Walking for Weight Loss: ಇಲ್ಲಿವೆ ಬಗೆಬಗೆಯ ವಾಕಿಂಗ್‌; ತೂಕ ಇಳಿಸಲು ಇವುಗಳಿಂದಲೂ ಸಾಧ್ಯ! ಟ್ರೈ ಮಾಡಿ ನೋಡಿ - Vistara News

ಆರೋಗ್ಯ

Walking for Weight Loss: ಇಲ್ಲಿವೆ ಬಗೆಬಗೆಯ ವಾಕಿಂಗ್‌; ತೂಕ ಇಳಿಸಲು ಇವುಗಳಿಂದಲೂ ಸಾಧ್ಯ! ಟ್ರೈ ಮಾಡಿ ನೋಡಿ

Walking for Weight Loss: ತೂಕ ಇಳಿಸಲು ಹೊರಟ ಮಂದಿ ಯಾವ ಬಗೆಯ ವ್ಯಾಯಾಮದಲ್ಲಿ ತೂಕವನ್ನು ಖಂಡಿತ ಇಳಿಸಬಹುದು ಎಂಬ ಪ್ರಶ್ನೆಗೆ ಉತ್ತರವನ್ನು ಅಪೇಕ್ಷಿಸುತ್ತಾರೆ. ಇನ್ನೂ ಕೆಲವರಿಗೆ, ಯಾವ ಬಗೆಯ ವ್ಯಾಯಾಮವನ್ನೂ ನಿಯಮಿತವಾಗಿ ಮಾಡಲು ಸಾಧ್ಯವಾಗುವುದಿಲ್ಲ. ತೂಕ ಇಳಿಸುವುದು ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿ ಉಳಿಯುತ್ತದೆ. ನಿಯಮಿತ ನಡಿಗೆಯಿಂದಲೂ ತೂಕ ಇಳಿಸಬಹುದು ಎಂಬುದನ್ನು ಸಾಧಿಸಿ ತೋರಿಸಿದ ಮಂದಿಯೂ ಅನೇಕರಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

walking
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತೂಕ ಇಳಿಸಲು ಇಂದು ನೂರಾರು (Walking for Weight Loss) ದಾರಿಗಳಿವೆ. ಪ್ರತಿಯೊಬ್ಬರೂ ತಾವು ಮಾಡಿ ಯಶಸ್ವಿಯಾದ ಬಗೆಯನ್ನು ತಮ್ಮ ಹತ್ತಿರದವರಲ್ಲಿ ಹೇಳಿಕೊಳ್ಳುತ್ತಾರೆ. ಅದು ಡಯಟ್‌ ಇರಬಹುದು, ವ್ಯಾಯಾಮಗಳಿರಬಹುದು. ಒಟ್ಟಾರೆಯಾಗಿ, ತೂಕ ಇಳಿಸಲು ಹೊರಟ ಮಂದಿ ಯಾವ ಬಗೆಯ ವ್ಯಾಯಾಮದಲ್ಲಿ ತೂಕವನ್ನು ಖಂಡಿತ ಇಳಿಸಬಹುದು ಎಂಬ ಪ್ರಶ್ನೆಗೆ ಉತ್ತರವನ್ನು ಅಪೇಕ್ಷಿಸುತ್ತಾರೆ. ಇನ್ನೂ ಕೆಲವರಿಗೆ, ಯಾವ ಬಗೆಯ ವ್ಯಾಯಾಮವನ್ನೂ ನಿಯಮಿತವಾಗಿ ಮಾಡಲು ಸಾಧ್ಯವಾಗುವುದಿಲ್ಲ. ತೂಕ ಇಳಿಸುವುದು ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿ ಉಳಿಯುತ್ತದೆ. ಎಲ್ಲಿ ತಾನು ತಪ್ಪುತ್ತಿದ್ದೇನೆ ಎಂಬುದೂ ಅರ್ಥವಾಗುವುದಿಲ್ಲ. ಇನ್ನೂ ಕೆಲವರು, ಯಾವ ವ್ಯಾಯಾಮ, ಜಿಮ್‌ಗೂ ಗಂಟು ಬೀಳದೆ, ಕೇವಲ ವಾಕ್‌ ಮಾಡುವುದರಿಂದ ತಾನು ತೂಕ ಇಳಿಸುತ್ತೇನೆ, ಫಿಟ್‌ ಇರುತ್ತೇನೆ ಎಂದು ನಡಿಗೆಯನ್ನೇ ನಂಬುತ್ತಾರೆ. ನಿಯಮಿತ ನಡಿಗೆಯಿಂದಲೂ ತೂಕ ಇಳಿಸಬಹುದು ಎಂಬುದನ್ನು ಸಾಧಿಸಿ ತೋರಿಸಿದ ಮಂದಿಯೂ ಅನೇಕರಿದ್ದಾರೆ. ಬನ್ನಿ, ಕೇವಲ ನಡಿಗೆಯನ್ನೇ ನೀವು ನೆಚ್ಚಿಕೊಂಡಿರುವವರಾದರೆ, ನಡಿಗೆಯಿಂದ ತೂಕ ಇಳಿಸುವುದು ಹೇಗೆ ಎಂಬುದನ್ನು ನೋಡೋಣ.

Walking

ಇಂಟರ್ವಲ್‌ ವಾಕಿಂಗ್‌

ವಾಕ್‌ ಮಾಡುವಾಗ ಆಗಾಗ ಮಧ್ಯ ಮಧ್ಯ ಜೋರಾಗಿ ವೇಗವಾಗಿ ವಾಕ್‌ ಮಾಡುವುದು ಇಂಟರ್ವಲ್‌ ವಾಕಿಂಗ್‌. ಸ್ವಲ್ಪ ಕಾಲ ಜೋರಾದ ನಡಿಗೆ, ನಂತರ ನಿಧಾನವಾಗಿ ನಡಿಗೆಯ ವೇಗ ಕಡಿಮೆ ಮಾಡುವುದು, ಮತ್ತೆ ಜೋರಾಗಿ ನಡೆಯುವುದು, ಮತ್ತೆ ಸಾಮಾನ್ಯ ಸ್ಥಿತಿಯ ನಡಿಗೆ ಹೀಗೆ, ಇದನ್ನೇ ನಿತ್ಯವೂ ಮಾಡುವುದು. ಇಂತಹ ನಡಿಗೆಯಿಂದ ಹೆಚ್ಚು ಕ್ಯಾಲರಿಗಳು ಬರ್ನ್‌ ಆಗುವುದಲ್ಲದೆ, ಇದು ಒಳ್ಳೆಯ ಕಾರ್ಡಿಯೋನಂತೆ ಕೆಲಸ ಮಾಡುತ್ತದೆ. ಹೃದಯ ಬಡಿತ ಹೆಚ್ಚಾಗಿ, ದೇಹ ಚುರುಕಾಗಿತ್ತದೆ.

ಇನ್‌ಕ್ಲೈನ್‌ ವಾಕಿಂಗ್‌

ಈ ಬಗೆಯ ವಾಕಿಂಗ್‌ ಕೂಡಾ ತೂಕ ಇಳಿಸಲು ಹೆಚ್ಚು ಸೂಕ್ತವಾದ ವಾಕಿಂಗ್‌. ನಿಮ್ಮ ಮನೆಯ ಸುತ್ತಮುತ್ತ ಎಲ್ಲಾದರೂ ಏರುತಗ್ಗುಗಳ ಜಾಗವಿದ್ದರೆ ಹೀಗೆ ಮಾಡಬಹುದು. ಏರುಹಾದಿಯಲ್ಲಿ ವಾಕ್‌ ಮಾಡುವುದರಿಂದ ಮಾಂಸಖಂಡಗಳಿಗೆ ಒಳ್ಳೆಯ ವ್ಯಾಯಾಮ ದೊರಕಿ ಹೆಚ್ಚು ಕ್ಯಾಲರಿ ಬರ್ನ್‌ ಆಗುತ್ತದೆ.

The incidence of blood clots in the leg is reduced Benefits Of Walking

ಪವರ್‌ ವಾಕಿಂಗ್‌

ಇದು ಕಡಿಮೆ ಸಮಯದಲ್ಲಿ ಹೆಚ್ಚು ನಡಿಗೆ ಕ್ರಮ. ಇದರಲ್ಲಿ, ನೀವು ಪ್ರತಿದಿನ ವೇಗವಾಗಿ ನಡೆಯುತ್ತೀರಿ. ಆರಂಭದಿಂದ ಅಂತ್ಯದವರೆಗೂ ಒಂದೇ ಬಗೆಯಲ್ಲಿ ವೇಗವಾಗಿ ನಡೆದು ಬಹುಬೇಗನೆ ಒಂದು ಸೀಮಿತ ದೂರವನ್ನು, ಟಾರ್ಗೆಟ್‌ ಅನ್ನು ತಲುಪುತ್ತೀರಿ. ಇದರಿಂದ ಹೃದಯ ಬಡಿತ ಹೆಚ್ಚಾಗಿ, ಮೈಬೆವರಿ, ಹೆಚ್ಚು ಕ್ಯಾಲರಿ ಬರ್ನ್‌ ಆಗುತ್ತದೆ.

ಬ್ಯಾಕ್‌ವೆರ್ಡ್‌ ವಾಕಿಂಗ್‌

ಯಾವಾಗಲೂ ನಡೆಯುವುದಕ್ಕಿಂತ ಉಲ್ಟಾ ನಡೆದು ನೋಡಿ! ಹಿಮ್ಮುಖವಾಗಿ ನಡೆಯುವುದು ಅಷ್ಟು ಸುಲಭವಲ್ಲ. ಇದಕ್ಕೆ ನಮ್ಮ ಬೇರೆಯದೇ ಮಾಂಸಖಂಡಗಳು ಬಳಕೆಯಾಗುತ್ತವೆ. ಸಹಜವಾಗಿಯೇ, ನಿತಯವೂ ಮಾಡದ ಕೆಲಸವನ್ನು ಮಾಡುವ ಕಾರಣ, ಕಷ್ಟವಾಗುವುದರಿಂದ ಬಹುಬೇಗನೆ ಕ್ಯಾಲರಿ ಬರ್ನ್‌ ಆಗುತ್ತದೆ.

images of Walking Tips

ವೈಟೆಡ್‌ ವಾಕಿಂಗ್‌

ಈ ಬಗೆಯ ನಡಿಯಲ್ಲಿ ನಿಮ್ಮ ಎರಡೂ ಕೈಗಳಲ್ಲಿ ಭಾರವನ್ನೂ ಎತ್ತಿರುತ್ತೀರಿ. ಜಿಮ್‌ನಲ್ಲಿ ವ್ಯಾಯಾಮಕ್ಕೆ ಬಳಸುವ ಡಂಬಲ್ಸ್‌ ಎತ್ತಿಕೊಂಡು ವಾಕ್‌ ಮಾಡುವುದರಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ಕ್ಯಾಲರಿ ಬರ್ನ್‌ ಆಗುತ್ತದೆ.

ವಾಕಿಂಗ್‌ ಲೂಂಜಸ್‌

ವ್ಯಾಯಾಮಗಳನ್ನು ಮಾಡಿ ಅಭ್ಯಾಸ ಇರುವವರಿಗೆ ಲೂಂಜಸ್‌ ಬಗ್ಗೆ ತಿಳಿದಿಬಹುದು. ಈ ಲೂಂಜಸ್‌ ಅನ್ನು ಮಧ್ಯದಲ್ಲಿ ಮಾಡುತ್ತಾ ವಾಕ್‌ ಮಾಡುವುದರಿಂದ ಹೆಚ್ಚು ಕ್ಯಾಲರಿ ವರ್ನ್‌ ಮಾಡಬಹುದು.

walking after dinner

ಹೈ ನೀ ವಾಕಿಂಗ್‌

ಮೊಣಕಾಲನ್ನು ಎತ್ತರೆತ್ತರಕ್ಕೆ ಎತ್ತಿ ಇಡುತ್ತಾ ನಡೆಯುವುದು ಈ ಬಗೆಯ ವಾಕಿಂಗ್‌. ಇದರಲ್ಲೂ ಬೇಗನೆ ತೂಕ ಇಳಿಯುತ್ತದೆ.

ಸೈಡ್‌ ಸ್ಟೆಪ್ಸ್‌

ದೇಹದ ಬೇರೆ ಬೇರೆ ಮಾಂಸಖಂಡಗಳಿಗೆ ವ್ಯಾಯಾಮ ನೀಡಲು ವಾಕಿಂಗ್‌ ನಡುವೆ ಈ ಬದಲಾವಣೆ ಮಾಡಿಕೊಳ್ಳಬಹುದು. ಸೈಡ್‌ ಸ್ಟೆಪ್ಸ್‌ ಹಾಕುತ್ತಾ ನಡೆಯುವುದರಿಂದ ಹೆಚ್ಚು ಕ್ಯಾಲರಿ ಕರಗಿಸಬಹುದು.

jogging girl

ಜಾಗಿಂಗ್‌ ಇಂಟರ್ವಲ್ಸ್‌

ವಾಕ್‌ ಮಾಡುತ್ತಾ ಮಧ್ಯದಲ್ಲಿ ಸ್ವಲ್ಪ ದೂರ ಜಾಗಿಂಗ್‌ ಮಾಡುವುದು ಕೂಡಾ ದೇಹವನ್ನು ಚುರುಕಾಗಿಸಿ, ಹೃದಯ ಬಡಿತ ವೇಗವಾಗಿಸಿ, ಒಳ್ಳೆಯ ವ್ಯಾಯಾಮ ನೀಡುತ್ತದೆ.

ಇದನ್ನೂ ಓದಿ: Almonds For Health: ಉತ್ತಮ ಆರೋಗ್ಯಕ್ಕಾಗಿ ದಿನಕ್ಕೆ ಎಷ್ಟು ಬಾದಾಮಿ ತಿನ್ನಬೇಕು?

ಮೈಂಡ್‌ಫುಲ್‌ ವಾಕಿಂಗ್‌

ದೇಹದ ಭಂಗಿ, ಉಸಿರಾಟದ ಕ್ರಮ ಎಲ್ಲವನ್ನೂ ಗಮನಿಸುತ್ತಾ, ಒಂದು ರಿದಮ್‌ನಲ್ಲಿ ಒಂದು ನಿಗದಿತ ದೂರವನನು ನಿಯಮಿತವಾಗಿ ಕ್ರಮಿಸುವುದು. ಇಡೀ ನಡಿಗೆಯನ್ನು ಮಾನಸಿಕವಾಗಿಯೂ ದೈಹಿಕವಾಗಿಯೂ ಅನುಭವಿಸುವ ಕ್ರಮ ಇದರಲ್ಲಿದೆ. ಇದರಿಂದ ಮಾನಸಿಕವಾಗಿಯೂ, ದೈಹಿಕವಾಗಿಯೂ ಲಾಭ ಪಡೆಯಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Almonds For Health: ಉತ್ತಮ ಆರೋಗ್ಯಕ್ಕಾಗಿ ದಿನಕ್ಕೆ ಎಷ್ಟು ಬಾದಾಮಿ ತಿನ್ನಬೇಕು?

Almonds for Health: ಬಾದಾಮಿಯು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಒಂದಿಲ್ಲೊಂದು ರೀತಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ನೆರವಾಗುತ್ತದೆ. ವಿಟಮಿನ್‌ ಇ, ಕ್ಯಾಲ್ಶಿಯಂ, ಫಾಸ್ಫರಸ್‌, ಜಿಂಕ್‌, ಸೆಲೆನಿಯಂ, ತಾವ್ರ, ನಯಾಸಿನ್‌, ಕಬ್ಬಿಣ, ಮೆಗ್ನೀಶಿಯಂ ಮುಂತಾದ ಹಲವಾರು ಒಳ್ಳೆಯ ಅಂಶಗಳನ್ನು ಒಳಗೊಂಡಿರುವ ಇದನ್ನು ಎಷ್ಟು ತಿನ್ನಬೇಕು? ನಮಗಿಷ್ಟ ಬಂದಷ್ಟು ತಿನ್ನಬೇಕೆ ಅಥವಾ ಅದಕ್ಕೊಂದು ಪ್ರಮಾಣ ಇದೆಯೇ? ಈ ಕುರಿತ ಮುಖ್ಯ ಮಾಹಿತಿ ಇಲ್ಲಿದೆ.

VISTARANEWS.COM


on

Almonds
Koo

ಬೀಜಗಳೆಲ್ಲ ಸದ್ಗುಣಿಗಳೇ, ಅದರಲ್ಲಿ (Almonds for Health) ಅನುಮಾನ ಬೇಡ! ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಇರುವವರೆಲ್ಲ ಸಮರ್ಥರೇ ಆದರೂ ಚಿನ್ನ, ಬೆಳ್ಳಿ, ಕಂಚು ಎಂದು ಪದಕಗಳನ್ನು ನೀಡುವುದಿಲ್ಲವೇ? ಹಾಗೆಯೇ, ಬೀಜಗಳಲ್ಲಿ ಚಿನ್ನದ ಪದಕ ಸಲ್ಲುವುದು ಬಾದಾಮಿಗೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಒಂದಿಲ್ಲೊಂದು ರೀತಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಇದು ನೆರವಾಗುತ್ತದೆ. ವಿಟಮಿನ್‌ ಇ, ಕ್ಯಾಲ್ಶಿಯಂ, ಫಾಸ್ಫರಸ್‌, ಜಿಂಕ್‌, ಸೆಲೆನಿಯಂ, ತಾವ್ರ, ನಯಾಸಿನ್‌, ಕಬ್ಬಿಣ, ಮೆಗ್ನೀಶಿಯಂ ಮುಂತಾದ ಹಲವಾರು ಒಳ್ಳೆಯ ಅಂಶಗಳನ್ನು ಒಳಗೊಂಡಿರುವ ಇದನ್ನು ಎಷ್ಟು ತಿನ್ನಬೇಕು? ನಮಗಿಷ್ಟ ಬಂದಷ್ಟು ತಿನ್ನಬೇಕೆ ಅಥವಾ ಅದಕ್ಕೊಂದು ಪ್ರಮಾಣ ಇದೆಯೇ? ಸೇವಿಸಬೇಕಾದ ಬಾದಾಮಿಯ ಪ್ರಮಾಣ ನಿರ್ಧಾರವಾಗುವುದು ಆಯಾ ವ್ಯಕ್ತಿಗಳ ಆರೋಗ್ಯ ಸ್ಥಿತಿ, ಆಹಾರ ಪದ್ಧತಿ ಮತ್ತು ಪ್ರಾದೇಶಿಕ ಹವಾಮಾನಗಳ ಮೇಲೆ. ಚಳಿ ದೇಶಗಳಲ್ಲಿ ಸೇವಿಸುವಷ್ಟು ಬಾದಾಮಿಗಳ ಸೇವನೆ ಉಷ್ಣವಲಯದ ದೇಶಗಳಲ್ಲಿ ಅಗತ್ಯವಿಲ್ಲ. ಇಡಿಯಾದ ಒಣ ಬಾದಾಮಿಗಳು ಭಾರತದಂಥ ಉಷ್ಣವಲಯದ ಹವಾಮಾನಗಳಲ್ಲಿ ಉಷ್ಣತೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ಹಾಗಾಗಿ ಅವುಗಳನ್ನು ನೀರು ಅಥವಾ ಹಾಲಿನಲ್ಲಿ ರಾತ್ರಿಡೀ ನೆನೆಸಿ, ಬೆಳಗ್ಗೆ ಸೇವಿಸುವುದು ಕ್ಷೇಮ. ಸಾಮಾನ್ಯ ವ್ಯಕ್ತಿಗೆ ಬೆಳಗಿನ ಉಪಾಹಾರದೊಂದಿಗೆ, ನೆನೆಸಿದ ಏಳೆಂಟು ಬಾದಾಮಿಗಳು ಸಾಕಾಗಬಹುದು. ಆದರೆ ಕಠಿಣ ದೇಹಶ್ರಮದ ಕೆಲಸ ಮಾಡುವ ಯುವಜನರಿಗೆ ೨೦-೨೨ ಬಾದಾಮಿಗಳವರೆಗೂ ಬೇಕಾಗಬಹುದು. ತಮಗೆಷ್ಟು ಬೇಕು ಎಂಬುದನ್ನು ಆಯಾ ವ್ಯಕ್ತಿಗಳೇ ನಿರ್ಧರಿಸಿಕೊಳ್ಳಬಹುದು.

Almonds Dry Fruits For Hair Fall

ಪೌಷ್ಟಿಕಾಂಶಗಳು ಏನಿವೆ?

ವಿಟಮಿನ್‌ ಇ, ವಿಟಮಿನ್‌ ಬಿ1, ಥಿಯಮಿನ್‌, ವಿಟಮಿನ್‌ ಬಿ೩, ಫೋಲೇಟ್‌, ವಿಟಮಿನ್‌ ಬಿ9, ಪ್ರೊಟೀನ್‌, ನಾರು, ಮೆಗ್ನೀಶಿಯಂ, ಕಬ್ಬಿಣ ಮತ್ತು ಕ್ಯಾಲ್ಸಿಯಂ ಅಂಶಗಳು ಪ್ರಧಾನವಾಗಿವೆ. ಕೆಲವು ಸೂಕ್ಷ್ಮ ಪೋಷಕಾಂಶಗಳು ಸಹ ಇದರಿಂದ ದೊರೆಯುತ್ತವೆ. ಇದರಿಂದ ಮೂಳೆಗಳ ಸಾಂದ್ರತೆ ಬಲಗೊಳ್ಳುತ್ತದೆ, ಕೆಂಪು ರಕ್ತಕಣಗಳ ಸಂಖ್ಯೆ ವೃದ್ಧಿಗೊಳ್ಳುತ್ತದೆ, ಸ್ನಾಯುಗಳು ಸದೃಢವಾಗುತ್ತವೆ. ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು. ಹೃದ್ರೋಗಿಗಳು ಮತ್ತು ಮಧುಮೇಹಿಗಳು ಸಹ ಸೇವಿಸಬಹುದಾದ ಆಹಾರವಿದಾಗಿದ್ದು, ಕೊಲೆಸ್ಟ್ರಾಲ್‌ ಮತ್ತು ರಕ್ತದ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ನೆರವಾಗುತ್ತದೆ. ಜೀರ್ಣಾಂಗದ ಕ್ಯಾನ್ಸರ್‌ ತಡೆಗಟ್ಟಲು ನೆರವಾಗುವ ಈ ಪುಟ್ಟ ಬೀಜಗಳು, ಅಲ್ಜೈಮರ್ಸ್‌ ಉಲ್ಭಣಿಸುವುದನ್ನು ತಡೆಯಲು ಸಹಕಾರಿ. ತೆಂಗಿನ ಹಾಲಿನಂತೆ ಬಾದಾಮಿಯ ಹಾಲು ಸಹ ಲಭ್ಯವಿದೆ. ಮಾತ್ರವಲ್ಲ, ಬಾದಾಮಿ ಎಣ್ಣೆ ಮತ್ತು ಪೀನಟ್‌ ಬಟರ್‌ನಂತೆ ಬಾದಾಮಿ ಬೆಣ್ಣೆ ಸಹ ದೊರೆಯುತ್ತವೆ.
ದಿನದಲ್ಲಿ ಹಸಿವಾದಾಗ ಸಿಕ್ಕಿದ್ದನ್ನು ಬಾಯಿಗೆ ಹಾಕುವ ಬದಲು, ಒಂದಿಷ್ಟು ಬಾದಾಮಿಗಳನ್ನು ಬಾಯಾಡುವುದು ಎಲ್ಲಾ ಲೆಕ್ಕದಲ್ಲೂ ಸೂಕ್ತವಾದದ್ದು. ಹೆಚ್ಚಿನ ಬಾದಾಮಿಗಳ ಸೇವನೆಯಿಂದ ನಮ್ಮ ಜಠರದಲ್ಲಿ ಹೆಚ್ಚಾಗಿ ಉತ್ಪಾದನೆಯಾಗುವ ಬ್ಯೂಟರೇಟ್‌ನಿಂದ ದೇಹಕ್ಕೆ ಹಲವು ರೀತಿಯಲ್ಲಿ ಲಾಭವಿದೆ. ಜೀರ್ಣಾಂಗದಿಂದ ನಮ್ಮ ರಕ್ತವನ್ನು ಪ್ರವೇಶಿಸುವ ಈ ರಾಸಾಯನಿಕದಿಂದ ಶ್ವಾಸಕೋಶ, ಯಕೃತ್ತು ಮತ್ತು ಮೆದುಳಿನ ಆರೋಗ್ಯವೂ ಉತ್ತಮಗೊಳ್ಳುತ್ತದೆ. ಮಾತ್ರವಲ್ಲ, ಹಾನಿಕಾರಕ ಬ್ಯಾಕ್ಟೀರಿಯಾಗಳು ನಮ್ಮ ಪರಿಚಲನಾ ವ್ಯವಸ್ಥೆ ಪ್ರವೇಶಿಸುವುದನ್ನು ತಡೆಯುವ ಬ್ಯೂಟರೇಟ್‌, ಹೊಟ್ಟೆಯ ಉರಿಯೂತವನ್ನೂ ಶಮನಗೊಳಿಸುತ್ತದೆ. ಬಾದಾಮಿಯಿಂದ ಚರ್ಮದ ಕಾಂತಿ ಹೆಚ್ಚುವುದೇ ಅಲ್ಲದೆ, ಕೂದಲಿನ ಆರೋಗ್ಯವೂ ವೃದ್ಧಿಸುತ್ತದೆ.

ಹೆಚ್ಚಾದರೇನಾಗುತ್ತದೆ?

ಇದರಲ್ಲಿ ಸತ್ವ ಮಾತ್ರವಲ್ಲ, ಕ್ಯಾಲರಿಯೂ ಹೆಚ್ಚು. ಹಾಗಾಗಿ ಅತಿಯಾಗಿ ತಿಂದರೆ ತೂಕ ಹೆಚ್ಚುವುದು ನಿಶ್ಚಿತ. ಅದರಲ್ಲೂ ಬಾದಾಮಿಯಲ್ಲಿ ಉತ್ತಮವಾದ ಕೊಬ್ಬಿನಂಶ ಹೇರಳವಾಗಿದೆ. ಹಾಗಾಗಿ ತಿಳಿದು ತಿನ್ನುವುದು ಒಳ್ಳೆಯದು.

Improved Digestion Tea Benefits

ಜೀರ್ಣಾಂಗಗಳ ಸಮಸ್ಯೆ

ಈ ಬೀಜಗಳಲ್ಲಿ ನಾರು ವಿಫುಲವಾಗಿದೆ. ನಾರಿನಂಶ ಜೀರ್ಣಾಂಗಗಳಿಗೆ ಒಳ್ಳೆಯದೇ ಎನ್ನುವುದು ಹೌದಾದರೂ, ಅದನ್ನು ಅತಿಯಾಗಿ ತಿಂದರೆ ಹೊಟ್ಟೆ ಏರುಪೇರಾಗುತ್ತದೆ. ಆಗ ಸಾಕಷ್ಟು ನೀರು ಕುಡಿಯಬೇಕು. ಅದೂ ಕಡಿಮೆಯಾದರೆ ಹೊಟ್ಟೆ ಉಬ್ಬರಿಸಿ, ಅಜೀರ್ಣದ ಬಾಧೆ ಕಾಡುತ್ತದೆ.

ಆಕ್ಸಲೇಟ್‌ಗಳು

ಬಾದಾಮಿಯಲ್ಲಿ ಆಕ್ಸಲೇಟ್‌ ಅಂಶವಿದೆ. ಇದರಿಂದ ಹೆಚ್ಚಿನವರಿಗೆ ತೊಂದರೆಯಿಲ್ಲ. ಆದರೆ ಕಿಡ್ನಿ ಕಲ್ಲಿನ ಸಮಸ್ಯೆ ಇರುವವರಿಗೆ ಆಕ್ಸಲೇಟ್‌ ಇರುವ ಆಹಾರಗಳು ಸೂಕ್ತವಲ್ಲ. ಅಂಥವರು ಬಾದಾಮಿಯನ್ನು ಅಧಿಕ ಪ್ರಮಾಣದಲ್ಲಿ ತಿನ್ನುವುದು ತೊಂದರೆ ನೀಡಬಹುದು.

ಇದನ್ನೂ ಓದಿ: Beetroot Side Effects: ಬೀಟ್‌ರೂಟ್‌ ಎಲ್ಲರಿಗೂ ಒಳ್ಳೆಯದಲ್ಲ! ಯಾರು ಇದನ್ನು ತಿನ್ನಬಾರದು ಗೊತ್ತೇ?

ಫೈಟಿಕ್‌ ಆಮ್ಲ

ಪೋಷಕಾಂಶಗಳನ್ನು ಹೀರಿಕೊಳ್ಳಲು ತೊಂದರೆ ನೀಡುವಂಥ ಅಂಶವಿದು. ಇದು ಬಾದಾಮಿಯಲ್ಲಿದೆ. ಸಮತೋಲಿತ ಆಹಾರ ಸೇವಿಸುತ್ತಿರುವವರಿಗೆ ಇದರಿಂದ ಅಂಥ ತೊಂದರೆಯೇನೂ ಆಗುವುದಿಲ್ಲ. ಆದರೆ ಅಧಿಕ ಪ್ರಮಾಣದಲ್ಲಿ ಬಾದಾಮಿಯನ್ನು ದೀರ್ಘ ಕಾಲದವರೆಗೆ ತಿನ್ನುತ್ತಿದ್ದರೆ ಫೈಟಿಕ್‌ ಆಮ್ಲದಿಂದ ಸಮಸ್ಯೆ ಆದರೆ ಅಚ್ಚರಿಯಿಲ್ಲ.

Continue Reading

ಆರೋಗ್ಯ

Shravan Recipes: ಶ್ರಾವಣ ಮಾಸದಲ್ಲಿ ಸಾಬುದಾನದ ಈ 5 ಖಾದ್ಯಗಳನ್ನು ಮಾಡಿ ನೋಡಿ

Shravan Recipes: ಶ್ರಾವಣ ಮಾಸದಲ್ಲಿ (Shravan 2024) ಉಪವಾಸ ವ್ರತಗಳನ್ನು ಆಚರಿಸುವವರು ಏನು ತಿನ್ನಬೇಕು, ಏನು ತಿನ್ನಬಾರದು ಎನ್ನುವ ನಿಯಮಗಳಿವೆ. ಉಪವಾಸ ನಿರತರಿಗೆ ತಾಜಾ ತರಕಾರಿ ಮತ್ತು ಹಣ್ಣುಗಳ ಜೊತೆಗೆ, ಸಾಬುದಾನವು ಭಾರತದಲ್ಲಿ ಅತ್ಯಂತ ಜನಪ್ರಿಯ ಆಹಾರವಾಗಿದೆ. ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಸಾಬುದಾನವನ್ನು ಪ್ರತಿ ದಿನ ಒಂದೇ ರೀತಿಯಾಗಿ ತಿನ್ನುವುದು ಬೇಸರ ಮೂಡಿಸಬಹುದು. ಅದಕ್ಕಾಗಿ ಸಾಬುದಾನದ ವಿವಿಧ ರೀತಿಯ ಖಾದ್ಯಗಳ ವಿವರ ಇಲ್ಲಿದೆ.

VISTARANEWS.COM


on

By

shravan foods
Koo

ಭಾರತದಲ್ಲಿ ಶ್ರಾವಣ ಮಾಸವು ಹೆಚ್ಚಿನ ಪ್ರಾಮುಖ್ಯತೆಯನ್ನು (Shravan Recipes) ಹೊಂದಿದೆ. ಶಿವನ ಆಶೀರ್ವಾದವನ್ನು ಪಡೆಯಲು ಹೆಚ್ಚಿನ ಭಕ್ತರು (Shravan 2024) ಉಪವಾಸ ವ್ರತಾಚರಣೆ (fast) ಮಾಡುತ್ತಾರೆ. ಉಪವಾಸ ನಿರತರು ಸಾತ್ವಿಕ ಆಹಾರವನ್ನು (fasting food) ಮಾತ್ರ ಸೇವಿಸುತ್ತಾರೆ. ಉಪವಾಸ ವ್ರತಗಳನ್ನು ಆಚರಿಸುವವರು ಏನು ತಿನ್ನಬೇಕು, ಏನು ತಿನ್ನಬಾರದು ಎನ್ನುವ ನಿಯಮಗಳಿವೆ. ಉಪವಾಸ ನಿರತರಿಗೆ ತಾಜಾ ತರಕಾರಿ (Vegetables) ಮತ್ತು ಹಣ್ಣುಗಳ (fruits) ಜೊತೆಗೆ, ಸಾಬುದಾನವು (Sabudana) ಭಾರತದಲ್ಲಿ ಅತ್ಯಂತ ಜನಪ್ರಿಯ ಉಪವಾಸದ ಆಹಾರವಾಗಿದೆ.

ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಸಾಬುದಾನವನ್ನು ಪ್ರತಿ ದಿನ ಒಂದೇ ರೀತಿಯಾಗಿ ತಿನ್ನುವುದು ಬೇಸರ ಮೂಡಿಸಬಹುದು. ಅದಕ್ಕಾಗಿ ಸಾಬುದಾನದ ವಿವಿಧ ರೀತಿಯ ಖಾದ್ಯಗಳನ್ನು ಮಾಡಿ ಸೇವಿಸಬಹುದು.

ಮರಗೆಣಸಿನ ಬೇರುಗಳಿಂದ ತಯಾರಿಸುವ ಸಾಬುದಾನ ವ್ರತ ಸ್ನೇಹಿ ಆಹಾರಗಳಲ್ಲಿ ಒಂದು. ಇದನ್ನು ಉಪವಾಸ ನಿರತರು ಸೇವಿಸುವುದರಿಂದ ಹೆಚ್ಚು ಕಾಲ ಹೊಟ್ಟೆ ತುಂಬಿದ ಅನುಭವವನ್ನು ಪಡೆಯಬಹುದು. ಹಲವಾರು ಪೋಷಕಾಂಶಗಳನ್ನು ಹೊಂದಿರುವ ಸಾಬುದಾನ ನಂಬರ್ ಒನ್ ಫಾಸ್ಟಿಂಗ್ ಫುಡ್ ಎಂದೇ ಪರಿಗಣಿಸಲಾಗಿದೆ.

ಟಪಿಯೋಕಾ ಮುತ್ತುಗಳು ಎಂದೂ ಕರೆಯಲ್ಪಡುವ ಸಾಬುದಾನವು ಅನೇಕ ಭಾರತೀಯ ಮನೆಗಳಲ್ಲಿ ಪ್ರಧಾನವಾಗಿ ಬಳಸಲಾಗುತ್ತದೆ. ವಿಶೇಷವಾಗಿ ನವರಾತ್ರಿ, ಜನ್ಮಾಷ್ಟಮಿ ಮತ್ತು ಶ್ರಾವಣ ಮಾಸದ ಉಪವಾಸದ ಅವಧಿಯಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಸಾಬುದಾನ ಅಥವಾ ಸಾಗೋ ಮೂಲತಃ ಸಣ್ಣ ಪಿಷ್ಟದ ಮುತ್ತುಗಳು. ಇದರಲ್ಲಿ ಹೆಚ್ಚಿನ ಪಿಷ್ಟದ ಅಂಶವಿರುವುದರಿಂದ ಸುಲಭವಾಗಿ ಬೇಯಿಸಬಹುದು. ಸಿಹಿ ಮತ್ತು ಖಾರ ಎರಡಕ್ಕೂ ಹೊಂದಿಕೆಯಾಗುವ ಸಾಗುವಿನ ರುಚಿ ಮಕ್ಕಳಿಂದ ಹಿಡಿದು ವೃದ್ಧರಿಗೂ ಪ್ರಿಯವಾಗುವುದು.

ಆರೋಗ್ಯ ಪ್ರಯೋಜನಗಳು ಏನು?

ಉಪವಾಸ ನಿರತರು ಸಾಮಾನ್ಯವಾಗಿ ಆಹಾರ ಸೇವಿಸದೇ ದೀರ್ಘಕಾಲದವರೆಗೆ ಇರಬೇಕಾಗುತ್ತದೆ. ಹೀಗಾಗಿ ನಿರಂತರ ಶಕ್ತಿಯನ್ನು ಒದಗಿಸುವ ಯಾವುದನ್ನಾದರೂ ಸ್ವಲ್ಪ ಸಾತ್ವಿಕ ಆಹಾರ ಸೇವಿಸುವುದು ಬಹುಮುಖ್ಯವಾಗಿರುತ್ತದೆ. ಆದ್ದರಿಂದ ಪ್ರಾಥಮಿಕವಾಗಿ ಕಾರ್ಬೋಹೈಡ್ರೇಟ್‌ಗಳನ್ನು ಒಳಗೊಂಡಿರುವ ಸಬುದಾನವು ದಿನವಿಡೀ ನಮ್ಮನ್ನು ಶಕ್ತಿಯುತವಾಗಿರಿಸುತ್ತದೆ.

ಉಪವಾಸದ ಸಮಯದಲ್ಲಿ ಸಾಬುದಾನಕ್ಕೆ ಆದ್ಯತೆ ನೀಡಲು ಮತ್ತೊಂದು ಪ್ರಮುಖ ಕಾರಣವೆಂದರೆ ಅದು ಸುಲಭವಾಗಿ ಜೀರ್ಣವಾಗುತ್ತದೆ. ಹೊಟ್ಟೆಯನ್ನು ಭಾರಗೊಳಿಸುವುದಿಲ್ಲ. ಹೊಟ್ಟೆಗೆ ಸಂಬಂಧಿಸಿ ಯಾವುದೇ ಅಸ್ವಸ್ಥತೆ ಅಥವಾ ಉಬ್ಬುವಿಕೆಯನ್ನು ಉಂಟುಮಾಡುವುದಿಲ್ಲ.

ಸಾಬುದಾನದಲ್ಲಿ ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಖನಿಜಗಳಲ್ಲಿ ಸಮೃದ್ಧವಾಗಿದೆ. ಹೀಗಾಗಿ ಇದರ ಸೇವನೆ ಉಪವಾಸ ನಿರತರಿಗೆ ಅತ್ಯಗತ್ಯ.


1. ಸಾಬುದಾನ ಖಿಚಡಿ

ಬೆಳಗ್ಗಿನ ಉಪಾಹಾರ, ಸಂಜೆಯ ಫಲಾಹಾರಕ್ಕೆ ಸಾಬುದಾನ ಖಿಚಡಿ ಒಂದು ಜನಪ್ರಿಯ ಉಪವಾಸ ಖಾದ್ಯ. ರಾತ್ರಿಯಿಡೀ ನೆನೆಸಿಟ್ಟ ಸಾಬುದಾನಕ್ಕೆ ಹುರಿದ ಕಡಲೆಕಾಳು, ಜೀರಿಗೆ, ಹಸಿರು ಮೆಣಸಿನಕಾಯಿ ಮತ್ತು ಬೇಯಿಸಿದ ಆಲೂಗಡ್ಡೆಯನ್ನು ಬೆರೆಸಿ ಖಿಚಿಡಿ ತಯಾರಿಸಲಾಗುತ್ತದೆ.


2. ಸಾಬುದಾನ ವಡಾ

ಉಪವಾಸದ ವೇಳೆ ಗರಿಗರಿಯಾದ ಮತ್ತು ರುಚಿಕರವಾದ ತಿಂಡಿಗಳನ್ನು ತಿನ್ನಲು ಬಯಸುವವರು ಸಾಬುದಾನ ವಡಾವನ್ನು ತಯಾರಿಸಬಹುದು. ನೆನೆಸಿದ ಸಾಬುದಾನವನ್ನು ಬೇಯಿಸಿದ ಆಲೂಗಡ್ಡೆ, ಹುರಿದ ಕಡಲೆಕಾಯಿಗಳು ಮತ್ತು ವಿವಿಧ ಮಸಾಲೆಗಳೊಂದಿಗೆ ಬೆರೆಸಿ, ಅನಂತರ ಆಕಾರ ಕೊಟ್ಟು ಎಣ್ಣೆಯಲ್ಲಿ ಕರಿಯಿರಿ. ಇದನ್ನು ಹುಣಸೆ ಹಣ್ಣಿನ ಚಟ್ನಿ ಅಥವಾ ಮಸಾಲೆಯುಕ್ತ ಹಸಿರು ಚಟ್ನಿಯೊಂದಿಗೆ ಸೇವಿಸಲು ರುಚಿಯಾಗಿರುತ್ತದೆ.


3. ಸಾಬುದಾನ ಖೀರ್

ಸಿಹಿ ತಿನ್ನಲು ಬಯಸುವವರಿಗೆ ಸಾಬುದಾನದ ಖೀರ್‌ ಅತ್ಯುತ್ತಮ ಆಯ್ಕೆಯಾಗಿದೆ. ಇದು ಸಾಗು, ಹಾಲು ಮತ್ತು ಸಕ್ಕರೆ ಹಾಕಿ ಇದನ್ನು ತಯಾರಿಸಲಾಗುತ್ತದೆ. ಇದಕ್ಕಾಗಿ ಸಾಬುದಾನವನ್ನು ಮೊದಲು ನೆನೆಸಿ ಇಡಬೇಕು. ಬಳಿಕ ಹಾಲಿನಲ್ಲಿ ಬೇಯಿಸಿ ಸಕ್ಕರೆ, ಏಲಕ್ಕಿ ಸೇರಿಸಿ. ಜೊತೆಗೆ ಒಂದೆರಡು ಕೇಸರಿ ದಳಗಳು, ಕತ್ತರಿಸಿದ ಬೀಜಗಳನ್ನು ಹಾಕಿದರೆ ಸಾಬೂದಾನದ ಖೀರ್ ಸವಿಯಲು ಸಿದ್ಧ.


4. ಸಾಬುದಾನ ದೋಸೆ

ಸಾಬುದಾನ ದೋಸೆಯು ದಕ್ಷಿಣ ಭಾರತದ ಸಾಂಪ್ರದಾಯಿಕ ಉಪಹಾರದ ವಿಶಿಷ್ಟ ಮತ್ತು ಆರೋಗ್ಯಕರ ತಿನಿಸು. ಅಕ್ಕಿಯ ಬದಲಿಗೆ ನೆನೆಸಿದ ಸಾಬುದಾನ, ಹಿಸುಕಿದ ಆಲೂಗಡ್ಡೆ ಮತ್ತು ಮಸಾಲೆಯನ್ನು ಸೇರಿಸಿ ಇದನ್ನು ತಯಾರಿಸಲಾಗುತ್ತದೆ. ಈ ದೋಸೆಯು ಗ್ಲುಟನ್ ಮುಕ್ತವಾಗಿದೆ ಮತ್ತು ಪೋಷಕಾಂಶಗಳಿಂದ ತುಂಬಿರುತ್ತದೆ. ಇದನ್ನು ತೆಂಗಿನಕಾಯಿ ಚಟ್ನಿಯೊಂದಿಗೆ ಬಿಸಿಯಾಗಿ ಸವಿಯಬಹುದು.

ಇದನ್ನೂ ಓದಿ: Shravan 2024: ಶ್ರಾವಣ ಮಾಸದಲ್ಲೇಕೆ ಮಾಂಸಾಹಾರ ಮಾಡಬಾರದು? ಇದಕ್ಕಿದೆ ವೈಜ್ಞಾನಿಕ ಕಾರಣ!


5. ಸಾಬುದಾನದ ಲಡ್ಡು

ಸಕ್ಕರೆ ಮತ್ತು ತುಪ್ಪದಿಂದ ತಯಾರಿಸಿದ ಸಾಬುದಾನದ ಲಡ್ಡು ರುಚಿಯ ಜೊತೆಗೆ ಪೌಷ್ಟಿಕ ಖಾದ್ಯವಾಗಿದೆ. ಸಕ್ಕರೆ ಪುಡಿ, ಏಲಕ್ಕಿ ಮತ್ತು ಗೋಡಂಬಿ ಮತ್ತು ಬಾದಾಮಿಗಳಂತಹ ಬೀಜಗಳನ್ನು ಲಡ್ಡುವಿನಲ್ಲಿ ಸೇರಿಸಬಹುದು. ಇದು ತ್ವರಿತ ಶಕ್ತಿಯ ವರ್ಧಕವೂ ಹೌದು.

Continue Reading

ಬೆಂಗಳೂರು

Fortis Hospital: ಅಪಘಾತದಲ್ಲಿ ತಲೆಗೆ ತೀವ್ರ ಏಟು; ಕ್ಲಿಷ್ಟ ಶಸ್ತ್ರಚಿಕಿತ್ಸೆಯಿಂದ ಯುವಕನಿಗೆ ಜೀವ ದಾನ

Fortis Hospital: ತೀವ್ರ ರಸ್ತೆ ಅಪಘಾತಕ್ಕೆ ಒಳಗಾಗಿ ಮೆದುಳಿನ ಕೋಶಗಳ ನಡುವೆ ರಕ್ತಸ್ರಾವ ಉಂಟಾಗಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ 19 ವರ್ಷದ ಕಾಲೇಜು ಯುವಕನಿಗೆ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Fortis Hospital
Koo

ಬೆಂಗಳೂರು: ತೀವ್ರ ರಸ್ತೆ ಅಪಘಾತಕ್ಕೆ ಒಳಗಾಗಿ ಮೆದುಳಿನ ಕೋಶಗಳ ನಡುವೆ ರಕ್ತಸ್ರಾವ ಉಂಟಾಗಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ 19 ವರ್ಷದ ಕಾಲೇಜು ಯುವಕನಿಗೆ ಫೋರ್ಟಿಸ್‌ ಆಸ್ಪತ್ರೆ (Fortis Hospital) ವೈದ್ಯರ ತಂಡ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿ: Money Guide: ಆನ್‌ಲೈನ್‌ ಶಾಪಿಂಗ್‌ ವೇಳೆ ಮೋಸ ಹೋಗದಿರಲು ಈ ಟಿಪ್ಸ್‌ ಪಾಲೋ ಮಾಡಿ

ಈ ಕುರಿತು ಮಾತನಾಡಿದ ಫೋರ್ಟಿಸ್‌ ಆಸ್ಪತ್ರೆಯ ನರ ಶಸ್ತ್ರಚಿಕಿತ್ಸಾ ವಿಭಾಗದ ಹೆಚ್ಚುವರಿ ನಿರ್ದೇಶಕ ರಘುರಾಮ್ ಜಿ., 19 ವರ್ಷದ ರಾಜ್ ಎಂಬುವವರು ಹುಳಿಮಾವು ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಫುಟ್‌ಪಾತ್‌ಗೆ ಕಾರು ಡಿಕ್ಕಿಯಾದ ಪರಿಣಾಮ ಹಿಂಬದಿ ಕುಳಿತಿದ್ದ ಇವರ ತಲೆ, ಕೈಗೆ ತೀವ್ರವಾಗಿ ಪೆಟ್ಟಾಗಿತ್ತು. ಅಪಘಾತದ ತೀವ್ರತೆಯಿಂದಾಗಿ ಇವರ ಬಲಗೈ ಮೂಳೆ ಮುರಿದು, ತಲೆಗೆ ತೀವ್ರವಾಗಿ ಗಾಯವಾಗಿ ಕಿವಿಯಿಂದ ರಕ್ತಸ್ತ್ರಾವವಾಗಿತ್ತು. ಇದರಿಂದ ಅವರು ಪ್ರಜ್ಞೆ ಕಳೆದುಕೊಂಡಿದ್ದರು. ಕೂಡಲೇ ಅವರನ್ನು ಫೋರ್ಟಿಸ್‌ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ಕರೆತರಲಾಯಿತು.

ಕೂಡಲೇ ನಮ್ಮ ವೈದ್ಯರ ತಂಡ ಅವರನ್ನು ಎಂಆರ್‌ಐಗೆ ಒಳಪಡಿಸಲಾಯಿತು. ಅವರಿಗೆ ಮೆದುಳಿನ ಕೋಶಗಳ ನಡುವೆ ಸಂಪರ್ಕ ಕಲ್ಪಿಸುವ ನರಗಳಲ್ಲಿ ರಕ್ತಸ್ರಾವ ಆಗಿರುವುದು ಕಂಡು ಬಂತು. ಇದನ್ನು ಆಕ್ಸಾನಲ್‌ ಗಾಯ ಎನ್ನಲಾಗುತ್ತದೆ. ಈ ಗಾಯದಿಂದ ಅವರು ಮಾತನಾಡುವ ಹಾಗೂ ಚಲಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುವ ಸಂಭವವಿರುತ್ತದೆ. ಹೀಗಾಗಿ ಅವರಿಗೆ ಕೂಡಲೇ ತುರ್ತು ಚಿಕಿತ್ಸೆಯನ್ನು ನೀಡಲಾಯಿತು. ನ್ಯೂರೋ ತಂಡವು ಅವರ ಮಾತಿನ ತೊಂದರೆ, ಮೆಮೊರಿ ಸಮಸ್ಯೆಯನ್ನು ಪರಿಸರಿಸುವ ನಿಟ್ಟಿನಲ್ಲಿ ಚಿಕಿತ್ಸೆ ನೀಡಿದರು. ಆರಂಭಿಕ ಚಿಕಿತ್ಸೆಯ ನಂತರ, ಫಿಸಿಯೋಥೆರಪಿ ಮತ್ತು ಸ್ಪೀಚ್ ಥೆರಪಿ ನೀಡಲಾಗುತ್ತಿದೆ ಎಂದು ವಿವರಿಸಿದರು.

ಇದನ್ನೂ ಓದಿ: Janopakari Doddanna Shetty: ಗಾಣಿಗ ಸಮುದಾಯ ಶ್ರಮದಿಂದ ಬದುಕು ಕಟ್ಟಿಕೊಂಡಿದೆ; ಡಿ.ಕೆ. ಶಿವಕುಮಾರ್ ಶ್ಲಾಘನೆ

ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯ ಮೂಳೆಚಿಕಿತ್ಸಾ ವಿಭಾಗದ ನಿರ್ದೇಶಕ ಡಾ. ನಾರಾಯಣ್ ಹುಲ್ಸೆ ಮಾತನಾಡಿ, ಅಪಘಾತದಿಂದ ರಾಜ್‌ ಅವರ ಬಲಗೈ ಮೇಲ್ಭಾಗದ ಮೂಳೆ ಮುರಿದ ಕಾರಣ ಅವರಿಗೆ ತೆಳವಾದ ತಂತಿಯನ್ನು ಬಳಸಿಕೊಂಡು, ಪ್ಲೇಟ್‌ ಹಾಗೂ ಸ್ಕ್ರೂಗಳನ್ನು ಬಲಗೊಳಿಸಲಾಗಿದೆ. ಜತೆಗೆ ಮೊಣಕೈ ಕೀಲಿನ ಒಂದು ಭಾಗವನ್ನು ತೆಗೆದು ಹಾಕಲಾಗಿದ್ದು, ರೋಗಿಯು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

Continue Reading

ಬೆಂಗಳೂರು

Sharan Prakash Patil: ಮೆಡಿಕಲ್‌ ಕಾಲೇಜುಗಳಲ್ಲಿ ವ್ಯಾಸ್ಕ್ಯುಲಾರ್‌ ವಿಭಾಗ ಪ್ರಾರಂಭ : ಸಚಿವ ಶರಣಪ್ರಕಾಶ್‌ ಪಾಟೀಲ್‌

Sharan Prakash Patil : ಈಗಾಗಲೇ ಬೆಂಗಳೂರು ಹಾಗೂ ಮೈಸೂರಿನಲ್ಲಿ ವ್ಯಾಸ್ಕ್ಯುಲಾರ್‌ ವಿಭಾಗ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕಲುಬುರುಗಿ, ಬೆಳಗಾವಿ ಹಾಗೂ ಹುಬ್ಬಳ್ಳಿಯಲ್ಲಿಯೂ ಆರಂಭವಾಗಲಿದ್ದು, ವಿಕ್ಟೋರಿಯಾ ಹಾಗೂ ಸಂಜಯ್‌ ಗಾಂಧೀ ಆಸ್ಪತ್ರೆಯಲ್ಲಿಯೂ ವಿಭಾಗ ತೆರೆಯುವ ಉದ್ದೇಶವಿಟ್ಟುಕೊಂಡಿದ್ದೇವೆ ಎಂದರು.

VISTARANEWS.COM


on

Sharan Prakash Patil
Koo

ಬೆಂಗಳೂರು: ವ್ಯಾಸ್ಕ್ಯುಲಾರ್‌ ಸಮಸ್ಯೆಗಳನ್ನು ಪತ್ತೆ ಹಚ್ಚಲು ಹಾಗೂ ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆ ನೀಡಲು ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಮೆಡಿಕಲ್‌ ಕಾಲೇಜುಗಳಲ್ಲಿ ವ್ಯಾಸ್ಕ್ಯುಲಾರ್‌ ವಿಭಾಗ ಪ್ರಾರಂಭ ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ (Sharan Prakash Patil) ತಿಳಿಸಿದರು. ಅವರು ವ್ಯಾಸ್ಕ್ಯುಲಾರ್‌ ಸೊಸೈಟಿ ಆಫ್‌ ಇಂಡಿಯಾ ಹಾಗೂ ವ್ಯಾಸ್ಕಾರ್‌ ವತಿಯಿಂದ ನಗರದ ಕಂಠೀರವ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ವಾಕಥಾನ್‌ ಗೆ ಚಾಲನೆ ನೀಡಿ ಮಾತನಾದಡಿದರು.

ಈಗಾಗಲೇ ಬೆಂಗಳೂರು ಹಾಗೂ ಮೈಸೂರಿನಲ್ಲಿ ವ್ಯಾಸ್ಕ್ಯುಲಾರ್‌ ವಿಭಾಗ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕಲುಬುರುಗಿ, ಬೆಳಗಾವಿ ಹಾಗೂ ಹುಬ್ಬಳ್ಳಿಯಲ್ಲಿಯೂ ಆರಂಭವಾಗಲಿದ್ದು, ವಿಕ್ಟೋರಿಯಾ ಹಾಗೂ ಸಂಜಯ್‌ ಗಾಂಧೀ ಆಸ್ಪತ್ರೆಯಲ್ಲಿಯೂ ವಿಭಾಗ ತೆರೆಯುವ ಉದ್ದೇಶವಿಟ್ಟುಕೊಂಡಿದ್ದೇವೆ ಎಂದರು.

ಹಿರಿಯ ವ್ಯಾಸ್ಕ್ಯುಲಾರ್‌ ಸರ್ಜನ್‌ ಡಾ.ಕೆ.ಆರ್.ಸುರೇಶ್‌ ಮಾತನಾಡಿ ಹೃದಯಾಘಾತದಂತೆ(ಹಾರ್ಟ್‌ ಅಟ್ಯಾಕ್‌) ಲೆಗ್‌ ಅಟ್ಯಾಕ್‌ ಕೂಡ ಮನುಷ್ಯನಿಗೆ ಪ್ರಾಣಾಂತಿಕವಾಗಿದ್ದು, ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದಿದ್ದರೆ ಕಾಲು ಕತ್ತರಿಸುವ ಸಂದರ್ಭ ಉಂಟಾಗಿ ಜೀವಕ್ಕೆ ಹಾನಿಯಾಗಲಿದೆ. ಧೂಮಪಾನ, ಮಧುಮೇಹ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಉತ್ತಮ. ನಡೆಯುವಾಗ ಕಾಲಿನಲ್ಲಿ ನೋವು ಕಂಡು ಬಂದರೆ, ಕಾಲಿನಲ್ಲಿ ಜೋಮು ಹಾಗೂ ತಂಪಿನಂತಹ ಲಕ್ಷಣಗಳು ಕಂಡು ಬಂದಾಗ ಹತ್ತಿರದ ವ್ಯಾಸ್ಕ್ಯುಲಾರ್‌ ಸರ್ಜನ್‌ ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ: Spandana Vijay Raghavendra: ಸ್ಪಂದನ ಅಗಲಿ ಒಂದು ವರ್ಷ, ಭಾವುಕ ಪೋಸ್ಟ್‌ ಮಾಡಿದ ವಿಜಯ್‌ ರಾಘವೇಂದ್ರ

ವ್ಯಾಸ್ಕಾರ್ ಅಧ್ಯಕ್ಷರಾದ ಡಾ.ವೆಂಕಟೇಶ್‌ ರೆಡ್ಡಿ ಮಾತನಾಡಿ ಕಳೆದ ಮೂರು ದಶಕಗಳಿಂದ ವ್ಯಾಸ್ಕ್ಯುಲರ್‌ ಸರ್ಜನ್ ಅಸೋಸಿಯೇಷನ್‌ ನಿರಂತರ ಸೇವೆ ಸಲ್ಲಿಸುತ್ತಾ ಬಂದಿದ್ದು, ದಿವಂಗತ ಡಾ.ಎನ್.ಕೆ ಭಗವಾನ್‌ ದೂರದೃಷ್ಠಿ ಹಾಗೂ ಪ್ರಸ್ತುತ ಡಾ.ಕೆ.ಆರ್.ಸುರೇಶ್‌ರವರ ಮಾರ್ಗದರ್ಶನದಲ್ಲಿ ಸಹಸ್ತ್ರಾರು ಶಸ್ತ್ರಚಿಕಿತ್ಸೆಗಳ ಮೂಲಕ ಸಾವಿರಾರು ರೋಗಿಗಳು ಶ್ವಾಶ್ವತ ಅಂಗವಿಕಲರಾಗುವುದನ್ನು ತಪ್ಪಿಸಿರುವುದು ಹೆಮ್ಮೆಯ ಸಂಗತಿಯಾಗಿದ್ದು ವ್ಯಾಸ್ಕಾರ್‌ ಅರಿವು ಕಾರ್ಯಕ್ರಮ ನಿರಂತರವಾಗಿರಲಿದೆ ಎಂದು ಎಂದರು.

ಕಂಠೀರವ ಸ್ಟೇಡಿಯಂನಿಂದ ಆರಂಭವಾದ ವಾಕಥಾನ್‌ ಕಸ್ತೂರ್ಬಾ ರಸ್ತೆ, ವಿಧಾನಸೌಧ, ನೃಪತುಂಗ ರಸ್ತೆ ಮುಖಾಂತರ ಕಂಠೀರವ ಸ್ಟೇಡಿಯಂನಲ್ಲಿ ಅಂತ್ಯಗೊಂಡಿತು. ರಾಜ್ಯದ ಸಾವಿರಕ್ಕೂ ಹೆಚ್ಚು ವೈದ್ಯರು, ವೈದ್ಯಕೀಯ ವಿದ್ಯಾರ್ಥಿ, ಶೂಶ್ರೂಷಕ ಸಿಬ್ಬಂಧಿ ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು.

ರಾಜೀವ್‌ ಗಾಂಧೀ ಆರೋಗ್ಯ ವಿಶ್ವವಿದ್ಯಾಲಯ ಕುಲಪತಿ ರಮೇಶ್‌ ಎಂ.ಕೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ,ಜಯದೇವ ಕಾರ್ಡಿಯಾಕ್‌ ಆಸ್ಪತ್ರೆಯ ವ್ಯಾಸ್ಕ್ಯುಲಾರ್‌ ಸರ್ಜನ್‌ ಡಾ.ಮುರುಳಿ ಕೃಷ್ಣ,ರಾಷ್ಟ್ರೀಯ ಭದ್ರತೆ ಮಾಜಿ ಸಲಹೆಗಾರರಾದ ಪದ್ಮವಿಭೂಷಣ ವಿ.ಕೆ.ಆತ್ರೆ, ವಿಎಸ್‌ಐನ ಅಧ್ಯಕ್ಷರಾದ ಡಾ.ವಿವೇಕಾನಂದ್‌, ರಾಜ್ಯ ವ್ಯಾಸ್ಕರ್‌ ಸೊಸೈಟಿ ಕಾರ್ಯದರ್ಶಿ ಡಾ.ವಿಷ್ಣು, ಚಿತ್ರನಟಿ ಸಂಜನಾ ಗಲ್ರಾನಿ ಮುಂತಾದವರಿದ್ದರು

Continue Reading
Advertisement
Paris Olympics
ಕ್ರೀಡೆ7 mins ago

Paris Olympics: ಫೈನಲ್​ ಪ್ರವೇಶಿಸಿ ಐತಿಹಾಸಿಕ ಪದಕ ಖಾತ್ರಿಪಡಿಸಿದ ಕುಸ್ತಿಪಟು ವಿನೇಶ್ ಫೋಗಟ್

Bangladesh unrest
ದೇಶ33 mins ago

Bangladesh Unrest: ಶೇಖ್‌ ಹಸೀನಾಗೆ 8 ತಿಂಗಳ ಹಿಂದೆಯೇ ಎಚ್ಚರಿಕೆ ನೀಡಿದ್ದ ಭಾರತದ ಜ್ಯೋತಿಷಿ; ಆತನ ಭವಿಷ್ಯವಾಣಿ ಏನು?

Pralhad Joshi
ದೇಶ34 mins ago

Pralhad Joshi: 2030ರಲ್ಲೂ ನಾವಿಲ್ಲೇ ಇರುತ್ತೇವೆ, ನೀವಲ್ಲೇ ಇರುತ್ತೀರಿ; ಸಂಸತ್‌ನಲ್ಲಿ ಪ್ರತಿಪಕ್ಷಗಳಿಗೆ ಜೋಶಿ ಟಾಂಗ್

Bangladesh Protest
ವಿದೇಶ36 mins ago

Bangladesh Chronology: 1971ರ ದೇಶ ಉದಯದಿಂದ ಹಿಡಿದು 2024ರ ದಂಗೆಯವರೆಗೆ; ಇಲ್ಲಿದೆ ಬಾಂಗ್ಲಾದೇಶದ ಸಂಪೂರ್ಣ ರಕ್ತ ಚರಿತ್ರೆ!

Reliance Foundation
ಕರ್ನಾಟಕ36 mins ago

Reliance Foundation: ವಯನಾಡಿನ ಭೂಕುಸಿತ ಸಂತ್ರಸ್ತರಿಗೆ ರಿಲಯನ್ಸ್ ಫೌಂಡೇಷನ್ ನೆರವು

B.Ed Exam Scam
ಕರ್ನಾಟಕ51 mins ago

B.Ed Exam Scam: ಬಿ.ಇಡಿ ಪರೀಕ್ಷೆ ಅಕ್ರಮ; ಗುಲ್ಬರ್ಗಾ ವಿವಿ ಕುಲಸಚಿವೆ ಸೇರಿ ಐವರ ವಿರುದ್ಧ ಎಫ್‌ಐಆರ್‌

Bajrang Punia
ಕ್ರೀಡೆ1 hour ago

Bajrang Punia: ‘ದೇಶದಲ್ಲಿ’ ಸೋತು ಒಲಿಂಪಿಕ್ಸ್​ನಲ್ಲಿ ಗೆಲುವಿನ ಹೆಜ್ಜೆಯಿಟ್ಟ​ ವಿನೇಶ್​​; ಬಜರಂಗ್‌ ಪೂನಿಯ ಟಾಂಗ್​

Viral News
ವೈರಲ್ ನ್ಯೂಸ್2 hours ago

Viral News: ಗುಪ್ತಾಂಗ ಭಾಗದಲ್ಲಿ ಪತ್ತೆಯಾಯ್ತು ಮೊಬೈಲ್‌; ಪರೀಕ್ಷೆಯಲ್ಲಿ ಕಾಪಿ ಹೊಡಿಯೋಕೆ ಅಭ್ಯರ್ಥಿಗಳ ಹೊಸ ಟೆಕ್ನಿಕ್‌!

DK Shivakumar
ಕರ್ನಾಟಕ2 hours ago

DK Shivakumar: ಯೂಟರ್ನ್ ಕುಮಾರ, ಕ್ಷಣಕ್ಕೊಂದು ಮಾತು ಕ್ಷಣಕ್ಕೊಂದು ಬಣ್ಣ: ಎಚ್‌ಡಿಕೆ ವಿರುದ್ಧ ಡಿಕೆಶಿ ವಾಗ್ದಾಳಿ

Gruha Jyothi
ಕರ್ನಾಟಕ2 hours ago

Gruha Jyothi: ಗೃಹ ಜ್ಯೋತಿ ಫಲಾನುಭವಿಗಳಿಗೆ ಗುಡ್‌ ನ್ಯೂಸ್‌; ಮನೆ ಬದಲಿಸುವವರಿಗೆ ಡಿ-ಲಿಂಕ್ ಸೌಲಭ್ಯ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Wild Animals Attack
ಚಿಕ್ಕಮಗಳೂರು5 hours ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ6 hours ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ5 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ5 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ5 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ1 week ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 week ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

ಟ್ರೆಂಡಿಂಗ್‌