ಸಾಮಾನ್ಯವಾಗಿ ಎಲ್ಲರೂ ಮಾತನಾಡುವಾಗ ಮುಂದೆ ಇರುವ ವ್ಯಕ್ತಿಗಳ ಕಣ್ಣುಗಳನ್ನು ನೋಡಿಕೊಂಡು ಮಾತನಾಡುತ್ತಾರೆ. ಆಗ ಅವರು ಯಾರ ಜೊತೆ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ಅರ್ಥವಾಗುತ್ತದೆ. ಆದರೆ ಕೆಲವು ಜನರು ಮಾತನಾಡುತ್ತಿರುವವರ ಕಣ್ಣುಗಳನ್ನು ನೋಡದೆ ಅತ್ತಿತ್ತ ನೋಡಿದರೆ ಮಾತನಾಡುವವರಿಗೆ ಅವರಿಗೆ ಈ ಬಗ್ಗೆ ಆಸಕ್ತಿ ಇಲ್ಲ ಎಂಬ ಭಾವನೆ ಮೂಡುತ್ತದೆ. ಇದು ಎಲ್ಲರಿಗೂ ಆಗುವುದು ಸಹಜ. ಇಂತಹದೊಂದು ವಿಚಾರದ ಬಗ್ಗೆ ಇತ್ತೀಚೆಗೆ ಪಾಕಿಸ್ತಾನದ ಪಾರ್ಲಿಮೆಂಟ್‌ನಲ್ಲಿ ಚರ್ಚೆಯಾಗಿದ್ದು, ವಿಡಿಯೊ ವೈರಲ್ (Viral Video) ಆಗಿದೆ.
ಇತ್ತೀಚೆಗೆ ಪಾಕಿಸ್ತಾನದ ಪಾರ್ಲಿಮೆಂಟ್‌ನಲ್ಲಿ ಇಮ್ರಾನ್ ಖಾನ್ ಅವರ ಪಕ್ಷದ ಮುಖಂಡ ಜರ್ತಾಜ್ ಗುಲ್ ಅವರು ತಾವು ಮಾತನಾಡುವಾಗ ಯಾವುದೋ ಕಡೆ ನೋಡುತ್ತಿದ್ದ ವಿಧಾನಸಭಾ ಸ್ಪೀಕರ್ ಅಯಾಜ್ ಸಾದಿಕ್ ಅವರ ಕುರಿತು, ತಾನು ಮಾತನಾಡುವಾಗ ಕಣ್ಣಿನ ಸಂಪರ್ಕವನ್ನು ತಪ್ಪಿಸಬೇಡಿ ಎಂದು ಹೇಳಿದ್ದಾರೆ.
ಜರ್ತಾಜ್ ಗುಲ್ ಅವರು ಸಭೆಯಲ್ಲಿ ಮಾತನಾಡುವಾಗ “ನೀವು ನನ್ನತ್ತ ನೋಡದಿದ್ದರೆ, ನಾನು ನಿಮ್ಮೊಂದಿಗೆ ಮಾತನಾಡುವುದಿಲ್ಲ ಎಂದು ಸ್ಪೀಕರ್‌ಗೆ ಹೇಳುವ ಮೂಲಕ ಪಾಕಿಸ್ತಾನ ಸಂಸತ್ತಿನಲ್ಲಿ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮ ವೆಬ್‌ಸೈಟ್‌ಗಳಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್ ಆಗಿದೆ.
ಪಾಕಿಸ್ತಾನ ವಿಧಾನಸಭೆಯಲ್ಲಿ ಇತ್ತೀಚೆಗೆ ನಡೆದ ಸಂಸತ್ತಿನ ಕಲಾಪಗಳಲ್ಲಿ ಈ ಘಟನೆ ನಡೆದಿದ್ದು, ಈ ವಿಡಿಯೊದಲ್ಲಿ ಸಚಿವೆ “ನನ್ನ ಪಕ್ಷದ ನಾಯಕರು ನನಗೆ ಕಣ್ಣುಗಳನ್ನು ನೋಡುತ್ತಾ ಮಾತನಾಡಲು ಕಲಿಸಿದ್ದಾರೆ. ನೀವು ಈ ರೀತಿಯ ಕಣ್ಣಿನ ಸಂಪರ್ಕವನ್ನು ತಪ್ಪಿಸಿದರೆ ನಾನು ಮಾತನಾಡುವುದನ್ನು ಮುಂದುವರಿಸಲು ಸಾಧ್ಯವಿಲ್ಲ. ನಿಮ್ಮ ಕನ್ನಡಕವನ್ನು ಧರಿಸಿ, ಸರ್” ಎಂದು ಜರ್ತಾಜ್ ಗುಲ್ ಸ್ಪೀಕರ್ ಅಯಾಜ್ ಸಾದಿಕ್ ಅವರಿಗೆ ಹೇಳಿದರು. ʼನಾನು ಒಬ್ಬಳು ಲೀಡರ್ʼ ನನಗೆ 1.5 ಲಕ್ಷ ಮತಗಳು ಬಂದಿವೆ. ನೀವು ನನ್ನ ಮಾತನ್ನು ಕೇಳದಿದ್ದರೆ, ನಾನು ನಿಮ್ಮೊಂದಿಗೆ ಮಾತನಾಡಲು ಸಾಧ್ಯವಾಗುವುದಿಲ್ಲ” ಎಂದು ಜರ್ತಾಜ್ ಗುಲ್ ಹೇಳಿದರು.
Meanwhile..Parliament in Pakistan pic.twitter.com/U5GcDD4Dp1
— We Dravidians (@WeDravidians) June 30, 2024
ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ʼಮಹಿಳೆಯೊಂದಿಗೆ ಕಣ್ಣಿನ ಸಂಪರ್ಕ ಮಾಡುವುದು ಒಳ್ಳೆಯದಲ್ಲ ಎಂದು ನಾನು ಕೇಳಿದ್ದೇನೆ. ಆದಕಾರಣ ಹೆಣ್ಣಿನ ಕಣ್ಣಿನ ಸಂಪರ್ಕವನ್ನು ಮಾಡುವುದಿಲ್ಲʼ ಎಂದು ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಮರು ಉತ್ತರಿಸಿದ ಸಚಿವೆ, ಈ ರೀತಿಯಲ್ಲಿ 52% ಮಹಿಳೆಯರನ್ನು ನೀವು ನಿರ್ಲಕ್ಷಿಸಿದರೆ, ಆಯ್ದ ಜನರು ಮಾತ್ರ ಇಲ್ಲಿಗೆ ಬರುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮೊಬೈಲ್ ಕದ್ದ ಕಳ್ಳನಿಗೆ ದೇವರು ಕೊಟ್ಟ ಶಿಕ್ಷೆ ಮಾತ್ರ ಘೋರ! ವಿಡಿಯೊ ನೋಡಿ
ಜರ್ತಾಜ್ ಗುಲ್ 2024ರಲ್ಲಿ ಡೇರಾ ಘಾಜಿಯಿಂದ ಮರು ಆಯ್ಕೆಯಾದವರು. ಗುಲ್ ಪಾಕಿಸ್ತಾನದ ರಾಜಕಾರಣಿಯಾಗಿದ್ದು, ಇಮ್ರಾನ್ ಖಾನ್ ಅವರ ಸಂಪುಟದಲ್ಲಿ ಹವಾಮಾನ ಬದಲಾವಣೆಯ ರಾಜ್ಯ ಸಚಿವರಾಗಿ ಅಕ್ಟೋಬರ್ 5 ,2018ರಿಂದ ಏಪ್ರಿಲ್ 10, 2022ರವರೆಗೆ ಸೇವೆ ಸಲ್ಲಿಸಿದರು.