕೆಟ್

ICC World Cup 2023 : 12 ವರ್ಷಗಳ ಐಸಿಸಿ ಪ್ರಶಸ್ತಿ ಬರ ನೀಗಿಸುವುದೇ ಭಾರತ?

130 ಕೋಟಿ ಅಭಿಮಾನಿಗಳನ್ನು ಹೊಂದಿರುವ ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು ಫೈನಲ್ ​ನಲ್ಲಿ (ICC World Cup 2023) ಸೋಲಿಸಿ ಪ್ರಶಸ್ತಿ ಗೆಲ್ಲುವ ಎಲ್ಲ ಅವಕಾಶಗಳನ್ನು ಹೊಂದಿದೆ.

VISTARANEWS.COM


on

Australia Criket team
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಹಮದಾಬಾದ್: ಆರು ವಾರಗಳ ಕಾಲ ನಡೆದ ಏಕ ದಿನ ವಿಶ್ವ ಕಪ್​ನ (ICC World Cup 2023) ಕೊನೆಯ ಮತ್ತು ವಿಜೇತರನ್ನು ನಿರ್ಣಯಿಸುವ ಪಂದ್ಯ ಗುಜರಾತ್​ನ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ನೆವೆಂಬರ್​ 19ರಂದು ನಡೆಯಲಿದೆ. ಅಕ್ಟೋಬರ್ 5ರಂದು ಟೂರ್ನಿಯ ಉದ್ಘಾಟನಾ ಆವೃತ್ತಿಯೂ ಇದೇ ಸ್ಟೇಡಿಯಮ್​ನಲ್ಲಿ ನಡೆದಿತ್ತು. ಇದೀಗ ಅದೇ ಸ್ಟೇಡಿಯಮ್​ನಲ್ಲಿ ವಿಶ್ವ ವಿಜೇತರು ಯಾರೆಂಬುದು ಪ್ರಕಟವಾಗಲಿದೆ. ಸಹಜವಾಗಿ ಟೂರ್ನಿಯ ಬಲಿಷ್ಠ ಎರಡು ತಂಡಗಳಾದ ಆಸ್ಟ್ರೇಲಿಯಾ ಮತ್ತು ಭಾರತ ಫೈನಲ್​ಗೇರಿದ್ದು ಇತ್ತಂಡಗಳು ಪ್ರಶಸ್ತಿಗಾಗಿ ಸೆಣಸಾಸಲಿವೆ.

47 ಪಂದ್ಯಗಳು ಮುಕ್ತಾಯಗೊಂಡಿದ್ದು ಇದರಲ್ಲಿ ಸೆಮಿ ಫೈನಲ್ ಸೇರಿದಂತೆ 10ರಲ್ಲಿ 10ಪಂದ್ಯಗಳನ್ನೂ ಗೆದ್ದಿರುವ ಭಾರತ ಹಾಗೂ 8 ಪಂದ್ಯಗಳಲ್ಲಿ ಗೆಲುವು ಕಂಡಿರುವ ಆಸ್ಟ್ರೇಲಿಯಾ ಟ್ರೋಫಿಗಾಗಿ ಸೆಣಸಾಡಲಿವೆ. ಇದು ಟೂರ್ನಿಯ ಅತ್ಯಂತ ರೋಚಕ ಹಾಗೂ ನಿರ್ಣಾಯಕ ಪಂದ್ಯವಾಗಿದೆ. ಕೋಟ್ಯಂತರ ಭಾರತೀಯರು ಹಾಗೂ ಅಸಂಖ್ಯಾತ ಕ್ರಿಕೆಟ್​ ಅಭಿಮಾನಿಗಳು ಈ ಪಂದ್ಯವನ್ನು ವೀಕ್ಷಿಸಲು ಕಾತರರಾಗಿದ್ದಾರೆ. ಹಾಲಿ ಟೂರ್ನಿಯ ವಿಜೇತರು ಯಾರು ಎಂಬ ಕುತೂಹಲ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗಿದೆ.

20 ವರ್ಷಗ ಹಿಂದಿನ ಟೂರ್ನಿಯ ಪುನರಾವರ್ತನೆ

ವಿಶ್ವಕಪ್ ಫೈನಲ್​​ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾವನ್ನು ಕ್ರಿಕೆಟ್​ ಅಭಿಮಾನಿಗಳು ಈ ಹಿಂದೆ ನೋಡಿದ್ದಾರೆ. 2003ರ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತ ನಿರಾಸೆ ಎದುರಿಸಿತ್ತು. ಬೃಹತ್ ಅಂತರದ ವಿಜಯ ಕಂಡಿರುವ ಆಸ್ಟ್ರೇಲಿಯಾ ಟ್ರೋಫಿ ಎತ್ತಿ ಹಿಡಿದಿತ್ತು. ಅದೇ ಮಾದರಿಯ ರೋಚಕತೆಯನ್ನು ಈ ಪಂದ್ಯದಲ್ಲೂ ನಿರೀಕ್ಷೆ ಮಾಡಬಹುದು.

ಭಾರತ ಹಾಗೂ ಆಸ್ಟ್ರೇಲಿಯಾ ಹಾಲಿ ಆವೃತ್ತಿಯ ವಿಶ್ವ ಕಪ್​ನ ತಮ್ಮ ಮೊದಲ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಿದ್ದವು. ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್​ ಗೆಲುವು ಕಂಡಿತ್ತು. ಈ ಎರಡು ಕ್ರಿಕೆಟ್ ಶಕ್ತಿ ಕೇಂದ್ರಗಳು ತಮ್ಮ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಿ ಸರಿಯಾಗಿ 41 ದಿನಗಳಾಗಿವೆ. ಈಗ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ತಮ್ಮ ಹಣೆಬರಹ ನಿರ್ಧರಿಸಲಿದ್ದಾರೆ.

ಆಸ್ಟ್ರೇಲಿಯಾ ಇಲ್ಲಿಯವರೆಗೆ ತಮ್ಮ ಏಳು ವಿಶ್ವಕಪ್ ಫೈನಲ್​​ಗಳಲ್ಲಿ ಐದನ್ನು ಗೆದ್ದಿದೆ. ಆದರೆ ಪ್ರಸ್ತುತ ಫಾರ್ಮ್ ಐಸಿಸಿ ಬರವನ್ನು ಕೊನೆಗೊಳಿಸಲು ಭಾರತಕ್ಕೆ ಉತ್ತಮ ಅವಕಾಶವನ್ನು ನೀಡಿದೆ. ಪಂದ್ಯಾವಳಿಯ ಕೊನೇ ಹಂತದಲ್ಲಿ ಆಸ್ಟ್ರೇಲಿಯಾ ಪ್ರದರ್ಶನದ ಉತ್ತುಂಗದಲ್ಲಿದೆ. ಭಾರತವು 1.3 ಬಿಲಿಯನ್ ಅಭಿಮಾನಿಗಳ ಭಾರವನ್ನು ಹೊತ್ತುಕೊಂಡಿದೆ.

ಭಾರತ

ನಾಗ್ಪುರ ಮೂಲದ ರೋಹಿತ್ ಶರ್ಮಾ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. 2011ರಲ್ಲಿ ಭಾರತ ತಂಡ ವಿಶ್ವ ಕಪ್ ಗೆದ್ದಾಗ ಅವರಿಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಇದೀಗ 12 ವರ್ಷಗಳ ನಂತರ ತನ್ನ ದೇಶವನ್ನು ವಿಶ್ವಕಪ್ ಫೈನಲ್​ಗೆ ಮುನ್ನಡೆಸಿದ್ದಾರೆ ಅವರು. ಭಾರತದ ತಂಡವನ್ನು ಸಮರ್ಥವಾಗಿ ಫೈನಲ್​ಗೇರಿಸಿದ್ದಾರೆ ಅವರು.

ಹಾಲಿ ಆವೃತ್ತಿಯಲ್ಲಿ ಭಾರತ ತಂಡ ಒಟ್ಟಿನಿಂದ ಆಡುತ್ತಿದೆ. ರೋಹಿತ್ ಅವರ ನಿಸ್ವಾರ್ಥ ಸ್ವಭಾವವು ತಂಡದಲ್ಲಿ ಜೋಶ್ ಹುಟ್ಟಿಸುವ ಜತೆಗೆ ಪಂದ್ಯದಲ್ಲಿ ಉತ್ತಮ ಆರಂಭವನ್ನು ದೊರಕಿಸಿಕೊಡುತ್ತಿದೆ. ಅದೇ ಅಭ್ಯಾಸವನ್ನು ಅವರು ಫೈನಲ್​ನಲ್ಲಿ ತೋರಿಸಲಿದ್ದಾರೆ. ಕೊಹ್ಲಿ ಮತ್ತೊಂದು ಶತಕ ಯಾಕೆ ಹೊಡಿಯಬಾರದು ಎಂಬುದು ಅಭಿಮಾನಿಗಳ ಪ್ರಶ್ನೆ.

ಭಾರತದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಇದುವರೆಗಿನ ಅತ್ಯಂತ ಸಮರ್ಥ ಪ್ರದರ್ಶನ ನೀಡುತ್ತಿದೆ. ಗೆಲುವಿನ ಅಭಿಯಾನದಲ್ಲಿ ಮಧ್ಯಮ ಕ್ರಮಾಂಕದ ಕೊಡುಗೆ ದೊಡ್ಡದಿದೆ. ಶ್ರೇಯಸ್ ಅಯ್ಯರ್ ಮತ್ತು ಕೆ.ಎಲ್.ರಾಹುಲ್ ಭಾರತೀಯ ಕ್ರಿಕೆಟ್​ ಪ್ರೇಮಿಗಳಿಗೆ ಉತ್ಸಾಹ ತುಂಬಿದ್ದಾರೆ.

ಭಾರತದ ವೇಗದ ಬೌಲಿಂಗ್ ವಿಭಾಗ ಚರ್ಚೆಯ ವಿಷಯವಾಗಿದೆ. ಮೊಹಮ್ಮದ್ ಶಮಿ 6 ಪಂದ್ಯಗಳಲ್ಲಿ 23 ವಿಕೆಟ್​​ಗಳನ್ನು ಪಡೆದಿದ್ದರೆ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ನೇತೃತ್ವದ ಬೌಲಿಂಗ್ ವಿಭಾಗವು 10 ಪಂದ್ಯಗಳಲ್ಲಿ 96 ವಿಕೆಟ್​ಗಳನ್ನು ಉರುಳಿಸಿವೆ. ಹೀಗಾಗಿ ಭಾರತ ಪರ ಮತ್ತೊಂದು ಬಾರಿ ಮಿಂಚುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಭಾರತವು ತಂಡ ಶಾಂತವಾಗಿ, ಸಂಯೋಜಿತವಾಗಿ ಮತ್ತು ಆತ್ಮವಿಶ್ವಾಸದಿಂದ ಆಡುತ್ತಿದೆ..ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಅವರಿಗೆ ಯಾವುದೇ ಪ್ರಮುಖ ಆಯ್ಕೆ ತಲೆನೋವು ಇಲ್ಲ, ಏಕೆಂದರೆ ಭಾರತವು ಬಹುಶಃ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯವನ್ನು ಗೆದ್ದ ಅದೇ ತಂಡಕ್ಕೆ ಅಂಟಿಕೊಳ್ಳಲಿದೆ.

ಸಿಡಿದೆದ್ದ ಆಸ್ಟ್ರೇಲಿಯಾ

2011 ರಲ್ಲಿ, 18 ವರ್ಷದ ಪ್ಯಾಟ್​ ಕಮಿನ್ಸ್ ಮೊದಲ ಬಾರಿ ಆಸ್ಟ್ರೇಲಿಯಾ ಕ್ರಿಕೆಟ್​ ಸಂಸ್ಥೆ ಜತೆ ಕೇಂದ್ರ ಒಪ್ಪಂದಕ್ಕೆ ಸಹಿ ಹಾಕಿದ್ದರು. ಅವರೀಗ ಕಾಂಗರೂ ಪಡೆಯ ನಾಐಕ.12 ವರ್ಷಗಳ ನಂತರ, ಅವರು ಲಂಡನ್​ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅಲ್ಲಿ ಸೋಲಿಸಿದ್ದು ಭಾರತ ತಂಡವನ್ನೇ. ಐದು ತಿಂಗಳ ಅವಧಿಯಲ್ಲಿ ತಂಡವನ್ನು ವಿಶ್ವಕಪ್ ಫೈನಲ್ ತಲುಪಿಸಿದ್ದಾರೆ ಅವರು.

ಆಸ್ಟ್ರೇಲಿಯಾದ 2023 ರ ವಿಶ್ವಕಪ್ ಅಭಿಯಾನದ ಆರಂಭ ನಿರಾಸೆಯಿಂದ ಕೂಡಿತ್ತು. ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸೋತಿತ್ತು. ಆದರೆ ಆ ಬಳಿಕ ಪ್ರತಿ ಪಂದ್ಯವನ್ನು ಫೈನಲ್ ಪಂದ್ಯದಂತೆಯೇ ಆಡಿದ ಆ ತಂಡ ಬಳಿಕ ಒಂದೇ ಒಂದು ಸೋಲು ಕಾಣದೇ ಫೈನಲ್​ಗೆ ತಲುಪಿದೆ. ಇದು ಆ ತಂಡಕ್ಕೆ ಎಂಟನೇ ಏಕದಿನ ವಿಶ್ವಕಪ್ ಫೈನಲ್​.

ಲಕ್ನೋದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ಸೋಲುವ ಅಂಚಿನಲ್ಲಿದ್ದಾಗ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಎಕ್ಸ್ ನಲ್ಲಿ ಹೀಗೆ ಬರೆದಿ್ದರು. “ಆಸ್ಟ್ರೇಲಿಯಾ ಇಂದು ಸೋತರೆ ಅವರು ಇಡೀ ಪಂದ್ಯಾವಳಿಯಲ್ಲಿ ಎಲ್ಲರ ಮೇಲೂ ತಮ್ಮ ಕೋಪ ತೋರಿಸುತ್ತಾರೆ. ನಿಮಗೆ ಏನು ಬೇಕೋ ಅದನ್ನು ನೀವೇ ನಿರ್ಧರಿಸಿ ಎಂದು ಬರೆದಿದ್ದರು ಸತ್ಯವಾಗಿದೆ.

ಆಸ್ಟ್ರೇಲಿಯಾದ ಅಗ್ರ ಮೂರು ಬ್ಯಾಟರ್​ಗಳಾದ ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ 150 ಕ್ಕಿಂತ ಹೆಚ್ಚು ವೈಯಕ್ತಿಕ ಸ್ಕೋರ್ ಹೊಂದಿದ್ದಾರೆ. ವಾರ್ನರ್ ತಮ್ಮ ಸಾಮರ್ಥ್ಯವನ್ನು ತಂಡಕ್ಕೆ ಮುಡಿಪಾಗಿಟ್ಟಿದ್ದಾರೆ. ಗ್ಲೆನ್ ಮ್ಯಾಕ್ಸ್​ವೆಲ್​ ಮಕ್ಕಳಂತೆ ಕ್ರಿಕೆಟ್ ಆಡುತ್ತಿದ್ದಾರೆ. ಸ್ಟೀವ್​ ಸ್ಮಿತ್ ಸ್ವಲ್ಪ ಅಸಹಜವಾಗಿದ್ದರೂ, ಮಾರ್ನಸ್ ಲಾಬುಶೇನ್ ಅವರ ಉಪಸ್ಥಿತಿಯು ತಂಡಕ್ಕೆ ಬಲ ತಂದಿದೆ. ಬೌಲಿಂಗ್​ನಲ್ಲಿ ಮಿಚೆಲ್ ಸ್ಟಾರ್ಕ್​ ಸ್ವಿಂಗ್​ ಬೌಲಿಂಗ್ ಚೆನ್ನಾಗಿ ಕೆಲಸ ಮಾಡುತ್ತಿದೆ. ಜೋಶ್ ಹೇಜಲ್​ವುಡ್​ ಮತ್ತು ಕಮಿನ್ಸ್ ಸ್ವಲ್ಪ ಅನಿಶ್ಚಿತರಾಗಿದ್ದಾರೆ. ಮೂವರು ತಮ್ಮ ಹೆಸರಿಗೆ 40 ವಿಕೆಟ್ ಗಳನ್ನು ಉರುಳಿಸಿದ್ದಾರೆ. ಆದರೆ ಪವರ್ ಪ್ಲೇನಲ್ಲಿ ಆಕ್ರಮಣದ ಕೊರತೆಯಿದೆ. ಆಡಮ್ ಜಂಪಾ ಅವರ ದೃಢತೆ ಆಸ್ಟ್ರೇಲಿಯಾಕ್ಕೆ ಗೆಲುವು ತರಲಿದೆ. ಅವರು 21.5 ಕ್ಕಿಂತ ಕಡಿಮೆ ಸರಾಸರಿಯಲ್ಲಿ ಹತ್ತರಲ್ಲಿ 21 ವಿಕೆಟ್​ಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ : ಫೈನಲ್ ಪಂದ್ಯದಲ್ಲಿ ವರ್ಣರಂಜಿತ ಕಾರ್ಯಕ್ರಮ; ಪಟ್ಟಿ ಬಿಡುಗಡೆಗೊಳಿಸಿದ ಬಿಸಿಸಿಐ

ಮಾರ್ನಸ್ ಸ್ಟೊಯಿನಿಸ್ ಅವರ ಸ್ಪಿನ್ ಆಡುವ ಸಾಮರ್ಥ್ಯವು ಇತ್ತೀಚಿನ ದಿನಗಳಲ್ಲಿ ಕಳವಳಕಾರಿಯಾಗಿದೆ, ಮಾರ್ನಸ್ ಲಾಬುಶೇನ್ ಅವರ ಫಾರ್ಮ್ ಮತ್ತು ಆಸ್ಟ್ರೇಲಿಯಾವನ್ನು ಬಿಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿಸಿದೆ. ಲ್ಯಾಬುಶೇನ್ ಬದಲಿಗೆ ಸ್ಟೋಯ್ನಿಸ್ ಆಡುವ ನಿರೀಕ್ಷೆಯಿದೆ.

ಪಿಚ್ ರಿಪೋರ್ಟ್​

ಅಹಮದಾಬಾದ್​​ನಲ್ಲಿ ಮಧ್ಯಾಹ್ನದ ಸಮಯದಲ್ಲಿ ತಾಪಮಾನವು ಹೆಚ್ಚಾಗಿರುತ್ತದೆ ಮತ್ತು ಸಂಜೆ ತುಂಬಾ ತಂಪಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕೆಂಪು ಮತ್ತು ಕಪ್ಪು ಮಣ್ಣಿನ ವಿಕೆಟ್ ಗಳಿವೆ. ಕೆಂಪು ಬಣ್ಣವು ಬ್ಯಾಟರ್​ಗಳಿಗೆ ನೆರವಾಗುತ್ತದೆ. ಬೌಲರ್​ಗಳಿಗೆ ಲೆಂಥ್​ ಎಸೆತಕ್ಕೆ ನೆರವಾಗುತ್ತದೆ. ಕಪ್ಪು ಮಣ್ಣಿನ ಪಿಚ್​ ನಿಧಾನವಾಗಿದೆ. ಇಲ್ಲಿನ ಪಿಚ್​ ಒಂದು ಬಾರಿ ಸೆಟ್​ ಆದ ಬ್ಯಾಟರ್​ಗಳಿಗೆ ಹಲವು ಅನುಕೂಲಗಳನ್ನು ನೀಡುತ್ತದೆ.

ತಂಡಗಳು:

ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ , ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್.

ಆಸ್ಟ್ರೇಲಿಯಾ : ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲಾಬುಶೇನ್/ ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್ವೆಲ್, ಜೋಶ್ ಇಂಗ್ಲಿಸ್ (ವಿಕೆಟ್​ ಕೀಪರ್​), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ಆಡಮ್ ಝಂಪಾ, ಜೋಶ್ ಹೇಜಲ್​ವುಡ್​​.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Sachin Tendulkar : ವಿಶೇಷಚೇತನ ಕ್ರಿಕೆಟರ್​ ಅಮೀರ್​ ಭೇಟಿಯಾದ ಕ್ರಿಕೆಟ್ ದೇವರು; ಇಲ್ಲಿದೆ ವಿಡಿಯೊ

ಸಚಿನ್ ತೆಂಡೂಲ್ಕರ್ (Sachin Tendulkar) ಅವರು ತಮ್ಮ ಅಭಿಮಾನಿ ಅಮೀರ್ ಅವರನ್ನು ಭೇಟಿಯಾಗಿ ಅವರೊಂದಿಗೆ ಸಮಯ ಕಳೆದರು.

VISTARANEWS.COM


on

Sachin Tendulkar
Koo

ನವ ದೆಹಲಿ: ಕಳೆದ ತಿಂಗಳು, ಭಾರತದ ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡೂಲ್ಕರ್ (Sachin Tendulkar) ಜಮ್ಮು ಮತ್ತು ಕಾಶ್ಮೀರದ ವಿಕಲಚೇತನ ಕ್ರಿಕೆಟಿಗ ಅಮೀರ್ ಹುಸೇನ್ ಲೋನ್ ಅವರ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. 200 ಟೆಸ್ಟ್, 463 ಏಕದಿನ ಮತ್ತು 1 ಟಿ 20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಸಚಿನ್, ಕ್ರಿಕೆಟಿಗನನ್ನು ಭೇಟಿಯಾಗಿ ಅವರ ಹೆಸರಿನ ಜರ್ಸಿಯನ್ನು ಪಡೆಯುವ ಬಯಕೆಯನ್ನು ವ್ಯಕ್ತಪಡಿಸಿದರು. ಅಂತೆಯೇ ಅವರು ಇದೀಗ ಜೆರ್ಸಿಯನ್ನು ಪಡೆದುಕೊಂಡಿದ್ದಾರೆ.

ತಮ್ಮ ಮಾತುಗಳಿಗೆ ಬದ್ಧರಾಗಿರುವ ತೆಂಡೂಲ್ಕರ್, ಕಾಶ್ಮೀರ ಪ್ರವಾಸದಲ್ಲಿ ಅಮೀರ್ ಅವರನ್ನು ಭೇಟಿಯಾದರು. ಕ್ರಿಕೆಟ್ ಐಕಾನ್ ಅಮೀರ್ ಅವರೊಂದಿಗಿನ ಸಂವಾದದ ವೀಡಿಯೊವನ್ನು ಇನ್ಸ್ಟಾಗ್ರಾಮ್​​ನಲ್ಲಿ ಪೋಸ್ಟ್ ಮಾಡಿದ್ದಾರೆ, “ಅಮೀರ್, ನಿಜವಾದ ಹೀರೋ. ಸ್ಫೂರ್ತಿದಾಯಕವಾಗಿರಿ! ನಿಮ್ಮನ್ನು ಭೇಟಿಯಾಗಿದ್ದರಿಂದ ಸಂತೋಷವಾಯಿತು.” ಎಂದು ಬರೆದುಕೊಂಡಿದ್ದಾರೆ.

ವಿಡಿಯೊಕ್ಲಿಪ್​ನಲ್ಲಿ ಸಚಿನ್ ತೆಂಡೂಲ್ಕರ್, ಅಮೀರ್ ಹುಸೇನ್ ಲೋನ್ ಜತೆ ಸಂಭಾಷಣೆ ನಡೆಸುತ್ತಿರುವುದನ್ನು ಕಾಣಬಹುದು. ಕಾಶ್ಮೀರದ ವಾಘಮಾ ಗ್ರಾಮದವರಾದ ಅಮೀರ್ ಹುಸೇನ್ ಲೋನ್ ತನ್ನ ತಂದೆಯ ಗಿರಣಿಯಲ್ಲಿ ಕೆಲಸ ಮಾಡುವಾಗ ಎಂಟನೇ ವಯಸ್ಸಿನಲ್ಲಿ ಕೈಗಳನ್ನು ಕಳೆದುಕೊಂಡಿದ್ದರು. ಆದರೆ ಅದು ಕ್ರಿಕೆಟ್ ಮೇಲಿನ ಅವರ ಪ್ರೀತಿಯನ್ನು ಕುಗ್ಗಿಸಲಿಲ್ಲ . ಅಂತಿಮವಾಗಿ, ಶಿಕ್ಷಕರೊಬ್ಬರು ಅವರ ಪ್ರತಿಭೆಯನ್ನು ಕಂಡುಹಿಡಿದರು. ಅವರನ್ನು ವೃತ್ತಿಪರ ಕ್ರೀಡೆಗೆ ಪರಿಚಯಿಸಿದ್ದರು,

ಕಳೆದ ತಿಂಗಳು ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡುವ ವೇಳೆ ಅಮೀರ್ ತಮ್ಮ ಜೀವನದ ಕಷ್ಟದ ಕಥನವನ್ನು ತೆರೆದಿಟ್ಟದ್ದರು.

“ಅಪಘಾತದ ನಂತರ, ನಾನು ಭರವಸೆಯನ್ನು ಕಳೆದುಕೊಳ್ಳಲಿಲ್ಲ ಮತ್ತು ಕಷ್ಟಪಟ್ಟು ಕೆಲಸ ಮಾಡಿದೆ. ನಾನು ಎಲ್ಲವನ್ನೂ ನಾನೇ ಮಾಡಬಲ್ಲೆ ಮತ್ತು ನಾನು ಯಾರ ಮೇಲೂ ಅವಲಂಬಿತವಾಗಿಲ್ಲ. ನನ್ನ ಅಪಘಾತದ ನಂತರ ಯಾರೂ ನನಗೆ ಸಹಾಯ ಮಾಡಲಿಲ್ಲ. ಸರ್ಕಾರ ಕೂಡ ನನ್ನನ್ನು ಬೆಂಬಲಿಸಲಿಲ್ಲ ಆದರೆ ನನ್ನ ಕುಟುಂಬವು ಯಾವಾಗಲೂ ನನ್ನೊಂದಿಗೆ ಇತ್ತು” ಎಂದು ಅಮೀರ್ ಹೇಳಿಕೊಂಡಿದ್ದರು.

ಇದನ್ನೂ ಓದಿ : Rohit Sharma : 2 ರನ್​ಗೆ ಔಟಾದ ರೋಹಿತ್​ ಶರ್ಮಾ ಗೇಲಿ ಮಾಡಿದ ಇಂಗ್ಲೆಂಡ್ ಅಭಿಮಾನಿಗಳು

“ನಾನು 2013 ರಲ್ಲಿ ದೆಹಲಿಯಲ್ಲಿ ರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದೇನೆ. 2018 ರಲ್ಲಿ ಬಾಂಗ್ಲಾದೇಶದ ವಿರುದ್ಧ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದೇನೆ. ನಂತರ ನೇಪಾಳ, ಶಾರ್ಜಾ ಮತ್ತು ದುಬೈನಲ್ಲಿ ಕ್ರಿಕೆಟ್ ಆಡಿದೆ. ನಾನು ನನ್ನ ಕಾಲುಗಳೊಂದಿಗೆ (ಬೌಲಿಂಗ್) ಮಾಡುವುದನ್ನು ಮತ್ತು ನನ್ನ ಭುಜ ಮತ್ತು ಕುತ್ತಿಗೆಯಿಂದ ಬ್ಯಾಟಿಂಗ್ ಮಾಡುವುದನ್ನು ನೋಡಿ ಎಲ್ಲರೂ ಆಘಾತಕ್ಕೊಳಗಾಗಿದ್ದರು. ಕ್ರಿಕೆಟ್ ಆಡಲು ನನಗೆ ಶಕ್ತಿ ನೀಡಿದ ದೇವರಿಗೆ ಧನ್ಯವಾದಗಳು, “ಎಂದು ಅವರು ಹೇಳಿಕೊಂಡಿದ್ದರು.

Continue Reading

ಪ್ರಮುಖ ಸುದ್ದಿ

Rohit Sharma : 2 ರನ್​ಗೆ ಔಟಾದ ರೋಹಿತ್​ ಶರ್ಮಾ ಗೇಲಿ ಮಾಡಿದ ಇಂಗ್ಲೆಂಡ್ ಅಭಿಮಾನಿಗಳು

Rohit Sharma: ರೋಹಿತ್​ ಶರ್ಮಾ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಆರು ಬಾರಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದಾರೆ.

VISTARANEWS.COM


on

Rohit Sharma
Koo

ರಾಂಚಿ: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ (Rohit Sharma) ಆರನೇ ಬಾರಿಗೆ ವಿಫಲರಾಗಿದ್ದಾರೆ. ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಅವರು 9 ಎಸೆತಗಳಲ್ಲಿ ಕೇವಲ 2 ರನ್ ಗಳಿಸಿದ್ದಾರೆ. ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ವೈಫಲ್ಯವನ್ನು ಪ್ರದರ್ಶಿಸಿದ್ದಾರೆ. ಹೀಗಾಗಿ ಅಭಿಮಾನಿಗಳ ಟೀಕೆಗೆ ಒಳಗಾಗಿದ್ದಾರೆ.

ರೋಹಿತ್ ಅವರನ್ನು ಜೇಮ್ಸ್ ಆಂಡರ್ಸನ್ ಔಟ್ ಮಾಡಿದರು, ಅವರು ವಿಕೆಟ್​ನಿಂದ ಹೊರಕ್ಕೆ ಹಾರುತ್ತಿದ್ದ ಚೆಂಡನ್ನು ಕೆಣಕಲು ಹೋಗಿ ಔಟಾದರು. ಚೆಂಡು ಬ್ಯಾಟ್​ ಸವರಿ ನೇರವಾಗಿ ವಿಕೆಟ್​ ಕೀಪರ್​ ಬೆನ್​​ ಫೋಕ್ಸ್​ ಕೈ ಸೇರಿತ್ತು. ರೋಹಿತ್ ಔಟಾದ ತಕ್ಷಣ ಇಂಗ್ಲೆಂಡ್ ಅಭಿಮಾನಿಗಳು ಗೇಲಿ ಮಾಡಲು ಆರಂಭಿಸಿದ್ದರು. ‘ಬೈ ಬೈ ರೋಹಿತ್’ ಹಾಡಿದರು.

ಸ್ಪರ್ಧಾತ್ಮಕ ಮೊತ್ತ ಪೇರಿಸಿದ ಇಂಗ್ಲೆಂಡ್​

ಮೊದಲ ಇನಿಂಗ್ಸ್​ನಲ್ಲಿ ಜೋ ರೂಟ್ ಅಜೇಯ 122 ರನ್ ಗಳಿಸಿದ್ದು, ಭಾರತ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​​ನಲ್ಲಿ ಇಂಗ್ಲೆಂಡ್​ 353 ರನ್ ಗಳಿಸಿದೆ. ಭೋಜನ ವಿರಾಮದ ವೇಳೆಗೆ ಬ್ಯಾಟಿಂಗ್​ ಆರಂಭಿಸಿದ ಭಾರತ ಪರ ಯಶಸ್ವಿ ಜೈಸ್ವಾಲ್ (ಅಜೇಯ 27) ಮತ್ತು ಶುಭ್ಮನ್ ಗಿಲ್ (4) ಕ್ರೀಸ್​ನಲ್ಲಿ ಉಳಿದಿದ್ದಾರೆ. ಭಾರತ 10 ಓವರ್​ಗಳಲ್ಲಿ 1 ವಿಕೆಟ್ ನಷ್ಟಕ್ಕೆ 34 ರನ್ ಗಳಿಸಿದೆ. ತವರು ತಂಡವು 319 ರನ್ ಗಳ ಹಿನ್ನಡೆ ಹೊಂದಿದೆ.

ಭಾರತದ ಪರ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ 67ಕ್ಕೆ 4 ವಿಕೆಟ್ ಕಬಳಿಸಿದ್ದಾರೆ. ಆರಂಭಿಕ ವೇಗಿ ಆಕಾಶ್ ದೀಪ್ 19 ಓವರ್​ಗಳಲ್ಲಿ 83 ರನ್​ಗೆ 3 ವಿಕೆಟ್ ಪಡೆದಿದ್ದಾರೆ. ಶನಿವಾರ 7 ವಿಕೆಟ್ ನಷ್ಟಕ್ಕೆ 302 ರನ್ ಗಳಿಸಿದ್ದ ಇಂಗ್ಲೆಂಡ್ ಮೊದಲ ಇನಿಂಗ್ಸ್​​ಗೆ ಇನ್ನೂ 51 ರನ್ ಸೇರಿಸಿತು ಇಂಗ್ಲೆಂಡ್​ನ ಮಾಜಿ ನಾಯಕ ಕೊನೆಯವರೆಗೂ ಅಜೇಯರಾಗಿ ಉಳಿದರು 10 ಬೌಂಡರಿಗಳು ಬಾರಿಸಿದರು.

ಇದನ್ನೂ ಓದಿ : Akash Deep : ಮಗನ ಕ್ರಿಕೆಟ್ ಪಯಣದ ತಾಪತ್ರಯಗಳನ್ನು ವಿವರಿಸಿದ ಆಕಾಶ್​ ದೀಪ್​ ತಾಯಿ

ಸರಣಿಯ ಮೊದಲ ಪಂದ್ಯವನ್ನು ಆಡುತ್ತಿರುವ ಒಲಿ ರಾಬಿನ್ಸನ್ 81 ಎಸೆತಗಳಲ್ಲಿ ಚೊಚ್ಚಲ ಟೆಸ್ಟ್ ಅರ್ಧಶತಕವನ್ನು ಗಳಿಸಿದರು. ಅವರು ರೂಟ್ ಅವರೊಂದಿಗೆ ಎಂಟನೇ ವಿಕೆಟ್​ಗೆ 102 ರನ್​ ಸೇರಿಸಿದರು. ಈ ಜೊತೆಯಾಟ ಪ್ರವಾಸಿ ತಂಡಕ್ಕೆ ಗೌರವಯುತ ಮೊತ್ತ ಪೇರಿಸಲು ನೆರವಾಯಿತು.

ರಾಜ್​​ಕೋಟ್​ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ 434 ರನ್​ಗಳಿಂದ ಜಯ ಸಾಧಿಸಿ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಹೈದರಾಬಾದ್​ನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ಇಂಗ್ಲೆಂಡ್ 28 ರನ್​ಗಳಿಂದ ಸೋತ ನಂತರ ವಿಶಾಖಪಟ್ಟಣಂನಲ್ಲಿ ನಡೆದ ಎರಡನೇ ಟೆಸ್ಟ್​ನಲ್ಲಿ ಭಾರತ 106 ರನ್ಗಳಿಂದ ಗೆದ್ದಿತು.

Continue Reading

ಕ್ರೀಡೆ

Akash Deep : ಮಗನ ಕ್ರಿಕೆಟ್ ಪಯಣದ ತಾಪತ್ರಯಗಳನ್ನು ವಿವರಿಸಿದ ಆಕಾಶ್​ ದೀಪ್​ ತಾಯಿ

Akash Deep : ಆಕಾಶ್​ ದೀಪ್ ಕ್ರಿಕೆಟ್​ ಕ್ಷೇತ್ರಕ್ಕೆ ಪ್ರವೇಶ ಮಾಡುವುದನ್ನು ಅವರ ಗತಿಸಿ ಹೋದ ತಂದೆ ವಿರೋಧಿಸಿದ್ದರು ಎಂದು ತಾಯಿ ಹೇಳಿಕೊಂಡಿದ್ದಾರೆ,

VISTARANEWS.COM


on

Akash deep
Koo

ನವದೆಹಲಿ: ಭರವಸೆಯ ಕ್ರಿಕೆಟಿಗ ಆಕಾಶ್ ದೀಪ್ (Akash Deep) ಅವರ ತಾಯಿ ಲಾದುಮಾ ದೇವಿ ತಮ್ಮ ಮಗನ ಕ್ರಿಕೆಟ್ ಪ್ರಯಾಣದಲ್ಲಿ ತಮ್ಮನ್ನು ‘ಅಪರಾಧದಲ್ಲಿ ಪಾಲುದಾರ’ ಎಂದು ಅಭಿಮಾನದಿಂದ ಹೇಳಿಕೊಂಡಿದ್ದಾರೆ ತನ್ನ ಮಗ ಸರ್ಕಾರಿ ನೌಕರನಾಗಬೇಕೆಂಬ ಆಕಾಶ್​ ಅಪ್ಪನ ಬಯಕೆಯ ಹೊರತಾಗಿಯೂ ಲಾದುಮಾ ಅವರು ಮಗನ ಕ್ರಿಕೆಟ್ ಮೇಲಿನ ಕ್ರಿಕೆಟ್​ಗೆ ಪ್ರೋತ್ಸಾಹ ನೀಡಿದ್ದರು. ಹೀಗಾಗಿ ಅದನ್ನು ಅಪರಾಧ ಎಂದು ಅಭಿಮಾನದಿಂದ ಹೇಳಿಕೊಂಡಿದ್ದಾರೆ.

ಲಾದುಮಾ ದೇವಿ ಮಗನ ಕ್ರೀಡೆಯ ಅನ್ವೇಷಣೆಗೆ ಅನುಕೂಲ ಮಾಡಿಕೊಟ್ಟಿದ್ದರು. ಅಪ್ಪನಿಗೆ ಗೊತ್ತಿಲ್ಲದ ಹಾಗೆ ರಹಸ್ಯವಾಗಿ ಆಡಲು ಅವಕಾಶ ಮಾಡಿಕೊಟ್ಟಳು. ರಾಂಚಿ ಟೆಸ್ಟ್​​ನ ಆರಂಭಿಕ ದಿನದಂದು ಮೂರು ವಿಕೆಟ್​ಗಳನ್ನು ಪಡೆಯುವ ಮೂಲಕ ಆಕಾಶ್ ಅವರ ಕನಸು ಹೊಸ ಎತ್ತರಕ್ಕೆ ಏರಿದೆ. ಭಾರತದ ತರಬೇತುದಾರ ರಾಹುಲ್ ದ್ರಾವಿಡ್ ಅವರು ಅವರಿಗೆ ಟೆಸ್ಟ್​​ ಕ್ಯಾಪ್​ ನೀಡಿದ್ದರು. ಈ ವೇಳೆ ತಾಯಿ ಲಾದುಮಾ ಖುಷಿಯೊಂದಿಗೆ ಮಗನ ಬೆಳವಣಿಗೆ ಬಗ್ಗೆ ಮಾತನಾಡಿದ್ದಾರೆ.

“ಆಕಾಶ್​​ ತಂದೆ ಯಾವಾಗಲೂ ಸರ್ಕಾರಿ ಅಧಿಕಾರಿಯಾಗಬೇಕೆಂದು ಬಯಸಿದ್ದರು. ಆದರೆ ಕ್ರಿಕೆಟ್ ಆಕಾಶ್​ನ ಉತ್ಸಾಹವಾಗಿತ್ತು. ಅದಕ್ಕೆ ಪ್ರೋತ್ಸಾಹ ನೀಡಿ ನಾನು ಅಪರಾಧದಲ್ಲಿ ಆತನ ಪಾಲುದಾರನಾಗಿದ್ದೆ. ನಾನು ಅವನನ್ನು ಕ್ರಿಕೆಟ್ ಆಡಲು ರಹಸ್ಯವಾಗಿ ಕಳುಹಿಸುತ್ತಿದ್ದೆ. ಅವನ ಕನಸನ್ನು ಮುಂದುವರಿಸಲು ಸಹಾಯ ಮಾಡಿದ್ದೆ. ಆ ಸಮಯದಲ್ಲಿ, ನಿಮ್ಮ ಮಗ ಕ್ರಿಕೆಟ್ ಆಡುತ್ತಿದ್ದಾನೆ ಎಂದು ಯಾರಾದರೂ ಹೇಳಿದರೆ ಪತಿ, ಅವನು ಹಾಳಾಗಿದ್ದಾನೆ ಮತ್ತು ರಾಕ್ಷಸನಾಗುತ್ತಾನೆ ಎಂದು ಹೇಳುತ್ತಿದ್ದರು. ಆದರೆ ನಮಗೆ ಆಕಾಶ್​​ ಮೇಲೆ ನಂಬಿಕೆ ಇತ್ತು. ಇದೀಗ ನನ್ನ ಪತಿ ಹಾಗೂ ಇನ್ನೊಬ್ಬ ಮಗನನ್ನು ಕಳೆದುಕೊಂಡಿದ್ದೇನೆ. ಈಗ ಆಕಾಶ್​ಗೆ ಕ್ರಿಕೆಟ್​ ಕೈ ಹಿಡಿದಿದೆ ಎಂದು ಹೇಳಿದ್ದಾರೆ.

ಆಕಾಶ್​ ಅವರ ತಂದೆ ಮತ್ತು ಸಹೋದರ ಇಂದು ಜೀವಂತವಾಗಿದ್ದರೆ, ಅವರು ಸಂತೋಷದಿಂದ ತುಂಬಿ ತುಳುಕುತ್ತಿದ್ದರು: ಲಾದುಮಾ ದೇವಿ

ತಂದೆಗೆ ಅರ್ಪಣೆ

ಇಂಗ್ಲೆಂಡ್ ವಿರುದ್ಧ ರಾಂಚಿಯಲ್ಲಿ ನಡೆದ ಚೊಚ್ಚಲ ಪಂದ್ಯವನ್ನು ಆಕಾಶ್ ತಮ್ಮ ದಿವಂಗತ ತಂದೆಗೆ ಅರ್ಪಿಸಿದ್ದಾರೆ. ಟೆಸ್ಟ್ ಕ್ರಿಕೆಟ್​ಗೆ ತಮ್ಮ ಪ್ರವೇಶವನ್ನು ತೀವ್ರ ಭಾವನಾತ್ಮಕ ಕ್ಷಣ ಎಂದು ವೇಗಿ ಬಣ್ಣಿಸಿದ್ದಾರೆ. ತನ್ನ ತಂದೆ ಮತ್ತು ಸಹೋದರನನ್ನು ಕಳೆದುಕೊಂಡ ನಂತರ ತನ್ನ ಜೀವನ ಕಷ್ಟಕರವಾಯಿತು. ಅಂತಿಮವಾಗಿ ಕ್ರಿಕೆಟ್ ಅನ್ನು ತನ್ನ ಮಾರ್ಗವಾಗಿ ಆಯ್ಕೆ ಮಾಡಿಕೊಂಡೆ ಎಂದು ಅವರು ಬಹಿರಂಗಪಡಿಸಿದರು.

ಇದನ್ನೂ ಓದಿ : WPL 2023 : ಡಬ್ಲ್ಯುಪಿಎಲ್​ನಂತೆ ಐಪಿಎಲ್​ನಲ್ಲೂ ವೈಡ್​ ಬಾಲ್, ನೋ ಬಾಲ್​​ ಪರೀಕ್ಷೆಗೆ ಡಿಆರ್​ಎಸ್​ ಬಳಕೆ?

ಆಕಾಶ್​ನ ತಂದೆ ಮತ್ತು ಸಹೋದರ ಇಂದು ಜೀವಂತವಾಗಿದ್ದರೆ, ಅವರು ಸಂತೋಷದಿಂದ ಸಂಭ್ರಮಿಸುತ್ತಿದ್ದರು. ಇದು ಜೀವನದ ಅತ್ಯಂತ ಸ್ಮರಣೀಯ ದಿನ ಮತ್ತು ನಾವು ಮಾತ್ರ ಅದನ್ನು ನೋಡುವ ಅದೃಷ್ಟವಂತರು. ನಾನು ಈ ಭೂಮಿಯ ಮೇಲಿನ ಹೆಮ್ಮೆಯ ತಾಯಿ ಎಂದು ಲಾದುಮಾ ದೇವಿ ಹೇಳಿದ್ದಾರೆ.

Continue Reading

ಕ್ರೀಡೆ

Ishan Kishan : ಬಿಸಿಸಿಐ ಗುತ್ತಿಗೆ ರದ್ದಾಗುವ ಆತಂಕದಲ್ಲಿ ಇಶಾನ್​​, ಶ್ರೇಯಸ್​ ಅಯ್ಯರ್​; ಯಾಕೆ ಗೊತ್ತಾ?

Ishan Kishan: ಬಿಸಿಸಿಐನ ಸೂಚನೆಯ ಹೊರತಾಗಿಯೂ ಕಿಶನ್ ಮತ್ತು ಅಯ್ಯರ್ ಇಬ್ಬರೂ ರಣಜಿ ಟ್ರೋಫಿ ಪಂದ್ಯಗಳಿಂದ ಹೊರಗುಳಿಯಲು ನಿರ್ಧರಿಸಿರುವುದರಿಂದ ಸಮಸ್ಯೆ ಎದುರಾಗಿದೆ.

VISTARANEWS.COM


on

Shreyas Iyer
Koo

ಬೆಂಗಳೂರು: ಟೀಮ್ ಮ್ಯಾನೇಜ್ಮೆಂಟ್ ಮತ್ತು ಬಿಸಿಸಿಐನ ಸೂಚನೆಗಳ ಹೊರತಾಗಿಯೂ ಇಶಾನ್ ಕಿಶನ್ (Ishan Kishan) ಮತ್ತು ಶ್ರೇಯಸ್ ಅಯ್ಯರ್ 2024 ರ ರಣಜಿ ಟ್ರೋಫಿಯಲ್ಲಿ ಆಡದಿರಲು ನಿರ್ಧರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಇದು ಅವರ ವಿರುದ್ಧ ಕ್ರಮಕ್ಕೆ ಕಾರಣವಾಗಲಿದೆ ಎಂದು ಹೇಳಲಾಗಿದೆ. ಬಿಸಿಸಿಐ ಹೊಸ ಗುತ್ತಿಗೆ ಪಟ್ಟಿಯನ್ನು ಪ್ರಕಟಿಸಿದರೆ ಕಿಶನ್ ಮತ್ತು ಅಯ್ಯರ್ ಇಬ್ಬರೂ ತಮ್ಮ ಕೇಂದ್ರ ಒಪ್ಪಂದಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ.

ಡಿಸೆಂಬರ್ ಮತ್ತು ಜನವರಿಯಲ್ಲಿ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹಿಂದಿರುಗಿದ ನಂತರ ಕಿಶನ್ “ವೈಯಕ್ತಿಕ ಕಾರಣಗಳಿಂದಾಗಿ” ವಿರಾಮದಲ್ಲಿದ್ದಾರೆ. ಈ ವೇಳೆ ರಣಜಿಯಲ್ಲಿ ಪಾಲ್ಗೊಳ್ಳುವಂತೆ ಅವರಿಗೆ ಸೂಚನೆ ನೀಡಲಾಗಿದೆ. ಬರೋಡಾದಲ್ಲಿ ತಮ್ಮ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಅಭ್ಯಾಸ ನಡೆಸುತ್ತಿದ್ದಾರೆ. ಆದರೆ ರಣಜಿ ಟ್ರೋಫಿಯಲ್ಲಿ ಜಾರ್ಖಂಡ್ ಪರ ಆಡಿಲ್ಲ. ಹೀಗಾಗಿ ಅವರು ಗುತ್ತಿಗೆ ಕಳೆದುಕೊಳ್ಳುವ ಸಾಧ್ಯತೆಗಳಿವೆ.

ಅಸ್ಸಾಂ ವಿರುದ್ಧದ ಮುಂಬೈನ ಕೊನೆಯ ರಣಜಿ ಟ್ರೋಫಿ ಲೀಗ್ ಪಂದ್ಯದಿಂದ ಅಯ್ಯರ್ ಗೈರು ಹಾಜರಾಗಿದ್ದರು. ಶುಕ್ರವಾರ ಬರೋಡಾ ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಇದು ಬಿಸಿಸಿಐ ಕೋಪಕ್ಕೆ ಕಾರಣವಾಗಿದೆ.

ಬೆನ್ನುನೋವಿನಿಂದಾಗಿ ಆಯ್ಕೆಗೆ ಲಭ್ಯವಿಲ್ಲ ಎಂದು ಮಧ್ಯಮ ಕ್ರಮಾಂಕದ ಬ್ಯಾಟರ್​ ಮುಂಬೈ ಕ್ರಿಕೆಟ್ ಅಸೋಸಿಯೇಷನ್​​​ಗೆ ತಿಳಿಸಿದ್ದರು, ಆದರೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಆರೋಗ್ಯ ವಿಭಾಗದ ಮುಖ್ಯಸ್ಥ ನಿತಿನ್ ಪಟೇಲ್ ಬಿಸಿಸಿಐ ಮತ್ತು ರಾಷ್ಟ್ರೀಯ ಆಯ್ಕೆದಾರರಿಗೆ ಇಮೇಲ್​​ ಮೂಲಕ ಅಯ್ಯರ್ ಫಿಟ್ ಆಗಿದ್ದಾರೆ ಎಂದು ಹೇಳಿದ್ದಾರೆ.

ಸುಳ್ಳು ಹೇಳಿದವರಿಗೆ ಶಿಕ್ಷೆ

ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆದಾರರು 2023-24ರ ಋತುವಿಗೆ ಕೇಂದ್ರ ಗುತ್ತಿಗೆ ಆಟಗಾರರ ಪಟ್ಟಿಯನ್ನು ಬಹುತೇಕ ಅಂತಿಮಗೊಳಿಸಿದ್ದಾರೆ. ಬಿಸಿಸಿಐ ಆದೇಶದ ಹೊರತಾಗಿಯೂ ಕಿಶನ್ ಮತ್ತು ಅಯ್ಯರ್ ಇಬ್ಬರೂ ದೇಶೀಯ ಕ್ರಿಕೆಟ್ ಆಡದ ಕಾರಣ ಅವರನ್ನು ಆ ಪಟ್ಟಿಯಿಂದ ಹೊರಗಿಡುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

ಏತನ್ಮಧ್ಯೆ, ಶ್ರೇಯಸ್ ಅಯ್ಯರ್ ಅವರು ಬೆನ್ನುನೋವಿನ ಬಗ್ಗೆ ದೂರು ನೀಡಿದ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಕೊನೆಯ ಮೂರು ಟೆಸ್ಟ್​ಗಳಿಗೆ ಭಾರತ ತಂಡದಿಂದ ಹೊರಗುಳಿದಿದ್ದಾರೆ ಎಂದು ಅವರ ಆಪ್ತ ಮೂಲವೊಂದು ಬಹಿರಂಗಪಡಿಸಿದೆ.

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ನಂತರ ಪಟೇಲ್ ಬಿಸಿಸಿಐಗೆ ಇಮೇಲ್ ಬರೆದಿದ್ದರು. ಅಂದಿನಿಂದ, ಬೆನ್ನುನೋವು ಅಯ್ಯರ್ ಅವರನ್ನು ಕಾಡುತ್ತಿದೆ. ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿ ಅಯ್ಯರ್ ಭಾರತದ ಅತ್ಯುತ್ತಮ ಪ್ರದರ್ಶನ ನೀಡಿದ ಬ್ಯಾಟರ್​ಗಳಲ್ಲಿ ಒಬ್ಬರಾಗಿದ್ದರು. ರಣಜಿ ಪಂದ್ಯವನ್ನು ತಪ್ಪಿಸಿಕೊಂಡ ಮಾತ್ರಕ್ಕೆ ಅವರು ಒಪ್ಪಂದವನ್ನು ಕಳೆದುಕೊಳ್ಳುವುದಿಲ್ಲ ಎಂಬ ಅಭಿಪ್ರಾಯವೂ ಇದೆ.

ರಣಜಿ ಟ್ರೋಫಿಯಲ್ಲಿ ಭಾಗವಹಿಸದಿರುವುದನ್ನು ಸಹಿಸುವುದಿಲ್ಲ ಮತ್ತು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರಿಗೆ ಈ ನಿಟ್ಟಿನಲ್ಲಿ ಮುಕ್ತ ಅವಕಾಶ ನೀಡಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕಳೆದ ವಾರ ಕೇಂದ್ರ ಗುತ್ತಿಗೆ ಮತ್ತು ಭಾರತ ಎ ಕ್ರಿಕೆಟಿಗರಿಗೆ ಕಠಿಣ ಎಚ್ಚರಿಕೆ ನೀಡಿದ್ದರು.

Continue Reading
Advertisement
Medical negligence Hospital fined Rs 10 lakh for drowning newborn baby in hot water
ಪ್ರಮುಖ ಸುದ್ದಿ12 seconds ago

medical negligence: ನವಜಾತ ಶಿಶುವನ್ನು ಬಿಸಿನೀರಲ್ಲಿ ಮುಳುಗಿಸಿ ಚರ್ಮ ಕಾಯಿಲೆ ಕಥೆ ಕಟ್ಟಿದ್ದ ಆಸ್ಪತ್ರೆಗೆ 10 ಲಕ್ಷ ದಂಡ!

Woman offers namaz inside mosque boycott from the village
ಕೊಡಗು21 mins ago

Kodagu News : ಮಸೀದಿಯಲ್ಲಿ ನಮಾಜ್‌ ಮಾಡಿದ ಮಹಿಳೆಗೆ ಗ್ರಾಮದಿಂದಲೇ ಬಹಿಷ್ಕಾರ; ಪತಿ ಅಂತ್ಯಕ್ರಿಯೆಗೂ ನಕಾರ

Don't wait for OTT, come to the theatre , said actor Shakhahaari Movie Rangayana Raghu
ಸ್ಯಾಂಡಲ್ ವುಡ್29 mins ago

Shakhahaari Movie: ಒಟಿಟಿಗೆ ಕಾಯ್ಬೇಡಿ, ಚಿತ್ರಮಂದಿರಕ್ಕೆ ಬನ್ನಿ ಎಂದ ʻಶಾಖಾಹಾರಿʼ ನಟ ರಂಗಾಯಣ ರಘು!

accident in up
ದೇಶ30 mins ago

Major Accident: ಭೀಕರ ಅಪಘಾತ; ಟ್ರ್ಯಾಕ್ಟರ್-ಟ್ರಾಲಿ ಕೊಳಕ್ಕೆ ಬಿದ್ದು 15 ಮಂದಿ ಸಾವು

Sachin Tendulkar
ಕ್ರೀಡೆ34 mins ago

Sachin Tendulkar : ವಿಶೇಷಚೇತನ ಕ್ರಿಕೆಟರ್​ ಅಮೀರ್​ ಭೇಟಿಯಾದ ಕ್ರಿಕೆಟ್ ದೇವರು; ಇಲ್ಲಿದೆ ವಿಡಿಯೊ

rahul gandhi mallikarjun kharge arvind kejriwal
ಪ್ರಮುಖ ಸುದ್ದಿ37 mins ago

Lok Sabha Election 2024: 4 ರಾಜ್ಯಗಳಲ್ಲಿ ಬಿಜೆಪಿ ವಿರುದ್ಧ ಎಎಪಿ- ಕಾಂಗ್ರೆಸ್ ಮೈತ್ರಿ ಹೋರಾಟ; ಯಾವ ರಾಜ್ಯ, ಎಷ್ಟು ಸೀಟು?

Rohit Sharma
ಪ್ರಮುಖ ಸುದ್ದಿ51 mins ago

Rohit Sharma : 2 ರನ್​ಗೆ ಔಟಾದ ರೋಹಿತ್​ ಶರ್ಮಾ ಗೇಲಿ ಮಾಡಿದ ಇಂಗ್ಲೆಂಡ್ ಅಭಿಮಾನಿಗಳು

New property BBMP Tax from April 1 double tax and heavy for tenants
ಬೆಂಗಳೂರು55 mins ago

BBMP Tax: ಏಪ್ರಿಲ್ 1ರಿಂದ ಬೆಂಗಳೂರಲ್ಲಿ ಹೊಸ ಆಸ್ತಿ ತೆರಿಗೆ; ಎಲ್ಲೆಲ್ಲಿ ದುಪ್ಪಟ್ಟು ಟ್ಯಾಕ್ಸ್? ಬಾಡಿಗೆದಾರರಿಗೆ ಭಾರಿ ಬರೆ!

indigo
ವೈರಲ್ ನ್ಯೂಸ್58 mins ago

Viral Video: ಇಂಡಿಗೊ ವಿಮಾನದಲ್ಲಿ ಮತ್ತೊಂದು ಎಡವಟ್ಟು; ಆಹಾರ ಪೊಟ್ಟಣದ ಮೇಲೆ ಜಿರಳೆ ನರ್ತನ!

illicit relationship Father in law murdered son in law
ಹಾವೇರಿ1 hour ago

Murder Case : ಅಳಿಯನಿಗೆ ಅನೈತಿಕ ಸಂಬಂಧ; ಬಿಯರ್‌ ಕುಡಿಸಿ ಚಾಕುವಿನಿಂದ ಇರಿದು ಕೊಂದ ಮಾವ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ4 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Varthur Santhosh
ಮಂಡ್ಯ1 hour ago

Varthur Santhosh: ಮತ್ತೆ ಹಳ್ಳಿಕಾರ್‌ ಒಡೆಯ ವಿವಾದ; ವರ್ತೂರ್‌ ಸಂತೋಷ್ ವಿರುದ್ಧ ಕಾನೂನು ಸಮರ

read your daily horoscope predictions for february 24 2024
ಭವಿಷ್ಯ9 hours ago

Dina Bhavishya : ಹೂಡಿಕೆ ವ್ಯವಹಾರದಲ್ಲಿ ಈ ರಾಶಿಯವರಿಗೆ ಸಿಗಲಿದೆ ಸಂಗಾತಿ ಸಾಥ್‌

Staff nurses attempt to convert at health centre in Ratagal village
ಕಲಬುರಗಿ21 hours ago

Forced Conversion : ಆಪರೇಶನ್‌ ಮತಾಂತರ; ನರ್ಸ್‌ಗಳಿಂದ ಹಿಂದೂಗಳ ಬ್ರೈನ್‌ ವಾಶ್‌

Fire breaks out in auto shed Burnt autos
ಬೆಂಗಳೂರು24 hours ago

Fire Accident : ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ! 40-50 ಆಟೋಗಳು ಬೆಂಕಿಗಾಹುತಿ

He sent a private photo video of his girlfriend
ಬೆಳಗಾವಿ1 day ago

Belgavi News : ನವ ವಿವಾಹಿತೆಯ ಖಾಸಗಿ ವಿಡಿಯೊ ಹರಿಬಿಟ್ಟು ಹಳೇ ಪ್ರೇಮಿ ಕಿತಾಪತಿ!

read your daily horoscope predictions for february 23 2024
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಆಫೀಸ್‌ನಲ್ಲಿ ಬಾಸ್‌ನ ಕಿರಿಕಿರಿಯಿಂದ ದಿನಪೂರ್ತಿ ಟೆನ್ಷನ್‌!

Catton Candy contain cancer Will there be a ban in Karnataka
ಬೆಂಗಳೂರು2 days ago

cotton candy Ban : ಕರ್ನಾಟಕದಲ್ಲಿ ಬ್ಯಾನ್‌ ಆಗುತ್ತಾ ಬಾಂಬೆ ಮಿಠಾಯಿ; ಕ್ಯಾನ್ಸರ್​​ ಕಾರಕ ವಿಷ ಪತ್ತೆ!

Swarnavalli Mutt appoints successor ceremony
ಕರ್ನಾಟಕ2 days ago

Swarnavalli Mutt: ಸ್ವರ್ಣವಲ್ಲೀ ಶ್ರೀಗಳ ಶಿಷ್ಯ ಸ್ವೀಕಾರ ಸಂಪನ್ನ; ಇಲ್ಲಿದೆ ಲೈವ್‌ ವಿಡಿಯೊ

read your daily horoscope predictions for february 21 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ವರ್ತನೆಯು ಕೋಪ, ಮುಜುಗರವನ್ನುಂಟು ಮಾಡುತ್ತೆ!

read your daily horoscope predictions for february 20 2024
ಭವಿಷ್ಯ4 days ago

Dina Bhavishya : ಈ ದಿನ ಆತುರದಲ್ಲಿ ಈ ರಾಶಿಯವರು ಯಾವ ತೀರ್ಮಾನವನ್ನು ಮಾಡ್ಬೇಡಿ!

ಟ್ರೆಂಡಿಂಗ್‌