Site icon Vistara News

ವಿಸ್ತಾರ TOP 10 NEWS : ಬೆಂಗಳೂರಲ್ಲಿ ರೋಡ್‌ ಶೋಗೆ ಗ್ರೀನ್‌ ಸಿಗ್ನಲ್‌, ಕಾಶ್ಮೀರದಲ್ಲಿ ಯೋಧರು ಹುತಾತ್ಮರಾದ ರೆಡ್‌ ಸಿಗ್ನಲ್‌

Vistara Top 10

Vistara Top 10

1. ಕರ್ನಾಟಕ ಎಲೆಕ್ಷನ್​​ ಕ್ಲೈಮ್ಯಾಕ್ಸ್ ಕದನ: ನಾಳೆ, ನಾಡಿದ್ದು ಬೆಂಗಳೂರಿನಲ್ಲಿ ನಮೋ ಬೃಹತ್ ರೋಡ್ ಶೋ
ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ನಾಲ್ಕೇ ದಿನ ಬಾಕಿ. ಈ ಸಮಯದ ಲಾಭ ಎತ್ತಲು ನಿರ್ಧರಿಸಿರುವ ಬಿಜೆಪಿ ಮೇ 6, 7ರಂದು ಪ್ರಧಾನಿ ನರೇಂದ್ರ ಮೋದಿ ಅವರ ರೋಡ್‌ ಶೋ ಆಯೋಜಿಸಿದೆ. ಸುಮಾರು 32 ಕಿ.ಮೀ. ಸಂಚರಿಸಲಿರುವ ಈ ರ‍್ಯಾಲಿಯಿಂದ ಜನಸಾಮಾನ್ಯರಿಗೆ ತೊಂದರೆ ಆಗಲಿದೆ ಎಂಬ ವಾದ ಮುಂದಿಟ್ಟು ಹೈಕೋರ್ಟ್‌ ಮೆಟ್ಟಿಲೇರಿದರೂ ಕೋರ್ಟ್‌ ತಡೆ ನೀಡಲು ನಿರಾಕರಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಸುದ್ದಿ : 1.ರೋಡ್‌ ಶೋ ನಡುವೆ ಕಾಂಗ್ರೆಸ್‌ನವರು ಆಂಬ್ಯುಲೆನ್ಸ್‌ ಬಿಟ್ಟು ಸೀನ್‌ ಕ್ರಿಯೇಟ್‌ ಮಾಡ್ತಾರಂತೆ!
2. ರೋಡ್‌ ಶೋಗೆ ಆಂಬ್ಯುಲೆನ್ಸ್‌ ಅಡ್ಡ ತರುವ ನೀಚ ಕೆಲಸವನ್ನು ನಾವು ಮಾಡಲ್ಲ: ಡಿ.ಕೆ. ಶಿವಕುಮಾರ್
3. ಎರಡು ದಿನ ನರೇಂದ್ರ ಮೋದಿ ರೋಡ್‌ ಶೋ; ಒಂದು ಗಂಟೆ ಮೊದಲೇ ಈ 34 ರೋಡ್‌ಗಳು ಬಂದ್‌!
4. ಬೆಂಗಳೂರಲ್ಲಿ ಮೋದಿ ಮೇನಿಯಾ; ಇಲ್ಲಿದೆ ಎರಡು ದಿನದ ರೋಡ್‌ ಶೋ ಡಿಟೇಲ್ಸ್‌
5. ಪ್ರಧಾನಿ ನರೇಂದ್ರ ಮೋದಿ ಮೆಗಾ ರೋಡ್‌ ಶೋ: ಮನೆ ಬಾಲ್ಕನಿ, ಟೆರೇಸ್‌ ಮೇಲೆ ನಿಂತು ನೋಡುವಂತಿಲ್ಲ!

2. ಬಳ್ಳಾರಿ, ತುಮಕೂರಿನಲ್ಲಿ ಮೋಡಿ ಮಾಡಿದ ಮೋದಿ: ದಿ ಕೇರಳ ಸ್ಟೋರಿ ಪ್ರಸ್ತಾಪ
ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬಳ್ಳಾರಿ ಮತ್ತು ತುಮಕೂರಿನಲ್ಲಿ ಬೃಹತ್‌ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿದರು. ಭಾರಿ ಸುದ್ದಿ ಮಾಡಿರುವ ʻದಿ ಕೇರಳ ಸ್ಟೋರಿʼಯನ್ನು ಪ್ರಸ್ತಾಪಿಸಿ ಇದು ನಮ್ಮೂರಿನದ್ದೇ ಕಥೆ ಎಂದರು. ತುಮಕೂರಿನಲ್ಲಿ ಜನಸಾಗರ ನೋಡಿದರೆ ಸಮೀಕ್ಷೆಗಳೆಲ್ಲ ಸುಳ್ಳು ಎನ್ನುವುದು ಸ್ಪಷ್ಟವಾಗುತ್ತದೆ ಎಂದರು.
1. ‘ದಿ ಕೇರಳ ಸ್ಟೋರಿ’ ಸಿನಿಮಾ ಮೂಲಕ ಲವ್ ಜಿಹಾದ್ ಪ್ರಸ್ತಾಪಿಸಿ, ಕಾಂಗ್ರೆಸ್‌ ಟೀಕಿಸಿದ ಪ್ರಧಾನಿ ಮೋದಿ
2. ಈ ಜನಸಾಗರ ನೋಡಿದ್ರೆ ಬಿಜೆಪಿಯದ್ದೇ ಗೆಲುವು ಖಚಿತ; ಸಮೀಕ್ಷೆಗಳಿಗೆ ಪಿಎಂ ಮೋದಿ ಟಾಂಗ್
3. ಪಕ್ಷಗಳ ಬಾವುಟಕ್ಕಿಂತ ಬಜರಂಗಿ ಬಾವುಟಕ್ಕೆ ಹೆಚ್ಚಿದ ಡಿಮ್ಯಾಂಡ್; ರೋಡ್‌ ಶೋಗಳಲ್ಲಿ ಮಿಂಚಿದ ಆಂಜನೇಯ

3. ಇನ್ನೆರಡು ದಿನ ಸೋನಿಯಾ ಗಾಂಧಿ ಸಂಚಲನ: ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಪ್ರತ್ಯಸ್ತ್ರ ಪ್ರಯೋಗ
ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ಇನ್ನೆರಡು ದಿನ ರಾಜ್ಯದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಈಗಾಗಲೇ ಇರುವ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಮತಬೇಟೆಯೂ ಮುಂದುವರಿಯಲಿದೆ. ಈ ನಡುವೆ ಕಾಂಗ್ರೆಸ್‌ ಬಿಜೆಪಿಯ ಬಜರಂಗಿ ಅಸ್ತ್ರದ ವಿರುದ್ಧ ಭ್ರಷ್ಟಾಚಾರದ ಅಸ್ತ್ರ ಪ್ರಯೋಗ ಮಾಡಿದೆ.
1. ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್ ಸೋನಿಯಾ ಗಾಂಧಿ ಎಂಟ್ರಿ, ಶೆಟ್ಟರ್ ಪರ ಕ್ಯಾಂಪೇನ್
2. ಬಿಜೆಪಿ ಭ್ರಷ್ಟಾಚಾರದ ರೇಟ್‌ ಕಾರ್ಡ್‌ ಬಿಟ್ಟ ಕಾಂಗ್ರೆಸ್‌, ಮೊಕದ್ದಮೆ ದಾಖಲಿಸುವೆ ಎಂದ ಲೆಹರ್‌ ಸಿಂಗ್

4. ಮತ್ತೆ ಬ್ರಾಹ್ಮಣ ಸಿಎಂ ಬಾಂಬ್ ಸ್ಫೋಟ: ಬಿ.ಎಲ್‌. ಸಂತೋಷ್‌ ಅವರೇ ಸಿಎಂ ಅಭ್ಯರ್ಥಿ ಅಂದಿದ್ದೇಕೆ ಕಾಂಗ್ರೆಸ್‌?
ಸ್ವಲ್ಪ ಕಾಲ ತಣ್ಣಗಿದ್ದ ʻಬಿಜೆಪಿಯಲ್ಲಿ ಬ್ರಾಹ್ಮಣ ಸಿಎಂʼ ಬಾಂಬ್‌ ಮತ್ತೆ ಸ್ಫೋಟಗೊಂಡಿದೆ. ಎಚ್‌.ಡಿ ಕುಮಾರಸ್ವಾಮಿ ಅವರು ಈ ಹಿಂದೆ ಈ ಬಾರಿ ʻವಿಧಾನಸಭಾ ಚುನಾವಣೆಯ ಬಳಿಕ ಒಂದೊಮ್ಮೆ ಗೆದ್ದರೆ ಬ್ರಾಹ್ಮಣರನ್ನೇ ಸಿಎಂ ಮಾಡುವ ಪ್ಲ್ಯಾನ್‌ನ್ನು ಬಿಜೆಪಿ ಹೊಂದಿದೆʼ ಎಂದು ಹೇಳಿದ್ದರು. ಅದಕ್ಕೆ ಈಗ ಕಾಂಗ್ರೆಸ್‌ ಧ್ವನಿಗೂಡಿಸಿದೆ. ಕಾಂಗ್ರೆಸ್‌ ಟ್ವಿಟರ್‌ನಲ್ಲಿ ಈ ವಿಚಾರವನ್ನು ಮಂಡಿಸಿದ್ದು, ತನ್ನ ವಾದಕ್ಕೆ ಎರಡು ವಿಚಾರಗಳನ್ನು ಬಳಸಿಕೊಂಡಿದೆ. ಪೂರ್ಣ ವಿವರಕ್ಕೆ ಈ ಲಿಂಕ್‌ ಕ್ಲಿಕ್‌ ಮಾಡಿ

5. ಸಿದ್ದು ಪರ ಚುನಾವಣೆ ಪ್ರಚಾರ ಟೀಕಿಸಿದ ಬಿಜೆಪಿಗೆ ಶಿವಣ್ಣ ತಿರುಗೇಟು​
ʻʻನಂಗೆ ಸೋಮಣ್ಣ ತುಂಬಾ ಆಪ್ತರು. ಪ್ರತಾಪಸಿಂಹ ಸ್ನೇಹಿತರು. ಅವರ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ನನಗೆ ಯಾರೂ ಶತ್ರುಗಳಿಲ್ಲ. ನನ್ನನ್ನು ಕಾಂಗ್ರೆಸ್‌ನವರು ಪ್ರಚಾರಕ್ಕೆ ಬನ್ನಿ ಎಂದು ಕರೆದರು, ಹೋಗಿದ್ದೇನೆ. ಬಿಜೆಪಿಯವರು ಕರೆದರೂ ಹೋಗುತ್ತಿದ್ದೆʼʼ- ಇದು ಚಿತ್ರ ನಟ ಶಿವರಾಜ್‌ ಕುಮಾರ್‌ ಅವರ ಮಾತು. ಜತೆಗೆ ಸುದೀಪ್‌ ಅವರು ಬಿಜೆಪಿ ಪರ ಪ್ರಚಾರ ಮಾಡುತ್ತಿಲ್ಲವೇ? ಅದರಲ್ಲಿ ತಪ್ಪೇನಿದೆ ಎಂದು ಕೇಳಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ಮೋದಿ ಕಟುಕ ಎಂದಿದ್ದ ಬಿಲಾವಲ್​​ ಭುಟ್ಟೊಗೆ ಭಾರತದಲ್ಲಿ ಮುಖಭಂಗ: ಕೈಕುಲುಕದ ಜೈಶಂಕರ್
ಶಾಂಘೈ ಸಹಕಾರ ಒಕ್ಕೂಟದ ಶೃಂಗಸಭೆಯ ಪೂರ್ವಭಾವಿಯಾಗಿ ಶುಕ್ರವಾರ ಗೋವಾದಲ್ಲಿ ನಡೆಯುತ್ತಿರುವ ವಿದೇಶಾಂಗ ಸಚಿವರ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್​.ಜೈಶಂಕರ್​ ಅವರು ಗಡಿಭಾಗಗಳಲ್ಲಿ ನಡೆಯುವ ಭಯೋತ್ಪಾದನಾ ಚಟುವಟಿಕೆಗಳ ಬಗ್ಗೆ ಅತ್ಯಂತ ಕಠಿಣವಾಗಿ ಮಾತನಾಡಿದರು. ಈ ಸಭೆಗೆ ಪಾಕಿಸ್ತಾನದಿಂದ ಆಗಮಿಸಿದ್ದ ಅಲ್ಲಿನ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೋ ಜರ್ದಾರಿ ಕೈ ಕುಲುಕದೆ ಜೈಶಂಕರ್‌ ತಮ್ಮ ಪ್ರತಿರೋಧ ತೋರಿದರು. ಬಿಲಾವಲ್‌ ಈ ಹಿಂದೆ ಮೋದಿಯನ್ನು ಕಟುಕ ಎಂದಿದ್ದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7. ಕಾಶ್ಮೀರದಲ್ಲಿ ಉಗ್ರ ದಾಳಿಗೆ ಐವರು ಯೋಧರು ಹುತಾತ್ಮ: ಜಿ 20 ಶೃಂಗದ 20 ದಿನ ಮೊದಲು ಉಗ್ರರ ಅಟ್ಟಹಾಸ
ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ಐವರು ಯೋಧರು ಉಗ್ರರಿಂದ ಹತ್ಯೆಗೀಡಾಗಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದಲೂ ಜಮ್ಮು-ಕಾಶ್ಮೀರದ ವಿವಿಧ ಕಡೆಗಳಲ್ಲಿ ಭದ್ರತಾ ಪಡೆ ಸಿಬ್ಬಂದಿ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯುತ್ತಲೇ ಇದೆ. ಪೂರ್ಣ ವರದಿಗೆ ಕ್ಲಿಕ್‌ ಮಾಡಿ

8.‌ ಶರದ್‌ ಪವಾರ್‌ ಯುಟರ್ನ್‌, ಎನ್‌ಸಿಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದಿರಲು ತೀರ್ಮಾನ
ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದಿರಲು ಶರದ್ ಪವಾರ್ (Sharad Pawar) ತೀರ್ಮಾನಿಸಿದ್ದಾರೆ. ರಾಜೀನಾಮೆ ನೀಡಲು ನಿರ್ಧಾರ ಮಾಡಿದ ಬಳಿಕ ಕಾರ್ಯಕರ್ತರ ಒತ್ತಡ, ಮುಖಂಡರ ಒತ್ತಾಯ, ವಿವಿಧ ರೀತಿಯಲ್ಲಿ ರಾಜಕೀಯ ವಿಶ್ಲೇಷಣೆ ಕೇಳಿಬಂದ ಬೆನ್ನಲ್ಲೇ ಶರದ್‌ ಪವಾರ್‌ ಅವರು ರಾಜೀನಾಮೆ ನೀಡದಿರುವ ತೀರ್ಮಾನ ತೆಗೆದುಕೊಂಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. ವಿಸ್ತಾರ Explainer: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ: ಬುಡಕಟ್ಟು ಜನರ ಕದನಕ್ಕೆ ಕಾರಣವೇನು?
ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಬುಧವಾರ ಮತ್ತು ಗುರುವಾರ 7,500ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಮನೆ- ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಸಾವಿನ ವಿವರಗಳು ಇನ್ನೂ ಬರಬೇಕಿವೆ. ಭಾರತೀಯ ಸೇನೆ ಮತ್ತು ಅಸ್ಸಾಂ ರೈಫಲ್ಸ್ ಮಣಿಪುರ ರಾಜ್ಯಕ್ಕೆ ಧಾವಿಸಿವೆ. ಹಾಗಿದ್ದರೆ ಇದ್ದಕ್ಕಿದ್ದಂತೆ ಮಣಿಪುರ ಹೊತ್ತಿಕೊಂಡು ಉರಿಯಲು ಕಾರಣವೇನು? ಈ ಹಿಂಸೆಯ ಹಿಂದೆ ಏನಿದೆ? ವಿಸ್ತಾರ Explainer ಓದಿ

10. ಜಾಗತಿಕ ಒಕ್ಕೂಟದ ಸಭೆಯಲ್ಲಿ ರಷ್ಯಾ ಪ್ರತಿನಿಧಿಗೆ ಹಿಗ್ಗಾಮುಗ್ಗಾ ಥಳಿಸಿದ ಉಕ್ರೇನ್‌ ಸಂಸದ
ರಷ್ಯಾ ಮತ್ತು ಉಕ್ರೇನ್​ ನಡುವೆ ಯುದ್ಧ ಸಂಘರ್ಷ ನಡೆಯುತ್ತಲೇ ಇದೆ. ರಷ್ಯಾ ವಿರುದ್ಧ ಉಕ್ರೇನ್​, ಉಕ್ರೇನ್​ ವಿರುದ್ಧ ರಷ್ಯಾ ಕಿಡಿಕಾರುತ್ತಿವೆ. ರಷ್ಯಾ-ಉಕ್ರೇನ್​ ಸಂಬಂಧ ಹದಗೆಟ್ಟಿರುವ ಬಗ್ಗೆ ದಿನಬೆಳಗಾದರೆ ನಾವು ಸುದ್ದಿಗಳನ್ನು ಓದುತ್ತಿರುತ್ತೇವೆ. ಪರಿಸ್ಥಿತಿ ಹೀಗಿರುವ ಮಧ್ಯೆ, ‘ಉಕ್ರೇನ್​ ಸಂಸದ ಒಲೆಕ್ಸಾಂಡರ್ ಮಾರಿಕೋವ್ಸ್ಕಿ ಎಂಬುವರು ಜಾಗತಿಕ ನಾಯಕರ ಸಭೆಯಲ್ಲಿ ರಷ್ಯಾ ಪ್ರತಿನಿಧಿಗೆ ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ’.‌ ವಿಡಿಯೊ ನೋಡಲು ಕ್ಲಿಕ್‌ ಮಾಡಿ

Exit mobile version