Site icon Vistara News

ವಿಸ್ತಾರ TOP 10 NEWS | ಸತೀಶ್‌ ಜಾರಕಿಹೊಳಿ ʼಕೀಳುʼ ಮಾತಿನಿಂದ ಮೇಲ್ವರ್ಗದ ಮೀಸಲಿಗೆ ಸುಪ್ರೀಂ ಸಮ್ಮತಿವರೆಗಿನ ಪ್ರಮುಖ ಸುದ್ದಿಗಳಿವು

TOP 10 NEWS 07112022

ಬೆಂಗಳೂರು: ಹಿಂದು ಪದದ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ನೀಡಿರುವ ಹೇಳಿಕೆ ಕಾಂಗ್ರೆಸ್‌ಗೆ ಮುಜುಗರ ತಂದೊಡ್ಡಿದೆ. ಮುರುಘಾ ಶ್ರೀಗಳ ವಿರುದ್ಧದ ಪ್ರಕರಣದಲ್ಲಿ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ. ಆರ್ಥಿಕ ಹಿಂದುಳಿದಿರುವ ಮೇಲ್ವರ್ಗಕ್ಕೆ ಶೇ. 10 ಮೀಸಲಾತಿ ನೀಡುವ ಕುರಿತು ಕೇಂದ್ರ ಸರ್ಕಾರಕ್ಕೆ ಮಹತ್ವದ ಜಯ ಸಿಕ್ಕಿದೆ. ವಂದೇ ಭಾರತ್‌ ರೈಲು ಮೈಸೂರಿಗೆ ಪ್ರಾಯೋಗಿಕ ಚಾಲನೆ ಸಿಗಲಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. ʼಹಿಂದು ಪದಕ್ಕೆ ಕೀಳು ಅರ್ಥವಿದೆʼ: ಬೇಕಿದ್ದರೆ ವಾಟ್ಸ್‌ಆ್ಯಪ್‌, ಯೂಟ್ಯೂಬ್‌ ನೋಡಿ ಎಂದ ಸತೀಶ್‌ ಜಾರಕಿಹೊಳಿ
ಹಿಂದು ಶಬ್ದ ಪರ್ಷಿಯಾದಿಂದ ಬಂದಿರುವುದು ಎಂದಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ, ಇದಕ್ಕೆ ಅತ್ಯಂತ ಕೀಳು ಅರ್ಥವಿದೆ ಎಂದು ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಹಿಂದಿಯಲ್ಲಿ ಈ ಕುರಿತು ಮಾತನಾಡಿರುವ ಜಾರಕಿಹೊಳಿ, ಹಿಂದು ಧರ್ಮ, ಆ ಧರ್ಮ ಈ ಧರ್ಮ ಎನ್ನುತ್ತಾರೆ. ಹಿಂದು ಶಬ್ದ ಎಲ್ಲಿಂದ ಬಂತು? ಪರ್ಷಿಯನ್‌ನಿಂದ ಬಂತು. ಅಂದರೆ ಇರಾನ್‌, ಇರಾಕ್‌, ಕಜಖ್‌ಸ್ತಾನದಿಂದ ಬಂದಿದ್ದು. ಭಾರತದ ಜತೆಗೆ ಇದಕ್ಕೆ ಏನು ಸಂಬಂಧ? ಇದರ ಬಗ್ಗೆ ಚರ್ಚೆ ಆಗಬೇಕು. ಈ ಶಬ್ದ ಎಲ್ಲಿಂದ ಬಂತು ಎಂಬುದರ ಕುರಿತು ವಾಟ್ಸ್‌ಆ್ಯಪ್‌, ಯೂಟ್ಯೂಬ್‌ನಲ್ಲಿ ನೋಡಿ. ಹಿಂದು ಶಬ್ದವನ್ನು ಇಷ್ಟು ಮೇಲೆ ಏಕೆ ಮೆರೆಸುತ್ತೀರಿ? ಅದರ ಅರ್ಥ ತಿಳಿದರೆ ನಾಚಿಕೆ ಆಗುತ್ತದೆ. ಅದರ ಅರ್ಥ ಬಹಳ ಕೀಳು ಅರ್ಥವಿದೆ. ಈ ಮಾಹಿತಿಯೂ ವೆಬ್‌ಸೈಟ್‌ನಲ್ಲಿದೆ, ಬೇಕಿದ್ದರೆ ನೋಡಬಹುದು ಎಂದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: ಹಿಂದು ಪದದ ಅರ್ಥ ವಿವಾದ: ಖಂಡಿಸಿದ ಸುರ್ಜೆವಾಲ, ಜಾರಕಿಹೊಳಿ U-Turn

2. murugha seer | ಮತ್ತಿನ ಔಷಧ ಬೆರೆಸಿದ ಸೇಬು ತಿನ್ನಿಸಿ ಮಕ್ಕಳ ದುರ್ಬಳಕೆ, ಒಬ್ಬ ಹುಡುಗಿಯ Rape and Murder!
ಮುರುಘಾಮಠದ ಶ್ರೀ ಶಿವಮೂರ್ತಿ ಮುರುಘಾಶ್ರೀಗಳು ಮಕ್ಕಳ ಮೇಲೆ ದೌರ್ಜನ್ಯ ನಡೆಸುತ್ತಿದ್ದ ರೀತಿ, ಅದಕ್ಕೆ ಬಳಸುತ್ತಿದ್ದ ತಂತ್ರಗಳು ಬೆಚ್ಚಿಬೀಳಿಸುವಂತಿವೆ. ಅವರು ಮತ್ತಿನ ಔಷಧ ಬೆರೆಸಿದ ಸೇಬು ತಿನ್ನಿ ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಒಂದು ಕಡೆಯಾದರೆ, ಒಬ್ಬ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆಯನ್ನೇ ಮಾಡಲಾಗಿದೆ ಎನ್ನುವುದು ಇನ್ನೊಂದು ಗಂಭೀರ ಆರೋಪ. ಚಿತ್ರದುರ್ಗದ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಲಾದ ೬೯೪ ಪುಟಗಳ ಚಾರ್ಜ್‌ಶೀಟ್‌ನಲ್ಲಿ ಹಲವಾರು ಆತಂಕಕಾರಿ ಮಾಹಿತಿಗಳು ಬಯಲಾಗಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. EWS Quota | ಶೇ.10 ಇಡಬ್ಲ್ಯೂಎಸ್ ಮೀಸಲು ಎತ್ತಿ ಹಿಡಿದ ಸುಪ್ರೀಂ ಕೋರ್ಟ್, ಐವರ ಪೈಕಿ ಇಬ್ಬರು ಜಡ್ಜ್ ಭಿನ್ನ ತೀರ್ಪು!
ಕೇಂದ್ರ ಸರ್ಕಾರದ ಶೇ.10 ಆರ್ಥಿಕವಾಗಿ ಹಿಂದುಳಿದ ವರ್ಗ(ಇಡಬ್ಲ್ಯೂಎಸ್) ಮೀಸಲು ಸಿಂಧುತ್ವಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಎರಡು ಪ್ರತ್ಯೇಕ ತೀರ್ಪುಗಳನ್ನು ಪ್ರಕಟಿಸಿದೆ. ಮೀಸಲು ಸಿಂಧುತ್ವ ಕುರಿತು ತೀರ್ಪು ಪ್ರಕಟಿಸಿದ ಐವರು ಜಡ್ಜ್ ಪೈಕಿ ಮೂವರು ಕೇಂದ್ರ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದರೆ, ಇಬ್ಬರು ಮಾತ್ರ ಸಮ್ಮತಿಯನ್ನು ಸೂಚಿಸಿಲ್ಲ. ಇದರೊಂದಿಗೆ ಶೇ.10 ಇಡಬ್ಲ್ಯೂಎಸ್ ಮೀಸಲು 3:2 ತೀರ್ಪಿನೊಂದಿಗೆ ಊರ್ಜಿತಗೊಂಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: ವಿಸ್ತಾರ Explainer | ಏನಿದು EWS ಮೀಸಲು, ಯಾಕೆ ವಿರೋಧ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೇಕೆ?
EWS Reservation | ಸುಪ್ರೀಂ ತೀರ್ಪಿಗೆ ಖರ್ಗೆ ಸ್ವಾಗತ, ಮೀಸಲು ನೀಡಲು ಸಂವಿಧಾನ ಹೇಳಿಲ್ಲ ಎಂದ ಸಿದ್ದರಾಮಯ್ಯ

4. ಗರ್ಭಿಣಿ ಸಾವಿನಿಂದ ಎಚ್ಚೆತ್ತ ಸರ್ಕಾರ: ತುರ್ತು ಚಿಕಿತ್ಸೆಯನ್ನು ನಿರಾಕರಿಸಿದರೆ ಕ್ರಿಮಿನಲ್‌ ಕೇಸ್‌
ತುಮಕೂರಿನಲ್ಲಿ ಸೂಕ್ತ ಕಾಲದಲ್ಲಿ ಚಿಕಿತ್ಸೆ ಲಭಿಸದೆ ಗರ್ಭಿಣಿ ಹಾಗೂ ಅವಳಿ ಮಕ್ಕಳು ಪ್ರಾಣ ಕಳೆದುಕೊಂಡ ಬೆನ್ನಲ್ಲೇ, ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೂ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆ ನಿರಾಕರಿಸಿದೆ ಕೆಲಸದಿಂದ ವಜಾ ಮಾಡುವುದರ ಜತೆಗೆ ಕ್ರಿಮಿನಲ್‌ ಮೊಕದ್ದಮೆಯನ್ನೂ ಹೂಡಲಾಗುತ್ತದೆ ಎಂದು ತಿಳಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Sanjay Bhandari | ಭಾರತಕ್ಕೆ ಉದ್ಯಮಿ ಸಂಜಯ್‌ ಭಂಡಾರಿ ಹಸ್ತಾಂತರಿಸಲು ಬ್ರಿಟನ್‌ ಅಸ್ತು, ಕೇಂದ್ರಕ್ಕೆ ಮೊದಲ ಜಯ
ತೆರಿಗೆ ವಂಚನೆ, ಲಂಚ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿ, ವಿದೇಶಕ್ಕೆ ಪರಾರಿಯಾಗಿರುವ ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ್‌ ಭಂಡಾರಿಯನ್ನು (Sanjay Bhandari) ಭಾರತಕ್ಕೆ ಹಸ್ತಾಂತರ ಮಾಡಲು ಬ್ರಿಟನ್‌ನ ವೆಸ್ಟ್‌ಮಿನಿಸ್ಟರ್‌ ಮ್ಯಾಜಿಸ್ಟ್ರೇಟ್ಸ್‌ ಕೋರ್ಟ್‌ ಸಮ್ಮತಿ ಸೂಚಿಸಿದೆ. ಇದರಿಂದ ಕೇಂದ್ರ ಸರ್ಕಾರದ ಪ್ರಯತ್ನಕ್ಕೆ ಮುನ್ನಡೆ ಸಿಕ್ಕಂತಾಗಿದೆ. ಯುಪಿಎ ಅವಧಿಯಲ್ಲಿ ತರಬೇತಿ ವಿಮಾನಗಳ ಖರೀದಿ ವೇಳೆ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸಂಜಯ್‌ ಭಂಡಾರಿಯನ್ನು ಭಾರತಕ್ಕೆ ಹಸ್ತಾಂತರ ಮಾಡಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Chandru Death | ಬಂತು ಡಯಾಟಮ್‌ ಪರೀಕ್ಷಾ ವರದಿ, ನೀರಿಗೆ ಬಿದ್ದ ಬಳಿಕವೇ ಪ್ರಾಣ ಕಳೆದುಕೊಂಡರಾ ಚಂದ್ರಶೇಖರ್‌?
ಶಾಸಕ ಎಂ.ಪಿ. ರೇಣುಕಾಚಾರ್ಯ ಸಹೋದರ ಎಂ.ಪಿ.ರಮೇಶ್‌ ಅವರ ಪುತ್ರ ಚಂದ್ರಶೇಖರ್ ಸಾವು (Chandru Death) ಪ್ರಕರಣವು ಇತ್ಯರ್ಥವಾಗಿಲ್ಲ. ಕುಟುಂಬದವರು ಇದನ್ನು ಕೊಲೆ ಎಂದರೆ, ಪೊಲೀಸರ ತನಿಖೆಯಲ್ಲಿ ಇದು ಅಪಘಾತ ಎಂದು ಹೇಳಲಾಗುತ್ತಿದೆ. ಆದರೆ, ಇವೆಲ್ಲದರ ನಡುವೆ ಪೊಲೀಸರ ಕೈಗೆ ಚಂದ್ರುವಿನ ಡಯಾಟಮ್‌ ವರದಿ ಸೇರಿದೆ. ಕಳೆದ ಅಕ್ಟೋಬರ್‌ 30ರಂದು ನಾಪತ್ತೆಯಾಗಿದ್ದ ಚಂದ್ರು ಬಹು ಹುಡುಕಾಟದ ನಂತರ ಅವರು ಪ್ರಯಾಣಿಸುತ್ತಿದ್ದ ಕಾರು ತುಂಗಾ ನಾಲೆಯಲ್ಲಿ ಇರುವುದು ಪತ್ತೆಯಾಗಿತ್ತು. ಅದನ್ನು ಮೇಲೆತ್ತಿದಾಗ ಶವವೂ ಪತ್ತೆಯಾಗಿತ್ತು. ಈ ಸಾವು ಹಲವು ಅನುಮಾನಗಳನ್ನು ಸೃಷ್ಟಿಸಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Chandru Death | ಗೌರಿಗದ್ದೆಯ ವಿನಯ್‌ ಗುರೂಜಿ ಆಶ್ರಮದಲ್ಲಿ ವಿಚಾರಣೆ ನಡೆಸಿದ ಚನ್ನಗಿರಿ ಪೊಲೀಸರು

7. ಕೇರಳದಲ್ಲಿ ಹಿಜಾಬ್​ ಸುಟ್ಟು ಹಾಕಿದ ಮುಸ್ಲಿಂ ಮಹಿಳೆಯರು, ಇರಾನ್​​ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ
ಕೇರಳದ ಕೊಯಿಕ್ಕೊಡ್​ ಟೌನ್​ ಹಾಲ್​ ಸಮೀಪ ಸುಮಾರು 50 ಮುಸ್ಲಿಂ ಮಹಿಳೆಯರು ಸೇರಿ, ಹಿಜಾಬ್​​ಗಳನ್ನು ಸುಟ್ಟು ಹಾಕಿದ್ದಾರೆ. ಇವರೆಲ್ಲ ಹೀಗೆ ಹಿಜಾಬ್​​ಗಳನ್ನು ಸುಡುವ ಮೂಲಕ ಇರಾನ್​ನಲ್ಲಿ ನಡೆಯುತ್ತಿರುವ ಹಿಜಾಬ್​ ವಿರೋಧಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೊಯಿಕ್ಕೋಡ್​ ಟೌನ್​ ಹಾಲ್​​ನಲ್ಲಿ ಇಸ್ಲಾಮ್​ ಮುಕ್ತ ಚಿಂತಕರ ಸಂಘದಿಂದ ಮುಕ್ತ ಚಿಂತನಾ ಅಧಿವೇಶನ ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ಮಹಿಳೆಯರು ಒಟ್ಟಾಗಿ ಹಿಜಾಬ್​ ಸುಟ್ಟು ಹಾಕಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Chandra Grahan 2022 | ನಾಳೆ ಚಂದ್ರ ಗ್ರಹಣ; ಯಾವ ರಾಶಿಯ ಮೇಲೆ ಏನು ಪರಿಣಾಮ?
ನವೆಂಬರ್‌ 8 ರಂದು ಎಂದರೆ ಕಾರ್ತಿಕ ಮಾಸ ಶುಕ್ಲ ಪಕ್ಷದ ಹುಣ್ಣಿಮೆಯಂದು ಮಂಗಳವಾರ ಭರಣಿ ನಕ್ಷತ್ರದ ಮೇಷ ರಾಶಿಯಲ್ಲಿ ಚಂದ್ರನಿಗೆ ರಾಹುಗ್ರಸ್ತ ಪೂರ್ಣಗ್ರಾಸಗ್ರಸ್ತೋದಯ ಗ್ರಹಣವು (Chandra Grahan 2022) ಸಂಭವಿಸಲಿದೆ. ಈ ಖಗೋಳ ವಿಸ್ಮಯವು ಜ್ಯೋತಿಷದ ಪ್ರಕಾರ ಬಹಳ ಮಹತ್ವ ಪಡೆದಿದೆ. ಆದರೆ ಇತ್ತೀಚೆಗೆ ಸಂಭವಿಸಿದ ಸೂರ್ಯ ಗ್ರಹಣದಷ್ಟು ಈ ಚಂದ್ರ ಗ್ರಹಣವು ದ್ವಾದಶ ರಾಶಿಗಳ ಮೇಲೇನು ಪರಿಣಾಮ ಬೀರುವುದಿಲ್ಲ ಎಂದು ಜ್ಯೋತಿಷ ಶಾಸ್ತ್ರ ಹೇಳಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Chandra Grahan 2022 | ಬರಿಗಣ್ಣಿನಿಂದಲೂ ನೋಡಬಹುದು ಚಂದ್ರ ಗ್ರಹಣ; ಕಣ್ಣಿಗಿಲ್ಲ ಯಾವುದೇ ಹಾನಿ

9. T20 World Cup 2024| ಮುಂದಿನ ವಿಶ್ವ ಕಪ್‌ನಲ್ಲಿ ನೆದರ್ಲೆಂಡ್ಸ್​​ಗೆ ನೇರ ಅರ್ಹತೆ! ಉಳಿದ ತಂಡಗಳ ಪಟ್ಟಿ ಪ್ರಕಟ
ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವ ಕಪ್‌ ಕೂಟ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಅದರಂತೆ 2 ಸೆಮಿಫೈನಲ್​ ಮತ್ತು ಫೈನಲ್​ ಪಂದ್ಯಗಳು ಸೇರಿ ಒಟ್ಟು ಮೂರು ಪಂದ್ಯಗಳು ನಡೆದರೆ ಕ್ರಿಕೆಟ್​ ವಿಶ್ವ ಸಮರಕ್ಕೆ ತೆರೆ ಬೀಳಲಿದೆ. ಇದಕ್ಕೂ ಮುನ್ನ ಮುಂದಿನ 2024ರ ಟಿ20 ವಿಶ್ವ ಕಪ್​(T20 World Cup 2024)ನ ಸೂಪರ್​-12ಗೆ ನೇರವಾಗಿ ಅರ್ಹತೆ ಪಡೆದ ತಂಡಗಳ ಪಟ್ಟಿ ಬಿಡುಗಡೆಗೊಂಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Vande Bharat | ಚೆನ್ನೈನಿಂದ ಮೈಸೂರಿಗೆ ಆಗಮಿಸಿದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಹೈಸ್ಪೀಡ್‌ ರೈಲು
ಚೆನ್ನೈನಿಂದ ಇಂದು ಬೆಳಗ್ಗೆ ಪ್ರಾಯೋಗಿಕ ಸಂಚಾರದ ಪ್ರಯುಕ್ತ ಹೊರಟಿದ್ದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಹೈಸ್ಪೀಡ್‌ ರೈಲು ಮೈಸೂರಿಗೆ ತಲುಪಿದೆ. ದಕ್ಷಿಣ ಭಾರತದ ಮೊಟ್ಟ ಮೊದಲ ಹೈ ಸ್ಪೀಡ್‌ ರೈಲು ಇದಾಗಿದೆ. ರೈಲ್ವೆ ಇಲಾಖೆ ಈ ಕುರಿತ ವಿಡಿಯೊವನ್ನು ಟ್ವೀಟ್‌ ಮಾಡಿದೆ. ನವೆಂಬರ್‌ 11ರಂದು ಈ ಹೈಸ್ಪೀಡ್‌ ರೈಲು ಸಂಚಾರ ಈ ಮಾರ್ಗದಲ್ಲಿ ಉದ್ಘಾಟನೆಯಾಗಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಇನ್ನಷ್ಟು ಪ್ರಮುಖ ಸುದ್ದಿಗಳು

🔴 ಕೆಜಿಎಫ್‌-2 ಹಾಡು ಅನಧಿಕೃತ ಬಳಕೆ: ಕಾಂಗ್ರೆಸ್‌ ಟ್ವಿಟರ್‌ ಅಕೌಂಟ್‌ ಬ್ಲಾಕ್‌ ಮಾಡಲು ಕೋರ್ಟ್‌ ಆದೇಶ
🔴 Tirupati Temple | ವಿಪ್ರೊಗಿಂತಲೂ ತಿರುಪತಿ ದೇವಸ್ಥಾನದ ಆಸ್ತಿ ಮೌಲ್ಯವೇ ಹೆಚ್ಚು; ಎಷ್ಟಿದೆ ಗೊತ್ತಾ ತಿಮ್ಮಪ್ಪನ ಸಂಪತ್ತು?
🔴 Virat Kohli | ವಿರಾಟ್‌ ಕೊಹ್ಲಿಗೆ ಅಕ್ಟೋಬರ್‌ ತಿಂಗಳ ಐಸಿಸಿ ಶ್ರೇಷ್ಠ ಆಟಗಾರ ಪ್ರಶಸ್ತಿ
🔴 ರಕ್ತದ ಮಾದರಿ ಪಡೆಯುವಾಗ ನವಜಾತ ಶಿಶು ಸಾವು; ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ಆರೋಪ
🔴 Chinese Spy Ship | ಚೀನಾ ಬೇಹುಗಾರಿಕೆ ಹಡಗು ಭಾರತ ಪ್ರವೇಶಿಸದಂತೆ ತಡೆಯಲು ನಿರ್ಧಾರ, ನೆರೆ ರಾಷ್ಟ್ರಕ್ಕೆ ಸೆಡ್ಡು

Exit mobile version