ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಿನುಗುವ ಗ್ಲಿಟ್ಟರ್ ನೇಲ್ ಆರ್ಟ್ ಹೊಸ ವರ್ಷದ ಸೆಲೆಬ್ರೇಷನ್ ಫ್ಯಾಷನ್‌ಗೆ ಎಂಟ್ರಿ ನೀಡಿದೆ. ಮಿಂಚುವ ಪಾರ್ಟಿ ಉಡುಪಿಗೆ ತಕ್ಕಂತೆ ಮ್ಯಾಚಿಂಗ್ ಮಾಡಬಹುದಾದ ಈ ನೇಲ್ ಆರ್ಟ್‌ಗೆ ಪೂರಕವಾಗುವಂತೆ ನಾನಾ ಕಲರ್‌ಗಳ ನೇಲ್‌ಕಲರ್‌ಗಳು ಕೂಡ ಮಾರುಕಟ್ಟೆಗೆ ಕಾಲಿಟ್ಟಿವೆ.
ಟ್ರೆಂಡಿಯಾಗಿರುವ ನೇಲ್ ಶೇಡ್‌ಗಳು
ಪಾಸ್ಟೆಲ್ ಶೇಡ್‌ನಲ್ಲಿರುವ ಪಿಂಕ್, ಯೆಲ್ಲೋ, ಲೆಮೆನ್ ಗ್ರೀನ್, ಸ್ಕೈ ಬ್ಲ್ಯೂ, ಒಷನ್ ಬ್ಲ್ಯೂ, ಪಿಸ್ತಾ ಗ್ರೀನ್, ಲೈಟ್ ಪಿಂಕ್ ಹೀಗೆ ನಾನಾ ವರ್ಣದವು ಗ್ಲಿಟ್ಟರ್ಸ್ ಶೇಡ್‌ನಲ್ಲಿ ಬಿಡುಗಡೆಗೊಂಡಿವೆ. ನೋಡಲು ಲೈಟಾಗಿ ಕಂಡರೂ ಗ್ಲಿಟ್ಟರ್ ಆಗಿರುವುದರಿಂದ ಆಕರ್ಷಕವಾಗಿ ಕಾಣುತ್ತವೆ ಎನ್ನುತ್ತಾರೆ ನೇಲ್ ಆರ್ಟ್ ಡಿಸೈನರ್ ರಕ್ಷಾ. ಅವರ ಪ್ರಕಾರ, ಗ್ಲಿಟ್ಟರ್ ನೇಲ್ ಕಲರ್ಸ್ ಕಾಲವಿದು. ಸೋ, ಮ್ಯಾಟ್ ಶೇಡ್ಸ್‌ಗೆ ಕೊಂಚ ವಿರಾಮ ಬಿದ್ದಿದೆ. ಪರಿಣಾಮ, ಹೊಳೆಯುವ ಗ್ಲಿಟ್ಟರ್ ನೇಲ್ಸ್ ಎಲ್ಲರ ಗಮನ ಸೆಳೆಯುತ್ತಿವೆ. ಇನ್ನು ಬಹಳಷ್ಟು ನೇಲ್ ಪಾಲಿಶ್ ಬ್ರಾಂಡ್‌ಗಳು ಊಹೆಗೂ ನಿಲುಕದ ಗ್ಲಿಟ್ಟರ್ ಇರುವಂತಹ ನೇಲ್ ಎನಮಲ್‌ಗಳನ್ನು ಬಿಡುಗಡೆಗೊಳಿಸಿದ್ದು, ಇವುಗಳ ಚಿತ್ತಾರಗಳು ಉಗುರುಗಳನ್ನು ಸಿಂಗರಿಸುತ್ತಿವೆ.
ನೇಲ್‌ಗೆ ಡಬ್ಬಲ್ ಶೇಡ್ಸ್
ಮೊದಲಿಗೆ ಕೋಟ್ ನೇಲ್ ಕಲರ್ ಇಲ್ಲವೇ ನ್ಯೂಡ್ ಕಲರ್ ಹಚ್ಚಿ, ಅದರ ಮೇಲೆ ಗ್ಲಿಟ್ಟರ್ ಶೇಡ್ ಲೇಪಿಸಿ. ಹೀಗೆ ಡಬಲ್ ಶೇಡ್ಸ್ ಹಚ್ಚುವುದು ಇದೀಗ ನೇಲ್ ಆರ್ಟ್‌ನ ಭಾಗ. ಒಂದರ ಮೇಲೊಂದು ಇಲ್ಲವೇ ಒಂದರ ಪಕ್ಕ ಮತ್ತೊಂದು ಕಾಂಟ್ರಸ್ಟ್ ರೀತಿಯಲ್ಲಿ ಹಚ್ಚುವುದು ಇಂದು ಕಾಮನ್ ಆಗೋಗಿದೆ ಎನ್ನುತ್ತಾರೆ ನೇಲ್ ಆರ್ಟ್ ಡಿಸೈನರ್ ರಕ್ಷಾ. ಇನ್ನು ಎರಡಕ್ಕಿಂತ ಹೆಚ್ಚು ಲೆಯರ್ ಲುಕ್ ನೀಡುವ ಗ್ಲಿಟ್ಟರ್ ಶೇಡ್‌ಗಳು ಇಂದು ಯುವತಿಯರ ಉದ್ದನೆಯ ಉಗುರುಗಳನ್ನು ಶೃಂಗರಿಸುತ್ತಿವೆ. ಅಷ್ಟೇಕೆ! ಇದು ನೇಲ್ ಆರ್ಟಾ ಎನ್ನುವಷ್ಟರ ಮಟ್ಟಿಗೆ ನಾನಾ ವರ್ಣಗಳು ಚಿತ್ತಾರ ಮೂಡಿಸುತ್ತಿವೆ ಎನ್ನುತ್ತಾರೆ ಅವರು.
ಮರೆಯಾದ ಮ್ಯಾಟ್ ಶೇಡ್ಸ್
ಈ ವರ್ಷದ ಕೊನೆಯಲ್ಲಿ ಮ್ಯಾಟ್ ನೇಲ್ ಶೇಡ್ಸ್ ಮಾಯವಾಗಿವೆ. ಗ್ಲಿಟ್ಟರ್ ಎಂದಾಕ್ಷಣ ಗ್ರ್ಯಾಂಡ್ ಲುಕ್ ಎಂದುಕೊಳ್ಳಬೇಕಿಲ್ಲ. ಕೋಟ್‌ಗಳನ್ನು ಹಚ್ಚುವ ಆಧಾರದ ಮೇಲೆ ಗ್ರ್ಯಾಂಡ್ ಲುಕ್ ನೀಡಬಹುದು. ತೀರಾ ಸಿಂಪಲ್ ಲುಕ್ ಬೇಕಿದ್ದಲ್ಲಿನ್ಯೂಟ್ರಲ್ ಕಲರ್ ಶೇಡ್ಸ್ ಇಲ್ಲವೇ ಲೈಟ್ ಕಲರ್‌ನ ಸಿಂಗಲ್ ಕೋಟ್ ಹಚ್ಚಬಹುದು. ಇನ್ನು ಡಾರ್ಕ್ ವರ್ಣದವನ್ನು ನಿಮ್ಮ ಮ್ಯಾಚಿಂಗ್ ಡಿಸೈನರ್‌ವೇರ್‌ಗೆ ತಕ್ಕಂತೆ ಬಳಸಬಹುದು ಎನ್ನುತ್ತಾರೆ ನೇಲ್ ಡಿಸೈನರ್ ರೋಮಿ.
ಶೈನಿಂಗ್ ನೇಲ್‌ಶೇಡ್ಸ್ ಮಿಕ್ಸ್ ಮ್ಯಾಚ್ ಮಾಡುವಾಗ ಎಚ್ಚರದಿಂದಿರಬೇಕು. ಯಾಕೆಂದರೆ, ಇದು ಮಿಕ್ಸ್ ಆಗುವ ಸಂಭವವಿರುತ್ತದೆ.
ನ್ಯೂ ಇಯರ್ ಗ್ಲಿಟ್ಟರ್ ನೇಲ್ ಆರ್ಟ್ ಪ್ರಿಯರಿಗಾಗಿ
- ಉಗುರುಗಳ ಆಕಾರಕ್ಕೆ ಹೊಂದುವಂತೆ ನೇಲ್ ಆರ್ಟ್ ಮಾಡಿ.
- ಬೇಸಿಕ್ ಕೋಟ್ ಹಚ್ಚಿ, ನಂತರ ನೇಲ್ ಎನಮೆಲ್ ಹಚ್ಚಿ.
- ಗ್ಲಿಟ್ಟರ್ ಕೋಟ್ಸ್ ಪಾರ್ಟಿ ಉಡುಪಿಗೆ ಮ್ಯಾಚಿಂಗ್ ಮಾಡಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Christmas Fashion | ಕ್ರಿಸ್ಮಸ್ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ನಾಲ್ಕು ಆಕರ್ಷಕ ವಿನ್ಯಾಸದ ಗೌನ್‌ಗಳು