Murder Case: ಅಶ್ಲೀಲ ವಿಡಿಯೊ ಚಟ; ಮಗಳನ್ನೇ ಲೈಂಗಿಕಕ್ರಿಯೆಗೆ ಒತ್ತಾಯಿಸಿ ಕೊಂದ ಪಾಪಿ ತಂದೆ - Vistara News

Latest

Murder Case: ಅಶ್ಲೀಲ ವಿಡಿಯೊ ಚಟ; ಮಗಳನ್ನೇ ಲೈಂಗಿಕಕ್ರಿಯೆಗೆ ಒತ್ತಾಯಿಸಿ ಕೊಂದ ಪಾಪಿ ತಂದೆ

Murder Case: ಮಗಳ ಪಾಲಿಗೆ ಅಪ್ಪನೇ ಮೊದಲ ಹೀರೋ. ಹೆಣ್ಣುಮಕ್ಕಳು ನಂಬುವ ಮೊದಲ ಜೀವ. ಆದರೆ ಇಲ್ಲಿ ಮಗಳ ಪಾಲಿಗೆ ಹೀರೋ ಆಗಬೇಕಿದ್ದ ಅಪ್ಪನೇ ವಿಲನ್ ಆಗಿದ್ದಾನೆ. ಪೋರ್ನ್ ವಿಡಿಯೊ ನೋಡುವ ಚಟವಿರುವ ಅಪ್ಪ ತನ್ನ ಸ್ವಂತ ಮಗಳ ಜೀವವನ್ನೇ ಬಲಿ ತೆಗೆದುಕೊಂಡಿದ್ದಾನೆ. ನೀಚ ತಂದೆಯೊಬ್ಬ ತನ್ನ ಜೊತೆ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ 13 ವರ್ಷದ ಮಗಳನ್ನು ದಾರುಣವಾಗಿ ಕೊಂದಿರುವ ಆಘಾತಕಾರಿ ಘಟನೆ ಹೈದರಾಬಾದ್‌ನ ನಾಡಿಗಡ್ಡ ತಾಂಡಾದಲ್ಲಿ ನಡೆದಿದೆ.

VISTARANEWS.COM


on

Murder Case
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೈದರಾಬಾದ್ : ತಾಯಿ ಜೀವ ಕೊಟ್ಟರೆ ತಂದೆ ಜೀವನ ಕೊಡುತ್ತಾನೆ ಎಂಬ ಮಾತಿದೆ. ಹಾಗಾಗಿ ತಂದೆ ತಾಯಿಯನ್ನು ದೇವರೆಂದು ಪರಿಗಣಿಸುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳು ತಮ್ಮ ತಂದೆ ತಮ್ಮ ರಕ್ಷಕನೆಂದೇ ಭಾವಿಸುತ್ತಾರೆ. ತಂದೆ ಕೆಟ್ಟವರ ಕಣ್ಣು ತಮ್ಮ ಮಕ್ಕಳ ಮೇಲೆ ಬೀಳದಂತೆ ರಕ್ಷಿಸುತ್ತಾನೆ ಎಂಬ ನಂಬಿಕೆ ಇದೆ. ಹಾಗಾಗಿ ಹೆಣ್ಣುಮಕ್ಕಳು ತಮ್ಮ ತಂದೆಯೊಂದಿಗೆ ಧೈರ್ಯದಿಂದ ಇರುತ್ತಾರೆ. ಆದರೆ ಇಂತಹ ತಂದೆಯೇ ತನ್ನ ಮಗಳ ಮೇಲೆ ನೀಚತನ ತೋರಿದರೆ ಆಕೆಯನ್ನು ಕಾಪಾಡುವವರು ಯಾರು? ಇಂತಹ ನೀಚ ತಂದೆಯೊಬ್ಬ ಕಾಮದಾಹಕ್ಕೆ ತನ್ನ ಮಗಳನ್ನೇ ಕೊಲೆ (Murder Case )ಮಾಡಿದ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ.

ಹೈದರಾಬಾದ್‌ನ ನಾಡಿಗಡ್ಡ ತಾಂಡಾದಲ್ಲಿ 35 ವರ್ಷದ ನೀಚ ತಂದೆಯೊಬ್ಬ ತನ್ನ ಜೊತೆ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ 13 ವರ್ಷದ ಮಗಳನ್ನು ದಾರುಣವಾಗಿ ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ.
ಮಹಬೂಬಾಬಾದ್ ಜಿಲ್ಲೆಯ ನಿವಾಸಿ ನರೇಶ್ (35) ಆರೋಪಿ ತಂದೆ. ಈತ ಕಿರಾಣಿ ಕಂಪನಿಯಲ್ಲಿ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡಲು ತನ್ನ ಪತ್ನಿ ಹಾಗೂ ಮಗಳ ಜೊತೆ ನಗರಕ್ಕೆ ಬಂದಿದ್ದ. ಈತನಿಗೆ ಅಶ್ಲೀಲ ವಿಡಿಯೊ ನೋಡುವ ಚಟವಿತ್ತು. ಹಾಗಾಗಿ ಲೈಂಗಿಕತೆಯ ಬಗ್ಗೆ ಕೀಳು ಆಸಕ್ತಿ ಹೊಂದಿದ್ದ ಆತ ತನ್ನ ಚಟವನ್ನು ತೀರಿಸಿಕೊಳ್ಳಲು ತನ್ನ ಮಗಳ ಮೇಲೆಯೇ ಕಣ್ಣು ಹಾಕಿದ. ಅದಕ್ಕಾಗಿ ಆಕೆಯನ್ನು ಕಟ್ಟಿಗೆ ತರುವ ಹತ್ತಿರದ ಕಾಡಿಗೆ ಕರೆದೊಯ್ದ. ಅಲ್ಲಿ ಆಕೆಯ ಜೊತೆ ಲೈಂಗಿಕ ಸಂಬಂಧ ಹೊಂದಲು ಪ್ರಯತ್ನಿಸಿದಾಗ ಆಕೆ ಅದನ್ನು ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ಆತ ಆಕೆಯ ತಲೆಯನ್ನು ಬಂಡೆಗೆ ಅಪ್ಪಳಿಸಿ ಕೊಲೆ ಮಾಡಿ ಮನೆಗೆ ಮರಳಿದ್ದಾನೆ.

ಮರುದಿನ ತಾನು ತಪ್ಪಿಸಿಕೊಳ್ಳಲು ಪೊಲೀಸ್ ಠಾಣೆಗೆ ತೆರಳಿ ಮಗಳು ಕಾಣೆಯಾದ ಬಗ್ಗೆ ದೂರು ನೀಡಿದ್ದಾನೆ. ತನಿಖೆಯ ವೇಳೆ ಪೊಲೀಸರಿಗೆ ಮಗಳ ಶವ ಸಮೀಪದ ಕಾಡಿನಲ್ಲಿ ಸಿಕ್ಕಿದೆ. ತಾಯಿಯ ಮೂಲಕ ಅದು ಅವರ ಮಗಳೆಂದು ಪತ್ತೆ ಮಾಡಿದ ಬಳಿಕ ಪೊಲೀಸರು ಸಿಸಿಟಿವಿಯನ್ನು ಪರಿಶೀಲಿಸಿದ್ದಾರೆ. ಅದರಲ್ಲಿ ಹೋಗುವಾಗ ತಂದೆ ಮಗಳ ಜೊತೆ ಇದ್ದರೆ, ವಾಪಾಸು ಬರುವಾಗ ತಂದೆ ಒಬ್ಬನೇ ಬಂದಿರುವುದು ಕಂಡುಬಂದಿದೆ. ಹಾಗಾಗಿ ಅನುಮಾನಗೊಂಡ ಪೊಲೀಸರು ತಂದೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ಸತ್ಯ ಬಾಯ್ಬಿಟ್ಟಿದ್ದಾನೆ.

ಇದನ್ನೂ ಓದಿ: Actor Darshan: ಜೈಲಿನಿಂದ ಹೊರಬಂದ ಬಳಿಕ ದರ್ಶನ್ ಗೆ ರಾಜಕೀಯದಲ್ಲಿ ಉನ್ನತ ಸ್ಥಾನಮಾನ! ಜ್ಯೋತಿಷಿ ಆರ್ಯವರ್ಧನ್ ಭವಿಷ್ಯ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ತಂದೆಯ ಮೇಲೆ ಐಪಿಸಿ ಸೆಕ್ಷನ್ ಗಳು ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಸದ್ಯಕ್ಕೆ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂಬುದಾಗಿ ತಿಳಿದುಬಂದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Chris Silverwood : ಲಂಕಾ ಕೋಚ್​ ಕ್ರಿಸ್​ ಸಿಲ್ವರ್​ವುಡ್​​ ಏಕಾಏಕಿ ರಾಜೀನಾಮೆ

Chris Silverwood : ಅವರ ಮುಂದಾಳತ್ವದ ಶ್ರೀಲಂಕಾ ಏಕದಿನ ಸ್ವರೂಪದಲ್ಲಿ ಆಸ್ಟ್ರೇಲಿಯಾ ವಿರುದ್ಧ ತವರು ಸರಣಿ ಗೆಲುವು ಮತ್ತು ಬಾಂಗ್ಲಾದೇಶದ ವಿರುದ್ಧ ಎರಡು ವಿದೇಶ ಟೆಸ್ಟ್ ಸರಣಿ ಗೆಲುವುಗಳು ಸೇರಿದಂತೆ ಗಮನಾರ್ಹ ದ್ವಿಪಕ್ಷೀಯ ಸರಣಿ ಗೆಲುವುಗಳನ್ನು ಗಳಿಸಿತು. ಏತನ್ಮಧ್ಯೆ, ಸಿಲ್ವರ್​ವುಡ್​ ತನ್ನ ನಿರ್ಗಮನಕ್ಕೆ ವೈಯಕ್ತಿಕ ಕಾರಣಗಳನ್ನು ನೀಡಿದ್ದಾರೆ.

VISTARANEWS.COM


on

Chris Silverwood
Koo

ಬೆಂಗಳೂರು: ಶ್ರೀಲಂಕಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಕ್ರಿಸ್ ಸಿಲ್ವರ್​ವುಡ್​ (Chris Silverwood ) ಏಕಾಏಕಿ ರಾಜೀನಾಮೆ ಪಡೆದಿದ್ದಾರೆ. ಭಾರತದಲ್ಲಿ ನಡೆದ 2023 ರ ಏಕದಿನ ವಿಶ್ವಕಪ್ ಮತ್ತು ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯಲ್ಲಿ ನಡೆದ 2024 ರ ಟಿ 20 ವಿಶ್ವಕಪ್​​ನಲ್ಲಿ ತಂಡದ ನಿರಾಶಾದಾಯಕ ಪ್ರದರ್ಶನದ ನಂತರ ಅವರು ರಾಜೀನಾಮೆ ಕೊಟ್ಟಿದ್ದಾರೆ. ಶ್ರೀಲಂಕಾದೊಂದಿಗಿನ ಸಿಲ್ವರ್​ವುಡ್​ ಅವರ ಅಧಿಕಾರಾವಧಿ ಉತ್ತಮವಾಗಿ ಪ್ರಾರಂಭಗೊಂಡಿದ್ದರು. ತಂಡವು 2022 ರ ಟಿ 20 ಏಷ್ಯಾ ಕಪ್​​ನಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿತ್ತು. 2023 ರಲ್ಲಿ 50 ಓವರ್​ಗಳ ಏಷ್ಯಾ ಕಪ್​ನಲ್ಲಿ ಫೈನಲ್​ಗೆ ಅರ್ಹತೆ ಪಡೆದಿತ್ತು.

ಅವರ ಮುಂದಾಳತ್ವದ ಶ್ರೀಲಂಕಾ ಏಕದಿನ ಸ್ವರೂಪದಲ್ಲಿ ಆಸ್ಟ್ರೇಲಿಯಾ ವಿರುದ್ಧ ತವರು ಸರಣಿ ಗೆಲುವು ಮತ್ತು ಬಾಂಗ್ಲಾದೇಶದ ವಿರುದ್ಧ ಎರಡು ವಿದೇಶ ಟೆಸ್ಟ್ ಸರಣಿ ಗೆಲುವುಗಳು ಸೇರಿದಂತೆ ಗಮನಾರ್ಹ ದ್ವಿಪಕ್ಷೀಯ ಸರಣಿ ಗೆಲುವುಗಳನ್ನು ಗಳಿಸಿತು. ಏತನ್ಮಧ್ಯೆ, ಸಿಲ್ವರ್​ವುಡ್​ ತನ್ನ ನಿರ್ಗಮನಕ್ಕೆ ವೈಯಕ್ತಿಕ ಕಾರಣಗಳನ್ನು ನೀಡಿದ್ದಾರೆ.

ಅಂತಾರಾಷ್ಟ್ರೀಯ ಕೋಚ್ ಆಗಿರುವುದು ಎಂದರೆ ಪ್ರೀತಿಪಾತ್ರರಿಂದ ದೂರವಿರುವುದು ಎಂದರ್ಥ. ನನ್ನ ಕುಟುಂಬದೊಂದಿಗೆ ಸುದೀರ್ಘ ಸಂಭಾಷಣೆಯ ನಂತರ ಮತ್ತು ಭಾರವಾದ ಹೃದಯದಿಂದ, ನಾನು ಮನೆಗೆ ಮರಳಲು ಮತ್ತು ಒಟ್ಟಿಗೆ ಕೆಲವು ಗುಣಮಟ್ಟದ ಸಮಯವನ್ನು ಕಳೆಯಲು ನಿರ್ಧಾರ ತೆಗೆದುಕೊಂಡಿದ್ದೇನೆ. ಉತ್ತಮ ನಿರ್ಧಾರಕ್ಕೆ ಸೂಕ್ತ ಸಮಯ ಎಂದು ನಾನು ಭಾವಿಸುತ್ತೇನೆ “ಎಂದು ಸಿಲ್ವರ್​ ವುಡ್​ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ಶ್ರೀಲಂಕಾದಲ್ಲಿದ್ದಾಗ ಬೆಂಬಲ ನೀಡಿದ ಆಟಗಾರರು, ತರಬೇತುದಾರರು, ಬ್ಯಾಕ್ರೂಮ್ ಸಿಬ್ಬಂದಿ ಮತ್ತು ಎಸ್ಎಲ್ಸಿಯ ಆಡಳಿತ ಮಂಡಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಿಮ್ಮ ಬೆಂಬಲವಿಲ್ಲದೆ, ಯಾವುದೇ ಯಶಸ್ಸು ಸಾಧ್ಯವಾಗುತ್ತಿರಲಿಲ್ಲ. ಶ್ರೀಲಂಕಾ ಕ್ರಿಕೆಟ್​ ಭಾಗವಾಗಿರುವುದು ನನಗೆ ನಿಜವಾದ ಗೌರವವಾಗಿದೆ ಮತ್ತು ನಾನು ಅನೇಕ ಪ್ರೀತಿಯ ನೆನಪುಗಳನ್ನು ತೆಗೆದುಹಾಕುತ್ತೇನೆ, “ಎಂದು ಅವರು ಹೇಳಿದರು.

ಸಲಹೆಗಾರ ಹುದ್ದೆಯಿಂದ ಮಹೇಲಾ ಜಯವರ್ಧನೆ ರಾಜೀನಾಮೆ

ಸಿಲ್ವರ್ವುಡ್ ರಾಜೀನಾಮೆ ನೀಡುವ ಮೊದಲು, ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಅವರು 2022 ರಿಂದ ತಾವು ಹೊಂದಿದ್ದ ಸಲಹೆಗಾರ ಹುದ್ದೆಯಿಂದ ಕೆಳಗಿಳಿದಿದ್ದರು.

ಇದನ್ನೂ ಓದಿ: Louis Kimber: 127 ಎಸೆತಗಳಲ್ಲಿ 243 ರನ್ ಚಚ್ಚಿ ಹಲವು ದಾಖಲೆಗಳನ್ನು ಬರೆದ ಕೌಂಟಿ ಆಟಗಾರ ಲೂಯಿಸ್ ಕಿಂಬರ್

ಟಿ 20 ವಿಶ್ವಕಪ್​​ನಲ್ಲಿ ವನಿಂದು ಹಸರಂಗ ನೇತೃತ್ವದ ತಂಡದ ಪ್ರದರ್ಶನವು ವಿಶೇಷವಾಗಿ ನಿರಾಶಾದಾಯಕವಾಗಿತ್ತು. ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ನೇಪಾಳ ಮತ್ತು ನೆದರ್ಲ್ಯಾಂಡ್ಸ್ ಜೊತೆಗೆ ಮೊದಲ ಸುತ್ತಿನ ಗ್ರೂಪ್ ಡಿ ನಲ್ಲಿ ಸ್ಥಾನ ಪಡೆದ ಮಾಜಿ ಚಾಂಪಿಯನ್​​ಗಳು ಆರಂಭಿಕ ಹಂತವನ್ನು ಮೀರಿ ಮುನ್ನಡೆಯಲು ವಿಫಲಗೊಂಡಿದ್ದರು. ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶದ ವಿರುದ್ಧದ ಆರಂಭಿಕ ಸೋಲುಗಳು ಅವರ ಅವಕಾಶಗಳನ್ನು ತೀವ್ರವಾಗಿ ದುರ್ಬಲಗೊಳಿಸಿತ್ತು. ನೇಪಾಳ ವಿರುದ್ಧದ ಪಂದ್ಯವು ರದ್ದಾಗಿತ್ತು. ತಂಡದ ಏಕೈಕ ಗೆಲುವು ನೆದರ್ಲ್ಯಾಂಡ್ಸ್​ ವಿರುದ್ಧ ಬಂದಿತು. ಇದು ಯಾವುದೇ ಪರಿಣಾಮ ಬೀರಿರಲಿಲ್ಲ.

ಈ ಹಿನ್ನಡೆಯ ನಂತರ ಶ್ರೀಲಂಕಾ ಪುನರ್ನಿರ್ಮಾಣ ಮಾಡಲು ನೋಡುತ್ತಿರುವುದರಿಂದ, ಅವರ ಗಮನವು ಜುಲೈ ಮತ್ತು ಆಗಸ್ಸ್​ನಲ್ಲಿ ಭಾರತದ ವಿರುದ್ಧ ಮುಂಬರುವ ವೈಟ್-ಬಾಲ್ ಸರಣಿಯತ್ತ ತಿರುಗಲಿದೆ. ಮೂರು ಟಿ 20 ಮತ್ತು ಮೂರು ಏಕದಿನ ಪಂದ್ಯಗಳನ್ನು ಒಳಗೊಂಡಿರುವ ಈ ಸರಣಿಯು ತಂಡಕ್ಕೆ ಮರುಸಂಘಟನೆ ಮಾಡಲು ಮತ್ತು ಇತ್ತೀಚಿನ ನಿರಾಶೆಗಳನ್ನು ಬದಿಗಿಡಲು ಅನುವು ಮಾಡಿಕೊಡಲಿದೆ.

Continue Reading

Latest

Viral Video : ನೋಯ್ಡಾದಲ್ಲಿ ನಿರ್ಮಾಣವಾಗುತ್ತಿದೆ ಲಕ್ಷುರಿ ಅಪಾರ್ಟ್‌ಮೆಂಟ್‌! ಇದರ ಬೆಲೆ ಅಬ್ಬಬ್ಬಾ!

Viral Video: ಮನೆ ಕಟ್ಟಿ ನೋಡು ಒಂದು ಮದುವೆ ಮಾಡಿ ನೋಡು ಎಂಬ ಮಾತಿನಂತೆ ಜನಸಾಮಾನ್ಯರಿಗೆ ಒಂದು ಮನೆಕಟ್ಟಿ ಅದರ ಇಎಂಐ ಕಟ್ಟುವಾಗ ಜೀವ ಬಾಯಿಗೆ ಬಂದ ಹಾಗೇ ಆಗುತ್ತದೆ. ಇರುವುದಕ್ಕೆ ಒಂದು ಸೂರು ಸಾಕು ಎನ್ನುವ ಕಾಲ ಈಗ ಬದಲಾಗಿದೆ. ನಾನಾ ವಿನ್ಯಾಸವಿರುವ ಮನೆ, ಅಪಾರ್ಟ್‌ಮೆಂಟ್‌ಗಳನ್ನು ತೆಗೆದುಕೊಳ್ಳಬೇಕು ಎಂಬ ಕನಸು ಇರುತ್ತದೆ. ಅಂಥವರು ನೋಯ್ಡಾದಲ್ಲಿ ನಿರ್ಮಾಣವಾಗುತ್ತಿರುವ ಈ ಅಪಾರ್ಟ್‌ಮೆಂಟ್‌ ಅನ್ನು ನೋಡಬಹುದು. ಇದರ ಬೆಲೆ ಕೇಳಿದ್ರೆ ನೀವು ಹೌಹಾರುತ್ತೀರಿ ಜೋಕೆ. ಟೆಕ್ಕಿಯೊಬ್ಬರು ಇದರ ವಿಡಿಯೊ ಮಾಡಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

VISTARANEWS.COM


on

Viral Video
Koo

ನೋಯ್ಡಾ: ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರಿಗೆ ಒಂದು ಮನೆಯನ್ನು ಕಟ್ಟಿಕೊಳ್ಳುವುದು ಬಹಳ ಕಠಿಣವಾದ ಕೆಲಸವಾಗಿದೆ. ಸಿಮೆಂಟ್, ಮರಳು, ಕಲ್ಲು, ಕಬ್ಬಿಣದ ಬೆಲೆ ಕೇಳಿದರೆ ಜನರಿಗೆ ಮನೆಯೂ ಬೇಡ ಜೀವನವೇ ಬೇಡ ಎಂದೆನಿಸಿ ಬಿಡುತ್ತದೆ. ಹೀಗಿರುವಾಗ ದೆಹಲಿಯ ಎನ್ ಸಿಆರ್ ಇಂಜಿನಿಯರ್ ಒಬ್ಬರು ನೋಯ್ಡಾದಲ್ಲಿ ನಿರ್ಮಿಸುತ್ತಿರುವ ಅಪಾರ್ಟ್ ಮೆಂಟ್ ಬೆಲೆ ಕೇಳಿದರೆ ನೀವು ಶಾಕ್ ಆಗುವುದಂತು ಖಂಡಿತ. ಈ ಬಗ್ಗೆ ಟೆಕ್ಕಿಯೊಬ್ಬರು ವಿಡಿಯೊ ಮಾಡಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಟೆಕ್ಕಿ ಕಾಶಿಶ್ ಛಿಬ್ಬರ್ ಎನ್ನುವವರು ತಮ್ಮ ಇನ್ ಸ್ಟಾಗ್ರಾಂನಲ್ಲಿ ದೆಹಲಿಯ ಎನ್ ಸಿಆರ್ ಇಂಜಿನಿಯರ್ ಒಬ್ಬರು ನೋಯ್ಡಾದಲ್ಲಿ ಅಪಾರ್ಟ್ ಮೆಂಟ್ ಒಂದನ್ನು ನಿರ್ಮಿಸುತ್ತಿದ್ದು, ಇದರಲ್ಲಿ 4BHK ಗೆ 15 ಕೋಟಿ ರೂ ಹಾಗೂ 6BHK 25 ಕೋಟಿ ರೂ ಗೆ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಛಿಬ್ಬರ್ ಅವರು ತಮ್ಮ ಇನ್ ಸ್ಟಾಗ್ರಾಂ ನಲ್ಲಿ ವಿಡಿಯೊ ಮಾಡುತ್ತಾ ನೋಯ್ಡಾ ಸೆಕ್ಟರ್ 124 ರ ವರ್ಚುವಲ್ ಪ್ರದೇಶಕ್ಕೆ ಹೋಗಿದ್ದಾರೆ. ಅಲ್ಲಿ ಅವರು ಮುಂಬರುವ ದಿನಗಳಲ್ಲಿ ಎಟಿಎಸ್ ನೈಟ್ಸ್ ಬ್ರಿಡ್ಜ್ ಯೋಜನೆಯಲ್ಲಿ ನಿರ್ಮಾಣವಾಗುತ್ತಿರುವ ಅಪಾರ್ಟ್ ಮೆಂಟ್ ಅನ್ನು ಪರಿಶೀಲನೆ ಮಾಡಿದ್ದಾರೆ.

ಅಲ್ಲಿ 4BHK ಅಪಾರ್ಟ್ ಮೆಂಟ್ ಗೆ 15 ಕೋಟಿ ರೂ ಹಾಗೂ 6BHK ಅಪಾರ್ಟ್ ಮೆಂಟ್ ಗೆ 25 ಕೋಟಿ ರೂ ಗೆ ನೀಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಅಲ್ಲದೇ ಇಂತಹ ದುಬಾರಿ ವೆಚ್ಚದ ಅಪಾರ್ಟ್ ಮೆಂಟ್ ಅನ್ನು ಯಾರು ಖರೀದಿಸುತ್ತಾರೆ? ತಾನು ಎಷ್ಟೇ ಉದ್ಯೋಗ ಮಾಡಿದರೂ, ಎಷ್ಟೇ ವ್ಯಾಪಾರ, ಹೂಡಿಕೆ ಮಾಡಿದರೂ ಇಂತಹ ಅಪಾರ್ಟ್ ಮೆಂಟ್ ಅನ್ನು ಖರೀದಿಸಲು ಸಾಧ್ಯವಾಗುತ್ತದೆಯೇ? ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಛಿಬ್ಬರ್ ಅವರು ಕೆಲವು ದಿನಗಳ ಹಿಂದೆ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೊಗೆ ಒಟ್ಟು 4.4 ಮಿಲಿಯನ್ ವೀವ್ಸ್ ಹಾಗೂ ಹಲವು ಕಾಮೆಂಟ್ ಗಳು ಬಂದಿದೆ. ಹಾಗೇ ಇದು ಹಿಂದೆ ಟ್ವೀಟರ್ ನಲ್ಲಿಯೂ ಪೋಸ್ಟ್ ಆಗಿದ್ದು, ಅಲ್ಲಿ ಇದಕ್ಕೆ 1 ಮಿಲಿಯನ್ ವೀವ್ಸ್ ಬಂದಿತ್ತು ಎನ್ನಲಾಗಿದೆ.

ಇದನ್ನೂ ಓದಿ:ರೈಲಿನ ಮೇಲಿನ ಬರ್ತ್‌ನಲ್ಲಿದ್ದ ವ್ಯಕ್ತಿ ಉರುಳಿ ಬಿದ್ದು ಕೆಳ ಬರ್ತ್‌ನ ಪ್ರಯಾಣಿಕ ಸಾವು

ಈ ವಿಡಿಯೊ ನೋಡಿದ ಜನರು ಅಪಾರ್ಟ್ ಮೆಂಟ್ ನ ದುಬಾರಿ ಬೆಲೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನೋಯ್ಡಾದ ರಿಯಲ್ ಎಸ್ಟೇಟ್ ಮಧ್ಯಮ ವರ್ಗದ ಭಾರತೀಯರಿಗೆ ತಲುಪುತ್ತಿಲ್ಲ ಎಂದು ಒಬ್ಬರು ಬೇಸರ ವ್ಯಕ್ತಪಡಿಸಿದರೆ, ಕೆಲವರು ಇಲ್ಲಿ ಅಪಾರ್ಟ್ ಮೆಂಟ್ ಖರೀದಿಸುವ ಬದಲು ನ್ಯೂಯಾರ್ಕ್, ಸಿಂಗಾಪುರ ನಲ್ಲಿ ಅಪಾರ್ಟ್ ಮೆಂಟ್ ಅಥವಾ ದುಬೈ ನಲ್ಲಿ ವಿಲ್ಲಾ ಖರೀದಿಸಬಹುದು ಎಂದು ಸಲಹೆ ನೀಡಿದ್ದಾರೆ. ಹಾಗೇ ಇನ್ನೊಬ್ಬರು ಸಮಸ್ಯೆಗಳ ಗೂಡಾದ ಇಂತಹ ದುಬಾರಿ ಅಪಾರ್ಟ್ ಮೆಂಟ್ ಖರೀದಿಸುವ ಬದಲು ಇದೇ ಹಣದಲ್ಲಿ ಬೇರೆ ಕಡೆ ಸ್ಥಳ ಖರೀದಿಸಿ ಮನೆ ನಿರ್ಮಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

Continue Reading

Latest

Women Arrest: ಅತ್ಯಾಚಾರಿಗೆ ಬೈದಿದ್ದಕ್ಕೆ ಜೈಲುಪಾಲಾದ ಮಹಿಳೆ! ಇದೆಂಥಾ ನ್ಯಾಯ?

Women Arrest: ಹ್ಯಾಂಬರ್ಗ್ ನ ಸಿಟಿ ಪಾರ್ಕ್ ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ 10 ಮಂದಿ ಯುವಕರು ಸೇರಿ ಕ್ರೂರವಾಗಿ ಅತ್ಯಾಚಾರ ಎಸಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ 10ಮಂದಿಯಲ್ಲಿ ಒಬ್ಬನಿಗೆ ಶಿಕ್ಷೆ ವಿಧಿಸಿ ಉಳಿದವರನ್ನು ಮುಕ್ತಗೊಳಿಸಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಅದರಲ್ಲಿ ಒಬ್ಬನ ಹೆಸರು ಮತ್ತು ಮೊಬೈಲ್ ಸಂಖ್ಯೆ ಸೋರಿಕೆಯಾಗಿತ್ತು. ಆಗ ಈ ಘಟನೆಯಿಂದ ಕುಪಿತಳಾದ 20 ವರ್ಷದ ಜರ್ಮನ್ ಮಹಿಳೆಯೊಬ್ಬರು ಆ ವ್ಯಕ್ತಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಮೆಸೇಜ್ ಮಾಡಲು ಶುರು ಮಾಡಿದ್ದಾಳೆ. ಈ ಬಗ್ಗೆ ಆತ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿದ್ದು, ಹ್ಯಾಂಬರ್ಗ್ ವಾಂಡ್ಸ್ಬೆಕ್ ಜಿಲ್ಲಾ ನ್ಯಾಯಾಲಯ ಮಹಿಳೆಯನ್ನು ದೋಷಿ ಎಂದು ಪರಿಗಣಿಸಿ ಅವಮಾನ ಮತ್ತು ಬೆದರಿಕೆಗಾಗಿ ಆಕೆಗೆ 48 ಗಂಟೆಗಳ ಕಾಲ ಜೈಲು ಶಿಕ್ಷೆ ವಿಧಿಸಿ, ವಾರಾಂತ್ಯದಲ್ಲಿ ಜೈಲಿನಲ್ಲಿ ಬಂಧಿಯಾಗಿರಲು ಆದೇಶಿಸಿದೆ.

VISTARANEWS.COM


on

Women Arrest
Koo

ಜರ್ಮನಿ : 2020ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯೊಬ್ಬನ ಬಗ್ಗೆ ಅವಮಾನವೀಯ ಹೇಳಿಕೆ ನೀಡಿದ 20 ವರ್ಷದ ಜರ್ಮನ್ ಮಹಿಳೆಗೆ ಜೈಲು ಶಿಕ್ಷೆ (Women Arrest) ವಿಧಿಸಲಾಗಿದೆ ಹಾಗೂ ಮಹಿಳೆ ವಾರಾಂತ್ಯವನ್ನು ಜೈಲಿನಲ್ಲಿ ಕಳೆಯಲು ಆದೇಶಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ.

2020ರಲ್ಲಿ ಹ್ಯಾಂಬರ್ಗ್ ನ ಸಿಟಿ ಪಾರ್ಕ್ ನಲ್ಲಿ 15 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ 16-20 ವರ್ಷದೊಳಗಿನ 10 ಮಂದಿ ಯುವಕರು ಸೇರಿ ಕ್ರೂರವಾಗಿ ಅತ್ಯಾಚಾರ ಎಸಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ 10 ಮಂದಿಯಲ್ಲಿ ಒಬ್ಬನಿಗೆ ಶಿಕ್ಷೆ ವಿಧಿಸಿ ಉಳಿದವರನ್ನು ಮುಕ್ತಗೊಳಿಸಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಅದರಲ್ಲಿ ಒಬ್ಬನ ಹೆಸರು ಮತ್ತು ಮೊಬೈಲ್ ಸಂಖ್ಯೆ ಸೋರಿಕೆಯಾಗಿತ್ತು. ಆಗ ಈ ಘಟನೆಯಿಂದ ಕುಪಿತಳಾದ 20 ವರ್ಷದ ಜರ್ಮನ್ ಮಹಿಳೆಯೊಬ್ಬರು ಆ ವ್ಯಕ್ತಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಮೆಸೇಜ್ ಮಾಡಲು ಶುರು ಮಾಡಿದ್ದಳು. ಇದರಿಂದ ಆ ವ್ಯಕ್ತಿಗೆ ಹೊರಗಡೆ ಮುಖ ತೋರಿಸಲೂ ಕಷ್ಟವಾಗಿದೆ. ಆದರೆ ಆ ಮಹಿಳೆಗೂ ಸಂತ್ರಸ್ತ ಬಾಲಕಿ ಹಾಗೂ ಅತ್ಯಾಚಾರಿಗಳಿಗೂ ಯಾವುದೇ ಸಂಬಂಧವಿರಲಿಲ್ಲ.

ಅತ್ಯಾಚಾರ ನಡೆದ ಸ್ಥಳ

ಹಾಗಾಗಿ ಈ ಬಗ್ಗೆ ಆತ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿದ್ದು, ಹ್ಯಾಂಬರ್ಗ್ ವಾಂಡ್ಸ್ಬೆಕ್ ಜಿಲ್ಲಾ ನ್ಯಾಯಾಲಯ ಮಹಿಳೆಯನ್ನು ದೋಷಿ ಎಂದು ಪರಿಗಣಿಸಿ ಅವಮಾನ ಮತ್ತು ಬೆದರಿಕೆಗಾಗಿ ಆಕೆಗೆ 48 ಗಂಟೆಗಳ ಕಾಲ ಜೈಲು ಶಿಕ್ಷೆ ವಿಧಿಸಿ, ವಾರಾಂತ್ಯದಲ್ಲಿ ಜೈಲಿನಲ್ಲಿ ಬಂಧಿಯಾಗಿರಲು ಆದೇಶಿಸಿದೆ. ಅದರಂತೆ ಆಕೆಗೆ ಶುಕ್ರವಾರ ಸಂಜೆಯಿಂದ ಭಾನುವಾರ ಸಂಜೆಯವರೆಗೆ ಹ್ಯಾನೋಫರ್ ಸಂಡ್ ಯುವ ಬಂಧನ ಕೇಂದ್ರದಲ್ಲಿ ಬಂಧಿಯಾಗಿರಲು ಸೂಚಿಸಲಾಗಿದೆ.

ಹ್ಯಾಂಬರ್ಗ್‌ ಸಿಟಿ ಪಾರ್ಕ್‌

ಹಾಗೇ ಕೊಲೆ ಬೆದರಿಕೆಗಳು, ಹಿಂಸೆ ಮತ್ತು ಜನಾಂಗೀಯ ನಿಂದನೆ ಸೇರಿದಂತೆ ಅತ್ಯಾಚಾರಿಗಳ ಬಗ್ಗೆ ಇದೇ ರೀತಿಯ ಅವಮಾನವೀಯ ಹೇಳಿಕೆಗಳ ಕುರಿತು ಪೊಲೀಸರು ಇತರ 140 ಮಂದಿಯನ್ನು ತನಿಖೆ ಮಾಡುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಮಹಿಳೆಗೆ ಶಿಕ್ಷೆಯಾದ ಹಿನ್ನಲೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಅನೇಕರು ನ್ಯಾಯಾಧೀಶರ ವಿರುದ್ಧ ಕಿಡಿಕಾರಿದ್ದಾರೆ. ಅವರ ತೀರ್ಪನ್ನು ತಪ್ಪು ಎಂದು ದೂಷಿಸಿದ್ದಾರೆ. ಹಾಗೇ ಆಕೆ ಅತ್ಯಾಚಾರಿ ಯುವಕನಿಗಿಂತ ಹೆಚ್ಚು ಕಾಲ ಜೈಲಿನಲ್ಲಿ ಕಳೆಯುವಂತಾಗಿದೆ ಎಂದು ಜನರು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಬಾಗಿಲ ಬಳಿ ಇದ್ದ ಆಹಾರ ಪ್ಯಾಕೆಟ್‌ ಕದ್ದೊಯ್ದ ಜೊಮ್ಯಾಟೊ ಡೆಲಿವರಿ ಬಾಯ್‌!

ಸೆಪ್ಟೆಂಬರ್ 19, 2020ರಲ್ಲಿ ಹ್ಯಾಂಬರ್ಗ್ ನ ಸಿಟಿ ಪಾರ್ಕ್ ನಲ್ಲಿ ರಾತ್ರಿ ನಡೆದ ಉತ್ಸವದಲ್ಲಿ ಪಾಲ್ಗೊಂಡು ಮನೆಗೆ ಮರಳುತ್ತಿದ್ದ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ಕುಡಿದ ಮತ್ತಿನಲ್ಲಿದ್ದ 10 ಮಂದಿ ಪುರುಷರು ಸೇರಿ ಆಕೆಯನ್ನು ಪೊದೆಗೆ ಎಳೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಈ ಪ್ರಕರಣವು ಪ್ರಪಂಚದಾದ್ಯಂತ ಆಘಾತವನ್ನುಂಟು ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟ 10 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿ ಕೋರ್ಟ್ ಗೆ ಒಪ್ಪಿಸಿದ್ದಾರೆ. ಕೋರ್ಟ್ ಅವರಲ್ಲಿ 19 ವರ್ಷದ ಯುವಕನಿಗೆ ಎರಡು ವರ್ಷ ಎಂಟು ತಿಂಗಳು ಜೈಲು ಶಿಕ್ಷೆ ವಿಧಿಸಿದರೆ ಒಬ್ಬನನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿತ್ತು, ಉಳಿದ ಎಂಟು ಮಂದಿಗೆ ಮುಕ್ತವಾಗಿ ನಡೆಯಲು ಅವಕಾಶ ನೀಡಲಾಗಿದೆ.

Continue Reading

ದೇಶ

Amartya Sen: ಭಾರತ ಹಿಂದೂ ರಾಷ್ಟ್ರವಲ್ಲ ಎನ್ನುವುದಕ್ಕೆ ಲೋಕಸಭೆ ಚುನಾವಣೆ ಫಲಿತಾಂಶವೇ ಸಾಕ್ಷಿ: ಅಮರ್ತ್ಯ ಸೇನ್

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಹಿಂದಿನ ಅವಧಿಯಲ್ಲಿ ಜನರನ್ನು ವಿಚಾರಣೆಯಿಲ್ಲದೆ ಕಂಬಿಗಳ ಹಿಂದೆ ಹಾಕುವುದು ಮತ್ತು ಶ್ರೀಮಂತರು ಮತ್ತು ಬಡವರ ನಡುವಿನ ಅಂತರವನ್ನು ಹೆಚ್ಚಿಸುವಂತಹ ಕೆಲವು ಘಟನೆಗಳು ಇನ್ನೂ ಮುಂದುವರಿದಿದೆ. ಅದನ್ನು ನಿಲ್ಲಿಸಿ ಎಂದು ಖ್ಯಾತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ (Amartya Sen) ಹೇಳಿದರು. ಈ ಬಾರಿಯ ಲೋಕಸಭೆ ಚುನಾವಣೆಯ ಫಲಿತಾಂಶವು ಭಾರತ ಹಿಂದೂ ರಾಷ್ಟ್ರ ಅಲ್ಲ ಎನ್ನುವುದನ್ನು ಸಾರಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

VISTARANEWS.COM


on

By

Amartya Sen
Koo

ಕೋಲ್ಕತ್ತಾ: ಇತ್ತೀಚಿನ ಲೋಕಸಭಾ ಚುನಾವಣಾ (Lok Sabha Election) ಫಲಿತಾಂಶವು ಭಾರತ (India) ಹಿಂದೂ ರಾಷ್ಟ್ರವಲ್ಲ (Hindu Rashtra) ಎಂಬುದನ್ನು ಸೂಚಿಸುತ್ತದೆ ಎಂದು ನೋಬೆಲ್ ಪ್ರಶಸ್ತಿ ಪುರಸ್ಕೃತ (Nobel laureate) ಖ್ಯಾತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ (Amartya Sen) ಪ್ರತಿಪಾದಿಸಿದರು. ಯುಎಸ್‌ನಿಂದ (US) ಕೋಲ್ಕತ್ತಾಗೆ (Kolkata) ಆಗಮಿಸಿದ ಅವರು ನೇತಾಜಿ ಸುಭಾಸ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಪ್ರತಿ ಚುನಾವಣೆಯ ಅನಂತರ ನಾವು ಯಾವಾಗಲೂ ಬದಲಾವಣೆಯನ್ನು ಕಾಣುತ್ತೇವೆ ಎಂದ ಅವರು, ಭಾರತವು ಹಿಂದೂ ರಾಷ್ಟ್ರ ಅಲ್ಲ ಎಂಬುದು ಚುನಾವಣಾ ಫಲಿತಾಂಶಗಳಲ್ಲಿ ಪ್ರತಿಫಲಿಸುತ್ತದೆ ಎಂದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಹಿಂದಿನ ಅವಧಿಯಲ್ಲಿ ಜನರನ್ನು ವಿಚಾರಣೆಯಿಲ್ಲದೆ ಕಂಬಿಗಳ ಹಿಂದೆ ಹಾಕುವುದು ಮತ್ತು ಶ್ರೀಮಂತರು ಮತ್ತು ಬಡವರ ನಡುವಿನ ಅಂತರವನ್ನು ಹೆಚ್ಚಿಸುವಂತಹ ಕೆಲವು ಘಟನೆಗಳು ಇನ್ನೂ ಮುಂದುವರೆದಿದೆ. ಅದನ್ನು ನಿಲ್ಲಿಸಿ ಎಂದು ಅವರು ಹೇಳಿದರು.

ಭಾರತವು ಜಾತ್ಯತೀತ ಸಂವಿಧಾನವನ್ನು ಹೊಂದಿರುವ ಜಾತ್ಯತೀತ ರಾಷ್ಟ್ರವಾಗಿರುವಾಗ ರಾಜಕೀಯವಾಗಿ ಮುಕ್ತ ಮನಸ್ಸಿನ ಅವಶ್ಯಕತೆಯಿದೆ. ಭಾರತವನ್ನು ಹಿಂದೂ ರಾಷ್ಟ್ರವಾಗಿ ಪರಿವರ್ತಿಸುವ ಕಲ್ಪನೆಯು ಸೂಕ್ತವಲ್ಲ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದ ಅವರು, ಹೊಸ ಕೇಂದ್ರ ಸಚಿವ ಸಂಪುಟವು ಹಿಂದಿನ ಸಂಪುಟದ ನಕಲು ಎಂದು ಅಭಿಪ್ರಾಯಪಟ್ಟರು.

ಹಲವು ಸಚಿವರಿಗೆ ಅವರ ಖಾತೆಗಳನ್ನು ಮುಂದುವರಿಸಲಾಗಿದೆ. ಸ್ವಲ್ಪಮಟ್ಟಿಗೆ ಪುನರ್ರಚನೆಯ ಹೊರತಾಗಿಯೂ, ರಾಜಕೀಯವಾಗಿ ಪ್ರಬಲರು ಇನ್ನೂ ಪ್ರಬಲರಾಗಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.

ಭಾರತವು ಬ್ರಿಟಿಷರ ಆಳ್ವಿಕೆಯಲ್ಲಿದ್ದಾಗ ಜನರನ್ನು ಯಾವುದೇ ವಿಚಾರಣೆಯಿಲ್ಲದೆ ಜೈಲಿನಲ್ಲಿಡಲಾಗಿತ್ತು ಎಂದು ತಮ್ಮ ಬಾಲ್ಯದ ದಿನಗಳನ್ನು ಸೇನ್ ನೆನಪಿಸಿಕೊಂಡರು.

ನಾನು ಚಿಕ್ಕವನಿದ್ದಾಗ ನನ್ನ ಅನೇಕ ಚಿಕ್ಕಪ್ಪಂದಿರು ಮತ್ತು ಸೋದರಸಂಬಂಧಿಗಳನ್ನು ವಿಚಾರಣೆಯಿಲ್ಲದೆ ಜೈಲಿಗೆ ಹಾಕಲಾಯಿತು. ಭಾರತವು ಇದರಿಂದ ಮುಕ್ತವಾಗುತ್ತದೆ ಎಂದು ನಾವು ಭಾವಿಸಿದ್ದೇವೆ. ಇದು ನಿಲ್ಲದಿದ್ದಕ್ಕೆ ಕಾಂಗ್ರೆಸ್ ಕೂಡ ಕಾರಣ. ಅವರು ಅದನ್ನು ಬದಲಾಯಿಸಲಿಲ್ಲ. ಆದರೆ, ಪ್ರಸ್ತುತ ಸರ್ಕಾರದ ಅಡಿಯಲ್ಲಿ ಇದು ಹೆಚ್ಚು ಆಚರಣೆಯಲ್ಲಿದೆ ಎಂದು ಹೇಳಿದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಹೊರತಾಗಿಯೂ ಬಿಜೆಪಿ ಫೈಜಾಬಾದ್ ಲೋಕಸಭಾ ಸ್ಥಾನವನ್ನು ಕಳೆದುಕೊಂಡಿರುವ ಬಗ್ಗೆ ಸೇನ್, ದೇಶದ ನಿಜವಾದ ಗುರುತನ್ನು ಮರೆಮಾಚುವ ಪ್ರಯತ್ನಗಳು ನಡೆದಿವೆ ಎಂದು ಹೇಳಿದರು.

ಇದನ್ನೂ ಓದಿ: Parliament Sessions: ಸಂಸತ್‌ ಅಧಿವೇಶನದಲ್ಲಿ ಇಂದು ರಾಷ್ಟ್ರಪತಿ ಭಾಷಣ; Live ನೋಡಿ

ಮಹಾತ್ಮ ಗಾಂಧಿ, ರವೀಂದ್ರನಾಥ ಟ್ಯಾಗೋರ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ದೇಶದಲ್ಲಿ ಈ ರೀತಿ ನಡೆಯಬಾರದಿತ್ತು. ಭಾರತವನ್ನು ಹಿಂದೂ ರಾಷ್ಟ್ರ’ ಎಂದು ಬಿಂಬಿಸಲು ತುಂಬಾ ಹಣ ಖರ್ಚು ಮಾಡಿ ರಾಮ ಮಂದಿರವನ್ನು ನಿರ್ಮಿಸಲಾಗುತ್ತಿದೆ. ಇದು ಭಾರತದ ನಿಜವಾದ ಗುರುತನ್ನು ನಿರ್ಲಕ್ಷಿಸುವ ಪ್ರಯತ್ನವನ್ನು ತೋರಿಸುತ್ತದೆ ಮತ್ತು ಇದು ಬದಲಾಗಬೇಕು ಅವರು ಹೇಳಿದರು.

ಭಾರತದಲ್ಲಿ ನಿರುದ್ಯೋಗ ಹೆಚ್ಚುತ್ತಿದೆ ಮತ್ತು ಪ್ರಾಥಮಿಕ ಶಿಕ್ಷಣ ಮತ್ತು ಪ್ರಾಥಮಿಕ ಆರೋಗ್ಯದಂತಹ ಕ್ಷೇತ್ರಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಸೇನ್ ಹೇಳಿದರು.

Continue Reading
Advertisement
Share Market
ವಾಣಿಜ್ಯ3 mins ago

Share Market: ಮೊದಲ ಬಾರಿಗೆ 79,000 ಅಂಕಗಳ ಗಡಿ ದಾಟಿದ ಸೆನ್ಸೆಕ್ಸ್; ಗರಿಷ್ಠ ಮಟ್ಟ ತಲುಪಿದ ನಿಫ್ಟಿ

pattanagere shed actor darshan renuka swamy murder
ಕ್ರೈಂ24 mins ago

Actor Darshan: ಪಟ್ಟಣಗೆರೆ ಶೆಡ್ಡಾ? ನಾವು ಅಲ್ಲಿಗೆ ಹೋಗೋಲ್ಲ ಅನ್ನುತ್ತಿರುವ ವಾಹನ ಮಾಲಿಕರು!

Chris Silverwood
ಪ್ರಮುಖ ಸುದ್ದಿ29 mins ago

Chris Silverwood : ಲಂಕಾ ಕೋಚ್​ ಕ್ರಿಸ್​ ಸಿಲ್ವರ್​ವುಡ್​​ ಏಕಾಏಕಿ ರಾಜೀನಾಮೆ

Viral Video
Latest33 mins ago

Viral Video : ನೋಯ್ಡಾದಲ್ಲಿ ನಿರ್ಮಾಣವಾಗುತ್ತಿದೆ ಲಕ್ಷುರಿ ಅಪಾರ್ಟ್‌ಮೆಂಟ್‌! ಇದರ ಬೆಲೆ ಅಬ್ಬಬ್ಬಾ!

Yelahanka railway Newborn baby found at Yelahanka railway station in Bengaluru
ಬೆಂಗಳೂರು35 mins ago

Yelahanka Railway : ರೈಲು ಬೋಗಿಯ ಕಸದ ಬುಟ್ಟಿಯಲ್ಲಿತ್ತು ನವಜಾತ ಶಿಶು; ನರಳಾಡಿ ಪ್ರಾಣಬಿಟ್ಟ ಕಂದ

Women Arrest
Latest37 mins ago

Women Arrest: ಅತ್ಯಾಚಾರಿಗೆ ಬೈದಿದ್ದಕ್ಕೆ ಜೈಲುಪಾಲಾದ ಮಹಿಳೆ! ಇದೆಂಥಾ ನ್ಯಾಯ?

Indian Origin Doctor
ಕ್ರೈಂ38 mins ago

Indian Origin Doctor: ಅಮೆರಿಕದಲ್ಲಿ ಪತ್ನಿ ಮಕ್ಕಳ ಕೊಲೆಗೆ ಯತ್ನ; ಭಾರತೀಯ ಮೂಲದ ವೈದ್ಯನಿಗೆ ಜೈಲು ಶಿಕ್ಷೆ ಬದಲು ಮಾನಸಿಕ ಚಿಕಿತ್ಸೆ

Amartya Sen
ದೇಶ41 mins ago

Amartya Sen: ಭಾರತ ಹಿಂದೂ ರಾಷ್ಟ್ರವಲ್ಲ ಎನ್ನುವುದಕ್ಕೆ ಲೋಕಸಭೆ ಚುನಾವಣೆ ಫಲಿತಾಂಶವೇ ಸಾಕ್ಷಿ: ಅಮರ್ತ್ಯ ಸೇನ್

Gold Rate Today
ಚಿನ್ನದ ದರ48 mins ago

Gold Rate Today: ಆಭರಣ ಖರೀದಿಗೆ ಇದು ಗೋಲ್ಡನ್‌ ಟೈಮ್‌; ಇಳಿದ ಚಿನ್ನದ ದರ

Louis Kimber
ಪ್ರಮುಖ ಸುದ್ದಿ58 mins ago

Louis Kimber: 127 ಎಸೆತಗಳಲ್ಲಿ 243 ರನ್ ಚಚ್ಚಿ ಹಲವು ದಾಖಲೆಗಳನ್ನು ಬರೆದ ಕೌಂಟಿ ಆಟಗಾರ ಲೂಯಿಸ್ ಕಿಂಬರ್

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ3 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ6 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ6 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ7 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ2 weeks ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ2 weeks ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ2 weeks ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌