Site icon Vistara News

ವಿಸ್ತಾರ TOP 10 NEWS: ಬೆಂಗಳೂರಿಗೆ ಲಾರಿ ಮುಷ್ಕರದ ತೂಗುಗತ್ತಿಯಿಂದ, ಇಮ್ರಾನ್‌ ಖಾನ್‌ಗೆ ಬಂಧನ ಭೀತಿವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news-lorry owners call for strike to imran khan issue and more news

#image_title

1. Lorry strike: ಬೆಂಗಳೂರಲ್ಲಿ ಮಾ. 17ರಿಂದ ಹಾಲು-ತರಕಾರಿ ಇಲ್ಲ? ಇದು ಲಾರಿ ಚಾಲಕರ ಮುಷ್ಕರ ಎಫೆಕ್ಟ್‌
ರಾಜಧಾನಿಯಲ್ಲಿ ಬೆಳಗ್ಗೆ- ಸಂಜೆ ಲಾರಿಗಳ ಪ್ರವೇಶವನ್ನು ನಿಷೇಧ (Entry ban) ಮಾಡಲಾಗಿದ್ದು, ಇದಕ್ಕೆ ಲಾರಿ ಮಾಲೀಕರಿಂದ (Lorry strike) ಭಾರಿ ವಿರೋಧ ಕೇಳಿ ಬಂದಿದೆ. ಬೆಳಗ್ಗೆ 7 ರಿಂದ 11 ಹಾಗೂ ಸಂಜೆ 4ರಿಂದ 9 ರವರೆಗೆ ನಗರ ಪ್ರವೇಶಿಸದಂತೆ ನಿರ್ಬಂಧ ಹಾಕಲಾಗಿದೆ. ಹೀಗಾಗಿ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. ಸಲಿಂಗ ವಿವಾಹ ಸಾಧ್ಯವಿಲ್ಲ: ಆರೆಸ್ಸೆಸ್ ಸ್ಪಷ್ಟೋಕ್ತಿ
ಮದುವೆಗಳು ವಿರುದ್ಧ ಲಿಂಗಗಳ ನಡುವೆ ನಡೆಯಲು ಸಾಧ್ಯ. ಸಲಿಂಗಗಳ ನಡುವೆ ಮದುವೆ ಸಾಧ್ಯವಿಲ್ಲ(same sex marriage) ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ (ಆರೆಸ್ಸೆಸ್) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ (Dattatreya Hosabale) ಅವರು ಹೇಳಿದ್ದಾರೆ. ಸಲಿಂಗ ಮದುವೆಯನ್ನು ವಿರೋಧಿಸಿ ಕೇಂದ್ರ ಸರ್ಕಾರವು ಮೊನ್ನೆಯಷ್ಟೇ ಸುಪ್ರೀಂ ಕೋರ್ಟ್‌ಗೆ ಒಪ್ಪಿಗೆ ಸಲ್ಲಿಸಿತ್ತು. ಈಗ ಆರೆಸ್ಸೆಸ್ ಕೇಂದ್ರ ಸರ್ಕಾರದ ನಿಲುವು ಬೆಂಬಲಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. V. Somanna: ಮೋದಿ, ಅಮಿತ್‌ ಶಾ ನಮ್ಮ ನಾಯಕರು; ಬಿಜೆಪಿ ಪಕ್ಷವನ್ನು ತೊರೆಯುವುದಿಲ್ಲ ಎಂದು ಕಣ್ಣೀರು ಹಾಕಿದ ಸಚಿವ ಸೋಮಣ್ಣ
ಬಿಜೆಪಿ ತೊರೆದು ಕಾಂಗ್ರೆಸ್‌ ಸೇರುತ್ತಾರೆ ಎಂಬ ಸುದ್ದಿಗಳ ನಡುವೆಯೇ ದಿಢೀರ್‌ ಪತ್ರಿಕಾಗೋಷ್ಠಿ ನಡೆಸಿದ ವಸತಿ ಸಚಿವ ವಿ. ಸೋಮಣ್ಣ, ತಾವು ಯಾವುದೇ ಕಾರಣಕ್ಕೆ ಬಿಜೆಪಿಯನ್ನು ತೊರೆಯುವುದಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: BJP Politics: ಒಂದು ಚುನಾವಣೆ ಗೆದ್ದರೆ ಮರಿ ಹುಲಿಯ?; ನಮ್ಮನ್ನು ತುಳಿಯಲು ಬಂದ್ರೆ ಸುಮ್ಮನಿರೊಲ್ಲ: ಬಿ.ವೈ. ವಿಜಯೇಂದ್ರ ವಿರುದ್ಧ ಅರುಣ್‌ ಸೋಮಣ್ಣ ವಾಗ್ದಾಳಿ

4. Budget Session 2023: ಮೋದಿ, ಆರ್‌ಆರ್‌ಆರ್ ಆಸ್ಕರ್ ಗೆದ್ದಿರುವ ಕ್ರೆಡಿಟ್ ತೆಗೆದುಕೊಳ್ಳಬೇಡಿ! ಖರ್ಗೆ ವ್ಯಂಗ್ಯ
ಬೆಸ್ಟ್ ಒರಿಜಿನಲ್ ಸಾಂಗ್ ಕೆಟಗರಿಯಲ್ಲಿ ಆರ್‌ಆರ್‌ಆರ್ ಸಿನಿಮಾ ಮತ್ತು ಡ್ಯಾಕುಮೆಂಟರಿ ಶಾರ್ಟ್ ಫಿಲ್ಮ್ ದಿ ಎಲಿಫೆಂಟ್ ವಿಸ್ಪರರ್ಸ್ ಆಸ್ಕರ್ ಗೆದಿದ್ದು, ಅದರ ಕ್ರೆಡಿಟ್ ಅನ್ನು ನರೇಂದ್ರ ಮೋದಿ ಅವರು ತೆಗೆದುಕೊಳ್ಳಬಾರದು ಎಂದು ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ವ್ಯಂಗ್ಯ ಮಾಡಿದ್ದಾರೆ(Budget Session 2023). ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Toll collection : ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಟೋಲ್‌ ಸಂಗ್ರಹ ವಿರೋಧಿಸಿ ಕಾಂಗ್ರೆಸ್‌ ಪ್ರತಿಭಟನೆ
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ (Toll collection) ಟೋಲ್‌ ಸಂಗ್ರಹಿಸುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಪಟ್ಟಿ ಪ್ರದರ್ಶಿಸಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ತಲೆಯ ಮೇಲೆ ಹಾಲಿನ ಕ್ಯಾನ್ ಹಿಡಿದು ಸರ್ವೀಸ್ ರಸ್ತೆ ಬೇಕೆಂದು ಒತ್ತಾಯಿಸಿದರು. ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಪೊಲೀಸರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಬಿಡದಿಯಲ್ಲಿ ಶೇಷಗಿರಿಹಳ್ಳಿ ಟೋಲ್ ಬಳಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. ನಾನು ಜೈಲಿಗೆ ಹೋಗಬಹುದು ಇಲ್ಲವೇ ಕೊಲೆಯಾಗಬಹುದು! ಪಾಕ್ ಮಾಜಿ ಪಿಎಂ ಇಮ್ರಾನ್ ಖಾನ್
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್(Imran Khan) ಅವರ ಬಂಧನಕ್ಕೆ ಆಗಮಿಸಿರುವ ಪೊಲೀಸರನ್ನು, ಖಾನ್ ಬೆಂಬಲಿಗರು ತಡೆದಿರುವ ಘಟನೆ ಲಾಹೋರ್‌ನಲ್ಲಿ ನಡೆದಿದೆ. ಈ ವೇಳೆ, ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿರುವ ಇಮ್ರಾನ್ ಖಾನ್ ಅವರು, ನಾನು ಜೈಲಿಗೆ ಹೋದರೂ ಅಥವಾ ಹತ್ಯೆಗೀಡಾದರೂ ನೀವು ನಿಮ್ಮ ಹಕ್ಕುಗಳಿಗೆ ಹೋರಾಡುವುದನ್ನು ಬಿಡಬೇಡಿ ಎಂದು ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. EPF Interest Credit : 98% ಕಂಪನಿಗಳ ಖಾತೆಗೆ ಇತ್ತೀಚಿನ ಪಿಎಫ್‌ ಬಡ್ಡಿ ಜಮೆ
ಉದ್ಯೋಗಿಗಳ ಭವಿಷ್ಯನಿಧಿ (Employees provident fund) ಸಂಸ್ಥೆಯು ತನ್ನ ಸದಸ್ಯತ್ವ ಪಡೆದಿರುವ 98% ಕಂಪನಿಗಳಿಗೆ 2023ರ ಮಾರ್ಚ್‌ 6 ತನಕದ ಇತ್ತೀಚಿನ ಬಡ್ಡಿ ದರವನ್ನು ಜಮೆ ಮಾಡಿದೆ ಎಂದು ಸಂಸತ್ತಿಗೆ ಸೋಮವಾರ ತಿಳಿಸಲಾಯಿತು. 2021-22ರ ಇಪಿಎಫ್‌ ಬಡ್ಡಿದರ (8.1%) ಜಮೆಯಾಗಿಲ್ಲ ಎಂದು ( EPF Interest Credit ) ಹಲವಾರು ಸದಸ್ಯರು ದೂರಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. ರೈಲಿನಲ್ಲಿ ಮಹಿಳೆಯ ತಲೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಟಿಟಿಇ; ಕುಡಿದಿದ್ದು ಹೆಚ್ಚಾಗಿ ಮಾಡಿದ ಅವಾಂತರ
ಇತ್ತೀಚೆಗೆ ಯುಎಸ್​ನಿಂದ ದೆಹಲಿಗೆ ಬರುತ್ತಿದ್ದ ಏರ್​ ಇಂಡಿಯಾ ವಿಮಾನದಲ್ಲಿ ಶಂಕರ್ ಮಿಶ್ರಾ ಎಂಬಾತ ಕಂಠಪೂರ್ತಿ ಕುಡಿದು, ತನ್ನ ಸಹಪ್ರಯಾಣಿಕಳ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಅದರ ಬೆನ್ನಲ್ಲೇ ನಮ್ಮ ರಾಜ್ಯದಲ್ಲಿ ವಿಜಯಪುರದಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್​​ನಲ್ಲಿ, ಯುವತಿಯೊಬ್ಬಳ ಆಸನದ ಮೇಲೆ ಕುಡುಕನೊಬ್ಬ ಮೂತ್ರ ವಿಸರ್ಜಿಸಿದ್ದ. ಈಗ ಇಂಥದ್ದೇ ಮತ್ತೊಂದು ಘಟನೆ ವರದಿಯಾಗಿದೆ. ಆದರೆ ಈ ಬಾರಿ ರೈಲಿನಲ್ಲಿ.. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Arms Importer: ಆತ್ಮ ನಿರ್ಭರತೆಯ ನಡುವೆಯೂ ಶಸ್ತ್ರಾಸ್ತ್ರ ಆಮದಿನಲ್ಲಿ ಭಾರತ ಈಗಲೂ ನಂ.1
2013ರಿಂದ 2017ರ ನಡುವೆ ಮತ್ತು 2018-2022ರ ಅವಧಿಯಲ್ಲಿ ಭಾರತದ ಶಸ್ತ್ರಾಸ್ತ್ರ ಆಮದಿನಲ್ಲಿ ಶೇ.11ರಷ್ಟು ಕುಸಿತವಾಗಿದೆ. ಇಷ್ಟಾಗಿಯೂ ಈಗಲೂ ಭಾರತವು ಶಸ್ತ್ರಾಸ್ತ್ರ ಆಮದಿನಲ್ಲಿ ಜಗತ್ತಿನಲ್ಲೇ ಮೊದಲನೇ ಸ್ಥಾನದಲ್ಲಿದೆ (Arms Importer) ಎಂದು ಸ್ಟಾಕ್‌ಹೋಮ್ ಇಂಟರ್‌ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್(Sipri) ಸೋಮವಾರ ಬಿಡುಗಡೆ ಮಾಡಿದ ವರಿದಯಲ್ಲಿ ತಿಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Salman Khan : ಜೂಹಿ ಚಾವ್ಲಾರನ್ನು ಮದುವೆಯಾಗಲು ಮುಂದಾಗಿದ್ದ ಸಲ್ಮಾನ್‌ ಖಾನ್; ಹೆಣ್ಣು ಕೇಳುವುದಕ್ಕೂ ಹೋಗಿದ್ದರು!
ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ (Salman Khan) ಅವರು ಇನ್ನೂ ಅವಿವಾಹಿತರಾಗಿಯೇ ಇದ್ದಾರೆ. ಈ ನಟನ ಮದುವೆ ಬಗ್ಗೆ ಹಲವು ಬಾರಿ ಸುದ್ದಿಗಳಾಗಿವೆಯಾದರೂ ಅವು ಯಾವುವೂ ನಿಜವಾಗಲಿಲ್ಲ. ಅಂದ ಹಾಗೆ ಸಲ್ಮಾನ್‌ ಅವರು ನಟಿ ಜೂಹಿ ಚಾವ್ಲಾರನ್ನು ಇಷ್ಟ ಪಟ್ಟಿದ್ದರಂತೆ. ಮದುವೆ ಮಾಡಿಕೊಡಿ ಎಂದು ಜೂಹಿ ಅವರ ತಂದೆಯನ್ನೂ ಕೇಳಿಕೊಂಡಿದ್ದರಂತೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. Haveri Communal riots: ರಟ್ಟಿಹಳ್ಳಿಯಲ್ಲಿ ಹಿಂದು ಕಾರ್ಯಕರ್ತರ ಬೈಕ್‌ ರ‍್ಯಾಲಿ ವೇಳೆ ಕಲ್ಲು ತೂರಾಟ; 15 ಜನ ವಶಕ್ಕೆ
  2. ಕೇಂದ್ರ ಸರ್ಕಾರಕ್ಕೆ ಹಿನ್ನಡೆ; ಭೋಪಾಲ್​ ಅನಿಲ ದುರಂತ ಸಂತ್ರಸ್ತ್ರರಿಗೆ ಹೆಚ್ಚುವರಿ ಪರಿಹಾರಕ್ಕಾಗಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್​
  3. KSDL Contract Scam: ಶಾಸಕ ಮಾಡಾಳು ಜಾಮೀನು ರದ್ದು ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ
  4. Gold Theft: ಸಿವಿಲ್‌ ಪೊಲೀಸ್‌ ಎಂದು ರೈಲು ಬಿಟ್ಟು 2 ಕೆಜಿ ಚಿನ್ನ ಕದ್ದ ರೈಲ್ವೆ ಪೊಲೀಸರು; ಕೊನೆಗೂ ಸಿಕ್ಕಿಬಿದ್ದರು
  5. Viral News : ಶ್ರೀ ಕೃಷ್ಣನನ್ನೇ ಮದುವೆಯಾದ ಯುವತಿ! ಅದ್ಧೂರಿಯಾಗಿ ನಡೆಯಿತು ವಿವಾಹ
  6. ರಾಜಮಾರ್ಗ ಅಂಕಣ : ಬ್ರಿಟಿಷ್ ವಿಜ್ಞಾನಿಗಳು ವಿಷ ಎಂದು ಕೊಟ್ಟ ದ್ರಾವಣವನ್ನು ಆ ಭಾರತೀಯ ವಿಜ್ಞಾನಿ ಗಟಗಟನೆ ಕುಡಿದಿದ್ದರು!
Exit mobile version