ಬೆಂಗಳೂರು: ಮುಂಬರುವ ಚುನಾವಣೆ ದೃಷ್ಟಿಯಲ್ಲಿಯೂ ತನಗೆ ಅನುಕೂಲವಾಗಬಹುದು ಎಂದು ನಂಬಿರುವ ಸರ್ಕಾರ, ಎಸ್‌ಸಿಎಸ್‌ಟಿ ಮೀಸಲಾತಿ ಹೆಚ್ಚಳವನ್ನು, ಅಧಿವೇಶನದವರೆಗೆ ಕಾಯದೆ ಸುಗ್ರೀವಾಜ್ಞೆ ಮೂಲಕವೇ ಜಾರಿ ಮಾಡಲು ನಿರ್ಧರಿಸಿದೆ. ಪುನೀತ್ ರಾಜಕುಮಾರ್ ಪರ್ವ ಶುಕ್ರವಾರ ನಡೆಯಲಿದೆ, ಕೇವಲ ಒಂದೂವರೆ ತಿಂಗಳ ಆಡಳಿತದ ನಂತರ ಬ್ರಿಟನ್ ಪ್ರಧಾನಿ ರಾಜೀನಾಮೆ ನೀಡಿದ್ದಾರೆ, ಭಯೋತ್ಪಾದಕರ ರಕ್ಷಣೆಗೆ ಹಿಂದಿನಂತೆ ಈಗಲೂ ಚೀನಾ ನಿಂತಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. SCST Reservation | ಸುಗ್ರೀವಾಜ್ಞೆ ಮೂಲಕ ಹೆಚ್ಚಳಕ್ಕೆ ನಿರ್ಧಾರ, ಮುಸ್ಲಿಮ್ ಮೀಸಲಾತಿಗೆ ಕತ್ತರಿ?
ಪರಿಶಿಷ್ಟ ಜಾತಿ(ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲು ಹೆಚ್ಚಳ(SCST Reservation)ವನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ರಾಜ್ಯ ಸಚಿವ ಸಂಪುಟ ಸಭೆಯು ನಿರ್ಧರಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಗುರುವಾರ ಸಂಪುಟ ಸಭೆ ನಡೆಯಿತು. ಇತ್ತೀಚೆಗಷ್ಟೇ ರಾಜ್ಯ ಸರ್ಕಾರವು, ಎಸ್‌ಸಿ ಮೀಸಲಾತಿಯನ್ನು ಶೇ.15ರಿಂದ 17 ಹಾಗೂ ಎಸ್‌ಟಿ ಮೀಸಲಾತಿಯನ್ನು ಶೇ.3ರಿಂದ 7ಕ್ಕೆ ಹೆಚ್ಚಿಸಲಾಗುವುದು ಎಂದು ಘೋಷಿಸಿತ್ತು. ಅದನ್ನೀಗ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಹೊರಟಿದೆ. ಮುಸ್ಲಿಂ ಮೀಸಲಾತಿಯನ್ನು ಕಡಿತಗೊಳಿಸಬಹುದೇ ಎಂಬ ಅನುಮಾನವನ್ನು ಕಾನೂನು ಸಚಿವ ಮಾಧುಸ್ವಾಮಿ ಅವರ ಹೇಳಿಕೆ ಹುಟ್ಟಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. ಇಂದು ಪುನೀತ ವರ್ವ | ನ.1ರಂದು ಪುನೀತ್ ರಾಜಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ
ಎಲ್ಲೆಲ್ಲೂ ‘ಗಂಧದ ಗುಡಿ’ (Gandhada Gudi) ಘಮಲು ಹರಡಿದ್ದು, ಸಿನಿಮಾ ರಿಲೀಸ್ಗೂ ಮೊದಲೇ ಅಬ್ಬರಿಸುತ್ತಿದೆ. ಈಗಾಗಲೇ ಗಂಧದ ಗುಡಿ ಚಿತ್ರದ ಪ್ರಿ ರಿಲೀಸ್ ಇವೆಂಟ್ನ ಭರ್ಜರಿಯಾಗಿ ಆಯೋಜಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದು, ‘ಪುನೀತ್ ಪರ್ವ’ ಹೆಸರಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಸಮಾರಂಭ ನಡೆಯಲಿದೆ. ಕಾರ್ಯಕ್ರಮಕ್ಕೆ ಅತಿಥಿಯಾಗಿ ಟಾಲಿವುಡ್ ಸ್ಟಾರ್ ನಂದಮೂರಿ ಬಾಲಕೃಷ್ಣ, ತಮಿಳು ನಟರಾದ ಸೂಪರ್ ಸ್ಟಾರ್ ಸೂರ್ಯ ಹಾಗೂ ಕಮಲ್ ಹಾಸನ್ ಆಗಮಿಸಲಿದ್ದಾರೆ. ಈ ಮೂಲಕ ಅಕ್ಟೋಬರ್ 21ರಂದು ದೇಶವೇ ಬೆಂಗಳೂರಿನತ್ತ ತಿರುಗಿ ನೋಡಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ. ನ.1ರಂದು ಪುನೀತ್ ರಾಜಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ, ಇದಕ್ಕಾಗಿ ಸಕಲ ಸಿದ್ಧತೆ ನಡೆಯುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
3. Kantara Movie | ನಟ ಚೇತನ್‌ಗೆ ವಿರುದ್ಧ ದೂರು ದಾಖಲು; ಚಲನಚಿತ್ರಕ್ಕೆ ಆಸ್ಕರ್ ನೀಡಲು ಒತ್ತಾಯ
ಕಾಂತಾರ ಸಿನಿಮಾದ (Kantara Movie) ಪ್ರಮುಖ ಭಾಗವಾಗಿದ್ದ ಭೂತಕೋಲ ಆಚರಣೆಯು ಹಿಂದು ಸಂಸ್ಕೃತಿ ಭಾಗವಲ್ಲ ಎಂದು ಹೇಳಿದ್ದ ನಟ ಚೇತನ್‌ಗೆ ಸಂಕಷ್ಟ ಎದುರಾಗಿದ್ದು, ನಟನ ವಿರುದ್ಧ ಉಡುಪಿಯ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಿಂದು ಜಾಗರಣಾ ವೇದಿಕೆಯವರು ದೂರು ದಾಖಲಾಗಿದ್ದು, ಕ್ರಮಕ್ಕೆ ಒತ್ತಾಯಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ. ಆಸ್ಕರ್ ಅವಾರ್ಡ್‌ಗೆ ಕಾಂತಾರ ನಾಮಿನೇಟ್ ಮಾಡಿ ಎಂದು ಶುರುವಾಯ್ತು ಟ್ವಿಟರ್ ಆಂದೋಲನ!. ಭೂತಾರಾಧನೆ ಮಾಡುವ ದೈವನರ್ತಕರಿಗೆ ಸರ್ಕಾರದಿಂದ ಮಾಸಾಶನ ಎಂದು ಸಚಿವ ಸುನಿಲ್ ಕುಮಾರ್ ಘೋಷಣೆ.
4. ಜಿ.ಟಿ. ದೇವೇಗೌಡ ಮನೆ ಬಾಗಿಲಿಗೆ ಎಚ್.ಡಿ. ದೇವೇಗೌಡ; ಕಾಲಿಗೆ ಬಿದ್ದು ಕಣ್ಣೀರಿಟ್ಟ ಜಿಟಿಡಿ
ಕಳೆದ ಒಂದೂವರೆ ವರ್ಷದಿಂದಲೇ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದ ಹಿರಿಯ ರಾಜಕಾರಣಿ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅವರ ಮನೆಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಭೇಟಿ ನೀಡಿದ್ದಾರೆ. ಈ ಮೂಲಕ ವರ್ಷಗಳ ಮುನಿಸಿಗೆ ತೆರೆ ಬಿದ್ದಿದೆ. ಶಾಸಕ ಜಿ.ಟಿ.ದೇವೇಗೌಡ ಅವರು ಜೆಡಿಎಸ್‌ನಿಂದ ಬಹುಪಾಲು ದೂರವಾಗಿ ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ಹಬ್ಬಿತ್ತು. ಈ ಮಧ್ಯೆ ದಳಪತಿಗಳ ಜತೆ ಮಾತುಕತೆಗಳೂ ನಡೆದಿರಲಿಲ್ಲ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. Britain PM | ಬ್ರಿಟನ್ ಪಿಎಂ ಲಿಜ್ ಟ್ರುಸ್ ವಿರುದ್ಧ ಬಂಡಾಯ! ರಿಷಿ ಸುನಕ್‌ಗೆ ಒಲಿಯುತ್ತಾ ಹುದ್ದೆ?
ಇತ್ತೀಚೆಗಷ್ಟೇ ಬ್ರಿಟನ್ ಪ್ರಧಾನಿ(Britain PM)ಯಾಗಿರುವ ಲಿಜ್ ಟ್ರುಸ್ ಅವರನ್ನು ಪದಚ್ಯುತಗೊಳಿಸಿ, ಆ ಜಾಗಕ್ಕೆ ಭಾರತೀಯ ಮೂಲದ ರಿಷಿ ಸುನಕ್ ಅವರನ್ನು ಕರೆ ತರುವ ಪ್ರಯತ್ನ ನಡೆದಿದೆಯಾ? ಹೌದು, ಇಂಥೊಂದು ತಂತ್ರವನ್ನು ಕನ್ಸರ್ವೇಟಿವ್ ಪಕ್ಷದ ಕಾರ್ಯಕರ್ತರು ನಡೆಸುತ್ತಿದ್ದಾರೆಂಬ ವರದಿಗಳಿವೆ. ಯಾಕೆಂದರೆ, ಆ ಪಕ್ಷದ ಅರ್ಧದಷ್ಟು ಕಾರ್ಯಕರ್ತರಿಗೆ ತಪ್ಪಾದ ವ್ಯಕ್ತಿಯನ್ನು ಪ್ರಧಾನಿ ಹುದ್ದೆಗೆ ಆಯ್ಕೆ ಮಾಡಲಾಗಿದೆ ಎಂದು ಪಶ್ಚಾತ್ತಾಪ ಪಡುತ್ತಿದ್ದಾರಂತೆ! ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. PFI Plot | ರಾಮಮಂದಿರ ಸ್ಫೋಟಿಸಲು ಸಂಚು, ಸಂಘಟನೆ ಮೇಲೆ ನಿಗಾ ಎಂದ ಸಿಎಂ ಬೊಮ್ಮಾಯಿ
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರವನ್ನು ಸ್ಫೋಟಿಸಿ ಬಾಬ್ರಿ ಮಸೀದಿ ನಿರ್ಮಿಸಲು ಇತ್ತೀಚೆಗಷ್ಟೇ ನಿಷೇಧಕ್ಕೀಡಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI Plot) ಸಂಚು ರೂಪಿಸಿದೆ ಎಂಬ ಮಾಹಿತಿ ಲಭ್ಯವಾದ ಬೆನ್ನಲ್ಲೇ ರಾಜ್ಯದಲ್ಲೂ ಸಂಘಟನೆ ಮೇಲೆ ಕಣ್ಣಿಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. ಮಳೆ ಅವಾಂತರ | ನೀರಿನಲ್ಲಿ ಕೊಚ್ಚಿಹೋದ ಬಾಲಕಿಯ ದೇಹ ಗೂಡ್ಸ್ ವಾಹನದಲ್ಲಿ ರವಾನೆ!
ಚನ್ನರಾಯಪಟ್ಟಣ ತಾಲೂಕಿನ ದಡ್ಡಿಹಳ್ಳಿಯಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ೧೧ ವರ್ಷದ ಬಾಲಕಿ ರಂಜಿತಾಳ ಮೃತದೇಹವನ್ನು ಆಸ್ಪತ್ರೆಗೆ ಮನೆಗೆ ಒಯ್ಯಲು ಆಂಬ್ಯುಲೆನ್ಸ್ ಸಿಗದೆ ಪರದಾಡಿದ ಪೋಷಕರು ಕೊನೆಗೆ ಕಟ್ಟಿಗೆ ಸಾಗಿಸುವ ವಾಹನದಲ್ಲಿ ಸರಕಿನಂತೆ ಶವವನ್ನು ಮನೆಗೆ ಒಯ್ಯಬೇಕಾಯಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. ಮುರುಘಾ ಮಠದ ವಿದ್ಯಾರ್ಥಿನಿಲಯದಲ್ಲಿದ್ದ ಅಷ್ಟೂ ಹೆಣ್ಣು ಮಕ್ಕಳ ಆಪ್ತ ಸಮಾಲೋಚನೆ
ಮುರುಘಾ ಶರಣರು ಮಠದ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿನಿಯರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ಬೆನ್ನಲ್ಲೇ ಮತ್ತೆ ನಾಲ್ಕು ಮಂದಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗಿದ್ದಾರೆಂಬ ದೂರು ಬಂದಿದ್ದ ಹಿನ್ನೆಲೆಯಲ್ಲಿ ಶ್ರೀಮಠದ ಹಾಸ್ಟೆಲ್‌ನಲ್ಲಿ ಓದುತ್ತಿದ್ದ ಎಲ್ಲ ಹೆಣ್ಣುಮಕ್ಕಳಿಗೂ ಆಪ್ತ ಸಮಾಲೋಚನೆ ನಡೆಸುವಂತೆ ಮಕ್ಕಳ ರಕ್ಷಣಾ ನಿರ್ದೇಶನಾಲಯವು ಚಿತ್ರದುರ್ಗ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಸೂಚಿಸಿ ಆದೇಶ ಹೊರಡಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. ಮುಂಬೈ ದಾಳಿ ರೂವಾರಿ ಹಫೀಜ್ ಪುತ್ರನ ಕಪ್ಪುಪಟ್ಟಿಗೆ ಸೇರಿಸುವ ಪ್ರಸ್ತಾಪಕ್ಕೆ ಚೀನಾ ಮತ್ತೆ ಅಡ್ಡಿ
ಪಾಕಿಸ್ತಾನ ಎಂತಹ ಹೀನ ಕೃತ್ಯವೇ ಎಸಗಲಿ, ಭಯೋತ್ಪಾದನೆಗೇ ಬೆಂಬಲ ನೀಡಲಿ, ಚೀನಾ ಮಾತ್ರ ಅದರ ಪರವಾಗಿ ವಕಾಲತ್ತು ವಹಿಸುತ್ತದೆ. ವ್ಯಾಪಾರ ವಿಸ್ತರಣೆ, ಭಾರತದ ವಿರುದ್ಧ ಪಾಕ್ ಕುತಂತ್ರವನ್ನು ಗಮನದಲ್ಲಿರಿಸಿಕೊಂಡು ಕಮ್ಯುನಿಸ್ಟ್ ರಾಷ್ಟ್ರವು ಜಾಗತಿಕ ವೇದಿಕೆಗಳಲ್ಲೂ ಪಾಕ್ ಪರ ನಿಲ್ಲುತ್ತದೆ. ಇದಕ್ಕೆ ನಿದರ್ಶನ ಎಂಬಂತೆ ಮುಂಬೈ ದಾಳಿಯ ರೂವಾರಿ, ಲಷ್ಕರೆ ತಯ್ಬಾ ಉಗ್ರ ಹಫೀಜ್ ಸಯೀದ್ ಪುತ್ರ ಹಫೀಜ್ ತಲಾಹ್ ಸಯೀದ್‌ನನ್ನು ಕಪ್ಪುಪಟ್ಟಿಗೆ ಸೇರಿಸುವ ಭಾರತದ ಪ್ರಸ್ತಾಪಕ್ಕೆ ಚೀನಾ ಅಡ್ಡಗಾಲು ಹಾಕಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. ವಿಸ್ತಾರ Explainer | ಭಾರತವನ್ನು ಎದುರು ಹಾಕಿಕೊಂಡರೆ ಪಾಕಿಸ್ತಾನ ಕ್ರಿಕೆಟ್ ಬರ್ಬಾದ್; ಯಾಕೆ ಗೊತ್ತೇ?
ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಕ್ರಿಕೆಟ್ ಪಂದ್ಯವೆಂದರೆ ಅದೊಂದು ಮಿನಿ ಸಮರ. ಎರಡೂ ದೇಶಗಳ ನಡುವಿನ ರಾಜಕೀಯ ವೈಷಮ್ಯ ಕ್ರಿಕೆಟ್ ಪಂದ್ಯದ ವೇಳೆಯೂ ಎದ್ದು ಕಾಣುತ್ತದೆ ಹಾಗೂ ಕೊನೇ ತನಕ ಜಿದ್ದಾಜಿದ್ದಿನಿಂದಲೇ ಕೂಡಿರುತ್ತದೆ. ತೋಳು ತಟ್ಟಿ ಪಂಥಾಹ್ವಾನ ನೀಡುವುದು, ಗೆದ್ದ ಮೇಲೆ ಬೆನ್ನು ತಟ್ಟಿಕೊಳ್ಳುವುದು, ಪರಸ್ಪರ ನಿಂದನೆ, ಕೈ ಕೈ ಹಿಸುಕಿಕೊಳ್ಳುವುದು, ಒಂದೆರಡು ಟಿವಿ ಸೆಟ್‌ಗಳು ಉಡೀಸ್ ಆಗುವುದು ಮಾಮೂಲು. ಇತ್ತಂಡಗಳ ನಡುವಿನ ಹಣಾಹಣಿಯೊಂದಕ್ಕೆ ವೇದಿಕೆ ಸಜ್ಜುಗೊಳ್ಳುತ್ತಿದ್ದಂತೆ ಆರಂಭಗೊಳ್ಳುವ ಚರ್ಚೆ, ವಿಶ್ಲೇಷಣೆ, ಮೂದಲಿಕೆಗಳು ಪಂದ್ಯದ ಫಲಿತಾಂಶ ಪ್ರಕಟಗೊಂಡ ನಂತರವೂ ಹಲವು ದಿನಗಳ ಕಾಲ ಮುಂದುವರಿಯುತ್ತದೆ. ದೇಶ ವಿಭಜನೆ ಬಳಿಕ ನಡೆದ ೧೯೫೨ರಲ್ಲಿ ನಡೆದ ಮೊದಲ ಸರಣಿಯಲ್ಲಿ ಆರಂಭಗೊಂಡ ಈ ಜಿದ್ದು ಈಗಲೂ ಮುಂದುವರಿದಿದ್ದು, ಕೊನೆಯಾಗುವ ಯಾವ ಲಕ್ಷಣವೂ ತೋರುತ್ತಿಲ್ಲ. ಏತನ್ಮಧ್ಯೆ, ಭಾರತ ಹಾಗೂ ಪಾಕಿಸ್ತಾನ ನಡುವಿನ ರಾಜಕೀಯ ಸಂಬಂಧವೂ ದಿನದಿಂದ ದಿನಕ್ಕೆ ಹಳಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಇನ್ನಷ್ಟು ಬಿಗಡಾಯಿಸಿದೆ. ಹೀಗೆ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ಜಿದ್ದು ಆರಂಭವಾಗಿದ್ದು ಯಾವಾಗ, ಎರಡೂ ತಂಡಗಳ ನಡುವಿನ ಪಂದ್ಯದ ಕಿಮ್ಮತ್ತೇನು, ಈ ದೇಶಗಳ ನಡುವಿನ ವೈರತ್ವ ಕೊನೆಯಾಗಬಹುದೇ ಎಂಬಿತ್ಯಾದಿ ವಿಷಯಗಳ ಬಗ್ಗೆ ಸಂಕ್ಷಿಪ್ತ ನೋಟ ಇಲ್ಲಿದೆ.ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಪ್ರಮುಖ ಸುದ್ದಿಗಳು
✅Bus Problem | ರಸ್ತೆ ಹದಗೆಟ್ಟಿದ್ದಕ್ಕೆ ಮುಖ್ಯಮಂತ್ರಿ ಕ್ಷೇತ್ರದಲ್ಲಿಯೇ ಸಂಚಾರ ನಿಲ್ಲಿಸಿದ ಸಾರಿಗೆ ಬಸ್‌ಗಳು!
✅ರಾಜ್ಯಾದ್ಯಂತ ಎನ್‌ಪಿಎಸ್ ಸಂಕಲ್ಪ ಯಾತ್ರೆ: “ಮಾಡು ಇಲ್ಲವೇ ಮಡಿ” ಹೋರಾಟಕ್ಕೆ ಸಜ್ಜು
✅Narendra Modi | ಗುಜರಾತ್‌ನಲ್ಲಿ ಮಕ್ಕಳ ಜತೆ ಬೆಂಚ್ ಮೇಲೆ ಕುಳಿತು ಪಾಠ ಆಲಿಸಿದ ಪ್ರಧಾನಿ ಮೋದಿ
✅ಮಕ್ಕಳ ಕಥೆ | ಬಾಳೆ ಬಂಗಾರ | ಬುದ್ಧಿ ಕಲಿತ ತಪನ್