ತೂಕ ಇಳಿಸಲು ಇಂದು ನೂರಾರು (Walking for Weight Loss) ದಾರಿಗಳಿವೆ. ಪ್ರತಿಯೊಬ್ಬರೂ ತಾವು ಮಾಡಿ ಯಶಸ್ವಿಯಾದ ಬಗೆಯನ್ನು ತಮ್ಮ ಹತ್ತಿರದವರಲ್ಲಿ ಹೇಳಿಕೊಳ್ಳುತ್ತಾರೆ. ಅದು ಡಯಟ್ ಇರಬಹುದು, ವ್ಯಾಯಾಮಗಳಿರಬಹುದು. ಒಟ್ಟಾರೆಯಾಗಿ, ತೂಕ ಇಳಿಸಲು ಹೊರಟ ಮಂದಿ ಯಾವ ಬಗೆಯ ವ್ಯಾಯಾಮದಲ್ಲಿ ತೂಕವನ್ನು ಖಂಡಿತ ಇಳಿಸಬಹುದು ಎಂಬ ಪ್ರಶ್ನೆಗೆ ಉತ್ತರವನ್ನು ಅಪೇಕ್ಷಿಸುತ್ತಾರೆ. ಇನ್ನೂ ಕೆಲವರಿಗೆ, ಯಾವ ಬಗೆಯ ವ್ಯಾಯಾಮವನ್ನೂ ನಿಯಮಿತವಾಗಿ ಮಾಡಲು ಸಾಧ್ಯವಾಗುವುದಿಲ್ಲ. ತೂಕ ಇಳಿಸುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಉಳಿಯುತ್ತದೆ. ಎಲ್ಲಿ ತಾನು ತಪ್ಪುತ್ತಿದ್ದೇನೆ ಎಂಬುದೂ ಅರ್ಥವಾಗುವುದಿಲ್ಲ. ಇನ್ನೂ ಕೆಲವರು, ಯಾವ ವ್ಯಾಯಾಮ, ಜಿಮ್‌ಗೂ ಗಂಟು ಬೀಳದೆ, ಕೇವಲ ವಾಕ್ ಮಾಡುವುದರಿಂದ ತಾನು ತೂಕ ಇಳಿಸುತ್ತೇನೆ, ಫಿಟ್ ಇರುತ್ತೇನೆ ಎಂದು ನಡಿಗೆಯನ್ನೇ ನಂಬುತ್ತಾರೆ. ನಿಯಮಿತ ನಡಿಗೆಯಿಂದಲೂ ತೂಕ ಇಳಿಸಬಹುದು ಎಂಬುದನ್ನು ಸಾಧಿಸಿ ತೋರಿಸಿದ ಮಂದಿಯೂ ಅನೇಕರಿದ್ದಾರೆ. ಬನ್ನಿ, ಕೇವಲ ನಡಿಗೆಯನ್ನೇ ನೀವು ನೆಚ್ಚಿಕೊಂಡಿರುವವರಾದರೆ, ನಡಿಗೆಯಿಂದ ತೂಕ ಇಳಿಸುವುದು ಹೇಗೆ ಎಂಬುದನ್ನು ನೋಡೋಣ.
ಇಂಟರ್ವಲ್ ವಾಕಿಂಗ್
ವಾಕ್ ಮಾಡುವಾಗ ಆಗಾಗ ಮಧ್ಯ ಮಧ್ಯ ಜೋರಾಗಿ ವೇಗವಾಗಿ ವಾಕ್ ಮಾಡುವುದು ಇಂಟರ್ವಲ್ ವಾಕಿಂಗ್. ಸ್ವಲ್ಪ ಕಾಲ ಜೋರಾದ ನಡಿಗೆ, ನಂತರ ನಿಧಾನವಾಗಿ ನಡಿಗೆಯ ವೇಗ ಕಡಿಮೆ ಮಾಡುವುದು, ಮತ್ತೆ ಜೋರಾಗಿ ನಡೆಯುವುದು, ಮತ್ತೆ ಸಾಮಾನ್ಯ ಸ್ಥಿತಿಯ ನಡಿಗೆ ಹೀಗೆ, ಇದನ್ನೇ ನಿತ್ಯವೂ ಮಾಡುವುದು. ಇಂತಹ ನಡಿಗೆಯಿಂದ ಹೆಚ್ಚು ಕ್ಯಾಲರಿಗಳು ಬರ್ನ್ ಆಗುವುದಲ್ಲದೆ, ಇದು ಒಳ್ಳೆಯ ಕಾರ್ಡಿಯೋನಂತೆ ಕೆಲಸ ಮಾಡುತ್ತದೆ. ಹೃದಯ ಬಡಿತ ಹೆಚ್ಚಾಗಿ, ದೇಹ ಚುರುಕಾಗಿತ್ತದೆ.
ಇನ್‌ಕ್ಲೈನ್ ವಾಕಿಂಗ್
ಈ ಬಗೆಯ ವಾಕಿಂಗ್ ಕೂಡಾ ತೂಕ ಇಳಿಸಲು ಹೆಚ್ಚು ಸೂಕ್ತವಾದ ವಾಕಿಂಗ್. ನಿಮ್ಮ ಮನೆಯ ಸುತ್ತಮುತ್ತ ಎಲ್ಲಾದರೂ ಏರುತಗ್ಗುಗಳ ಜಾಗವಿದ್ದರೆ ಹೀಗೆ ಮಾಡಬಹುದು. ಏರುಹಾದಿಯಲ್ಲಿ ವಾಕ್ ಮಾಡುವುದರಿಂದ ಮಾಂಸಖಂಡಗಳಿಗೆ ಒಳ್ಳೆಯ ವ್ಯಾಯಾಮ ದೊರಕಿ ಹೆಚ್ಚು ಕ್ಯಾಲರಿ ಬರ್ನ್ ಆಗುತ್ತದೆ.
ಪವರ್ ವಾಕಿಂಗ್
ಇದು ಕಡಿಮೆ ಸಮಯದಲ್ಲಿ ಹೆಚ್ಚು ನಡಿಗೆ ಕ್ರಮ. ಇದರಲ್ಲಿ, ನೀವು ಪ್ರತಿದಿನ ವೇಗವಾಗಿ ನಡೆಯುತ್ತೀರಿ. ಆರಂಭದಿಂದ ಅಂತ್ಯದವರೆಗೂ ಒಂದೇ ಬಗೆಯಲ್ಲಿ ವೇಗವಾಗಿ ನಡೆದು ಬಹುಬೇಗನೆ ಒಂದು ಸೀಮಿತ ದೂರವನ್ನು, ಟಾರ್ಗೆಟ್ ಅನ್ನು ತಲುಪುತ್ತೀರಿ. ಇದರಿಂದ ಹೃದಯ ಬಡಿತ ಹೆಚ್ಚಾಗಿ, ಮೈಬೆವರಿ, ಹೆಚ್ಚು ಕ್ಯಾಲರಿ ಬರ್ನ್ ಆಗುತ್ತದೆ.
ಬ್ಯಾಕ್‌ವೆರ್ಡ್ ವಾಕಿಂಗ್
ಯಾವಾಗಲೂ ನಡೆಯುವುದಕ್ಕಿಂತ ಉಲ್ಟಾ ನಡೆದು ನೋಡಿ! ಹಿಮ್ಮುಖವಾಗಿ ನಡೆಯುವುದು ಅಷ್ಟು ಸುಲಭವಲ್ಲ. ಇದಕ್ಕೆ ನಮ್ಮ ಬೇರೆಯದೇ ಮಾಂಸಖಂಡಗಳು ಬಳಕೆಯಾಗುತ್ತವೆ. ಸಹಜವಾಗಿಯೇ, ನಿತಯವೂ ಮಾಡದ ಕೆಲಸವನ್ನು ಮಾಡುವ ಕಾರಣ, ಕಷ್ಟವಾಗುವುದರಿಂದ ಬಹುಬೇಗನೆ ಕ್ಯಾಲರಿ ಬರ್ನ್ ಆಗುತ್ತದೆ.
ವೈಟೆಡ್ ವಾಕಿಂಗ್
ಈ ಬಗೆಯ ನಡಿಯಲ್ಲಿ ನಿಮ್ಮ ಎರಡೂ ಕೈಗಳಲ್ಲಿ ಭಾರವನ್ನೂ ಎತ್ತಿರುತ್ತೀರಿ. ಜಿಮ್‌ನಲ್ಲಿ ವ್ಯಾಯಾಮಕ್ಕೆ ಬಳಸುವ ಡಂಬಲ್ಸ್ ಎತ್ತಿಕೊಂಡು ವಾಕ್ ಮಾಡುವುದರಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ಕ್ಯಾಲರಿ ಬರ್ನ್ ಆಗುತ್ತದೆ.
ವಾಕಿಂಗ್ ಲೂಂಜಸ್
ವ್ಯಾಯಾಮಗಳನ್ನು ಮಾಡಿ ಅಭ್ಯಾಸ ಇರುವವರಿಗೆ ಲೂಂಜಸ್ ಬಗ್ಗೆ ತಿಳಿದಿಬಹುದು. ಈ ಲೂಂಜಸ್ ಅನ್ನು ಮಧ್ಯದಲ್ಲಿ ಮಾಡುತ್ತಾ ವಾಕ್ ಮಾಡುವುದರಿಂದ ಹೆಚ್ಚು ಕ್ಯಾಲರಿ ವರ್ನ್ ಮಾಡಬಹುದು.
ಹೈ ನೀ ವಾಕಿಂಗ್
ಮೊಣಕಾಲನ್ನು ಎತ್ತರೆತ್ತರಕ್ಕೆ ಎತ್ತಿ ಇಡುತ್ತಾ ನಡೆಯುವುದು ಈ ಬಗೆಯ ವಾಕಿಂಗ್. ಇದರಲ್ಲೂ ಬೇಗನೆ ತೂಕ ಇಳಿಯುತ್ತದೆ.
ಸೈಡ್ ಸ್ಟೆಪ್ಸ್
ದೇಹದ ಬೇರೆ ಬೇರೆ ಮಾಂಸಖಂಡಗಳಿಗೆ ವ್ಯಾಯಾಮ ನೀಡಲು ವಾಕಿಂಗ್ ನಡುವೆ ಈ ಬದಲಾವಣೆ ಮಾಡಿಕೊಳ್ಳಬಹುದು. ಸೈಡ್ ಸ್ಟೆಪ್ಸ್ ಹಾಕುತ್ತಾ ನಡೆಯುವುದರಿಂದ ಹೆಚ್ಚು ಕ್ಯಾಲರಿ ಕರಗಿಸಬಹುದು.
ಜಾಗಿಂಗ್ ಇಂಟರ್ವಲ್ಸ್
ವಾಕ್ ಮಾಡುತ್ತಾ ಮಧ್ಯದಲ್ಲಿ ಸ್ವಲ್ಪ ದೂರ ಜಾಗಿಂಗ್ ಮಾಡುವುದು ಕೂಡಾ ದೇಹವನ್ನು ಚುರುಕಾಗಿಸಿ, ಹೃದಯ ಬಡಿತ ವೇಗವಾಗಿಸಿ, ಒಳ್ಳೆಯ ವ್ಯಾಯಾಮ ನೀಡುತ್ತದೆ.
ಇದನ್ನೂ ಓದಿ: Almonds For Health: ಉತ್ತಮ ಆರೋಗ್ಯಕ್ಕಾಗಿ ದಿನಕ್ಕೆ ಎಷ್ಟು ಬಾದಾಮಿ ತಿನ್ನಬೇಕು?
ಮೈಂಡ್‌ಫುಲ್ ವಾಕಿಂಗ್
ದೇಹದ ಭಂಗಿ, ಉಸಿರಾಟದ ಕ್ರಮ ಎಲ್ಲವನ್ನೂ ಗಮನಿಸುತ್ತಾ, ಒಂದು ರಿದಮ್‌ನಲ್ಲಿ ಒಂದು ನಿಗದಿತ ದೂರವನನು ನಿಯಮಿತವಾಗಿ ಕ್ರಮಿಸುವುದು. ಇಡೀ ನಡಿಗೆಯನ್ನು ಮಾನಸಿಕವಾಗಿಯೂ ದೈಹಿಕವಾಗಿಯೂ ಅನುಭವಿಸುವ ಕ್ರಮ ಇದರಲ್ಲಿದೆ. ಇದರಿಂದ ಮಾನಸಿಕವಾಗಿಯೂ, ದೈಹಿಕವಾಗಿಯೂ ಲಾಭ ಪಡೆಯಬಹುದು.