ಪ್ರಮುಖ ಸುದ್ದಿ
ನಾನು ಜೈಲಿಗೆ ಹೋಗಬಹುದು ಇಲ್ಲವೇ ಕೊಲೆಯಾಗಬಹುದು! ಪಾಕ್ ಮಾಜಿ ಪಿಎಂ ಇಮ್ರಾನ್ ಖಾನ್
ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್(Imran Khan) ಅವರನ್ನು ಬಂಧಿಸಲು ಪೊಲೀಸರು ಮುಂದಾಗಿದ್ದು, ಜನರು ಬೀದಿಗಿಳಿದು ಪ್ರತಿಭಟಿಸುತ್ತಿರುವ ಘಟನೆಗಳು ಲಾಹೋರ್‌ನಲ್ಲಿ ನಡೆಯುತ್ತಿವೆ.
ಲಾಹೋರ್, ಪಾಕಿಸ್ತಾನ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್(Imran Khan) ಅವರ ಬಂಧನಕ್ಕೆ ಆಗಮಿಸಿರುವ ಪೊಲೀಸರನ್ನು, ಖಾನ್ ಬೆಂಬಲಿಗರು ತಡೆದಿರುವ ಘಟನೆ ಲಾಹೋರ್‌ನಲ್ಲಿ ನಡೆದಿದೆ. ಈ ವೇಳೆ, ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿರುವ ಇಮ್ರಾನ್ ಖಾನ್ ಅವರು, ನಾನು ಜೈಲಿಗೆ ಹೋದರೂ ಅಥವಾ ಹತ್ಯೆಗೀಡಾದರೂ ನೀವು ನಿಮ್ಮ ಹಕ್ಕುಗಳಿಗೆ ಹೋರಾಡುವುದನ್ನು ಬಿಡಬೇಡಿ ಎಂದು ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ.
ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಂಧನಕ್ಕೆ ಮುಂದಾಗಿದ್ದಾರೆ. ಬಂಧಿಸಲು ಆಗಮಿಸಿದ ಪೊಲೀಸರ ಮೇಲೆ ಖಾನ್ ಬೆಂಬಲಿಗರು ಕಲ್ಲು ತೂರಾಟ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಜಲ ಫಿರಂಗಿಗಳನ್ನು ಸಿಡಿಸಿ, ಜನರನ್ನು ಚುದುರಿಸುವ ಪ್ರಯತ್ನ ಮಾಡಿದ್ದಾರೆ.
ವಿಡಿಯೋ ಸಂದೇಶ ರಿಲೀಸ್ ಮಾಡಿದ ಇಮ್ರಾನ್
ವಿಡಿಯೋವೊಂದನ್ನು ಬಿಡುಗಡೆ ಮಾಡಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿರುವ ಇಮ್ರಾನ್ ಖಾನ್ ಅವರು, ನನ್ನನ್ನು ಬಂಧಿಸಲು ಪೊಲೀಸರು ಆಗಮಿಸಿದ್ದಾರೆ. ಒಂದು ವೇಳೆ ಇಮ್ರಾನ್ ಖಾನ್ ಜೈಲಿಗೆ ಹೋದರೆ, ಜನರು ನಿದ್ದೆ ಮಾಡಲು ಹೊರಟು ಹೋಗುತ್ತಾರೆಂದು ಅವರು ಭಾವಿಸಿದ್ದಾರೆ. ಆದರೆ, ಅವರ ಎಣಿಕೆ ತಪ್ಪೆಂದು ನೀವು ಸಾಬೀತು ಮಾಡಬೇಕು. ಜನರು ಇನ್ನೂ ಜೀವಂತವಾಗಿದ್ದಾರೆಂದು ನೀವು ನಿರೂಪಿಸಬೇಕು ಎಂದು ಖಾನ್ ಹೇಳಿದ್ದಾರೆ.
ನಿಮ್ಮ ಹಕ್ಕುಗಳಿಗಾಗಿ ನೀವು ಹೋರಾಡಬೇಕು. ಬೀದಿಗಿಳಿಯಿರಿ. ನಾನು ನಿಮ್ಮ ಯುದ್ಧವನ್ನು ಹೋರಾಡುತ್ತೇನೆ. ನನ್ನ ಜೀವನ ಪೂರ್ತಿ ಹೋರಾಟ ಮಾಡಿಕೊಂಡೇ ಬಂದಿದ್ದೇನೆ. ಅದನ್ನು ಮುಂದುವರಿಸುತ್ತೇನೆ. ಒಂದು ವೇಳೆ, ನನಗೇನಾದರೂ ಆದರೆ? ಅವರು ನನ್ನನ್ನು ಜೈಲಿನಲ್ಲಿಡಬಹುದು ಅಥವಾ ಕೊಂದೇ ಹಾಕಬಹುದು. ಆದರೆ, ನೀವು ಇಮ್ರಾನ್ ಖಾನ್ ಇಲ್ಲದೆಯೂ ಹೋರಾಟ ಮಾಡಬಲ್ಲೆವು ಎಂಬುದನ್ನು ಸಾಬೀತು ಮಾಡಬೇಕು. ಗುಲಾಮಿತನ ಎಂದೂ ಸಹಿಸಿಕೊಳ್ಳುವುದಿಲ್ಲ ಎಂಬುದನ್ನು ನೀವು ಸಾಬೀತು ಮಾಡಬೇಕು ಎಂದು ಹೇಳಿರುವ ಇಮ್ರಾನ್ ಖಾನ್ ಪಾಕಿಸ್ತಾನ್ ಜಿಂದಾಬಾದ್ ಎಂದು ಮಾತು ಮುಗಿಸಿದ್ದಾರೆ.
ಇದನ್ನೂ ಓದಿ: Imran Khan | ಇಮ್ರಾನ್ ಖಾನ್ ಕೊಲ್ಲುವುದಷ್ಟೇ ಗುರಿಯಾಗಿತ್ತು! ಬಂಧಿತ ದಾಳಿಕೋರನ ಹೇಳಿಕೆ
ಏನಿದು ತೋಷಖಾನಾ ಭ್ರಷ್ಟಾಚಾರ ಕೇಸ್?
70 ವರ್ಷದ ರಾಜಕಾರಣಿ, ಕ್ರಿಕೆಟ್ ದಂತಕಥೆಯೂ ಆಗಿರುವ ಇಮ್ರಾನ್ ಖಾನ್ ಅವರು ತೋಷಖಾನಾ ಭ್ರಷ್ಟಾಚಾರ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿದ್ದಾಗ ವಿದೇಶಿ ಗಣ್ಯರಿಂದ ಪಡೆದುಕೊಂಡಿರುವ ಉಡುಗೊರೆಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಿರುವ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಚುನಾವಣಾ ಆಯೋಗದಿಂದ ಘೋಷಿಸಿಲ್ಪಟ್ಟಿದ್ದಾರೆ. ಈ ಸಂಬಂಧ ಪಾಕಿಸ್ತಾನ ಚುನಾವಣಾ ಆಯೋಗವು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇಮ್ರಾನ್ ವಿರುದ್ಧ ವಿಚಾರಣೆ ನಡೆಸಿತ್ತು. ಬಳಿಕ ಅವರ ವಿರುದ್ಧ ಭ್ರಷ್ಟಾಚಾರ-ವಿರೋಧಿ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಲಾಯಿತು. ಅವರ ವಿರುದ್ಧ ಸಮನ್ಸ್ ಹೊರಡಿಸಲಾಗಿತ್ತು. ಆದರೆ, ಅವರು ಹಾಜರಾಗಲು ವಿಫಲವಾದ್ದರಿಂದ ಈಗ ಬಂಧನದ ವಾರಂಟ್ ಹೊರಡಿಸಲಾಗಿದೆ.
ದೇಶ
Gujarat High Court: ಪಿಎಂ ಮೋದಿ ಪದವಿ ಸರ್ಟಿಫಿಕೇಟ್ ಕೇಳಿದ್ದ ದಿಲ್ಲಿ ಸಿಎಂ ಕೇಜ್ರಿವಾಲ್‌ಗೆ 25 ಸಾವಿರ ರೂ. ದಂಡ!
Gujarat High Court: ಪ್ರಧಾನಿ ಮೋದಿ ಅವರ ಶೈಕ್ಷಣಿಕ ಸರ್ಟಿಫಿಕೇಟ್‌ಗಳನ್ನು ಒದಗಿಸುವ ಅವಶ್ಯಕತೆ ಇಲ್ಲ ಎಂದು ಹೇಳಿರುವ ಗುಜರಾತ್ ಹೈಕೋರ್ಟ್, ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ದಂಡ ವಿಧಿಸಿ, ಆದೇಶ ಹೊರಡಿಸಿದೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಶಿಕ್ಷಣ ಅರ್ಹತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಗುಜರಾತ್ ಹೈಕೋರ್ಟ್ (Gujarat High Court) 25 ಸಾವಿರ ದಂಡ ವಿಧಿಸಿದೆ. ಪ್ರಧಾನಿ ಮೋದಿ ಅವರ ಪದವಿ ಮತ್ತು ಸ್ನಾತಕೋತ್ತರ ಪದವಿ ಸರ್ಟಿಫಿಕೇಟ್‌ಗಳನ್ನು ಪ್ರಧಾನಿ ಕಾರ್ಯಾಲಯವು(PMO) ಒದಗಿಸುವ ಅಗತ್ಯವಿಲ್ಲ ಎಂದು ಹೇಳಿರುವ ಗುಜರಾತ್ ಹೈಕೋರ್ಟ್, ಆರ್‌ಟಿಐನಡಿ ಮಾಹಿತಿ ಕೇಳಿದ್ದ ಅರವಿಂದ್ ಕೇಜ್ರಿವಾಲ್‌ಗೆ 25 ಸಾವಿರ ರೂಪಾಯಿ ದಂಡ ವಿಧಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಮತ್ತು ಸ್ನಾತಕೋತ್ತರ ಪದವಿಗಳ ವಿವರಗಳನ್ನು ಒದಗಿಸುವಂತೆ ಪ್ರಧಾನಿ ಕಾರ್ಯಾಲಯದ ಸಾರ್ವಜನಿಕ ಮಾಹಿತಿ ಅಧಿಕಾರಿ(PIO) ಮತ್ತು ವಿಶ್ವವಿದ್ಯಾಲಯಗಳ ಸಾರ್ವಜನಿಕ ಮಾಹಿತಿ ಅಧಿಕಾರಿ(PIO)ಗಳಿಗೆ ಮಾಹಿತಿ ಆಯೋಗದ ಮುಸ್ಥರು(CIC) ಆದೇಶಿಸಿದ್ದರು. ಈ ಆದೇಶವನ್ನು ಗುಜರಾತ್‌ನ ನ್ಯಾಯಮೂರ್ತಿ ಬಿರೇನ್ ವೈಷ್ಣವ್ ಅವರಿ ಪೀಠವು ರದ್ದು ಮಾಡಿದೆ. ಇದೇ ವೇಳೆ, ಪ್ರಧಾನಿ ಮೋದಿ ಅವರ ಶೈಕ್ಷಣಿಕ ಅರ್ಹತೆಯ ಪದವಿಗಳನ್ನು ಪತ್ರಗಳನ್ನು ಪೂರೈಸುವಂತೆ ಮಾಹಿತಿ ಕೇಳಿದ್ದ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ 25 ಸಾವಿರ ದಂಡ ವಿಧಿಸಿದೆ.
ಸಿಐಸಿ ಆದೇಶವನ್ನು ಪ್ರಶ್ನಿಸಿ ಗುಜರಾತ್ ವಿಶ್ವವಿದ್ಯಾಲಯವು ಹೈಕೋರ್ಟ್ ಮೊರೆ ಹೋಗಿತ್ತು.
ದೇಶ
Ram Navami Violence: ಗುಜರಾತ್, ಬಂಗಾಳದಲ್ಲಿ ರಾಮನವಮಿ ಹಿಂಸಾಚಾರ; 60 ಜನರ ಬಂಧನ, ರಾಜಕೀಯ ಮೇಲಾಟ
Ram Navami Violence: ರಾಮನವಮಿ ಹಿನ್ನೆಲೆಯಲ್ಲಿ ರಾಮನ ಮೂರ್ತಿಯ ಮೆರವಣಿಗೆ ಮಾಡುವಾಗ ಪಶ್ಚಿಮ ಬಂಗಾಳ, ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಹಿಂಸಾಚಾರ ನಡೆದಿದೆ. ಕಲ್ಲುತೂರಾಟ ಕೂಡ ನಡೆದಿದ್ದು, ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
ಕೋಲ್ಕೊತಾ/ಗಾಂಧಿನಗರ: ಪಶ್ಚಿಮ ಬಂಗಾಳ ಹಾಗೂ ಗುಜರಾತ್‌ನಲ್ಲಿ ರಾಮನವಮಿ ದಿನವೇ ಭಾರಿ ಹಿಂಸಾಚಾರ (Ram Navami Violence) ನಡೆದಿದ್ದು, ಗುಜರಾತ್‌ನಲ್ಲಿ 24 ಮಂದಿಯನ್ನು ಬಂಧಿಸಲಾಗಿದೆ. ಬಂಗಾಳದಲ್ಲೂ 36 ಜನರನ್ನು ಬಂಧಿಸಲಾಗಿದೆ. ಹಾಗೆಯೇ, ನೂರಾರು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಬಂಗಾಳದ ಹೌರಾದಲ್ಲಂತೂ ರಾಮನವಮಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದ್ದು, ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಗುಜರಾತ್‌ನ ವಡೋದರಾದಲ್ಲೂ ಹಿಂಸಾಚಾರ ನಡೆದಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಹಾಗೆಯೇ, ಇದು ರಾಜಕೀಯ ಮೇಲಾಟಕ್ಕೂ ಕಾರಣವಾಗಿದೆ. ಅತ್ತ, ಮಹಾರಾಷ್ಟ್ರದ ಹಲವೆಡೆಯೂ ಹಿಂಸಾಚಾರದ ಪ್ರಕರಣಗಳು ವರದಿಯಾಗಿವೆ.
ಬಂಗಾಳದಲ್ಲಿ ಶುಕ್ರವಾರವೂ ಗಲಭೆ
ಹೌರಾದ ಶಿಬ್‌ಪುರದಲ್ಲಿ ಶುಕ್ರವಾರವೂ ಗಲಾಟೆ ಮುಂದುವರಿದಿದ್ದು, ಪೊಲೀಸ್ ವಾಹನಗಳಿಗೇ ಬೆಂಕಿ ಹಚ್ಚಲಾಗಿದೆ. ಕಲ್ಲು ತೂರಾಟ, ಅಂಗಡಿ-ಮುಂಗಟ್ಟುಗಳ ಮೇಲೆ ದಾಳಿ ಸೇರಿ ಹಲವು ರೀತಿಯಲ್ಲಿ ಹಿಂಸಾಚಾರ ನಡೆಸಲಾಗಿದೆ. ಶಿಬ್‌ಪುರವೊಂದರಲ್ಲಿಯೇ ಪೊಲೀಸರು 36 ಜನರನ್ನು ಬಂಧಿಸಿದ್ದು, ನೂರಾರು ಜನರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ರಾಮನವಮಿ ಮೆರವಣಿಗೆ ವೇಳೆ ಕೆಲವು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಬಳಿಕ ಗಲಭೆ ಉಂಟಾಗಿದೆ ಎಂದು ತಿಳಿದುಬಂದಿದೆ. ಇದಾದ ಬಳಿಕ ಪೊಲೀಸರಿಗೂ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗದಷ್ಟು ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು ಎನ್ನಲಾಗಿದೆ.
ಬಂಗಾಳದಲ್ಲಿ ಹಿಂಸಾಚಾರದ ದೃಶ್ಯ
ಬಿಜೆಪಿ-ಟಿಎಂಸಿ ಮಧ್ಯೆ ವಾಕ್ಸಮರ
ಪಶ್ಚಿಮ ಬಂಗಾಳದಲ್ಲಿ ಭಾರಿ ಕಲ್ಲುತೂರಾಟದಿಂದಾಗಿ ಅಂಗಡಿ-ಮುಂಗಟ್ಟು, ಜನರ ಆಸ್ತಿಪಾಸ್ತಿಗೆ ಹಾನಿಯಾಗಿರುವ ಪ್ರಕರಣವೀಗ ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ. ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, “ಹೌರಾದಲ್ಲಿ ನಡೆದ ಹಿಂಸಾಚಾರಕ್ಕೆ ಹಿಂದುಗಳೂ ಕಾರಣವಲ್ಲ, ಮುಸ್ಲಿಮರೂ ಕಾರಣವಲ್ಲ. ಬಿಜೆಪಿ ಹಾಗೂ ಬಜರಂಗದಳದ ಕಾರ್ಯಕರ್ತರು ರಾಮನವಮಿ ಮೆರವಣಿಗೆ ವೇಳೆ ಪ್ರಚೋದನೆ ನೀಡಿದ ಕಾರಣ ಹಿಂಸಾಚಾರ ನಡೆದಿದೆ. ಗಲಭೆ ವೇಳೆ ಯಾರ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆಯೋ, ಅವರಿಗೆ ನೆರವು ನೀಡಲಾಗುತ್ತದೆ” ಎಂದು ತಿಳಿಸಿದರು. ಅತ್ತ, ಬಿಜೆಪಿಯು ಗಲಭೆಗೆ ಟಿಎಂಸಿಯ ದುರಾಡಳಿತವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಚಾವಣಿ ಮೇಲೆ ನಿಂತು ಕಲ್ಲು ತೂರಾಟ
ಗುಜರಾತ್‌ನ ವಡೋದರ ನಗರದಲ್ಲಿ ರಾಮನ ಮೂರ್ತಿಯ ಮೆರವಣಿಗೆ ವೇಳೆ ಚಾವಣಿ ಮೇಲೆ ನಿಂತು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಫತೇಪುರ ಪ್ರದೇಶದಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಶ್ರೀರಾಮ ಮೂರ್ತಿಯ ಮೆರವಣಿಗೆ ಆಯೋಜಿಸಿದ್ದರು. ಇದೇ ವೇಳೆ ಮುಸ್ಲಿಮರು ಕಲ್ಲು ತೂರಾಟ ನಡೆಸಿದ ಕಾರಣ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಗಲಭೆಯಿಂದಾಗಿ ಹಲವರು ಗಾಯಗೊಂಡಿದ್ದು, ಇನ್ನೂ ಹಲವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದಕ್ಕೂ ಮೊದಲು ನಡೆದ ಮೆರವಣಿಗೆ ವೇಳೆಯೂ ಪಿತೂರಿ ನಡೆಸಿ ಕಲ್ಲು ತೂರಾಟ ಮಾಡಲಾಗುತ್ತಿತ್ತು. ಈಗಲೂ ಪಿತೂರಿ ನಡೆಸಲಾಗಿದೆ ಎಂದು ಬಜರಂಗದಳದ ಮುಖಂಡರು ಆರೋಪಿಸಿದ್ದಾರೆ.
ಇದನ್ನೂ ಓದಿ: Karnataka Elections: ನನ್ನ ರಾಮ ಅಂತಃಕರಣ ಸ್ವರೂಪಿ, ನಿಮಗೆ ರಾಮ ಚುನಾವಣೆ ಸರಕು: ಸಿದ್ದು, ಬಿಜೆಪಿ ನಡುವೆ ರಾಮನವಮಿ ಫೈಟ್
ಕರ್ನಾಟಕ
Siddaramaiah: ಕೋಲಾರದಿಂದಲೂ ಸಿದ್ದರಾಮಯ್ಯ ಸ್ಪರ್ಧೆ: ರಾಹುಲ್ ಗಾಂಧಿಯಿಂದಲೇ ಘೋಷಣೆಗೆ ಮುಹೂರ್ತ?
ಕೋಲಾರದಿಂದ ಮಾತ್ರ ಸ್ಪರ್ಧೆ ಎನ್ನುತ್ತಿದ್ದ ಸಿದ್ದರಾಮಯ್ಯ, ವರುಣಾ ಕ್ಷೇತ್ರದಲ್ಲಿ ಸ್ಪರ್ಧೆಯನ್ನು ಈಗಾಗೆಲ ಖಚಿತಪಡಿಸಿದ್ದಾರೆ.
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದ ಜತೆಗೆ ಕೋಲಾರದಿಂದಲೂ ಸ್ಪರ್ಧೆ ಮಾಡುವುದು ಬಹುತೇಕ ಖಚಿತ ಎನ್ನಲಾಗುತ್ತಿದ್ದು, ರಾಹುಲ್ ಗಾಂಧಿಯವರಿಂದಲೇ ಈ ಘೋಷಣೆಯಾಗುವ ಸಾಧ್ಯತೆಯಿದೆ.
ಈ ಬಗ್ಗೆ ಈಗಾಗಲೇ ಸುರ್ಜೇವಾಲಾ ಜತೆ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆ. ಸಿದ್ದರಾಮಯ್ಯ ಟೀಮ್ ಈಗಾಗಲೆ ಕೋಲಾರದಲ್ಲಿ ಕಾರ್ಯ ನಡೆಸುತ್ತಿದೆ. ಬಗೆಹರಿಯದ ಮುನಿಯಪ್ಪ ಮತ್ತು ರಮೇಶ್ ಕುಮಾರ್ ಬಣ ಜಗಳದ ಕಾರಣಕ್ಕೆ ಕೋಲಾರದಿಂದ ಸ್ಪರ್ಧೆ ಬೇಡ ಎಂದು ಸಿದ್ದರಾಮಯ್ಯ ನಿರ್ಧರಿಸಿದ್ದರು.
ಆದರೆ ನಂತರದಲ್ಲಿ ದೇವನಹಳ್ಳಿಯಿಂದ ಮುನಿಯಪ್ಪ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಟಿಕೆಟ್ ಘೋಷಣೆ ನಂತರ ದೇವನಹಳ್ಳಿಯಲ್ಲೇ ಮುನಿಯಪ್ಪ ಠಿಕಾಣಿ ಹೂಡಿದ್ದು, ಅವರ ಸಂಪೂರ್ಣ ತಂಡ ಸಹ ಅಲ್ಲಿಗೇ ತೆರಳಿದೆ. ಈ ಕಾರಣಕ್ಕೆ ಕೋಲಾರದಿಂದಲೂ ಸ್ಪರ್ಧೆಗೆ ಸಿದ್ದರಾಮಯ್ಯ ಒಲವು ತೋರಿದ್ದಾರೆ.
ಆದರೆ ಸಿದ್ದರಾಮಯ್ಯಗೆ ಎರಡು ಕ್ಷೇತ್ರ ಕೊಡುವ ಬಗ್ಗೆ ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ ಅಪಸ್ವರ ಎತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೀಸೋದರಿಂದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕಾಂಗ್ರೆಸ್‌ಗೆ ಅನುಕೂಲ ಎನ್ನುವ ವಾದವನ್ನು ಅನೇಕರು ಮುಂದೆ ಇಟ್ಟಿದ್ದಾರೆ.
ಏಪ್ರಿಲ್ ಮೊದಲ ವಾರದಲ್ಲಿ ರಾಹುಲ್ ಗಾಂಧಿ ಕೋಲಾರಕ್ಕೆ ಆಗಮಿಸಲಿದ್ದಾರೆ. 2019ರಲ್ಲಿ ಕೋಲಾರದಲ್ಲಿ ಮೋದಿ ಕುರಿತು ಮಾಡಿದ ಭಾಷಣಕ್ಕೆ ಇತ್ತೀಚೆಗೆ ಲೋಕಸಭೆ ಸ್ಥಾನದಿಂದ ಅನರ್ಹರಾಗಿರುವ ರಾಹುಲ್ ಗಾಂಧಿ, ಕೋಲಾರದಲ್ಲೇ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲೇ ಸಿದ್ದರಾಮಯ್ಯ ಅವರ ಹೆಸರನ್ನು ಘೋಷಣೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Congress ticket : ವರುಣಾ ಜತೆ ಕೋಲಾರದಲ್ಲೂ ಸ್ಪರ್ಧೆ ಮಾಡ್ತೀನಿ; ಖಚಿತಪಡಿಸಿದ ಸಿದ್ದರಾಮಯ್ಯ
ಕ್ರಿಕೆಟ್
IPL 2023: ಮೂರು ವರ್ಷಗಳ ಬಳಿಕ ಐಪಿಎಲ್ ಫ್ಯಾನ್ ಪಾರ್ಕ್; ಕರ್ನಾಟಕದಲ್ಲಿಯೂ ಇರಲಿದೆ ಜೋಶ್
ಐಪಿಎಲ್ 2023ರ ಉದ್ಘಾಟನಾ ಪಂದ್ಯವ್ನಾಡಲು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಸಜ್ಜಾಗಿದೆ.
ಬೆಂಗಳೂರು: ಕೊರೊನಾ ಕಾರಣದಿಂದ ಕಳೆದ ಮೂರು ವರ್ಷ ಮನೆಯಲ್ಲಿಯೇ ಬಂದಿಯಾಗಿ ಐಪಿಎಲ್ ಪಂದ್ಯ ವೀಕ್ಷಿಸಿದ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಈ ಬಾರಿ ಮುಕ್ತವಾಗಿ ಫ್ಯಾನ್ ಪಾರ್ಕ್(ipl fan park) ಮೂಲಕ ಪಂದ್ಯ ವೀಕ್ಷಿಸುವ ಅವಕಾಶ ಲಭಿಸಲಿದೆ.
2019ರಲ್ಲಿ ಕೊರೊನಾ ಕಾರಣದಿಂದ ಜನ ಒಂದೆಡೆ ಒಟ್ಟಾಗಿ ಸೇರಬಾರದು ಎಂಬ ನಿಯಮದನ್ವಯ ಪ್ರೇಕ್ಷಕರಿಲ್ಲದ ಸ್ಟೇಡಿಯಂನಲ್ಲಿ ಕ್ರಿಕೆಟ್ ಆಡಿಸಲಾಗಿತ್ತು. ಅದೇ ನಿಯಮದನ್ವಯ ಫ್ಯಾನ್ ಪಾರ್ಕ್ ಕೂಡಾ ರದ್ದಾಗಿತ್ತು. ಆದರೆ ಈ ಬಾರಿ ಕೊರೊನಾ ಮುಕ್ತವಾಗಿ ಟೂರ್ನಿ ನಡೆಯಲಿದೆ. ಜತೆಗೆ ಟೂರ್ನಿ ಹಳೆಯ ಸ್ವರೂಪಕ್ಕೆ ಮರಳಿದೆ. ಅದ್ಧೂರಿ ಉದ್ಘಾಟನಾ ಸಮಾರಂಭ ಕೂಡ ನಡೆಯಲಿದೆ. ಇದೀಗ ಫ್ಯಾನ್ ಪಾರ್ಕ್ ಮೂಲಕ ಐಪಿಎಲ್‌ಪ್ರಿಯರಿಗೆ ತಮ್ಮ ನಗರದಲ್ಲಿ ದೊಡ್ಡ ಪರದೆಯ ಮೇಲೆ ಪಂದ್ಯ ನೋಡುವ ಅವಕಾಶವನ್ನು ಬಿಸಿಸಿಐ ಮಾಡಿಕೊಟ್ಟಿದೆ.
ಐಪಿಎಲ್ನಲ್ಲಿ ಮೂರು ವರ್ಷಗಳ ಬಳಿಕ ಐಪಿಎಲ್ ಫ್ಯಾನ್ ಪಾರ್ಕ್ ಮಾಡಲಾಗುತ್ತಿದೆ. ಕೊರೊನಾ ಕಾರಣದಿಂದ ಐಪಿಎಲ್ ಫ್ಯಾನ್ ಪಾರ್ಕ್‌ಗಳಿಗೆ ಬ್ರೇಕ್ ಹಾಕಲಾಗಿತ್ತು. ಇದೀಗ 2019ರ ಬಳಿಕ ಮತ್ತೆ ಫ್ಯಾನ್ ಪಾರ್ಕ್ ಕಾಣಿಸಿಕೊಳ್ಳಲಿದೆ. 20 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ 45ಕ್ಕೂ ಹೆಚ್ಚು ನಗರಗಳಲ್ಲಿ ಈ ಫ್ಯಾನ್ ಪಾರ್ಕ್ ಇರಲಿದೆ. ಐಪಿಎಲ್ ಟೂರ್ನಿಯನ್ನು ದೇಶದ ವಿವಿಧ ನಗರಗಳಲ್ಲಿ ವೀಕ್ಷಣೆ ಮಾಡುವ ಮೂಲಕ ಈ ಟೂರ್ನಿಗೆ ಮತ್ತಷ್ಟು ಪ್ರಚಾರ ಸಿಗುವಂತಾಗಲು ಬಿಸಿಸಿಐ 2015ರ ಈ ಪರಿಕಲ್ಪನೆಯನ್ನು ಜಾರಿಗೆ ತಂದಿತ್ತು.
ಇದನ್ನೂ ಓದಿ IPL 2023: ಧೋನಿಗೆ ಗಾಯ; ಮೊದಲ ಪಂದ್ಯಕ್ಕೆ ಅನುಮಾನ; ಸ್ಟೋಕ್ಸ್ ನಾಯಕತ್ವ ಸಾಧ್ಯತೆ
ಕರ್ನಾಟಕದಲ್ಲಿಯೂ ಇರಲಿದೆ ಫ್ಯಾನ್ ಪಾರ್ಕ್
ಕರ್ನಾಟಕದಲ್ಲಿ ನಾಲ್ಕು ಕಡೆ ಈ ಐಪಿಎಲ್ ಫ್ಯಾನ್ ಪಾರ್ಕ್ ಮಾಡಲಾಗುತ್ತಿದೆ. ಹುಬ್ಬಳ್ಳಿ, ಬೆಳಗಾವಿ, ಮೈಸೂರು ಮತ್ತು ಶಿವಮೊಗ್ಗದಲ್ಲಿ ಅಭಿಮಾನಿಗಳಿಗೆ ದೊಡ್ಡ ಪರದೆಯ ಮೂಲಕ ಪಂದ್ಯ ನೋಡಲು ವ್ಯವಸ್ಥೆ ಇರಲಿದೆ. ಹುಬ್ಬಳ್ಳಿಯಲ್ಲಿ ಏಪ್ರಿಲ್ 15 ಮತ್ತು 16, ಬೆಳಗಾವಿ ಏ.22 ಮತ್ತು 23, ಶಿವಮೊಗ್ಗ ಮೇ 6 ಮತ್ತು 7 ಹಾಗೂ ಮೈಸೂರಿನಲ್ಲಿ ಮೇ 20 ಮತ್ತು 21 ರಂದು ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಫೈನಲ್ ಪಂದ್ಯಕ್ಕೆ 5 ಕಡೆ ಫ್ಯಾನ್ ಪಾರ್ಕ್ ಇರಲಿದೆ. ಮೇ 28 ರಂದು ನಡೆಯುವ ಫೈನಲ್ ಕದನಕ್ಕೆ ಜಮ್ಮು, ಜೆಮ್‌ಶೆಡ್‌ಪುರ, ಪಾಲಕ್ಕಾಡ್, ಜೋರ್ಹತ್ ಮತ್ತು ಭೋಪಾಲ್ ಒಟ್ಟು ಐದು ಕಡೆ ಫ್ಯಾನ್ ಪಾರ್ಕ್ ಇರಲಿದೆ.
-
ಸುವಚನ11 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ8 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಪ್ರಮುಖ ಸುದ್ದಿ17 hours ago
ವಿಸ್ತಾರ ಸಂಪಾದಕೀಯ: ಹಿಂದಿ ಬಗ್ಗೆ ಪೂರ್ವಗ್ರಹ ಬೇಡ, ಹಾಗಂತ ಹೇರಿಕೆ ಸಲ್ಲದು
-
ಕರ್ನಾಟಕ9 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಕ್ರಿಕೆಟ್24 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ವೈರಲ್ ನ್ಯೂಸ್24 hours ago
Viral Video: ಇದು ರೋಲ್ಸ್ ರಾಯ್ಸ್ ಆಫ್ ಆಟೋ; ಒಂದು ಬಟನ್ ಪ್ರೆಸ್ ಮಾಡಿದ್ರೆ ಸಾಕು ಮೇಲ್ಭಾಗ ತೆರೆದುಕೊಳ್ಳತ್ತೆ!
-
ಕರ್ನಾಟಕ20 hours ago
ವಿಸ್ತಾರ Special: ಬಿಜೆಪಿ ಇತಿಹಾಸದಲ್ಲೇ ಮೊದಲ ಪ್ರಯತ್ನ ಇದು: ಅಭ್ಯರ್ಥಿ ಆಯ್ಕೆಗೆ ಶುಕ್ರವಾರ ನಡೆಯಲಿದೆ ಆಂತರಿಕ ಚುನಾವಣೆ
-
ಕ್ರಿಕೆಟ್20 hours ago
IPL 203 : ಐಪಿಎಲ್ 16ನೇ ಆವೃತ್ತಿಯ ವೇಳಾಪಟ್ಟಿ ಇಲ್ಲಿದೆ