ವೈರಲ್ ನ್ಯೂಸ್
Viral News : ಶ್ರೀ ಕೃಷ್ಣನನ್ನೇ ಮದುವೆಯಾದ ಯುವತಿ! ಅದ್ಧೂರಿಯಾಗಿ ನಡೆಯಿತು ವಿವಾಹ
ಉತ್ತರ ಪ್ರದೇಶದಲ್ಲಿ ಯುವತಿಯೊಬ್ಬಳು ಕೃಷ್ಣನನ್ನೇ ಮದುವೆಯಾಗಿದ್ದಾಳೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ವೈರಲ್ (Viral News) ಆಗಿದೆ.
ಲಕ್ನೋ: ಶ್ರೀ ಕೃಷ್ಣನನ್ನು ಆರಾಧಿಸುವವರನ್ನು ನೋಡಿರುತ್ತೀರಿ. ಆದರೆ ಉತ್ತರ ಪ್ರದೇಶದಲ್ಲಿ ಯುವತಿಯೊಬ್ಬಳು ಶ್ರೀ ಕೃಷ್ಣನನ್ನೇ ಮದುವೆಯಾಗಿದ್ದಾಳೆ. ಈ ಸುದ್ದಿ ಎಲ್ಲೆಡೆ ಭಾರೀ ವೈರಲ್ (Viral News) ಆಗಿದೆ. ಉತ್ತರ ಪ್ರದೇಶದ ಔರೈಯಾ ಜಿಲ್ಲೆಯ ನಿವೃತ್ತ ಶಿಕ್ಷಕ ರಂಜಿತ್ ಸಿಂಗ್ ಸೋಲಂಕಿ ಅವರ ಮಗಳು ರಕ್ಷಾ(30) ಕೃಷ್ಣನನ್ನು ವರಿಸಿರುವ ಯುವತಿ. ಸ್ನಾತಕೋತ್ತರ ಪದವಿ ಪಡೆದುಕೊಂಡು ಸದ್ಯ ಎಲ್‌ಎಲ್.ಬಿ ಅಧ್ಯಯನ ಮಾಡುತ್ತಿರುವ ರಕ್ಷಾಗೆ ಬಾಲ್ಯದಿಂದಲೂ ಕೃಷ್ಣನೆಂದರೆ ಇಷ್ಟವಾಗಿತ್ತಂತೆ. ಅದೇ ಕಾರಣಕ್ಕೆ ಕೃಷ್ಣನನ್ನೇ ಮದುವೆಯಾಗುವ ನಿರ್ಧಾರವನ್ನು ಆಕೆ ಮಾಡಿದ್ದಾಳೆ. ಅದಕ್ಕೆ ಕುಟುಂಬವೂ ಒಪ್ಪಿದ್ದು, ಇತ್ತೀಚೆಗೆ ಅದ್ಧೂರಿಯಾಗಿ ಮದುವೆಯನ್ನು ಮಾಡಲಾಗಿದೆ.
ಇದನ್ನೂ ಓದಿ: Viral News: ಹಣದಿಂದ ಸಂತೋಷ ಕೊಂಡುಕೊಳ್ಳಲು ಸಾಧ್ಯ ಎಂದಿದೆ ಹೊಸ ಸಮೀಕ್ಷೆ!
ಮೆರವಣಿಗೆ ಮೂಲಕ ಕೃಷ್ಣನ ಮೂರ್ತಿಯನ್ನು ಮದುವೆ ಮಂಟಪಕ್ಕೆ ತರಲಾಗಿದೆ. ಮಾಮೂಲಿ ಮದುವೆಯಲ್ಲಿ ಕುಣಿಯುವಂತೆಯೇ ಎಲ್ಲರೂ ಈ ಮದುವೆಯಲ್ಲಿ ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದ್ದಾರೆ. ನಂತರ ಯುವತಿ ಕೃಷ್ಣನ ಮೂರ್ತಿಯೊಂದಿಗೆ ಮದುವೆಯಾಗಿದ್ದಾಳೆ. ಸಂಬಂಧಿಕರು, ಗ್ರಾಮಸ್ಥರೆಲ್ಲರಿಗೂ ಮದುವೆಗೆ ಆಹ್ವಾನಿಸಲಾಗಿದ್ದು, ಮದುವೆ ಊಟವನ್ನೂ ಹಾಕಿಸಲಾಗಿದೆ.
ಇದನ್ನೂ ಓದಿ: Viral Video: ಜಿರಾಫೆ ಮರಿಯನ್ನು ಹಿಡಿದು ಕುತ್ತಿಗೆಗೆ ಬಾಯಿ ಹಾಕಿದ್ದ ಸಿಂಹಿಣಿ ಏಕಾಏಕಿ ಬಿಟ್ಟು ಓಡಿತು; ಯಾಕೆ?
ವಿವಾಹವಾದ ನಂತರ ರಕ್ಷಾ ಕೃಷ್ಣನ ಮೂರ್ತಿಯೊಂದಿಗೆ ನೆಂಟರೊಬ್ಬರ ಮನೆಗೆ ತೆರಳಿದ್ದಾಳೆ. ಅಲ್ಲಿ ಒಂದು ದಿನ ತಂಗಿದ್ದು ನಂತರ ಕೃಷ್ಣನ ಮೂರ್ತಿಯೊಂದಿಗೆ ತವರು ಮನೆಗೆ ವಾಪಸಾಗಿದ್ದಾಳೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ವೈರಲ್ ನ್ಯೂಸ್
Viral Video: ಹುಡುಗನ ಕೈಯಲ್ಲಿದ್ದ ತಿಂಡಿ ತಿನ್ನಲು ಬಾಯಿ ಹಾಕಿದ ನಾಯಿ; ನಾಲಿಗೆಗೆ ಸಿಕ್ಕ ಟಿವಿ ಪರದೆ ನೆಕ್ಕಿ, ವಾಪಸ್ ಬಂತು!
ವಿಡಿಯೊದಲ್ಲೋ, ಫೋಟೋದಲ್ಲೋ ನಾವು ವಿವಿಧ ಬಗೆಯ ಖಾದ್ಯಗಳನ್ನು ನೋಡಿದರೆ ಸಾಕು ನಮ್ಮ ಬಾಯಲ್ಲೂ ನೀರೂರುತ್ತದೆ. ನಮಗೂ ತಿಂದುಬಿಡಬೇಕು ಎನ್ನಿಸುತ್ತದೆ. ಹಾಗೇ, ಈ ನಾಯಿಗೂ ಅನ್ನಿಸಿತು.
ಸಾಕಿದ ನಾಯಿಗಳ ಆಟ-ತುಂಟಾಟ, ಮುಗ್ಧತೆಯನ್ನೆಲ್ಲ ಪ್ರಸ್ತುತ ಪಡಿಸುವ ಹಲವು ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಮನೆಯಲ್ಲಿ ಸಾಕುವ ಶ್ವಾನಗಳು ಮನೆ ಸದಸ್ಯರಂತೆ ಆಗಿಬಿಡುತ್ತವೆ. ಮನೆಯಲ್ಲಿ ಎಲ್ಲ ಕಡೆ ಓಡಾಡಿಕೊಂಡು, ಸೋಫಾ-ಬೆಡ್ ಮೇಲೆ ಮಲಗುತ್ತ, ಟಿವಿ ನೋಡಿಕೊಂಡು ಸಖತ್ ಎಂಜಾಯ್ ಮಾಡಿಕೊಂಡಿರುತ್ತವೆ.
ಈಗ ಲ್ಯಾಬ್ರಡರ್ ನಾಯಿಯೊಂದು ಟಿವಿಯಲ್ಲಿ ಕಾಣಿಸುವ ತಿಂಡಿ ನಿಜವೆಂದು ಭಾವಿಸಿ, ಓಡಿ ಹೋಗಿ ಟಿವಿ ಸ್ಕ್ರೀನ್ಗೆ ಬಾಯಿ ಹಾಕಿದ ಕ್ಯೂಟ್ ವಿಡಿಯೊವೊಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೊದಲ್ಲೋ, ಫೋಟೋದಲ್ಲೋ ನಾವು ವಿವಿಧ ಬಗೆಯ ಖಾದ್ಯಗಳನ್ನು ನೋಡಿದರೆ ಸಾಕು ನಮ್ಮ ಬಾಯಲ್ಲೂ ನೀರೂರುತ್ತದೆ. ನಮಗೂ ತಿಂದುಬಿಡಬೇಕು ಎನ್ನಿಸುತ್ತದೆ. ತಿಂಡಿ/ತಿನಿಸು ಚಿತ್ರ-ವಿಡಿಯೊ ಕಂಡಾಕ್ಷಣ ಅದನ್ನು ಬಾಯಿಗೆ ಹಾಕಿಕೊಳ್ಳಬೇಕು ಎಂದೆನಿಸುವುದು ಸಹಜವಾದರೂ, ನಾವು ಮನುಷ್ಯರಿಗೆ ಅದು ಫೋಟೋ/ವಿಡಿಯೊ ಎಂದು ಗೊತ್ತಿರುತ್ತದೆ. ಆದರೆ ನಾಯಿಗಳು ಹಾಗಲ್ಲ. ಅದು ನಿಜವಲ್ಲ ಎಂಬುದು ಅವಕ್ಕೆ ತಕ್ಷಣಕ್ಕೇ ಗೊತ್ತಾಗುವುದಿಲ್ಲ.
ಇದನ್ನೂ ಓದಿ: Viral Video: ರಸ್ತೆ ಅಂತಾರಾ ಇದಕ್ಕೆ?-ಆಕ್ರೋಶದಿಂದ ಕೂಗುತ್ತ, ತಮ್ಮ ಬೂಟು ಕಾಲಿನಿಂದ ಡಾಂಬರು ಕೆದರಿದ ಶಾಸಕ!
ಹಾಗೇ ಈ ನಾಯಿ ಕೂಡ. ತನ್ನ ಸಾಕಿದ ಮನೆಯಲ್ಲಿ ಅಳವಡಿಸಲಾಗಿರುವ ದೊಡ್ಡದಾದ ಟಿವಿಯಲ್ಲಿ ಬರುತ್ತಿರುವ ದೃಶ್ಯ ನಿಜವೆಂದೇ ಭಾವಿಸಿಬಿಟ್ಟಿತು. ಟಿವಿಯಲ್ಲಿ ಒಂದು ಹೋಟೆಲ್ನ ಸನ್ನಿವೇಶ ಬರುತ್ತಿತ್ತು. ಅಲ್ಲಿ ಹಲವರು ಕುಳಿತು ತಿಂಡಿ ತಿನ್ನುತ್ತಿದ್ದಾರೆ. ಅದರಲ್ಲಿ ಒಬ್ಬ ಹುಡುಗ ಒಂದು ಕೈಯಲ್ಲಿ ಆಹಾರ ಸೇವಿಸುತ್ತ, ಎಡಗೈಯಲ್ಲಿ ಅದ್ಯಾವುದೋ ತಿಂಡಿಯನ್ನು ಹಿಡಿದುಕೊಂಡಿದ್ದಾನೆ. ಅಷ್ಟೊತ್ತು ಟಿವಿ ನೋಡುತ್ತಿದ್ದ ನಾಯಿ, ಹುಡುಗ ಎಡಗೈಯಲ್ಲಿ ತಿನಿಸನ್ನು ಹಿಡಿದು, ಸ್ವಲ್ಪವೇ ಚಾಚುತ್ತಿದ್ದಂತೆ ಓಡಿ ಹೋಗಿ ಅಲ್ಲಿ ಬಾಯಿ ಹಾಕಿದೆ. ಟಿವಿ ಸ್ಕ್ರೀನ್ನ್ನು ನಾಲಿಗೆಯಿಂದ ನೆಕ್ಕಿದೆ. ಹೀಗೆ ಎರಡು ಬಾರಿ ಮಾಡಿದ ನಂತರ ಅದು ಮುಖದಲ್ಲಿ ಬೇಸರದ ಭಾವ ಹೊತ್ತು, ಮರಳಿ ಬಂದು ಕುಳಿತಿದೆ. ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ನೆಟ್ಟಿಗರು ಮೆಚ್ಚಿ ಕಮೆಂಟ್ ಮಾಡುತ್ತಿದ್ದಾರೆ.
ವಿಡಿಯೋಕ್ಕಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
ವೈರಲ್ ನ್ಯೂಸ್
Viral News : ನೂಡಲ್ಸ್‌ನಿಂದಲೇ ರಸ್ತೆ ಗುಂಡಿ ಮುಚ್ಚುವ ವ್ಯಕ್ತಿ! ವೈರಲ್ ಆಗ್ತಿದೆ ಈತನ ಕೆಲಸ
ಬ್ರಿಟನ್‌ನಲ್ಲೂ ರಸ್ತೆ ಗುಂಡಿಗಳ ಸಮಸ್ಯೆಯಿದೆ. ಈ ಸಮಸ್ಯೆಯನ್ನು ಅಲ್ಲಿನ ವ್ಯಕ್ತಿಯೊಬ್ಬರು ವಿಶೇಷ ರೀತಿಯಲ್ಲಿ ಸರ್ಕಾರದ ಗಮನಕ್ಕೆ ತರಲು ಯತ್ನಿಸುತ್ತಿದ್ದು, ಆ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral News) ಆಗಿದೆ.
ಲಂಡನ್: ರಸ್ತೆ ಗುಂಡಿ ಸಮಸ್ಯೆ ನಮ್ಮ ಬೆಂಗಳೂರಿನ ಮಂದಿಗೆ ಚೆನ್ನಾಗಿ ಗೊತ್ತಿರುವಂತದ್ದು. ಕೇವಲ ಬೆಂಗಳೂರು ಮಾತ್ರವಲ್ಲ, ದೇಶ ವಿದೇಶದಲ್ಲೂ ಈ ರಸ್ತೆ ಗುಂಡಿ ದೊಡ್ಡ ಸಮಸ್ಯೆಯೇ. ಅಭಿವೃದ್ಧಿಹೊಂದಿರುವ ರಾಷ್ಟ್ರ ಎಂದು ಕರೆಸಿಕೊಳ್ಳುವ ಬ್ರಿಟನ್‌ನಲ್ಲೂ ಈ ಸಮಸ್ಯೆ ತಪ್ಪಿದ್ದಲ್ಲ. ಅಲ್ಲಿಯೂ ಕೂಡ ಈ ರಸ್ತೆ ಗುಂಡಿ ವಿಚಾರದಲ್ಲಿ ಸಾಕಷ್ಟು ಮಂದಿ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿ, ಸೋತಿದ್ದಾರೆ. ಇದೀಗ ಈ ವ್ಯಕ್ತಿಯೊಬ್ಬರು ವಿಶೇಷ ರೀತಿಯಲ್ಲಿ ಸರ್ಕಾರದ ಗಮನ ಸೆಳೆಯುತ್ತಿದ್ದು, ಈ ಸುದ್ದಿ ಎಲ್ಲೆಡೆ ವೈರಲ್ (Viral News) ಆಗಿದೆ.
ಇದನ್ನೂ ಓದಿ: Viral Video: ರಸ್ತೆ ಅಂತಾರಾ ಇದಕ್ಕೆ?-ಆಕ್ರೋಶದಿಂದ ಕೂಗುತ್ತ, ತಮ್ಮ ಬೂಟು ಕಾಲಿನಿಂದ ಡಾಂಬರು ಕೆದರಿದ ಶಾಸಕ!
ಮಾರ್ಕ್ ಮೊರೆಲ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಿಸ್ಟರ್ ಪ್ಯಾಥ್‌ಹೋಲ್ ಎಂದೇ ಕರೆಯಲಾಗುತ್ತದೆ. ಕಾರಣ ಅವರು ಮಾಡುತ್ತಿರುವ ಕೆಲಸ. ರಸ್ತೆಗಳಲ್ಲಿರುವ ಗುಂಡಿಗಳಿಂದ ಚಾಲಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಇವರು ಹತ್ತು ವರ್ಷಗಳಿಂದ ಸರ್ಕಾರಕ್ಕೆ ಮನವರಿಕೆ ಮಾಡಿಸುವ ಯತ್ನದಲ್ಲೇ ಇದ್ದಾರಂತೆ. ಗುಂಡಿಗಳಿಗೆ ರಬ್ಬರ್ ತುಂಬುವುದು, ಬೇರೆ ಬೇರೆ ವಸ್ತು ತುಂಬಿಸಿ ಗುಂಡಿ ಮುಚ್ಚುವ ಕೆಲಸವನ್ನು ಅವರು ಈವರೆಗೆ ಮಾಡಿಕೊಂಡು ಬಂದಿದ್ದಾರೆ. ಆದರೆ ಇದೀಗ ವಿಶೇಷ ರೀತಿಯಲ್ಲಿ ಗುಂಡಿ ಮುಚ್ಚುವುದಕ್ಕೆ ಆರಂಭಿಸಿದ್ದಾರೆ.
ಮಾರ್ಕ್ ಅವರು ರಸ್ತೆ ಗುಂಡಿಗಳಿಗೆ ತಿನ್ನುವ ನೂಡೆಲ್ಸ್ ಅನ್ನೇ ಹಾಕಿ ಮುಚ್ಚಲಾರಂಭಿಸಿದ್ದಾರೆ. ಅದಕ್ಕೆಂದೇ ನೂಡಲ್ಸ್ ಕಂಪನಿಯೊಂದರ ಜತೆಗೆ ಒಪ್ಪಂದವನ್ನೂ ಮಾಡಿಕೊಂಡಿದ್ದಾರೆ. ರಸ್ತೆಯಲ್ಲಿ ಎಲ್ಲೆಲ್ಲಿ ಗುಂಡಿ ಕಾಣುತ್ತದೆಯೋ ಅಲ್ಲೆಲ್ಲಾ ಅವರು ನೂಡಲ್ಸ್ ತುಂಬಲಾರಂಭಿಸಿದ್ದಾರೆ. ನೂಡಲ್ಸ್ ಗುಂಡಿಯೊಳಗೆ ನೀಟಾಗಿ ಕುಳಿತುಕೊಳ್ಳುತ್ತದೆ ಎಂದೂ ಅವರು ಹೇಳಿದ್ದಾರೆ. ಅವರ ಮೂಲ ಊರಾದ ಬ್ರಾಕ್ಲೆ ನಗರದಲ್ಲಿ ಬಹುತೇಕ ಗುಂಡಿಗಳನ್ನು ಇದೇ ರೀತಿಯಲ್ಲಿ ಮುಚ್ಚಿದ್ದಾರೆ.
ಈ ಮಾರ್ಕ್ ಅವರ ಕೆಲಸ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಲ್ಲಿರುವಂತಹ ವಿಚಾರ. ನನ್ನ ಈ ಕೆಲಸದಿಂದಾದರೂ ಸರ್ಕಾರ ಎಚ್ಚೆತ್ತುಕೊಂಡು ಗುಂಡಿ ಮುಚ್ಚಲಿ ಎನ್ನುತ್ತಾರೆ ಮಾರ್ಕ್.
ದೇಶ
Viral Video: ರಸ್ತೆ ಅಂತಾರಾ ಇದಕ್ಕೆ?-ಆಕ್ರೋಶದಿಂದ ಕೂಗುತ್ತ, ತಮ್ಮ ಬೂಟು ಕಾಲಿನಿಂದ ಡಾಂಬರು ಕೆದರಿದ ಶಾಸಕ!
ಶಾಸಕ ಬೇದಿರಾಮ್ ಅವರು ಭೇಟಿಕೊಟ್ಟಿದ್ದು ಗಾಝಿಪುರದ ಜಖಾನಿಯನ್ ಏರಿಯಾದಲ್ಲಿ ನಿರ್ಮಿಸಲಾದ, ಜಂಗೀಪುರ- ಬಹರಿಯಾಬಾದ್-ಯೂಸುಫ್‌ಪುರ್ ಸಂಪರ್ಕ ರಸ್ತೆಗೆ. ಇಲ್ಲಿ 4.5 ಕಿಮೀಗಳಷ್ಟು ದೂರವನ್ನು 3.8 ಕೋಟಿ ರೂಪಾಯಿ ವೆಚ್ಚದಲ್ಲಿ ಆರು ತಿಂಗಳ ಹಿಂದಷ್ಟೇ ನಿರ್ಮಿಸಲಾಗಿತ್ತು.
ಗಾಝಿಪುರ: ಕಳಪೆಯಾದ ರಸ್ತೆಯನ್ನು ನೋಡಿ ಶಾಸಕರೊಬ್ಬರು ಕೆಂಡಾಮಂಡಲರಾಗಿ, ತಮ್ಮ ಬೂಟು ಕಾಲಿನಿಂದ ಆ ರಸ್ತೆಯನ್ನು ಕೆದರಿ, ಜಲ್ಲಿಕಲ್ಲು, ಡಾಂಬರುಗಳನ್ನೆಲ್ಲ ತೆಗೆದು ತೋರಿಸಿದ ಘಟನೆ ಉತ್ತರ ಪ್ರದೇಶದ ಗಾಝಿಪುರದಲ್ಲಿ ನಡೆದಿದೆ. ಶಾಸಕರ ಆಕ್ರೋಶ ಮತ್ತು ಅವರು ಕಾಲಿನಿಂದಲೇ ರಸ್ತೆಯನ್ನು ಕೆದರಿದ, ಗುತ್ತಿಗೆದಾರನಿಗೆ ಬಾಯಿಗೆ ಬಂದಂತೆ ಬೈದಿರುವ ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಸುಹೇಲ್ದೇವ್ ಭಾರತೀಯ ಸಮಾಜ ಪಾರ್ಟಿ ಶಾಸಕ ಬೇದಿರಾಮ್ ಅವರು ತಮ್ಮ ವಿಧಾನಸಭಾ ಕ್ಷೇತ್ರವಾದ ಗಾಝಿಪುರಕ್ಕೆ ಭೇಟಿಕೊಟ್ಟಿದ್ದರು. ಅಲ್ಲಿ ಒಂದು ಕಡೆ ಹಾಳಾದ ರಸ್ತೆಯನ್ನು ನೋಡಿದ ಅವರು ಉಗ್ರಸ್ವರೂಪ ತಾಳಿದ್ದಾರೆ. ‘ಇದಕ್ಕೆ ಯಾರಾದರೂ ರಸ್ತೆ ಎನ್ನುತ್ತಾರಾ? ಇಲ್ಲಿ ಕಾರು ಸಂಚಾರ ಮಾಡಬಹುದಾ?’ ಎಂದು ಕೋಪದಿಂದ ಗುತ್ತಿಗೆದಾರನ ಬಳಿ ಪ್ರಶ್ನಿಸಿದ್ದಾರೆ.
‘ಗಾಝಿಪುರದಲ್ಲಿ ಹಲವು ಕಡೆಗಳಲ್ಲಿ ರಸ್ತೆ ಸರಿಯಿಲ್ಲ ಎಂದು ಸ್ಥಳೀಯರು ದೂರು ಕೊಟ್ಟ ಕಾರಣಕ್ಕೆ, ಪರಿಶೀಲನೆ ನಡೆಸಲು ಅಲ್ಲಿಗೆ ತೆರಳಿದ್ದೆ. ಆದರೆ ನಾನು ಅಲ್ಲಿಗೆ ಹೋದರೆ ಪಿಡಬ್ಲ್ಯೂಡಿ ಇಲಾಖೆಯ ಯಾವ ಅಧಿಕಾರಿಯೂ ಇರಲಿಲ್ಲ. ಹೀಗಾಗಿ ಗುತ್ತಿಗೆದಾರನನ್ನು ಸ್ಥಳಕ್ಕೆ ಕರೆಸಿ ಸಮಸ್ಯೆ ಏನೆಂದು ತೋರಿಸಿದ್ದೇನೆ. ಅದಾದ ಮೇಲೆ ಪಿಡಬ್ಲ್ಯೂಡಿ ಉನ್ನತ ಅಧಿಕಾರಿಯೊಂದಿಗೆ ಮಾತಾಡಿದ್ದೇನೆ. ಕೋಟ್ಯಂತರ ರೂಪಾಯಿ ಬಿಡುಗಡೆ ಮಾಡಲಾಗಿದ್ದರೂ, ಗುಣಮಟ್ಟದ ರಸ್ತೆ ನಿರ್ಮಾಣ ಮಾಡಿಲ್ಲ. ಒಂದು ವರ್ಷ ಬಿಡಿ, ಆರು ತಿಂಗಳೂ ಕೂಡ ರಸ್ತೆ ಬಾಳಿಕೆಗೆ ಬರುವುದಿಲ್ಲ’ ಎಂದು ಶಾಸಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಂದಹಾಗೇ, ಶಾಸಕ ಬೇದಿರಾಮ್ ಅವರು ಭೇಟಿಕೊಟ್ಟಿದ್ದು ಗಾಝಿಪುರದ ಜಖಾನಿಯನ್ ಏರಿಯಾದಲ್ಲಿ ನಿರ್ಮಿಸಲಾದ, ಜಂಗೀಪುರ- ಬಹರಿಯಾಬಾದ್-ಯೂಸುಫ್‌ಪುರ್ ಸಂಪರ್ಕ ರಸ್ತೆಗೆ. ಇಲ್ಲಿ 4.5 ಕಿಮೀಗಳಷ್ಟು ದೂರವನ್ನು 3.8 ಕೋಟಿ ರೂಪಾಯಿ ವೆಚ್ಚದಲ್ಲಿ ಆರು ತಿಂಗಳ ಹಿಂದಷ್ಟೇ ನಿರ್ಮಿಸಲಾಗಿತ್ತು. ಆದರೆ ಈಗಲೇ ಹಾಳಾಗಿದೆ. ಹೀಗಾಗಿ ಸ್ಥಳೀಯರು ಒಟ್ಟಾಗಿ ಅಲ್ಲಿನ ಶಾಸಕರಿಗೆ ದೂರು ಕೊಟ್ಟಿದ್ದರು ಎನ್ನಲಾಗಿದೆ.
ಉತ್ತರ ಪ್ರದೇಶದಲ್ಲಿ ಹಾಳಾದ ರಸ್ತೆಯ ಚಿತ್ರಣ ಬಹಿರಂಗವಾಗಿದ್ದು ಇದೇ ಮೊದಲಲ್ಲ. ಕಳೆದ ವರ್ಷ ಪಿಲಿಬಿತ್ನಲ್ಲಿ ನಾಗರಿಕರೊಬ್ಬರು ರಸ್ತೆಯನ್ನು ತಮ್ಮ ಕೈಗಳಿಂದಲೇ ಕಿತ್ತು ಹಾಕಿದ್ದರು. ರಸ್ತೆ ಮೇಲ್ಮೈಯೆಲ್ಲ ಕಿತ್ತುಬಂದಿದ್ದನ್ನು ತೋರಿಸಿದ್ದರು. ಅದೆಷ್ಟು ಕಳಪೆಯಾಗಿ ರಸ್ತೆ ನಿರ್ಮಾಣ ಮಾಡಲಾಗಿದೆ ನೋಡಿ ಎಂದು ವಿಡಿಯೊ ಮೂಲಕ ತೋರಿಸಿದ್ದರು. ಆ ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿತ್ತು.
ಕರ್ನಾಟಕ
Viral Video: ಅರ್ಧ ರಾತ್ರೀಲಿ ಮಧ್ಯ ರಸ್ತೇಲಿ ಮೊಬೈಲ್ ಹಿಡಿದು ನಿಂತಿದ್ದ ಇನ್ಫ್ಲುಯೆನ್ಸರ್; ಮುಂದಾಗಿದ್ದೇನು?
Viral Video: ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್‌ಗಳು (social media influencers) ಎಲ್ಲೆಂದರಲ್ಲಿ ಮೊಬೈಲ್ ಹಿಡಿದು ವಿಡಿಯೊ ಮಾಡುವ ಮುನ್ನ ಹುಷಾರಾಗಿ ಇರಬೇಕು ಎಂದು ಸಾರುತ್ತಿದೆ ಈ ಘಟನೆ.
ಬೆಂಗಳೂರು: ನಗರ ಪ್ರದೇಶದಲ್ಲಿ ಕಳ್ಳರ ಹಾವಳಿ ಹೆಚ್ಚಿದೆ. ಸ್ಕೂಟರ್‌ನಲ್ಲಿ ಬಂದ ಕಳ್ಳರಿಬ್ಬರು ಮೊಬೈಲ್ ಕಸಿದು ಪರಾರಿ ಆಗಲು ಯತ್ನಿಸಿದ್ದಾರೆ. ರೆಸ್ಟೋರೆಂಟ್ ಬಳಿ ನಿಂತು ವಿಡಿಯೊ ಮಾಡುತ್ತಿದ್ದ ಇನ್ಫ್ಲುಯೆನ್ಸರ್‌ವೊಬ್ಬರ ಮೊಬೈಲ್ ಎಗರಿಸಲು ಬಂದ ಕಳ್ಳರ ಕೃತ್ಯದ ವಿಡಿಯೊ ಬೆಂಗಳೂರು 360 ಎಂಬ ಟ್ವಿಟರ್ ಪೇಜ್‌ನಲ್ಲಿ ವೈರಲ್ (viral video) ಆಗಿದೆ.
ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿರುವ ರುಚಿಕಾ ಎಂಬುವರು ರೆಸ್ಟೋರೆಂಟ್‌ವೊಂದರ ಕಂಟೆಂಟ್ ಕ್ರಿಯೆಟ್ ಮಾಡಲು ಮುಂದಾಗಿದ್ದರು. ಮೊದಲಿಗೆ ಇಬ್ಬರು ಹುಡುಗಿಯರು Ever tried Gufha Restaurant? ಎನ್ನುತ್ತಾ ಮತ್ತಿಬ್ಬರು ಹುಡುಗಿಯರತ್ತ ಕ್ಯಾಮೆರಾ ತಿರುಗಿಸಿದರು. ಅಷ್ಟರಲ್ಲಿ ಸ್ಕೂಟರ್‌ನಲ್ಲಿ ಬಂದ ಇಬ್ಬರು ಖದೀಮರು ಮೊಬೈಲ್ ಎಗರಿಸಲು ಮುಂದಾದರು.
ವಿಡಿಯೊ ಸಮೇತ ತಮ್ಮ ಅನುಭವ ಹಂಚಿಕೊಂಡಿರುವ ರುಚಿಕಾ, ನಾವು ಕಂಟೆಂಟ್ ಕ್ರಿಯೇಟರ್‌ಗಳಾಗಿರುವುದರಿಂದ ರೆಸ್ಟೋರೆಂಟ್‌ವೊಂದರ ಕಂಟೆಂಟ್ ಶೂಟಿಂಗ್ ಮಾಡುತ್ತಿದ್ದೆವು. ಈ ವೇಳೆ ಸ್ಕೂಟರ್‌ನಲ್ಲಿ ಬಂದ ಇಬ್ಬರು ಹುಡುಗರು ನಮ್ಮ ಕೈನಲ್ಲಿದ್ದ ನನ್ನ ಫೋನ್ ಕಸಿದುಕೊಳ್ಳಲು ಪ್ರಯತ್ನಿಸಿದರು. ಆದರೆ ಅದೃಷ್ಟವಶಾತ್ ನಾನು ಆ ಸಮಯದಲ್ಲಿ ನನ್ನ ಫೋನ್ ಅನ್ನು ಕೆಳಗೆ ಮಾಡಿದ್ದರಿಂದ ಕಳ್ಳತನ ಆಗುವುದು ತಪ್ಪಿತು ಎಂದಿದ್ದಾರೆ.
ಮೊಬೈಲ್ ಕಸಿಯಲು ಬಂದ ಕಳ್ಳರು
ರಾತ್ರಿ 11.15ರ ಸುಮಾರಿಗೆ ಜಯನಗರದಲ್ಲಿರುವ ರೆಸ್ಟೋರೆಂಟ್ ಹೊರಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಇನ್ನು ಈ ಘಟನೆ ನಡೆಯುವ ಮುನ್ನ ಈ ಯುವತಿಯರು ಕನಿಷ್ಠ 20 ನಿಮಿಷಗಳ ಕಾಲ ಅಲ್ಲೆ ವಿಡಿಯೊ ರೆಕಾರ್ಡ್ ಮಾಡುತ್ತಿದ್ದುದಾಗಿ ಹೇಳಿಕೊಂಡಿದ್ದಾರೆ. ಇದೆನ್ನಲ್ಲ ದೂರದಿಂದಲೇ ಗಮನಿಸಿ ಕಳ್ಳರು ಫೋನ್ ಎಗರಿಸುವ ಕೃತ್ಯಕ್ಕೆ ಮುಂದಾಗಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಸದ್ಯ ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸರು, ಘಟನೆಯ ವಿವರ ಹಾಗೂ ದೂರುದಾರರ ಫೋನ್ ನಂಬರ್ ನೀಡುವಂತೆ ತಿಳಿಸಿದ್ದಾರೆ.
ತಮಗೂ ಹೀಗೆಲ್ಲ ಆಗಿದೆ ಎಂದು ಕಮೆಂಟ್
ಯುವತಿಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಇದೇ ರೀತಿಯ ಅನುಭವ ತಮಗೂ ಆಗಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಅದರಲ್ಲೊಬ್ಬರು ತಾನು ರಾತ್ರಿ 8.30ರ ಸುಮಾರಿಗೆ ಕೋರಮಂಗಲ 1ನೇ ಬ್ಲಾಕ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಆಟೊದಲ್ಲಿ ಹಿಂಬಾಲಿಸಿ ಕೆಲವರು ಫೋನ್ ಕಸಿದುಕೊಳ್ಳಲು ಪ್ರಯತ್ನಸಿದರು. ಆದರೆ ಫೋನ್ ಗಟ್ಟಿಯಾಗಿ ಹಿಡಿದಿದ್ದರಿಂದ ಅದು ಸಾಧ್ಯವಾಗಲಿಲ್ಲ. ನಿತ್ಯವೂ ಈ ದಾರಿಯಲ್ಲೆ ಮನೆಗೆ ಹೋಗಿ ಬರಬೇಕಾಗಿರುವುದರಿಂದ ಭೀತಿಯಲ್ಲೆ ಓಡಾಡಬೇಕಿದೆ ಎಂದಿದ್ದಾರೆ.
ಇದನ್ನೂ ಓದಿ: Karnataka Rain: ಮುಂದಿನ 24 ಗಂಟೆಯಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ; ಬೆಂಗಳೂರು ಸೇರಿ ಇಲ್ಲೆಲ್ಲ ವರ್ಷಧಾರೆ
ಬೆಂಗಳೂರು ಸೇರಿದಂತೆ ವಿವಿಧೆಡೆ ಕಳ್ಳತನ ಪ್ರಕರಣಗಳು ವರದಿ ಆಗುತ್ತಿದ್ದು, ಪೊಲೀಸರ ಕಾರ್ಯವೈಖರಿ ಜನಾಕ್ರೋಶಕ್ಕೆ ಕಾರಣವಾಗುತ್ತಿದೆ. ಸರಗಳ್ಳತನದಿಂದ ಹಿಡಿದು ಮೊಬೈಲ್ ಹಾಗೂ ಅಪಾರ್ಟ್‌ಮೆಂಟ್‌ನಲ್ಲಿ ಚಪ್ಪಲಿ, ಶೂ ಕಳ್ಳತನ ಮಾತ್ರವಲ್ಲದೆ ಮನೆಯ ಮುಂದೆ ಇಟ್ಟಿರುವ ಹೂ ಕುಂಡಗಳನ್ನೂ ಕಳ್ಳತನ ಮಾಡುವ ಖರ್ತಾನಕ್ ಕಳ್ಳರ ಹಾವಳಿ ಹೆಚ್ಚಿದೆ.
-
ಸುವಚನ11 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ8 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಪ್ರಮುಖ ಸುದ್ದಿ17 hours ago
ವಿಸ್ತಾರ ಸಂಪಾದಕೀಯ: ಹಿಂದಿ ಬಗ್ಗೆ ಪೂರ್ವಗ್ರಹ ಬೇಡ, ಹಾಗಂತ ಹೇರಿಕೆ ಸಲ್ಲದು
-
ಕರ್ನಾಟಕ9 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ವೈರಲ್ ನ್ಯೂಸ್24 hours ago
Viral Video: ಇದು ರೋಲ್ಸ್ ರಾಯ್ಸ್ ಆಫ್ ಆಟೋ; ಒಂದು ಬಟನ್ ಪ್ರೆಸ್ ಮಾಡಿದ್ರೆ ಸಾಕು ಮೇಲ್ಭಾಗ ತೆರೆದುಕೊಳ್ಳತ್ತೆ!
-
ಕರ್ನಾಟಕ20 hours ago
ವಿಸ್ತಾರ Special: ಬಿಜೆಪಿ ಇತಿಹಾಸದಲ್ಲೇ ಮೊದಲ ಪ್ರಯತ್ನ ಇದು: ಅಭ್ಯರ್ಥಿ ಆಯ್ಕೆಗೆ ಶುಕ್ರವಾರ ನಡೆಯಲಿದೆ ಆಂತರಿಕ ಚುನಾವಣೆ
-
ಕ್ರಿಕೆಟ್20 hours ago
IPL 203 : ಐಪಿಎಲ್ 16ನೇ ಆವೃತ್ತಿಯ ವೇಳಾಪಟ್ಟಿ ಇಲ್ಲಿದೆ
-
ಕರ್ನಾಟಕ24 hours ago
Karnataka Election 2023: ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ; ತಪ್ಪಿದರೆ ಸದಾನಂದ?