Food Expired Date: ಅವಧಿ ಮೀರಿದ ಆಹಾರದಿಂದ ಜೀವಕ್ಕೇ ಅಪಾಯ! ಖರೀದಿಸುವಾಗ ಈ ಅಂಶಗಳನ್ನು ಗಮನಿಸಿ - Vistara News

ಆಹಾರ/ಅಡುಗೆ

Food Expired Date: ಅವಧಿ ಮೀರಿದ ಆಹಾರದಿಂದ ಜೀವಕ್ಕೇ ಅಪಾಯ! ಖರೀದಿಸುವಾಗ ಈ ಅಂಶಗಳನ್ನು ಗಮನಿಸಿ

Food Expired Date: ತಿನ್ನುವ ಆಹಾರ ಎಷ್ಟು ಸುರಕ್ಷಿತ ಮತ್ತು ಗುಣಮಟ್ಟದಲ್ಲಿದೆ ಎಂಬುದನ್ನು ನಾವು ತಿಳಿದುಕೊಂಡಿರಲೇಬೇಕು. ಇಲ್ಲವಾದರೆ ಆರೋಗ್ಯ ಹಾಳಾಗಬಹುದು. ಇವುಗಳನ್ನು ಪರೀಕ್ಷಿಸುವ ಹಲವು ವಿಧಾನಗಳು ಇಲ್ಲಿವೆ.

VISTARANEWS.COM


on

Food products
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಎರಡು ದಿನಗಳ ಹಿಂದೆ ಡೇಟ್ ಎಕ್ಸ್‌ಪೈರ್‌ (Food Expired Date) ಆಗಿದ್ದ ಚಾಕಲೇಟ್ (Chocolate) ಸೇವಿಸಿ ಪಂಜಾಬ್‌ನ (punjab) ಪಟಿಯಾಲದಲ್ಲಿ (patiyala) ಬಾಲಕಿ ಒಬ್ಬಳು ಮೃತಪಟ್ಟಿದ್ದಳು, ವಾರದ ಹಿಂದೆ ಮಂಡ್ಯ (mandya) ಜಿಲ್ಲೆ ಶ್ರೀರಂಗಪಟ್ಟಣ (srirangapattana) ತಾಲೂಕಿನ ಬೆಟ್ಟಹಳ್ಳಿಯಲ್ಲಿ ಐಸ್ ಕ್ರೀಮ್ (icecream) ತಿಂದು ಅವಳಿ ಜವಳಿ ಮಕ್ಕಳಿಬ್ಬರು ಮೃತಪಟ್ಟಿದ್ದರು. ಈ ಎರಡೂ ಘಟನೆಗಳಲ್ಲಿ ಖರೀದಿ ಮಾಡಿದ ಆಹಾರದ (Food products) ಗುಣಮಟ್ಟದ (quality) ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.

ಆಹಾರ ಮತ್ತು ಔಷಧ ಇವೆರಡೂ ನಿರ್ದಿಷ್ಟ ಸಮಯದ ಬಳಿಕ ಹಾಳಾಗುತ್ತದೆ ಮತ್ತು ವಿಷಕಾರಿಯಾಗುತ್ತದೆ. ಹೀಗಾಗಿ ಅರೋಗ್ಯ ಸುರಕ್ಷತೆಯ ದೃಷ್ಟಿಯಲ್ಲಿ ಇವೆರಡನ್ನು ನಿಗದಿತ ಸಮಯದೊಳಗೆ ಸೇವಿಸುವುದು ಉತ್ತಮ.

ಇವೆರಡರ ನಡುವಿನ ಗಮನಾರ್ಹ ವ್ಯತ್ಯಾಸವೆಂದರೆ ಎಕ್ಸ್‌ಪೈರಿ ಡೇಟ್ ಮುಗಿದ ಮೇಲೆ ಔಷಧಗಳಲ್ಲಿ ಬಳಸುವ ರಾಸಾಯನಿಕ ಮಿಶ್ರಣವು ವಿಷವಾಗುತ್ತದೆ. ಅದಕ್ಕಾಗಿ ಎಕ್ಸ್‌ಪೈರಿ ಡೇಟ್ ಮುಗಿದ ಮೇಲೆ ಔಷಧವನ್ನು ಸೇವಿಸಬಾರದು ಮತ್ತು ಎಸೆಯಬೇಕು. ಇಲ್ಲಿ ಸುರಕ್ಷತೆ ಸಮಸ್ಯೆಯೇ ಹೊರತು ಗುಣಮಟ್ಟ ಅಲ್ಲ.

ಇದನ್ನೂ ಓದಿ: Nestle Company: ಮಕ್ಕಳ ಜೀವದ ಜತೆ ನೆಸ್ಲೆ ಕಂಪನಿ ಚೆಲ್ಲಾಟ? ಸೆರೆಲಾಕ್‌ ಕುಡಿಸೋ ಮುನ್ನ ಎಚ್ಚರ!

ಇದಕ್ಕೆ ವ್ಯತಿರಿಕ್ತವಾಗಿ ಆಹಾರ ಉತ್ಪನ್ನಗಳು ಕ್ರಮೇಣ ಹಾಳಾಗುತ್ತವೆ. ಅಪರೂಪ ಎಂಬಂತೆ ಕೆಲವೊಮ್ಮೆ ವಿಷಕಾರಿಯಾಗುತ್ತವೆ. ಆಹಾರ ವಿಷಕಾರಿ ಆಗುವ ಮೊದಲು ರುಚಿ, ಪರಿಮಳ ಮತ್ತು ಪೌಷ್ಟಿಕಾಂಶವನ್ನು ಕಳೆದುಕೊಳ್ಳುತ್ತದೆ. ಕಾಲಾನಂತರದಲ್ಲಿ ತನ್ನ ಗುಣಮಟ್ಟವನ್ನು ಕಳೆದುಕೊಳ್ಳುತ್ತದೆ. ಹೀಗಾಗಿ ಇಲ್ಲಿ, ಗುಣಮಟ್ಟ ಪ್ರಮುಖ ವಿಚಾರವಾಗಿದೆಯೇ ಹೊರತು ಸುರಕ್ಷತೆ ಅಲ್ಲ. ಹೀಗಾಗಿ ಆಹಾರ ಉತ್ಪನ್ನಗಳಿಗೆ ಎಕ್ಸ್‌ಪೈರಿ ಡೇಟ್ ಈನ್ದು ಇರುವುದಿಲ್ಲ. ಬದಲಾಗಿ ಅವನ್ನು ತಯಾರಿಸಿದ, ಬಳಸಲಾಗುವ ದಿನಾಂಕಗಳನ್ನು ಮಾತ್ರ ಹೇಳಲಾಗುತ್ತದೆ.


ಆಹಾರ ಪೋಲು

ಇದರಿಂದಾಗಿ ಪ್ರಪಂಚದಾದ್ಯಂತ ಜನರು ಸೇವಿಸಲು ಯೋಗ್ಯವಾದ ಸಾಕಷ್ಟು ಉತ್ತಮವಾದ ಆಹಾರಗಳು ಕಸದ ಬುಟ್ಟಿ ಸೇರುತ್ತದೆ.

ಪ್ರಪಂಚದಾದ್ಯಂತ ಲಕ್ಷಾಂತರ ಮಂದಿ ಎರಡು ಹೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದಾರೆ. ಅಮೆರಿಕ, ಮಲೇಷ್ಯಾ ದೇಶಗಳು ವಿಶ್ವದಲ್ಲೇ ಹೆಚ್ಚು ಆಹಾರ ಪೋಲು ಮಾಡುವ ರಾಷ್ಟ್ರಗಳಾಗಿವೆ. ಇದರಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ. ನಾವು ಆಹಾರ ವ್ಯರ್ಥವಾಗುವುದನ್ನು ತಡೆಗಟ್ಟುವ ಜೊತೆಗೆ ಅವುಗಳ ಗುಣಮಟ್ಟಕ್ಕೂ ಹೆಚ್ಚಿನ ಆದ್ಯತೆ ನೀಡಬೇಕಿದೆ.

ಆಹಾರ ಉತ್ಪನ್ನಗಳ ದಿನಾಂಕ

ಬೇರೆಬೇರೆ ಆಹಾರಗಳು ಬೇರೆಬೇರೆ ಅವಧಿಯವರೆಗೆ ಉತ್ತಮ ಗುಣಮಟ್ಟದಲ್ಲಿ ಇರುತ್ತದೆ. ಅಂದರೆ, ಎಲ್ಲಾ ಆಹಾರ ಪದಾರ್ಥಗಳು ಒಂದೇ ಪ್ರಮಾಣದಲ್ಲಿ, ಒಂದೇ ಸಮಯದಲ್ಲಿ ಹಾಳಾಗುವುದಿಲ್ಲ. ಆಹಾರ ಕಂಪನಿಗಳು ಶೆಲ್ಫ್ ಜೀವನವನ್ನು ಹೆಚ್ಚಿಸಲು ಸಂರಕ್ಷಕಗಳನ್ನು ಬಳಸುತ್ತವೆ. ಇದರ ಆಧಾರದ ಮೇಲೆ ಅವುಗಳ ಗುಣಮಟ್ಟದ ಬಾಳಿಕೆ ಅವಧಿಯನ್ನು ನಿರ್ಧರಿಸಲಾಗುತ್ತದೆ.

ಆಹಾರದ ಗುಣಮಟ್ಟಕ್ಕೆ ದಿನಾಂಕಗಳನ್ನು ಹೇಗೆ ನಿರ್ಧರಿಸಬೇಕು ಎಂಬುದರ ಕುರಿತು ವಿಶ್ವದ ಯಾವುದೇ ದೇಶದಲ್ಲೂ ಸ್ಪಷ್ಟ ಮಾರ್ಗಸೂಚಿಗಳಿಲ್ಲ. ಹೀಗಾಗಿ ಇದಕ್ಕೆ ಸಂಬಂಧಿಸಿ ಕಠಿಣ ಕಾನೂನುಗಳನ್ನು ಹೊಂದಿಲ್ಲ. ಇದನ್ನು ಅನುಭವದ ಆಧಾರದ ಮೇಲೆ ನಿರ್ಧರಿಸಲು ಆಹಾರ ತಯಾರಕರಿಗೆ ಅನುಮತಿ ನೀಡಲಾಗಿದೆ. ಇದಕ್ಕಾಗಿ ಆಹಾರ ಕಂಪೆನಿಗಳು ಗುಣಮಟ್ಟವನ್ನು ಪರೀಕ್ಷಿಸಲು ಕೆಲವು ಪರೀಕ್ಷೆಗಳನ್ನು ನಡೆಸುತ್ತವೆ.

ವಿದೇಶಗಳಲ್ಲಿ ಆಹಾರ ಗುಣಮಟ್ಟ ನಿರ್ಧರಿಸುವ ದಿನಾಂಕಗಳನ್ನು ಉಲ್ಲೇಖಿಸಲಾಗುತ್ತದೆ. ಇದರ ಬಗ್ಗೆ ಭಾರತೀಯರು ತಿಳಿದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ವಿದೇಶಕ್ಕೆ ಪ್ರವಾಸ ಮಾಡುವ ಯೋಜನೆ ಇದ್ದರೆ ಇದು ಹೆಚ್ಚು ಉಪಯುಕ್ತವಾಗಿರುತ್ತದೆ.


ಪ್ಯಾಕ್ಡ್ ಆನ್ / ಕ್ಲೋಸ್ಡ್ ಆನ್

ಆಹಾರ ಪದಾರ್ಥವನ್ನು ಕಂಟೇನರ್‌ನಲ್ಲಿ ಸೀಲ್ ಮಾಡಿದ ದಿನಾಂಕ ಮತ್ತು ಅದರ ಬಾಳಿಕೆ ಹಾಗೂ ಆಹಾರದ ಗುಣಮಟ್ಟವನ್ನು ನಿರ್ಣಯಿಸಲು ಇದು ಉಪಯುಕ್ತವಾಗಿದೆ.

ಸೆಲ್ ಬೈ / ಪುಲ್ ಬೈ

ಈ ಸಂದೇಶವು ತಯಾರಕರಿಂದ ಚಿಲ್ಲರೆ ವ್ಯಾಪಾರಿಗಳಿಗೆ. ನಿರ್ಧಿಷ್ಟ ದಿನಾಂಕದೊಳಗೆ ಉತ್ಪನ್ನವನ್ನು ಮಾರಾಟ ಮಾಡದಿದ್ದರೆ ಅದನ್ನು ಶೆಲ್ಫ್‌ನಿಂದ ತೆಗೆದು ಕಸದ ಬುಟ್ಟಿಗೆ ಹಾಕಬೇಕು.

ಬೆಸ್ಟ್ ಯೂಸ್ಡ್ ಬಿಫೋರ್/ ಬೆಸ್ಟ್ ಯೂಸ್ಡ್ ಬೈ

ಇದು ಆಹಾರ ಪದಾರ್ಥಗಳ ಗುಣಮಟ್ಟ ಕಡಿಮೆಯಾಗುವುದನ್ನು ಸೂಚಿಸುವ ದಿನಾಂಕವಾಗಿದೆ. ನಿರ್ದಿಷ್ಟ ದಿನಾಂಕದೊಳಗೆ ಬಳಸದೇ ಇದ್ದರೆ ಆಹಾರದ ರುಚಿ, ಪರಿಮಳ ಮತ್ತು ಪೌಷ್ಟಿಕಾಂಶದ ಮೌಲ್ಯವು ನಂತರ ಬದಲಾಗುತ್ತದೆ. ಈ ದಿನಾಂಕದ ಅನಂತರ ಕೆಲವು ದಿನಗಳವರೆಗೆ ಆಹಾರವು ಸೇವಿಸಲು ಸಾಕಷ್ಟು ಉತ್ತಮವಾಗಿರುತ್ತದೆ.

ಯೂಸ್ ಬೈ/ ಡು ನಾಟ್ ಯೂಸ್ ಆಫ್ಟರ್

ನಿಗದಿತ ಅವಧಿ ಮುಗಿದ ಬಳಿಕ ಆಹಾರದ ಗುಣಮಟ್ಟವು ಹದಗೆಟ್ಟಿರುತ್ತದೆ. ಅದನ್ನು ಕಸದ ಬುಟ್ಟಿಗೆ ಹಾಕಲೇ ಬೇಕು ಎಂಬುದನ್ನು ಇದು ಹೇಳುತ್ತದೆ.

ಇವೆಲ್ಲವೂ ಮುಚ್ಚಿರುವ ಆಹಾರಗಳಿಗೆ ಮಾತ್ರ ಅನ್ವಯಾವಾಗುತ್ತದೆ. ಒಮ್ಮೆ ಪ್ಯಾಕೆಟ್ ತೆರೆದರೆ ಅಥವಾ ಗಾಳಿಗೆ ಒಡ್ಡಿಕೊಂಡರೆ ಅವುಗಳ ಗುಣಮಟ್ಟ ಕ್ಷೀಣಿಸಲು ಪ್ರಾರಂಭವಾಗುತ್ತದೆ.

ಖರೀದಿ ಮಾಡುವಾಗ ಎಚ್ಚರ

ಪ್ಯಾಕೆಟ್ ನಲ್ಲಿರುವ ದಿನಾಂಕ ಕೇವಲ ಗುಣಮಟ್ಟಕ್ಕೆ ಸಂಬಂಧಿಸಿರುತ್ತದೆ. ಆದರೆ ಆಹಾರದಲ್ಲಿ ನಾವು ಸುರಕ್ಷತೆ ಬಗ್ಗೆಯೂ ಗಮನ ಹರಿಸಬೇಕು.

ಪ್ಯಾಕೆಟ್ ಆಹಾರ ಖರೀದಿ ಪ್ಯಾಕೆಟ್ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಯಾಕೆಂದರೆ ಆಹಾರ ಪ್ಯಾಕೇಜಿಂಗ್, ಸ್ಥಳಾಂತರದ ವೇಳೆ ಅದು ಹಾನಿಗೊಳಾಗಿರಬಹುದು. ಇಂತಹ ಪ್ಯಾಕೆಟ್‌ಗಳು ಇಲಿ, ನೊಣಗಳಿಂದ ಸೋಂಕಿಗೆ ಒಳಗಾಗಿ, ಗಾಳಿಯ ತೇವಾಂಶದಿಂದ ವಿಷಕಾರಿ ಆಗಿರಬಹುದು.

ಆಹಾರ ಡಬ್ಬಿಯಲ್ಲಿ ಬಿರುಕು ಇದೆಯೇ ಎಂಬುದನ್ನು ಪರಿಶೀಲಿಸಬೇಕು. ಅಲ್ಲದೇ ಕೆಲವೊಂದು ಡಬ್ಬಿಗಳು ಉಬ್ಬಿದ್ದರೆ ಆಹಾರದಲ್ಲಿ ತೀವ್ರವಾದ ಬ್ಯಾಕ್ಟೀರಿಯಾ ಇದ್ದು, ಆಹಾರ ವಿಷಕಾರಿಯಾಗುತ್ತಿದೆ ಎಂಬುದನ್ನು ಅರಿತುಕೊಳ್ಳಬೇಕು.


ಮನೆಯಲ್ಲಿ ಸಿದ್ಧಪಡಿಸಿದ ಆಹಾರ

ಕೆಟ್ಟ ವಾಸನೆ, ಪ್ಯಾಕೆಟ್, ಕ್ಯಾನ್‌ನಲ್ಲಿ ಕಪ್ಪು ಕಲೆಗಳು- ಇದು ಇಲಿಗಳಿಂದ ಆಹಾರ ಹಾಳಾಗಿದೆ ಎಂಬುದನ್ನು ತಿಳಿಸುತ್ತದೆ.

ಸಾಮಾನ್ಯವಾಗಿ ಆಹಾರದ ಬಣ್ಣ ಬದಲಾಗಿದ್ದರೆ, ಅವುಗಳ ಮೇಲೆ ಹಸಿರು ಅಥವಾ ಕಪ್ಪು ತೇಪೆಗಳು ಕಂಡುಬಂದರೆ ಇದು ಶಿಲೀಂಧ್ರಗಳ ಬೆಳವಣಿಗೆಯಾಗಿದೆ. ಇದು ಹೆಚ್ಚಾಗಿ ಬೇಯಿಸಿದ ಪದಾರ್ಥಗಳಲ್ಲಿ ಕಾಣಿಸುತ್ತದೆ.

ಆಹಾರವು ತುಂಬಾ ಬಲವಾದ ಅಸಾಮಾನ್ಯ ವಾಸನೆಯನ್ನು ಹೊಂದಿದ್ದರೆ ಆಹಾರವು ಹುಳಿಯಾಗಿರುತ್ತದೆ. ಸಾಮಾನ್ಯವಾಗಿ ದೋಸೆ ಅಥವಾ ಇಡ್ಲಿ ಹಿಟ್ಟು ಮತ್ತು ಮೊಸರಿನಲ್ಲಿ ಹೀಗಾಗುತ್ತದೆ.

ಆಹಾರ ಪದಾರ್ಥವು ಲೋಳೆ ಅಥವಾ ಜಿಗುಟಾಗಿದ್ದರೆ ಬ್ಯಾಕ್ಟೀರಿಯಾ ಅಥವಾ ವೈರಲ್ ತಗಲಿದೆ ಎಂಬುದರ ಸೂಚಕವಾಗಿದೆ.

ಆಹಾರ ಸಾಮಾನ್ಯಕ್ಕಿಂತ ಹೆಚ್ಚು ಕಹಿ ಅಥವಾ ಹೆಚ್ಚು ಹುಳಿಯಾಗಿದ್ದಾರೆ ಬ್ಯಾಕ್ಟೀರಿಯಾದ ಚಟುವಟಿಕೆ ನಡೆಯುತ್ತಿದೆ ಎಂದು ತಿಳಿಯಬೇಕು.

ಯಾವತ್ತೂ ಆಹಾರದ ಮುಚ್ಚಳ ತೆರೆಯುವಾಗ ಸೂಕ್ಷ್ಮವಾಗಿ ಗಮನಿಸಿ. ಒಂದು ವೇಳೆ ಬಳಸಲು ಯೋಗ್ಯವಾಗಿಲ್ಲ ಎಂದು ಅನಿಸಿದರೆ ಕೂಡಲೇ ಅದನ್ನು ಕಸದ ಬುಟ್ಟಿಗೆ ಹಾಕಿ.

ಗುಣಮಟ್ಟ ಕಾಪಾಡಿ

ಮಾರುಕಟ್ಟೆಯಿಂದ ಖರೀದಿ ಮಾಡಿ ತಂದ ವಸ್ತುಗಳ ಗುಣಮಟ್ಟ ಕಾಪಾಡುವುದು ನಮ್ಮ ಜವಾಬ್ದಾರಿ. ಹಣ್ಣು ಅಥವಾ ತರಕಾರಿಗಳನ್ನು ತೊಳೆದು ರೆಫ್ರಿಜರೇಟರ್ ನಲ್ಲಿ ಇಡಿ. ಆಹಾರ ಪ್ಯಾಕೆಟ್‌ಗಳ ಮೇಲೆ ಅವುಗಳನ್ನು ಹೇಗೆ ಸಂಗ್ರಹಿಸಿಡಬೇಕು ಎಂದು ಸೂಚಿಸಲಾಗಿರುತ್ತದೆ. ಅದನ್ನು ತಿಳಿದುಕೊಳ್ಳಿ. ಉದಾ- ಬೀಜಗಳನ್ನು ತೆರೆದು ಇಡಬಾರದು ಏಕೆಂದರೆ ಅವುಗಳಲ್ಲಿನ ತೈಲಗಳು ಕಂದುಬಣ್ಣಕ್ಕೆ ತಿರುಗುವುದರಿಂದ ಅವು ಮೃದು ಮತ್ತು ಕಹಿಯಾಗಬಹುದು.
ಕೆಲವು ಉತ್ಪನ್ನಗಳನ್ನು ತಕ್ಷಣವೇ ಬಳಸಲಾಗುವುದಿಲ್ಲ. ಆದರೆ ಹೆಚ್ಚು ಕಾಲ ಉಳಿಯಬೇಕು. ಆಗ ಅವುಗಳನ್ನು ಫ್ರೀಜರ್ ನಲ್ಲಿ ಇರಿಸಿ.

ಆಹಾರದ ಪ್ಯಾಕೆಟ್ ಅನ್ನು ತೆರೆದ ಬಳಿಕ ತಕ್ಷಣವೇ ಖಾಲಿ ಮಾಡಿ. ಪದೇಪದೇ ಗಾಳಿಗೆ ಒಡ್ಡುವುದರಿಂದ ಅವುಗಳ ಸತ್ವ ನಾಶವಾಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಲೈಫ್‌ಸ್ಟೈಲ್

Food Cleaning Tips Kannada: ಹಣ್ಣು, ತರಕಾರಿಗಳಿಂದ ರಾಸಾಯನಿಕ ಅಂಶ ಸ್ವಚ್ಛಗೊಳಿಸುವ 5 ವಿಧಾನಗಳಿವು

ಮಾರುಕಟ್ಟೆಯಿಂದ ತರುವ ಹಣ್ಣು, ತರಕಾರಿಗಳು ಕೀಟನಾಶಕ ಮುಕ್ತವಾಗಿದೆಯೇ ಎಂಬುದನ್ನು ಪರಿಶೀಲಿಸಲು ಸಾಧ್ಯವಿಲ್ಲ. ಆದರೆ ಮನೆಗೆ ತಂದು ಅವುಗಳನ್ನು ಸ್ವಚ್ಛಗೊಳಿಸುವ ಮೂಲಕ (Food Cleaning Tips Kannada) ಅವುಗಳಿಂದ ಕೀಟನಾಶಕಗಳನ್ನು ಸಂಪೂರ್ಣವಾಗಿ ತೆಗೆದುಹಾಕಿ ತಿನ್ನಲು ಯೋಗ್ಯವನ್ನಾಗಿ ಮಾಡಬಹುದು. ಈ ಕುರಿತ (Food Cleaning Tips) ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

By

Food Cleaning Tips Kannada
Koo

ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಿಂದ ತರುವ ಪ್ರತಿಯೊಂದು ಸಾಮಗ್ರಿಯೂ ಆತಂಕ ಹುಟ್ಟಿಸುತ್ತದೆ. ಅದು ತರಕಾರಿ (vegetables) ಆಗಿರಬಹುದು, ಹಣ್ಣು ಹಂಪಲು (fruits), ಧಾನ್ಯಗಳಾಗಿರಬಹುದು (grain). ಕೃಷಿಯಲ್ಲಿ ಕೀಟನಾಶಕಗಳ ಬಳಕೆಯು ವ್ಯಾಪಕವಾಗಿರುವುದರಿಂದ ನಾವು ಸೇವಿಸುವ ಆಹಾರದ ಸುರಕ್ಷತೆಯನ್ನು (Food Cleaning Tips Kannada) ಖಚಿತಪಡಿಸಿಕೊಳ್ಳುವುದು ಹೆಚ್ಚು ಅಗತ್ಯವಾಗಿದೆ. ಕೀಟಗಳು ಮತ್ತು ರೋಗಗಳಿಂದ ಬೆಳೆಗಳನ್ನು ರಕ್ಷಿಸಲು ಕೀಟನಾಶಕಗಳು ಅಗತ್ಯವಾದಾಗ, ಹಣ್ಣು ಮತ್ತು ತರಕಾರಿಗಳ ಮೇಲೆ ಅದರ ಅವಶೇಷಗಳನ್ನು ಬೀಳುತ್ತವೆ. ಇದನ್ನು ಕಾಲಾನಂತರದಲ್ಲಿ ನಾವು ಸೇವಿಸಿದರೆ ಆರೋಗ್ಯದ ಅಪಾಯವನ್ನು ಉಂಟು ಮಾಡುತ್ತದೆ. ಆದರೆ ಈ ಕೀಟನಾಶಕಗಳ ತೆಗೆದು ಹಾಕಲು ಮನೆಯಲ್ಲೇ ಇರುವ ಕೆಲವು ಸಾಮಗ್ರಿಗಳು ನಮಗೆ ಸಹಾಯ ಮಾಡುತ್ತದೆ. ತರಕಾರಿ, ಹಣ್ಣುಗಳಿಂದ ಕೀಟನಾಶಕಗಳನ್ನು ತೆಗೆದುಹಾಕಲು ಮನೆಯಲ್ಲಿ ಬಳಸಬಹುದಾದ (Food Cleaning Tips) ಐದು ಪ್ರಮುಖ ವಿಧಾನಗಳಿವೆ.

Apple cider vinegar for Fungal Infection Home Remedies

ವಿನೆಗರ್ ದ್ರಾವಣ

ಹಣ್ಣುಗಳು ಮತ್ತು ತರಕಾರಿಗಳಿಂದ ಕೀಟನಾಶಕಗಳನ್ನು ತೆಗೆದುಹಾಕಲು ಸರಳ ಮತ್ತು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಅವುಗಳನ್ನು ವಿನೆಗರ್ ದ್ರಾವಣದಿಂದ ತೊಳೆಯುವುದು. ಒಂದು ಬೌಲ್ ಅಥವಾ ಸಿಂಕ್‌ನಲ್ಲಿ ಮೂರು ಭಾಗಗಳ ನೀರಿನೊಂದಿಗೆ ಒಂದು ಭಾಗ ಬಿಳಿ ವಿನೆಗರ್ ಮಿಶ್ರಣ ಮಾಡಿ. ಉತ್ಪನ್ನವನ್ನು ಈ ದ್ರಾವಣದಲ್ಲಿ 5- 10 ನಿಮಿಷಗಳ ಕಾಲ ನೆನೆಸಿ, ಅನಂತರ ಶುದ್ಧ ನೀರಿನಿಂದ ಚೆನ್ನಾಗಿ ತೊಳೆಯಿರಿ. ವಿನೆಗರ್ ಕೀಟನಾಶಕಗಳ ಅವಶೇಷಗಳನ್ನು ಸಂಪೂರ್ಣವಾಗಿ ತೆಗೆದು ಹಾಕುತ್ತದೆ. ಹಣ್ಣುಗಳು ಮತ್ತು ತರಕಾರಿಗಳನ್ನು ಸ್ವಚ್ಛಗೊಳಿಸಲು ಮತ್ತು ತಿನ್ನಲು ಹೆಚ್ಚು ಸುರಕ್ಷಿತ ಮಾಡುತ್ತದೆ.

peeling

ಸಿಪ್ಪೆ ಸುಲಿಯುವುದು

ಹಣ್ಣು ಮತ್ತು ತರಕಾರಿಗಳ ಸಿಪ್ಪೆ ಸುಲಿದು ಸೇವಿಸುವುದು ಕೀಟನಾಶಕಗಳನ್ನು ತೆಗೆದು ಹಾಕುತ್ತದೆ. ಅನೇಕ ಕೀಟನಾಶಕಗಳು ಉತ್ಪನ್ನದ ಮೇಲ್ಮೈಯಲ್ಲಿ ಕೇಂದ್ರೀಕೃತವಾಗಿರುತ್ತವೆ. ಆದ್ದರಿಂದ ಹೊರ ಪದರವನ್ನು ತೆಗೆದುಹಾಕುವುದರಿಂದ ಈ ಅವಶೇಷಗಳ ಹೆಚ್ಚಿನ ಭಾಗವನ್ನು ತೆಗೆದುಹಾಕಬಹುದು. ಆದಾಗ್ಯೂ ಸಿಪ್ಪೆಸುಲಿಯುವಿಕೆಯು ಹಣ್ಣು, ತರಕಾರಿಯಲ್ಲಿರುವ ಕೆಲವು ಪೋಷಕಾಂಶಗಳು ಮತ್ತು ಫೈಬರ್ ಅನ್ನು ತೆಗೆದುಹಾಕುತ್ತದೆ ಎಂಬುದನ್ನು ನೆನಪಿನಲ್ಲಿಡಿ, ಆದ್ದರಿಂದ ಪೋಷಕಾಂಶಗಳ ನಷ್ಟದೊಂದಿಗೆ ಪ್ರಯೋಜನಗಳನ್ನು ಸಮತೋಲನಗೊಳಿಸುವುದು ಅತ್ಯಗತ್ಯ.

Baking soda for Fungal Infection Home Remedies

ಅಡುಗೆ ಸೋಡಾ

ಸೋಡಿಯಂ ಬೈಕಾರ್ಬನೇಟ್ ಎಂದೂ ಕರೆಯಲ್ಪಡುವ ಅಡುಗೆ ಸೋಡಾ, ಕೀಟನಾಶಕಗಳ ಅವಶೇಷಗಳನ್ನು ತೆಗೆದುಹಾಕಲು ಮತ್ತೊಂದು ಪರಿಣಾಮಕಾರಿ ವಸ್ತು. ಒಂದು ಚಮಚ ಅಡುಗೆ ಸೋಡಾವನ್ನು ಒಂದು ಕಪ್ ನೀರಿನಲ್ಲಿ ಬೆರೆಸಿ, ಹಣ್ಣು ಮತ್ತು ತರಕಾರಿಗಳನ್ನು 15-20 ನಿಮಿಷಗಳ ಕಾಲ ನೆನೆಸಿಡಿ. ಅನಂತರ ಅವುಗಳನ್ನು ಹರಿಯುವ ನೀರಿನ ಅಡಿಯಲ್ಲಿ ಚೆನ್ನಾಗಿ ತೊಳೆಯಿರಿ. ಬೇಕಿಂಗ್ ಸೋಡಾ ಕೀಟನಾಶಕ ಅಣುಗಳನ್ನು ಇದು ತೆಗೆದು ಹಾಕುತ್ತದೆ.

ಇದನ್ನೂ ಓದಿ: Eating Bread: ನಿತ್ಯವೂ ಬ್ರೆಡ್‌ ತಿನ್ನುತ್ತೀರಾ? ಹಾಗಿದ್ದರೆ ಖರೀದಿಸುವ ಮುನ್ನ ಇವಿಷ್ಟು ತಿಳಿದಿರಲಿ

ಬ್ರಷ್‌ನಿಂದ ಸ್ಕ್ರಬ್ಬಿಂಗ್

ಆಲೂಗಡ್ಡೆ, ಕ್ಯಾರೆಟ್ ಅಥವಾ ಸೌತೆಕಾಯಿಗಳಂತಹ ದಪ್ಪವಾದ ಚರ್ಮ ಅಥವಾ ಮೇಲ್ಮೈ ಹೊಂದಿರುವ ಹಣ್ಣು ಮತ್ತು ತರಕಾರಿಗಳಿಗೆ ಹರಿಯುವ ನೀರಿನ ಅಡಿಯಲ್ಲಿ ಅವುಗಳನ್ನು ಸ್ಕ್ರಬ್ ಮಾಡಲು ಬ್ರಷ್ ಅನ್ನು ಬಳಸುವುದು ಹೆಚ್ಚು ಪರಿಣಾಮಕಾರಿ. ಮೃದುವಾದ ಸ್ಕ್ರಬ್ಬಿಂಗ್ ಕ್ರಿಯೆಯು ಮೇಲ್ಮೈಗೆ ಅಂಟಿಕೊಂಡಿರುವ ಕೀಟನಾಶಕಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದಕ್ಕಾಗಿ ಕ್ಲೀನ್ ಬ್ರಷ್ ಅನ್ನು ಬಳಸಲು ಮರೆಯದಿರಿ.

Vegetables and Fruits

ಉಪ್ಪು ನೀರಿನಲ್ಲಿ ನೆನೆಸುವುದು

ಹಣ್ಣು, ತರಕಾರಿಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ಉಪ್ಪುನೀರನ್ನು ಸಹ ಬಳಸಬಹುದು. ಎರಡು ಚಮಚ ಉಪ್ಪನ್ನು ನಾಲ್ಕು ಕಪ್ ನೀರಿನಲ್ಲಿ ಕರಗಿಸಿ ಹಣ್ಣು ಮತ್ತು ತರಕಾರಿಗಳನ್ನು 10- 15 ನಿಮಿಷಗಳ ಕಾಲ ಅದರಲ್ಲಿ ನೆನೆಸಿಡಿ. ಅನಂತರ ಅವುಗಳನ್ನು ಶುದ್ಧ ನೀರಿನಿಂದ ಚೆನ್ನಾಗಿ ತೊಳೆಯಿರಿ.

Continue Reading

ಆರೋಗ್ಯ

Health Tips: ಕಿಡ್ನಿಕಲ್ಲಿನ ಸಮಸ್ಯೆ ನಿವಾರಣೆಗೆ ಬಾಳೆ ದಿಂಡನ್ನು ಹೀಗೆ ಬಳಸಿ…

Health Tips: ತೆಂಗಿನಂತೆ ಬಾಳೆಯೂ ಕಲ್ಪವೃಕ್ಷ ಎನಿಸಿಕೊಂಡಿದೆ. ಇದರ ಪ್ರತಿಯೊಂದು ಭಾಗವೂ ಉಪಯೋಗಕ್ಕೆ ಬರುತ್ತದೆ. ಅದರಲ್ಲಿಯೂ ಬಾಳೆದಿಂಡಿನಲ್ಲಿ ಅಪೂರ್ವ ಔಷಧೀಯ ಗುಣಗಳಿವೆ. ಕಿಡ್ನಿಯಲ್ಲಿರುವ ಕಲ್ಲನ್ನು ಕರಗಿಸುವ ಅದ್ಭುತ ಶಕ್ತಿ ಬಾಳೆ ದಿಂಡಿಗಿದೆ. ಜತೆಗೆ ಗ್ಯಾಸ್ಟ್ರಿಕ್ ಸಮಸ್ಯೆ, ಮೂತ್ರಪಿಂಡದ ಸಮಸ್ಯೆಗೆ ಇದು ರಾಮಬಾಣ. ಖಾಲಿ ಹೊಟ್ಟೆಯಲ್ಲಿ ಬಾಳೆದಿಂಡಿರ ರಸವನ್ನು ಸೇವಿಸುವುದರಿಂದ ಎಸಿಡಿಟಿ ಸಮಸ್ಯೆ ದೂರವಾಗುತ್ತದೆ.

VISTARANEWS.COM


on

Health Tips
Koo

ಕುಮಾರ ಪೆರ್ನಾಜೆ, ಪುತ್ತೂರು
ಬೆಂಗಳೂರು: ಕಲ್ಪವೃಕ್ಷ ಎಂದಾಕ್ಷಣ ತೆಂಗಿನ ಚಿತ್ರ ನಮ್ಮ ಕಣ್ಣ ಮುಂದೆ ಬರುತ್ತದೆ. ಅದರ ಜತೆಗೆ ಬಾಳೆಯೂ ಕಲ್ಪವೃಕ್ಷವೇ. ತೆಂಗಿನಂತೆ ಇದರ ಎಲ್ಲ ಭಾಗಗಳು ಉಪಯುಕ್ತ. ಬಾಳೆ ದಿಂಡು ಉತ್ತಮ ಔಷಧಿಯ ಗುಣಗಳನ್ನು ಹೊಂದಿದ್ದು, ಇತ್ತೀಚೆಗೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕಿಡ್ನಿಯ ಕಲ್ಲಿನ ಸಮಸ್ಯೆಯನ್ನು ಗುಣಪಡಿಸುವ ಶಕ್ತಿ ಇದಕ್ಕಿದೆ. ಈ ಬಗೆಗಿನ ವಿವರ ಇಲ್ಲಿದೆ (Health Tips).

ಬಾಳೆ ದಿಂಡಿನ ಪ್ರಾಮುಖ್ಯತೆ ಇದೀಗ ಪ್ರತಿಯೊಬ್ಬರ ಅರಿವಿಗೂ ಬಂದಿದೆ. ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಒಂದು ಅಡಿ ಉದ್ದದ ದಿಂಡಿಗೂ ಬಹಳ ಬೇಡಿಕೆ ಸೃಷ್ಟಿಯಾಗಿದೆ. ಇದರಲ್ಲಿ ಚಟ್ನಿ, ಸಾಸಿವೆ, ಸಾಂಬಾರ್, ಪಲ್ಯ, ಪಕೋಡ, ದೋಸೆ, ಇಡ್ಲಿ, ಸಲಾಡ್, ಮೊಸರು ಗೊಜ್ಜು ಹೀಗೆ ನಾನಾ ಭಕ್ಷ್ಯ ತಯಾರಿಸಬಹುದು. ಮಾತ್ರವಲ್ಲ ಬಾಳೆ ನಾರಿನಿಂದ ವಿವಿಧ ಪರಿಸರಸ್ನೇಹಿ ಉತ್ಪನ್ನಗಳನ್ನು ತಯಾರಿಸಬಹುದು. ಚೀಲಗಳು, ಬುಟ್ಟಿಗಳು, ಸಸಿ ಕುಂಡಗಳು, ಯೋಗಾಸನ ಚಾಪೆಗಳು, ಹಗ್ಗ, ಬಟ್ಟೆ ತಯಾರಿ ಹೀಗೆ…ಏನೆಲ್ಲ ಮಾಡಬಹುದು ಎಂಬ ಸಂಶೋಧನೆ ಮಾಡುವ ತನಕ ಬಾಳೆ ಇಷ್ಟೊಂದು ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ ಎನ್ನುವುದು ಯಾರಿಗೂ ತಿಳಿದಿರಲಿಲ್ಲ.

ಕಿಡ್ನಿ ಕಲ್ಲು ಕರಗಿಸುವ ಬಾಳೆ ದಿಂಡು

ಮೊದಲೇ ಹೇಳಿದಂತೆ ಕಿಡ್ನಿಯಲ್ಲಿರುವ ಕಲ್ಲನ್ನು ಕರಗಿಸುವ ಅದ್ಭುತ ಶಕ್ತಿ ಬಾಳೆ ದಿಂಡಿಗಿದೆ. ಜತೆಗೆ ಗ್ಯಾಸ್ಟ್ರಿಕ್ ಸಮಸ್ಯೆ, ಮೂತ್ರಪಿಂಡದ ಸಮಸ್ಯೆಗೆ ಇದು ರಾಮಬಾಣ. ಖಾಲಿ ಹೊಟ್ಟೆಯಲ್ಲಿ ಬಾಳೆದಿಂಡಿರ ರಸವನ್ನು ಸೇವಿಸುವುದರಿಂದ ಎಸಿಡಿಟಿ ಸಮಸ್ಯೆ ದೂರವಾಗುತ್ತದೆ. ಕಿಡ್ನಿ ಕಲ್ಲಿನ ಸಮಸ್ಯೆ ನಿವಾರಣೆಗೆ ಬಾಳೆ ದಿಂಡಿನ ನೀರನ್ನು ಕುಡಿಯುವುದು ಅತ್ಯುತ್ತಮ ಮಾರ್ಗ ಎನಿಸಿಕೊಂಡಿದೆ. ಈ ನೀರನ್ನು ಹೇಗೆ ಸಂಗ್ರಹಿಸಬಹುದು ಎನ್ನುವುದರ ವಿವರ ಇಲ್ಲಿದೆ. ಬಾಳೆಗಿಡ ಕಡಿದು ಮಧ್ಯದ ದಿಂಡನ್ನು ತೆಗೆದು ಕಾಂಡದಲ್ಲಿ ಗುಳಿಯ ಆಕಾರವನ್ನು ತೋಡಿ. ಬಳಿಕ ಕಸ, ಧೂಳು ಹಾರದಂತೆ ಅದಕ್ಕೆ ಪ್ಲಾಸ್ಟಿಕ್ ಅಥವಾ ಬಾಳೆ ಎಲೆ ಮುಚ್ಚಿ. ಮರುದಿನ ನೋಡಿದಾಗ ಗುಳಿಯಲ್ಲಿ ನೀರು ತುಂಬಿರುತ್ತದೆ.

ಈ ನೀರನ್ನು ಶುಭ್ರ ಪಾತ್ರೆಯಲ್ಲಿ ತೆಗೆದುಕೊಂಡು ನಿಯಮಿತವಾಗಿ ಸೇವಿಸಿ. ಇದರಿಂದ ಕಿಡ್ನಿ ಕಲ್ಲಿ ಕರಗುತ್ತದೆ ಎನ್ನುತ್ತಾರೆ ತಜ್ಞರು. ಅಲ್ಲದೆ ಬಾಳೆ ದಿಂಡನ್ನು ಅರೆದು ಅದನ್ನು ಸೋಸಿಯೂ ಕುಡಿಯಬಹುದು. ಹೀಗೆ ಬಾಳೆದಿಂಡಿನ ರಸವನ್ನು ವರ್ಷಕ್ಕೆ ಎರಡು ಬಾರಿಯಾದರೂ ಸೇವಿಸುವುದರಿಂದ ಹೊಟ್ಟೆಯಲ್ಲಿರುವ ಕಲ್ಮಶಗಳನ್ನು ಹೊರ ಹಾಕಬಹುದು.

ಇದನ್ನೂ ಓದಿ: Benefits of Tender Coconut: ಎಳನೀರು ಹೀರುವುದರಿಂದ ದೇಹಕ್ಕೆ ಏನೇನು ಲಾಭ ಗೊತ್ತೇ?

ಜ್ಯೂಸ್‌ ತಯಾರಿಸಿ

ಬಾಳೆ ದಿಂಡಿನ ರಸವನ್ನು ನೇರವಾಗಿ ಸೇವಿಸಲು ಸಾಧ್ಯವಾಗದಿದ್ದರೆ ಜ್ಯೂಸ್‌ ತಯಾರಿಸಿಯೂ ಕುಡಿಯಬಹುದು. ಬಾಳೆದಿಂಡಿನ ನೀರಿಗೆ ಜೀರಿಗೆ, ಶುಂಠಿ, ನಿಂಬೆರಸ, ಗಾಂಧಾರಿ ಮೆಣಸು, ಚಿಟಿಕೆ ಉಪ್ಪು, ಬೇಕಿದ್ದರೆ ಕಲ್ಲು ಸಕ್ಕರೆ ಸೇರಿಸಿ ಕುಡಿಯಬಹುದು. ಇದನ್ನು ಸಮಸ್ಯೆ ಇದ್ದವರೇ ಕುಡಿಯಬೇಕೆಂದಿಲ್ಲ. ಯಾರೂ ಬೇಕಾದರೂ ಸೇವಿಸಬಹುದು. ಇತ್ತೀಚೆಗಂತೂ ಬಿಸಿಲಿನ ತಾಪ ವಿಪರೀತವಾಗಿ ಏರಿಕೆಯಾಗುತ್ತಿದೆ. ಹೀಗಾಗಿ ಸಾಧ್ಯವಾದಷ್ಟು ಮನೆಯಲ್ಲಿಯೇ ತಯಾರಿಸಿದ ಆಹಾರದ ಜತೆಗೆ ಇಂತಹ ಪ್ರಾಕೃತಿಕ ಔಷಧಗಳ ಪ್ರಯೋಜನ ಪಡೆಯಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

Continue Reading

ವಾಣಿಜ್ಯ

Donkey milk: ಕತ್ತೆ ಹಾಲು ಲೀಟರ್‌ಗೆ 7000 ರೂ! ಈ ಹಾಲಿಗೆ ಏಕಿಷ್ಟು ಡಿಮ್ಯಾಂಡ್‌?

Donkey milk: ಹಾಲು ಉದ್ಯಮದಲ್ಲಿ ಕತ್ತೆಯ ಹಾಲು ಇಂದು ಬಿಳಿ ಚಿನ್ನವಾಗಿದೆ. ಗುಜರಾತ್‌ನಲ್ಲಿ ಧೀರೇನ್ ಸೋಲಂಕಿ ಅವರು ಕತ್ತೆಯ ಹಾಲು ಉತ್ಪಾದನೆಯಲ್ಲಿ ಕ್ರಾಂತಿಯನ್ನು ಮಾಡುತ್ತಿದ್ದಾರೆ. ಅವರು ಅದರ ಹಾಲನ್ನು ಗೋವಿನ ಪ್ರತಿಸ್ಪರ್ಧಿಗಳು ಉತ್ಪಾದಿಸುವ ಹಾಲಿನ 70 ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇಷ್ಟಕ್ಕೂ ಈ ಕತ್ತೆ ಹಾಲಿಗೆ ಏಕಿಷ್ಟು ಡಿಮ್ಯಾಂಡ್‌? ಇದರ ಹಿನ್ನೆಲೆ ಏನು? ಇಲ್ಲಿದೆ ಕುತೂಹಲಕರ ಮಾಹಿತಿ.

VISTARANEWS.COM


on

By

donkey milk
Koo

ಹಾಲು (milk) ಮಾರಾಟ ಮಾಡಿ ತಿಂಗಳಿಗೊಂದು ಎಷ್ಟು ಆದಾಯ ಗಳಿಸಬಹುದು? ಅಬ್ಬಬ್ಬಾ ಎಂದರೆ 10 ಸಾವಿರ ರೂ. ಗಡಿ ದಾಟಿದರೆ ಬಹುದೊಡ್ಡದು. ಆದರೆ ಇಲ್ಲೊಬ್ಬರು ಹಾಲು ಮಾರಾಟದಿಂದಲೇ ತಿಂಗಳಿಗೆ 2- 3 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಆದರೆ ಇವರು ಮಾರುತ್ತಿರುವ ಹಾಲು ಹಸುವಿನದಲ್ಲ (cow) ಕತ್ತೆಯದ್ದು (Donkey milk).

ಹಾಲು ಉದ್ಯಮದಲ್ಲಿ ಕತ್ತೆಯ ಹಾಲು ಇಂದು ಬಿಳಿ ಚಿನ್ನವಾಗಿದೆ (white gold). ಗುಜರಾತ್‌ನಲ್ಲಿ (gujarat) ಧೀರೇನ್ ಸೋಲಂಕಿ ( Dhiren Solanki) ಅವರು ಕತ್ತೆಯ ಹಾಲು ಉತ್ಪಾದನೆಯಲ್ಲಿ ಕ್ರಾಂತಿಯನ್ನು ಮಾಡುತ್ತಿದ್ದಾರೆ. ಅವರು ಅದರ ಹಾಲನ್ನು ಗೋವಿನ ಪ್ರತಿಸ್ಪರ್ಧಿಗಳು ಉತ್ಪಾದಿಸುವ ಹಾಲಿನ 70 ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಪಟಾನ್ ಜಿಲ್ಲೆಯಲ್ಲಿ 42 ಕತ್ತೆಗಳಿರುವ ಫಾರ್ಮ್ ಹೊಂದಿರುವ ಧೀರೇನ್ ಸೋಲಂಕಿ, ದಕ್ಷಿಣ ಪ್ರದೇಶಗಳಲ್ಲಿನ ಗ್ರಾಹಕರಿಗೆ ಬೆಲೆಬಾಳುವ ಹಾಲನ್ನು ಮಾರಾಟ ಮಾಡುವ ಮೂಲಕ ತಿಂಗಳಿಗೆ 2- 3 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ಇದನ್ನೂ ಓದಿ: Tech Mahindra: ಫ್ರೆಶರ್‌ಗಳಿಗೆ ಗುಡ್‌ ನ್ಯೂಸ್;‌ 6 ಸಾವಿರ ಜನರನ್ನು ನೇಮಕ ಮಾಡಲಿದೆ ಮಹೀಂದ್ರಾ!

ಸುಮಾರು ಎಂಟು ತಿಂಗಳ ಹಿಂದೆ ಕೇವಲ 20 ಕತ್ತೆಗಳೊಂದಿಗೆ 22 ಲಕ್ಷ ರೂ.ಗಳ ಆರಂಭಿಕ ಹೂಡಿಕೆ ಮಾಡಿರುವ ಸೋಲಂಕಿ ಈಗ ಕೋಟ್ಯಂತರ ಮೌಲ್ಯದ ಹಾಲು ವ್ಯಾಪಾರ ನಡೆಸುತ್ತಿದ್ದಾರೆ.

ಪ್ರಾರಂಭದಲ್ಲಿ ಸವಾಲು

ಗುಜರಾತ್‌ ನಲ್ಲಿ ಕತ್ತೆ ಹಾಲಿಗೆ ಹೆಚ್ಚು ಬೇಡಿಕೆ ಇಲ್ಲದ ಕಾರಣ ಪ್ರಾರಂಭಿಸಿದ ಐದು ತಿಂಗಳು ಸೋಲಂಕಿ ಅವರು ತುಂಬಾ ಕಷ್ಟ ಪಟ್ಟಿದ್ದರು. ಅದರ ಅನಂತರ ಅವರು ದಕ್ಷಿಣ ಭಾರತದಲ್ಲಿ ಕತ್ತೆ ಹಾಲಿನ ಹೆಚ್ಚಿನ ಅಗತ್ಯತೆ ಇರುವಲ್ಲಿ ತಮ್ಮ ವ್ಯಾಪ್ತಿಯನ್ನು ಬೆಳೆಸುವ ನಿರ್ಧಾರವನ್ನು ಮಾಡಿದರು.

ಪ್ರಸ್ತುತ ಅವರು ಕತ್ತೆ ಹಾಲನ್ನು ಹೆಚ್ಚಾಗಿ ಕರ್ನಾಟಕ ಮತ್ತು ಕೇರಳ ರಾಜ್ಯಗಳಿಗೆ ಒದಗಿಸುತ್ತಿದ್ದಾರೆ. ಅವರ ಕೆಲವು ಗ್ರಾಹಕರು ಕತ್ತೆಗಳ ಹಾಲನ್ನು ಬಳಸುವ ಸೌಂದರ್ಯವರ್ಧಕ ಸಂಸ್ಥೆಗಳಾಗಿವೆ.


ಲೀಟರ್‌ಗೆ 5ರಿಂದ 7 ಸಾವಿರ ರೂ.

ಸೋಲಂಕಿ ಪ್ರಕಾರ ಕತ್ತೆ ಹಾಲು ಮಾರುಕಟ್ಟೆಯಲ್ಲಿ ಪ್ರತಿ ಲೀಟರ್‌ಗೆ 5,000 ರಿಂದ 7,000 ರೂ. ಗೆ ಮಾರಾಟವಾಗುತ್ತಿದೆ. ಹಸುವಿನ ಹಾಲಿಗೆ ಹೋಲಿಸಿದರೆ ಲೀಟರ್‌ಗೆ 65 ರೂ. ಗೆ ಮಾರಾಟವಾಗುತ್ತದೆ. ಹಾಲಿನ ತಾಜಾತನವನ್ನು ಕಾಪಾಡಲು ರೆಫ್ರಿಜರೇಟರ್‌ಗಳಲ್ಲಿ ಇರಿಸಲಾಗುತ್ತದೆ.

ದುಬಾರಿಯಾಗಲು ಕಾರಣ

ಕತ್ತೆಯ ಹಾಲಿನ ಬಗ್ಗೆ ಜನಪ್ರಿಯತೆ ಈಗಷ್ಟೇ ಬೆಳೆಯುತ್ತಿದೆ. ಬಹುತೇಕ ಫಾರ್ಮ್‌ಗಳು ಚಿಕ್ಕದಾಗಿದ್ದು, ಐದರಿಂದ 30 ಹಾಲು ಕರೆಯುವ ಕತ್ತೆಗಳನ್ನು ಒಳಗೊಂಡಿರುತ್ತದೆ. ಪ್ರತಿ ದಿನವೂ ಸರಿಸುಮಾರು ನಾಲ್ಕು ಕಪ್ ಅಂದರೆ ಒಂದು ಲೀಟರ್ ಹಾಲನ್ನು ಮಾತ್ರ ಉತ್ಪಾದಿಸಲಾಗುತ್ತದೆ. ಹೀಗಾಗಿ ಹಾಲು ಸ್ವಲ್ಪ ದುಬಾರಿಯಾಗಿದೆ ಮತ್ತು ಪಡೆಯುವುದು ಕಷ್ಟವಾಗುತ್ತದೆ.

ಕತ್ತೆ ಹಾಲಿನ ಪ್ರಯೋಜನಗಳು

ಕತ್ತೆ ಹಾಲಿನ ಬಳಕೆ ಸುಮಾರು 10 ಸಾವಿರ ವರ್ಷಗಳಿಂದಲೂ ಇದೆ. ಅದರ ಪೌಷ್ಟಿಕಾಂಶ ದಿಂದಾಗಿ ಸೌಂದರ್ಯವರ್ಧಕಗಳಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಹಲವಾರು ಆರೋಗ್ಯ ಪ್ರಯೋಜನಗಳಿಂದಾಗಿ ಇದು ಇತ್ತೀಚಿನ ದಿನಗಳಲ್ಲಿ ಇದಕ್ಕೆ ಮತ್ತೆ ಬೇಡಿಕೆ ಹೆಚ್ಚಾಗುತ್ತಿದೆ.

ಕತ್ತೆ ಹಾಲಿನ ಇತಿಹಾಸ

ಹಿಂದಿನ ಕಾಲದಲ್ಲಿ ಶಿಶುಗಳ ಆಹಾರಕ್ಕಾಗಿ ಕತ್ತೆ ಹಾಲನ್ನು ಬಳಸುವುದು ಸಾಮಾನ್ಯವಾಗಿತ್ತು. ಈಜಿಪ್ಟಿನ ರಾಣಿ ಕ್ಲಿಯೋಪಾತ್ರ ಕೂಡ ಅದನ್ನು ಇಷ್ಟಪಟ್ಟಿದ್ದಳು. ಅವಳು ತನ್ನ ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳಲು ಕತ್ತೆ ಹಾಲಿನಲ್ಲಿ ಸ್ನಾನ ಮಾಡುತ್ತಿದ್ದಳು. ದಂತಕಥೆಯ ಪ್ರಕಾರ ಅವಳಿಗೆ ನಿತ್ಯ ಅಗತ್ಯವಾದ ಹಾಲು ಒದಗಿಸಲು ಸುಮಾರು 700 ಕತ್ತೆಗಳು ಬೇಕಾಗಿದ್ದವು ಎನ್ನಲಾಗುತ್ತದೆ.

ಕತ್ತೆ ಹಾಲು ಮುಖದ ಚರ್ಮದಿಂದ ಸುಕ್ಕುಗಳನ್ನು ನಿವಾರಿಸುತ್ತದೆ. ಚರ್ಮವನ್ನು ಮೃದು ಮತ್ತು ಬಿಳಿಯನ್ನಾಗಿ ಮಾಡುತ್ತದೆ ಎಂದು ನಂಬಲಾಗಿದೆ. ರೋಮನ್ ಚಕ್ರವರ್ತಿ ನೀರೋನ ಹೆಂಡತಿ ಪೊಪ್ಪಿಯಾ ಸ್ನಾನಕ್ಕೂ ಸಹ ಕತ್ತೆ ಬಳಸುತ್ತಿದ್ದಳು. ಈ ಕಾರಣಕ್ಕಾಗಿ, ಅವಳು ಪ್ರಯಾಣ ಮಾಡುವಾಗ ಕತ್ತೆಗಳ ಹಿಂಡುಗಳನ್ನು ಜೊತೆಗೆ ಕೊಂಡೊಯ್ಯುತ್ತಿದ್ದಳು.

ಕತ್ತೆ ಹಾಲಿನ ವಿಶೇಷತೆ

ಕತ್ತೆ ಹಾಲು ಹಸುವಿನ ಹಾಲು ಮತ್ತು ಮಾನವ ಎದೆ ಹಾಲು ಹಲವಾರು ಪೌಷ್ಟಿಕಾಂಶಗಳನ್ನು ಹೊಂದಿದೆ. ಪ್ರೋಟೀನ್ ಜೊತೆಗೆ ಇದು ಜೀವಸತ್ವ, ವಿಶೇಷವಾಗಿ ವಿಟಮಿನ್ ಡಿ ಮತ್ತು ಖನಿಜಗಳನ್ನು ಒಳಗೊಂಡಿರುತ್ತದೆ. ಕತ್ತೆ ಹಾಲು ಕಡಿಮೆ ಕೊಬ್ಬು ಮತ್ತು ಕ್ಯಾಲೋರಿಗಳನ್ನು ಹೊಂದಿದ್ದು, ಇವುಗಳಲ್ಲಿ ಹೆಚ್ಚಿನವು ಕಾರ್ಬೋಹೈಡ್ರೇಟ್‌ಗಳಿಂದ ಲ್ಯಾಕ್ಟೋಸ್ ಹಾಲಿನಲ್ಲಿರುವ ಸಕ್ಕರೆಯ ರೂಪದಲ್ಲಿರುತ್ತದೆ.

ಹಸುವಿನ ಹಾಲಿನ ಪ್ರೋಟೀನ್ ಅಲರ್ಜಿಯನ್ನು ಹೊಂದಿರುವ ಅನೇಕ ಜನರು ಕತ್ತೆ ಹಾಲನ್ನು ಅದರ ಕಡಿಮೆ ಕ್ಯಾಸೀನ್ ಮಟ್ಟದಿಂದ ಸೇವಿಸಬಹುದು. ಏಕೆಂದರೆ ಕತ್ತೆ ಹಾಲು ಅಲರ್ಜಿಯ ಪ್ರತಿಕ್ರಿಯೆಯನ್ನು ಉಂಟುಮಾಡುವುದಿಲ್ಲ.


ಕತ್ತೆ ಹಾಲಿನಲ್ಲಿ ಲ್ಯಾಕ್ಟೋಸ್, ಕ್ಯಾಲ್ಸಿಯಂ ಅನ್ನು ಒಳಗೊಂಡಿದ್ದು, ಬಲವಾದ ಮೂಳೆಗಳಿಗೆ ಅಗತ್ಯವಾದ ಖನಿಜಾಂಶವನ್ನು ಇದು ಒಳಗೊಂಡಿದೆ.

2010ರ ಪ್ರಯೋಗಾಲಯದ ಅಧ್ಯಯನದ ಪ್ರಕಾರ ಕತ್ತೆ ಹಾಲು ಸೈಟೊಕಿನ್‌ಗಳ ಬಿಡುಗಡೆಯನ್ನು ಹೆಚ್ಚಿಸುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುವ ಪ್ರೋಟೀನ್‌ಗಳಾಗಿವೆ. ಹಾಲು ನೈಟ್ರಿಕ್ ಆಕ್ಸೈಡ್ ಅನ್ನು ಉತ್ಪಾದಿಸಲು ಜೀವಕೋಶಗಳಿಗೆ ಕಾರಣವಾಗುತ್ತದೆ. ಇದು ರಕ್ತನಾಳಗಳನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಿ ರಕ್ತದ ಹರಿವನ್ನು ಸುಧಾರಿಸುತ್ತದೆ.

Continue Reading

ಆಹಾರ/ಅಡುಗೆ

Eating Bread: ನಿತ್ಯವೂ ಬ್ರೆಡ್‌ ತಿನ್ನುತ್ತೀರಾ? ಹಾಗಿದ್ದರೆ ಖರೀದಿಸುವ ಮುನ್ನ ಇವಿಷ್ಟು ತಿಳಿದಿರಲಿ

ಹೆಚ್ಚು ತಲೆಬಿಸಿಯಿಲ್ಲದೆ, ಬಹುಬೇಗನೆ ಉಪಾಹಾರವೆಂಬ ಕೆಲಸವನ್ನು ಮುಗಿಸಿಕೊಂಡು ಆಫೀಸ್‌ ಹೊರಡಲು, ಮಕ್ಕಳಿಗೆ ಟಿಫನ್‌ ಕಟ್ಟಿಕೊಡಲು ಬ್ರೆಡ್‌ ಸರಳವಾಗಿ ದಕ್ಕುವ ಆಹಾರಗಳಲ್ಲಿ ಒಂದು. ಬಹುತೇಕರಿಗೆ ಇದು ನಿತ್ಯಾಹಾರವೂ ಹೌದು. ಆದರೆ, ಸಂಸ್ಕರಿಸಿದ ಆಹಾರವಾದ ಬ್ರೆಡ್‌ ನಿಜಕ್ಕೂ ಆರೋಗ್ಯಕರವೇ ಎಂಬ ಪ್ರಶ್ನೆಗೆ ಇಂದು ಎಲ್ಲರಿಗೂ ಉತ್ತರ ಗೊತ್ತೇ ಇದ್ದರೂ, ಬ್ರೆಡ್‌ ತಿನ್ನದೆ ಇರಲು ಸಾಧ್ಯವಿಲ್ಲ ಎಂಬ ಉತ್ತರವೂ ಸಿದ್ಧವಾಗಿರುತ್ತದೆ. ಈ ಬಗ್ಗೆ (Eating Bread) ಇಲ್ಲಿದೆ ಮಾಹಿತಿ.

VISTARANEWS.COM


on

Eating Bread
Koo

ಪಾಶ್ಚಾತ್ಯ ಬೆಳಗಿನ ಉಪಾಹಾರದ ಶೈಲಿ ಇದಾದರೂ, ಭಾರತೀಯ ಮನೆಗಳಲ್ಲೂ ಇಂದು ಬ್ರೆಡ್‌ ಸಾಮಾನ್ಯವಾಗಿದೆ. ಗಡಿಬಿಡಿಯಲ್ಲಿ ಆಫೀಸ್‌ ಹೊರಡುವಾಗ, ಅಡುಗೆ ಮಾಡಿಕೊಳ್ಳಲು ಸಮಯವಿಲ್ಲದಿರುವಾಗ, ಹೊಟ್ಟೆಗೇನೂ ರುಚಿಸದೆ ಇದ್ದಾಗ, ಮಕ್ಕಳಿಗೆ ರುಚಿರುಚಿಯಾದ ಸ್ಯಾಂಡ್‌ವಿಚ್‌ ಮಾಡಿಕೊಡಲು, ಹೀಗೆ ಬ್ರೆಡ್‌ ತಿನ್ನಲು ನಮಗೆ ನಾನಾ ಕಾರಣಗಳು. ಹೆಚ್ಚು ತಲೆಬಿಸಿಯಿಲ್ಲದೆ, ಬಹುಬೇಗನೆ ಉಪಹಾರವೆಂಬ ಕೆಲಸವನ್ನು ಮುಗಿಸಿಕೊಂಡು ಆಫೀಸ್‌ ಹೊರಡಲು, ಮಕ್ಕಳಿಗೆ ಟಿಫನ್‌ ಕಟ್ಟಿಕೊಡಲು ಬ್ರೆಡ್‌ ಸರಳವಾಗಿ ದಕ್ಕುವ ಆಹಾರಗಳಲ್ಲಿ ಒಂದು. ಬಹುತೇಕರಿಗೆ ಇದು ನಿತ್ಯಾಹಾರವೂ ಹೌದು. ಆದರೆ, ಸಂಸ್ಕರಿಸಿದ ಆಹಾರವಾದ ಬ್ರೆಡ್‌ ನಿಜಕ್ಕೂ ಆರೋಗ್ಯಕರವೇ ಎಂಬ ಪ್ರಶ್ನೆಗೆ ಇಂದು ಎಲ್ಲರಿಗೂ ಉತ್ತರ ಗೊತ್ತೇ ಇದ್ದರೂ, ಬ್ರೆಡ್‌ ತಿನ್ನದೆ ಇರಲು ಸಾಧ್ಯವಿಲ್ಲ ಎಂಬ ಉತ್ತರವೂ ಸಿದ್ಧವಾಗಿರುತ್ತದೆ. ಹಾಗಾದರೆ, ನಾವು ನಿತ್ಯವೂ ಬಳಸುವ ಬ್ರೆಡ್‌ನ ಬಗ್ಗೆ, ಅದರಲ್ಲಿ ಬಳಸಲಾದ ವಸ್ತುಗಳ ಬಗ್ಗೆ ನಾವು ಸ್ವಲ್ಪ ಹೆಚ್ಚು ಜಾಗೃತರಾಗಿದ್ದರೆ ನಮ್ಮ ಹೊಟ್ಟೆ ಸೇರಿದ ಬ್ರೆಡ್‌ನ ಗುಣಮಟ್ಟ ನಮಗೆ ತಿಳಿಯುತ್ತದೆ. ಹಾಗಾದರೆ ಬನ್ನಿ, ನೀವು ಬ್ರೆಡ್‌ ಖರೀದಿಸುವ ಮುನ್ನ ಯಾವೆಲ್ಲ ಅಂಶಗಳನ್ನು ಗಮನಿಸಬೇಕು (Eating Bread) ಎಂಬುದನ್ನು ನೋಡೋಣ.

Bread Foods You Should Never Refrigerate

ಬ್ರೆಡ್‌ ಕೊಳ್ಳುವಾಗ ಗಮನಿಸಿ

ಬ್ರೆಡ್‌ ಮಾಡುವ ಸಂದರ್ಭ ಸಕ್ಕರೆ ಹಾಕಿಯೇ ಇರುತ್ತಾರೆ ಎಂಬ ಸತ್ಯ ಈಗ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ನಿಜ. ಯಾಕೆಂದರೆ ಬ್ರೆಡ್‌ಗಾಗಿ ಬಳಸುವ ಈಸ್ಟ್‌ ಅನ್ನು ಆಕ್ಟಿವೇಟ್‌ ಮಾಡಲು ಸಕ್ಕರೆ ಬೇಕೇ ಬೇಕು. ಹಾಗಾಗಿ ನೀವು ಯಾವಾಗಲೂ ಬ್ರೆಡ್‌ ಖರೀದಿಸುವ ಮೊದಲು ಕೆಲವು ಅಂಶಗಳನ್ನು ನೆನಪಿಟ್ಟುಕೊಳ್ಳಲೇಬೇಕು. ಬ್ರೆಡ್‌ನ ಹಿಂಬದಿಯಲ್ಲಿ ಬರೆದ ಪಟ್ಟಿಯಲ್ಲಿ ಸಕ್ಕರೆ ಎಷ್ಟು ಬಳಸಿದ್ದಾರೆಂದು ಪರೀಕ್ಷಿಸಿ. ಒಂದಲ್ಲ ಒಂದು ವಿಧದಲ್ಲಿ ಕೆಲವೊಮ್ಮೆ ಬೇರೆ ಮೂಲಗಳ ಮೂಲಕವೂ ಸೇರಿಸಲ್ಪಟ್ಟಿರುತ್ತದೆ. ಕೇವಲ ಸಕ್ಕರೆಯಷ್ಟೇ ಅಲ್ಲ, ಎಲ್ಲ ಮೂಲಗಳ ಮೂಲಕ ಸಕ್ಕರೆ ಎಷ್ಟು ಸೇರಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಸಾಮಾನ್ಯವಾಗಿ ಫ್ಯಾಕ್ಟರಿಗಳಲ್ಲಿ ಮಾಡುವ ಬ್ರೆಡ್‌ನಲ್ಲಿ ಹೆಚ್ಚು ಸಕ್ಕರೆ ಇರುತ್ತದೆ. ಅಲ್ಲದೆ, ಕಬ್ಬಿನ ಹಾಲು, ಜೇನುತುಪ್ಪ ಅಥವಾ ಇನ್ನಾವುದೇ ಮೂಲಗಳ ಮೂಲಕವೂ ಸಕ್ಕರೆ ಸೇರಿರಬಹುದು.

ಉಪ್ಪಿನ ಪ್ರಮಾಣ ಎಷ್ಟಿದೆ ನೋಡಿ

ಬ್ರೆಡ್‌ ಮಾಡುವ ಸಂದರ್ಭ ಅದಕ್ಕಾಗಿ ಬಳಸಿದ ಸಕ್ಕರೆಯಂತೆ ಉಪ್ಪಿನ ಪ್ರಮಾಣವೂ ಗಮನದಲ್ಲಿರಲಿ. ಬ್ರೆಡ್‌ ಮಾಡಲು ಬಳಸಿದ ವಸ್ತುಗಳ ಪಟ್ಟಿಯಲ್ಲಿ ಉಪ್ಪು ಎಷ್ಟು ಸೇರಿಸಲಾಗಿದೆ ಎಂದು ಪರೀಕ್ಷಿಸಿಕೊಳ್ಳಿ. ಬಹಳಷ್ಟು ಸಾರಿ ರುಚಿಯನ್ನು ಹೆಚ್ಚಿಸಲು, ಅಗತ್ಯಕ್ಕಿಂತಲೂ ಹೆಚ್ಚು ಉಪ್ಪನ್ನು ಫ್ಯಾಕ್ಟರಿಗಳು ಬಳಸುತ್ತವೆ. ಒಂದು ಅಂದಾಜಿನ ಪ್ರಕಾರ ಸಂಶೋಧನೆಯೊಂದು ಹೇಳಿದಂತೆ ಒಂದು ಬ್ರೆಡ್‌ ಸ್ಲೈಸ್‌ನಲ್ಲಿ 100ರಿಂದ 200 ಎಂಜಿ ಸೋಡಿಯಂಗಿಂತ ಹೆಚ್ಚಿರಬಾರದು. ಹಾಗಾಗಿ ಇದನ್ನು ಪರೀಕ್ಷೆ ಮಾಡಿಕೊಂಡೇ ಖರೀದಿಸಿ.

ಯಾವ ಪದಾರ್ಥ ಬಳಸಿದ್ದಾರೆ ನೋಡಿ

ಉಪ್ಪು ಹಾಗೂ ಸಕ್ಕರೆಯಷ್ಟೇ ಅಲ್ಲ, ನೀವು ಖರೀದಿಸಿದ ಬ್ರೆಡ್‌ನಲ್ಲಿ ಯಾವೆಲ್ಲ ಪದಾರ್ಥಗಳನ್ನು ಬಳಸಲಾಗಿದೆ ಎಂದು ನೋಡಿ. ಬಿಳಿಯಾದ ಮೈದಾದ ಬ್ರೆಡ್‌ನ ಬದಲು ಗೋಧಿಯ ಬ್ರೆಡ್‌ ಬಳಸಿ. ಬಹಳಷ್ಟು ಸಾರಿ ಗೋಧಿಯ ಬ್ರೆಡ್‌ನಲ್ಲೂ ಕಡಿಮೆ ಪ್ರಮಾಣದಲ್ಲಿ ಗೋಧಿ ಬಳಕೆಯಾಗಿರುತ್ತದೆ ಎಂಬ ಸತ್ಯವೂ ನಿಮಗೆ ಗೊತ್ತಿರಲಿ. ಹೀಗಾ ಗಿ ಶೇ.100ರಷ್ಟು ಗೋಧಿ ಅಥವಾ ಹೋಲ್‌ ವೀಟ್‌ ಬ್ರೆಡ್‌ ಎಂದು ಬರೆದಿರುವ ಬ್ರೆಡ್‌ ಖರೀದಿಸಿ. ಅಥವಾ ಮಲ್ಟಿಗ್ರೈನ್‌ ಬ್ರೆಡ್‌ ಖರೀದಿಸಿ.

Image Of Bread Health Benefits

ತಯಾರಿ ದಿನ ಗಮನಿಸಿ

ಬ್ರೆಡ್‌ ಖರೀದಿಸುವಾಗ ಎಲ್ಲಕ್ಕಿಂತ ಮೊದಲು ಪರೀಕ್ಷಿಸಬೇಕಾದ್ದು ಅದನ್ನು ತಯಾರಿಸಿದ ದಿನಾಂಕ ಹಾಗೂ ಎಷ್ಟು ದಿನ ಬಳಸಬಹುದೆಂಬ ದಿನಾಂಕ. ದಿನಾಂಕ ಮುಗಿದುಹೋದ ಬ್ರೆಡ್‌ನನ್ನು ಬಳಸಲೇಬೇಡಿ. ಹಾಳಾಗಿರದಂತೆ ಕಂಡರೂ ಬಳಸಬೇಡಿ. ಆದಷ್ಟೂ ತಾಜಾ ಬ್ರೆಡ್ಡನ್ನೇ ಖರೀದಿಸಿ. ಕೆಲವೊಮ್ಮೆ ಅಂಗಡಿಗಳಲ್ಲಿ ಇಟ್ಟಿರುವ ಬ್ರೆಡ್‌ ಅನ್ನು ಇಲಿಯೋ, ಕೀಟವೋ ಕಡಿದು ಸಣ್ಣ ತೂತುಗಳೂ ಆಗಿರುತ್ತವೆ. ಗಡಿಬಿಡಿಯಲ್ಲಿ ಖರೀದಿಸುವಾಗ ಇವು ಕಾಣುವುದಿಲ್ಲ. ಹೀಗಾಗಿ, ಬ್ರೆಡ್‌ನ ಪ್ಯಾಕ್‌ಗೆ ಯಾವುದೇ ಹಾನಿಯಾಗಿಲ್ಲ ಎಂಬುದನ್ನು ಖರೀದಿಸುವಾಗಲೇ ಖಚಿತಪಡಿಸಿಕೊಳ್ಳಿ.

ಕೃತಕ ಪ್ರಿಸರ್ವೇಟಿವ್‌ ಗಮನಿಸಿ

ಬ್ರೆಡ್‌ನಲ್ಲಿ ಬಳಸಲಾದ ಕೃತಕ ಪ್ರಿಸರ್ವೇಟಿವ್‌ಗಳನ್ನು ಗಮನಿಸಿ. ಆದಷ್ಟೂ ತಾಜಾ ಬ್ರೆಡ್ಡನ್ನೇ ಖರೀದಿಸಿ. ಹೆಚ್ಚು ದಿನ ಉಳಿಯಬಲ್ಲ ಬ್ರೆಡ್‌ಗಳಲ್ಲಿ ಖಂಡಿತವಾಗಿಯೂ ಪ್ರಿಸರ್ವೇಟಿವ್‌ಗಳಿರುತ್ತವೆ.

Dietary Fiber Bread Health Benefits Whole grain bread is rich in dietary fiber, which aids in digestion, helps maintain bowel regularity, and can contribute to a feeling of fullness, potentially aiding in weight management.

ನಾರಿನಂಶ ಮುಖ್ಯ

ಬ್ರೆಡ್‌ನಲ್ಲಿ ಎಷ್ಟು ನಾರಿನಂಶ ಇದೆ ಎಂದು ಪರೀಕ್ಷಿಸಿಕೊಳ್ಳಿ. ಸಾಮಾನ್ಯವಾಗಿ ಬ್ರೆಡ್‌ ಮಾಡಿದ ಮೇಲೆ ನಾರಿನಂಶವನ್ನು ಕಳೆದುಕೊಳ್ಳುತ್ತದೆ. ನಾರಿನಂಶ ಹೆಚ್ಚಿರುವ ಬ್ರೆಡ್‌ ಯಾವಾಗಲೂ ಉತ್ತಮ ಆಯ್ಕೆ.

ಇದನ್ನೂ ಓದಿ: Baking Powder: ಬೇಕಿಂಗ್‌ ಪುಡಿ ಹುಟ್ಟಿದ ಕತೆ ಕುತೂಹಲಕರ! ಅಡುಗೆ ಮಾಡುವ ಮೊದಲು ಇದರ ಹಿನ್ನೆಲೆ ಗೊತ್ತಿರಲಿ

Continue Reading
Advertisement
Porbandar Tour
ಪ್ರವಾಸ2 mins ago

Porbandar Tour: ಪೋರ್ ಬಂದರಿನಲ್ಲಿ ನೋಡಲೇಬೇಕಾದ ಅದ್ಭುತ ಸ್ಥಳಗಳಿವು

hd revanna prajwal revanna case
ಪ್ರಮುಖ ಸುದ್ದಿ23 mins ago

Prajwal Revanna Case: ಕಾಣದಂತೆ ಮಾಯವಾದ ಎಚ್‌ಡಿ ರೇವಣ್ಣ ! ಇಂದು ಜಾಮೀನು ಸಿಗದೇ ಹೋದರೆ….

Cocoa Price
ಕೃಷಿ26 mins ago

Cocoa Price: ಅಡಿಕೆ ಮರದೆತ್ತರಕ್ಕೆ ಕೋಕೋ ಬೆಳೆಯ ಧಾರಣೆ! 800% ಏರಿಕೆ!

IPL 2024 POINTS TABLE
ಕ್ರೀಡೆ44 mins ago

IPL 2024 POINTS TABLE: ಕೆಕೆಆರ್​ ಗೆಲುವಿನ ಬಳಿಕ ಅಂಕಪಟ್ಟಿ ಹೇಗಿದೆ?

prajwal revanna case hassan MP home
ಕ್ರೈಂ52 mins ago

Prajwal Revanna Case: ಹಾಸನ ಸಂಸದರ ನಿವಾಸದ ಗೇಟಿಗೆ ಬೀಗ; ನಿವಾಸದ ಕೀ ನಾಪತ್ತೆ! ಎಚ್‌ಡಿ ರೇವಣ್ಣ ಕೂಡ ಗಾಯಬ್!‌

Robbery Case
ಕ್ರೈಂ58 mins ago

Robbery Case: ಕಾರು ತಪಾಸಣೆ ನೆಪದಲ್ಲಿ ಸುಲಿಗೆ; ಪೊಲೀಸರ ವಿರುದ್ಧವೇ ಕೇಳಿ ಬಂತು ಗಂಭೀರ ಆರೋಪ

Food Cleaning Tips Kannada
ಲೈಫ್‌ಸ್ಟೈಲ್1 hour ago

Food Cleaning Tips Kannada: ಹಣ್ಣು, ತರಕಾರಿಗಳಿಂದ ರಾಸಾಯನಿಕ ಅಂಶ ಸ್ವಚ್ಛಗೊಳಿಸುವ 5 ವಿಧಾನಗಳಿವು

Viral Video
ವೈರಲ್ ನ್ಯೂಸ್1 hour ago

Viral Video: ರೆಸ್ಟೋರೆಂಟ್‌ನಲ್ಲಿ ಪತ್ನಿಯನ್ನು ಹೊಡೆದು ಕೊಂದ ಮಾಜಿ ಸಚಿವ; ಶಾಕಿಂಗ್‌ ವಿಡಿಯೋ ಎಲ್ಲೆಡೆ ವೈರಲ್‌

Salaar Movie Fails To Get Expected TRP Star Suvarna
ಸಿನಿಮಾ1 hour ago

Salaar Movie: ಕಿರುತೆರೆಯಲ್ಲಿ ‘ಸಲಾರ್’ಗೆ ಕಡಿಮೆ ಟಿಆರ್‌ಪಿ: ಪ್ಲಾಪ್‌ ಆಗಲು ಕಾರಣವೇನು?

RCB vs GT
ಕ್ರಿಕೆಟ್1 hour ago

RCB vs GT: ಇಂದು ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಸಂಚಾರ ಬದಲಾವಣೆ; ಮೆಟ್ರೋ ಸೇವೆ ವಿಸ್ತರಣೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ6 hours ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ18 hours ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ1 day ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ2 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ2 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ4 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20245 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20245 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ5 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20246 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

ಟ್ರೆಂಡಿಂಗ್‌