ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇದೀಗ ಮೆನ್ಸ್ ಫ್ಯಾಷನ್‌ನಲ್ಲಿರುವ (Mens Fashion) ಸ್ಪ್ರೈಪ್ಡ್ ಕ್ಯಾಶುವಲ್ ಶರ್ಟ್‌ಗಳು ಟ್ರೆಂಡಿಯಾಗಿವೆ. ನೋಡಲು ಡಿಫರೆಂಟ್ ಲುಕ್ ನೀಡುವ ಇವು ಜೀನ್ಸ್ ಹಾಗೂ ಇತರೇ ಫಾರ್ಮಲ್ ಶರ್ಟ್‌ನೊಂದಿಗೆ ಧರಿಸುವಂತಹ ವಿನ್ಯಾಸದಲ್ಲಿ ಆಗಮಿಸಿವೆ. ಬ್ಲ್ಯೂ, ಬ್ಲಾಕ್, ಪರ್ಪಲ್, ರೆಡ್ ಹಾಗೂ ಡಾರ್ಕ್ ಮರೂನ್ ಸ್ಟ್ರೈಪ್ಸ್‌ನಲ್ಲಿ ವೈಟ್ ಬ್ಯಾಕ್‌ಗ್ರೌಂಡ್ ಶೇಡ್‌ನಲ್ಲಿ ಎಂಟ್ರಿ ನೀಡಿರುವ ಇವು ಸದ್ಯಕ್ಕೆ ಬ್ಲ್ಯಾಕ್ ಹಾಗೂ ವೈಟ್ ಕಾಂಬಿನೇಷನ್‌ನಲ್ಲಿ ಹೆಚ್ಚು ಚಾಲ್ತಿಯಲ್ಲಿವೆ.
ಆದರೆ, ಯುವಕರು ಈ ಸ್ಟ್ರೈಪ್ಡ್ ಶರ್ಟ್ ಧರಿಸುವಾಗ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆಗಷ್ಟೇ ಫ್ಯಾಷೆನಬಲ್ ಆಗಿ ಕಾಣಿಸುವುದರೊಂದಿಗೆ ಟ್ರೆಂಡಿ ಸ್ಟೈಲ್ ಸ್ಟೇಟ್‌ಮೆಂಟ್ ತಮ್ಮದಾಗಿಸಿಕೊಳ್ಳಬಹುದು ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.
ಇಲ್ಯೂಷನ್ ಸೃಷ್ಠಿಸುವ ಸ್ಟ್ರೈಪ್ಸ್
ಮತ್ತಷ್ಟು ಉದ್ದನಾಗಿ ಕಾಣಿಸಿಕೊಳ್ಳಬೇಕು ಎಂದುಕೊಂಡವರು ವರ್ಟಿಕಲ್ ಸ್ಟ್ರೈಪ್ಸ್‌ಗೆ ಮೊರೆ ಹೋಗಬಹುದು. ಯಾಕೆಂದರೇ, ವರ್ಟಿಕಲ್ ಸ್ಟ್ರೈಪ್ಸ್ ನಾವು ಇರುವುದಕ್ಕಿಂತ ಮತ್ತಷ್ಟು ಟಾಲ್ ಆಗಿ ಕಾಣಿಸುವಂತೆ ಬಿಂಬಿಸುತ್ತದೆ. ಹಾಗಾಗಿ ಎತ್ತರ ಕಡಿಮೆ ಇರುವವರು ಈ ಸ್ಟ್ರೈಪ್ಸ್ ಶರ್ಟ್ ಧರಿಸಬಹುದು.
ಜೀನ್ಸ್ ಪ್ಯಾಂಟ್‌ಗೆ ಸ್ಟ್ರೈಪ್ಸ್
ಬ್ಲ್ಯೂ ಜೀನ್ಸ್‌ಪ್ಯಾಂಟ್‌ಗೆ ಬಹುತೇಕ ಎಲ್ಲಾ ಬಗೆಯ ಸ್ಟ್ರೈಪ್ಸ್ ಕ್ಯಾಶುವಲ್ ಶರ್ಟ್‌ಗಳು ಮ್ಯಾಚ್ ಆಗುತ್ತವೆ. ಹಾಗಾಗಿ ಹಿಂದೆ ಮುಂದೆ ಯೋಚಿಸದೇ ಮ್ಯಾಚ್ ಮಾಡಬಹುದು.
ಫಾರ್ಮಲ್ ಪ್ಯಾಂಟ್‌ಗೆ ಮ್ಯಾಚಿಂಗ್
ಫಾರ್ಮಲ್ ಪ್ಯಾಂಟ್‌ಗೆ ಮ್ಯಾಚ್ ಮಾಡುವಾಗ ಮಾತ್ರ ಕಲರ್ ಕಾಂಬಿನೇಷನ್ ನೋಡಿ ಮ್ಯಾಚ್ ಮಾಡಿ. ಕಾಂಟ್ರಾಸ್ಟ್ ಕಲರ್‌ನ ಶರ್ಟ್‌ಗೆ ಮ್ಯಾಚ್ ಆಗುವಂತಹ ಪ್ಯಾಂಟ್ ಧರಿಸಿ. ಉದಾಹರಣೆಗೆ., ಬ್ಲ್ಯಾಕ್ ಹಾಗೂ ವೈಟ್ ಸ್ಟ್ರೈಪ್ಸ್ ಶರ್ಟ್‌ಗೆ ಬ್ಲಾಕ್ ಫಾರ್ಮಲ್ ಪ್ಯಾಂಟ್ ಧರಿಸಿ.
ಸೇಮ್ ಟು ಸೇಮ್ ಕಾಂಬಿನೇಷನ್ ಬೇಡ
ಫ್ಯಾಷನೆಬಲ್ ಎನ್ನುವ ಹೆಸರಲ್ಲಿ ಸ್ಟ್ರೈಪ್ಸ್ ಶರ್ಟ್ ಹಾಗೂ ಸ್ಟ್ರೈಪ್ಸ್ ಪ್ಯಾಂಟ್ ಒಂದಕ್ಕೊಂದು ಮ್ಯಾಚ್ ಮಾಡಬೇಡಿ. ಒಟ್ಟಿಗೆ ಧರಿಸಬೇಡಿ. ಇದು ಹೊಂದುವುದಿಲ್ಲ. ಈ ಶರ್ಟ್‌ಗೆ ಸಾದಾ ಪ್ಯಾಂಟ್ ಮಾತ್ರ ಬೆಸ್ಟ್.
ಮಿನಿಮಲ್ ಲುಕ್ ಇರಲಿ
ಕತ್ತಿಗೊಂದು ಚೈನ್ ಇದ್ದರೇ ಸಾಕು. ಹೌದು, ಮಿನಿಮಲ್ ಆಕ್ಸೆಸರೀಸ್ ಮೆಂಟೇನ್ ಮಾಡಿ. ಸ್ನೀಕರ್ ಧರಿಸಿ. ಶೂ ಕೂಡ ಮ್ಯಾಚ್ ಆಗುವಂತಿರಲಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Saree Fashion : ಸಮ್ಮರ್ ಸೀಸನ್ ಶೀರ್ ಬ್ಲ್ಯೂ ಸೀರೆಯಲ್ಲಿ ನಟಿ ಡೈಸಿ ಬೋಪಣ್ಣ