Karnataka Election: Brahmin CM issues raked up once again Karnataka Election : ಮತ್ತೆ ಬ್ರಾಹ್ಮಣ ಸಿಎಂ ಬಾಂಬ್ ಸ್ಫೋಟ; ಸಂತೋಷ್‌ ಮುಂದಿನ ಸಿಎಂ ಅಭ್ಯರ್ಥಿ ಎಂದಿದ್ದೇಕೆ ಕಾಂಗ್ರೆಸ್‌? - Vistara News

ಕರ್ನಾಟಕ

Karnataka Election : ಮತ್ತೆ ಬ್ರಾಹ್ಮಣ ಸಿಎಂ ಬಾಂಬ್ ಸ್ಫೋಟ; ಸಂತೋಷ್‌ ಮುಂದಿನ ಸಿಎಂ ಅಭ್ಯರ್ಥಿ ಎಂದಿದ್ದೇಕೆ ಕಾಂಗ್ರೆಸ್‌?

Brahmin Chief minister: ಬಿಜೆಪಿ ಅಧಿಕಾರಕ್ಕೆ ಬಂದರೆ ಬಿ.ಎಲ್‌ ಸಂತೋಷ್‌ ಅವರೇ ಸಿಎಂ ಅಗೋ ಸಾಧ್ಯತೆಗಳಿವೆ ಎಂಬರ್ಥದಲ್ಲಿ ಕಾಂಗ್ರೆಸ್‌ ಟ್ವೀಟ್‌ ಮಾಡುವ ಮೂಲಕ ಹಳೆ ವಿವಾದವನ್ನು ಮತ್ತೆ ಎಬ್ಬಿಸಿದೆ.

VISTARANEWS.COM


on

Brahmin CM issues raked up once again
ಟ್ವಿಟರ್‌ ಸ್ಪೇಸ್‌ ಮತ್ತು ಬಿ.ಎಲ್‌ ಸಂತೋಷ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸ್ವಲ್ಪ ಕಾಲ ತಣ್ಣಗಿದ್ದ ʻಬಿಜೆಪಿಯಲ್ಲಿ ಬ್ರಾಹ್ಮಣ ಸಿಎಂʼ ಬಾಂಬ್‌ ಮತ್ತೆ ಸ್ಫೋಟಗೊಂಡಿದೆ. ಎಚ್‌.ಡಿ ಕುಮಾರಸ್ವಾಮಿ (HD Kumaraswamy) ಅವರು ಈ ಹಿಂದೆ ಈ ಬಾರಿ ʻವಿಧಾನಸಭಾ ಚುನಾವಣೆಯ (Karnataka Election 2023) ಬಳಿಕ ಒಂದೊಮ್ಮೆ ಗೆದ್ದರೆ ಬ್ರಾಹ್ಮಣರನ್ನೇ ಸಿಎಂ ಮಾಡುವ ಪ್ಲ್ಯಾನ್‌ನ್ನು ಬಿಜೆಪಿ ಹೊಂದಿದೆʼ ಎಂದು ಹೇಳಿದ್ದರು. ಅದಕ್ಕೆ ಈಗ ಕಾಂಗ್ರೆಸ್‌ ಧ್ವನಿಗೂಡಿಸಿದೆ.

ಕಾಂಗೆಸ್‌ ಟ್ವಿಟರ್‌ನಲ್ಲಿ ಈ ವಿಚಾರವನ್ನು ಮಂಡಿಸಿದ್ದು, ತನ್ನ ವಾದಕ್ಕೆ ಎರಡು ವಿಚಾರಗಳನ್ನು ಬಳಸಿಕೊಂಡಿದೆ.

“ಕರ್ನಾಟಕದಲ್ಲಿ ಪೂರ್ಣ ಬಹುಮತದ ಸರ್ಕಾರ ವಿಥ್ ಬಿ.ಎಲ್ ಸಂತೋಷ್” ಬಿಜೆಪಿಯ ಟ್ವಿಟರ್ ಸ್ಪೇಸ್‌ನ ಈ ಹೆಸರು ರಹಸ್ಯವನ್ನು ಸೂಚಿಸುತ್ತಿದೆ. ಸಿಎಂ ಹುದ್ದೆಯ ಆಸೆಯಲ್ಲಿರುವ ಸಂತೋಷರಿಗೆ ಸ್ಪರ್ಧಿಸಲು 224ರಲ್ಲಿ ಒಂದು ಕ್ಷೇತ್ರವೂ ಸಿಗಲಿಲ್ಲವೇ? ಇದುವರೆಗೂ ಒಂದೂ ಬಹಿರಂಗ ಪ್ರಚಾರಕ್ಕೆ ಹೋಗಲಿಲ್ಲ ಏಕೆ? ಬಿ.ಎಲ್ ಸಂತೋಷ್ ಅವರೇ, ತಾವು ಚಿರಂಜೀವಿಯೇ?ʼʼ- ಇದು ಕಾಂಗ್ರೆಸ್‌ ಮಾಡಿರುವ ಒಂದು ಟ್ವೀಟ್‌.

ಇತ್ತೀಚೆಗೆ ಬಿಜೆಪಿಯ ವತಿಯಿಂದ ಟ್ವಿಟರ್‌ ಸ್ಪೇಸ್‌ನಲ್ಲಿ ಒಂದು ಸಂವಾದ ನಡೆದಿತ್ತು. ಅದರ ಹೆಸರು ʻಕರ್ನಾಟಕದಲ್ಲಿ ಪೂರ್ಣ ಬಹುಮತದ ಸರ್ಕಾರ ವಿಥ್ ಬಿ.ಎಲ್ ಸಂತೋಷ್ʼ. ಇದು ಮುಂದೆ ಸಂತೋಷ್‌ ಅವರನ್ನೇ ಮುಖ್ಯಮಂತ್ರಿಯಾಗಿ ಮಾಡುವುದರ ಪೂರ್ವ ಸೂಚನೆ ಎನ್ನುವುದು ಕಾಂಗ್ರೆಸ್‌ನ ಅಭಿಪ್ರಾಯ. ಸಂತೋಷ್‌ ಅವರನ್ನೇ ಮುಖ್ಯಮಂತ್ರಿಯಾಗಿ ಮಾಡುವುದು ಎಂದಾದರೆ ಅವರನ್ನು ಚುನಾವಣಾ ಕಣಕ್ಕಿಳಿಸಬಹುದಿತ್ತಲ್ಲವೇ ಎಂದು ಅದು ಪ್ರಶ್ನಿಸಿದೆ.

ಹಾಗಿದ್ದರೆ ಬಿಎಸ್‌ವೈ, ಬೊಮ್ಮಾಯಿ ಕಥೆ ಏನು?

ಕಾಂಗ್ರೆಸ್‌ ಇನ್ನೊಂದು ಟ್ವೀಟ್‌ ಮೂಲಕ ಬಿಜೆಪಿಯ ಕಾಲೆಳೆದಿದೆ. ʻʻಬಿಜೆಪಿಗೆ ಬಿಎಸ್‌ವೈ ಅವರ ಅಗತ್ಯ ಇನ್ನು ಕೆಲವೇ ದಿನ, ನಂತರ ಉತ್ಸವ ಮೂರ್ತಿಯಾಗಿದ್ದವರನ್ನು ವಿಸರ್ಜನಾ ಮೂರ್ತಿಯನ್ನಾಗಿಸುತ್ತದೆ. ಬೊಮ್ಮಾಯಿಯವರ ಕೌಂಟ್ ಡೌನ್ ಕೂಡ ಶುರುವಾಗಿದೆʼʼ ಎಂದಿರುವ ಕಾಂಗ್ರೆಸ್‌, ಬೊಮ್ಮಾಯಿ ಅವರನ್ನು ಮತ್ತೆ ಸಿಎಂ ಮಾಡುವುದಿಲ್ಲ ಎಂದಿದೆ.

ʻʻಮೋದಿ ಮುಖ ನೋಡಿ ಮತ ಕೊಡಿ ಎನ್ನುತ್ತಿರುವ ಬಿಜೆಪಿ ಮುಂದೆ ಇಲ್ಲಿ ತೋರಿಸುವ ಮುಖ ಯಾವುದು ಜೋಷಿಯದ್ದೋ, ಸಂತೋಷರದ್ದೋ? ಜೋಶಿ ದರ್ಬಾರ್‌ಗಾಗಿ ಲಿಂಗಾಯತ ನಾಯಕರೆಲ್ಲರನ್ನೂ ಮುಗಿಸಿದ್ದೇ?ʼʼ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ಬಿಜೆಪಿಗೆ ಲಿಂಗಾಯತರ ಅಗತ್ಯವಿಲ್ಲ ಎಂದ ಕಾಂಗ್ರೆಸ್‌

“ಲಿಂಗಾಯತರ ಅಗತ್ಯವಿಲ್ಲ” ಎಂಬುದನ್ನು ಬಿಜೆಪಿ ತನ್ನ ಕ್ರಿಯೆಯಲ್ಲೂ ತೋರಿಸಿದೆ. ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್, ಬಿ.ಎಸ್ ಯಡಿಯೂರಪ್ಪ ಅವರು ಸೇರಿದಂತೆ ಹಲವು ಲಿಂಗಾಯತ ನಾಯಕರನ್ನು ಎತ್ತಿ ಎಸೆದಿದ್ದು ಲಿಂಗಾಯತರು ಬೇಡ ಎಂಬ ಕಾರಣಕ್ಕಾಗಿಯೇ ಅಲ್ಲವೇ? ಯಡಿಯೂರಪ್ಪ ಕಟ್ಟಿದ ಹುತ್ತದಲ್ಲಿ ಹಾವೊಂದು ಸಂತೋಷದಿಂದ ಸಾಮ್ರಾಜ್ಯ ಸ್ಥಾಪಿಸಲು ಹವಣಿಸುತ್ತಿರುವುದು ಬಿಜೆಪಿಯ ಅವನತಿಗೆ ಮುನ್ನುಡಿ ಬರೆಯಲಿದೆ- ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ಕಾಂಗ್ರೆಸ್‌ ಈ ಮೂಲಕ ರಾಜ್ಯದಲ್ಲಿ ಈ ಬಾರಿ ಲಿಂಗಾಯತ ಸಿಎಂ ಇಲ್ಲ ಎಂಬ ವಾದವನ್ನು ಮುಂದಿಟ್ಟಿದೆ. ಅದು ಬ್ರಾಹ್ಮಣರ ಪಾಲಾಗಲಿದೆ ಎಂಬ ಎಚ್.ಡಿಕೆ ವಾದವನ್ನು ಬೆಂಬಲಿಸಿದೆ. ಆದರೆ, ಬಿಜೆಪಿ ಮಾತ್ರ ಈ ವಾದವನ್ನು ಅಲ್ಲಗಳೆಯುತ್ತಲೇ ಇದೆ. ಇತ್ತೀಚೆಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಬೊಮ್ಮಾಯಿ ಅವರೇ ಮುಂದಿನ ಸಿಎಂ ಎಂದು ಘೋಷಿಸಿದ್ದರು.

ಇದನ್ನೂ ಓದಿ : Karnataka Election : ಬಿಜೆಪಿ, ಕಾಂಗ್ರೆಸ್‌ ರೀತಿ ದುಡ್ಡು ಇದ್ದಿದ್ದರೆ ನಾನೂ 150-160 ಕ್ಷೇತ್ರ ಗೆಲ್ಲುತ್ತಿದ್ದೆ ಎಂದ ಎಚ್‌ಡಿಕೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Palika Bazaar : ಜನರಿಲ್ಲದೇ ಖಾಲಿಯಾದ ದಕ್ಷಿಣ ಭಾರತದ ಪ್ರಥಮ ಹವಾನಿಯಂತ್ರಿತ ಪಾಲಿಕೆ ಬಜಾರ್‌!

Palika Bazaar : ವಿಜಯನಗರದ ಹೈಟೆಕ್ ಮಾರ್ಕೆಟ್‌ಗೆ ಜನರೇ ಬಾರದೆ ಖಾಲಿಯಾಗಿದೆ. ಕೋಟಿ ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಪಾಲಿಕೆ ಬಜಾರ್‌ಗೆ ಇದೀಗ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಗ್ರಾಹಕರು ಬರದೆ ವ್ಯಾಪಾರಸ್ಥರು ಕಂಗಲಾಗಿದ್ದಾರೆ.

VISTARANEWS.COM


on

By

Palika Bazaar
Koo

ಬೆಂಗಳೂರು: ಕಳೆದ ಆ.25ರಂದು ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮ ಹವಾನಿಯಂತ್ರಿತ ʼಶ್ರೀ ಕೃಷ್ಣದೇವರಾಯ ಪಾಲಿಕೆ ಬಜಾರ್ʼ (Krishnadevaraya Palika Bazaar) ಅನ್ನು ಬೆಂಗಳೂರಿನ ವಿಜಯನಗರ ಕ್ಷೇತ್ರ ವ್ಯಾಪ್ತಿಯ ಮೆಟ್ರೊ ನಿಲ್ದಾಣದ ಬಳಿ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು.

ವ್ಯಾಪಾರಸ್ಥರ ಅನುಕೂಲಕ್ಕೆಂದು ಕೋಟಿ ಕೋಟಿ ಖರ್ಚು ಮಾಡಿ ಬೆಂಗಳೂರಿನ ವಿಜಯನಗರದಲ್ಲಿ ಪಾಲಿಕೆ ಬಜಾರ್ (Palika Bazaar) ನಿರ್ಮಿಸಲಾಗಿತ್ತು. ಆದರೆ ಅದ್ಯಾಕೋ ಏನೋ ಮೊಟ್ಟಮೊದಲ ಹವಾನಿಯಂತ್ರಿತ ಭೂಗತ ಮಾರುಕಟ್ಟೆ ಪಾಲಿಕೆ ಬಜಾರ್‌ಯತ್ತ ತಿರುಗಿ ನೋಡುವವರೇ ಯಾರು ಇಲ್ಲದಂತಾಗಿದೆ. ಇತ್ತ ವ್ಯಾಪಾರಿಗಳಿಗೆ ಮೊದಲು ಇದ್ದ ವ್ಯಾಪಾರವೂ ಇಲ್ಲದೆ ನೊಣ ಹೊಡೆಯುವ ಸ್ಥಿತಿ ಎದುರಾಗಿದೆ.

Palika Bazaar
Palika Bazaar

ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ 13 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಭೂಗತ ಮಾರುಕಟ್ಟೆ ಇದು. ವ್ಯಾಪಾರಿಗಳ ಅನುಕೂಲಕ್ಕೆಂದು 79 ಮಳಿಗೆಗಳಿರುವ ಪಾಲಿಕೆ ಬಜಾರ್‌ನ ನಿರೀಕ್ಷೆ ಹುಸಿಯಾಗಿದೆ. ಖರೀದಿಗೆ ಜನರು ಬಾರದ ಹಿನ್ನೆಲೆಯಲ್ಲಿ ವ್ಯಾಪಾರಸ್ಥರಿಗೆ ಹೊಡೆತ ಬಿದ್ದಿದೆ.

ಬಜಾರ್‌ವರೆಗೆ ತೆರಳುವುದಕ್ಕೆ ಜನರು ಹಿಂದೇಟು ಹಾಕುತ್ತಿದ್ದಾರೆ. ಅದರಲ್ಲೂ ಕೆಲವು ವ್ಯಾಪಾರಸ್ಥರು ಮೊದಲು ಇರುವ ಅಂಗಡಿಗಳನ್ನು ಬಿಟ್ಟು ಬರುತ್ತಿಲ್ಲ. ಇದರಿಂದ ಪಾಲಿಕೆ ಬಜಾರ್‌ನಲ್ಲಿರುವ ವ್ಯಾಪಾರಿಗಳಿಗೆ ಹೊಡೆತ ಬಿದ್ದಿದೆ. ಗಣ್ಯಾತಿ ಗಣ್ಯರಿಂದ ಉದ್ಘಾಟನೆಯಾಗಿದ್ದ ಪಾಲಿಕೆ ಬಜಾರ್ ಈಗ ಬಿಕೋ ಎನ್ನುತ್ತಿದೆ. ಕೋಟಿ ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಬಜಾರ್ ಇದೀಗ ನೀರಿನಲ್ಲಿ ಹೋಮ ಮಾಡಿದ್ದಂತಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ರಾಜಕೀಯ

MLA Muniratna : ಬಿಬಿಎಂಪಿ ಗುತ್ತಿಗೆದಾರನಿಗೆ ಜೀವಬೆದರಿಕೆ ಪ್ರಕರಣ; ತಲೆಮರೆಸಿಕೊಂಡಿದ್ದ ಶಾಸಕ ಮುನಿರತ್ನ ಕೋಲಾರದಲ್ಲಿ ಅರೆಸ್ಟ್‌

MLA Muniratna : ಎಫ್‌ಐಆರ್ ದಾಖಲಾಗುತ್ತಿದ್ದಂತೆ ನಾಪತ್ತೆ ಆಗಿದ್ದ ಮಾಜಿ ಸಚಿವ ಕಂ ಶಾಸಕ ಮುನಿರತ್ನರನ್ನು ಕೋಲಾರ ಪೊಲೀಸರ ಸಹಾಯದೊಂದಿಗೆ ಬೆಂಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

VISTARANEWS.COM


on

By

a case of threat to the contractor Absconding MLA Munirathna arrested in Kolar
Koo

ಕೋಲಾರ: ಬಿಬಿಎಂಪಿ ಗುತ್ತಿಗೆದಾರನಿಗೆ ಲಂಚ ಕೇಳಿದ್ದಲ್ಲದೇ ಜಾತಿ ನಿಂದನೆ ಹಾಗೂ ಜೀವಬೆದರಿಕೆ ಹಾಕಿದ್ದಕ್ಕೆ ಬೆಂಗಳೂರಿನಲ್ಲಿ ಶಾಸಕ ಮುನಿರತ್ನ ವಿರುದ್ಧ (MLA Muniratna) ದೂರು ದಾಖಲಾಗಿತ್ತು. ಇತ್ತ ದೂರು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಶಾಸಕ ಮುನಿರತ್ನರನ್ನು ಕೋಲಾರ ಜಿಲ್ಲೆಯ ನಂಗಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತವರು ಜಿಲ್ಲೆಯಾದ ಆಂಧ್ರಪ್ರದೇಶದ ಚಿತ್ತೂರಿಗೆ ಪಲಾಯಾನ‌ ಮಾಡುವ ವೇಳೆ ಮುನಿರತ್ನರನ್ನು ಅರೆಸ್ಟ್‌ ಮಾಡಲಾಗಿದೆ. ಗುತ್ತಿಗೆದಾರ ಚೆಲುವರಾಜು ಸಿಎಂ ಸಿದ್ದರಾಮಯ್ಯಗೆ ಮನವಿ ಕೊಟ್ಟ ಒಂದೇ ಗಂಟೆಯಲ್ಲಿ ಪೊಲೀಸರು ಮುನಿರತ್ನರನ್ನು ವಶಕ್ಕೆ ಪಡೆದಿದ್ದಾರೆ.

ಕೋಲಾರ ಪೊಲೀಸರ ನೆರವಿನೊಂದಿಗೆ ಮುಳಬಾಗಲು ತಾಲ್ಲೂಕಿನ ನಂಗಲಿ ಬಳಿ ವಶಕ್ಕೆ ಪಡೆಯಲಾಗಿದೆ. ಕೋಲಾರ ಮಾರ್ಗವಾಗಿ ಆಂದ್ರಪ್ರದೇಶಕ್ಕೆ ತೆರಳುತ್ತಿದ್ದ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಮುನಿರತ್ನರನ್ನು ವಶಕ್ಕೆ ಪಡೆದು ಕೋಲಾರ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದಾರೆ.

ರೇಣುಕಾಸ್ವಾಮಿಗೆ ಆದ ಗತಿ ನಿನಗೂ ಆಗುತ್ತೆ ಎಂದು ಬೆದರಿಕೆ

ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜ್ ಈ ಕುರಿತು ಮಾತನಾಡಿದ್ದು, ನನ್ನ ಕರೆಸಿ ಬೆದರಿಕೆ ಹಾಕಿ 20 ಲಕ್ಷ ರೂ. ಹಣ ಕೇಳಿದ್ದಾರೆ. ನಾನು ಆತ್ಮಹತ್ಯೆಗೂ ಯತ್ನಿಸಿದ್ದೆ, ಆದರೆ ನನ್ನ ಕುಟುಂಬದ ಸಲುವಾಗಿ ಉಳಿದುಕೊಂಡಿದ್ದೇನೆ. ರೇಣುಕಾಸ್ವಾಮಿಗೆ ಆದ ಗತಿ ನಿನಗೂ ಆಗುತ್ತೆ ನೋಡು.. ರೇಣುಕಾಸ್ವಾಮಿಗೆ ಗತಿ ಕಾಣಿಸಿದ್ದು ನಮ್ಮ ಅಕ್ಕನ ಮಗ ಎಂದು ಬೆದರಿಕೆ ಹಾಕಿದ್ದರಂತೆ. ನನ್ನ ಬಳಿ ನಿನ್ನನ್ನು ಮುಗಿಸಲು ನೂರು ಪ್ಲ್ಯಾನ್ ಇದೆ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.

ಶಾಸಕ ಮುನಿರತ್ನ ಆಪ್ತನಾಗಿರುವ ವಸಂತ್ ಕುಮಾರ್ ಕೂಡ ಚೆಲುವರಾಜುಗೆ ಬೆದರಿಕೆ ಹಾಕಿದ್ದನಂತೆ. ರೇಣುಕಾಸ್ವಾಮಿಯನ್ನು ಕೊಂದ ಹಾಗೇ ನಿನ್ನನ್ನು ಕೊಂದು ಹಾಕುತ್ತಾರೆ. ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ಯಾರು ಗೊತ್ತಾ? ಮುನಿರತ್ನ ಅವರ ತಂಗಿ ಮಗಾನೇ. ಸುಮ್ಮನೆ ಅವರು ಹೇಳಿದ್ದಂತೆ ಕೇಳು ಎಂದು ಚೆಲುವರಾಜುಗೆ ವಸಂತ್ ಕುಮಾರ್ ಮುಖಾಂತರ ಸೂಚನೆ ನೀಡಿ ಬೆದರಿಕೆ ಹಾಕಿಸಿದ್ದರಂತೆ.

ಅವಾಚ್ಯ ಶಬ್ಧಗಳಿಂದ ನಿಂದನೆ

ಶಾಸಕ ಮುನಿರತ್ನ ವಿರುದ್ಧ ಲಂಚ ಬೇಡಿಕೆ ಆರೋಪ ಕೇಳಿ ಬಂದಿದೆ. ಬಿಬಿಎಂಪಿ ವಾರ್ಡ್ ನಂ 42 ಲಕ್ಷ್ಮಿದೇವಿನಗರ ವಾರ್ಡ್‌ನಲ್ಲಿ ಘನ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ನಿರ್ವಹಣೆ ಸಂಬಂಧಿಸಿದಂತೆ ಗುತ್ತಿಗೆದಾರ ಚೆಲುವರಾಜುಗೆ ಲಂಚ ನೀಡುವಂತೆ ತೊಂದರೆ ಹಾಗೂ ಜೀವಬೆದರಿಕೆ ನೀಡಿದ್ದರಂತೆ. ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಗುತ್ತಿಗೆದಾರ ಚೆಲುವರಾಜು ಆರೋಪಿಸಿದ್ದರು. ಮೆ. ಗಂಗಾ ಎಂಟರ್ ಪ್ರೈಸಸ್ ಎಂಬ ಕಂಪನಿ ಹೆಸರಿನಲ್ಲಿ ಚೆಲುವರಾಜು ಗುತ್ತಿಗೆ ಕೆಲಸ ಮಾಡುತ್ತಿದ್ದಾರೆ. ಲಕ್ಷ್ಮೀದೇವಿ ನಗರ ವಾರ್ಡ್ ನ ಡಿ. ದೇವರಾಜು ಅರಸು ಟ್ರಕ್ ಟರ್ಮಿನಲ್ ಪ್ರದೇಶದಲ್ಲಿ ಚೆಲುವರಾಜು ಕಸ ಸಂಗ್ರಹ‌ದ ಗುತ್ತಿಗೆ ಪಡೆದಿದ್ದಾರೆ. ಆದರೆ ಮುನಿರತ್ನ ಚೆಲುವರಾಜುಗೆ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರಂತೆ. ಜತೆಗೆ ಜೀವ ಬೆದರಿಕೆ ಹಾಕುತ್ತಿದ್ದರಂತೆ.

ನಾನು ಮಾಗಡಿ ತಾಲೂಕಿನವನು. ಬಿಬಿಎಂಪಿ ಪೌರ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದೆ. ನಂತರ ಟ್ರಕ್ ಡ್ರೈವರ್ ಆಗಿ ಬಳಿಕ ಕಸ ಸಂಗ್ರಹದ ಗುತ್ತಿಗೆದಾರನಾದೆ. ಒಂದು ದಿನ ಎಂಎಲ್‌ಎ ಗನ್ ಮ್ಯಾನ್ ವಿಜಯ್ ನನಗೆ ಕರೆ ಮಾಡಿದ್ದರು. ವೈಯ್ಯಾಲಿಕಾವಲ್‌ನಲ್ಲಿರುವ ಅವರ ಮನೆಗೆ ಹೋಗಿ ಮುನಿರತ್ನ ಅವರನ್ನು ಭೇಟಿಯಾದೆ. ನಿನಗೆ 10 ಆಟೋ ಕೊಡಿಸುತ್ತೀನಿ, 20 ಲಕ್ಷ ಕೊಡು ಎಂದು ಹೇಳಿದರು. ನಾನು 20 ಲಕ್ಷ ಕೊಟ್ಟೆ, ಆದರೆ ಆಟೋ ಕೊಡಿಸಿಲ್ಲ ಕೇವಲ ಶಿಫಾರಸು ಪತ್ರ ಕೊಟ್ಟು ಸುಮ್ಮನಾದರು.

ಜೂನ್ ತಿಂಗಳಲ್ಲಿ ಮತ್ತೆ ಎಂ ಎಲ್ ಎ ಮುನಿರತ್ನ ನನಗೆ ಕರೆ ಮಾಡಿ, ಮನೆಗೆ ಬಾ ಅಂತಾ ಕರೆದರು. ಆದರೆ ನಾನು ಹೋಗಲಿಲ್ಲ. ನಂತರ ಅಧಿಕೃತವಾಗಿ ಎಂಎಲ್‌ಎ ಪಿಎಸ್ ಪತ್ರ ಬರೆದು ಸಭೆಗೆ ಕರೆದರು. ಸಭೆಗೆ ಹೋದಾಗ ಬಾಯಿಗೆ ಬಂದಹಾಗೇ ಅವಾಚ್ಯ ಶಬ್ಧಗಳಿಂದ ಬೈದರು. ನನ್ನ ಟೆಂಡರ್ ರದ್ದು ಮಾಡಲು ಆಯುಕ್ತರಿಗೆ ಎಂಎಲ್‌ಎ ಪತ್ರ ಬರೆದರು. ನಂತರ ಮತ್ತೆ 30 ಲಕ್ಷ ದುಡ್ಡು ಕೊಡು ಎಂದರು. ಹಣ ಕೊಡದೆ ಇದ್ದಾಗ ಮತ್ತೆ ಆಯುಕ್ತರಿಗೆ ನನ್ನ ಟೆಂಡರ್ ರದ್ದು ಮಾಡುವಂತೆ ಪತ್ರ ಬರೆದರು. ಅವರ ಮನೆಗೆ ಹೋದಾಗಲೆಲ್ಲ ಬಾಯಿಗೆ ಬಂದ ಹಾಗೇ ಬೈದು ಸಾಯಿಸುತ್ತೇನೆ ಎಂದು ಅವಾಜ್ ಹಾಕಿದ್ದರಂತೆ.

ನನ್ನಗೆ 11 ಕೋಟಿ ಅರಿಯರ್ಸ್ ಬಂದಾಗ, ಅದರಲ್ಲೂ ದುಡ್ಡು ಕೊಡು ಎಂದು ಕಿರುಕುಳ‌ ಕೊಟ್ಟರು. ಬೇರೆ ಗುತ್ತಿಗೆದಾರರ ಮುಖಾಂತರ ಹಣ ನೀಡುವಂತೆ ಕಿರುಕುಳ ನೀಡಲು ಶುರುಮಾಡಿದರು. ಸೆ. 9ರಂದು ಮತ್ತೆ ಜೀವ ಬೆದರಿಕೆ ಹಾಕಿ, ರೇಣುಕಾಸ್ವಾಮಿ ಮಾದರಿಯಲ್ಲೇ ಕೊಲೆ ಮಾಡ್ತೇವೆ ಎಂದು ಮುನಿರತ್ನ ಆಪ್ತ ವಸಂತಕುಮಾರ್ ಬೆದರಿಕೆ ಹಾಕಿದ್ದಾನೆ. ಮೇ 18ರಂದು ನಿನ್ನ ಹೆಂಡತಿ ಚೆನ್ನಾಗಿದ್ದರೆ ಫೋಟೊ ತೋರಿಸೋ ಎಂದು
ಹೆಂಡತಿ ಬಗ್ಗೆ ಅವಾಚ್ಯ ಶಬ್ಧದಿಂದ ನಿಂದಿಸಿದ್ದಾರೆ.

ಮುನಿರತ್ನ ಫೋನ್‌ ಸ್ವಿಚ್ಡ್‌ ಆಫ್

ಶಾಸಕ ಮುನಿರತ್ನ ವಿರುದ್ಧ ವೈಯಾಲಿಕಾವಲ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದರು. ವೈಯ್ಯಾಲಿಕಾವಲ್ ಪೊಲೀಸರಿಂದ‌ ಮುನಿರತ್ನಗಾಗಿ ಹುಡುಕಾಟ ನಡೆಸಿದ್ದರು. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆ ಆಗಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಮುನಿರತ್ನ ಮನೆ ಬಳಿ ಪೊಲೀಸ್ ಭದ್ರತೆ ನೀಡಲಾಗಿತ್ತು. ಪ್ರತಿಭಟನೆ ಕೂಡ‌ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲೂ ಒಂದು ಕೆಎಸ್ಆರ್ಪಿಸಿ ತುಕಡಿ ನಿಯೋಜನೆ ಮಾಡಲಾಗಿತ್ತು.

Continue Reading

ವಿಜಯನಗರ

Self Harming : ಮುದ್ದಾದ ಮಕ್ಕಳಿಬ್ಬರ ಕತ್ತು ಹಿಸುಕಿ ಕೊಂದಳು; ಬಳಿಕ ತಾನೂ ನೇಣಿಗೆ ಶರಣಾದಳು ತಾಯಿ

Self Harming : ವಿಜಯನಗರದಲ್ಲಿ ಮಕ್ಕಳಿಬ್ಬರನ್ನು ಕೊಂದು ತಾಯಿ ಆತ್ಮಹತ್ಯೆಗೆ ಶರಣಾದರೆ, ಚಿಕ್ಕಬಳ್ಳಾಪುರದಲ್ಲಿ ಅಪ್ರಾಪ್ತ ಪ್ರೇಮಿಗಳು ಮರಕ್ಕೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

VISTARANEWS.COM


on

By

Self Harming
ಸಾಂದರ್ಭಿಕ ಚಿತ್ರ
Koo

ವಿಜಯನಗರದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಒಂದೇ ಕುಟುಂಬದ ಮೂವರು (Self Harming) ಮೃತಪಟ್ಟಿದ್ದಾರೆ. ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಸಾಯಿಸಿದ ತಾಯಿ ಬಳಿಕ ನೇಣಿಗೆ ಶರಣಾಗಿದ್ದಾಳೆ. ಶಿವಮ್ಮ(24) ಮೂರು ವರ್ಷದ ದುರ್ಗಮ್ಮ, 10 ತಿಂಗಳ ಈಶ್ವರಿ ಮೃತ ದುರ್ದೈವಿಗಳು. ವಿಜಯನಗರದ ಹೂವಿನ ಹಡಗಲಿ ತಾಲೂಕಿನ ತಿಪ್ಪಾಪುರ ಗ್ರಾಮದಲ್ಲಿ ಘಟನೆ ನಡೆದಿದೆ.

ವಿಷಯ ತಿಳಿಯುತ್ತಿದ್ದಂತೆ ಹೂವಿನ ಹಡಗಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೌಟುಂಬಿಕ ಕಲಹ ಶಂಕೆ ಇದ್ದು, ಘಟನೆ ಬಳಿಕ ಪತಿ ಕುಟುಂಬಸ್ಥರು ತಲೆಮರೆಸಿಕೊಂಡಿದ್ದಾರೆ. ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

ಕೆರೆಯಲ್ಲಿ ತೇಲಿ ಬಂದ ಶವ

ದಾವಣಗೆರೆ ನಗರದ ಕುಂದವಾಡ ಕೆರೆಯಲ್ಲಿ ಶವವೊಂದು ಪತ್ತೆಯಾಗಿದೆ. ಅರಸೀಕೆರೆ ಗ್ರಾಮದ ವಿಜಯಕುಮಾರ್ (55) ಮೃತ ದುರ್ದೈವಿ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದ ವಿಜಯಕುಮಾರ್‌ ನಿನ್ನೆ ದಾವಣಗೆರೆಗೆ ಔಷಧ ತರಲು ಬಂದಿದ್ದ. ಬಳಿಕ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾನೆ.

ನಿನ್ನೆ ಸಂಬಂಧಿಕರಿಂದ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು. ಮಾನಸಿಕವಾಗಿ ತೊಂದರೆ ಅನುಭವಿಸುತ್ತಿದ್ದ ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ. ವಾಯುವಿಹಾರಿಗಳು ಕೆರೆಯಲ್ಲಿ ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದಾವಣಗೆರೆ ವಿದ್ಯಾನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಶಾಲಾ ಸಮವಸ್ತ್ರದಲ್ಲೇ ನೇಣಿಗೆ ಶರಣಾದ ಅಪ್ರಾಪ್ತರು

ಮರಕ್ಕೆ ನೇಣು ಬಿಗಿದು ಅಪ್ರಾಪ್ತ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕಬಳ್ಳಾಪುರದ ಬೀರಪ್ಪನಹಳ್ಳಿ ಗ್ರಾಮದ ಅರಣ್ಯದಲ್ಲಿ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಶಾಲೆ ಬ್ಯಾಗ್ ಪತ್ತೆಯಾಗಿದೆ. ಬಾಲಕಿ ಚಿಕ್ಕಬಳ್ಳಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ‌ ಮಾಡುತ್ತಿದ್ದಳು. ಪೋಷಕರಿಗೆ ಹೆದರಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ಇದೆ.

ಬಾಲಕ ಚಿಂತಾಮಣಿ ತಾಲ್ಲೂಕಿನ ಇರಗಂಪಲ್ಲಿ ಗ್ರಾಮದವನು ಎನ್ನಲಾಗಿದೆ. ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರದಿಂದ ಮೃತದೇಹಗಳನ್ನು ಕೆಳಗೆ ಇಳಿಸಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಚಿತ್ರದುರ್ಗ

Kidnap case : ಚಿತ್ರದುರ್ಗದಲ್ಲಿ ಹಾಡಹಗಲೇ ಮುಸ್ಲಿಂ ಬಾಲಕಿ ಕಿಡ್ನ್ಯಾಪ್‌ಗೆ ಯತ್ನ; ಸಿಕ್ಕಿ ಬಿದ್ದ ಅಪಹರಣಕೋರರಿಗೆ ಧರ್ಮದೇಟು

Kidnap case : ಹಾಡಹಗಲೇ ಪಿಯುಸಿ ವಿದ್ಯಾರ್ಥಿನಿಯನ್ನು ಯುವಕರಿಬ್ಬರು ಅಪಹರಣಕ್ಕೆ ಯತ್ನಿಸಿ ಸಿಕ್ಕಿಬಿದ್ದಿದ್ದಾರೆ. ಮುಸ್ಲಿಂ ಬಾಲಕಿಯನ್ನು ಹಿಂದು ಯುವಕರು ಕಿಡ್ನ್ಯಾಪ್‌ ಮಾಡಲು ಯತ್ನಿಸಿ ಸಾರ್ವಜನಿಕರಿಂದ ಧರ್ಮದೇಟು ತಿಂದಿದ್ದಾರೆ. ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ.

VISTARANEWS.COM


on

By

Kidnap case
Koo

ಚಿತ್ರದುರ್ಗ: ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯ ಜ್ಞಾನ ಭಾರತಿ ಶಾಲೆ ಮುಂಭಾಗ ಹಾಡಹಗಲೇ ಮುಸ್ಲಿಂ ಬಾಲಕಿಯನ್ನು ಕಿಡ್ನ್ಯಾಪ್‌ಗೆ (Kidnap case) ಯತ್ನಿಸಲಾಗಿದೆ. ಕಿರಾತಕರಿಬ್ಬರು ಬಾಲಕಿಯನ್ನು ಎಳೆದೊಯ್ಯುವಾಗ ಕಿರುಚಾಡಿದ್ದಾಳೆ. ಇದರಿಂದ ಬೆದರಿದ ಇಬ್ಬರು ಬಾಲಕಿಯನ್ನು ಬಿಟ್ಟು ಎಸ್ಕೇಪ್‌ ಆಗಲು ಯತ್ನಿಸಿದ್ದಾರೆ. ಬಾಲಕಿ ಕಿರುಚಾಟ ಕೇಳಿದ ಸ್ಥಳೀಯರು ಕೂಡಲೇ ಓರ್ವನನ್ನು ಹಿಡಿದು ಥಳಿಸಿದ್ದಾರೆ.

ಟಗರುಹಟ್ಟಿಯ ಆರೋಪಿ ಪಾರ್ಥ ಎಂಬಾತನನ್ನು ಹಿಡಿದು ಸ್ಥಳೀಯರು ಧರ್ಮದೇಟು ನೀಡಿದ್ದಾರೆ. ಇತ್ತ ಸ್ಥಳದಲ್ಲೇ ಇದ್ದ ಬಾಲಕಿ ಚಪ್ಪಲಿ ಹಿಡಿದು ಮನಬಂದಂತೆ ಹೊಡೆದಿದ್ದಾಳೆ. ಬಳಿಕ ಆರೋಪಿಯನ್ನುಪೊಲೀಸರಿಗೆ ಒಪ್ಪಿಸಿದ್ದಾರೆ. 17 ವರ್ಷದ ಬಾಲಕಿಯನ್ನುಆರೋಪಿ ಆನಂದ್ ಮತ್ತು ಪಾರ್ಥ ಎಂಬುವವರಿಂದ ಕಿಡ್ನ್ಯಾಪ್‌ ನಡೆದಿದೆ.

ಸದ್ಯ ಇಬ್ಬರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕಿಡ್ನ್ಯಾಪ್‌ ಮಾಡಲು ಬಳಸಿದ ಕಾರನ್ನು ವಶಕ್ಕೆ ಪಡೆಯಲಾಗಿದೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ಬಾಲಕಿಯಿಂದ ದೂರು ದಾಖಲಾಗಿದೆ. ಯಾಕಾಗಿ ಕಿಡ್ನ್ಯಾಪ್‌ ಮಾಡಲು ಯತ್ನಿಸಿದರು ಎಂಬುದು ತಿಳಿದುಬಂದಿದೆ.

ಹಾಡಹಗಲೇ ಬಾಲಕಿಯ ಅಪಹರಣಕ್ಕೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ‌ ಠಾಣೆಗೆ ಎಸ್ಪಿ ರಂಜಿತ್ ಕುಮಾರ್ ಬಂಡಾರು ಆಗಮಿಸಿದರು. ಎಸ್ಪಿ ಸಮ್ಮುಖದಲ್ಲಿ‌ ಆರೋಪಿಯ ತೀವ್ರ ವಿಚಾರಣೆ ನಡೆದಿದೆ. ಘಟನೆ ಸಂಬಂಧ ಎಸ್ಪಿ ರಂಜಿತ್ ಕುಮಾರ್ ಬಂಡಾರು ಮಾಹಿತಿ ಪಡೆದರು.

ಇದನ್ನೂ ಓದಿ: MLA Muniratna : ಲಂಚಕ್ಕಾಗಿ ಗುತ್ತಿಗೆದಾರನಿಗೆ ಜೀವ ಬೆದರಿಕೆ; ಶಾಸಕ ಮುನಿರತ್ನ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್‌ ದಾಖಲು

ಕಾಮುಕನಾದ ಸರ್ಕಾರಿ ಶಾಲೆ ಶಿಕ್ಷಕ ಅರೆಸ್ಟ್‌

ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿನಿಯರ ಮೇಲೆ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರಿಗೆ ಕಳೆದ ಆರು ತಿಂಗಳಿಂದ ನಿರಂತರ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಬಾಲಕಿಯೊರ್ವಳು ಲೈಂಗಿಕ ಕಿರುಕುಳ ಬಗ್ಗೆ ಪೋಷಕರಿಗೆ ತಿಳಿಸಿದ್ದಾಳೆ. ಈ ವೇಳೆ ವಿಚಾರಿಸಲು ಹೋದಾಗ ತಮಗೂ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಎಂದು 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದಾರೆ. ತಡರಾತ್ರಿ ಆರೋಪಿ ಶಿಕ್ಷಕ ಸಾದಿಕ ಬೇಗ್‌ ಎಂಬಾತನನ್ನು ಬಂಧಿಸಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Palika Bazaar
ಬೆಂಗಳೂರು35 mins ago

Palika Bazaar : ಜನರಿಲ್ಲದೇ ಖಾಲಿಯಾದ ದಕ್ಷಿಣ ಭಾರತದ ಪ್ರಥಮ ಹವಾನಿಯಂತ್ರಿತ ಪಾಲಿಕೆ ಬಜಾರ್‌!

dina bhavishya
ಭವಿಷ್ಯ5 hours ago

Dina Bhavishya : ಈ ರಾಶಿಯ ವಿವಾಹಪೇಕ್ಷಿತರಿಗೆ ಶುಭ ಸುದ್ದಿ ಸಿಗಲಿದೆ

a case of threat to the contractor Absconding MLA Munirathna arrested in Kolar
ರಾಜಕೀಯ15 hours ago

MLA Muniratna : ಬಿಬಿಎಂಪಿ ಗುತ್ತಿಗೆದಾರನಿಗೆ ಜೀವಬೆದರಿಕೆ ಪ್ರಕರಣ; ತಲೆಮರೆಸಿಕೊಂಡಿದ್ದ ಶಾಸಕ ಮುನಿರತ್ನ ಕೋಲಾರದಲ್ಲಿ ಅರೆಸ್ಟ್‌

Self Harming
ವಿಜಯನಗರ17 hours ago

Self Harming : ಮುದ್ದಾದ ಮಕ್ಕಳಿಬ್ಬರ ಕತ್ತು ಹಿಸುಕಿ ಕೊಂದಳು; ಬಳಿಕ ತಾನೂ ನೇಣಿಗೆ ಶರಣಾದಳು ತಾಯಿ

Kidnap case
ಚಿತ್ರದುರ್ಗ18 hours ago

Kidnap case : ಚಿತ್ರದುರ್ಗದಲ್ಲಿ ಹಾಡಹಗಲೇ ಮುಸ್ಲಿಂ ಬಾಲಕಿ ಕಿಡ್ನ್ಯಾಪ್‌ಗೆ ಯತ್ನ; ಸಿಕ್ಕಿ ಬಿದ್ದ ಅಪಹರಣಕೋರರಿಗೆ ಧರ್ಮದೇಟು

Road Accident
ಚಿಕ್ಕಬಳ್ಳಾಪುರ19 hours ago

Road Accident : ಕಾರಿನ ಮೇಲೆ ಉರುಳಿ ಬಿದ್ದ ಟೊಮ್ಯಾಟೊ ತುಂಬಿದ ಲಾರಿ; ಮೂವರು ಸ್ಥಳದಲ್ಲೇ ದುರ್ಮರಣ

Murder case
ಹಾಸನ20 hours ago

Murder Case : ಹಾಸನದಲ್ಲಿ ಚಾಕುವಿನಿಂದ ಇರಿದು ವಾಟರ್‌ಮ್ಯಾನ್‌ನ ಬರ್ಬರವಾಗಿ ಕೊಂದ ರೌಡಿಶೀಟರ್‌

FIR registered against MLA Munirathna and four others
ರಾಜಕೀಯ21 hours ago

MLA Muniratna : ಲಂಚಕ್ಕಾಗಿ ಗುತ್ತಿಗೆದಾರನಿಗೆ ಜೀವ ಬೆದರಿಕೆ; ಶಾಸಕ ಮುನಿರತ್ನ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್‌ ದಾಖಲು

Hindi Imposition
ಬೆಂಗಳೂರು21 hours ago

Hindi Imposition : ಹಿಂದಿ ಹೇರಿಕೆ ವಿರುದ್ಧ ಸಿಡಿದೆದ್ದ ಕರವೇ; ಕಪ್ಪು ದಿನವನ್ನಾಗಿ ಆಚರಣೆ

Murder case
ಬೆಂಗಳೂರು23 hours ago

Murder case:ಪ್ರಿಯಕರನೊಟ್ಟಿಗೆ ಏಕಾಂತದಲ್ಲಿರುವಾಗಲೇ ಮಗಳು ಲಾಕ್‌; ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ತಾಯಿಯನ್ನೇ ಕೊಂದಳು ಪಾಪಿ

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ11 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ10 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 year ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್2 weeks ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 weeks ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ3 weeks ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ1 month ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 month ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 month ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 month ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 month ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 month ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 month ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌