Site icon Vistara News

Fitness: ಈ ವ್ಯಕ್ತಿಯ ವಯಸ್ಸು 93, ಆದರೆ ದೇಹ ಮಾತ್ರ 40ರ ಹರೆಯದ್ದು! ಇದು ಹೇಗೆ ಸಾಧ್ಯ?

Fitness, The age of this man is 93, but the body is only 40 years old

ನವದೆಹಲಿ: 93 ವರ್ಷದ ವ್ಯಕ್ತಿಯೊಬ್ಬರು (93 Year old man) 40 ವರ್ಷದ ವ್ಯಕ್ತಿಯ ರೀತಿಯಂತೆ ತಮ್ಮ ದೇಹವನ್ನು ನಿರ್ವಹಣೆ ಮಾಡಿಕೊಂಡಿದ್ದಾರೆ(40 Year old man)! ಹೌದು, ಐರಿಸ್ ಮೂಲದ ರಿಚರ್ಡ್ ಮೊರ್ಗನ್ (Richard Morgan) ಅವರು ವಯಸ್ಸಿಗೆ ಮರು ವ್ಯಾಖ್ಯಾನ ಮಾಡಿದ್ದಾರೆ. ತಮ್ಮ 70ರ ಹರೆಯದಲ್ಲಿ ರೋಯಿಂಗ್(ಜಲಕ್ರೀಡೆ) ಕೈಗೆತ್ತಿಕೊಂಡಿದ್ದರೂ(rowing), ಅವರು ನಾಲ್ಕು ಬಾರಿ ಒಳಾಂಗಣ ರೋಯಿಂಗ್ ಚಾಂಪಿಯನ್ ಕೂಡ ಆಗಿದ್ದಾರೆ ಮತ್ತು ಈಗ ತಮ್ಮ ಯೌವನದ ಹೃದಯ ಮತ್ತು ಮೈಕಟ್ಟು ಮೂಲಕ ವಿಜ್ಞಾನಿಗಳನ್ನು ಬೆರಗುಗೊಳಿಸಿದ್ದಾರೆ(Fitness).

ಮೊರ್ಗನ್ ಅವರ ಗಮನಾರ್ಹವಾದ ಫಿಟ್ನೆಸ್ ಪ್ರಯಾಣವು ಆರೋಗ್ಯಕರ ವಯಸ್ಸಾದ ಮೇಲೆ ಒಂದು ಅದ್ಭುತವಾದ ಅಧ್ಯಯನದ ವಿಷಯವಾಗಿಸಿದೆ. ಅವರ 80% ಸ್ನಾಯುವಿನ ದ್ರವ್ಯರಾಶಿ ಮತ್ತು ಹೃದಯದ ಕಾರ್ಯದಿಂದ ಸಂಶೋಧಕರು ದಿಗ್ಭ್ರಮೆಗೊಂಡಿದ್ದಾರೆ. ಇದು 40 ವರ್ಷ ವಯಸ್ಸಿನವರನ್ನು ಹೋಲುತ್ತದೆ. ವಯಸ್ಸು ಮೀರಿರುವ ಈ ಅಂಬಿಗ ನಮಗೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ, ಸಕ್ರಿಯ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಮತ್ತು ದೈಹಿಕ ಸಾಮರ್ಥ್ಯದ ಪ್ರತಿಫಲವನ್ನು ಪಡೆದುಕೊಳ್ಳಲು ವಯಸ್ಸು ಮಿತಿ ಇಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ.

ಕಳೆದ ತಿಂಗಳು ಅಪ್ಲೈಡ್ ಸೈಕಾಲಜಿ ಜರ್ನಲ್‌‌ನಲ್ಲಿ ಪ್ರಕಟವಾದ ವಿಶ್ಲೇಷಣೆಯಲ್ಲಿ ರಿಚರ್ಡ್ ಅವರು ನಿತ್ಯದ ಟ್ರೈನಿಂಗ್, ಆಹಾರ ಪದ್ಧತಿ ಮತ್ತು ಒಟ್ಟಾರೆ ಆರೋಗ್ಯವನ್ನು ಪರಾಮರ್ಶಿಸಲಾಗಿದೆ.

ಮೊರ್ಗಾನ್ ಅವರ ಸೈಕಾಲಜಿ, ಪ್ರದರ್ಶನ, ಪೌಷ್ಟಿಕ ಆಹಾರ ತೆಗೆದುಕೊಳ್ಳುವುದು ಮತ್ತು ಟ್ರೈನಿಂಗ್ ಪದ್ಧತಿಗಳನ್ನು ವಿಶ್ಲೇಷಣೆ ಮಾಡಲಾಗಿದೆ. ಬಯೋಎಲೆಕ್ಟ್ರಿಕಲ್ ರೋಧತ್ವ ಮೂಲಕ ಅವರ ಶರೀರ ರಚನೆಯನ್ನು ವಿಶ್ಲೇಷಿಸಲಾಗಿದೆ. ಉಸಿರು ಒಳ ತೆಗೆದುಕೊಳ್ಳುವುದು, ಇಂಗಾಲ ಉತ್ಪಾದನೆ, ವೆಂಟಿಲೇಷನ್ ಮತ್ತು ಹಾರ್ಟ್ ರೇಟ್ ಸೇರಿದಂತೆ ಅವರ ದೇಹವನ್ನು ರೋಯಿಂಗ್ ಎರ್ಗೋಮೀಟರ್‌ ಮೂಲಕ ಪರೀಕ್ಷಿಸಲಾಗಿದೆ.

ಈ ಹಿಂದೆ ಬೇಕರ್ ಆಗಿ ಕೆಲಸ ಮಾಡಿರುವ ಈ ಐರಿಸ್ ವ್ಯಕ್ತಿಯು ತಮ್ಮ 73ನೇ ವಯಸ್ಸಿನವರೆಗೂ ಯಾವುದೇ ಕ್ರೀಡೆಯಲ್ಲಿ ತೊಡಗಿಸಿಕೊಂಡಿರಲಿಲ್ಲ. ಈ ಕುರಿತು ವಾಷಿಂಗ್ಟನ್ ಪೋಸ್ಟ್‌ ಜತೆ ಮಾತನಾಡಿರುವ ರಿಚರ್ಡ್ ಅವರು, ನಾನು ಎಲ್ಲಿಂದಲೂ ಆರಂಭಿಸಲಿಲ್ಲ. ಒಂದು ದಿನ ನನಗೆ ಜ್ಞಾನೋದಯವಾಯಿತು ಮತ್ತು ರೋಯಿಂಗ್ ಮಾಡುವುದರಲ್ಲಿ ಸಾಕಷ್ಟು ಆನಂದವಿದೆ ಎಂದು ಗೊತ್ತಾಯಿತು ಎಂದು ಹೇಳಿದ್ದಾರೆ.

ವಿವಿಧ ತರಬೇತಿ, ತೂಕದ ವರ್ಕೌಟ್ಸ್ ಮತ್ತು ಹೆಚ್ಚು ಪ್ರೊಟಿನ್ ಇರುವ ಆಹಾರಗಳಿಂದಾಗಿ ರಿಚರ್ಡ್ ಮೊರ್ಗಾನ್ ಅವರು ದೇಹಕ್ಕೆ ವಯಸ್ಸಾಗಿಲ್ಲ ಎಂದು ವಿಜ್ಞಾನಿಗಳು ನಿರ್ಧಾರಕ್ಕೆ ಬಂದಿದ್ದಾರೆ.

ಈ ಸುದ್ದಿಯನ್ನೂ ಓದಿ: Zerodha : ವಿಶ್ವ ಆರೋಗ್ಯ ದಿನ ಫಿಟ್ನೆಸ್‌ಗೆ ಸ್ಪೂರ್ತಿ ನೀಡಿದವರನ್ನು ಸ್ಮರಿಸಿದ ಜೆರೋಧಾ ಸಿಇಒ ನಿತಿನ್‌ ಕಾಮತ್

Exit mobile version