ಶಿಕ್ಷಕರನ್ನು ದೇವರಿಗೆ ಹೋಲಿಸುತ್ತಾರೆ. ಯಾಕೆಂದರೆ ಅವರು ತಮ್ಮ ವಿದ್ಯೆಯನ್ನು ಶಿಷ್ಯರಿಗೆ ಧಾರೆ ಎರೆಯುವ ಮೂಲಕ ಅವರನ್ನು ಉನ್ನತ ಮಟ್ಟಕ್ಕೆ ಕರೆದುಕೊಂಡು ಹೋಗುತ್ತಾರೆ. ಹಾಗಾಗಿ ಶಿಕ್ಷಕರ ಬಗ್ಗೆ ವಿದ್ಯಾರ್ಥಿಗಳಿಗೆ ಗೌರವವಿರುತ್ತದೆ. ಆದರೆ ಇಲ್ಲೊಬ್ಬ ಶಿಕ್ಷಕಿ ತನ್ನ ಕಾಮತೃಷೆಯನ್ನು ತೀರಿಸಿಕೊಳ್ಳಲು ವಿದ್ಯಾರ್ಥಿಯನ್ನೇ ಬಳಸಿಕೊಂಡಿದ್ದಾಳೆ. ಆಸ್ಟ್ರೇಲಿಯಾದ ನೈಋತ್ಯ ಸಿಡ್ನಿಯಲ್ಲಿರುವ ಲುರ್ನಿಯಾ ಹೈಸ್ಕೂಲ್ ನಲ್ಲಿ 17 ವರ್ಷದ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ (Sexual Abuse) ನೀಡಿದ ಆರೋಪದ ಮೇಲೆ 30 ವರ್ಷದ ಶಿಕ್ಷಕಿ ತೈಲಾ ಬ್ರೇಲಿಯನ್ನು ಬಂಧಿಸಲಾಗಿದೆ.
ತನ್ನ ಅಧಿಕಾರವನ್ನು ದುರಪಯೋಗಪಡಿಸಿಕೊಂಡು ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಕ್ಕೆ ಹಾಗೂ ವಿದ್ಯಾರ್ಥಿಯ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಮಂಗಳವಾರದಂದು ಶಿಕ್ಷಕಿ ಬ್ರೇಲಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡಿದ ಶಿಕ್ಷಕಿ, ವಿದ್ಯಾರ್ಥಿಗೆ ಅಶ್ಲೀಲ ವಿಡಿಯೊಗಳನ್ನು ಕಳುಹಿಸುವುದು ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಕಾರಣ ತಾನು ಜೈಲಿಗೆ ಹೋಗುತ್ತಿದ್ದೇನೆ. ಇದರಿಂದ ತಾನು ತನ್ನ ಕುಟುಂಬ, ತನ್ನ ಪತಿ ಮತ್ತು ತನ್ನ ಕೆಲಸವನ್ನು ಕಳೆದುಕೊಳ್ಳಬೇಕಾಗಿದೆ ಎನ್ನುವುದನ್ನು ಒಪ್ಪಿಕೊಂಡಿದ್ದಾಳೆ.
ಜುಲೈ ಆರಂಭದಲ್ಲಿ ವಿದ್ಯಾರ್ಥಿಯನ್ನು ಸ್ನ್ಯಾಪ್‍ಚಾರ್ಟ್‍ನಲ್ಲಿ ಪರಿಚಯ ಮಾಡಿಕೊಂಡ ಶಿಕ್ಷಕಿ ಬ್ರೇಲಿ ಆತನೊಂದಿಗೆ ಅನೈತಿಕ ಸಂಬಂಧ ಹೊಂದಲು ಯೋಜನೆ ಮಾಡಿದ್ದಾಳೆ ಮತ್ತು ಜುಲೈ ಆರಂಭದಲ್ಲಿ ಇವರು ಒಬ್ಬರಿಗೊಬ್ಬರು ಮೆಸೇಜ್ ಕಳುಹಿಸಲು ಪ್ರಾರಂಭಿದರು. ಅಲ್ಲದೇ ಆರೋಪಿ ಶಿಕ್ಷಕಿ ನಗ್ನವಾಗಿ ಮತ್ತು ಹಸ್ತಮೈಥುನ ಮಾಡಿಕೊಳ್ಳುವ ತನ್ನ ಹಲವಾರು ಪೋಟೊಗಳು ಮತ್ತು ವಿಡಿಯೊಗಳನ್ನು ವಿದ್ಯಾರ್ಥಿಗೆ ಕಳುಹಿಸಿದ್ದಾಳೆ. ಹಾಗೇ ವಿದ್ಯಾರ್ಥಿ ಕೂಡ ತನ್ನ ಹಲವಾರು ಪೋಟೊ ಮತ್ತು ವಿಡಿಯೊವನ್ನು ಕಳುಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಆರೋಪಿ ಹದಿಹರೆಯದ ವಿದ್ಯಾರ್ಥಿಯನ್ನು ತನ್ನ ಉತ್ತರ ವೊಲ್ಲೊಂಗಾಂಗ್ ಮನೆಗೆ ಕರೆದಿದ್ದಾಳೆ, ಅಲ್ಲಿ ಅವಳು ಅವನನ್ನು ಮಹಡಿಯ ಕೋಣೆಗೆ ಕರೆದೊಯ್ದು ಹಸ್ತಮೈಥುನ ಮಾಡಿಕೊಳ್ಳುವ ಮೂಲಕ ಆತನನ್ನು ಉದ್ರೇಕಿಸಿದಳು. ಒಂದು ವಾರದ ನಂತರ, ಅವರು ಬ್ರೇಲಿಯ ಕಾರಿನಲ್ಲಿ ಲೈಂಗಿಕ ಕ್ರಿಯೆ ನಡೆಸಿದರು ಎಂದು ಆರೋಪಿಸಲಾಗಿದೆ. ಬ್ರೇಲಿಯನ್ನು ಸಂತೋಷಪಡಿಸಲು ಆಗಾಗ ಅಶ್ಲೀಲ ಪೋಟೊಗಳನ್ನು ಕಳುಹಿಸಲು ಹೇಳುತ್ತಿದ್ದಳು. ಇದರಿಂದ ತಾನು ಒತ್ತಡಕ್ಕೊಳಗಾಗಿದ್ದೇನೆ ಎಂದು ವಿದ್ಯಾರ್ಥಿ ನಂತರ ಪೊಲೀಸರಿಗೆ ತಿಳಿಸಿದ್ದಾನೆ. ಅಷ್ಟೇ ಅಲ್ಲದೇ ಬ್ರೇಲಿ ಸಾಮಾಜಿಕ ಮಾಧ್ಯಮದ ಮೂಲಕ ಮೂವರು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದ್ದಾಳೆ ಎಂದು ತನಿಖೆಯಿಂದ ತಿಳಿದುಬಂದಿದೆ, ಆದರೆ ಸದ್ಯ ಅವಳು ಕೇವಲ ಒಬ್ಬನೊಂದಿಗೆ ಮಾತ್ರ ಸಂಬಂಧ ಹೊಂದಿರುವ ಆರೋಪಗಳನ್ನು ಎದುರಿಸುತ್ತಿದ್ದಾಳೆ ಎನ್ನಲಾಗಿದೆ.
ಇದನ್ನೂ ಓದಿ: ಪ್ರಣಯಕ್ಕೆ ಡಿಸ್ಟರ್ಬ್ ಆಯಿತೆಂದು ಕೋಪಗೊಂಡ ಪ್ರಿಯತಮ ಮಹಿಳೆಯ ಮಗುವನ್ನು ನೆಲಕ್ಕೆ ಬಡಿದು ಕೊಂದ!
ಈ ಪ್ರಕರಣ ಕೋರ್ಟ್‍ನಲ್ಲಿ ವಿಚಾರಣೆ ನಡೆಯುತ್ತಿದ್ದಾಗ ಬ್ರೇಲಿಯನ್ನು ಅವರ ಕುಟುಂಬವು ಬೆಂಬಲಿಸಿತು. ಆದರೆ ವಿದ್ಯಾರ್ಥಿಗಳ ಸುರಕ್ಷತೆಗೆ ತನ್ನ ಬದ್ಧತೆಯನ್ನು ಒತ್ತಿಹೇಳಿರುವ ಶಿಕ್ಷಣ ಇಲಾಖೆ ಅವಳ ತಪ್ಪಿಗೆ ಬಾಕಿ ಇರುವ ವೇತನ ನೀಡದೆ ಅಮಾನತುಗೊಳಿಸಿದೆ. ವಾರಕ್ಕೆ ಮೂರು ಬಾರಿ ಪೊಲೀಸ್ ಠಾಣೆಗೆ ಬಂದು ಸಹಿ ಮಾಡುವಂತೆ ಮತ್ತು ಸಾಮಾಜಿಕ ಮಾಧ್ಯಮದಿಂದ ದೂರವಿರುವುದು ಸೇರಿದಂತೆ ಕಠಿಣ ಷರತ್ತುಗಳ ಅಡಿಯಲ್ಲಿ ಬ್ರೈಲಿಗೆ ಜಾಮೀನು ನೀಡಲಾಯಿತು.