Site icon Vistara News

Model Arrest: ತನ್ನ ಫಾಲೋವರ್ಸ್‌ಗಳನ್ನೇ ವೇಶ್ಯಾವಾಟಿಕೆಯಲ್ಲಿ ತೊಡಗಿಸುತ್ತಿದ್ದ ಖ್ಯಾತ ಮಾಡೆಲ್‌ಗೆ ಜೈಲು ಶಿಕ್ಷೆ!

Model Arrest

ಬ್ರೆಜಿಲ್‌ನ ಮಾಜಿ ರೂಪದರ್ಶಿ ಮತ್ತು ಅಮೆರಿಕ ಮೂಲದ ವೆಲ್ನೆಸ್ ಇನ್ಫ್ಲುಯೆನ್ಸರ್ ಕ್ಯಾಟ್ ಟೊರೆಸ್‌ ಎಂಬುವಳನ್ನು ಮಾನವ ಕಳ್ಳಸಾಗಣೆ ಮತ್ತು ಮಹಿಳೆಯರ ಗುಲಾಮಗಿರಿಗಾಗಿ ಎಂಟು ವರ್ಷಗಳ ಜೈಲು ಶಿಕ್ಷೆ (Model Arrest) ವಿಧಿಸಲಾಗಿದೆ. ಅವಳೊಂದಿಗೆ ವಾಸವಾಗಿದ್ದ ಇಬ್ಬರು ಮಹಿಳೆಯರು 2022ರಲ್ಲಿ ಕಾಣೆಯಾಗಿದ್ದರು. ಈ ಬಗ್ಗೆ ಎಫ್‌ಐಆರ್ ದಾಖಲಿಸಿದ ಪೊಲೀಸರು ತನಿಖೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ಆಕೆ ತನ್ನ ಫಾಲೋವರ್ಸ್‌ಗಳನ್ನು ಲೈಂಗಿಕ ಕೆಲಸದಲ್ಲಿ ತೊಡಗುವಂತೆ ಒತ್ತಾಯಿಸಿ ಅವರನ್ನು ತನ್ನ ಗುಲಾಮರಂತೆ ಇರಿಸಿಕೊಳ್ಳುತ್ತಿದ್ದಳು ಎಂಬುದಾಗಿ ತಿಳಿದುಬಂದಿದೆ.

ಆಕೆಯಿಂದ ಗುಲಾಮಗಿರಿಗೆ ಒಳಗಾದ ಆ ಮಹಿಳೆಯರು ಆಕೆಯೊಂದಿಗೆ ವಾಸವಿದ್ದಾಗ ಅನುಭವಿಸಿದ ಭಯಾನಕ ಘಟನೆಗಳ ಬಗ್ಗೆ ಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಸಂತ್ರಸ್ತ ಮಹಿಳೆಯರು, ಆಕೆ ಮರುಳು ಮಾಡುವಂತೆ ಮಾತನಾಡುತ್ತಿದ್ದಳು. ಅವಳು ಹೇಳುವ ಮಾತನ್ನು ಕೇಳಿ ಆಕರ್ಷಿತರಾದೆವು. ನಟ ಲಿಯೊನಾರ್ಡೊ ಡಿಕಾಪ್ರಿಯೊ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾಳೆ ಎಂದು ಒಂದು ಕಾಲದಲ್ಲಿ ವದಂತಿಗಳಿದ್ದ ಟೊರೆಸ್, ತನ್ನ ಆಧ್ಯಾತ್ಮಿಕ ಶಕ್ತಿಯನ್ನು ಬಳಸಿಕೊಂಡು ಭವಿಷ್ಯ ನುಡಿಯಬಹುದು ಎಂದು ಪ್ರಸಿದ್ಧ ಬ್ರೆಜಿಲಿಯನ್ ಟಿವಿ ಕಾರ್ಯಕ್ರಮಗಳಲ್ಲಿ ಹೇಳಿದ್ದಳು. ಅಲ್ಲದೇ ಅವಳು ಮ್ಯಾಗಜೀನ್‌ಗಳ ಮುಖಪುಟಗಳಲ್ಲಿ ಕಾಣಿಸಿಕೊಂಡಿದ್ದಳು. ಹಾಲಿವುಡ್‌ ನಟ ಲಿಯೊನಾರ್ಡೊ ಡಿಕಾಪ್ರಿಯೊ ಅವರಂತಹ ಪ್ರಸಿದ್ಧ ವ್ಯಕ್ತಿಗಳೊಂದಿಗೆ ಕಾಣಿಸಿಕೊಂಡಳು. ಹಾಗಾಗಿ ಆಕೆ ಹೇಳುವುದನ್ನು ತಾವು ನಂಬಿರುವುದಾಗಿ ಮಹಿಳೆಯರು ತಿಳಿಸಿದ್ದಾರೆ.

Model Arrest

ಆಕೆ ವೆಲ್‍ನೆಸ್ ವೆಬ್‍ಸೈಟ್‍ ಮತ್ತು ಚಂದಾದಾರಿಕೆ ಸೇವೆಯನ್ನು ಅಭಿವೃದ್ಧಿಪಡಿಸಿ ಅದರಲ್ಲಿ ಸಂಬಂಧಗಳು, ಯೋಗಕ್ಷೇಮ, ಸಂಮೋಹನ, ಧ್ಯಾನ ಮತ್ತು ವ್ಯಾಯಾಮ ಕಾರ್ಯಕ್ರಮಗಳು ಸೇರಿದಂತೆ ವ್ಯವಹಾರ ಯಶಸ್ಸಿನ ಬಗ್ಗೆ ಸಲಹೆ ನೀಡುವ ಸ್ವ-ಸಹಾಯ ವೀಡಿಯೊಗಳನ್ನು ಸಹ ಮಾಡುತ್ತಿದ್ದಳು. ಹಾಗೇ ವಿಡಿಯೋ ಸಮಾಲೋಚನೆಗಳ ಮೂಲಕ ಮುಖಾಮುಖಿ ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದಳು.

ಹಾಗಾಗಿ ಆ ಮಹಿಳೆಯರು 2019ರಲ್ಲಿ ಟೊರೆಸ್ ಅವರ ಲೈವ್-ಇನ್ ಸಹಾಯಕರಾಗಿ ಕೆಲಸ ಮಾಡಲು ನ್ಯೂಯಾಕ್‌ಗೆ ತೆರಳಿದರು. ಅಲ್ಲಿ ಅವಳ ಮನೆಕೆಲಸ ಹಾಗೂ ಪ್ರಾಣಿಗಳನ್ನು ನೋಡಿಕೊಳ್ಳುವ ಕೆಲಸದಲ್ಲಿ ನಿರತಳಾಗಿದ್ದರು. ಆದರೆ ಆಕೆ ಸಂಬಳ ಸರಿಯಾಗಿ ನೀಡುತ್ತಿರಲಿಲ್ಲ. ನಂತರ ಸ್ಥಳೀಯ ಸ್ಟ್ರಿಪ್ ಕ್ಲಬ್‍ನಲ್ಲಿ ಕೆಲಸ ಮಾಡುವಂತೆ ಅವರ ಮೇಲೆ ಒತ್ತಡ ಹೇರಿದ್ದಳು. ಇದಕ್ಕೆ ಅವರು ಒಪ್ಪದಿದ್ದಾಗ ಅವರನ್ನು ಯಾಮಾರಿಸಿ ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಮಾಡಿದ್ದಳು.

ಇದನ್ನೂ ಓದಿ: ತರಕಾರಿ ಮಾರುವವಳ ಮಗ ಸಿಎ ಪರೀಕ್ಷೆಯಲ್ಲಿ ಪಾಸ್‌; ಹೃದಯಸ್ಪರ್ಶಿ ವಿಡಿಯೊ ಇಲ್ಲಿದೆ

ನಂತರ ಇಬ್ಬರು ಮಹಿಳೆಯರ ಸ್ನೇಹಿತರು ಮತ್ತು ಕುಟುಂಬವು ಅವರನ್ನು ಹುಡುಕಲು ಸಾಮಾಜಿಕ ಮಾಧ್ಯಮ ಅಭಿಯಾನಗಳನ್ನು ಪ್ರಾರಂಭಿಸಿತು. ಮಾಧ್ಯಮಗಳ ಗಮನದಿಂದ ತಪ್ಪಿಸಿಕೊಳ್ಳಲು, ಟೊರೆಸ್ ಆ ಮಹಿಳೆಯರಿಗೆ ತಾವು ಆರಾಮವಾಗಿ ಇದ್ದೀವಿ ಎಂದು ವಿಡಿಯೊ ಪೋಸ್ಟ್ ಮಾಡುವಂತೆ ಒತ್ತಾಯಿಸಿದ್ದಳು. ಈ ರೀತಿ ಆಕೆ ಮಹಿಳೆಯರನ್ನು ಬಳಸಿಕೊಳ್ಳುತ್ತಿದ್ದಳು ಎನ್ನಲಾಗಿದೆ. 20 ಕ್ಕೂ ಹೆಚ್ಚು ಮಹಿಳೆಯರು ಟೊರೆಸ್‌ನಿಂದ ವಂಚನೆಗೊಳಗಾದ ಅಥವಾ ಶೋಷಣೆಗೊಳಗಾದ ಬಗ್ಗೆ ತಿಳಿಸಿದ್ದಾರೆ. ಅವರು ಅನುಭವಿಸಿದ ಮತ್ತು ಅನುಭವದಿಂದ ಚೇತರಿಸಿಕೊಳ್ಳಲು ಅವರು ಇನ್ನೂ ಮನೋವೈದ್ಯಕೀಯ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ.

Exit mobile version