Site icon Vistara News

Food Expired Date: ಅವಧಿ ಮೀರಿದ ಆಹಾರದಿಂದ ಜೀವಕ್ಕೇ ಅಪಾಯ! ಖರೀದಿಸುವಾಗ ಈ ಅಂಶಗಳನ್ನು ಗಮನಿಸಿ

Food products

ಎರಡು ದಿನಗಳ ಹಿಂದೆ ಡೇಟ್ ಎಕ್ಸ್‌ಪೈರ್‌ (Food Expired Date) ಆಗಿದ್ದ ಚಾಕಲೇಟ್ (Chocolate) ಸೇವಿಸಿ ಪಂಜಾಬ್‌ನ (punjab) ಪಟಿಯಾಲದಲ್ಲಿ (patiyala) ಬಾಲಕಿ ಒಬ್ಬಳು ಮೃತಪಟ್ಟಿದ್ದಳು, ವಾರದ ಹಿಂದೆ ಮಂಡ್ಯ (mandya) ಜಿಲ್ಲೆ ಶ್ರೀರಂಗಪಟ್ಟಣ (srirangapattana) ತಾಲೂಕಿನ ಬೆಟ್ಟಹಳ್ಳಿಯಲ್ಲಿ ಐಸ್ ಕ್ರೀಮ್ (icecream) ತಿಂದು ಅವಳಿ ಜವಳಿ ಮಕ್ಕಳಿಬ್ಬರು ಮೃತಪಟ್ಟಿದ್ದರು. ಈ ಎರಡೂ ಘಟನೆಗಳಲ್ಲಿ ಖರೀದಿ ಮಾಡಿದ ಆಹಾರದ (Food products) ಗುಣಮಟ್ಟದ (quality) ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.

ಆಹಾರ ಮತ್ತು ಔಷಧ ಇವೆರಡೂ ನಿರ್ದಿಷ್ಟ ಸಮಯದ ಬಳಿಕ ಹಾಳಾಗುತ್ತದೆ ಮತ್ತು ವಿಷಕಾರಿಯಾಗುತ್ತದೆ. ಹೀಗಾಗಿ ಅರೋಗ್ಯ ಸುರಕ್ಷತೆಯ ದೃಷ್ಟಿಯಲ್ಲಿ ಇವೆರಡನ್ನು ನಿಗದಿತ ಸಮಯದೊಳಗೆ ಸೇವಿಸುವುದು ಉತ್ತಮ.

ಇವೆರಡರ ನಡುವಿನ ಗಮನಾರ್ಹ ವ್ಯತ್ಯಾಸವೆಂದರೆ ಎಕ್ಸ್‌ಪೈರಿ ಡೇಟ್ ಮುಗಿದ ಮೇಲೆ ಔಷಧಗಳಲ್ಲಿ ಬಳಸುವ ರಾಸಾಯನಿಕ ಮಿಶ್ರಣವು ವಿಷವಾಗುತ್ತದೆ. ಅದಕ್ಕಾಗಿ ಎಕ್ಸ್‌ಪೈರಿ ಡೇಟ್ ಮುಗಿದ ಮೇಲೆ ಔಷಧವನ್ನು ಸೇವಿಸಬಾರದು ಮತ್ತು ಎಸೆಯಬೇಕು. ಇಲ್ಲಿ ಸುರಕ್ಷತೆ ಸಮಸ್ಯೆಯೇ ಹೊರತು ಗುಣಮಟ್ಟ ಅಲ್ಲ.

ಇದನ್ನೂ ಓದಿ: Nestle Company: ಮಕ್ಕಳ ಜೀವದ ಜತೆ ನೆಸ್ಲೆ ಕಂಪನಿ ಚೆಲ್ಲಾಟ? ಸೆರೆಲಾಕ್‌ ಕುಡಿಸೋ ಮುನ್ನ ಎಚ್ಚರ!

ಇದಕ್ಕೆ ವ್ಯತಿರಿಕ್ತವಾಗಿ ಆಹಾರ ಉತ್ಪನ್ನಗಳು ಕ್ರಮೇಣ ಹಾಳಾಗುತ್ತವೆ. ಅಪರೂಪ ಎಂಬಂತೆ ಕೆಲವೊಮ್ಮೆ ವಿಷಕಾರಿಯಾಗುತ್ತವೆ. ಆಹಾರ ವಿಷಕಾರಿ ಆಗುವ ಮೊದಲು ರುಚಿ, ಪರಿಮಳ ಮತ್ತು ಪೌಷ್ಟಿಕಾಂಶವನ್ನು ಕಳೆದುಕೊಳ್ಳುತ್ತದೆ. ಕಾಲಾನಂತರದಲ್ಲಿ ತನ್ನ ಗುಣಮಟ್ಟವನ್ನು ಕಳೆದುಕೊಳ್ಳುತ್ತದೆ. ಹೀಗಾಗಿ ಇಲ್ಲಿ, ಗುಣಮಟ್ಟ ಪ್ರಮುಖ ವಿಚಾರವಾಗಿದೆಯೇ ಹೊರತು ಸುರಕ್ಷತೆ ಅಲ್ಲ. ಹೀಗಾಗಿ ಆಹಾರ ಉತ್ಪನ್ನಗಳಿಗೆ ಎಕ್ಸ್‌ಪೈರಿ ಡೇಟ್ ಈನ್ದು ಇರುವುದಿಲ್ಲ. ಬದಲಾಗಿ ಅವನ್ನು ತಯಾರಿಸಿದ, ಬಳಸಲಾಗುವ ದಿನಾಂಕಗಳನ್ನು ಮಾತ್ರ ಹೇಳಲಾಗುತ್ತದೆ.


ಆಹಾರ ಪೋಲು

ಇದರಿಂದಾಗಿ ಪ್ರಪಂಚದಾದ್ಯಂತ ಜನರು ಸೇವಿಸಲು ಯೋಗ್ಯವಾದ ಸಾಕಷ್ಟು ಉತ್ತಮವಾದ ಆಹಾರಗಳು ಕಸದ ಬುಟ್ಟಿ ಸೇರುತ್ತದೆ.

ಪ್ರಪಂಚದಾದ್ಯಂತ ಲಕ್ಷಾಂತರ ಮಂದಿ ಎರಡು ಹೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದಾರೆ. ಅಮೆರಿಕ, ಮಲೇಷ್ಯಾ ದೇಶಗಳು ವಿಶ್ವದಲ್ಲೇ ಹೆಚ್ಚು ಆಹಾರ ಪೋಲು ಮಾಡುವ ರಾಷ್ಟ್ರಗಳಾಗಿವೆ. ಇದರಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ. ನಾವು ಆಹಾರ ವ್ಯರ್ಥವಾಗುವುದನ್ನು ತಡೆಗಟ್ಟುವ ಜೊತೆಗೆ ಅವುಗಳ ಗುಣಮಟ್ಟಕ್ಕೂ ಹೆಚ್ಚಿನ ಆದ್ಯತೆ ನೀಡಬೇಕಿದೆ.

ಆಹಾರ ಉತ್ಪನ್ನಗಳ ದಿನಾಂಕ

ಬೇರೆಬೇರೆ ಆಹಾರಗಳು ಬೇರೆಬೇರೆ ಅವಧಿಯವರೆಗೆ ಉತ್ತಮ ಗುಣಮಟ್ಟದಲ್ಲಿ ಇರುತ್ತದೆ. ಅಂದರೆ, ಎಲ್ಲಾ ಆಹಾರ ಪದಾರ್ಥಗಳು ಒಂದೇ ಪ್ರಮಾಣದಲ್ಲಿ, ಒಂದೇ ಸಮಯದಲ್ಲಿ ಹಾಳಾಗುವುದಿಲ್ಲ. ಆಹಾರ ಕಂಪನಿಗಳು ಶೆಲ್ಫ್ ಜೀವನವನ್ನು ಹೆಚ್ಚಿಸಲು ಸಂರಕ್ಷಕಗಳನ್ನು ಬಳಸುತ್ತವೆ. ಇದರ ಆಧಾರದ ಮೇಲೆ ಅವುಗಳ ಗುಣಮಟ್ಟದ ಬಾಳಿಕೆ ಅವಧಿಯನ್ನು ನಿರ್ಧರಿಸಲಾಗುತ್ತದೆ.

ಆಹಾರದ ಗುಣಮಟ್ಟಕ್ಕೆ ದಿನಾಂಕಗಳನ್ನು ಹೇಗೆ ನಿರ್ಧರಿಸಬೇಕು ಎಂಬುದರ ಕುರಿತು ವಿಶ್ವದ ಯಾವುದೇ ದೇಶದಲ್ಲೂ ಸ್ಪಷ್ಟ ಮಾರ್ಗಸೂಚಿಗಳಿಲ್ಲ. ಹೀಗಾಗಿ ಇದಕ್ಕೆ ಸಂಬಂಧಿಸಿ ಕಠಿಣ ಕಾನೂನುಗಳನ್ನು ಹೊಂದಿಲ್ಲ. ಇದನ್ನು ಅನುಭವದ ಆಧಾರದ ಮೇಲೆ ನಿರ್ಧರಿಸಲು ಆಹಾರ ತಯಾರಕರಿಗೆ ಅನುಮತಿ ನೀಡಲಾಗಿದೆ. ಇದಕ್ಕಾಗಿ ಆಹಾರ ಕಂಪೆನಿಗಳು ಗುಣಮಟ್ಟವನ್ನು ಪರೀಕ್ಷಿಸಲು ಕೆಲವು ಪರೀಕ್ಷೆಗಳನ್ನು ನಡೆಸುತ್ತವೆ.

ವಿದೇಶಗಳಲ್ಲಿ ಆಹಾರ ಗುಣಮಟ್ಟ ನಿರ್ಧರಿಸುವ ದಿನಾಂಕಗಳನ್ನು ಉಲ್ಲೇಖಿಸಲಾಗುತ್ತದೆ. ಇದರ ಬಗ್ಗೆ ಭಾರತೀಯರು ತಿಳಿದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ವಿದೇಶಕ್ಕೆ ಪ್ರವಾಸ ಮಾಡುವ ಯೋಜನೆ ಇದ್ದರೆ ಇದು ಹೆಚ್ಚು ಉಪಯುಕ್ತವಾಗಿರುತ್ತದೆ.


ಪ್ಯಾಕ್ಡ್ ಆನ್ / ಕ್ಲೋಸ್ಡ್ ಆನ್

ಆಹಾರ ಪದಾರ್ಥವನ್ನು ಕಂಟೇನರ್‌ನಲ್ಲಿ ಸೀಲ್ ಮಾಡಿದ ದಿನಾಂಕ ಮತ್ತು ಅದರ ಬಾಳಿಕೆ ಹಾಗೂ ಆಹಾರದ ಗುಣಮಟ್ಟವನ್ನು ನಿರ್ಣಯಿಸಲು ಇದು ಉಪಯುಕ್ತವಾಗಿದೆ.

ಸೆಲ್ ಬೈ / ಪುಲ್ ಬೈ

ಈ ಸಂದೇಶವು ತಯಾರಕರಿಂದ ಚಿಲ್ಲರೆ ವ್ಯಾಪಾರಿಗಳಿಗೆ. ನಿರ್ಧಿಷ್ಟ ದಿನಾಂಕದೊಳಗೆ ಉತ್ಪನ್ನವನ್ನು ಮಾರಾಟ ಮಾಡದಿದ್ದರೆ ಅದನ್ನು ಶೆಲ್ಫ್‌ನಿಂದ ತೆಗೆದು ಕಸದ ಬುಟ್ಟಿಗೆ ಹಾಕಬೇಕು.

ಬೆಸ್ಟ್ ಯೂಸ್ಡ್ ಬಿಫೋರ್/ ಬೆಸ್ಟ್ ಯೂಸ್ಡ್ ಬೈ

ಇದು ಆಹಾರ ಪದಾರ್ಥಗಳ ಗುಣಮಟ್ಟ ಕಡಿಮೆಯಾಗುವುದನ್ನು ಸೂಚಿಸುವ ದಿನಾಂಕವಾಗಿದೆ. ನಿರ್ದಿಷ್ಟ ದಿನಾಂಕದೊಳಗೆ ಬಳಸದೇ ಇದ್ದರೆ ಆಹಾರದ ರುಚಿ, ಪರಿಮಳ ಮತ್ತು ಪೌಷ್ಟಿಕಾಂಶದ ಮೌಲ್ಯವು ನಂತರ ಬದಲಾಗುತ್ತದೆ. ಈ ದಿನಾಂಕದ ಅನಂತರ ಕೆಲವು ದಿನಗಳವರೆಗೆ ಆಹಾರವು ಸೇವಿಸಲು ಸಾಕಷ್ಟು ಉತ್ತಮವಾಗಿರುತ್ತದೆ.

ಯೂಸ್ ಬೈ/ ಡು ನಾಟ್ ಯೂಸ್ ಆಫ್ಟರ್

ನಿಗದಿತ ಅವಧಿ ಮುಗಿದ ಬಳಿಕ ಆಹಾರದ ಗುಣಮಟ್ಟವು ಹದಗೆಟ್ಟಿರುತ್ತದೆ. ಅದನ್ನು ಕಸದ ಬುಟ್ಟಿಗೆ ಹಾಕಲೇ ಬೇಕು ಎಂಬುದನ್ನು ಇದು ಹೇಳುತ್ತದೆ.

ಇವೆಲ್ಲವೂ ಮುಚ್ಚಿರುವ ಆಹಾರಗಳಿಗೆ ಮಾತ್ರ ಅನ್ವಯಾವಾಗುತ್ತದೆ. ಒಮ್ಮೆ ಪ್ಯಾಕೆಟ್ ತೆರೆದರೆ ಅಥವಾ ಗಾಳಿಗೆ ಒಡ್ಡಿಕೊಂಡರೆ ಅವುಗಳ ಗುಣಮಟ್ಟ ಕ್ಷೀಣಿಸಲು ಪ್ರಾರಂಭವಾಗುತ್ತದೆ.

ಖರೀದಿ ಮಾಡುವಾಗ ಎಚ್ಚರ

ಪ್ಯಾಕೆಟ್ ನಲ್ಲಿರುವ ದಿನಾಂಕ ಕೇವಲ ಗುಣಮಟ್ಟಕ್ಕೆ ಸಂಬಂಧಿಸಿರುತ್ತದೆ. ಆದರೆ ಆಹಾರದಲ್ಲಿ ನಾವು ಸುರಕ್ಷತೆ ಬಗ್ಗೆಯೂ ಗಮನ ಹರಿಸಬೇಕು.

ಪ್ಯಾಕೆಟ್ ಆಹಾರ ಖರೀದಿ ಪ್ಯಾಕೆಟ್ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಯಾಕೆಂದರೆ ಆಹಾರ ಪ್ಯಾಕೇಜಿಂಗ್, ಸ್ಥಳಾಂತರದ ವೇಳೆ ಅದು ಹಾನಿಗೊಳಾಗಿರಬಹುದು. ಇಂತಹ ಪ್ಯಾಕೆಟ್‌ಗಳು ಇಲಿ, ನೊಣಗಳಿಂದ ಸೋಂಕಿಗೆ ಒಳಗಾಗಿ, ಗಾಳಿಯ ತೇವಾಂಶದಿಂದ ವಿಷಕಾರಿ ಆಗಿರಬಹುದು.

ಆಹಾರ ಡಬ್ಬಿಯಲ್ಲಿ ಬಿರುಕು ಇದೆಯೇ ಎಂಬುದನ್ನು ಪರಿಶೀಲಿಸಬೇಕು. ಅಲ್ಲದೇ ಕೆಲವೊಂದು ಡಬ್ಬಿಗಳು ಉಬ್ಬಿದ್ದರೆ ಆಹಾರದಲ್ಲಿ ತೀವ್ರವಾದ ಬ್ಯಾಕ್ಟೀರಿಯಾ ಇದ್ದು, ಆಹಾರ ವಿಷಕಾರಿಯಾಗುತ್ತಿದೆ ಎಂಬುದನ್ನು ಅರಿತುಕೊಳ್ಳಬೇಕು.


ಮನೆಯಲ್ಲಿ ಸಿದ್ಧಪಡಿಸಿದ ಆಹಾರ

ಕೆಟ್ಟ ವಾಸನೆ, ಪ್ಯಾಕೆಟ್, ಕ್ಯಾನ್‌ನಲ್ಲಿ ಕಪ್ಪು ಕಲೆಗಳು- ಇದು ಇಲಿಗಳಿಂದ ಆಹಾರ ಹಾಳಾಗಿದೆ ಎಂಬುದನ್ನು ತಿಳಿಸುತ್ತದೆ.

ಸಾಮಾನ್ಯವಾಗಿ ಆಹಾರದ ಬಣ್ಣ ಬದಲಾಗಿದ್ದರೆ, ಅವುಗಳ ಮೇಲೆ ಹಸಿರು ಅಥವಾ ಕಪ್ಪು ತೇಪೆಗಳು ಕಂಡುಬಂದರೆ ಇದು ಶಿಲೀಂಧ್ರಗಳ ಬೆಳವಣಿಗೆಯಾಗಿದೆ. ಇದು ಹೆಚ್ಚಾಗಿ ಬೇಯಿಸಿದ ಪದಾರ್ಥಗಳಲ್ಲಿ ಕಾಣಿಸುತ್ತದೆ.

ಆಹಾರವು ತುಂಬಾ ಬಲವಾದ ಅಸಾಮಾನ್ಯ ವಾಸನೆಯನ್ನು ಹೊಂದಿದ್ದರೆ ಆಹಾರವು ಹುಳಿಯಾಗಿರುತ್ತದೆ. ಸಾಮಾನ್ಯವಾಗಿ ದೋಸೆ ಅಥವಾ ಇಡ್ಲಿ ಹಿಟ್ಟು ಮತ್ತು ಮೊಸರಿನಲ್ಲಿ ಹೀಗಾಗುತ್ತದೆ.

ಆಹಾರ ಪದಾರ್ಥವು ಲೋಳೆ ಅಥವಾ ಜಿಗುಟಾಗಿದ್ದರೆ ಬ್ಯಾಕ್ಟೀರಿಯಾ ಅಥವಾ ವೈರಲ್ ತಗಲಿದೆ ಎಂಬುದರ ಸೂಚಕವಾಗಿದೆ.

ಆಹಾರ ಸಾಮಾನ್ಯಕ್ಕಿಂತ ಹೆಚ್ಚು ಕಹಿ ಅಥವಾ ಹೆಚ್ಚು ಹುಳಿಯಾಗಿದ್ದಾರೆ ಬ್ಯಾಕ್ಟೀರಿಯಾದ ಚಟುವಟಿಕೆ ನಡೆಯುತ್ತಿದೆ ಎಂದು ತಿಳಿಯಬೇಕು.

ಯಾವತ್ತೂ ಆಹಾರದ ಮುಚ್ಚಳ ತೆರೆಯುವಾಗ ಸೂಕ್ಷ್ಮವಾಗಿ ಗಮನಿಸಿ. ಒಂದು ವೇಳೆ ಬಳಸಲು ಯೋಗ್ಯವಾಗಿಲ್ಲ ಎಂದು ಅನಿಸಿದರೆ ಕೂಡಲೇ ಅದನ್ನು ಕಸದ ಬುಟ್ಟಿಗೆ ಹಾಕಿ.

ಗುಣಮಟ್ಟ ಕಾಪಾಡಿ

ಮಾರುಕಟ್ಟೆಯಿಂದ ಖರೀದಿ ಮಾಡಿ ತಂದ ವಸ್ತುಗಳ ಗುಣಮಟ್ಟ ಕಾಪಾಡುವುದು ನಮ್ಮ ಜವಾಬ್ದಾರಿ. ಹಣ್ಣು ಅಥವಾ ತರಕಾರಿಗಳನ್ನು ತೊಳೆದು ರೆಫ್ರಿಜರೇಟರ್ ನಲ್ಲಿ ಇಡಿ. ಆಹಾರ ಪ್ಯಾಕೆಟ್‌ಗಳ ಮೇಲೆ ಅವುಗಳನ್ನು ಹೇಗೆ ಸಂಗ್ರಹಿಸಿಡಬೇಕು ಎಂದು ಸೂಚಿಸಲಾಗಿರುತ್ತದೆ. ಅದನ್ನು ತಿಳಿದುಕೊಳ್ಳಿ. ಉದಾ- ಬೀಜಗಳನ್ನು ತೆರೆದು ಇಡಬಾರದು ಏಕೆಂದರೆ ಅವುಗಳಲ್ಲಿನ ತೈಲಗಳು ಕಂದುಬಣ್ಣಕ್ಕೆ ತಿರುಗುವುದರಿಂದ ಅವು ಮೃದು ಮತ್ತು ಕಹಿಯಾಗಬಹುದು.
ಕೆಲವು ಉತ್ಪನ್ನಗಳನ್ನು ತಕ್ಷಣವೇ ಬಳಸಲಾಗುವುದಿಲ್ಲ. ಆದರೆ ಹೆಚ್ಚು ಕಾಲ ಉಳಿಯಬೇಕು. ಆಗ ಅವುಗಳನ್ನು ಫ್ರೀಜರ್ ನಲ್ಲಿ ಇರಿಸಿ.

ಆಹಾರದ ಪ್ಯಾಕೆಟ್ ಅನ್ನು ತೆರೆದ ಬಳಿಕ ತಕ್ಷಣವೇ ಖಾಲಿ ಮಾಡಿ. ಪದೇಪದೇ ಗಾಳಿಗೆ ಒಡ್ಡುವುದರಿಂದ ಅವುಗಳ ಸತ್ವ ನಾಶವಾಗುತ್ತದೆ.

Exit mobile version