ಶೀಲಾ ಸಿ. ಶೆಟ್ಟಿ, ಬೆಂಗಳೂರು
ಗಣೇಶ ಹಬ್ಬದ ಸೀಸನ್‌ನಲ್ಲಿ ಟ್ರೆಡಿಷನಲ್‌ವೇರ್‌ಗಳ ನಡುವೆ ಕೆಲವು ಇಂಡೋ-ವೆಸ್ಟರ್ನ್ (Indo-western mens wear Fashion) ಲುಕ್ ನೀಡುವ ಮೆನ್ಸ್ ಡಿಸೈನರ್‌ವೇರ್‌ಗಳು ಎಂಟ್ರಿ ನೀಡಿವೆ. ಈ ಜನರೇಷನ್‌ನ ಹಾಗೂ ಜೆನ್ ಜಿ ಹುಡುಗರಿಗೆ ಇಷ್ಟವಾಗುವಂತಹ ಕಾಂಬೀನೇಷನ್‌ನಲ್ಲಿ ಇವು ಬಿಡುಗಡೆಗೊಂಡಿವೆ.
ನ್ಯೂ ಇಂಡೋ-ವೆಸ್ಟರ್ನ್ ಡಿಸೈನರ್‌ವೇರ್ಸ್
ಪ್ರತಿ ಬಾರಿಯೂ ಹಬ್ಬದ ಸೀಸನ್‌ನಲ್ಲಿ ಅತಿ ಹೆಚ್ಚು ಟ್ರೆಡಿಷನಲ್‌ವೇರ್‌ಗಳು ಹೆಚ್ಚು ಹಿಟ್ ಆಗುತ್ತವೆ. ಇತ್ತೀಚೆಗೆ ಇವುಗಳ ಮಧ್ಯೆ ಇಂಡೋ-ವೆಸ್ಟರ್ನ್ ಲುಕ್ ನೀಡುವ ಮೆನ್ಸ್‌ವೇರ್‌ಗಳು ಕೂಡ ನುಸುಳಿವೆ. ನೋಡಲು ಕಲರ್ ಕಾಂಬೀನೇಷನ್ ಕೂಡ ಇಷ್ಟವಾಗುವಂತಿರುತ್ತವೆ ಎನ್ನುತ್ತಾರೆ ಮಾಡೆಲ್ ಹಾಗೂ ನಟ ಧೀಮಂತ್. ಅವರ ಪ್ರಕಾರ, ಈ ಶೈಲಿಯ ಉಡುಪುಗಳನ್ನು ಹಬ್ಬದಲ್ಲಿ ಮಾತ್ರವಲ್ಲ ಇತರೇ ಸಮಾರಂಭಗಳಲ್ಲೂ ಧರಿಸಬಹುದು. ಹಾಗಾಗಿ ಹೆಚ್ಚು ಮಂದಿ ಪ್ರಿಫರ್ ಮಾಡುತ್ತಾರೆ ಎನ್ನುತ್ತಾರೆ.
ಶಾರ್ಟ್ ಬಂದ್ಗಾಲ –ಶೆರ್ವಾನಿ ಜೊತೆ ಪ್ಯಾಂಟ್
ಶಾರ್ಟ್ ಶೆರ್ವಾನಿ ಹಾಗೂ ಶಾರ್ಟ್ ಬಂದ್ಗಾಲ ಡಿಸೈನರ್‌ವೇರ್‌ಗಳು ಇದೀಗ ಟ್ರೆಂಡಿಯಾಗಿವೆ. ಯುವಕರ ಫ್ಯಾಷನ್‌ನಲ್ಲಿ ಇದೀಗ ಸದ್ಯಕ್ಕೆ ಉದ್ದನೆಯ ಡಿಸೈನರ್‌ವೇರ್‌ಗಳಿಗೆ ಕತ್ತರಿ ಬಿದ್ದಿದೆ. ಯಂಗ್ ಲುಕ್ ನೀಡುವ ಈ ಫಾರ್ಮಲ್‌ವೇರ್ ಜೊತೆಗೆ ಫಾರ್ಮಲ್ ಅಲ್ಲದ ರೆಗ್ಯುಲರ್ ಪ್ಯಾಂಟ್ ಧರಿಸುವುದು ಕಾಮನ್ ಆಗಿದೆ. ಇದು ನ್ಯೂ ಲುಕ್ ನೀಡುತ್ತದೆ ಎನ್ನುತ್ತಾರೆ ಡಿಸೈನರ್ಸ್. ನೋಡಲು ಬ್ಲೇಝರ್ ವಿತ್ ಬಟನ್ಸ್‌ನ ರಿಪ್ಲೀಕಾದಂತೆ ಕಾಣುವ ಈ ಡಿಸೈನರ್‌ವೇರ್‌ಗಳು ಅಸ್ಸೆಮ್ಮಿಟ್ರಿಕಲ್ ಡಿಸೈನ್‌ನಲ್ಲೂ ದೊರೆಯುತ್ತಿವೆ. ಇನ್ನು ಸಿಲ್ಕ್, ಲೆನಿನ್ ಅಥವಾ ಇನ್ನಿತರೇ ಫ್ಯಾಬ್ರಿಕ್‌ನಲ್ಲಿ ದೊರೆಯುತ್ತಿರುವ ಈ ಬಂದ್‌ಗಾಲ ಜಾಕೆಟ್ ಫ್ಯೂಶನ್‌ವೇರ್ ಎಂದರೂ ಅತಿಶಯೋಕ್ತಿಯಾಗದು ಎನ್ನುತ್ತಾರೆ ಮಾಡೆಲ್ ಧೀಮಂತ್. ರಜಪೂತಿ ಸೂಟ್ ಕೂಡ ಈ ಲಿಸ್ಟ್‌ನಲ್ಲಿದೆ. ಕಾಲರ್ ಹಾಗೂ ಬಗೆಬಗೆಯ ಸ್ಲೀವ್‌ಗಳು ಇಡೀ ಇಂಡೋ-ವೆಸ್ಟರ್ನ್ ಥೀಮ್ ಡಿಸೈನರ್‌ವೇರ್‌ನ ಹೈಲೈಟ್ಸ್ ಎನ್ನುತ್ತಾರೆ
ಈ ಶೈಲಿಯ ಇಂಡೋ-ವೆಸ್ಟರ್ನ್ ಸ್ಟೈಲಿಂಗ್‌ಗೆ 5 ಟಿಪ್ಸ್
- ನಿಮ್ಮ ಪರ್ಸನಾಲಿಟಿಗೆ ಮ್ಯಾಚ್ ಆಗುವುದನ್ನು ಖಚಿತಪಡಿಸಿಕೊಳ್ಳಿ.
- ಮೇಕೋವರ್ ಇದಕ್ಕೆ ಹೊಂದುವಂತಿರಬೇಕು.
- ಕಲರ್ ಕಾಂಬೀನೇಷನ್ ನಿಮ್ಮ ಸ್ಕಿನ್ ಟೋನ್ಗೆ ಹೊಂದಬೇಕು.
- ಹೇರ್ಸ್ಟೈಲ್ ಡಿಸೆಂಟಾಗಿರಲಿ.
- ಫುಟ್ವೇರ್ ಎಥ್ನಿಕ್ ಲುಕ್ ನೀಡುವ ಸ್ನೀಕರ್ಸ್ ಹಾಗೂ ಪಾದರಕ್ಷೆಗಳನ್ನು ಧರಿಸಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Celebrity Travel Fashion: ಬಿಂದಾಸ್ ಹಾಲಿಡೇ ಫ್ಯಾಷನ್‌ಗೆ ಸೈ ಎಂದ ನಟ ಆರ್ ಜೆ ರಾಜೇಶ್