ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣ ಹೆಚ್ಚು ನಡೆಯುತ್ತಿದ್ದು, ಹಾಡಹಗಲಿನಲ್ಲೇ ಸಾರ್ವಜನಿಕರು ಓಡಾಡುವ ಸ್ಥಳಗಳಲ್ಲೇ ಕಳ್ಳರು ದರೋಡೆ ಶುರು ಮಾಡಿದ್ದಾರೆ. ಇದೀಗ ಇಂತಹದೊಂದು ಘಟನೆ ರಾಜಸ್ಥಾನದ ಉದಯಪುರ ಬೀದಿಯಲ್ಲಿ ನಡೆದಿದ್ದು, ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿ ವೈರಲ್ (Viral Video )ಆಗಿದೆ.
ಜೂನ್ 28ರಂದು ಪತಿಗೆ ಟಿಫಿನ್ ನೀಡಿ ಹಿಂದಿರುಗುತ್ತಿದ್ದ ಮಹಿಳೆಯನ್ನು ರಾಜಸ್ಥಾನದ ಉದಯಪುರ ಬೀದಿಯಲ್ಲಿ ಹಾಡಹಗಲೇ ಸಂಮೋಹನಗೊಳಿಸಿ ಆಕೆಯಿಂದ 4.5 ಲಕ್ಷ ಮೌಲ್ಯದ ಚಿನ್ನ, ಮೊಬೈಲ್ ಫೋನ್ ಮತ್ತು ಹಣವನ್ನು ದರೋಡೆ ಮಾಡಲಾಗಿದೆ. ಸಂತ್ರಸ್ತೆಯನ್ನು ರೇಖಾ ಜೈನ್ ಎಂದು ಗುರುತಿಸಲಾಗಿದೆ. ಇಡೀ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.
ವಿಡಿಯೊದಲ್ಲಿ ಮಹಿಳೆ ದೆಹಲಿ ಗೇಟ್ ಜಂಕ್ಷನ್ ಬಳಿಯ ವಾಚ್‌ಶಾಪ್ ಹೊರಗಿನ ಬೀದಿಯಲ್ಲಿ ನಡೆದುಹೋಗುವಾಗ ಇಬ್ಬರು ವ್ಯಕ್ತಿಗಳು ಅವಳನ್ನು ತಡೆದರು. ಅವರು ಆಕೆಯ ಬಳಿ ಕೆಲವು ಪ್ರಶ್ನೆಗಳನ್ನು ಕೇಳುತ್ತಿದ್ದರೂ ಮತ್ತು ರೇಖಾ ಅದಕ್ಕೆ ಉತ್ತರಿಸುತ್ತಿದ್ದರು. ನಂತರ ಅವಳು ತನ್ನ ಪರ್ಸ್‌ನಿಂದ 50 ರೂಪಾಯಿಗಳನ್ನು ತೆಗೆದುಕೊಂಡು ಅವರಿಗೆ ನೀಡಿದಳು.
ದುಷ್ಕರ್ಮಿಗಳಲ್ಲಿ ಒಬ್ಬರು ಆಕೆಯ ಕೈಯಿಂದ 50 ರೂಪಾಯಿ ನೋಟನ್ನು ತೆಗೆದುಕೊಂಡರು, ಮತ್ತು ಇನ್ನೊಬ್ಬ ದುಷ್ಕರ್ಮಿ ನೋಟನ್ನು ಮತ್ತೆ ಅವಳ ಕೈಯಲ್ಲಿ ಇಟ್ಟನು. ಕೆಲವೇ ಸೆಕೆಂಡುಗಳಲ್ಲಿ, ರೇಖಾ ಪ್ರಜ್ಞೆ ಕಳೆದುಕೊಂಡರು ಮತ್ತು ಅವರ ಸೂಚನೆಗಳನ್ನು ಅನುಸರಿಸಿದ್ದಾರೆ. ಈ ವೇಳೆ ಅವರು ತಮ್ಮ ಬಳಿ ಇದ್ದ ಚಿನ್ನ, ಮೊಬೈಲ್ ಫೋನ್ ಮತ್ತು ಹಣವನ್ನು ನೀಡಿದ್ದಾರೆ ಎನ್ನಲಾಗಿದೆ.
उदयपुर में गजब मामला हुआ जहां बताया जा रहा है कि बीच बाजार में एक महिला को हिप्नोटाइज कर लूटा गया.
— Avdhesh Pareek (@Zinda_Avdhesh) June 30, 2024
महिला से साढ़े 4 लाख का सोना समेत मोबाइल और कैश ठग ले गए. महिला ने करीब 7 मिनट दोनों ठगों से बात की और इसके बाद आश्चर्यजनक तरीके से वही करती रही जो ठग कहते रहे.
दो लोगों ने… pic.twitter.com/DhD60mP44v
ಈ ಬಗ್ಗೆ ರೇಖಾ ಪ್ರಜ್ಞೆ ಬಂದ ಬಳಿಕ ತನ್ನ ಪತಿಗೆ ವಿಚಾರ ತಿಳಿಸಿದ್ದು, ಇಬ್ಬರು ಸೇರಿ ನಗರದ ಸೂರಜ್ಪೋಲ್ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ. ದೂರಿನಲ್ಲಿ ರೇಖಾ, ಆರೋಪಿಗಳು ತಾನು ನಂಬಿದ ದೇವರ ಬಗ್ಗೆ ಕೇಳಿದ್ದು, ಅದಕ್ಕೆ ಆಕೆ ಭಗವಾನ್ ಮಹಾವೀರ ಸ್ವಾಮಿಯ ಬಗ್ಗೆ ಪ್ರಸ್ತಾಪಿಸಿದಾಗ, ಆಕೆಯ ಬಳಿ ಹಣ ಕೇಳಿದ್ದಾರೆ. ಅವಳು ತನ್ನ ಪರ್ಸ್‌ನಿಂದ 50 ರೂಪಾಯಿಗಳನ್ನು ತೆಗೆದುಕೊಂಡು ಅದನ್ನು ಧಾರ್ಮಿಕ ಕಾರಣಕ್ಕಾಗಿ ಎಂದು ಭಾವಿಸಿ ಅವರಿಗೆ ನೀಡಿದಳು. ದುಷ್ಕರ್ಮಿಗಳಲ್ಲಿ ಒಬ್ಬರು ಆಕೆಯ ಕೈಯಿಂದ 50 ರೂಪಾಯಿ ನೋಟನ್ನು ತೆಗೆದುಕೊಂಡರು, ಮತ್ತು ಇನ್ನೊಬ್ಬ ದುಷ್ಕರ್ಮಿ ನೋಟನ್ನು ಮತ್ತೆ ಅವಳ ಕೈಯಲ್ಲಿ ಇಟ್ಟನು.
ಇದನ್ನೂ ಓದಿ: ಶಿಕ್ಷಣ ತಜ್ಞ ಡಾ ಎಂ ಆರ್ ಜಯರಾಮ್‌ಗೆ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್
ಕೆಲವೇ ಸೆಕೆಂಡುಗಳಲ್ಲಿ, ರೇಖಾ ಪ್ರಜ್ಞೆ ಕಳೆದುಕೊಂಡರು ಮತ್ತು ಅವರ ಸೂಚನೆಗಳನ್ನು ಅನುಸರಿಸಿದರು ಎಂಬುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿವನ್ನು ಪರೀಕ್ಷಿಸಿದಾಗ ರೇಖಾ ಪೊಲೀಸರಿಗೆ ನೀಡಿದ ವಿವರಗಳು ಸಿಸಿಟಿವಿ ದೃಶ್ಯಾವಳಿಗಳಿಂದ ದೃಢಪಟ್ಟಿವೆ. ಪೊಲೀಸರು ಈಗ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.