Mens Fashion: ಸ್ಟ್ರೈಪ್ಡ್‌ ಶರ್ಟ್ ಧರಿಸುವ ಯುವಕರು ಪಾಲಿಸಬೇಕಾದ 5 ಫ್ಯಾಷನ್‌ ರೂಲ್ಸ್ - Vistara News

ಫ್ಯಾಷನ್

Mens Fashion: ಸ್ಟ್ರೈಪ್ಡ್‌ ಶರ್ಟ್ ಧರಿಸುವ ಯುವಕರು ಪಾಲಿಸಬೇಕಾದ 5 ಫ್ಯಾಷನ್‌ ರೂಲ್ಸ್

ಸೀಸನ್‌ ಯಾವುದಾದರೂ ಇರಲಿ, ಮೆನ್ಸ್‌ ಸ್ಟ್ರೈಪ್ಡ್‌ ಶರ್ಟ್ ಫ್ಯಾಷನ್‌ (Mens Fashion) ಮಾತ್ರ ಎಂದಿಗೂ ತೆರೆಮರೆ ಸೇರುವುದಿಲ್ಲ! ಆದರೆ, ಇದನ್ನು ಧರಿಸುವಾಗ 5 ಫ್ಯಾಷನ್‌ ರೂಲ್ಸ್‌ ಗಮನದಲ್ಲಿಟ್ಟುಕೊಂಡಲ್ಲಿ ಮತ್ತಷ್ಟು ಆಕರ್ಷಕವಾಗಿ ಕಾಣಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

VISTARANEWS.COM


on

Mens Fashion
ಚಿತ್ರಗಳು: ಅಭಿಮನ್ಯು ದಸಾನಿ, ನಟ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಇದೀಗ ಮೆನ್ಸ್‌ ಫ್ಯಾಷನ್‌ನಲ್ಲಿರುವ (Mens Fashion) ಸ್ಪ್ರೈಪ್ಡ್ ಕ್ಯಾಶುವಲ್‌ ಶರ್ಟ್‌ಗಳು ಟ್ರೆಂಡಿಯಾಗಿವೆ. ನೋಡಲು ಡಿಫರೆಂಟ್‌ ಲುಕ್‌ ನೀಡುವ ಇವು ಜೀನ್ಸ್‌ ಹಾಗೂ ಇತರೇ ಫಾರ್ಮಲ್‌ ಶರ್ಟ್‌ನೊಂದಿಗೆ ಧರಿಸುವಂತಹ ವಿನ್ಯಾಸದಲ್ಲಿ ಆಗಮಿಸಿವೆ. ಬ್ಲ್ಯೂ, ಬ್ಲಾಕ್‌, ಪರ್ಪಲ್‌, ರೆಡ್‌ ಹಾಗೂ ಡಾರ್ಕ್ ಮರೂನ್‌ ಸ್ಟ್ರೈಪ್ಸ್‌ನಲ್ಲಿ ವೈಟ್‌ ಬ್ಯಾಕ್‌ಗ್ರೌಂಡ್‌ ಶೇಡ್‌ನಲ್ಲಿ ಎಂಟ್ರಿ ನೀಡಿರುವ ಇವು ಸದ್ಯಕ್ಕೆ ಬ್ಲ್ಯಾಕ್‌ ಹಾಗೂ ವೈಟ್‌ ಕಾಂಬಿನೇಷನ್‌ನಲ್ಲಿ ಹೆಚ್ಚು ಚಾಲ್ತಿಯಲ್ಲಿವೆ.

ಆದರೆ, ಯುವಕರು ಈ ಸ್ಟ್ರೈಪ್ಡ್ ಶರ್ಟ್ ಧರಿಸುವಾಗ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆಗಷ್ಟೇ ಫ್ಯಾಷೆನಬಲ್‌ ಆಗಿ ಕಾಣಿಸುವುದರೊಂದಿಗೆ ಟ್ರೆಂಡಿ ಸ್ಟೈಲ್‌ ಸ್ಟೇಟ್‌ಮೆಂಟ್‌ ತಮ್ಮದಾಗಿಸಿಕೊಳ್ಳಬಹುದು ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

Mens Fashion

ಇಲ್ಯೂಷನ್‌ ಸೃಷ್ಠಿಸುವ ಸ್ಟ್ರೈಪ್ಸ್

ಮತ್ತಷ್ಟು ಉದ್ದನಾಗಿ ಕಾಣಿಸಿಕೊಳ್ಳಬೇಕು ಎಂದುಕೊಂಡವರು ವರ್ಟಿಕಲ್‌ ಸ್ಟ್ರೈಪ್ಸ್‌ಗೆ ಮೊರೆ ಹೋಗಬಹುದು. ಯಾಕೆಂದರೇ, ವರ್ಟಿಕಲ್‌ ಸ್ಟ್ರೈಪ್ಸ್‌ ನಾವು ಇರುವುದಕ್ಕಿಂತ ಮತ್ತಷ್ಟು ಟಾಲ್‌ ಆಗಿ ಕಾಣಿಸುವಂತೆ ಬಿಂಬಿಸುತ್ತದೆ. ಹಾಗಾಗಿ ಎತ್ತರ ಕಡಿಮೆ ಇರುವವರು ಈ ಸ್ಟ್ರೈಪ್ಸ್‌ ಶರ್ಟ್ ಧರಿಸಬಹುದು.

Mens Fashion

ಜೀನ್ಸ್‌ ಪ್ಯಾಂಟ್‌ಗೆ ಸ್ಟ್ರೈಪ್ಸ್‌

ಬ್ಲ್ಯೂ ಜೀನ್ಸ್‌ಪ್ಯಾಂಟ್‌ಗೆ ಬಹುತೇಕ ಎಲ್ಲಾ ಬಗೆಯ ಸ್ಟ್ರೈಪ್ಸ್‌ ಕ್ಯಾಶುವಲ್‌ ಶರ್ಟ್‌ಗಳು ಮ್ಯಾಚ್‌ ಆಗುತ್ತವೆ. ಹಾಗಾಗಿ ಹಿಂದೆ ಮುಂದೆ ಯೋಚಿಸದೇ ಮ್ಯಾಚ್‌ ಮಾಡಬಹುದು.

ಫಾರ್ಮಲ್‌ ಪ್ಯಾಂಟ್‌ಗೆ ಮ್ಯಾಚಿಂಗ್‌

ಫಾರ್ಮಲ್‌ ಪ್ಯಾಂಟ್‌ಗೆ ಮ್ಯಾಚ್ ಮಾಡುವಾಗ ಮಾತ್ರ ಕಲರ್‌ ಕಾಂಬಿನೇಷನ್‌ ನೋಡಿ ಮ್ಯಾಚ್‌ ಮಾಡಿ. ಕಾಂಟ್ರಾಸ್ಟ್ ಕಲರ್‌ನ ಶರ್ಟ್‌ಗೆ ಮ್ಯಾಚ್‌ ಆಗುವಂತಹ ಪ್ಯಾಂಟ್‌ ಧರಿಸಿ. ಉದಾಹರಣೆಗೆ., ಬ್ಲ್ಯಾಕ್‌ ಹಾಗೂ ವೈಟ್‌ ಸ್ಟ್ರೈಪ್ಸ್‌ ಶರ್ಟ್‌ಗೆ ಬ್ಲಾಕ್‌ ಫಾರ್ಮಲ್‌ ಪ್ಯಾಂಟ್‌ ಧರಿಸಿ.

Mens Fashion

ಸೇಮ್‌ ಟು ಸೇಮ್‌ ಕಾಂಬಿನೇಷನ್‌ ಬೇಡ

ಫ್ಯಾಷನೆಬಲ್‌ ಎನ್ನುವ ಹೆಸರಲ್ಲಿ ಸ್ಟ್ರೈಪ್ಸ್‌ ಶರ್ಟ್ ಹಾಗೂ ಸ್ಟ್ರೈಪ್ಸ್‌ ಪ್ಯಾಂಟ್‌ ಒಂದಕ್ಕೊಂದು ಮ್ಯಾಚ್‌ ಮಾಡಬೇಡಿ. ಒಟ್ಟಿಗೆ ಧರಿಸಬೇಡಿ. ಇದು ಹೊಂದುವುದಿಲ್ಲ. ಈ ಶರ್ಟ್‌ಗೆ ಸಾದಾ ಪ್ಯಾಂಟ್‌ ಮಾತ್ರ ಬೆಸ್ಟ್.

Mens Fashion

ಮಿನಿಮಲ್‌ ಲುಕ್‌ ಇರಲಿ

ಕತ್ತಿಗೊಂದು ಚೈನ್‌ ಇದ್ದರೇ ಸಾಕು. ಹೌದು, ಮಿನಿಮಲ್‌ ಆಕ್ಸೆಸರೀಸ್‌ ಮೆಂಟೇನ್ ಮಾಡಿ. ಸ್ನೀಕರ್‌ ಧರಿಸಿ. ಶೂ ಕೂಡ ಮ್ಯಾಚ್‌ ಆಗುವಂತಿರಲಿ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Star Saree Fashion : ಸಮ್ಮರ್‌ ಸೀಸನ್‌ ಶೀರ್‌ ಬ್ಲ್ಯೂ ಸೀರೆಯಲ್ಲಿ ನಟಿ ಡೈಸಿ ಬೋಪಣ್ಣ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Celebrities Ramanavami: ಎಥ್ನಿಕ್‌ವೇರ್ಸ್‌ನಲ್ಲಿ ರಾಮನನ್ನು ಜಪಿಸಿದ ಸೆಲೆಬ್ರೆಟಿಗಳಿವರು

ರಾಮನವಮಿಯಂದು (Celebrities Ramanavami) ಸಿಂಪಲ್‌ ಎಥ್ನಿಕ್‌ವೇರ್‌ಗಳನ್ನು ಧರಿಸಿದ ನಾನಾ ಸೆಲೆಬ್ರೆಟಿಗಳು ರಾಮನಾಮ ಜಪ ಮಾಡಿದ್ದಾರೆ. ಯಾರ್ಯಾರು ಹೇಗೆಲ್ಲಾ ಈ ವಿಶೇಷ ದಿನದಂದು ಕಾಣಿಸಿಕೊಂಡರು ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.‌

VISTARANEWS.COM


on

Celebrities Ramanavami
ಚಿತ್ರಗಳು: ಸಿಂಪಲ್‌ ಎಥ್ನಿಕ್‌ವೇರ್ಸ್‌ನಲ್ಲಿ ರಾಮನವಮಿ ಆಚರಿಸಿದ ಸೆಲೆಬ್ರೆಟಿಗಳು
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ರಾಮನವಮಿಯಂದು (Celebrities Ramanavami) ಸಿಂಪಲ್‌ ಎಥ್ನಿಕ್‌ವೇರ್‌ಗಳನ್ನು ಧರಿಸಿದ ನಾನಾ ಸೆಲೆಬ್ರೆಟಿಗಳು ರಾಮನಾಮ ಜಪ ಮಾಡಿ, ಹಬ್ಬ ಆಚರಿಸಿದ್ದಾರೆ. ಹಬ್ಬ ಎಂದಾಕ್ಷಣ ಎಂತಹ ಸೆಲೆಬ್ರೆಟಿಗಳು ಕೂಡ ತಾತ್ಕಲಿಕವಾಗಿ, ವೆಸ್ಟರ್ನ್‌ ವೇರ್‌ಗಳಿಂದ ದೂರ ಉಳಿದು ಎಥ್ನಿಕ್‌ವೇರ್‌ ಅಥವಾ ಟ್ರೆಡಿಷನಲ್‌ ವೇರ್‌ಗಳನ್ನು ಆಯ್ಕೆ ಮಾಡುತ್ತಾರೆ. ಅದು ದೊಡ್ಡ ಹಬ್ಬವಾಗಲಿ, ಬಿಡಲಿ, ದೇವರ ಪೂಜೆ ಎಂದಾಕ್ಷಣಾ ಸಿಂಪಲ್‌ವೇರ್‌ಗಳನ್ನು ಧರಿಸುತ್ತಾರೆ. ಅವು ಟ್ರೆಡಿಷನಲ್‌ ಪೂಜೆಗಳಿಗೆ ಪೂರಕವಾಗಿರುವಂತಿರುತ್ತವೆ. ಈ ನಿಟ್ಟಿನಲ್ಲಿ, ಹಬ್ಬಗಳು ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ಪ್ರಮೋಟ್‌ ಮಾಡುತ್ತಿವೆ ಎನ್ನಬಹುದು ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಅವರ ಪ್ರಕಾರ, ಫೆಸ್ಟೀವ್‌ ಸೀಸನ್‌ನ ಔಟ್‌ಫಿಟ್‌ಗಳು ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯಲು ಸಹಕರಿಸುತ್ತಿವೆಯಂತೆ.

Celebrities Ramanavami

ಸಂಸ್ಕೃತಿ ಬಿಂಬಿಸುವ ಉಡುಗೆಗಳು

ನಮ್ಮ ಸಂಸ್ಕೃತಿ ಬಿಂಬಿಸುವ ಉಡುಗೆ ತೊಡುಗೆಗಳನ್ನು ಪ್ರಮೋಟ್‌ ಮಾಡುವಲ್ಲಿ ಇತ್ತೀಚೆಗೆ ಸೆಲೆಬ್ರೆಟಿಗಳು ಕೂಡ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಇದಕ್ಕೆ ಸೋಷಿಯಲ್‌ ಮೀಡಿಯಾ ಕೂಡ ಸಹಕಾರಿಯಾಗಿದೆ. ಇದನ್ನು ನೋಡುವ ಅಭಿಮಾನಿಗಳು ಹಾಗೂ ಫ್ಯಾಷನ್‌ ಪ್ರಿಯರು ಕೂಡ ತಾವೇನೂ ಕಡಿಮೆ ಇಲ್ಲವೆಂಬಂತೆ ಹಬ್ಬಗಳಿಗೆ ಮ್ಯಾಚ್‌ ಆಗುವ ಉಡುಗೆ-ತೊಡುಗೆಗಳನ್ನು ಧರಿಸುತ್ತಿದ್ದಾರೆ. ಇದು ನಮ್ಮ ಸಂಸ್ಕೃತಿಗೆ ಪೂರಕವಾಗಿದೆ. ಇದು ಉತ್ತಮ ಬೆಳವಣಿಗೆ ಎನ್ನುತ್ತಾರೆ ಸ್ಟೈಲಿಸ್ಟ್‌ ದಾಮಿನಿ.

Karunya ram, actress

ಲಂಗ-ದಾವಣಿಯಲ್ಲಿ ಕಾರುಣ್ಯ

ರಾಮನವಮಿ ಹಬ್ಬವನ್ನು ವಿಶ್‌ ಮಾಡಿರುವ ನಟಿ ಕಾರುಣ್ಯ, ಹಸಿರು ಲಂಗ, ಮರೂನ್‌ ವರ್ಣದ ದಾವಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿ ಕೃಷ್ಣ ಅವರ ಈ ಟ್ರೆಡಿಷನಲ್‌ ಡಿಸೈನರ್‌ವೇರ್‌ನಲ್ಲಿ ಕಾರುಣ್ಯ, ಸ್ಟ್ರೀಟ್‌ ಫೋಟೋಗ್ರಾಫಿಯಲ್ಲಿ ಟ್ರೆಡಿಷನಲ್‌ ಲುಕ್‌ನಲ್ಲಿ ಕಾಣಿಸಿಕೊಂಡು ಎಲ್ಲರಿಗೂ ವಿಶ್‌ ಮಾಡಿದ್ದಾರೆ.

Ragini Dwivedi, actress

ಕಲರ್‌ಫುಲ್‌ ಸಲ್ವಾರ್‌ ಸೂಟ್‌ನಲ್ಲಿ ರಾಗಿಣಿ

ನಟಿ ರಾಗಿಣಿ ಮಲ್ಟಿ ಕಲರ್‌ನ ದುಪಟ್ಟಾದ ಸಲ್ವಾರ್‌ ಸೂಟ್‌ನಲ್ಲಿ ಹಬ್ಬದ ವಿಶ್‌ ಮಾಡಿದ್ದಾರೆ. ಪೂಜೆ ಮುಗಿಸಿದ ನಂತರ ಇರುವ ಲುಕ್‌ ಇವರದ್ದಾಗಿದ್ದು, ವರ್ಣಮಯ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.

Pranitha, actress

ಪ್ರಣೀತಾ ರಾಮನ ಪೂಜೆ

ಮಗಳೊಂದಿಗೆ ದೇವಸ್ಥಾನಕ್ಕೆ ತೆರಳಿ, ರಾಮ ಪೂಜೆ ಮಾಡಿರುವ ನಟಿ ಪ್ರಣೀತಾ, ಸಿಂಪಲ್‌ ಪಾಸ್ಟೆಲ್‌ ಶೇಡ್‌ ಉಡುಗೆಯಲ್ಲಿ ರಾಮನನ್ನು ಪೂಜಿಸಿದ್ದಾರೆ.

Priyanka chincholli, actress

ಪ್ರಿಯಾಂಕಾ ಚಿಂಚೊಳ್ಳಿಯ ರಾಮನ ಪೂಜೆ

ಮನೆಯಲ್ಲೆ ರಾಮನ ಜಪ, ಪೂಜೆ ಮಾಡಿರುವ ಪ್ರಿಯಾಂಕಾ ಚಿಂಚೊಳ್ಳಿ, ಎಂದಿನಂತೆ ಟ್ರೆಡಿಷನಲ್‌ ಲುಕ್‌ನಲ್ಲಿ ಪೂಜೆ ಕೈಗೊಂಡಿದ್ದಾರೆ.

Karunya ram, actress

ಅಂಕಿತಾ ಅಮರ್‌ ರಾಮ ನಾಮ

ನಟಿ ಅಂಕಿತಾ ಅಮರ್‌, ಕುಂಕುಮ ಬಳಿದುಕೊಂಡ ಸಾಮಾನ್ಯ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಇಷ್ಟ ದೇವರ ಹಬ್ಬವನ್ನು ಆಚರಿಸಿದ್ದಾರೆ. ಸಿಂಪಲ್‌ ಚೂಡಿದಾರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

Aanya Shetty, actress

ಬಾಲ ನಟಿ ಅನ್ಯಾ ಶೆಟ್ಟಿಯ ರಾಮನ ಜಪ

ಬಾಲನಟಿ ಅನ್ಯಾ ಶೆಟ್ಟಿ ಇದೀಗ ಟೀನೇಜ್‌ ಹುಡುಗಿಯಾಗಿದ್ದು, ಲಂಗ-ದಾವಣಿ ಧರಿಸಿ, ರಾಮನಾಮ ಜಪ ಮಾಡಿದ್ದಾರೆ. ಉದ್ದ ಕೂದಲಿನ ನಗುಮೊಗದ ಅನ್ಯಾ ಆಗಾಗ್ಗೆ ಟ್ರೆಡಿಷನಲ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಈ ಸೆಲೆಬ್ರೆಟಿಗಳು ಮಾತ್ರವಲ್ಲ, ಬಾಲಿವುಡ್‌, ಸ್ಯಾಂಡಲ್‌ವುಡ್‌ ಹಾಗೂ ಕಿರುತೆರೆ-ಹಿರಿತೆರೆಯ ನಾನಾ ತಾರೆಯರು ಕೂಡ ರಾಮನವಮಿಯಂದು ತಮ್ಮದೇ ಆದ ಸಿಂಪಲ್‌ ಎಥ್ನಿಕ್‌ವೇರ್‌ಗಳಲ್ಲಿ ರಾಮನನ್ನು ಪೂಜಿಸಿ ಸಂಭ್ರಮಿಸಿದ್ದಾರೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Model Fashion Life: ಕಲಾವಿದೆ ಸ್ಮಿತಾ ಪ್ರಕಾಶ್ ವಿಂಟರ್‌ ಫ್ಯಾಷನ್‌ ಝಲಕ್‌ ಹೀಗಿದೆ!

Continue Reading

ಫ್ಯಾಷನ್

Niveditha Gowda: ಗೋಲ್ಡನ್‌ ಲುಕ್‌ನಲ್ಲಿ ನಿವೇದಿತಾ ಗೌಡ ಕಮಾಲ್‌

ನಿವೇದಿತಾ ಗೌಡ (Niveditha Gowda) ಯಾರಿಗೆ ಗೊತ್ತಿಲ್ಲ! ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌, ಬಿಗ್‌ಬಾಸ್‌ ಕಂಟೆಸ್ಟಂಟ್‌ ಹಾಗೂ ನಟಿ ನಿವೇದಿತಾ ಗೌಡ (Niveditha Gowda) ಅವರ ಗೋಲ್ಡನ್‌ ಲುಕ್‌ ಇದೀಗ ಟ್ರೆಂಡಿಯಾಗಿದೆ. ಜೊತೆಗೆ ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ. ಏನಿದು ಗೋಲ್ಡನ್‌ ಲುಕ್‌? ಈ ಬಗ್ಗೆ ಸ್ಟೈಲಿಸ್ಟ್‌ಗಳು ತಿಳಿಸಿದ್ದಾರೆ.

VISTARANEWS.COM


on

Niveditha Gowda
ಚಿತ್ರಗಳು : ನಿವೇದಿತಾ ಗೌಡ, ನಟಿ ಫೋಟೋಗ್ರಾಫಿ : ಅರುಣ್‌ ಕುಮಾರ್‌ ಪೋಟ್ರೈಟ್ಸ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಿವೇದಿತಾ ಗೌಡ (Niveditha Gowda) ಗೋಲ್ಡನ್‌ ಲುಕ್‌ ಇದೀಗ ಟ್ರೆಂಡಿಯಾಗಿದೆ. ಅಂದಹಾಗೆ, ಸದಾ ಒಂದಲ್ಲ ಒಂದು ರೀಲ್ಸ್‌ನಲ್ಲಿ ವೆಸ್ಟರ್ನ್‌ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡು ಸದಾ ಸುದ್ದಿಯಲ್ಲಿರುವ ನಿವೇದಿತಾ ಗೌಡ ಯಾರಿಗೆ ಗೊತ್ತಿಲ್ಲ! ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌, ಬಿಗ್‌ಬಾಸ್‌ ಕಂಟೆಸ್ಟಂಟ್‌ ಹಾಗೂ ನಟಿ ಎಂದೆಲ್ಲಾ ಟ್ಯಾಗ್‌ಲೈನ್‌ ಹೊಂದಿರುವ ನಿವಿ ಅಲಿಯಾಸ್‌ ನಿವೇದಿತಾ ಗೌಡ (Niveditha Gowda) ಬೋಲ್ಡ್‌ ಮತ್ತು ಬ್ಯೂಟಿಫುಲ್‌ ಲೇಡಿ. ರ‍್ಯಾಪರ್‌ ಚಂದನ್‌ ಶೆಟ್ಟಿ ಮದುವೆಯಾದ ಮೇಲೂ ತಮ್ಮದೇ ಆದ ಛಾಪನ್ನು ಉಳಿಸಿಕೊಂಡಿರುವ ಇವರು ಆನ್‌ಸ್ಕ್ರಿನ್‌ಗಿಂತಲೂ ಸೋಷಿಯಲ್‌ ಮೀಡಿಯಾ ಮೂಲಕವೇ ಹೆಸರು ಮಾಡಿದವರು. ತಾವು ಅಪ್‌ಲೋಡ್‌ ಮಾಡುವ ಯಾವುದೇ ಫೋಟೋ ಆಗಲಿ ರೀಲ್ಸ್‌ ಆಗಲಿ ತಲೆಕೆಡಿಸಿಕೊಳ್ಳದವರು. ಇದೀಗ ತಾವು ಉಟ್ಟಿರುವ ಗೋಲ್ಡನ್‌ ವರ್ಣದ ಎಥ್ನಿಕ್‌ ಲುಕ್‌ನ ಸೀರೆಯ ಮೂಲಕ ಸೆಳೆದಿದ್ದಾರೆ. ಈಗಾಗಲೇ ಟ್ರೆಂಡ್‌ನಲ್ಲಿರುವ ಗೋಲ್ಡನ್‌ ಲುಕನ್ನು ಮತ್ತೊಮ್ಮೆ ಬಿಂಬಿಸಿದ್ದಾರೆ.

Niveditha Gowda

ಬಾಲಿವುಡ್‌ಗರ ಫೇವರೇಟ್‌ ಲುಕ್‌

“ಈ ಸೀಸನ್‌ನಲ್ಲಿ ಅದರಲ್ಲೂ ಫೆಸ್ಟೀವ್‌ ಹಾಗೂ ವೆಡ್ಡಿಂಗ್‌ ಸೀಸನ್‌ಗಳಲ್ಲಿ ಗೋಲ್ಡನ್‌ ಲುಕ್‌ ಟ್ರೆಂಡಿಯಾಗಿರುತ್ತದೆ. ಕಂಪ್ಲೀಟ್‌ ಬಂಗಾರದ ಲುಕ್‌ ನೀಡುವ ಈ ಔಟ್‌ಲುಕ್‌ ಸೆಲೆಬ್ರೆಟಿ ಲುಕ್‌ ನೀಡುತ್ತದೆ. ಬಾಲಿವುಡ್‌ನಲ್ಲಿ ಈ ಲುಕ್‌ಗೆ ಹೆಚ್ಚು ಆದ್ಯತೆ. ಅದರಲ್ಲೂ ವೆಡ್ಡಿಂಗ್‌ಗಳಲ್ಲಿ ಈ ಲುಕ್‌ ಇಲ್ಲದೇ ಸಮಾರಂಭಗಳೇ ನಡೆಯುವುದಿಲ್ಲ! ಆ ಮಟ್ಟಿಗೆ ಈ ಲುಕ್‌ ಟ್ರೆಂಡ್‌ನಲ್ಲಿದೆ. ಇನ್ನು ಸೆಲೆಬ್ರೆಟಿಗಳಿಂದಿಡಿದು ಸಾಮಾನ್ಯ ಯುವತಿಯರು ಕೂಡ ತಂತಮ್ಮ ಮದುವೆಗಳಲ್ಲಿ ಇದೇ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ, ಈ ಲುಕ್‌ ಸದ್ಯ ಚಾಲ್ತಿಯಲ್ಲಿದೆ” ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Niveditha Gowda

ಏನಿದು ಗೋಲ್ಡನ್‌ ಲುಕ್‌ ?

ಮುಡಿಯಿಂದ ಪಾದದವರೆಗೂ ಬಂಗಾರ ವರ್ಣದ ಔಟ್‌ಫಿಟ್‌, ಲೆಹೆಂಗಾ, ಲಂಗ-ದಾವಣಿ ಅಥವಾ ಸೀರೆಯಲ್ಲಿ ಕಾಣಿಸಿಕೊಳ್ಳುವುದು. ಇದರೊಂದಿಗೆ ಧರಿಸುವ ಜ್ಯುವೆಲರಿ ಕೂಡ ಸಂಪೂರ್ಣ ಬಂಗಾರದ ಶೇಡ್‌ನಲ್ಲಿರುವುದು. ಯಾವುದೇ ಜಂಕ್ ಹಾಗೂ ಫಂಕಿ ಜ್ಯುವೆಲರಿರಹಿತವಾದ ಸ್ಟೈಲಿಂಗ್‌ ಇದು. ಇನ್ನು ಮೇಕಪ್‌ ಕೂಡ ಈ ಲುಕ್‌ಗೆ ಸಾಥ್‌ ನೀಡುತ್ತದೆ. ಹೇರ್‌ಸ್ಟೈಲ್‌ ಕೂಡ ಈ ಗೋಲ್ಡನ್‌ ಎಥ್ನಿಕ್‌ ಲುಕ್‌ಗೆ ಜೊತೆಯಾಗುತ್ತದೆ.

Niveditha Gowda

ಆಕರ್ಷಕವಾದ ನಿವೇದಿತಾ ಗೋಲ್ಡನ್‌ ಲುಕ್‌

ಇನ್ನು, ನಿವೇದಿತಾ ಧರಿಸಿರುವ ಗೋಲ್ಡನ್‌ ಲಂಗ-ದಾವಣಿ, ಸೆಲೆಬ್ರೆಟಿ ಡಿಸೈನರ್‌ ಚಂದನ್‌ ಗೌಡ ಅವರ ಡಿಸೈನರ್‌ವೇರ್‌ ಆಗಿದೆ. ಮೇಕಪ್‌ ಯಶ್‌ಜೈನ್‌ ಮಾಡಿದ್ದಾರೆ. ಧರಿಸಿರುವ ಫ್ರಿಂಝ್‌ ಬೀಡ್ಸ್‌ನ ಡಿಸೈನರ್‌ ಬ್ಲೌಸ್‌ ಕಂಪ್ಲೀಟ್‌ ಗೋಲ್ಡನ್‌ ವರ್ಕ್‌ನದ್ದಾಗಿದ್ದು, ಇದಕ್ಕೆ ಸ್ಮಾಲ್‌ ಪ್ಲೀಟ್ಸ್‌ ಇರುವ ಲಂಗ ಹಾಗೂ ಸಾದಾ ಡಿಸೈನರ್‌ ಚಿಕ್ಕ ಬಾರ್ಡರ್‌ ಇರುವ ಬಂಗಾರ ವರ್ಣದ ದಾವಣಿ, ನಿವೇದಿತಾ ಅವರನ್ನು ಮನಮೋಹಕವಾಗಿಸಿದೆ. ಇದರೊಂದಿಗೆ ಧರಿಸಿರುವ ಆಂಟಿಕ್‌ ಕಡ, ಬಿಗ್‌ ನೆಕ್‌ಪೀಸ್‌ ಜುಮ್ಕಾ ಇವರನ್ನು ಮತ್ತಷ್ಟು ಸುಂದರವಾಗಿಸಿದೆ. ಹಣೆಗಿಟ್ಟ ಬಿಂದಿ ಸ್ಥಳಿಯ ಟ್ರೆಡಿಷನಲ್‌ ಲುಕ್‌ಗೆ ಸಾಥ್‌ ನೀಡಿದೆ.

Niveditha Gowda

ಫ್ಯಾಷನ್‌ ವಿಮರ್ಶಕರ ಮಾತು

ನಿವೇದಿತಾ ಅವರ ಈ ಗೋಲ್ಡನ್‌ ಲುಕ್‌, ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳನ್ನು ಸೆಳೆದಿದೆ. ಇದರೊಂದಿಗೆ ಟ್ರೆಡಿಷನಲ್‌ವೇರ್‌ ಲೋಕದಲ್ಲಿ ಟ್ರೆಂಡ್‌ ಸೆಟ್‌ ಮಾಡಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕಿ ವಿದ್ಯಾ. ಅವರ ಪ್ರಕಾರ, ಗೋಲ್ಡನ್‌ ಲುಕ್‌, ವೆಡ್ಡಿಂಗ್‌ ಸೀಸನ್‌ಗೆ ಹೇಳಿ ಮಾಡಿಸಿದ ಔಟ್‌ಲುಕ್‌ ಎನ್ನುತ್ತಾರೆ.

ನಿವೇದಿತಾ ಗೌಡ ಗೋಲ್ಡನ್‌ ಲುಕ್‌ ಟ್ರೈ ಮಾಡಿ ನೋಡಿ

  • ಕಂಪ್ಲೀಟ್‌ ಗೋಲ್ಡನ್‌ ಶೇಡ್‌ನ ಔಟ್‌ಫಿಟ್‌ ಚೂಸ್‌ ಮಾಡಿ.
  • ಎಥ್ನಿಕ್‌ವೇರ್‌ ಆಯ್ಕೆ ಮಾಡಿ.
  • ಜ್ಯುವೆಲರಿ ಕೂಡ ಗೋಲ್ಡನ್‌ ಶೇಡ್‌ನದ್ದಾಗಿರಬೇಕು.
  • ಮೇಕಪ್‌ ಹಾಗೂ ಹೇರ್‌ಸ್ಟೈಲ್‌ ಟ್ರೆಡಿಷನಲ್‌ ಲುಕ್‌ಗೆ ಸಾಥ್‌ ನೀಡಬೇಕು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Star Saree Fashion: ಮಹಿಳೆಯರನ್ನು ಆಕರ್ಷಿಸಿದ ನಟಿ ಅಮೂಲ್ಯ‌ ಹಸಿರು ಸೀರೆಯ ಸೀಕ್ರೆಟ್ ಇದು!

Continue Reading

ಫ್ಯಾಷನ್

Summer Fashion: ಸಮ್ಮರ್‌ ಫ್ಯಾಷನ್‌ನಲ್ಲಿ ಬಂತು ತಂಪೆರೆಯುವ ವಾಟರ್‌ಫಾಲ್‌ ಇಯರಿಂಗ್ಸ್‌

ಸಮ್ಮರ್‌ ಫ್ಯಾಷನ್‌ನಲ್ಲಿ (Summer Fashion) ಇದೀಗ ತಂಪೆರೆಯುವ ವಾಟರ್‌ ಫಾಲ್‌ ಇಯರಿಂಗ್‌ಗಳು ಟ್ರೆಂಡಿಯಾಗಿವೆ. ಮೇಲಿನಿಂದ ಕೆಳಗೆ ಇಳಿಯುವ ಜಲಧಾರೆಯಂತೆ ಕಾಣಿಸುವ ಈ ಇಯರಿಂಗ್ಸ್‌ ಸದ್ಯ ಹುಡುಗಿಯರ ಫೇವರೇಟ್‌ ಆಕ್ಸೆಸರೀಸ್‌ ಲಿಸ್ಟ್‌ಗೆ ಸೇರಿವೆ. ಏನಿದು ವಾಟರ್‌ ಫಾಲ್‌ ಇಯರಿಂಗ್ಸ್?‌ ಎಂಬುದರ ಬಗ್ಗೆ ಜ್ಯುವೆಲ್‌ ಡಿಸೈನರ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Summer Fashion
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಸೀಸನ್‌ನ ಸಮ್ಮರ್‌ ಫ್ಯಾಷನ್‌ನಲ್ಲಿ (Summer Fashion) ಇದೀಗ ತಂಪೆರೆಯುವ ವಾಟರ್‌ ಫಾಲ್‌ ಇಯರಿಂಗ್‌ಗಳು ಟ್ರೆಂಡಿಯಾಗಿವೆ. ಮೇಲಿನಿಂದ ಕೆಳಗೆ ಇಳಿಯುವ ಜಲಧಾರೆಯಂತೆ ಕಾಣಿಸುವ ಕ್ರಿಸ್ಟಲ್‌ ಅಥವಾ ಅಮೆರಿಕನ್‌ ಡೈಮಂಡ್‌ ಹೊಂದಿರುವ ಈ ಇಯರಿಂಗ್ಸ್‌ ಸದ್ಯ ಹುಡುಗಿಯರ ಫೇವರೇಟ್‌ ಆಕ್ಸೆಸರೀಸ್‌ ಲಿಸ್ಟ್‌ಗೆ ಸೇರಿವೆ.

Summer Fashion

ಏನಿದು ವಾಟರ್ಫಾಲ್‌ ಇಯರಿಂಗ್ಸ್‌ ?

ನೋಡಲು ಥೇಟ್‌ ಜಲಪಾತದಂತೆ ಕಾಣಿಸುವ ಈ ಹ್ಯಾಂಗಿಂಗ್ಸ್‌ನಂತಹ ಕಿವಿಯೊಲೆಗಳು ನೋಡಲು ವಾಟರ್‌ಫಾಲ್‌ನಂತೆ ಕಾಣುತ್ತವೆ. ಹಾಗಾಗಿ ಇವನ್ನು ವಾಟರ್‌ಫಾಲ್‌ ಇಯರಿಂಗ್ಸ್‌ ಎನ್ನಲಾಗುತ್ತದೆ. ಕಿವಿಗೆ ಧರಿಸಿದಾಗ ಇಳೆ ಬೀಳುವ ಲೇಯರ್‌ನಂತಹ ಕ್ರಿಸ್ಟಲ್‌ ಸರಪಳಿಗಳು ವಾಟರ್‌ಫಾಲ್‌ನಂತೆ ಕಾಣಿಸುತ್ತವೆ. ಈ ವಿನ್ಯಾಸದಲ್ಲೆ ಇದೀಗ ಸಾಕಷ್ಟು ಡಿಸೈನ್‌ನವು ಆಕ್ಸೆಸರೀಸ್‌ ಲೋಕಕ್ಕೆ ಬಂದಿವೆ. ಮೈಕ್ರೋ ಕ್ರಿಸ್ಟಲ್ಸ್‌ ಅಂದರೇ, ಅಮೆರಿಕನ್‌ ಡೈಮಂಡ್‌ ಅಥವಾ ಆರ್ಟಿಫಿಷಿಯಲ್‌ ಅಮೆರಿಕನ್‌ ಡೈಮಂಡ್‌ ಹೊಂದಿರುವ ನಾಲ್ಕೈದು ಲೇಯರ್‌ ಹೊಂದಿರುವಂತಹ ಇಳೆ ಬೀಳುವಂತಹ ಇಯರಿಂಗ್‌ಗಳು ವೈಟ್‌ ಶೇಡ್‌ನಲ್ಲಿ ಲಭ್ಯ. ಇದೀಗ ಪಾಸ್ಟೆಲ್‌ ಶೇಡ್‌ಗಳಲ್ಲೂ ದೊರಕುತ್ತಿವೆ. ಲೈಟ್‌ ಪಿಂಕ್‌, ಪೀಚ್‌, ಬೀಚ್‌ ಬ್ಲ್ಯೂ, ಸ್ಕೈ ಬ್ಲ್ಯೂ, ಪಿಸ್ತಾ ಗ್ರೀನ್‌ ಶೇಡ್‌ನವು ಹೆಚ್ಚು ಪಾಪುಲರ್‌ ಆಗಿವೆ. ಹುಡುಗಿಯರನ್ನು ಸೆಳೆದಿವೆ.

Summer Fashion

ಪಾರ್ಟಿವೇರ್‌ ಆಕ್ಸೆಸರೀಸ್‌

ಪಾರ್ಟಿವೇರ್‌ ಆಕ್ಸೆಸರೀಸ್‌ ಕೆಟಗರಿಗೆ ಸೇರುವ ಈ ವಾಟರ್‌ ಫಾಲ್‌ ಇಯರಿಂಗ್‌ಗಳು ಕೆಲವು ಮೇಲ್ಭಾಗದಲ್ಲಿ ಬಿಗ್‌ ಸ್ಟೋನ್‌ ಅಥವಾ ಕಲರ್‌ಫುಲ್‌ ಇಮಿಟೇಡ್‌ ಸ್ಟೋನ್ಸ್‌ ಹೊಂದಿರುತ್ತವೆ. ಇಲ್ಲವೇ ಬೀಡ್ಸ್‌ ಅಥವಾ ಪರ್ಲ್‌ ಹೊಂದಿರುತ್ತವೆ. ಅದರ ಕೆಳಗೆ ಸುಮಾರು ನಾಲ್ಕೈದು ಇಂಚಿನಷ್ಟು ಉದ್ದದ ಹ್ಯಾಂಗಿಂಗ್‌ ಡಿಸೈನ್‌ ಹೊಂದಿರುತ್ತವೆ. ಕೆಲವು ಒಂದೇ ಸಮನಾಗಿ ಇದ್ದರೇ, ಇನ್ನು ಕೆಲವು ಆಸೆಮ್ಮಿಟ್ರಿಕಲ್‌ ಲೆಂಥ್‌ ಹೊಂದಿರುತ್ತವೆ. ಇವು ಇದೀಗ ಪಾರ್ಟಿವೇರ್‌ ಆಕ್ಸೆಸರೀಸ್‌ ಕೆಟಗರಿಯಲ್ಲಿ ಟಾಪ್‌ ಲಿಸ್ಟ್‌ನಲ್ಲಿವೆ. ಇವುಗಳ ವಿಶೇಷತೆಯೇಂದರೇ, ಯಾವುದೇ ಬಗೆಯ ಶಿಮ್ಮರ್‌ ಅಥವಾ ಶೈನಿಂಗ್‌ ಫ್ಯಾಬ್ರಿಕ್‌ನ ಪಾರ್ಟಿವೇರ್‌ ಔಟ್‌ಫಿಟ್‌ನೊಂದಿಗೆ ಇವನ್ನು ಧರಿಸಬಹುದು. ಎಲ್ಲವಕ್ಕೂ ಇವು ಮ್ಯಾಚ್‌ ಆಗುತ್ತವೆ. ಎಲ್ಲದಕ್ಕಿಂತ ಹೆಚ್ಚಾಗಿ ಇಡೀ ಮುಖವನ್ನು ಹೈ ಲೈಟ್‌ ಮಾಡುತ್ತವೆ. ಮಿರುಗುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Summer Fashion

ವಾಟರ್‌ ಫಾಲ್‌ ಕ್ಲಾಸಿ ಲುಕ್‌

“ಶಿಮ್ಮರ್‌ ಔಟ್‌ಫಿಟ್‌ಗಳಿಗೆ ಈ ವಾಟರ್‌ಫಾಲ್‌ ಇಯರಿಂಗ್‌ಗಳು ಹೇಳಿ ಮಾಡಿಸಿದಂತಿರುತ್ತವೆ. ಕಿವಿ ಮಾತ್ರವಲ್ಲ, ಇಡೀ ಲುಕ್‌ಗೆ ಇವು ಸಾಥ್‌ ನೀಡುತ್ತವೆ. ಆಕರ್ಷಕವಾಗಿ ಕಾಣಿಸುತ್ತವೆ. ಕ್ಲಾಸಿ ಲುಕ್‌ ನೀಡುವುದರೊಂದಿಗೆ ಸೆಲೆಬ್ರೆಟಿ ಇಮೇಜ್‌ ನೀಡುತ್ತವೆ” ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್‌ ರೀಟಾ. ಅವರ ಪ್ರಕಾರ, ಯುವತಿಯರು ಮಾತ್ರವಲ್ಲ, ಎಲ್ಲಾ ವಯಸ್ಸಿನ ಮಹಿಳೆಯರು ಧರಿಸುವುದು ಹೆಚ್ಚಾಗಿದೆ.

Summer Fashion

ವಾಟರ್‌ ಫಾಲ್‌ ಇಯರಿಂಗ್‌ ಆಯ್ಕೆ ಹೀಗಿರಲಿ

  • ಶಿಮ್ಮರ್‌ ಡಿಸೈನರ್‌ವೇರ್‌ ಶೇಡ್ಸ್‌ಗೆ ತಕ್ಕಂತೆ ವಾಟರ್‌ ಫಾಲ್‌ ಇಯರಿಂಗ್‌ ಆಯ್ಕೆ ಮಾಡಿ.
  • ಪಾಸ್ಟೆಲ್‌ ಶೇಡ್‌ ಡಿಸೈನ್‌ನವು ಟ್ರೆಂಡ್‌ನಲ್ಲಿವೆ.
  • ಆದಷ್ಟೂ ಮಿನುಗುವಂತವನ್ನು ಸೆಲೆಕ್ಟ್‌ ಮಾಡಿ.
  • ಶೋಲ್ಡರ್‌ ತನಕ ನೇತಾಡುವಂತವು ಇದೀಗ ಜೆನ್‌ ಜಿ ಹುಡುಗಿಯರನ್ನು ಸೆಳೆದಿವೆ.
  • ನಾಲ್ಕೈದು ಎಳೆ ಎಳೆಯಾಗಿರುವಂತವನ್ನು ಧರಿಸಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Star Summer Saree Fashion: ಬೇಸಿಗೆಯಲ್ಲೂ ಸೀರೆಯಲ್ಲಿ ಗ್ಲಾಮರಸ್‌ ಆಗಿ ಕಾಣಬೇಕೆ? ನಟಿ ಮೇಘಾಶ್ರೀ ಟಿಪ್ಸ್‌ ಫಾಲೋ ಮಾಡಿ!

Continue Reading

ಫ್ಯಾಷನ್

Star Saree Fashion: ಮಹಿಳೆಯರನ್ನು ಆಕರ್ಷಿಸಿದ ನಟಿ ಅಮೂಲ್ಯ‌ ಹಸಿರು ಸೀರೆಯ ಸೀಕ್ರೆಟ್ ಇದು!

ನಟಿ ಅಮೂಲ್ಯರ ಹಸಿರು ಮೈಸೂರು ಸಿಲ್ಕ್‌ ಸೀರೆ (Star Saree Fashion), ಮಾನಿನಿಯರನ್ನು ಸೆಳೆದಿದೆ. ಪಕ್ಕಾ ಟ್ರೆಡಿಷನಲ್‌ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಇವರ ಈ ಸ್ಟೈಲಿಂಗ್‌ ಬಗ್ಗೆ ಫ್ಯಾಷನ್‌ ವಿಮರ್ಶಕರು ಕೂಡ ಫುಲ್‌ ಮಾರ್ಕ್ಸ್‌ ನೀಡಿದ್ದಾರೆ. ಹಾಗಾದಲ್ಲಿ ಅಮೂಲ್ಯ ಮೇಕೋವರ್‌ ವಿಶೇಷತೆಯೇನು? ಇಲ್ಲಿದೆ ಡಿಟೇಲ್ಸ್.‌

VISTARANEWS.COM


on

Star Saree Fashion
ಚಿತ್ರಗಳು : ಅಮೂಲ್ಯ, ನಟಿ ಫೋಟೋಗ್ರಾಫಿ : ನವೀನ್‌ ಫೋಟೋಗ್ರಾಫಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟಿ ಅಮೂಲ್ಯರ ಹಸಿರು ಮೈಸೂರು ಸಿಲ್ಕ್‌ ಸೀರೆ (Star Saree Fashion) ಮಾನಿನಿಯರನ್ನು ಸೆಳೆದಿದೆ. ಪಕ್ಕಾ ಟ್ರೆಡಿಷನಲ್‌ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಇವರ ಸಾಂಪ್ರದಾಯಿಕ ಸ್ಟೈಲಿಂಗ್‌ ಕೂಡ 100 ಪರ್ಸೆಟ್‌ ಪರ್ಫೆಕ್ಟ್‌ ಆಗಿದೆ ಎಂದಿರುವ ಫ್ಯಾಷನ್‌ ವಿಮರ್ಶಕರು, ಇವರ ಸೀರೆ ಲುಕ್‌ಗೆ ಫುಲ್‌ ಮಾರ್ಕ್‌ ನೀಡಿದ್ದಾರೆ.
“ನಟಿ ಅಮೂಲ್ಯ ಹಸಿರು ಮೈಸೂರು ಸಿಲ್ಕ್‌ ಸೀರೆಯಲ್ಲಿ ಸಖತ್‌ ಆಗಿ ಕಾಣಿಸುತ್ತಿದ್ದಾರೆ. ಕನ್ನಡದ ಮನೆ ಹುಡುಗಿಯಂತೆ ಟ್ರೆಡಿಷನಲ್‌ ಲುಕ್‌ನಲ್ಲಿ ಮಿಂಚಿದ್ದಾರೆ. ವೆಸ್ಟರ್ನ್‌ ಔಟ್‌ಫಿಟ್‌ನಲ್ಲಿ ಅಂದವಾಗಿ ಕಾಣಿಸುವ ಅಮೂಲ್ಯ ಆಗಾಗ್ಗೆ ಟ್ರೆಡಿಷನಲ್‌ ಔಟ್‌ಫಿಟ್‌ಗಳಲ್ಲೂ ಕಾಣಿಸಿಕೊಳ್ಳುತ್ತಿರುತ್ತಾರೆ. ಅದರಲ್ಲೂ ಹಬ್ಬ ಹರಿದಿನಗಳ ಸಮಯದಲ್ಲಿ ರೇಷ್ಮೆಯ ಲಂಗ-ದಾವಣಿ ಹಾಗೂ ಲೆಹೆಂಗಾ ಮತ್ತು ಸಿಲ್ಕ್‌ ಸೀರೆಗಳಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇವು ಇವರ ಈ ಲುಕ್‌ ಸಾಂಪ್ರದಾಯಿಕ ಲುಕ್‌ಗೆ ಹೇಳಿ ಮಾಡಿಸಿದಂತಿದೆ. ಇದು ಇವರಿಗಿರುವ ಸೀರೆಯ ಸ್ಟೈಲಿಂಗ್‌ ಆಸಕ್ತಿ ತೋರ್ಪಡಿಸುತ್ತದೆ” ಎಂದು ಅಮೂಲ್ಯ ಸ್ಟೈಲಿಂಗ್‌ ಬಗ್ಗೆ ಪ್ರಶಂಸಿಸಿದ್ದಾರೆ ಫ್ಯಾಷನ್‌ ವಿಮರ್ಶಕರು. ಅವರ ಪ್ರಕಾರ, ಸೀರೆ ಪ್ರಿಯರು ಇವರ ಸೀರೆ ಸ್ಟೈಲಿಂಗ್‌ ನೋಡಿ ಕಲಿಯಬಹುದು” ಎನ್ನುತ್ತಾರೆ.

Star Saree Fashion

ಸಿಂಪಲ್‌ ಹಸಿರು ಮೈಸೂರು ಸಿಲ್ಕ್‌ ಸೀರೆ

ಅಮೂಲ್ಯ ಉಟ್ಟಿರುವ ಸಿಂಪಲ್‌ ಚಿಕ್ಕ ಬಾರ್ಡರ್‌ನ ಪಚ್ಚೆ ಹಸಿರು ಸಿಲ್ಕ್‌ ಸೀರೆ ಹಳೆಯ ಡಿಸೈನ್‌ದ್ದಾದರೂ ಆಕರ್ಷಕವಾಗಿದೆ. ಇದಕ್ಕೆ ಪ್ರಮುಖ ಕಾರಣ, ಅವರು ಮಾಡಿರುವ ಸ್ಟೈಲಿಂಗ್‌! ಇನ್ನು, ಸೀರೆಗೆ ಧರಿಸಿರುವ ಡಿಸೈನರ್‌ ಬ್ಲೌಸ್‌ ಹ್ಯಾಂಡ್‌ ಎಂಬ್ರಾಯ್ಡರಿ ಹೊಂದಿದೆ. ನೆಕ್‌ಲೈನ್‌ ಹಾಗೂ ಸ್ಲೀವ್‌ ಬಾರ್ಡರ್‌ ಬ್ಲೌಸ್‌ನ ಕಳೆಯನ್ನು ಮತ್ತಷ್ಟು ಹೆಚ್ಚಿಸಿದೆ. ಸ್ಲೀವ್‌ ಮೇಲಿನ ಗಂಡು-ಭೇರುಂಡ ಚಿತ್ತಾರ ಇಡೀ ಸೀರೆಯ ರಂಗನ್ನು ಹೆಚ್ಚಿಸಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Star Saree Fashion

ಕಾಸಿನ ಸರ – ಗಂಡು ಭೇರುಂಡ ಜ್ಯುವೆಲರಿ

ಇನ್ನು, ಈ ಮೈಸೂರು ಸಿಲ್ಕ್‌ ಸೀರೆಗೆ ಅಮೂಲ್ಯ ಧರಿಸಿರುವ ಅಗಲವಾದ ಕಾಸಿನ ಸರ ಹಾಗೂ ಗಂಡು-ಭೇರುಂಡ ಚಿತ್ತಾರದ ಅಗಲವಾದ ಕಿವಿಯೊಲೆ ಸಾಂಪ್ರದಾಯಿಕ ಲುಕ್‌ಗೆ ಮ್ಯಾಚ್‌ ಮಾಡಿದೆ.

Star Saree Fashion

ಅಮೂಲ್ಯ ಸಿಂಪಲ್‌ ಮೇಕಪ್‌

ಗಾಢವೆನಿಸದ ಮೇಕಪ್‌, ತೆಳುವಾದ ಲಿಪ್‌ಸ್ಟಿಕ್‌ ಹಾಗೂ ಮ್ಯಾಚಿಂಗ್‌ ಹಸಿರು ಬಿಂದಿ, ಕಂಗಳ ಕಾಡಿಗೆ, ಬ್ಲ್ಯಾಕ್‌ ಐ ಲ್ಯಾಶಸ್‌ ಹಾಗೂ ಮಸ್ಕರಾ ಎಲ್ಲವೂ ಅಮೂಲ್ಯ ಅವರನ್ನು ಮತ್ತಷ್ಟು ಸುಂದರವಾಗಿಸಿದೆ. ಇನ್ನು, ಕೂದಲ ವಿನ್ಯಾಸಕ್ಕೆ ಬಂದಲ್ಲಿ, ಹೇರ್‌ಬನ್‌ ವಿನ್ಯಾಸಕ್ಕೆ ಮಧ್ಯ ತೆಗೆದ ಬೈತಲೆ ಕ್ರಾಪ್‌, ಅದಕ್ಕೆ ಸುತ್ತಿದ ಮಲ್ಲಿಗೆ ಹೂ ಅಂದ ಹೆಚ್ಚಿಸಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

Star Saree Fashion

ನಟಿ ಅಮೂಲ್ಯ ಲುಕ್‌ಗಾಗಿ ಹೀಗೆ ಮಾಡಿ

  • ಸಿಂಪಲ್‌ ಟ್ರೆಡಿಷನಲ್‌ ಮೇಕಪ್‌ಗೆ ಸೈ ಎನ್ನಿ.
  • ಸಿಲ್ಕ್‌ ಸೀರೆ ಉಟ್ಟಾಗ ಆದಷ್ಟೂ ಗೋಲ್ಡ್‌ ಜ್ಯುವೆಲರಿ ಧರಿಸಿ.
  • ಜಡೆ ಅಥವಾ ಹೇರ್‌ಬನ್‌ ಕೂದಲ ವಿನ್ಯಾಸ ಮಾಡಿ.
  • ಸಾಂಪ್ರದಾಯಿಕ ಲುಕ್‌ಗಾಗಿ ರೇಷ್ಮೆ ಸೀರೆ ಉಡಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Ear Cuff Fashion: ಕಿವಿಯ ಅಲಂಕಾರಕ್ಕೆ ಬಂತು ಬಿಗ್‌ ಇಯರ್‌ ಕಫ್‌!

Continue Reading
Advertisement
VVPAT Verification
ದೇಶ5 mins ago

VVPAT Verification: ಇವಿಎಂ-ವಿವಿಪ್ಯಾಟ್‌ ತಾಳೆಯ ಪ್ರಕ್ರಿಯೆ ತಿಳಿಸಿ; ಆಯೋಗಕ್ಕೆ ಸುಪ್ರೀಂ ಸೂಚನೆ

Jai Shree Ram slogan Siddaramaiah and DK Shivakumar are nurturing terrorists in Bengaluru accuses Ashok
ಕರ್ನಾಟಕ7 mins ago

Jai Shree Ram slogan: ಬೆಂಗಳೂರಿನಲ್ಲಿ ಭಯೋತ್ಪಾದಕರನ್ನು ಬೆಳೆಸುತ್ತಿರುವ ಸಿದ್ದರಾಮಯ್ಯ, ಡಿಕೆಶಿ: ಅಶೋಕ್‌ ಆರೋಪ

IPL 2024
ಕ್ರಿಕೆಟ್10 mins ago

IPL 2024: ಭಾರತ ಕ್ರಿಕೆಟ್​ಗೆ ನಿಮ್ಮ ಕೊಡುಗೆ ಏನು? ಹರ್ಷ ಭೋಗ್ಲೆಗೆ ಪ್ರಶ್ನೆ ಮಾಡಿದ ಮಾಜಿ ಆಟಗಾರ

Self Harming In chitradurga
ಚಿತ್ರದುರ್ಗ32 mins ago

Self Harming : ಮಕ್ಕಳಾಗಿಲ್ಲವೆಂದು ಕಿರುಕುಳ; ಶೌಚಾಲಯದಲ್ಲಿ ನೇಣು ಬಿಗಿದುಕೊಂಡ ಗೃಹಿಣಿ

Saffron Row
ದೇಶ37 mins ago

ಕೇಸರಿ ಬಟ್ಟೆ ಧರಿಸಿದ್ದಕ್ಕೆ ಪ್ರಾಂಶುಪಾಲ ಆಕ್ಷೇಪ; ತೆರೆಸಾ ಶಾಲೆ ಮೇಲೆ ಹಿಂದು ಕಾರ್ಯಕರ್ತರ ದಾಳಿ!

gold rate today 18
ಚಿನ್ನದ ದರ53 mins ago

Gold Rate Today: ಬಂಗಾರ ಕೊಳ್ಳುವವರಿಗೆ ತುಸು ರಿಲೀಫ್‌, ಬಹುದಿನಗಳ ನಂತರ ಬೆಲೆ ಇಳಿಕೆ; ಇಂದಿನ ದರ ಹೀಗಿದೆ

Rohit sharma
ಕ್ರೀಡೆ56 mins ago

Rohit Sharma: ಸ್ಮರಣೀಯ ಪಂದ್ಯವನ್ನಾಡಲು ಸಜ್ಜಾದ ರೋಹಿತ್​ ಶರ್ಮ

summer special trains
ಬೆಂಗಳೂರು1 hour ago

Summer Special Trains: ಹಾಲಿಡೇ ಟ್ರಿಪ್‌ಗೆ ರೆಡಿನಾ? ಬೆಂಗಳೂರು-ಮೈಸೂರಿನಿಂದ ಈ ರಾಜ್ಯಗಳಿಗೆ ಸ್ಪೆಷಲ್‌ ಟ್ರೈನ್‌

Senior citizen
ಲೈಫ್‌ಸ್ಟೈಲ್1 hour ago

Senior Citizen: 2050ರ ವೇಳೆಗೆ ಭಾರತ ‘ಮುದುಕರ ದೇಶ’ವಾಗಲಿದೆ!

Lok sabha election-2024
Latest1 hour ago

Lok Sabha Election 2024: ಬೇರೆಯವರು ನಮ್ಮ ಮತ ಚಲಾಯಿಸಿದರೆ ಏನು ಮಾಡಬಹುದು?

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 day ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ2 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20243 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20244 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ4 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ5 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ6 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ6 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ7 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

ಟ್ರೆಂಡಿಂಗ್‌