Site icon Vistara News

Canadian brand: ಭಾರತೀಯ ವ್ಯಕ್ತಿ ಹೆಸರಿಗೆ ಅಪಹಾಸ್ಯ; ಟೀಕೆ ಬಳಿಕ ಕ್ಷಮೆಕೋರಿದ ಕೆನಡಾ ಕಂಪನಿ!

Canadian Brand

ಕೆನಡಾ: ಭಾರತೀಯ ಮೂಲದ (Indian Origin) ವ್ಯಕ್ತಿಯ ಉಪನಾಮದ (Surname) ಬಗ್ಗೆ ಅಪಹಾಸ್ಯ ಮಾಡಿದ ಐಫೋನ್ , ಮ್ಯಾಕ್‌ಬುಕ್ ಸ್ಕಿನ್‌ಗಳಿಗೆ ಹೆಸರುವಾಸಿಯಾಗಿರುವ ಕೆನಡಾದಲ್ಲಿ (Canadian brand) ಪ್ರಧಾನ ಕಛೇರಿ ಹೊಂದಿರುವ ಕಂಪನಿ ದಿಬ್ರ್ಯಾಂಡ್ (Dbrand) ಈಗ ಆ ವ್ಯಕ್ತಿಯ ಕ್ಷಮೆಯಾಚಿಸಿ 10,000 ಡಾಲರ್ ಪರಿಹಾರ ನೀಡುವುದಾಗಿ ಹೇಳಿದೆ.

ನೆದರ್‌ಲ್ಯಾಂಡ್ಸ್‌ ನಲ್ಲಿ( Netherlands) ಕೆಲಸ ಮಾಡುತ್ತಿರುವ ಪುಣೆ (pune) ಮೂಲದ ಭುವನ್ ಚಿತ್ರಾಂಶ್ (Bhuwan Chitransh) ಅವರು ದಿಬ್ರ್ಯಾಂಡ್ ನಿಂದ ಮ್ಯಾಕ್‌ಬುಕ್ ಸ್ಕಿನ್ ಖರೀದಿ ಮಾಡಿದ್ದರು. ಆದರೆ ಮ್ಯಾಕ್ ಬುಕ್ ಸ್ಕಿನ್ ಖರೀದಿ ಮಾಡಿದ ಎರಡೇ ತಿಂಗಳಲ್ಲಿ ಅದರ ಮೇಲ್ಮೈ ಬಣ್ಣ ಬದಲಾಗಿದೆ. ಈ ಬಗ್ಗೆ ಆಕ್ಷೇಪಿಸಿ ಅವರು ಸಾಮಾಜಿಕ ಜಾಲತಾಣದ ಮೂಲಕ ದೂರು ನೀಡಿದ್ದರು.

ಇದನ್ನೂ ಓದಿ: Money Guide: ಎಚ್‌ಡಿಎಫ್‌ಸಿಯಿಂದ ಎಸ್‌ಬಿಐವರೆಗೆ; ಫಿಕ್ಸೆಡ್‌ ಡೆಪಾಸಿಟ್‌ಗೆ ಶೇ. 7ಕ್ಕಿಂತ ಅಧಿಕ ಬಡ್ಡಿ ನೀಡುವ ಬ್ಯಾಂಕ್‌ಗಳಿವು

ಉಪನಾಮದ ಬಗ್ಗೆ ಅಪಹಾಸ್ಯ

ಇದಕ್ಕೆ ಪ್ರತಿಯಾಗಿ ಕಂಪನಿ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿ ನಿಮ್ಮ ಹೆಸರಿನ ಕೊನೆಯಲ್ಲಿ ರಾಶ್ ಎಂದಿದೆ. ಹೀಗಾಗಿ ಎಚ್ಚರವಾಗಿರಿ ಎಂದು ಭಾರತೀಯ ಟೆಕ್ಕಿಗೆ ದಿಬ್ರ್ಯಾಂಡ್ ಪ್ರತಿಕ್ರಿಯಿಸಿದೆ.


ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಮ್ಯಾಕ್ ಬುಕ್ ನ ಮೇಲ್ಮೈ ಅನ್ನು ಜನಾಂಗೀಯವಾಗಿ ನೋಡಲಾಗಿದೆ ಎಂದು ಹಲವಾರು ಮಂದಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಅನೇಕ ಬಳಕೆದಾರರು ಕಂಪನಿಯ ಬಗ್ಗೆ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.

ಕ್ಷಮೆಗೆ ಆಗ್ರಹ

ಅನೇಕರು ಕಂಪೆನಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದು, 80 ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ವೀಕ್ಷಿಸಿದ್ದು, 2,800 ಕ್ಕೂ ಹೆಚ್ಚು ಕಾಮೆಂಟ್‌ಗಳು ಬಂದ ಬಳಿಕ ದಿಬ್ರ್ಯಾಂಡ್ ವಿವರವಾದ ಪ್ರತಿಕ್ರಿಯೆಯೊಂದಿಗೆ ಬುಧವಾರ ಪ್ರತಿಕ್ರಿಯೆ ನೀಡಿದೆ.


ತಮ್ಮ ತಪ್ಪನ್ನು ಒಪ್ಪಿಕೊಂಡ ಕಂಪನಿ, ಅದು ತಕ್ಷಣದ ಪ್ರತಿಕ್ರಿಯೆಯಾಗಿದೆ. ನಾವು ಒಬ್ಬ ವ್ಯಕ್ತಿಯ ಹೆಸರನ್ನು ಅಪಹಾಸ್ಯ ಮಾಡಿದ್ದೆವು. ಇದು ದೊಡ್ಡ ಎಡವಟ್ಟು ಆಗಿತ್ತು. ನಾವು ನೇರವಾಗಿ ಅವರಿಗೆ ಕ್ಷಮೆಯಾಚಿಸಿದ್ದೇವೆ ಮತ್ತು ಅವರಿಗೆ 10,000 ಡಾಲರ್ ಪರಿಹಾರವನ್ನೂ ನೀಡಿದ್ದೇವೆ. ಎಂದು ಕಂಪನಿ ಹೇಳಿದೆ.

ಹಾಸ್ಯ ಮಾಡುವುದನ್ನು ನಿಲ್ಲಿಸುವುದಿಲ್ಲ

ಕಳೆದ ಒಂದು ದಶಕದಿಂದ ಸಾಮಾಜಿಕ ಮಾಧ್ಯಮದಲ್ಲಿ ನಾವು ಗ್ರಾಹಕರಿಗೆ ತಮಾಷೆ ಮಾಡುತ್ತಿದ್ದೇವೆ. ಇದನ್ನು ನಾವು ನಿಲ್ಲಿಸುವುದಿಲ್ಲ. ಇದರಲ್ಲಿ ಮುಂದಿನ ಬಾರಿ 10,000 ಡಾಲರ್ ಪಡೆಯುವವರು ನೀವಾಗಬಹುದು ಎಂದು ಕಂಪನಿ ತಿಳಿಸಿದೆ.

ಕಂಪನಿ ಮಾಡಿರುವ ಟ್ವಿಟ್ ಅನ್ನು ಭುವನ್ ಚಿತ್ರಾಂಶ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ, ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಬಿಜೆಪಿಯನ್ನು ಟ್ಯಾಗ್ ಮಾಡಿದ್ದಾರೆ. ಕೆನಡಾದ ಬ್ರ್ಯಾಂಡ್‌ನಿಂದ ಅವರು ಹೇಗೆ ಟೀಕೆಗೆ ಗುರಿಯಾಗಿದ್ದಾರೆ ಎಂಬುದನ್ನು ಹೇಳಿದ್ದಾರೆ. ಈ ಕಾಮೆಂಟ್ ಭಾರತೀಯ ಗ್ರಾಹಕರ ಕಡೆಗೆ ಬ್ರ್ಯಾಂಡ್‌ನ ಅಮೂಲ್ಯವಾದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ.

Exit mobile version