ಹೈದರಾಬಾದ್ : ತಾಯಿ ಜೀವ ಕೊಟ್ಟರೆ ತಂದೆ ಜೀವನ ಕೊಡುತ್ತಾನೆ ಎಂಬ ಮಾತಿದೆ. ಹಾಗಾಗಿ ತಂದೆ ತಾಯಿಯನ್ನು ದೇವರೆಂದು ಪರಿಗಣಿಸುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳು ತಮ್ಮ ತಂದೆ ತಮ್ಮ ರಕ್ಷಕನೆಂದೇ ಭಾವಿಸುತ್ತಾರೆ. ತಂದೆ ಕೆಟ್ಟವರ ಕಣ್ಣು ತಮ್ಮ ಮಕ್ಕಳ ಮೇಲೆ ಬೀಳದಂತೆ ರಕ್ಷಿಸುತ್ತಾನೆ ಎಂಬ ನಂಬಿಕೆ ಇದೆ. ಹಾಗಾಗಿ ಹೆಣ್ಣುಮಕ್ಕಳು ತಮ್ಮ ತಂದೆಯೊಂದಿಗೆ ಧೈರ್ಯದಿಂದ ಇರುತ್ತಾರೆ. ಆದರೆ ಇಂತಹ ತಂದೆಯೇ ತನ್ನ ಮಗಳ ಮೇಲೆ ನೀಚತನ ತೋರಿದರೆ ಆಕೆಯನ್ನು ಕಾಪಾಡುವವರು ಯಾರು? ಇಂತಹ ನೀಚ ತಂದೆಯೊಬ್ಬ ಕಾಮದಾಹಕ್ಕೆ ತನ್ನ ಮಗಳನ್ನೇ ಕೊಲೆ (Murder Case )ಮಾಡಿದ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ.
ಹೈದರಾಬಾದ್‌ನ ನಾಡಿಗಡ್ಡ ತಾಂಡಾದಲ್ಲಿ 35 ವರ್ಷದ ನೀಚ ತಂದೆಯೊಬ್ಬ ತನ್ನ ಜೊತೆ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ 13 ವರ್ಷದ ಮಗಳನ್ನು ದಾರುಣವಾಗಿ ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ.
ಮಹಬೂಬಾಬಾದ್ ಜಿಲ್ಲೆಯ ನಿವಾಸಿ ನರೇಶ್ (35) ಆರೋಪಿ ತಂದೆ. ಈತ ಕಿರಾಣಿ ಕಂಪನಿಯಲ್ಲಿ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡಲು ತನ್ನ ಪತ್ನಿ ಹಾಗೂ ಮಗಳ ಜೊತೆ ನಗರಕ್ಕೆ ಬಂದಿದ್ದ. ಈತನಿಗೆ ಅಶ್ಲೀಲ ವಿಡಿಯೊ ನೋಡುವ ಚಟವಿತ್ತು. ಹಾಗಾಗಿ ಲೈಂಗಿಕತೆಯ ಬಗ್ಗೆ ಕೀಳು ಆಸಕ್ತಿ ಹೊಂದಿದ್ದ ಆತ ತನ್ನ ಚಟವನ್ನು ತೀರಿಸಿಕೊಳ್ಳಲು ತನ್ನ ಮಗಳ ಮೇಲೆಯೇ ಕಣ್ಣು ಹಾಕಿದ. ಅದಕ್ಕಾಗಿ ಆಕೆಯನ್ನು ಕಟ್ಟಿಗೆ ತರುವ ಹತ್ತಿರದ ಕಾಡಿಗೆ ಕರೆದೊಯ್ದ. ಅಲ್ಲಿ ಆಕೆಯ ಜೊತೆ ಲೈಂಗಿಕ ಸಂಬಂಧ ಹೊಂದಲು ಪ್ರಯತ್ನಿಸಿದಾಗ ಆಕೆ ಅದನ್ನು ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ಆತ ಆಕೆಯ ತಲೆಯನ್ನು ಬಂಡೆಗೆ ಅಪ್ಪಳಿಸಿ ಕೊಲೆ ಮಾಡಿ ಮನೆಗೆ ಮರಳಿದ್ದಾನೆ.
ಮರುದಿನ ತಾನು ತಪ್ಪಿಸಿಕೊಳ್ಳಲು ಪೊಲೀಸ್ ಠಾಣೆಗೆ ತೆರಳಿ ಮಗಳು ಕಾಣೆಯಾದ ಬಗ್ಗೆ ದೂರು ನೀಡಿದ್ದಾನೆ. ತನಿಖೆಯ ವೇಳೆ ಪೊಲೀಸರಿಗೆ ಮಗಳ ಶವ ಸಮೀಪದ ಕಾಡಿನಲ್ಲಿ ಸಿಕ್ಕಿದೆ. ತಾಯಿಯ ಮೂಲಕ ಅದು ಅವರ ಮಗಳೆಂದು ಪತ್ತೆ ಮಾಡಿದ ಬಳಿಕ ಪೊಲೀಸರು ಸಿಸಿಟಿವಿಯನ್ನು ಪರಿಶೀಲಿಸಿದ್ದಾರೆ. ಅದರಲ್ಲಿ ಹೋಗುವಾಗ ತಂದೆ ಮಗಳ ಜೊತೆ ಇದ್ದರೆ, ವಾಪಾಸು ಬರುವಾಗ ತಂದೆ ಒಬ್ಬನೇ ಬಂದಿರುವುದು ಕಂಡುಬಂದಿದೆ. ಹಾಗಾಗಿ ಅನುಮಾನಗೊಂಡ ಪೊಲೀಸರು ತಂದೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ಸತ್ಯ ಬಾಯ್ಬಿಟ್ಟಿದ್ದಾನೆ.
ಇದನ್ನೂ ಓದಿ: Actor Darshan: ಜೈಲಿನಿಂದ ಹೊರಬಂದ ಬಳಿಕ ದರ್ಶನ್ ಗೆ ರಾಜಕೀಯದಲ್ಲಿ ಉನ್ನತ ಸ್ಥಾನಮಾನ! ಜ್ಯೋತಿಷಿ ಆರ್ಯವರ್ಧನ್ ಭವಿಷ್ಯ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ತಂದೆಯ ಮೇಲೆ ಐಪಿಸಿ ಸೆಕ್ಷನ್ ಗಳು ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಸದ್ಯಕ್ಕೆ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂಬುದಾಗಿ ತಿಳಿದುಬಂದಿದೆ.