Site icon Vistara News

ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಿದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಕೊಡಗು!

Year in Search, Kodagu in the list of most searched travel destinations on Google

ಬೆಂಗಳೂರು: 2023 ಮುಕ್ತಾಯಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೊಸ ವರ್ಷದ ಸ್ವಾಗತಕ್ಕೆ ಎಲ್ಲರೂ ಸಜ್ಜಾಗುತ್ತಿದ್ದಾರೆ. ಈ ಹೊತ್ತಿನಲ್ಲಿ ಗೂಗಲ್ (Google Search) ತನ್ನ ಚಟುವಟಿಕೆಗಳ ಮಾಹಿತಿಯನ್ನ ಬಿಡುಗಡೆ ಮಾಡಿದೆ. ಈ ವರ್ಷ ಗೂಗಲ್‌ನಲ್ಲಿ ಭಾರತೀಯರು ಅತಿ ಹೆಚ್ಚು ಹುಡುಕಿದ ಪ್ರವಾಸಿ ತಾಣಗಳ ಪಟ್ಟಿಯನ್ನು ಗೂಗಲ್ ಇಂಡಿಯಾ (Google India) ಇಯರ್ ಇನ್ ಸರ್ಚ್ (Year In Search) ಹೆಸರಿನಲ್ಲಿ ಬಿಡುಗಡೆ ಮಾಡಿದೆ. ಕನ್ನಡಿಗರಾಗಿ ನಾವು ಖುಷಿ ಪಡಲು ಕಾರಣವಿದೆ! ಏನೆಂದರೆ, ಈ ಟಾಪ್ 10 ಪಟ್ಟಿಯಲ್ಲಿ ಕೊಡಗು(Kodagu) 7ನೇ ಸ್ಥಾನದಲ್ಲಿದೆ. ಅಂದರೆ, ದೇಶದ ಬಹುತೇಕ ಜನರು ತಮ್ಮ ನೆಚ್ಚಿನ ಪ್ರವಾಸಿ ತಾಣ ಕೊಡಗು(Coorg) ಆಯ್ಕೆ ಮಾಡಿಕೊಂಡಿರುತ್ತಾರೆಂಬುದು ಇದರಿಂದ ಖಾತ್ರಿಯಾಗುತ್ತದೆ. ಕಾಶ್ಮೀರ(Kashmir), ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ (Andaman and Nicobar Islands) ಭಾರತೀಯರ ಇತರ ನೆಚ್ಚಿನ ಪ್ರವಾಸಿ ತಾಣಗಳಾಗಿವೆ. ಸರ್ಚ್ ಇನ್ ಇಯರ್ ಪೂರ್ಣ ಪಟ್ಟಿಗೆ ಇಲ್ಲಿ ಕ್ಲಿಕ್ ಮಾಡಿ.

ಈ ಪಟ್ಟಿಯಲ್ಲಿ ಟಾಪ್‌ ಸ್ಥಾನದಲ್ಲಿ ವಿಯೆಟ್ನಾಮಾ ಇದ್ದರೆ, ನಂತರದ ಸ್ಥಾನದಲ್ಲಿ ಗೋವಾ, ಇಂಡೋನೇಷ್ಯಾ ರಾಜಧಾನಿ ಬಾಲಿ, ಶ್ರೀಲಂಕಾ, ಥಾಯ್ಲೆಂಡ್, ಕಾಶ್ಮೀರ, ಕೊಡಗು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ಇಟಲಿ, ಸ್ವಿಟ್ಜರ್ಲ್ಯಾಂಡ್‌ಗಳಿವೆ. ಈ ಟಾಪ್‌ 10 ಪಟ್ಟಿಯಲ್ಲಿ ಕೆಲವು ವೆಡ್ಡಿಂಗ್ ಡೆಸ್ಟಿನೇಷನ್ಸ್ ಆದರೆ ಮತ್ತೊಂದಿಷ್ಟು ಹನಿಮೂನ್ ತಾಣಗಳಿವೆ. ಇನ್ನೊಂದಿಷ್ಟು ರಜಾ ಮಜಾಕ್ಕಾಗಿ ಆಯ್ಕೆ ಮಾಡಲಾಗುವ ಪ್ರವಾಸಿ ತಾಣಗಳಾಗಿವೆ. ಎಲ್ಲಕ್ಕಿಂತ ಖುಷಿ ಎಂದರೆ, ಈ ಪಟ್ಟಿಯಲ್ಲಿ ಕನ್ನಡನಾಡಿನ ಕೊಡಗು ಕೂಡ ಇದೆ.

2023ರಲ್ಲಿ ಭಾರತೀಯರು ಸರ್ಚ್ ಮಾಡಿದ ಅತಿ ಹೆಚ್ಚು ಪ್ರವಾಸಿತಾಣಗಳು

  1. ವಿಯೆಟ್ನಾಮ್
  2. ಗೋವಾ
  3. ಬಾಲಿ
  4. ಶ್ರೀಲಂಕಾ
  5. ಥಾಯ್ಲೆಂಡ್
  6. ಕಾಶ್ಮೀರ
  7. ಕೂರ್ಗ್(ಕೊಡಗು)
  8. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
  9. ಇಟಲಿ
  10. ಸ್ವಿಟ್ಜರ್ಲ್ಯಾಂಡ್

ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಸೆಲೆಬ್ರಿಟಿ; ನಟಿ ಕಿಯಾರಾ, ಕ್ರಿಕೆಟಿಗ ಶುಭ್ಮನ್ ಗಿಲ್ ಟಾಪ್

ಈ ವರ್ಷದಲ್ಲಿ ಅತಿ ಹೆಚ್ಚು ಗೂಗಲ್‌ನಲ್ಲಿ ಹುಡುಕಾಟಕ್ಕೆ (most googled celeb) ಒಳಗಾದವರ ಪಟ್ಟಿಯನ್ನು ಗೂಗಲ್ ಇಂಡಿಯಾ (Google India) ಬಿಡುಗಡೆ ಮಾಡಿದೆ(Year in Search). ಭಾರತದಲ್ಲಿ ಅತಿ ಹೆಚ್ಚು ಹುಡುಕಾಟಕ್ಕೆ ಒಳಗಾದ ಸೆಲೆಬ್ರಿಟಿ ನಟಿ ಕಿಯಾರಾ ಅಡ್ವಾಣಿಯಾಗಿದ್ದಾರೆ(Kiara advani)! ಕಿಯಾರಾ ಅವರ ಪತಿ ಸಿದ್ಧಾರ್ಥ ಮಲ್ಹೋತ್ರಾ (Sidharth Malhotra) ಅವರು ಇದೇ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ. ಅಂದರೆ ಗಂಡ-ಹೆಂಡತಿ ಇಬ್ಬರು ಗೂಗಲ್ ಸರ್ಚ್ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕಿಯಾರಾ-ಸಿದ್ಧಾರ್ಥ ಅವರು ಈ ವರ್ಷದ ಆರಂಭ, ಫೆಬ್ರವರಿಯಲ್ಲಿ ಮದುವೆಯಾಗಿದ್ದಾರೆ. ಇನ್ನು ಕ್ರಿಕೆಟ್‌ನ ಪ್ರಿನ್ಸ್ ಎಂದು ಕರೆಯಿಸಿಕೊಳ್ಳುತ್ತಿರುವ ಶುಭಮನ್ ಗಿಲ್ (Shubman Gill) ಅವರು ಎರಡನೇ ಸ್ಥಾನದಲ್ಲಿದ್ದರೆ, ಮೂರನೇ ಸ್ಥಾನದಲ್ಲಿ, ಕರ್ನಾಟಕ ಮೂಲಕ ನ್ಯೂಜಲೆಂಡ್ ಕ್ರಿಕೆಟರ್ ರಚಿನ್ ರವೀಂದ್ರ (Rachin Ravindra) ಇದ್ದಾರೆ.

ಹಾಗೆ ನೋಡಿದರೆ, ಈ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟಿಗರೇ ಇದ್ದಾರೆ. ಭಾರತದಲ್ಲಿ ಐಸಿಸಿ ವರ್ಲ್ಡ್ ಕಪ್ ನಡೆದ ಪರಿಣಾಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟಿಗರು ಕಾಣಿಸಿಕೊಂಡಿರುವ ಸಾಧ್ಯತೆ ಇದೆ. ಈ ಕ್ರಿಕೆಟಿಗರ ಪಟ್ಟಿಯಲ್ಲಿ ಈಗಾಗಲೇ ಹೇಳಿದಂತೆ ಶುಭಮನ್ ಗಿಲ್ ಅಗ್ರಸ್ಥಾನದಲ್ಲಿದ್ದಾರೆ.

ಒಟ್ಟಾರ ಈ ಪಟ್ಟಿಯಲ್ಲಿ ಯೂಟ್ಯೂಬರ್ ಎಲ್ವಿಶ್ ಯಾದವ್ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಒಟಿಟಿ 2ರಲ್ಲಿ ಭಾಗವಹಿಸಿದ ನಂತರ ಖ್ಯಾತಿಗೆ ಏರಿದರು. ಅವರು ಐದನೇ ಸ್ಥಾನದದ್ದಾರೆ. ವೈಲ್ಡ್ ಕಾರ್ಡ್ ಪ್ರವೇಶದ ಹೊರತಾಗಿಯೂ, ಎಲ್ವಿಶ್ ವಿಜೇತರಾಗಿ ಹೊರಹೊಮ್ಮಿದರು. ರೇವ್ ಪಾರ್ಟಿಗಳಲ್ಲಿ ಹಾವಿನ ವಿಷದ ಬಳಕೆಯಲ್ಲಿ ತೊಡಗಿಸಿಕೊಂಡಿರುವ ಆರೋಪದ ಬಗ್ಗೆ ಅವರು ಇತ್ತೀಚೆಗೆ ವಿವಾದವನ್ನು ಎದುರಿಸಿದ್ದರು.

ಭಾರತದಲ್ಲಿ ಅತಿ ಹೆಚ್ಚು ಸರ್ಚ್ ಆದ ಸೆಲೆಬ್ರಿಟಿಗಳು

  1. ಕಿಯಾರಾ ಆಡ್ವಾಣಿ, ನಟಿ
  2. ಶುಭಮನ್ ಗಿಲ್, ಕ್ರಿಕೆಟಿಗ
  3. ರಚಿನ್ ರವೀಂದ್ರ, ಕ್ರಿಕೆಟಿಗ
  4. ಮೊಹಮ್ಮದ್ ಶಮಿ, ಕ್ರಿಕೆಟಿಗ
  5. ಎಲ್ವಿಶ್ ಯಾದವ್, ಯುಟ್ಯೂಬರ್
  6. ಸಿದ್ಧಾರ್ಥ ಮಲ್ಹೋತ್ರಾ, ನಟ
  7. ಗ್ಲೇನ್ ಮ್ಯಾಕ್ಸ್‌ವೆಲ್, ಆಸ್ಟ್ರೇಲಿಯನ್ ಕ್ರಿಕೆಟಿಗ
  8. ಡೇವಿಡ್ ಬೆಕ್ಹ್ಯಾಮ್, ಮಾಜಿ ಫುಟ್ಬಾಲರ್, ಇಂಗ್ಲೆಂಡ್
  9. ಸೂರ್ಯಕುಮಾರ್ ಯಾದವ್, ಕ್ರಿಕೆಟಿಗ
  10. ಟ್ರಾವಿಸ್ ಹೆಡ್, ಆಸ್ಟ್ರೇಲಿಯನ್ ಕ್ರಿಕೆಟಿಗ

ಈ ಸುದ್ದಿಯನ್ನೂ ಓದಿ: Year in Search: ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಆದ ಸಿನಿಮಾ, ವೆಬ್‌ ಸೀರೀಸ್ ಯಾವುವು?

Exit mobile version