Bus Problem | ರಸ್ತೆ ಹದಗೆಟ್ಟಿದ್ದಕ್ಕೆ ಮುಖ್ಯಮಂತ್ರಿ ಕ್ಷೇತ್ರದಲ್ಲಿಯೇ ಸಂಚಾರ ನಿಲ್ಲಿಸಿದ ಸಾರಿಗೆ ಬಸ್‌ಗಳು! - Vistara News

ಕರ್ನಾಟಕ

Bus Problem | ರಸ್ತೆ ಹದಗೆಟ್ಟಿದ್ದಕ್ಕೆ ಮುಖ್ಯಮಂತ್ರಿ ಕ್ಷೇತ್ರದಲ್ಲಿಯೇ ಸಂಚಾರ ನಿಲ್ಲಿಸಿದ ಸಾರಿಗೆ ಬಸ್‌ಗಳು!

Bus Problem | ಸವಣೂರು ತಾಲೂಕಿನ ಗ್ರಾಮೀಣ ಭಾಗದಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದೆ. ರಸ್ತೆಗಳು ಹದಗೆಟ್ಟಿದ್ದಕ್ಕೆ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಸಾರಿಗೆ ಇಲಾಖೆ ನೋಟಿಸ್‌ನಲ್ಲಿ ಉಲ್ಲೇಖಿಸಿದೆ.

VISTARANEWS.COM


on

ಸಿಎಂ ಬೊಮ್ಮಾಯಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹಾವೇರಿ: ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ರಸ್ತೆಗಳು ಮಾತ್ರ ದುರಸ್ತಿಯಾಗುತ್ತಿಲ್ಲ. ಉತ್ತಮ ರಸ್ತೆಗಳು ಇಲ್ಲವೆಂಬ ಕೂಗುಗಳು ಕೇಳಿಬರುತ್ತಿರುವ ಮಧ್ಯದಲ್ಲೇ, ರಸ್ತೆಗಳು ಅತಿಯಾಗಿ ಹದಗೆಟ್ಟಿವೆ (Bus Problem) ಎಂಬ ಕಾರಣ ನೀಡಿ, ಮುಖ್ಯಮಂತ್ರಿಯವರ ಕ್ಷೇತ್ರದಲ್ಲಿ ಸಾರಿಗೆ ಇಲಾಖೆ ಬಸ್‌ ಸಂಚಾರವನ್ನೇ ಸ್ಥಗಿತಗೊಳಿಸಿದೆ.

ಸವಣೂರು ತಾಲೂಕಿನ ಗ್ರಾಮೀಣ ಭಾಗದಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಹದಗೆಟ್ಟ ರಸ್ತೆ ಹಿನ್ನೆಲೆ ಬಸ್ ಸಂಚಾರ ಬಂದ್ ಮಾಡುತ್ತಿರುವುದಾಗಿ ಸಾರಿಗೆ ಇಲಾಖೆ ಕಾರಣ ನೀಡಿದೆ. ಸವಣೂರು ಗ್ರಾಮೀಣ ಭಾಗದ ರಸ್ತೆಗಳು ಬಹಳವೇ ಹದಗೆಟ್ಟಿದ್ದು, ಎಲ್ಲೆಂದರಲ್ಲಿ ಗುಂಡಿಗಳೇ ಇವೆ.

ಗೋನಾಳ, ಇಚ್ಚಂಗಿ, ಹೊಸರಿತ್ತಿ, ಕಲಕೋಟಿ, ಹತ್ತಿಮತ್ತೂರು, ಕಾರಡಗಿ ಸೇರಿದಂತೆ ಹಲವು ಮಾರ್ಗದಲ್ಲಿ ಬಸ್ ಸಂಚಾರ ಬಂದ್ ಮಾಡಲಾಗಿದೆ. ಇದು ಸಿಎಂ ಬೊಮ್ಮಾಯಿ ಅವರ ಕ್ಷೇತ್ರವಾಗಿದ್ದರೂ ಸಹ ರಸ್ತೆಗಳು ತೀವ್ರವಾಗಿ ಹದಗೆಟ್ಟಿವೆ ಎನ್ನಲಾಗಿದೆ.

ಇಲ್ಲಿ ಗ್ರಾಮೀಣ ಭಾಗಕ್ಕೆ ಹೋಗುವ ಬಸ್‌ಗಳು ಮರಳಿ ಬರುತ್ತಿಲ್ಲ. ರಸ್ತೆ ಮಧ್ಯವೇ ಕೆಟ್ಟು ನಿಲ್ಲುತ್ತಿವೆ. ರಸ್ತೆ ಗುಂಡಿಗಳಿಂದ ಬಸ್‌ಗಳು ದುರಸ್ತಿಗೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಸವಣೂರು ಬಸ್ ನಿಲ್ದಾಣದಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಡಿಪೋ ಮ್ಯಾನೇಜರ್ ಆದೇಶದ ಪ್ರತಿಯನ್ನು ಅಂಟಿಸಿದ್ದಾರೆ.

ಗ್ರಾಮೀಣ ಜನರ ಪರದಾಟ
ಈಗ ಏಕಾಏಕಿ ಬಸ್‌ ಸಂಚಾರವನ್ನು ಸ್ಥಗಿತಗೊಳಿಸಲಾಗಿರುವುದರಿಂದ ಗ್ರಾಮೀಣ ಭಾಗದ ನಾಗರಿಕರು ತೀವ್ರವಾಗಿ ಪರದಾಡುವಂತಾಗಿದೆ. ಅಲ್ಲದೆ, ಈ ಭಾಗದ ವಿದ್ಯಾರ್ಥಿಗಳು ಸಹ ತೊಂದರೆ ಅನುಭವಿಸುವಂತಾಗಿದೆ. ಹೀಗಾಗಿ ಗ್ರಾಮೀಣ ಜನರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಕೆಲವರು ಖಾಸಗಿ ವಾಹನಗಳಿಗೆ ಮೊರೆ ಹೋಗುತ್ತಿದ್ದಾರೆ.

ಸಿಬ್ಬಂದಿ ಹೈರಾಣ
ಈ ದಿನಗಳಲ್ಲಿ ವಿಪರೀತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆಗಳು ಹಾಳಾಗುವುದಲ್ಲದೆ, ಗುಂಡಿಗಳೂ ಕಾಣುತ್ತಿಲ್ಲ. ಈ ಮಧ್ಯೆ ರಸ್ತೆ ಮಧ್ಯೆವೇ ಹಲವಾರು ಬಸ್‌ಗಳು ಕೆಟ್ಟು ನಿಲ್ಲುತ್ತಿವೆ. ಅವುಗಳನ್ನು ದುರಸ್ತಿ ಮಾಡುವುದೇ ಸಿಬ್ಬಂದಿಗೆ ಕೆಲಸವಾಗಿದೆ. ಒಂದು ವೇಳೆ ಈ ರಸ್ತೆಗಳಲ್ಲಿ ಅವಘಡ ಸಂಭವಿಸಿದರೆ ಎಂಬ ಮುಂಜಾಗ್ರತೆ ದೃಷ್ಟಿಯಿಂದ ಸಂಚಾರ ಸ್ಥಗಿತಗೊಳಿಸಿರುವುದಾಗಿ ಸವಣೂರು ಡಿಪೋ ಮ್ಯಾನೇಜರ್ ಶೇಖರ ನಾಯಕ ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಕ್ಷೇತ್ರದಲ್ಲೇ ರಸ್ತೆಗಳು ಹದಗೆಟ್ಟಿದ್ದು, ಸಾರಿಗೆ ಇಲಾಖೆ ಹೊರಡಿಸಿರುವ ಈ ಆದೇಶವು ಸರ್ಕಾರವನ್ನು ಮುಜುಗರಕ್ಕಿಡು ಮಾಡಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Prajwal Revanna Case: ವಿಡಿಯೋ ಕಿಂಗ್‌ಪಿನ್‌ ಕಾರ್ತಿಕ್‌ ಕಾಂಗ್ರೆಸ್‌ ಅಭ್ಯರ್ಥಿ ಜೊತೆ ಕ್ಲೋಸ್;‌ ʼಕೈʼವಾಡಕ್ಕೆ ಸಾಕ್ಷಿ ಫೋಟೋಗಳು ಇಲ್ಲಿವೆ!

Prajwal Revanna Case: ವೀಡಿಯೋ ಕಿಂಗ್‌ಪಿನ್ ಕಾರ್ತಿಕ್ ಜೊತೆ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಇರುವ ಫೋಟೋಗಳು ವೈರಲ್ ಆಗುತ್ತಿದ್ದು, ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಇದನ್ನು ವೈರಲ್‌ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆ ದಿನವೇ ಕಾರ್ತಿಕ್ ಜೊತೆ ಪುಟ್ಟಿ (ಪುಟ್ಟರಾಜ್)‌ ಮನೆಯಲ್ಲಿ ಶ್ರೇಯಸ್ ಊಟ ಮಾಡಿದ್ದಾರೆ ಎನ್ನಲಾದ ಫೋಟೊಗಳು ಇವಾಗಿವೆ.

VISTARANEWS.COM


on

prajwal revanna case puttaraj shreyas patel karthik
ಪುಟ್ಟರಾಜ್‌, ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್‌ ಪಟೇಲ್‌ ಜೊತೆಗೆ ಕಾರ್ತಿಕ್
Koo

ಹಾಸನ: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ (Physical Abuse) ಹಾಗೂ ಅಶ್ಲೀಲ ವೀಡಿಯೋ (Prajwal Revanna Case) ಪ್ರಕರಣದ ವಿಡಿಯೋ ಕಿಂಗ್‌ಪಿನ್‌ ಕಾರ್ತಿಕ್‌, ಕಾಂಗ್ರೆಸ್‌ ಅಭ್ಯರ್ಥಿ ಜೊತೆಗೆ ಆತ್ಮೀಯ ಒಡನಾಟ ಹೊಂದಿರುವ ಫೋಟೋಗಳು ವೈರಲ್‌ ಆಗಿವೆ. ಈ ಮೂಲಕ, ಪ್ರಕರಣ ವೈರಲ್‌ ಆಗಿರುವುದರ ಹಿಂದಿನ ʼಕೈʼವಾಡ ಖಚಿತವಾಗಿದೆ.

ವೀಡಿಯೋ ಕಿಂಗ್‌ಪಿನ್ ಕಾರ್ತಿಕ್ ಜೊತೆ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ (Shreyas patel) ಇರುವ ಫೋಟೋಗಳು ವೈರಲ್ (photos viral) ಆಗುತ್ತಿದ್ದು, ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಇದನ್ನು ವೈರಲ್‌ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆ ದಿನವೇ ಕಾರ್ತಿಕ್ ಜೊತೆ ಪುಟ್ಟಿ (ಪುಟ್ಟರಾಜ್)‌ ಮನೆಯಲ್ಲಿ ಶ್ರೇಯಸ್ ಊಟ ಮಾಡಿದ್ದಾರೆ ಎನ್ನಲಾದ ಫೋಟೊಗಳು ಇವಾಗಿವೆ.

“ನನಗೆ ಕಾರ್ತಿಕ್ ಪರಿಚಯವೇ ಇಲ್ಲ, ಒಮ್ಮೆ ಮಾತ್ರ ಭೇಟಿಯಾಗಿದ್ದೆ” ಎಂದು ಶ್ರೇಯಸ್ ಹೇಳಿದ್ದರು. ಇದೀಗ ಶ್ರೇಯಸ್ ಜೊತೆಗೆ ಊಟ ಮಾಡುತ್ತಿರುವ ಕಾರ್ತಿಕ್ ಫೋಟೋ ವೈರಲ್ ಆಗಿದೆ. ಇದೇ ಸಂದರ್ಭದಲ್ಲಿ ಕಾರ್ತಿಕ್, ಶ್ರೇಯಸ್, ಪುಟ್ಟಿ ಕೈಕೈ ಹಿಡಿದುಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ. ಡಿ.ಕೆ ಶಿವಕುಮಾರ್ ಅವರಿಗೆ ಪೆನ್‌ಡ್ರೈವ್ ತಲುಪಿಸಿದ್ದು ಇದೇ ಪುಟ್ಟಿ ಎಂದು ವಕೀಲ ದೇವರಾಜೇಗೌಡ ಆರೋಪಿಸಿದ್ದರು.‌

prajwal revanna case puttaraj shreyas patel karthik

ಕಾರ್ತಿಕ್‌ ಮುಟ್ಟದ ಎಸ್‌ಐಟಿಯಿಂದ ತಾರತಮ್ಯ!

ಇದರೊಂದಿಗೆ, ಎಸ್‌ಐಟಿ ಈ ಪ್ರಕರಣದ ತನಿಖೆಯಲ್ಲಿ ತಾರತಮ್ಯ ಎಸಗುತ್ತಿದೆ ಎಂದು ಎಚ್‌.ಡಿ ಕುಮಾರಸ್ವಾಮಿ ಅವರು ಮಾಡಿರುವ ಆರೋಪ ನಿಜ ಎಂದು ಜನರಿಗೆ ಅನಿಸುವಂತಿದೆ. ವಕೀಲ ದೇವರಾಜೇಗೌಡಗೆ ವಿಚಾರಣೆಗೆ ಹಾಜರಾಗಲು ಮೇಲಿಂದ ಮೇಲೆ ನೋಟಿಸ್ ನೀಡಲಾಗುತ್ತಿದೆ. ಆದರೆ ಪ್ರಜ್ವಲ್ ರೇವಣ್ಣ ಮಾಜಿ ಕಾರ್ ಡ್ರೈವರ್ ಕಾರ್ತಿಕ್ ಎಲ್ಲಿ? ಪ್ರಜ್ವಲ್ ರೇವಣ್ಣ ಅವರಿಗೆ ನಡೆಯುತ್ತಿರುವ ತಲಾಶ್ ಕಾರ್ತಿಕ್‌ಗೆ ಯಾಕಿಲ್ಲ? ನಿಷ್ಪಕ್ಷಪಾತ ತನಿಖೆ, ದಕ್ಷ ಅಧಿಕಾರಿಗಳ ತಂಡದಿಂದ ಈ ಜಾಣ ಮೌನವೇಕೆ? ಎಂದು ಎಚ್‌ಡಿಕೆ ಪ್ರಶ್ನಿಸಿದ್ದರು.

ಕಾರ್ತಿಕ್‌ ದೇಶವನ್ನೇ ಬಿಟ್ಟುಹೋಗಿದ್ದು, ಅಧಿಕಾರದಲ್ಲಿರುವ ಪ್ರಭಾವಿಗಳು ಆತ ಹೊರಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದೂ ತಿಳಿಯಲಾಗಿದೆ. ಹೀಗಾಗಿ, ಕುಮಾರಸ್ವಾಮಿಯವರ ಮಾತಿನಂತೆ, ಪ್ರಾಮಾಣಿಕ ತನಿಖೆ ನಡೆಯುತ್ತಿಲ್ಲವೇ ಎಂದು ಭಾವಿಸಲು ಆಸ್ಪದವಾಗಿದೆ. ದೇವರಾಜೇಗೌಡರಿಗೆ ಮೇಲಿಂದ ಮೇಲೆ ನೋಟಿಸ್ ನೀಡಿ, ಕಾರ್ತಿಕ್ ಬಗ್ಗೆ ಚಕಾರ ಎತ್ತದಿರುವುದು ಈ ಅನುಮಾನಕ್ಕೆ ಕಾರಣವಾಗಿದೆ.

“ಎಸ್ಐಟಿಯಲ್ಲಿರುವ ದಕ್ಷರು ಎನ್ನುವ ಅಧಿಕಾರಿಗಳೇ ಕಾರ್ತಿಕ್ ಎಲ್ಲಿ? ಒಂದು ವಿಡಿಯೋ ಮಾಡಿ ಬಿಟ್ಟು ನಾಪತ್ತೆಯಾಗಿರುವ ಕಾರ್ತಿಕ್‌ಗೆ ಶೋಧ ನಡೆಯುತ್ತಿದೆಯಾ? ಕಾರ್ತಿಕ್ ಎಲ್ಲಿ, ಅತನ ವಿಚಾರಣೆ ಯಾವಾಗ, ಆತನ ಬಗ್ಗೆ ಯಾಕೆ ಚರ್ಚೆ ಇಲ್ಲ?” ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದರು.

ಸಂತ್ರಸ್ತೆಯರ ವಿಡಿಯೋ ಮೊದಲು ಇದ್ದಿದ್ದು ಕಾರ್ತಿಕ್ ಬಳಿ ಮಾತ್ರ. ಅದು ವೈರಲ್ ಆಗಲು ಕಾರಣ ಏನು ಅನ್ನುವುದನ್ನು ಪತ್ತೆ ಹಚ್ಚೋದು ಯಾವಾಗ‌? ವಿಡಿಯೋ ವೈರಲ್ ವಿಚಾರವಾಗಿ ನವೀನ್ ಮೇಲೆ ದಾಖಲಾಗಿದ್ದ ಪ್ರಕರಣದ ತನಿಖೆ ಎಲ್ಲಿಗೆ ಬಂತು? ಮೊದಲು ಸಂತ್ರಸ್ತೆಯರ ಮುಖ ಕೂಡ ಬ್ಲರ್ ಮಾಡದೇ ವಿಡಿಯೋ ವೈರಲ್ ಮಾಡಿದವರ ಕಡೆ ಯಾಕೆ ಗಮನ ನೀಡಿಲ್ಲ? ತಮ್ಮ ಪಾಡಿಗೆ ತಾವು ಇರುವ ಸಂತ್ರಸ್ತೆಯರನ್ನೂ ಪೀಡಿಸಿ ತನಿಖೆಗೆ ಕರೆಸಿಕೊಳ್ಳಲು ಮುಂದಾಗಿರುವ ಎಸ್‌ಐಟಿ, ಕಾರ್ತಿಕ್‌ ಹಾಗೂ ನವೀನ್‌ ವಿಚಾರದಲ್ಲಿ ಯಾವುದೇ ಹೆಜ್ಜೆ ಇಟ್ಟಿಲ್ಲ ಯಾಕೆ? ಇತ್ಯಾದಿ ಪ್ರಶ್ನೆಗಳು ಮೂಡಿವೆ.

ಪ್ರಜ್ವಲ್‌ ರೇವಣ್ಣ ವಿರುದ್ಧ 196 ದೇಶಗಳಿಗೆ ಇಂಟರ್‌ಪೋಲ್‌ ಮೆಸೇಜ್‌

ಬೆಂಗಳೂರು: ಲೈಂಗಿಕ ಹಗರಣದ (Pen Drive Case) ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ (Prajwal Revanna case) ಪತ್ತೆಗೆ ಬ್ಲೂ ಕಾರ್ನರ್ ನೋಟಿಸ್‌ (Blue Corner Notice) ಜಾರಿ ಮಾಡಲು ಎಸ್ಐಟಿ (SIT) ಅಧಿಕಾರಿಗಳು ಮಾಡಿದ್ದ ಮನವಿಗೆ ಸ್ಪಂದಿಸಿರುವ ಸಿಬಿಐ (CBI), ಈ ಕುರಿತು ಇಂಟರ್‌ಪೋಲ್‌ನಿಂದ (Interpol) ಮೂಲಕ 196 ದೇಶಗಳಿಗೆ ಮೆಸೇಜ್‌ ರವಾನೆ ಮಾಡಲಾಗಿದೆ. ಹೀಗಾಗಿ ಪ್ರಜ್ವಲ್‌ ಎಲ್ಲಿಯೇ ಕಂಡರೂ, ಯಾವ ದೇಶದಿಂದ ಯಾವ ದೇಶಕ್ಕೆ ಹೋದರೂ ಎಸ್‌ಐಟಿಗೆ ಮಾಹಿತಿ ಸಿಗಲಿದೆ.

ಈ ಸಂಬಂಧ ಎಸ್‌ಐಟಿ ಅಧಿಕಾರಿಗಳಿಗೆ ಇಂಟರ್‌ಪೋಲ್‌ನಿಂದ ಮಾಹಿತಿ ಬಂದಿದೆ. ಹೀಗಾಗಿ ಇನ್ನು ಮುಂದೆ ಎಸ್‌ಐಟಿ ಸಹ ಪ್ರಜ್ವಲ್‌ ವಿರುದ್ಧ ಕಾನೂನು ಸಮರ ಸಾರಲು ಹೆಚ್ಚಿನ ಅನುಕೂಲವಾದಂತೆ ಆಗಲಿದೆ. ಅಲ್ಲದೆ, ಅವರ ಪ್ರತಿ ಚಲನವಲನಗಳು, ಸಂಚಾರದ ಮಾಹಿತಿಗಳು ಲಭ್ಯವಾಗಲಿವೆ.

ಇದನ್ನೂ ಓದಿ: Prajwal Revanna Case: ಇಂದು ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಜೈಲಾ? ಬೇಲಾ?

Continue Reading

ಕರ್ನಾಟಕ

Sindhuri Vs Roopa: ಆರೋಪ-ಪ್ರತ್ಯಾರೋಪ ಬಿಟ್ಟು ಸಂಧಾನದತ್ತ ಗಮನ ಹರಿಸಿ; ರೂಪ-ರೋಹಿಣಿಗೆ ಸುಪ್ರೀಂ ಕೋರ್ಟ್‌ ಸಲಹೆ

Sindhuri Vs Roopa:ಐಪಿಎಸ್‌ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಮತ್ತು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ವಿವಾದ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಒಬ್ಬರು ಮತ್ತೊಬ್ಬರ ವಿರುದ್ಧ ಆರೋಪಗಳ ಮಾಡುವುದನ್ನು ಮುಂದುವರಿಸುವುದರ ಬದಲಾಗಿ ಸಂಧಾನ ಸಾಧ್ಯತೆಯತ್ತ ಗಮನಹರಿಸುವಂತೆ ಸಲಹೆ ನೀಡಿದೆ. ಇಬ್ಬರು ಒಮ್ಮತದ ನಿರ್ಧಾರಕ್ಕೆ ಬಂದು ಆರೋಪಗಳನ್ನು ಹಿಂಪಡೆಯಲು ಒಪ್ಪಿದರೆ ಬಾಕಿ ಇರುವ ಪ್ರಕರಣಗಳು ಸೇರಿ ಇಬ್ಬರ ನಡುವೆ ಬಾಕಿ ಇರುವ ಎಲ್ಲಾ ದಾವೆಗಳು ರದ್ದಾಗಲಿವೆ ಎಂದು ನ್ಯಾಯಾಲಯ ಹೇಳಿದೆ.

VISTARANEWS.COM


on

Sindhuri Vs Roopa
Koo

ನವದೆಹಲಿ: ಐಪಿಎಸ್‌ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಮತ್ತು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ (Sindhuri Vs Roopa) ನಡುವಿನ ವಿವಾದ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌(Supreme Court), ಒಬ್ಬರು ಮತ್ತೊಬ್ಬರ ವಿರುದ್ಧ ಆರೋಪಗಳ ಮಾಡುವುದನ್ನು ಮುಂದುವರಿಸುವುದರ ಬದಲಾಗಿ ಸಂಧಾನ ಸಾಧ್ಯತೆಯತ್ತ ಗಮನಹರಿಸುವಂತೆ ಸಲಹೆ ನೀಡಿದೆ. ಸಿಂಧೂರಿ ದೂರಿನ ಹಿನ್ನೆಲೆಯಲ್ಲಿ ದಾಖಲಾಗಿರುವ ಕ್ರಿಮಿನಲ್‌ ಮಾನಹಾನಿ ಪ್ರಕರಣ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌(Karnataka High court) ನಿರಾಕರಿಸಿರುವುದನ್ನು ಪ್ರಶ್ನಿಸಿ ರೂಪಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿಗಳಾದ ಅಭಯ್‌ ಶ್ರೀನಿವಾಸ್‌ ಓಕ್‌ ಮತ್ತು ಪಂಕಜ್‌ ಮಿತ್ತಲ್‌ ಅವರ ನೇತೃತ್ವದ ವಿಭಾಗೀಯ ಪೀಠ, ಇಬ್ಬರೂ ಅಧಿಕಾರಿಗಳು ಸಾರ್ವಜನಿಕ ಸೇವೆಯಲ್ಲಿದ್ದು, ಈ ನಡತೆ ಮುಂದುವರಿಯಬಾರದು. ಇಬ್ಬರೂ ಯುವ ಅಧಿಕಾರಿಗಳಾಗಿದ್ದು, ಈ ಹಣಾಹಣಿ ಮುಂದುವರಿದರೆ ಅವರ ವೃತ್ತಿಗೆ ಹಾನಿಯಾಗುತ್ತದೆ” ಎಂದು ಹೇಳಿದೆ.

ಇಬ್ಬರು ಒಮ್ಮತದ ನಿರ್ಧಾರಕ್ಕೆ ಬಂದು ಆರೋಪಗಳನ್ನು ಹಿಂಪಡೆಯಲು ಒಪ್ಪಿದರೆ ಬಾಕಿ ಇರುವ ಪ್ರಕರಣಗಳು ಸೇರಿ ಇಬ್ಬರ ನಡುವೆ ಬಾಕಿ ಇರುವ ಎಲ್ಲಾ ದಾವೆಗಳು ರದ್ದಾಗಲಿವೆ ಎಂದು ನ್ಯಾಯಾಲಯ ಹೇಳಿದೆ. ಕಳೆದ ಡಿಸೆಂಬರ್‌ 15ರಂದು ಪ್ರಕರಣಕ್ಕೆ ತಡೆ ನೀಡಿದ್ದ ಸುಪ್ರೀಂಕೋರ್ಟ್‌ ಮಾಧ್ಯಮಗಳಲ್ಲಿ ಮಾತನಾಡದಂತೆ ಇಬ್ಬರು ಅಧಿಕಾರಿಗಳಿಗೆ ಆದೇಶಿಸಿತ್ತು. ಅಲ್ಲದೇ, ವಿವಾದ ಬಗೆಹರಿಸಿಕೊಳ್ಳಲು ಸಂಧಾನಕ್ಕೆ ಮುಂದಾಗುವಂತೆಯೂ ಸಲಹೆ ನೀಡಿತ್ತು.

ರೂಪಾ ಮೌದ್ಗಿಲ್ ವಿರುದ್ಧ ರೋಹಿಣಿ ಸಿಂಧೂರಿ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸುಪ್ರೀಂ ಕೋರ್ಟ್ ತಡೆ
ಅಧಿಕಾರಿಗಳಿಬ್ಬರ ಕಚ್ಚಾಟಕ್ಕೆ ಸಂಬಂಧಿಸಿದಂತೆ ಸರ್ಕಾರವು ಇಲಾಖಾ ತನಿಖೆ ನಡೆಸುತ್ತಿದ್ದರೆ, ಈ ವಿಚಾರದಲ್ಲಿ ಮುಂದುವರಿಯದಂತೆ ಸರ್ಕಾರಕ್ಕೂ ಸೂಚಿಸಲಾಗುವುದು ಎಂದು ಹೇಳಿತು. ಸಿಂಧೂರಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿದ್ಧಾರ್ಥ್‌ ಲೂಥ್ರಾ ಅವರು ಸಿಂಧೂರಿ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಲು ಬಯಸಿಲ್ಲ. ಪರಿಹಾರ ಸಾಧ್ಯತೆಯ ಬಗ್ಗೆ ಸಿಂಧೂರಿ ಜೊತೆ ಚರ್ಚಿಸಲು ಹೆಚ್ಚಿನ ಕಾಲಾವಕಾಶ ಬೇಕು ಎಂದರು. ಇದನ್ನು ಆಲಿಸಿದ ಪೀಠವು ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದೆ. ಡಿ ರೂಪಾ ಪರವಾಗಿ ಹಿರಿಯ ವಕೀಲ ಆದಿತ್ಯ ಸೋಂಧಿ ವಾದಿಸಿದರು.

ಏನಿದು ಪ್ರಕರಣ?

ಐಪಿಎಸ್‌ ಅಧಿಕಾರಿಯಾಗಿರುವ ರೂಪಾ ಅವರು 2023ರ ಫೆಬ್ರವರಿ 18 ಮತ್ತು 19ರಂದು ತಮ್ಮ ಫೇಸ್‌ಬುಕ್ ಅಕೌಂಟ್‌ನಲ್ಲಿ ರೋಹಿಣಿ ಸಿಂಧೂರಿ ಅವರ ಬಗ್ಗೆ ಸಾಲು ಸಾಲು ಆರೋಪಗಳನ್ನು ಮಾಡಿದ್ದರು. ರೋಹಿಣಿ ಸಿಂಧೂರಿ ಅವರು ಮನೆ ಹಾಳು ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ. ರವಿ ಅವರ ಸಾವನ್ನೂ ತಳುಕು ಹಾಕಿದ ರೂಪಾ ಅವರು ಇತರ ಐಎಎಸ್‌ ಅಧಿಕಾರಿಗಳಿಗೆ ಅಸಭ್ಯ ಚಿತ್ರಗಳನ್ನು ರಾತ್ತಿ ಹೊತ್ತು ಕಳುಹಿಸುತ್ತಿದ್ದಾರೆ. ಬೇರೆ ಐಎಎಸ್‌ ಅಧಿಕಾರಿಗಳ ಮನೆ ಒಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ:Human trafficking: ಕೆಲಸ ಕೊಡಿಸೋದಾಗಿ ನಂಬಿಸಿ ರಷ್ಯಾ-ಉಕ್ರೇನ್‌ ಯುದ್ಧ ಪೀಡಿತ ಪ್ರದೇಶಕ್ಕೆ ರವಾನೆ-ಇಬ್ಬರು ಅರೆಸ್ಟ್‌

ಇದು ಭಾರಿ ಸಂಚಲನವನ್ನು ಸೃಷ್ಟಿಸಿತ್ತು. ಇದರ ವಿರುದ್ಧ ರೋಹಿಣಿ ಸಿಂಧೂರಿ ಅವರು ಕೋರ್ಟ್‌ ಮೆಟ್ಟಿಲು ಹತ್ತಿದ್ದರು. ಈ ನಡುವೆ, ರಾಜ್ಯ ಸರ್ಕಾರ ಇಬ್ಬರೂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಲ್ಲದೆ, ಅವರನ್ನು ಸೇವೆಯಿಂದ ಮುಕ್ತಿಗೊಳಿಸಿ ರಜೆ ಮೇಲೆ ಕಳುಹಿಸಿತ್ತು. ಇದೀಗ ವಾದ-ವಿವಾದಗಳ ಹಂತ ಮುಗಿದು ಇನ್ನು ರೂಪಾ ಮೌದ್ಗಿಲ್‌ ವಿಚಾರಣೆ ಎದುರಿಸಬೇಕಾಗುವ ಹಂತ ಬಂದಿದೆ. ಕೆಲವು ದಿನಗಳ ಹಿಂದಷ್ಟೇ ಹೈಕೋರ್ಟ್‌ ಮಾನನಷ್ಟ ಮೊಕದ್ದಮೆ ರದ್ದು ಕೋರಿದ್ದ ರೂಪಾ ಅವರ ಮನವಿಯನ್ನು ತಿರಸ್ಕರಿಸಿತ್ತು.

Continue Reading

ಕ್ರೈಂ

Hanuman Flag: ಕೆರಗೋಡು ಹನುಮಧ್ವಜ ಪ್ರಕರಣದ 3 ಹೋರಾಟಗಾರರ ಮೇಲೆ ರೌಡಿಶೀಟ್

Hanuman Flag: ಕೆರಗೋಡು ಹನುಮಧ್ವಜ ಹೋರಾಟ ದೇಶಾದ್ಯಂತ ಬಾರೀ ಸುದ್ದಿ ಮಾಡಿತ್ತು. ಹನುಮಧ್ವಜ ಹೋರಾಟದ ಸಂದರ್ಭ ಐಪಿಸಿ ಸೆಕ್ಷನ್ 143, 341, 353, 149ರ ಅಡಿಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿತ್ತು. ಅನ್ಯಕೋಮಿನವರನ್ನು ಹೆದರಿಸುವುದು, ಬೆದರಿಸುವುದು ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾರಣ ಕೊಟ್ಟು ನೋಟಿಸ್ ಜಾರಿ ಮಾಡಲಾಗಿದೆ.

VISTARANEWS.COM


on

hanuman flag keragodu mandya
Koo

ಮಂಡ್ಯ: ಕೆರಗೋಡು ಧ್ವಜಸ್ತಂಭ (Keragodu) ಹೋರಾಟ ಪ್ರಕರಣದಲ್ಲಿ, ಹನುಮಧ್ವಜ (Hanuman Flag) ಹಾರಾಡಿಸುವ ಕುರಿತು ಹೋರಾಟ ಮಾಡಿದವರ ಮೇಲೆ ರೌಡಿ ಶೀಟರ್ (Rowdy Sheet) ಅಸ್ತ್ರ ಬಳಸಲು ಗೃಹ ಇಲಾಖೆ (Home ministry) ಮುಂದಾಗಿದೆ.

ಧ್ವಜಸ್ತಂಭದಲ್ಲಿ ಹನುಮ ನೆಡಲು ಹೋರಾಟ ನಡೆಸಿದ್ದ ಮೂವರಿಗೆ ಮಂಡ್ಯದ ಕೆರಗೋಡು ಪೊಲೀಸರಿಂದ ರೌಡಿ ಶೀಟರ್ ತೆರೆಯುವ ನೋಟಿಸ್ ಜಾರಿ ಮಾಡಲಾಗಿದೆ. ಬಾಲಕೃಷ್ಣ @ ಚಿಕ್ಕಬಳ್ಳಿ ಬಾಲು, ಕಾರ್ತಿಕ್ ಮತ್ತು ಹರೀಶ್‌ಗೆ ಈ ಕುರಿತು ನೋಟೀಸ್ ನೀಡಲಾಗಿದೆ.

ಕೆರಗೋಡಿನಲ್ಲಿ ಹನುಮಧ್ವಜಕ್ಕಾಗಿ ಈ ಮೂವರು ಹೋರಾಟ ನಡೆಸಿದ್ದರು. ಕೆರಗೋಡು ಹನುಮಧ್ವಜ ಹೋರಾಟ ದೇಶಾದ್ಯಂತ ಬಾರೀ ಸುದ್ದಿ ಮಾಡಿತ್ತು. ಹನುಮಧ್ವಜ ಹೋರಾಟದ ಸಂದರ್ಭ ಐಪಿಸಿ ಸೆಕ್ಷನ್ 143, 341, 353, 149ರ ಅಡಿಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿತ್ತು. ಅನ್ಯಕೋಮಿನವರನ್ನು ಹೆದರಿಸುವುದು, ಬೆದರಿಸುವುದು ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾರಣ ಕೊಟ್ಟು ನೋಟಿಸ್ ಜಾರಿ ಮಾಡಲಾಗಿದೆ.

7 ದಿನಗಳ ಒಳಗೆ ಕೆರಗೋಡು ಪೊಲೀಸ್ ಠಾಣೆಗೆ ಹಾಜರಾಗಿ ನೋಟಿಸ್‌ಗೆ ಉತ್ತರಿಸುವಂತೆ ಸೂಚನೆ ನೀಡಲಾಗಿದೆ. ನೋಟಿಸ್ ಬಳಿಕ ಹನುಮಧ್ವಜ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದು, ಹಿಂದೂಪರ ಕಾರ್ಯಕರ್ತರನ್ನು ಹೀಗೆ ಹತ್ತಿಕ್ಕಲಾಗುತ್ತಿದೆ ಎಂದು ರಾಜ್ಯ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ.

ಏನಿದು ಮಂಡ್ಯದ ಹನುಮಧ್ವಜ ಕೇಸ್?‌

ಮಂಡ್ಯ ಜಿಲ್ಲೆಯ ಕೆರಗೋಡಿನಲ್ಲಿ ಗ್ರಾಮಸ್ಥರು ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರು ಗ್ರಾಮದ 108 ಅಡಿ ಧ್ವಜಸ್ತಂಭದಲ್ಲಿ ಹನುಮ ಧ್ವಜವನ್ನು ಹಾರಿಸಿದ್ದರು. ಜನವರಿ 22ರಂದು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿತು. ಇದರ ನೆನಪಾಗಿ ಕೆರಗೋಡು ಗ್ರಾಮದಲ್ಲಿ 108 ಅಡಿ ಎತ್ತರ ಧ್ವಜಸ್ತಂಭದ ಮೇಲೆ ಹನುಮ ಧ್ವಜ ಹಾರಿಸಲು ಗ್ರಾಮಸ್ಥರು ನಿರ್ಧರಿಸಿದ್ದರು. ಧ್ವಜ ಹಾರಿಸಲು ನಿಶ್ಚಯಿಸಿದ ಜಾಗ ಗ್ರಾಮ ಪಂಚಾಯಿತಿಗೆ ಸೇರಿದ್ದರಿಂದ ಅನುಮತಿ ಕೋರಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದರು. ಆದರೆ, ಗ್ರಾಮ ಪಂಚಾಯಿತಿ “ರಾಷ್ಟ್ರ ಧ್ವಜ ಮತ್ತು ನಾಡಧ್ವಜ” ಹೊರತುಪಡಿಸಿ ಯಾವುದೇ ಧಾರ್ಮಿಕ/ ರಾಜಕೀಯ ಧ್ವಜವನ್ನು ಹಾರಿಸುವಂತಿಲ್ಲವೆಂದು ಅನುಮತಿಯನ್ನು ನಿರಾಕರಣೆ ಮಾಡಿತ್ತು.

ಆದರೂ ಗ್ರಾಮಸ್ಥರು ಮತ್ತು ಹಿಂದು ಕಾರ್ಯಕರ್ತರು ಹನುಮ ಧ್ವಜ ಹಾರಿಸಿದ್ದರು. ಇದ್ದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಕೊನೆಗೆ ಈ ವಿಚಾರ ಮತ್ತೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬಂದಿದೆ. ಅಲ್ಲಿ 22 ಸದಸ್ಯ ಬಲದ ಗ್ರಾಮ ಪಂಚಾಯಿತಿಯಲ್ಲಿ ಹನುಮ ಧ್ವಜ ಹಾರಾಟಕ್ಕೆ 20 ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಬಳಿಕ ಗ್ರಾಮ ಪಂಚಾಯತ್​ ಸದಸ್ಯರು ನಡಾವಳಿ ರಚಿಸಿ, ವಿವಾದವನ್ನು ಇತ್ಯರ್ಥ ಪಡಿಸಿದ್ದರು.

ಆದರೆ, ಸರ್ಕಾರಿ ಜಾಗದಲ್ಲಿ ಹನುಮ ಧ್ವಜ ಹಾರಿಸಲಾಗಿದೆ, ಇದನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತ ಮೌಖಿಕ ಆದೇಶವನ್ನು ಹೊರಡಿಸಿತ್ತು. ಹೀಗಾಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೀಣಾ ಅವರು ತೆರವುಗೊಳಿಸಲು ಮುಂದಾದರು. ಇದಕ್ಕೆ ಗ್ರಾಮಸ್ಥರು ಅಡ್ಡಿಪಡಿಸಿ ಪ್ರತಿಭಟಿಸಿದ್ದರು. ಹೀಗಾಗಿ ಅಲ್ಲಿಂದ ನಿರ್ಗಮಿಸಿದ್ದ ಅಧಿಕಾರಿಗಳು ಶನಿವಾರ (ಜ.27) ರಾತ್ರಿ ಪುನಃ ಬಂದು ಹನುಮಧ್ವಜ ತೆರವಿಗೆ ಮುಂದಾದರು. ಮುಂಜಾನೆ 3 ಗಂಟೆ ಹೊತ್ತಿಗೆ ಮಂಡ್ಯ ಎಸಿ ಶಿವಮೂರ್ತಿ, ತಹಸೀಲ್ದಾರ್ ಶಿವಕುಮಾರ್ ಬಿರಾದರ್ ನೇತೃತ್ವದಲ್ಲಿ ತೆರವಿಗೆ ಮುಂದಾಗುತ್ತಿದ್ದಂತೆ ಗ್ರಾಮಸ್ಥರಿಗೆ ವಿಷಯ ತಿಳಿದು ಬಂದು ಪ್ರತಿಭಟನೆ ನಡೆಸಿದ್ದರು. ಆದರೂ ಹನುಮಧ್ವಜ ತೆರವು ಮಾಡಲಾಗಿತ್ತು.

ನಂತರ ಈ ಪ್ರಕರಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಕೈಜೋಡಿಸಿದ್ದವು. ಕೆರಗೋಡು ಹಾಗೂ ಮಂಡ್ಯದಲ್ಲಿ ಹನುಮಧ್ವಜ ಮರು ಸ್ಥಾಪನೆಗೆ ಆಗ್ರಹಿಸಿ ಪಾದಯಾತ್ರೆ ನಡೆದಿತ್ತು. ಫೆ.7ರಂದು ಮಂಡ್ಯ ಬಂದ್‌ಗೆ ಕರೆ ನೀಡಲಾಗಿತ್ತು. ಕೆರಗೋಡು ಗ್ರಾಮದಲ್ಲಿ ಮನೆಮನೆ ಮೇಲೆ ಹನುಮಧ್ವಜ ಹಾರಿಸಿ ಪ್ರತಿಭಟಿಸಲಾಗಿತ್ತು.

ಇದನ್ನೂ ಓದಿ: Hanuman Flag: ಹನುಮಧ್ವಜ ವಿವಾದ; ಇಂದು ಮಂಡ್ಯ ಬಂದ್‌ಗೆ ಹಿಂದೂ ಸಂಘಟನೆಗಳ ಕರೆ; ಬೈಕ್‌ ರ್‍ಯಾಲಿ

Continue Reading

ಕ್ರೈಂ

Prajwal Revanna Case: ಗಡುವು ಮುಗೀತು, ಬೆಂಗಳೂರಿಗೆ ಹೊರಟರಾ ಪ್ರಜ್ವಲ್‌ ರೇವಣ್ಣ?

Prajwal Revanna Case: ಈಗಾಗಲೇ ಇಂಟರ್‌ಪೋಲ್ ಮೂಲಕ 196 ದೇಶಗಳಿಗೆ ಆರೋಪಿ ಬಗ್ಗೆ ವಿವರವಾದ ಮಾಹಿತಿಯನ್ನು ಗೃಹ ಸಚಿವಾಲಯ ನೀಡಿದೆ. ವಿಚಾರಣೆಗೆ ಹಾಜರಾಗದಿದ್ದರೆ ಪ್ರಜ್ವಲ್‌ಗೆ ಮತ್ತಷ್ಟು ಸಂಕಷ್ಟ ಒದಗಲಿದೆ. ಹೀಗಾಗಿ, ಮೇ 15ರ ಮಧ್ಯರಾತ್ರಿ ಪ್ರಜ್ವಲ್ ಬೆಂಗಳೂರಿಗೆ ಬರಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಏರ್‌ಪೋರ್ಟ್ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗಿದೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ವಿರುದ್ಧ ದಾಖಲಾಗಿರುವ ಅತ್ಯಾಚಾರ (pen drive case) ಪ್ರಕರಣದಲ್ಲಿ, ಎಸ್‌ಐಟಿ (SIT) ಮುಂದೆ ಹಾಜರಾಗಲು ಪ್ರಜ್ವಲ್‌ ಕೇಳಿರುವ ಕಾಲಾವಕಾಶ ನಿನ್ನೆಗೆ ಮುಕ್ತಾಯವಾಗಿದೆ. ಆದರೆ ಎಸ್‌ಐಟಿ ಎದುರು ಅವರು ಹಾಜರಾಗುವ ಯಾವುದೇ ಸುಳಿವು ತೋರಿಸಿಲ್ಲ. ಹೀಗಾಗಿ ಪ್ರಜ್ವಲ್‌ ಮುಂದಿನ ನಡೆ ಏನು ಎಂಬ ಕುತೂಹಲ ಮೂಡಿದೆ.

ಒಂದೆಡೆ ತಂದೆ ಎಚ್‌.ಡಿ ರೇವಣ್ಣ ಅವರು ಬಂಧನಕ್ಕೊಳಗಾಗಿ ಈಗಾಗಲೇ ಎಸ್‌ಐಟಿ ಕಸ್ಟಡಿಯಲ್ಲಿದ್ದಾರೆ. ನ್ಯಾಯಾಲಯ ಅವರಿಗೆ ನಾಲ್ಕು ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಅದು ಇಂದಿಗೆ ಮುಕ್ತಾಯವಾಗುತ್ತಿದ್ದು, ಜಾಮೀನು ಅರ್ಜಿ ಇಂದು ವಿಚಾರಣೆಯಾಗಲಿದೆ. ಅವರಿಗೆ ಜೈಲಾ, ಬೇಲಾ ಎಂಬುದು ಇಂದು ಫಿಕ್ಸ್‌ ಆಗಲಿದೆ.

ಪ್ರಜ್ವಲ್‌ಗೂ, ವಿಚಾರಣೆಗೆ ಹಾಜರಾಗಲು ಏಪ್ರಿಲ್ 30ರಂದೇ ಎಸ್‌ಐಟಿ ನೋಟಿಸ್ ಕೊಟ್ಟಿದೆ. ಆದರೆ ಮೇ 1ರಂದು ತಮ್ಮ ವಕೀಲ ಅರುಣ್ ಜಿ. ಮೂಲಕ ಪ್ರಜ್ವಲ್‌ 7 ದಿನ ಕಾಲಾವಕಾಶ ಕೇಳಿದ್ದರು. “ವಿಚಾರಣೆಗೆ ಹಾಜರಾಗಲು ನಾನು ಬೆಂಗಳೂರಿನಲ್ಲಿ ಇಲ್ಲದ ಕಾರಣ, ನನ್ನ ವಕೀಲರ ಮೂಲಕ CID ಬೆಂಗಳೂರಿಗೆ ಮನವಿ ಮಾಡಿದ್ದೇನೆ. ಸತ್ಯ ಆದಷ್ಟು ಬೇಗ ಹೊರಬರಲಿದೆ” ಎಂದು ಫೇಸ್‌ಬುಕ್ ಪೋಸ್ಟ್ ಮಾಡಿದ್ದರು.

ಅದರಂತೆ ಪ್ರಜ್ವಲ್ ಪರ ವಕೀಲ ಅರುಣ್, ಎಸ್ಐಟಿ ಬಳಿ ಏಳು ದಿನ ಕಾಲಾವಕಾಶ ಕೇಳಿದ್ದರು. ಏಳು ದಿನ ಕಾಲಾವಕಾಶ ನೀಡಲು ನಿರಾಕರಿಸಿದ್ದ ಎಸ್ಐಟಿ ಅಧಿಕಾರಿಗಳು, ಕೂಡಲೇ ಹಾಜರಾಗುವಂತೆ ಹೇಳಿದ್ದರು. ಆದರೆ ಪ್ರಜ್ವಲ್‌ ಬಂದಿರಲಿಲ್ಲ. ಇದೀಗ ಪ್ರಜ್ವಲ್ ತಾವೇ ಕೇಳಿಕೊಂಡಿದ್ದ ಹಾಗೆ ವಿಚಾರಣೆಗೆ ಹಾಜರಾಗಲು ಕೇಳಿದ್ದ ಕಾಲಾವಕಾಶ ಮೇ 07ಕ್ಕೆ ಮುಕ್ತಾಯವಾಗಿದೆ.

ಈಗಾಗಲೇ ಇಂಟರ್‌ಪೋಲ್ ಮೂಲಕ 196 ದೇಶಗಳಿಗೆ ಆರೋಪಿ ಬಗ್ಗೆ ವಿವರವಾದ ಮಾಹಿತಿಯನ್ನು ಗೃಹ ಸಚಿವಾಲಯ ನೀಡಿದೆ. ವಿಚಾರಣೆಗೆ ಹಾಜರಾಗದಿದ್ದರೆ ಪ್ರಜ್ವಲ್‌ಗೆ ಮತ್ತಷ್ಟು ಸಂಕಷ್ಟ ಒದಗಲಿದೆ. ಹೀಗಾಗಿ, ಮೇ 15ರ ಮಧ್ಯರಾತ್ರಿ ಪ್ರಜ್ವಲ್ ಬೆಂಗಳೂರಿಗೆ ಬರಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಏರ್‌ಪೋರ್ಟ್ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗಿದೆ.

15ನೇ ತಾರೀಖು LH764 ವಿಮಾನದಲ್ಲಿ ಪ್ರಜ್ವಲ್ ಬರುವ ಮಾಹಿತಿಯಿದೆ. ಜರ್ಮನಿಯ ಮ್ಯುನಿಚ್ ವಿಮಾನ ನಿಲ್ದಾಣದಿಂದ ಟಿಕೆಟ್ ಬುಕ್ ಆಗಿದೆ ಎಂದು ಇಮಿಗ್ರೇಶನ್ ಇಲಾಖೆಯಿಂದ ಪೊಲೀಸರಿಗೆ ಮಾಹಿತಿ ದೊರೆತಿದೆ. ಪ್ರಜ್ವಲ್ ರೇವಣ್ಣ ಎರಡು ಬಾರಿ ಟಿಕೆಟ್ ಬುಕ್ ಮಾಡಿ ರದ್ದು ಮಾಡಿದ್ದರು. ಮೇ 15ರಂದು LH764 Munich to Bangalore ವಿಮಾನದಲ್ಲಿ ಪ್ರಯಾಣಿಸಲಿದ್ದು, ಟರ್ಮಿನಲ್ 2ಗೆ ರಾತ್ರಿ 12:30ಕ್ಕೆ ವಿಮಾನ ತಲುಪಲಿದೆ. ಈ ವಿಮಾನದಲ್ಲಿ ಪ್ರಜ್ವಲ್‌ ಬರುತ್ತಾರಾ ಅಥವಾ ಇನ್ನಷ್ಟು ಕಾಲ ಎಸ್‌ಐಟಿ ಅಧಿಕಾರಿಗಳನ್ನು ಆಟವಾಡಿಸಲಿದ್ದಾರಾ ಎಂದು ನೋಡಬೇಕಿದೆ.

ಇಂದು ರೇವಣ್ಣ ಜಾಮೀನು ಅರ್ಜಿ ವಿಚಾರಣೆ

ಮಾಜಿ ಸಚಿವ ಎಚ್.ಡಿ. ರೇವಣ್ಣ (HD Revanna) ಅವರ ಜಾಮೀನು (bail) ಅರ್ಜಿ ಇಂದು (ಮೇ 8) ವಿಚಾರಣೆಗೆ ಬರಲಿದೆ. ಬುಧವಾರ ಎಚ್‌.ಡಿ. ರೇವಣ್ಣ ಅವರ ಕಸ್ಟಡಿ ಅಂತ್ಯ ಆಗುವ ಹಿನ್ನೆಲೆ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ. ಆದರೆ, ಎಸ್‌ಐಟಿ ಅಧಿಕಾರಿಗಳು ರೇವಣ್ಣ ಅವರನ್ನು ಇನ್ನಷ್ಟು ದಿನ ಕಸ್ಟಡಿಗೆ ಕೊಡುವಂತೆ ಕೋರ್ಟ್‌ನಲ್ಲಿ ಮನವಿ ಮಾಡಲಿದ್ದಾರೆ. ಈಗಷ್ಟೇ ವಿಚಾರಣೆಯನ್ನು ಪ್ರಾರಂಭ ಮಾಡಲಾಗಿದೆ. ಅಲ್ಲದೆ, ರೇವಣ್ಣ ಸಹ ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂದು ವಾದಿಸುವ ಸಾಧ್ಯತೆ ಹೆಚ್ಚಿದೆ.

ಇನ್ನು ಜಾಮೀನು ಅರ್ಜಿ ವಿಚಾರಣೆ ಸಂಬಂಧ ನ್ಯಾಯಾಲಯ ಸಹ ಒಂದು ಪ್ರಶ್ನೆ ಎತ್ತಿದೆ. ಆರೋಪಿ ಕಸ್ಟಡಿಯಲ್ಲಿದ್ದಾಗ ಜಾಮೀನು ಅರ್ಜಿ ವಿಚಾರಣೆ ನಡೆಸಲು ಯೋಗ್ಯವೇ ಎಂಬ ಬಗ್ಗೆ ಮಂಗಳವಾರ ನಡೆದ ವಿಚಾರಣೆ ವೇಳೆ ಪ್ರಶ್ನೆ ಮಾಡಿದೆ. ಆಗ ಈ ಬಗ್ಗೆ ರೇವಣ್ಣ ಪರ ಹಾಜರಾಗಿದ್ದ ಹಿರಿಯ ವಕೀಲ ಸಿ.ವಿ.‌ ನಾಗೇಶ್ ಅವರು ಕೆಲವು ತೀರ್ಪುಗಳನ್ನು ಉಲ್ಲೇಖಿಸಿ ವಾದ ಮಂಡಿಸಿದ್ದರು.

ವಾದ ಆಲಿಸಿದ ನ್ಯಾಯಾಧೀಶರು ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ವಿಶೇಷ ಸಾರ್ವಜನಿಕ ಅಭಿಯೋಜಕರಿಗೆ ಸೂಚಿಸಿದ್ದು, ಬುಧವಾರಕ್ಕೆ ವಿಚಾರಣೆಯನ್ನು ಮುಂದೂಡಿದೆ. ಈ ವೇಳೆ ರೇವಣ್ಣ ಅವರ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ. ಒಂದು ವೇಳೆ ಜಾಮೀನು ಸಿಕ್ಕಿಲ್ಲವಾದರೆ, ಪುನಃ ಕಸ್ಟಡಿಗೆ ನೀಡಲಾಗುತ್ತದೆಯೋ? ಅಥವಾ ನ್ಯಾಯಾಂಗ ಬಂಧನಕ್ಕೊಳಪಟ್ಟು ಪರಪ್ಪನ ಅಗ್ರಹಾರ ಸೇರಲಿದ್ದಾರೋ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Prajwal Revanna case: ಪ್ರಜ್ವಲ್‌ ರೇವಣ್ಣ ವಿರುದ್ಧ 196 ದೇಶಗಳಿಗೆ ಇಂಟರ್‌ಪೋಲ್‌ ಮೆಸೇಜ್‌; ಎಲ್ಲೇ ಕಂಡರೂ ಸಿಗುತ್ತೆ ಮಾಹಿತಿ!

Continue Reading
Advertisement
prajwal revanna case puttaraj shreyas patel karthik
ಪ್ರಮುಖ ಸುದ್ದಿ6 mins ago

Prajwal Revanna Case: ವಿಡಿಯೋ ಕಿಂಗ್‌ಪಿನ್‌ ಕಾರ್ತಿಕ್‌ ಕಾಂಗ್ರೆಸ್‌ ಅಭ್ಯರ್ಥಿ ಜೊತೆ ಕ್ಲೋಸ್;‌ ʼಕೈʼವಾಡಕ್ಕೆ ಸಾಕ್ಷಿ ಫೋಟೋಗಳು ಇಲ್ಲಿವೆ!

Alia Bhatt Deep Fake Wamiqa Gabbi face replaced
ಬಾಲಿವುಡ್15 mins ago

Alia Bhatt Deep Fake: ಆಲಿಯಾ ಭಟ್‌ ಡೀಪ್‌ಫೇಕ್‌ ವಿಡಿಯೊ ವೈರಲ್‌! ಅಸಲಿ ಮುಖ ಯಾರದ್ದು?

Sindhuri Vs Roopa
ಕರ್ನಾಟಕ19 mins ago

Sindhuri Vs Roopa: ಆರೋಪ-ಪ್ರತ್ಯಾರೋಪ ಬಿಟ್ಟು ಸಂಧಾನದತ್ತ ಗಮನ ಹರಿಸಿ; ರೂಪ-ರೋಹಿಣಿಗೆ ಸುಪ್ರೀಂ ಕೋರ್ಟ್‌ ಸಲಹೆ

Puttakkana Makkalu umashree acting praised
ಕಿರುತೆರೆ19 mins ago

Puttakkana Makkalu: ʻಪುಟ್ಟಕ್ಕʼನ ನಟನೆಗೆ ಕೋಟಿ ಕೋಟಿ ನಮನ ಅಂತಿದ್ದಾರೆ ಫ್ಯಾನ್ಸ್‌!

hanuman flag keragodu mandya
ಕ್ರೈಂ59 mins ago

Hanuman Flag: ಕೆರಗೋಡು ಹನುಮಧ್ವಜ ಪ್ರಕರಣದ 3 ಹೋರಾಟಗಾರರ ಮೇಲೆ ರೌಡಿಶೀಟ್

Human trafficking
ದೇಶ1 hour ago

Human trafficking: ಕೆಲಸ ಕೊಡಿಸೋದಾಗಿ ನಂಬಿಸಿ ರಷ್ಯಾ-ಉಕ್ರೇನ್‌ ಯುದ್ಧ ಪೀಡಿತ ಪ್ರದೇಶಕ್ಕೆ ರವಾನೆ-ಇಬ್ಬರು ಅರೆಸ್ಟ್‌

Kanakalatha Passes Away Film serial actor Mollywood
ಮಾಲಿವುಡ್1 hour ago

Kanakalatha Passes Away: 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ನಟಿ ಇನ್ನಿಲ್ಲ

Prajwal Revanna Case
ಕ್ರೈಂ2 hours ago

Prajwal Revanna Case: ಗಡುವು ಮುಗೀತು, ಬೆಂಗಳೂರಿಗೆ ಹೊರಟರಾ ಪ್ರಜ್ವಲ್‌ ರೇವಣ್ಣ?

Laapataa Ladies Phool At Met Gala At Photoshop
ಬಾಲಿವುಡ್2 hours ago

Laapataa Ladies: ಮೆಟ್ ಗಾಲಾ ರೆಡ್ ಕಾರ್ಪೆಟ್​ನಲ್ಲಿ ‘ಲಾಪತಾ ಲೇಡೀಸ್’ನಟಿ! ಅಸಲಿ ಸಂಗತಿ ಏನು?

chikkaballapur woman murder case
ಕ್ರೈಂ3 hours ago

Murder Case: ಪ್ರಿಯತಮೆ ಎದುರೇ ಮಹಿಳೆಯ ಅತ್ಯಾಚಾರ ಮಾಡಿ ಕೊಂದ ಪಾಪಿ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ7 hours ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ15 hours ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ18 hours ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ20 hours ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ2 days ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ2 days ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ2 days ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ3 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ3 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಟ್ರೆಂಡಿಂಗ್‌