Digital Payment: ಗಮನಿಸಿ; ಡಿಸೆಂಬರ್‌ 31ರಿಂದ ಈ ಯುಪಿಐ ಖಾತೆಗಳು ಬಂದ್! Vistara News

ತಂತ್ರಜ್ಞಾನ

Digital Payment: ಗಮನಿಸಿ; ಡಿಸೆಂಬರ್‌ 31ರಿಂದ ಈ ಯುಪಿಐ ಖಾತೆಗಳು ಬಂದ್!

Digital Payment: ನ್ಯಾಷನಲ್‌ ಪೇಮೆಂಟ್ಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಡಿಸೆಂಬರ್‌ 31ರಿಂದ ಕೆಲವೊಂದು ಯುಪಿಐ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ.

VISTARANEWS.COM


on

digital payment
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಯಾರೂ ಜೇಬಲ್ಲಿ ದುಡ್ಡು ಇಟ್ಟುಕೊಂಡ ಓಡಾಡುತ್ತಿಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಡಿಜಿಟಲ್‌ ಪೇಮೆಂಟ್‌ (Digital Payment)ನ ಪ್ರಮಾಣ ಹೆಚ್ಚಿದೆ. ಅದರಲ್ಲೂ ಏಕೀಕೃತ ಪಾವತಿ ವ್ಯವಸ್ಥೆ (Unified Payments Interface-UPI) ಡಿಜಿಟಲ್‌ ವಹಿವಾಟಿನಲ್ಲಿ ಕ್ರಾಂತಿ ಮಾಡಿದೆ. ಕಾರಿನಿಂದ ಹಿಡಿದು ತರಕಾರಿ ಕೊಳ್ಳುವವರೆಗೆ ಯುಪಿಐ ವಿಧಾನ ಬಳಸಲಾಗುತ್ತಿದೆ. ಈ ಮಧ್ಯೆ ನ್ಯಾಷನಲ್‌ ಪೇಮೆಂಟ್ಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (NPCI) ಡಿಸೆಂಬರ್‌ 31ರಿಂದ ಕೆಲವೊಂದು ಯುಪಿಐ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಯಾವೆಲ್ಲ ಖಾತೆಗಳು ನಿಷ್ಕ್ರಿಯ?

ಈ ಬಗ್ಗೆ ನವೆಂಬರ್‌ 7ರಂದು ಎಲ್ಲ ಬಳಕೆದಾರರಿಗೆ ಸುತ್ತೋಲೆ ನೀಡಲಾಗಿದೆ. ಎನ್‌ಪಿಸಿಐ ನಿರ್ದೇಶನದ ಪ್ರಕಾರ, ಒಂದು ವರ್ಷದಿಂದ ನಿಷ್ಕ್ರಿಯವಾಗಿರುವ ಯುಪಿಐ ಐಡಿಗಳನ್ನು ಅಂದರೆ ಒಂದು ವರ್ಷದವರೆಗೆ ಯಾವುದೇ ವಹಿವಾಟುಗಳಿಲ್ಲದ ಐಡಿಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಇದಕ್ಕಾಗಿ ಡಿಸೆಂಬರ್ 31, 2023 ಅನ್ನು ಗಡುವು ನಿಗದಿಪಡಿಸಲಾಗಿದೆ. ಒಂದು ವರ್ಷದವರೆಗೆ ವ್ಯವಹಾರಕ್ಕಾಗಿ ತಮ್ಮ ಯುಪಿಐ ಐಡಿಯನ್ನು ಬಳಸದಿದ್ದರೆ ಅಂತಹ ವ್ಯಕ್ತಿ ಮತ್ತು ಅವರ ಬ್ಯಾಂಕ್ ಅಥವಾ ಥರ್ಡ್ ಪಾರ್ಟಿ ಅಪ್ಲಿಕೇಶನ್ (ಗೂಗಲ್ ಪೇ, ಫೋನ್ ಪೇ, ಪೇಟಿಎಂ ಇತ್ಯಾದಿ)ಗೆ ಇಮೇಲ್ ಅಥವಾ ಸಂದೇಶವನ್ನು ಕಳುಹಿಸಿ ಎಚ್ಚರಿಸಲಾಗುತ್ತಿದೆ ಎಂದು ಎನ್‌ಪಿಸಿಐ ಹೇಳಿದೆ.

ಹಾಗಂತ ಚಿಂತಿಸಬೇಕಾಗಿಲ್ಲ. ಯುಪಿಐ ಖಾತೆ ರದ್ದಾಗದಂತೆ ನೋಡಿಕೊಳ್ಳುವುದು ಬಹಳ ಸುಲಭ. ಯುಪಿಐ ಐಡಿ ರದ್ದಾಗದಿರಲು 2023ರ ಡಿಸೆಂಬರ್ 31ರೊಳಗೆ ಅದನ್ನು ಬಳಸಿ ಕನಿಷ್ಠ ಒಂದಾದರೂ ವ್ಯವಹಾರ ಪೂರ್ಣಗೊಳಿಸಿದರೆ ಸಾಕು. ಕೆಲವೊಮ್ಮೆ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿದಾಗ ಆ ನಂಬರ್‌ಗೆ ಲಿಂಕ್ ಮಾಡಲಾದ ಯುಪಿಐ ಐಡಿಯನ್ನು ನಿಷ್ಕ್ರಿಯಗೊಳಿಸಲು ಮರೆತು ಹೋಗುವುದು ಈ ಸಮಸ್ಯೆಗೆ ಕಾರಣ.

ಎನ್‌ಪಿಸಿಐ ಹೇಳಿದ್ದೇನು?

  • ಎಲ್ಲ ಟಿಪಿಎಪಿಗಳು ಮತ್ತು ಪಿಎಸ್‌ಪಿ ಬ್ಯಾಂಕ್‌ಗಳು ಯುಪಿಐ ಅಪ್ಲಿಕೇಷನ್‌ಗಳಿಂದ ಕನಿಷ್ಠ ಒಂದು ವರ್ಷದವರೆಗೆ ಯಾವುದೇ ಹಣಕಾಸು ವಹಿವಾಟು ಅಥವಾ ಹಣಕಾಸೇತರ ವಹಿವಾಟುಗಳನ್ನು ಮಾಡದ ಗ್ರಾಹಕರ ಯುಪಿಐ ಐಡಿಗಳು ಮತ್ತು ಸಂಬಂಧಿತ ಯುಪಿಐ ಸಂಖ್ಯೆಗಳು ಮತ್ತು ಫೋನ್‌ ಸಂಖ್ಯೆಗಳನ್ನು ಗುರುತಿಸಬೇಕು
  • ವಹಿವಾಟು ನಡೆಸದ ಗ್ರಾಹಕ ಯುಪಿಐ ಐಡಿಗಳು ಮತ್ತು ಯುಪಿಐ ಸಂಖ್ಯೆಗಳನ್ನು ರದ್ದುಗೊಳಿಸಲಾಗುತ್ತದೆ
  • ಇನ್ವರ್ಡ್‌ ಕ್ರೆಡಿಟ್‌ ಬ್ಲಾಕ್‌ ಯುಪಿಐ ಐಡಿಗಳು ಮತ್ತು ಫೋನ್‌ ಸಂಖ್ಯೆಗಳನ್ನು ಹೊಂದಿರುವ ಗ್ರಾಹಕರು ಯುಪಿಐ ಮ್ಯಾಪರ್‌ ಲಿಂಕ್‌ಗಳಿಗಾಗಿ ಆಯಾ ಯುಪಿಐ ಅಪ್ಲಿಕೇಶನ್‌ಗಳಲ್ಲಿ ಮರು ನೋಂದಾಯಿಸಿಕೊಳ್ಳಬೇಕು‌

ಇದನ್ನೂ ಓದಿ: Tata Technologies : ರಾಜ್ಯದಲ್ಲಿ ಟಾಟಾ ಟೆಕ್ನಾಲಜೀಸ್‌ನಿಂದ 2,000 ಕೋಟಿ ರೂ. ಹೂಡಿಕೆ

ಡಿಜಿಟಲ್‌ ಪಾವತಿ ವಿಧಾನಗಳಲ್ಲಿ ಸುರಕ್ಷಿತ ಮತ್ತು ಸುಭದ್ರ ವಹಿವಾಟನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. “ಡಿಜಿಟಲ್ ಪಾವತಿಗಳ ಕ್ಷೇತ್ರದಲ್ಲಿ ಸುರಕ್ಷಿತ ಮತ್ತು ಸುಭದ್ರ ವಹಿವಾಟು ಅನುಭವವನ್ನು ಖಚಿತಪಡಿಸಿಕೊಳ್ಳಲು ಗ್ರಾಹಕರು ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ತಮ್ಮ ಮಾಹಿತಿಯನ್ನು ನಿಯಮಿತವಾಗಿ ಪರಿಶೀಲಿಸುವುದು ಅತ್ಯಗತ್ಯ. ಆದಾಗ್ಯೂ ಕೆಲವೊಂದು ಗ್ರಾಹಕರು ಹಿಂದಿನ ಸಂಖ್ಯೆಯನ್ನು ಬ್ಯಾಂಕಿಂಗ್ ವ್ಯವಸ್ಥೆಯಿಂದ ಬೇರ್ಪಡಿಸದೆ ಹೊಸ ಮೊಬೈಲ್ ಸಂಖ್ಯೆಗೆ ಬದಲಾಯಿಸಿರುವ ಸಾಧ್ಯತೆ ಇರುವುದರಿಂದ ಈ ಕ್ರಮಕ್ಕೆ ಮುಂದಾಗಿದ್ದೇವೆʼʼ ಎಂದು ಎನ್‌ಪಿಸಿಐ ಹೇಳಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ಸೈಬರ್‌ ಸೇಫ್ಟಿ ಅಂಕಣ: ಫೋಟೊಗಳು, ಸೆಲ್ಫಿಗಳು, ಮತ್ತು ರೀಲ್ಸ್‌ಗಳ ನಿಯಂತ್ರಣ

ಮ್ಮ ಫೋಟೊ ಮತ್ತು ರೀಲ್ಸ್‌ಗಳನ್ನು ಕ್ರಿಮಿನಲ್‌ಗಳು ದುರುಪಯೋಗಿಸದಂತೆ ಸುರಕ್ಷತೆಗೊಳಿಸಿಕೊಳ್ಳಿ. ಜಾಗರೂಕರಾಗಿ ನಿಮ್ಮ ಸೋಷಿಯಲ್‌ ಪ್ರೊಫೈಲನ್ನು ಕಾಯ್ದುಕೊಳ್ಳಿ.

VISTARANEWS.COM


on

cyber security
Koo
cyber safty logo

ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರುವ ಮೊಬೈಲ್‌ನ ಅವಲಂಬನೆ ಮತ್ತು ಅದರಲ್ಲಿರುವ ಆ್ಯಪ್‌ಗಳನ್ನು ಮತ್ತು ಮಾಹಿತಿಯನ್ನು ವಿವಿಧ ರೀತಿಯ ಫಿಷಿಂಗ್‌ (Fishing) ದಾಳಿಗಳಿಂದ ಸುರಕ್ಷಿತಗೊಳಿಸುವುದರ ಬಗ್ಗೆ
‘ಅಂಗೈಯಲ್ಲಿ ಅಂತರ್ಜಾಲ, ಅರಿವಿದೆಯೇ ಅಪಾಯ?’ದಲ್ಲಿ ಹೇಳಿದ್ದೆ. ಇಂಟರ್ನೆಟ್ ನಮಗೆ ಎಲ್ಲೆಡೆ ಲಭ್ಯವಾಗುತ್ತಿರುವಾಗ ನಮ್ಮ ದೈನಂದಿನ ಹಣಕಾಸಿನ ವ್ಯವಹಾರಗಳಿಗೆ ನಮ್ಮ ಮೊಬೈಲನ್ನೇ ಅವಲಂಬಿಸಿದ್ದೇವೆ. ಹಾಗಾಗಿ ನಿಮ್ಮ ಮೊಬೈಲಿನ ಸುರಕ್ಷತೆ ಹೆಚ್ಚಿಸಲು ವೈರಸ್ ಗುರುತಿಸುವ ಸಾಫ್ಟ್‌ವೇರ್‌(Anti-virus) ಬಳಸುವ ಬಗ್ಗೆ ತಿಳಿಸಿದ್ದೆ. ಮರೆತಿದ್ದರೆ ಮೇಲಿನ ಲಿಂಕ್ ಒತ್ತಿ ಪುನರಾವಲೋಕನ ಮಾಡಿ. ಕಳೆದ ವಾರ ನಿಮ್ಮ “ಸೋಶಿಯಲ್ ಮೀಡಿಯಾದಿಂದಲೇ ನಿಮ್ಮ ಸುರಕ್ಷತೆಗೆ ಅಪಾಯ!” ಲೇಖನದಲ್ಲಿ ಫೇಸ್ಬುಕ್ ಮತ್ತು ಇನ್‌ಸ್ಟಾಗ್ರಾಂಗಳಲ್ಲಿ ಅಪ್‌ಲೋಡ್ ಆಗುತ್ತಿರುವ ನಿಮ್ಮ ಫೋಟೊಗಳು, ವೀಡಿಯೊಗಳು, ಸೆಲ್ಫಿಗಳು, ರೀಲ್ಸ್‌ಗಳನ್ನು ದುರ್ಮಾರ್ಗಿಗಳು ದುರುಪಯೋಗಿಸಿಕೊಂಡರೆ ಎನಾಗಬಹುದು ಎನ್ನುವುದರ ಬಗ್ಗೆ ನಿಮ್ಮ ಗಮನ ಸೆಳೆಯುವ ಪ್ರಯತ್ನ ಮಾಡಿದ್ದೆ. ಜೊತೆಗೆ ಆಂಡ್ರಾಯಿಡ್ ಫೇಸ್ಬುಕ್ ಆ್ಯಪ್ ಬಳಸುತ್ತಿರುವವರು ತಮ್ಮ ಗೌಪ್ಯತೆಯನ್ನು ರಕ್ಷಿಸಿಕೊಳ್ಳುವುದರ ಬಗ್ಗೆ ತಿಳಿಸಿದ್ದೆ.

ಇವತ್ತು ನಿಮ್ಮ ಇನ್ಸಸ್ಟಾಗ್ರಾಂ ಪೋಸ್ಟ್‌ಗಳನ್ನು ಸುರಕ್ಷಿತವಾಗಿಟ್ಟುಕೊಳ್ಳುವುದರ ಬಗ್ಗೆ ತಿಳಿಸುವ ಪ್ರಯತ್ನ ಮಾಡುತ್ತೇನೆ. ನಿಮ್ಮ ಪೋಸ್ಟ್‌ಗಳನ್ನು ಯಾರು ನೋಡಬಹುದು, ನಿಮ್ಮ ಪೋಸ್ಟ್‌ಗಳಿಗೆ ಯಾರು ಕಾಮೆಂಟ್ ಮಾಡಬಹುದು ಮತ್ತು ನಿಮ್ಮನ್ನು ಯಾರು ಅನುಸರಿಸಬಹುದು ಎಂಬುದು ಇನ್‌ಸ್ಟಾಗ್ರಾಂ ಆ್ಯಪ್‌ನ ಸುರಕ್ಷತಾ ಸೆಟ್ಟಿಂಗಿನ ಮೇಲೆ ಅವಲಂಬಿತವಾಗಿದೆ. ನಿಮ್ಮಂದಿಗೆ ಇತರರು ಹೇಗೆ ಸಂವಹನ ನಡೆಸುತ್ತಾರೆ ಎಂಬುದನ್ನು ಸಹ ನೀವು ಸೆಟ್ಟಿಂಗಿನ ಮೂಲಕ ಮಿತಿಗೊಳಿಸಬಹುದು.

ಇನ್ಸಸ್ಟಾಗ್ರಾಂ ಸಹಾಯ ವಿಭಾಗದಲ್ಲಿ, ಗೌಪ್ಯತೆ ಸೆಟ್ಟಿಂಗ್‌ಗಳು ಮತ್ತು ಮಾಹಿತಿ ವಿಭಾಗದಲ್ಲಿ ಈ ಕೆಳಗಿನ ವಿಷಯಗಳನ್ನು ವಿವರಿಸಲಾಗಿದೆ.

ಮೊದಲನೆಯದಾಗಿ ನಿಮ್ಮ ಖಾತೆಯನ್ನು ‘ಖಾಸಗಿ’ ಅಥವಾ ‘ಸಾರ್ವಜನಿಕ’ವನ್ನಾಗಿಸುವುದು.

ನೀವು ಇನ್ಸಸ್ಟಾಗ್ರಾಂನಲ್ಲಿ ಖಾತೆ ತೆರೆದಾಗ (ಸೈನ್ ಅಪ್ ಮಾಡಿದಾಗ) ನೀವು 16 ವರ್ಷದೊಳಗಿನವರಾಗಿದ್ದರೆ, ಸಾರ್ವಜನಿಕ ಅಥವಾ ಖಾಸಗಿ ಖಾತೆಯ ನಡುವೆ ಆಯ್ಕೆ ಮಾಡುವ ಆಯ್ಕೆಯನ್ನು ನೀವು ಹೊಂದಿರುತ್ತೀರಿ. ಆದರೆ ಡೀಫಾಲ್ಟ್ ಆಯ್ಕೆ ಖಾಸಗಿ ಎಂದೇ ಇರುತ್ತದೆ.

ನೀವು 16 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ನಿಮ್ಮ Instagram ಖಾತೆಯು ಡಿಫಾಲ್ಟ್ ಆಗಿ ಸಾರ್ವಜನಿಕವಾಗಿರುತ್ತದೆ. ನಿಮ್ಮ ಖಾತೆಯನ್ನು ಯಾವುದೇ ಸಮಯದಲ್ಲಿ ಖಾಸಗಿಯಾಗಿ ಮಾಡಲು ನೀವು ಬಯಸಿದರೆ ಈ ಕೆಳಗಿನ ಕ್ರಮಗಳನ್ನು ನಿಮ್ಮ ಆ್ಯಪ್‌ನಲ್ಲಿ ಕೈಗೊಳ್ಳಿ. ಈ ಕ್ರಮಗಳು ಐಫೋನ್ ಮತ್ತು ಆಂಡ್ರಯಾಡ್‌ಗಳಲ್ಲಿನ ಇನ್‌ಸ್ಟಾಗ್ರಾಂ ಆ್ಯಪಿನಲ್ಲಿ ಬಹುತೇಕ ಒಂದೇ ರೀತಿಯಲ್ಲಿದೆ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಬೆಳಕಿನ ಹಬ್ಬದ ಕರಾಳ ಮುಖ

ನಿಮ್ಮ ಫೋನಿನಲ್ಲಿ ಇನ್‌ಸ್ಟಾಗ್ರಾಂ ಆ್ಯಪನ್ನು ತೆರೆಯಿರಿ. ಇದರ ಮೇಲೆ ಕ್ಲಿಕ್ ಮಾಡಿ ಅದಲ್ಲಿರುವ ಸೆಟ್ಟಿಂಗ್ಸ್ ಆಯ್ಕೆ ಮಾಡಿ. ಅದರಲ್ಲಿ ನಿಮ್ಮ ಖಾತೆಯನ್ನು ಯಾರು ನೋಡಬಹುದು ಎನ್ನುವುದರ ಕೆಳಗೆ ಇರುವ ಅಕೌಂಟ್ ಗೌಪ್ಯತೆಯ ಮೇಲೆ ಕ್ಲಿಕ್ ಮಾಡಿ. ಕ್ಲಿಕ್ ಮಾಡಿ ನಿಮ್ಮ ಖಾತೆಯನ್ನು ಪ್ರೈವೇಟ್ ಮಾಡಿ. ನಂತರ ಪ್ರೈವೇಟಿಗೆ ಬದಲಾಗುವುದನ್ನು ಖಚಿತ ಪಡಿಸಿ.

ಹೀಗೆ ಸರವಾಗಿ ನಿಮ್ಮ ಗೌಪ್ಯತೆಯನ್ನು ಲಾಕ್ ಮಾಡಿಕೊಳ್ಳಬಹುದು. ನಿಮ್ಮ ಖಾತೆಯನ್ನು ನೀವು ಸಾರ್ವಜನಿಕವಾಗಿ ಇರಿಸಿಕೊಂಡು ಅದರ ಭದ್ರತೆಯನ್ನು ಹೆಚ್ಚಿಸಿಕೊಳ್ಳಬಹುದು.

ಯಾರಾದರೂ ಮುಜುಗರವನ್ನುಂಟುಮಾಡುವಂತಹ ಫೋಟೊ ಅಥವಾ ವೀಡಿಯೊ ಶೇರ್ ಮಾಡಿದ್ದರೆ ಅವರನ್ನು ಅನ್‌ಫಾಲ್‌ ಮಾಡಬಹುದು. ನಿಮ್ಮನ್ನು ಯಾರಾದರೂ ಹಿಂಬಾಲಿಸುತ್ತಿದ್ದರೆ ಅಥವಾ ಹೆದರಿಸುತ್ತಿದ್ದರೆ ನಿಮ್ಮ ಶಿಕ್ಷಕರ ಅಥವಾ ತಂದೆತಾಯಿಯ ಸಹಾಯ ಪಡೆಯಬಹದು. ಸೈಬರ್ ಕ್ರೈಮ್ ಇಂಟರ್‌ವೆಂಷನ್‌ ಆಫೀಸರ್‌ಗಳ ಸಹಾಯವನ್ನೂ ಪಡೆಯಬಹದು. ನಿಮ್ಮ ಫೋಟೊ ಮತ್ತು ರೀಲ್ಸ್‌ಗಳನ್ನು ಕ್ರಿಮಿನಲ್‌ಗಳು ದುರುಪಯೋಗಿಸದಂತೆ ಸುರಕ್ಷತೆಗೊಳಿಸಿಕೊಳ್ಳಿ. ಜಾಗರೂಕರಾಗಿ ನಿಮ್ಮ ಸೋಷಿಯಲ್‌ ಪ್ರೊಫೈಲನ್ನು ಕಾಯ್ದುಕೊಳ್ಳಿ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಇಂಟರ್ನೆಟ್ ಬ್ಯಾಂಕಿಂಗ್ ವಂಚನೆ‌ ತಡೆಯಲು ಕೆಲವು ಟಿಪ್ಸ್

Continue Reading

ಉದ್ಯೋಗ

PLI Scheme: ನಿರುದ್ಯೋಗಿಗಳಿಗೆ ಗುಡ್‌ನ್ಯೂಸ್‌; ಮೊಬೈಲ್ ಉತ್ಪಾದನಾ ಉದ್ಯಮದಲ್ಲಿ 5 ಲಕ್ಷ ಉದ್ಯೋಗ ಸೃಷ್ಟಿ

PLI Scheme: ಪ್ರೊಡಕ್ಷನ್‌ ಲಿಂಕ್ಡ್‌ ಇನ್‌ಸೆಂಟಿವ್‌ (Production-linked incentive) ಯೋಜನೆಯು (PLI Scheme) ಮೊಬೈಲ್ ಫೋನ್ ಉತ್ಪಾದನಾ ಉದ್ಯಮದಲ್ಲಿ 5,00,000 ಉದ್ಯೋಗಗಳ ಸೃಷ್ಟಿಗೆ ಕಾರಣವಾಗಲಿದೆ ಎಂದು ಕೇಂದ್ರ ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

VISTARANEWS.COM


on

ashwin
Koo

ನೋಯ್ಡಾ: ಪ್ರೊಡಕ್ಷನ್‌ ಲಿಂಕ್ಡ್‌ ಇನ್‌ಸೆಂಟಿವ್‌ (Production-linked incentive) ಯೋಜನೆಯು (PLI Scheme) ಮೊಬೈಲ್ ಫೋನ್ ಉತ್ಪಾದನಾ ಉದ್ಯಮದಲ್ಲಿ 5,00,000 ಉದ್ಯೋಗಗಳ ಸೃಷ್ಟಿಗೆ ಕಾರಣವಾಗಲಿದೆ ಎಂದು ಕೇಂದ್ರ ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ (Union communications, electronics, and information technology minister Ashwini Vaishnaw) ಭರವಸೆ ವ್ಯಕ್ತಪಡಿಸಿದ್ದಾರೆ. ಉತ್ಪಾದನಾ ವಲಯವನ್ನು ಉತ್ತೇಜಿಸುವ ಮತ್ತು ಆಮದನ್ನು ಕಡಿಮೆ ಮಾಡುವ ಗುರಿಯನ್ನು ಭಾರತ ಸರ್ಕಾರದ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಯೋಜನೆ ಹೊಂದಿದೆ.

ನೋಯ್ಡಾದ ಡಿಕ್ಸನ್ ಟೆಕ್ನಾಲಜೀಸ್ (Dixon Technologies’) ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ ಅವರು, ʼʼಭಾರತದಲ್ಲಿ ಬಳಸಲಾಗುವ ಮೊಬೈಲ್ ಫೋನ್‌ಗಳ ಪೈಕಿ ಶೇ. 99.2ರಷ್ಟು ಇಲ್ಲೇ ತಯಾರಾಗಿವೆʼʼ ಎಂದು ಹೇಳಿದ್ದಾರೆ. ಡಿಕ್ಸನ್ ಟೆಕ್ನಾಲಜೀಸ್‌ನ ಅಂಗಸಂಸ್ಥೆ ಪ್ಯಾಡ್ಜೆಟ್ ಎಲೆಕ್ಟ್ರಾನಿಕ್ಸ್ ಶಿಯೋಮಿಗಾಗಿ ಸ್ಮಾರ್ಟ್‌ಫೋನ್‌ ಮತ್ತು ಇತರ ಸಂಬಂಧಿತ ಉತ್ಪನ್ನಗಳನ್ನು ತಯಾರಿಸಲಿದೆ. ನೋಯ್ಡಾದ 2.7 ಲಕ್ಷ ಚದರ ಅಡಿ ಉತ್ಪಾದನಾ ಸ್ಥಳದಲ್ಲಿ 256 ಕೋಟಿ ರೂ. ವೆಚ್ಚದಲ್ಲಿ ಈ ಘಟಕ ಕಾರ್ಯ ನಿರ್ವಹಿಸಲಿದೆ. ಇಲ್ಲಿ ವಾರ್ಷಿಕವಾಗಿ 2,5,000,000 ಮೊಬೈಲ್‌ ಫೋನ್‌ ಉತ್ಪಾದನೆಯಾಗಲಿದೆ.

ಮುಂದಿನ 10-12 ತಿಂಗಳಲ್ಲಿ ಈ ಘಟಕ ಸಂಪೂರ್ಣವಾಗಿ ಕಾರ್ಯನಿರ್ವಹಿಸಿದ ನಂತರ ಕಂಪನಿಯು ವಾರ್ಷಿಕ 5,0,000,000 ಯುನಿಟ್ ಉತ್ಪಾದನಾ ಸಾಮರ್ಥ್ಯದ ಮತ್ತೊಂದು ಘಟಕ ಸ್ಥಾಪಿಸಲಿದೆ ಎಂದು ಎಂದು ಡಿಕ್ಸನ್ ಕಾರ್ಯನಿರ್ವಾಹಕ ಅಧ್ಯಕ್ಷ ಸುನಿಲ್ ವಚಾನಿ ಹೇಳಿದ್ದಾರೆ. “ಅಲ್ಲಿ ನಾವು ಕಂಪ್ಯೂಟರ್ ಹಾರ್ಡ್‌ವೇರ್‌ನಂತಹ ಇತರ ಉತ್ಪನ್ನಗಳನ್ನು ತಯಾರಿಸಲಿದ್ದೇವೆʼʼ ಎಂದು ಅವರು ತಿಳಿಸಿದ್ದಾರೆ.

ಕಂಪ್ಯೂಟರ್ ಹಾರ್ಡ್‌ವೇರ್‌ ತಯಾರಿಸಲು ಮತ್ತು ಜೋಡಿಸಲು ಅನುಮತಿ ನೀಡುವಂತೆ ಪ್ಯಾಡ್ಜೆಟ್ ಸಲ್ಲಿಸಿದ್ದ ಅರ್ಜಿಯನ್ನು ಕಳೆದ ತಿಂಗಳು ಪಿಎಲ್ಐ 2.0 ಅಡಿಯಲ್ಲಿ ಅನುಮೋದಿಸಲಾಗಿತ್ತು. ಇದು ಚೀನಾದ ಕಂಪ್ಯೂಟರ್ ದೈತ್ಯ ಲೆನೊವೊಗೆ ಬಿಡಿಭಾಗಗಳನ್ನು ತಯಾರಿಸಿ ಕೊಡಲಿದೆ.

ʼʼಮೊಬೈಲ್ ಬಿಡಿಭಾಗಗಳ ಉತ್ಪಾದನೆಯಲ್ಲಿ ದೇಶೀಯ ಮೌಲ್ಯವರ್ಧನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆʼʼ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. “ಇದೀಗ 12 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ ಸರಕುಗಳನ್ನು ರಫ್ತು ಮಾಡಲಾಗುತ್ತಿದೆ. ಇದು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. 2022ರಲ್ಲಿ ಇದರ ಮೌಲ್ಯ 11.1 ಬಿಲಿಯನ್ ಅಮೆರಿಕನ್ ಡಾಲರ್ ಆಗಿತ್ತುʼʼ ಎಂದು ಅವರು ವಿವರಿಸಿದ್ದಾರೆ.

ಇದನ್ನೂ ಓದಿ: ಸಿಬಿಎಸ್‌ಇ 10, 12 ತರಗತಿ ಪರೀಕ್ಷೆಗೆ ಡಿವಿಷನ್, ಡಿಸ್ಟಿಂಕ್ಷನ್ ಘೋಷಣೆ ಇಲ್ಲ!

ಸೈಬರ್‌ ಕ್ರೈಮ್‌ ವಿರುದ್ಧ ಕ್ರಮ

ಇದೇ ವೇಳೆ ಸೈಬರ್‌ ಕ್ರೈಮ್‌ ಬಗ್ಗೆ ಮಾತನಾಡಿದ ಸಚಿವರು, ʼʼಸೈಬರ್‌ ಕ್ರೈಮ್‌ಗೆ ಸಂಬಂಧಿಸಿದಂತೆ ಇತ್ತೀಚೆಗೆ 350ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ. ನಾವು ಆರ್‌ಬಿಐ (ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ) ಜತೆಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ಹೀಗಾಗಿ ಸೈಬರ್ ಅಪರಾಧಗಳ ಸಂಖ್ಯೆ ಕುಸಿದಿದೆ. ಮುಂದಿನ ಕೆಲವು ತಿಂಗಳಲ್ಲಿ ಇನ್ನೂ ಗಣನೀಯವಾಗಿ ಕಡಿಮೆಯಾಗಲಿವೆʼʼ ಎಂದು ಅಶ್ವಿನಿ ವೈಷ್ಣವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಡಿಜಿಟಲ್ ಗುಪ್ತಚರ ಪ್ಲಾಟ್‌ಫಾರ್ಮ್‌ ಮೂಲಕ ವರದಿಯಾದ ಸೈಬರ್ ಅಪರಾಧ ಮತ್ತು ಹಣಕಾಸು ವಂಚನೆಗಳಲ್ಲಿ ಭಾಗಿಯಾಗಿರುವ ಏಳು ಮಿಲಿಯನ್ (70,00000) ಮೊಬೈಲ್ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ ಎಂದು ಹಣಕಾಸು ಸಚಿವಾಲಯ ಇತ್ತೀಚೆಗೆ ತಿಳಿಸಿತ್ತು

Continue Reading

ಗ್ಯಾಜೆಟ್ಸ್

ಗೂಗಲ್ ಕ್ರೋಮ್ ಅಪ್ಡೇಟ್ ಮಾಡದಿದ್ರೆ ನಿಮ್ಮ ಫೋನ್, ಲ್ಯಾಪ್‌ಟಾಪ್ ಹಾಳು!

Google Chrome: ಗೂಗಲ್ ಕ್ರೋಮ್ ಬ್ರೌಸರ್‌ನಲ್ಲಿ ಥ್ರೆಟ್ ಪತ್ತೆಯಾಗಿದ್ದು, ಕಂಪನಿಯು ಸೆಕ್ಯುರಿಟಿ ಅಪ್‌ಡೇಟ್ ಬಿಡುಗಡೆ ಮಾಡಿದೆ.

VISTARANEWS.COM


on

threat detected So Update you google chrome
Koo

ನವದೆಹಲಿ: ನೀವು ಗೂಗಲ್ ಕ್ರೋಮ್ ಬ್ರೌಸರ್ (Google Chrome) ಬಳಸುತ್ತಿದ್ದೀರಾ…? ಹಾಗಿದ್ದರೆ, ಕೂಡಲೇ ಅಪ್‌ಡೇಟ್ ಮಾಡಿಕೊಳ್ಳಿ(Chrome Update). ಇಲ್ಲದಿದ್ದರೆ, ನೀವು ಅಪಾಯಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆಗಳಿವೆ. ಈ ವಿಷಯವನ್ನು ಸ್ವತಃ ಗೂಗಲ್ ಎಚ್ಚರಿಸಿದೆ ಮತ್ತು ಮಹತ್ವದ ಸೆಕ್ಯುರಿಟಿ ಅಪ್‌ಡೇಟ್ (Security Update) ಕೂಡ ರಿಲೀಸ್ ಮಾಡಿದೆ. ಹಾಗಾಗಿ, ನೀವು ಕೂಡಲೇ ನಿಮ್ಮ ಗೂಗಲ್ ಕ್ರೋಮ್ ಅಪ್‌ಡೇಟ್ ಮಾಡಿಕೊಳ್ಳುವುದು ಒಳ್ಳೆಯದು.

ಮ್ಯಾಕ್ಒಎಸ್, ವಿಂಡೋಸ್ ಮತ್ತು ಲಿನುಕ್ಸ್ ಸಾಧನಗಳಿಗೆ ಸಂಬಂಧಿಸಿದಂತೆ ಗೂಗಲ್ ಕ್ರೋಮ್ ಬ್ರೌಸರ್‌ಗಳಿಗಾಗಿ ಭದ್ರತಾ ನವೀಕರಣವನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. CVE-2023-6345 ಎಂದು ಗುರುತಿಸಲಾದ ಥ್ರೆಟ್ ಪರಿಹರಿಸಲು ಈ ಅಪ್‌ಡೇಟ್ ಡಿಸೈನ್ ಮಾಡಲಾಗಿದೆ. ಈ ಥ್ರೆಟ್ ದಾಳಿಕೋರರಿಗೆ ಪೀಡಿತ ಸಾಧನಗಳ ನಿಯಂತ್ರಣವನ್ನು ಪಡೆಯಲು ಅನುಮತಿಸುತ್ತದೆ. ಎಲ್ಲಾ ಕ್ರೋಮ್ ಬಳಕೆದಾರರನ್ನು ತಕ್ಷಣವೇ ತಮ್ಮ ಬ್ರೌಸರ್‌ಗಳನ್ನು ನವೀಕರಿಸಲು ಗೂಗಲ್ ಒತ್ತಾಯಿಸಿದೆ.

CVE-2023-6345 ಯಾವ ರೀತಿಯ ಅಪಾಯವನ್ನುಂಟು ಮಾಡುತ್ತದೆ ಎಂಬ ಮಾಹಿತಿಯನ್ನು ಗೂಗಲ್ ನೀಡಿಲ್ಲ. ಗೂಗಲ್‌ನ ಥ್ರೆಟ್ ಅನಾಲಿಸಿಸ್ ಗ್ರೂಪ್, ಈ ಸಂಭಾವ್ಯ ಥ್ರೆಟ್ ಅನ್ನು ಪತ್ತೆ ಹಚ್ಚಿತ್ತು. ಈ ರೀತಿಯ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳುವುದು ಟೆಕ್ನಾಲಜಿ ಕಂಪನಿಗಳಲ್ಲಿ ಸಾಮಾನ್ಯವಾದ ಬೆಳವಣಿಗೆ ಎಂದು ಹೇಳಬಹುದು. ಈ ಕುರಿತಾದ ಹೆಚ್ಚಿನ ಮಾಹಿತಿಯನ್ನು ನೀಡುವುದರಿಂದ ದಾಳಿಕೋರರಿಗೆ ಮತ್ತಷ್ಟು ನೆರವು ನೀಡಿದಂತಾಗುತ್ತದೆ.

CVE-2023-6345 ಒಂದು ಪೂರ್ಣಾಂಕದ ಓವರ್‌ಫ್ಲೋ ದೌರ್ಬಲ್ಯವಾಗಿದ್ದು, ಇದು ಕ್ರೋಮ್ ಗ್ರಾಫಿಕ್ಸ್ ಎಂಜಿನ್‌ನಲ್ಲಿ ಎಂಬೆಡ್ ಮಾಡಲಾದ ಓಪನ್-ಸೋರ್ಸ್ 2ಡಿ ಗ್ರಾಫಿಕ್ಸ್ ಲೈಬ್ರರಿಯಾದ Skia ಮೇಲೆ ಪರಿಣಾಮ ಬೀರುತ್ತದೆ. ಮ್ಯಾಕ್ ಒಎಸ್ಅಪ್‌ಡೇಟ್ ಟಿಪ್ಪಣಿಗಳಲ್ಲಿ ವಿವರಿಸಿದಂತೆ, ಈ ಥ್ರೆಟ್ ದುರುದ್ದೇಶಪೂರಿತ ಫೈಲ್ ಮೂಲಕ ಸ್ಯಾಂಡ್‌ಬಾಕ್ಸ್ ತಪ್ಪಿಸಿಕೊಳ್ಳುವಿಕೆಯನ್ನು ಸಮರ್ಥವಾಗಿ ಕಾರ್ಯಗತಗೊಳಿಸಲು ಕನಿಷ್ಠ ದಾಳಿಯನ್ನು ಸಕ್ರಿಯಗೊಳಿಸುತ್ತದೆ. ಇದು ಅನಿಯಂತ್ರಿತ ಕೋಡ್ ಎಕ್ಸಿಕ್ಯೂಶನ್ ಮತ್ತು ಡೇಟಾ ಕಳ್ಳತನಕ್ಕೆ ಕಾರಣವಾಗಬಹುದು ಮತ್ತು ಕ್ರೋಮ್‌ ಬ್ರೌಸರ್‌ನ ಸುರಕ್ಷತೆ ಮತ್ತು ಬಳಕೆದಾರರ ಸೂಕ್ಷ್ಮ ಮಾಹಿತಿಯನ್ನು ರಾಜಿ ಮಾಡಿಕೊಳ್ಳಬಹುದು.

ಗೂಗಲ್ ಕ್ರೋಮ್ ಯಾಕೆ ಅಪ್‌ಡೇಟ್ ಮಾಡಿಕೊಳ್ಳಬೇಕು?

ಸ್ವತಃ ಗೂಗಲ್ ಕಂಪನಿಯೇ, ಗೂಗಲ್ ಕ್ರೋಮ್ ಬ್ರೌಸರ್ ಅಪ್‌ಡೇಟ್ ಮಾಡಿಕೊಳ್ಳಲು ಹೇಳಿದ ಮೇಲೂ ನಾವು ಮಾಡದಿದ್ದರೆ ಅಪಾಯ ತಪ್ಪಿದ್ದಲ್ಲ. ಸೈಬರ್ ವಂಚಕರು, ಈ ಥ್ರೆಟ್ ಮೂಲಕ ನಮ್ಮ ಖಾಸಗಿ ಮಾಹಿತಿಯನ್ನು ಬಳಸಿಕೊಳ್ಳುವ ಸಾಧ್ಯತೆಗಳಿರುತ್ತವೆ. 11 ತಿಂಗಳ ಹಿಂದೆ ಇದೇ ರೀತಿಯ ಮಾಹಿತಿ ಹೊರ ಬಿದ್ದಿತ್ತು. ಗೂಗಲ್‌ ಕ್ರೋಮ್‌ (Google Chrome) ವೆಬ್‌ ಬ್ರೌಸರ್‌ನ 250 ಕೋಟಿಗೂ ಅಧಿಕ ಜನರ ಮಾಹಿತಿ ಕಳ್ಳತನವಾಗಿದೆ (Google Chrome Data Breach) ಎಂದು ತಿಳಿದುಬಂದಿತ್ತು.

“ಗೂಗಲ್‌ ಕ್ರೋಮ್‌ ಹಾಗೂ ಕ್ರೋಮಿಯಮ್‌ ಬ್ರೌಸರ್‌ಗಳ 250 ಕೋಟಿಗೂ ಅಧಿಕ ಬಳಕೆದಾರರ ಮಾಹಿತಿಯು ಅಪಾಯದಲ್ಲಿದೆ. ಬಳಕೆದಾರರ ಸೂಕ್ಷ್ಮ ಮಾಹಿತಿ, ದಾಖಲೆ, ಕ್ರಿಪ್ಟೋ ವ್ಯಾಲೆಟ್‌ಗಳು ಹಾಗೂ ಕ್ಲೌಡ್‌ ಪ್ರೊವೈಡರ್‌ ಕ್ರೆಡೆನ್ಶಿಯಲ್‌ಗಳು ಸೋರಿಕೆಯಾಗಿರುವ ಸಾಧ್ಯತೆ ಇದೆ” ಎಂದು ಸೈಬರ್‌ ಸೆಕ್ಯುರಿಟಿ ಸಂಸ್ಥೆ ‘ಇಂಪರ್ವಾ ರೆಡ್’‌ (Imperva Red) ಮಾಹಿತಿ ನೀಡಿದೆ. ಇದು ಗೂಗಲ್‌ ಕ್ರೋಮ್‌ ಇತಿಹಾಸದಲ್ಲೇ ಬೃಹತ್‌ ಡೇಟಾ ಸೋರಿಕೆ ಪ್ರಕರಣ ಎಂದೇ ವಿಶ್ಲೇಷಿಸಲಾಗಿತ್ತು.

ಹ್ಯಾಕರ್‌ಗಳು ಸಿಮ್‌ಲಿಂಕ್‌ (SymLink Or Symbolic Link) ಮೂಲಕ ಬಳಕೆದಾರರ ಮಾಹಿತಿಯನ್ನು ಕದ್ದಿದ್ದಾರೆ ಎಂದು ಕಂಪನಿ ತಿಳಿಸಿತ್ತು. ಕ್ರೋಮಿಯಮ್‌ ವರ್ಷನ್‌ 107 ಹಾಗೂ ಕ್ರೋಮ್‌ ವರ್ಷನ್‌ 108ಅನ್ನು ಕಳೆದ ವರ್ಷ ಬಿಡುಗಡೆ ಮಾಡಿದ್ದು, ಇವುಗಳನ್ನು ಕಾಲಕಾಲಕ್ಕೆ ಅಪ್‌ಡೇಟ್‌ ಮಾಡುವ ಮೂಲಕ ಮಾಹಿತಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು ಎಂದು ಇಂಪರ್ವಾ ರೆಡ್‌ ಸಲಹೆ ನೀಡಿತ್ತು. ಹಾಗಾಗಿ, ನಾವು ನೀಡುವ ಎಚ್ಚರಿಕೆಗಳನ್ನು ನಿರ್ಲಕ್ಷ್ಯ ಮಾಡಬಾರದು. ಇಲ್ಲದಿದ್ದರೆ ನಾವೇ ನಷ್ಟವನ್ನು ಅನುಭವಿಸಬೇಕಾಗುತ್ತದೆ.

ಈ ಸುದ್ದಿಯನ್ನೂ ಓದಿ: WhatsApp: ವಾಟ್ಸಾಪ್‌ ಡೆಸ್ಕ್‌ಟಾಪ್ ಬಳಕೆದಾರರಿಗೆ ‘ಒಮ್ಮೆ ವೀಕ್ಷಣೆ’ ಫೀಚರ್ ವಾಪಸ್ ಬಂತು

Continue Reading

ಕರ್ನಾಟಕ

Design Center : ಬೆಂಗಳೂರಿನಲ್ಲಿ ತನ್ನ ಅತಿದೊಡ್ಡ ಜಾಗತಿಕ ವಿನ್ಯಾಸ ಕೇಂದ್ರವನ್ನು ಉದ್ಘಾಟಿಸಿ ಎಎಂಡಿ

Design Center : ಅತ್ಯಾಧುನಿಕ ಕ್ಯಾಂಪಸ್ ಮುಂಬರುವ ವರ್ಷಗಳಲ್ಲಿ ಸರಿಸುಮಾರು 3,000 ಎಎಮ್​ಡಿ ಎಂಜಿನಿಯರ್​ಗಳಿಗೆ ಆತಿಥ್ಯ ವಹಿಸಲಿದೆ.

VISTARANEWS.COM


on

Data center
Koo

ಬೆಂಗಳೂರು : ಎಎಂಡಿ (ನಾಸ್ಡಾಕ್: ಎಎಂಡಿ) ಬೆಂಗಳೂರಿನಲ್ಲಿ ಮಂಗಳವಾರ (ನವೆಂಬರ್​ 28ರಂದು​ ) ತನ್ನ ಅತಿದೊಡ್ಡ ಜಾಗತಿಕ ವಿನ್ಯಾಸ ಕೇಂದ್ರವನ್ನು (Design Center ) ಉದ್ಘಾಟಿಸಿದೆ. ಇದು ಭಾರತದಲ್ಲಿ ಸಂಶೋಧನೆ, ಅಭಿವೃದ್ಧಿ ಮತ್ತು ಎಂಜಿನಿಯರಿಂಗ್ ಕಾರ್ಯಾಚರಣೆಗಳನ್ನು ವಿಸ್ತರಿಸುವ ಕಂಪನಿಯ ಯೋಜನೆಯಾಗಿದೆ. ಅತ್ಯಾಧುನಿಕ ಕ್ಯಾಂಪಸ್ ಮುಂಬರುವ ವರ್ಷಗಳಲ್ಲಿ ಸರಿಸುಮಾರು 3,000 ಎಎಮ್​ಡಿ ಎಂಜಿನಿಯರ್​ಗಳಿಗೆ ಆತಿಥ್ಯ ವಹಿಸಲಿದೆ. 3 ಡಿ ಸ್ಟ್ಯಾಕಿಂಗ್, ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಸೇರಿದಂತೆ ಅರೆವಾಹಕ ತಂತ್ರಜ್ಞಾನದ ವಿನ್ಯಾಸ ಮತ್ತು ಅಭಿವೃದ್ಧಿಯು ಈ ಕೇಂದ್ರದಲ್ಲಿ ನಡೆಯಲಿದೆ. ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಕ್ಯಾಂಪಸ್ ಅನ್ನು ಉದ್ಘಾಟಿಸಿದರು.

ಎಎಮ್ಡಿ ಟೆಕ್ನೋಸ್ಟಾರ್ ಕ್ಯಾಂಪಸ್ ಮುಂದಿನ ಐದು ವರ್ಷಗಳಲ್ಲಿ ಸಂಸ್ಥೆಯ 400 ಮಿಲಿಯನ್ ಡಾಲರ್ ಹೂಡಿಕೆಯ ಭಾಗವಾಗಿದೆ. ಡೇಟಾ ಸೆಂಟರ್ ಮತ್ತು ಪಿಸಿಗಳಿಗಾಗಿ ಉನ್ನತ ಕಾರ್ಯಕ್ಷಮತೆಯ ಸಿಪಿಯುಗಳು, ಡೇಟಾ ಸೆಂಟರ್ ಮತ್ತು ಗೇಮಿಂಗ್ ಜಿಪಿಯುಗಳು ಮತ್ತು ಎಂಬೆಡೆಡ್ ಸಾಧನಗಳ ಅಭಿವೃದ್ಧಿಗೆ ಕ್ಯಾಂಪಸ್ ಉತ್ಕೃಷ್ಟತೆಯ ಕೇಂದ್ರವಾಗಿ ಕಾರ್ಯನಿರ್ವಹಸಲಿದೆ.

ಬೃಹತ್​ ಕೇಂದ್ರ

500,000 ಚದರ ಅಡಿ ಕ್ಯಾಂಪಸ್ ಮತ್ತು ಕಚೇರಿ ಸ್ಥಳವು ಭಾರತೀಯ ಕಲೆ ಮತ್ತು ಕರಕುಶಲತೆಯನ್ನು ಹೊಂದಿದೆ. ಹಡಲ್ ಸ್ಥಳಗಳು ಮತ್ತು ಕಾನ್ಫರೆನ್ಸ್ ಕೊಠಡಿಗಳು. ಆಧುನಿಕ ಆರ್ &ಡಿ ಪ್ರಯೋಗಾಲಯಗಳನ್ನು ಹೊಂದಿದೆ. ದೊಡ್ಡ ಡೆಮೊ ಕೇಂದ್ರವನ್ನು ಇದು ಹೊಂದಿದೆ. 2000 ಕ್ಕೂ ಹೆಚ್ಚು ಉದ್ಯೋಗಿಗಳ ಸಭೆಗಳನ್ನು ಆಯೋಜಿಸಲು ವಿನ್ಯಾಸಗೊಳಿಸಲಾದ ಕೆಫೆಟೇರಿಯಾ ಮತ್ತು ಎಎಂಡಿ ಉದ್ಯೋಗಿಗಳ ಸಮಗ್ರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸಲು ಜಿಮ್ ಮತ್ತು ಯೋಗ ಕೇಂದ್ರವನ್ನು ಕ್ಯಾಂಪಸ್ ಒಳಗೊಂಡಿದೆ.

ಅಶ್ವಿನಿ ವೈಷ್ಣವ್ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಪ್ರಾರಂಭಿಸಲಾದ ಭಾರತದ ಅರೆವಾಹಕ ಕಾರ್ಯಕ್ರಮವು. ವಿನ್ಯಾಸ ಮತ್ತು ಪ್ರತಿಭೆಗಳಗೆ ಅನ್ವೇಷಣೆಗೆ ಒತ್ತು ನೀಡುತ್ತದೆ. ಎಎಂಡಿ ಬೆಂಗಳೂರಿನಲ್ಲಿ ತನ್ನ ಅತಿದೊಡ್ಡ ವಿನ್ಯಾಸ ಕೇಂದ್ರವನ್ನು ಸ್ಥಾಪಿಸುತ್ತಿರುವುದು ಜಾಗತಿಕ ಕಂಪನಿಗಳು ಭಾರತದ ಮೇಲೆ ಹೊಂದಿರುವ ವಿಶ್ವಾಸಕ್ಕೆ ಸಾಕ್ಷಿ ಎಂದರು.

ಇದನ್ನೂ ಓದಿ : Mohandas Pai : ಐಟಿ ಸಿಟಿ ಗರಿ ಉದುರೀತು ಎಂದ ಮೋಹನ್‌ ದಾಸ್‌ ಪೈ, ಪ್ರಿಯಾಂಕ್‌ ತಿರುಗೇಟು

ಎಎಂಡಿ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮಾರ್ಕ್ ಪೇಪರ್ ಮಾಸ್ಟರ್ ಮಾತನಾಡಿ, ಇಂದು ಬೆಂಗಳೂರಿನಲ್ಲಿ ನಮ್ಮ ಅತಿದೊಡ್ಡ ಜಾಗತಿಕ ವಿನ್ಯಾಸ ಕೇಂದ್ರವನ್ನು ಉದ್ಘಾಟಿಸಲು ನಮಗೆ ಸಂತೋಷವಾಗಿದೆ. ಈ ಹೂಡಿಕೆಯು ಭಾರತದೊಂದಿಗಿನ ನಮ್ಮ ಸಂಬಂಧವನ್ನು ಬಲಪಡಿಸುತ್ತದೆ. ದೇಶವು ನೀಡುವ ಅಸಾಧಾರಣ ಎಂಜಿನಿಯರಿಂಗ್ ಪ್ರತಿಭೆಗಳಲ್ಲಿ ನಮ್ಮ ವಿಶ್ವಾಸವನ್ನು ತೋರಿಸುತ್ತದೆ ಎಂದು ಹೇಳಿದರು.

ಎಎಮ್ಡಿ ಇಂಡಿಯಾ ಕಂಟ್ರಿ ಹೆಡ್ ಜಯ ಜಗದೀಶ್ ಮಾತನಾಡಿ, ಇಂಡಿಯಾ ಡಿಸೈನ್ ಸೆಂಟರ್ 2004ರಲ್ಲಿ ಬೆರಳೆಣಿಕೆಯಷ್ಟು ಉದ್ಯೋಗಿಗಳೊಂದಿಗೆ ಪ್ರಾರಂಭವಾಯಿತು. ಇಂದು, ಎಎಮ್ಡಿಯ ಜಾಗತಿಕ ಕಾರ್ಯಪಡೆಯ 25% ಭಾರತದಲ್ಲಿದೆ. ಈ ಹೊಸ ಸೌಲಭ್ಯವು ಅರೆವಾಹಕಗಳ ಪ್ರಗತಿಯಲ್ಲಿ ಗಮನಾರ್ಹ ಕೊಡುಗೆ ನೀಡುವ ನಮ್ಮ ಬೆಳವಣಿಗೆಯ ಪ್ರಯಾಣದಲ್ಲಿ ಮುಂದಿನ ಮೈಲಿಗಲ್ಲನ್ನು ಸೂಚಿಸುತ್ತದೆ ಎಂದರು.

Continue Reading
Advertisement
Police call off protest FIR against lawyer who slapped police
ಕರ್ನಾಟಕ8 mins ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Shivraj Singh Chouhan
ದೇಶ11 mins ago

Ladli Behna: ಒಂದೇ ಯೋಜನೆ ತಂದು ಮಧ್ಯಪ್ರದೇಶ ಗೆದ್ದ ಸಿಎಂ ಚೌಹಾಣ್;‌ ಏನಿದು ಲಾಡ್ಲಿ ಬೆಹ್ನಾ?

Bobby Deol cries after paparazzi praise him as Animal
ಬಾಲಿವುಡ್13 mins ago

Bobby Deol: ʻಅನಿಮಲ್‌ʼ ಸಕ್ಸೆಸ್‌ ಹೊಗಳಿಕೆಗೆ ಕಣ್ಣೀರಿಟ್ಟ ನಟ ಬಾಬಿ ಡಿಯೋಲ್

R Ashok
ಕರ್ನಾಟಕ27 mins ago

Election Results 2023 : ತೆಲಂಗಾಣ ಶಾಸಕರನ್ನು ರೆಸಾರ್ಟ್‌ಗೆ ಕರೆತಂದು ಸೇವೆ ಮಾಡಿದ್ರೆ ಉಗ್ರ ಪ್ರತಿಭಟನೆ; ಆರ್.‌ ಅಶೋಕ್

Snehit Gowda and Namratha Gowda
ಬಿಗ್ ಬಾಸ್40 mins ago

BBK SEASON 10: ನಮ್ರತಾ ಮೇಲೆ ಸ್ಟ್ರಾಂಗ್​ ಫೀಲಿಂಗ್ಸ್ ಇದೆ ಎಂದ ಸ್ನೇಹಿತ್‌!

Narendra Modi
ದೇಶ48 mins ago

Election Results 2023: ಚುನಾವಣೆ ಗೆಲುವು; ಬಿಜೆಪಿ ಕಚೇರಿಯಲ್ಲಿ ಮೋದಿ ಸ್ವಾಗತಕ್ಕೆ ಸಿದ್ಧತೆ; ಸಂಭ್ರಮ

DK Shivakumar Telangana congress
ಕರ್ನಾಟಕ1 hour ago

Telangana Results 2023 : ತೆಲಂಗಾಣದಲ್ಲಿ ಗೆದ್ದ‌ ಕೈ ಶಾಸಕರೆಲ್ಲರೂ ಹೈದರಾಬಾದ್‌ಗೆ ಶಿಫ್ಟ್

MLA T.B.Jayachandra spoke at the inauguration program of the new Para Medical College at Shira
ತುಮಕೂರು1 hour ago

Tumkur News: ಪ್ಯಾರಾ ಮೆಡಿಕಲ್ ಓದಿದವರಿಗೆ ವಿಫುಲ ಅವಕಾಶ: ಶಾಸಕ ಟಿ.ಬಿ.ಜಯಚಂದ್ರ

Shivamogga News Arrest of the accused who went missing after raping a young woman at Ripponpet
ಕ್ರೈಂ1 hour ago

Shivamogga News: ರಿಪ್ಪನ್‌ಪೇಟೆ; ಅತ್ಯಾಚಾರ ಎಸಗಿ ನಾಪತ್ತೆಯಾಗಿದ್ದ ಆರೋಪಿ ಬಂಧನ

Tumkur News Students can succeed when they utilize opportunities in the right way says Dr. Suresh D S
ತುಮಕೂರು1 hour ago

Tumkur News: ವಿದ್ಯಾರ್ಥಿಗಳು ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು: ಡಾ. ಸುರೇಶ್

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Police call off protest FIR against lawyer who slapped police
ಕರ್ನಾಟಕ8 mins ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ7 hours ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ19 hours ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ1 day ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ2 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ2 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ3 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ3 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

ಟ್ರೆಂಡಿಂಗ್‌