Christmas Fashion | ಕ್ರಿಸ್ಮಸ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ನಾಲ್ಕು ಆಕರ್ಷಕ ವಿನ್ಯಾಸದ ಗೌನ್‌ಗಳು - Vistara News

ಫ್ಯಾಷನ್

Christmas Fashion | ಕ್ರಿಸ್ಮಸ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ನಾಲ್ಕು ಆಕರ್ಷಕ ವಿನ್ಯಾಸದ ಗೌನ್‌ಗಳು

ಬಾರಿಯ ಕ್ರಿಸ್ಮಸ್‌ ಫ್ಯಾಷನ್‌ನಲ್ಲಿ 4 ವಿನ್ಯಾಸದ ಗೌನ್‌ಗಳು ಟ್ರೆಂಡಿಯಾಗಿವೆ. ಟ್ರೆಂಡಿಯಾಗಿರುವ ಈ ಗೌನ್‌ಗಳನ್ನು ಯಾರೆಲ್ಲಾ ಧರಿಸಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.

VISTARANEWS.COM


on

Christmas Fashion
ಚಿತ್ರಕೃಪೆ : ಪಿಕ್ಸೆಲ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ಕ್ರಿಸ್ಮಸ್‌ ಫ್ಯಾಷನ್‌ನಲ್ಲಿ ನಾನಾ ಬಗೆಯ ಗೌನ್‌ಗಳು ಎಂಟ್ರಿ ನೀಡಿದ್ದು ಅವುಗಳಲ್ಲಿ ವೈವಿಧ್ಯಮಯ ೪ ಡಿಸೈನರ್‌ ಗೌನ್‌ಗಳು ಫ್ಯಾಷನ್‌ ಪ್ರಿಯರನ್ನು ಸೆಳೆದಿವೆ. ಅವುಗಳಲ್ಲಿ ಬೇಬಿ ಡಾಲ್‌ನಂತೆ ಬಿಂಬಿಸುವ ಗೌನ್‌ಗಳು, ಸ್ಲಿಮ್‌ ಫಿಟ್‌ ಗೌನ್‌ಗಳು ಸೇರಿವೆ. ಇವು ಫೆಸ್ಟೀವ್‌ ಸೀಸನ್‌ ಸಂಭ್ರಮವನ್ನು ಹೆಚ್ಚಿಸಿವೆ.

“ಟ್ರೆಂಡಿಯಾಗಿರುವ ಗೌನ್‌ಗಳ ಲಿಸ್ಟ್‌ನಲ್ಲಿ ಈ ಕೆಳಗಿನ ಗೌನ್‌ಗಳಿದ್ದು, ಆಯಾ ವ್ಯಕ್ತಿತ್ವ ಹಾಗೂ ಬಾಡಿ ಮಾಸ್‌ ಇಂಡೆಕ್ಸ್‌ಗೆ ತಕ್ಕಂತೆ ಧರಿಸಬಹುದು. ಆಗ ನೋಡಲು ಆಕರ್ಷಕವಾಗಿ ಕಾಣಬಹುದು” ಎನ್ನುತ್ತಾರೆ ಸ್ಟೈಲಿಸ್ಟ್‌ ಧೀರಜ್‌.

Christmas Fashion

೧. ಬೊಂಬೆಯಂತೆ ಕಾಣಲು ನೆಟ್ಟೆಡ್‌ ಬಾಲ್‌ ಗೌನ್‌

ಡಾಲ್‌ನಂತೆ ಬಿಂಬಿಸುವ ನೆಟ್ಟೆಡ್‌ ಬಾಲ್‌ ಗೌನ್‌ ಈ ಸೀಸನ್‌ನಲ್ಲಿ ಟ್ರೆಂಡಿಯಾಗಿದೆ. ನೋಡಲು ಆಕರ್ಷಕವಾಗಿ ಕಾಣುತ್ತದೆ. ಕೆಳಗಡೆ ಗೌನ್‌ ಹರಡಿಕೊಳ್ಳುವುದರಿಂದ ಗೊಂಬೆಯ ಲುಕ್‌ ನೀಡುತ್ತದೆ. ಹವರ್‌ ಗ್ಲಾಸ್‌ ಶೇಪ್‌ನವರಿಗೆ ಇದು ಹೇಳಿ ಮಾಡಿಸಿದಂತಿರುತ್ತದೆ. ತೀರಾ ಸ್ಲಿಮ್‌ ಆಗಿರದಿದ್ದವರಿಗೂ ಅಷ್ಟೇ, ಇದು ಸೂಟ್‌ ಆಗುತ್ತದೆ.

Christmas Fashion

೨. ಆಕರ್ಷಕ ಶೀತ್‌ ಗೌನ್‌

ಶೀತ್‌ ಗೌನ್‌ ಹಾಗೂ ಶೀತ್‌ ಫ್ರಾಕ್‌ಗಳು ಚಾಲ್ತಿಯಲ್ಲಿವೆ. ಪ್ಲಂಪಿಯಾಗಿರುವವರು ಈ ಶೀತ್‌ ಗೌನನ್ನು ಧರಿಸಬಹುದು. ಇದಕ್ಕೆ ಬಳಸುವ ಫ್ಯಾಬ್ರಿಕ್‌ ವಿಭಿನ್ನವಾಗಿರುತ್ತದೆ. ಹೆಚ್ಚು ಹರಡಿಕೊಳ್ಳುವುದಿಲ್ಲ. ಸಿಂಪಲ್‌ ಹಾಗೂ ಫ್ರಾಕ್‌ ಲುಕ್‌ ಬೇಕೆನ್ನುವವರು ಈ ಗೌನ್‌ ಮೊರೆ ಹೋಗಬಹುದು. ಪಾರ್ಟಿ ಹಾಗೂ ಸಿಂಪಲ್‌ ಫಂಕ್ಷನ್‌ಗಳಿಗೂ ಇವನ್ನು ಧರಿಸಬಹುದು.

೩. ಟೀ ಲೆಂಥ್‌ ಗೌನ್‌ ಜಾದೂ

ಸೆಲೆಬ್ರೇಷನ್‌ನಲ್ಲಿ ಉದ್ದುದ್ದದ ಗೌನ್‌ಗಳನ್ನು ಧರಿಸಲು ಇಷ್ಟವಿಲ್ಲದವರು ಟೀ ಲೆಂಥ್‌ ಗೌನ್‌ ಧರಿಸಬಹುದು. ಇದು ಮಂಡಿಯವರೆಗೂ ನೋಡಲು ಸೇಮ್‌ ಟು ಸೇಮ್‌ ಫ್ರಾಕ್‌ನಂತೆಯೇ ಕಾಣುತ್ತದೆ. ನಾನಾ ವೆರೈಟಿಗಳಲ್ಲಿಯೂ ದೊರೆಯುತ್ತದೆ. ಪಾಸ್ಟೆಲ್‌ ಶೇಡ್‌ ಹಾಗೂ ಲೈಟ್‌ ಕಲರ್‌ನವು ಹೆಚ್ಚು ಟ್ರೆಂಡಿಯಾಗಿವೆ. ಕೊಂಚ ಪ್ಲಂಪಿಯಾಗಿರುವವರು ಡಬ್ಬಲ್‌ ಶೇಡ್‌ ಹಾಗೂ ಮಿಕ್ಸ್‌ಡ್‌ ಫ್ಯಾಬ್ರಿಕ್‌ನವನ್ನು ಧರಿಸಬಹುದು.

Christmas Fashion

೪. ಅಂದ ಹೆಚ್ಚಿಸುವ ಪ್ರೋಮ್‌ ಗೌನ್‌

ಬಾಡಿ ಶೇಪ್‌ಗೆ ತಕ್ಕಂತಿರುವ ಪ್ರೋಮ್‌ ಗೌನ್‌ಗಳು ಪಾರ್ಟಿಗೆ ಬೆಸ್ಟ್‌ ಸೂಟ್‌ ಆಗುತ್ತವೆ. ಧರಿಸಿದಾಗ ಹೆಚ್ಚಾಗಿ ಹರಡಿಕೊಳ್ಳುವುದಿಲ್ಲ. ನೋಡಲು ಲಾಂಗ್‌ ಫ್ರಾಕ್‌ನಂತೆ ಕಾಣುವ ಇವು ವೆರೈಟಿ ವಿನ್ಯಾಸದವು ದೊರಕುತ್ತವೆ. ಬಾಡಿ ಮಾಸ್‌ ಇಂಡೆಕ್ಸ್‌ಗೆ ತಕ್ಕಂತೆ ಟ್ರಯಲ್‌ ನೋಡಿ ಖರೀದಿಸುವುದು ಉತ್ತಮ.

Christmas Fashion

ಗೌನ್‌ ಪ್ರೇಮಿಗಳಿಗೆ ತಿಳಿದಿರಲಿ

  • ನಿಮ್ಮ ಪರ್ಸನಾಲಿಟಿಗೆ ಸರಿಯಾದ ಗೌನ್‌ ಆಯ್ಕೆ ಮಾಡಿ.
  • ಡಿಸೈನ್‌ಗಳು ನಿಮ್ಮ ವ್ಯಕ್ತಿತ್ವಕ್ಕೆ ಮ್ಯಾಚ್‌ ಆಗುತ್ತವೆಯೇ ಪರಿಶೀಲಿಸಿ.
  • ಕ್ರಿಸ್‌ಮಸ್‌ ಸೆಲೆಬ್ರೆಷನ್‌ಗೆ ಸೂಟ್‌ ಆಗುವಂತಿರಲಿ.
  • ಆಕ್ಸೆಸರೀಸ್‌ ಕೂಡ ಮ್ಯಾಚ್‌ ಆಗುವುದು ಅಗತ್ಯ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Christmas Fashion | ಫ್ಯಾಷನ್‌ ಲೋಕಕ್ಕೆ ಲಗ್ಗೆ ಇಟ್ಟ ವೈವಿಧ್ಯಮಯ ವಿನ್ಯಾಸದ ಕ್ರಿಸ್ಮಸ್‌ ಪಾರ್ಟಿ ಡ್ರೆಸ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Mega Shetty: ದಾವಣಿ-ಲಂಗದಲ್ಲಿ ನಟಿ ಮೇಘಾ ಶೆಟ್ಟಿಯಂತೆ ನೀವೂ ಕಾಣಬೇಕೆ? ಈ ಟಿಪ್ಸ್ ಪಾಲಿಸಿ!

ನಟಿ ಮೇಘಾ ಶೆಟ್ಟಿಯ (Mega Shetty) ದಾವಣಿ-ಲಂಗದ ಸಿಂಪಲ್‌ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹೆಚ್ಚು ಖರ್ಚಿಲ್ಲದೇ, ಮೇಕಪ್‌ ಹಚ್ಚದೇ ಇರುವ ಅವರ ಈ ಲುಕ್‌ ಈ ಸೀಸನ್‌ಗೆ ಹೇಳಿಮಾಡಿಸಿದಂತಿದೆ. ಏನಿದು ಇವರ ಲುಕ್‌ ಇಲ್ಲಿದೆ ಕಿರುನೋಟ.

VISTARANEWS.COM


on

Mega Shetty
ಚಿತ್ರಗಳು : ಮೇಘಾ ಶೆಟ್ಟಿ, ನಟಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟಿ ಮೇಘಾ ಶೆಟ್ಟಿಯ (Mega Shetty) ದಾವಣಿ-ಲಂಗದ ಸಿಂಪಲ್‌ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಹೆಚ್ಚು ಖರ್ಚಿಲ್ಲದೇ, ಮೇಕಪ್‌ ಹಚ್ಚದೇ ಇರುವ ಅವರ ಈ ಸಿಂಪಲ್‌ ದಾವಣಿ -ಲಂಗದ ಲುಕ್‌ ಎಲ್ಲರನ್ನು ಆಕರ್ಷಿಸಿದೆ. ನೋಡಲು ಮಾತ್ರವಲ್ಲ, ಈ ಔಟ್‌ಫಿಟ್‌ನ ಡಿಸೈನ್‌ ಕೂಡ ಡಿಸೆಂಟ್‌ ಲುಕ್‌ ನೀಡಿದೆ. ಅಂದಹಾಗೆ, ನಟಿ ಮೇಘಾ ಶೆಟ್ಟಿ, ಕಿರುತರೆಯ ಧಾರವಾಹಿಯ ಮೂಲಕ ಹೆಸರು ಮಾಡಿದವರು. ಈ ಮಧ್ಯೆ ಸಿನಿಮಾಗಳ ಮೂಲಕ ಬೆಳ್ಳಿತೆರೆಯಲ್ಲೂ ಕಾಣಿಸಿಕೊಂಡಿದ್ದಾರೆ. ಆಗಾಗ್ಗೆ ಸಾಕಷ್ಟು ಫೋಟೋಶೂಟ್‌ಗಳ ಮೂಲಕ ಸೀಸನ್‌ನ ಟ್ರೆಂಡಿ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಅವರು ಧರಿಸುವ ಔಟ್‌ಫಿಟ್‌ಗಳು ಕೂಡ ಒಂದಕ್ಕಿಂತ ಒಂದು ಗಮನ ಸೆಳೆಯುವಂತಿರುತ್ತವೆ.

Mega Shetty image

ಮೇಘಾ ಶೆಟ್ಟಿಯ ದಾವಣಿ-ಲಂಗದ ಲವ್‌

ಮೇಘಾ ಶೆಟ್ಟಿ ಇತ್ತೀಚೆಗೆ ಅತಿ ಹೆಚ್ಚು ದಾವಣಿ-ಲಂಗ ಡಿಸೈನರ್‌ವೇರ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಅವುಗಳಲ್ಲಿ ಬಹಳಷ್ಟು ಡಿಸೈನರ್‌ವೇರ್‌ಗಳು ಸೆಲೆಬ್ರೆಟಿ ಲಕ್ಷ್ಮಿಕೃಷ್ಣ ಅವರದ್ದೇ ಆಗಿವೆ. ಸಿಂಪಲ್‌ ಡಿಸೈನ್‌ಗಳಿಂದಿಡಿದು ಟ್ರೆಡಿಷನಲ್‌ ಲುಕ್‌ ನೀಡುವ ಅವರ ನಾನಾ ಶೈಲಿಯ ಪ್ರಿಂಟ್ಸ್‌ನ ಹಾಗೂ ಬಾರ್ಡರ್‌ನ ದಾವಣಿ-ಲಂಗಗಳಲ್ಲಿ ಮೇಘಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಕೆಲವು ಹಬ್ಬದ ಸಮಯದಲ್ಲಿ ಧರಿಸಿ ಕಾಣಿಸಿಕೊಂಡರೇ ಮತ್ತೇ ಕೆಲವು ಸಾಮಾನ್ಯ ದಿನಗಳಲ್ಲಿ ಧರಿಸಿ, ಅಭಿಮಾನಿಗಳನ್ನು ಸೆಳೆದಿದ್ದಾರೆ. ಆ ಮಟ್ಟಿಗೆ ದಾವಣಿ-ಲಂಗದ ಅವರ ಫೋಟೋಗಳು ಹಿಟ್‌ ಆಗಿವೆ. ಸಾಮಾನ್ಯ ಹುಡುಗಿಯರನ್ನು ಮಾತ್ರವಲ್ಲ, ಎಲ್ಲಾ ಕೆಟಗರಿಯವರನ್ನು ಸೆಳೆದಿವೆ. ಸೆಲೆಬ್ರೆಟಿ ಡಿಸೈನರ್‌ ಲಕ್ಷಿಕೃಷ್ಣ ಅವರ ಈ ದಾವಣಿ-ಲಂಗ ಡಿಸೈನರ್‌ವೇರ್‌ಗಳು ಸ್ಥಳೀಯ ಸಂಸ್ಕೃತಿ ಬಿಂಬಿಸುವಂತಹ ಫ್ಯಾಬ್ರಿಕ್‌ ಹಾಗೂ ಸಿಂಪಲ್‌ ಡಿಸೈನ್‌ ಹೊಂದಿರುವುದು ಎಲ್ಲರ ಗಮನಸೆಳೆಯಲು ಕಾರಣವಾಗಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು. ಅವರ ಪ್ರಕಾರ, ಮೇಘಾ ಶೆಟ್ಟಿಯ ದಾವಣಿ-ಲಂಗದ ಲುಕ್‌ ಆವರನ್ನು ಪಕ್ಕದ ಮನೆ ಹುಡುಗಿಯಂತೆ ಬಿಂಬಿಸಿವೆ. ಇದು ಸಾಮಾನ್ಯ ಜನರನ್ನು ತಲುಪಲು ಸಾಧಯವಾಗಿಸಿವೆ ಎನ್ನುತ್ತಾರೆ.

Mega Shetty photo

‌ದಾವಣಿ-ಲಂಗ ಅಭಿಮಾನಿಗಳಿಗೆ ಟಿಪ್ಸ್‌

ದಾವಣಿ-ಲಂಗದಲ್ಲಿ ಮೇಘಾ ಶೆಟ್ಟಿಯಂತೆ ನೀವೂ ಕಾಣಿಸಬೇಕೇ! ಹಾಗಾದಲ್ಲಿ ಹೀಗೆ ಮಾಡಿ ನೋಡಿ ಎನ್ನುತ್ತಾರೆ ಸೆಲೆಬ್ರೆಟಿ ಡಿಸೈನರ್ ಲಕ್ಷ್ಮಿಕೃಷ್ಣ. ಅವರು ಹೇಳುವಂತೆ, ದಾವಣಿ-ಲಂಗದಲ್ಲಿ ಸೆಲೆಬ್ರೆಟಿ ಲುಕ್‌ ಪಡೆಯಲು ಆದಷ್ಟೂ ಡಿಸೈನರ್‌ ಔಟ್‌ಫಿಟ್‌ ಚೂಸ್‌ ಮಾಡಬೇಕು. ಇಲ್ಲವಾದಲ್ಲಿ ಸಿಂಪಲ್‌ ಲುಕ್‌ಗಾಗಿ ಹೀಗೂ ಮಾಡಬಹುದು. ಟ್ರೆಡಿಷನಲ್‌ ಲುಕ್‌ ಇರುವಂತಹ ಸಮ್ಮರ್‌ ಸೀಸನ್‌ಗೆ ಹೊಂದುವಂತಹ ಫ್ಯಾಬ್ರಿಕ್‌ ಆಯ್ಕೆ ಮಾಡಿ, ಸ್ಟಿಚ್‌ ಮಾಡಿಸಬೇಕು. ಬ್ಲೌಸ್‌ ಹಾಗೂ ಲಂಗ ಡಿಸೈನ್‌ ಹೆವ್ವಿಯಾಗಿರಬಾರದು. ಟ್ರೆಡಿಷನಲ್‌ ಲುಕ್‌ ಬೇಕಿದ್ದಲ್ಲಿ ಬಾರ್ಡರ್‌ ಇರುವಂತದ್ದನ್ನು ಮಾತ್ರ ಚೂಸ್‌ ಮಾಡಬೇಕು.

Mega Shetty picture

ಸೀಸನ್‌ ದಾವಣಿ-ಲಂಗದ ಫ್ಯಾಬ್ರಿಕ್‌ಗೆ ಆದ್ಯತೆ

ಇನ್ನು, ಈ ಸಮ್ಮರ್‌ನಲ್ಲಿ ತೀರಾ ಸಿಂಪಲ್‌ ಲುಕ್‌ ಬೇಕಿದ್ದಲ್ಲಿ ಆದಷ್ಟೂ ಕಾಟನ್‌ ಫ್ಯಾಬ್ರಿಕ್‌ಗೆ ಆದ್ಯತೆ ನೀಡುವುದು ಉತ್ತಮ. ಇನ್ನು, ಇದಕ್ಕೆ ಪೂರಕ ಎಂಬಂತೆ. ಇದೀಗ ಪರಿಸರ ಸ್ನೇಹಿ ಫ್ಯಾಬ್ರಿಕ್‌ಗಳು ಆಗಮಿಸಿವೆ.

ಇದನ್ನೂ ಓದಿ: Chaitra Achar: ನೋಡುಗರ ಹುಬ್ಬೇರಿಸಿದ ನಟಿ ಚೈತ್ರಾ ಆಚಾರ್‌ ಪಾರದರ್ಶಕ ನಿಟ್‌ವೇರ್

ಸಿಂಪಲ್‌ ದಾವಣಿ

ಸಿಂಪಲ್‌ ದಾವಣಿ ಇಡೀ ಲುಕ್ಕನ್ನು ಮನಮೋಹಕವಾಗಿಸುವುದಲ್ಲದೇ, ತೀರಾ ಸಿಂಪಲ್‌ ಲುಕ್‌ ನೀಡುವುದು. ಮೇಘಾ ಶೆಟ್ಟಿಯ ದಾವಣಿಗಳು ಎಲ್ಲವೂ ಮಾನೋಕ್ರೋಮ್‌ ಶೇಡ್‌ನದ್ದಾಗಿವೆ ಹಾಗೂ ಸಿಂಪಲ್‌ ಹಾಗೂ ಸಾದಾ ಆಗಿವೆ. ಹಾಗಾಗಿ ಅವರಿಗೆ ಡಿಸೆಂಟ್‌ ಲುಕ್‌ ನೀಡಿವೆ ಎನ್ನುತ್ತಾರೆ ಡಿಸೈನರ್‌ ಲಕ್ಷ್ಮಿ ಕೃಷ್ಣ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Chaitra Achar: ನೋಡುಗರ ಹುಬ್ಬೇರಿಸಿದ ನಟಿ ಚೈತ್ರಾ ಆಚಾರ್‌ ಪಾರದರ್ಶಕ ನಿಟ್‌ವೇರ್

ಸದಾ ಟ್ರೆಡಿಷನಲ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ಚೈತ್ರಾ ಆಚಾರ್‌ (Chaitra Achar), ಈ ಬಿರು ಬಿಸಿಲಿನಲ್ಲೂ ಪಾರದರ್ಶಕ ನಿಟ್‌ವೇರ್‌ ಧರಿಸಿ ಬಿಂದಾಸ್‌ ಆಗಿ ಕಾಣಿಸಿಕೊಂಡಿರುವುದು, ನೋಡುಗರ ಹುಬ್ಬೇರಿದೆ. ಅರರೆ, ಇದ್ಯಾವ ಡ್ರೆಸ್‌? ಎಂದು ಯೋಚಿಸುತ್ತಿದ್ದೀರಾ? ಈ ಬಗ್ಗೆ ಇಲ್ಲಿದೆ ಡಿಟೇಲ್ಸ್.‌

VISTARANEWS.COM


on

Chaitra Achar
ಚಿತ್ರಗಳು: ಚೈತ್ರಾ ಜೆ. ಆಚಾರ್‌, ಸ್ಯಾಂಡಲ್‌ವುಡ್‌ ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸದಾ ಟ್ರೆಡಿಷನಲ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ಚೈತ್ರಾ ಆಚಾರ್‌ (Chaitra Achar), ಈ ಬಿರು ಬಿಸಿಲಿನಲ್ಲಿ, ಪಾರದರ್ಶಕ ನಿಟ್‌ವೇರ್‌ ಧರಿಸಿ ಬಿಂದಾಸ್‌ ಆಗಿ ಕಾಣಿಸಿಕೊಂಡು, ನೋಡುಗರ ಹುಬ್ಬೇರಿಸಿದ್ದಾರೆ.

Chaitra Achar pic

ಪ್ರಯೋಗಾತ್ಮಕ ಹಾಟ್‌ ಲುಕ್‌

“ಬಿಸಿಲು ಕಾಲದಲ್ಲಿ ತಾರೆಯರು ನಾನಾ ಬಗೆಯ ಸಮ್ಮರ್‌ವೇರ್‌ ಧರಿಸುವುದು ಸಾಮಾನ್ಯ. ಇದರೊಂದಿಗೆ ಟ್ರೆಂಡ್‌ ಸೆಟ್‌ ಮಾಡುವುದರೊಂದಿಗೆ ಸೀಸನ್‌ಗೆ ತಕ್ಕಂತೆ ಕಾಣಿಸಿಕೊಳ್ಳುತ್ತಾರೆ. ಇನ್ನು ಕೆಲವು ನಟಿಯರು, ಒಂದು ಹೆಜ್ಜೆ ಮುಂದೆ ಇಡುತ್ತಾರೆ. ಸೀಸನ್‌ನಲ್ಲಿ ಟ್ರೆಂಡಿಯಾಗಿರದ ಉಡುಪುಗಳನ್ನು ಚಿತ್ರ-ವಿಚಿತ್ರವಾಗಿ ಧರಿಸಿ, ನೋಡುಗರನ್ನು ಸೆಳೆಯುತ್ತಾರೆ. ಇದಕ್ಕೆ ಸೋಷಿಯಲ್‌ ಮೀಡಿಯಾ ಕೂಡ ಸಾಥ್‌ ನೀಡುತ್ತದೆ. ಈ ನಿಟ್ಟಿನಲ್ಲಿ ಇದೀಗ ಸ್ಯಾಂಡಲ್‌ವುಡ್‌ ನಟಿ ಚೈತ್ರಾ ಆಚಾರ್‌ ಸರದಿ. ಮೊದಲಿನಿಂದಲೂ ಬಹುತೇಕ ಟ್ರೆಡಿಷನಲ್‌ ಹಾಗೂ ಕೂಲ್‌ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರು, ಇದ್ದಕ್ಕಿಂದ್ದಂತೆ ಪಾರದರ್ಶಕ ನಿಟ್ಟೆಡ್‌ವೇರ್‌ ಧರಿಸಿದ್ದಾರೆ. ಎಲ್ಲದಕ್ಕಿಂತ ಹುಬ್ಬೇರಿಸುವ ವಿಚಾರವೆಂದರೇ, ಅವರು ಈ ನಿಟ್ಟೇಡ್‌ವೇರ್‌ನೊಳಗೆ ಧರಿಸಿರುವ ಇನ್ನರ್‌ವೇರ್ಸ್‌ ಹೈ ಲೈಟಾಗಿರುವುದು. ಇದು ಬೇಕಂತಲೇ ಮಾಡಿರುವ ಸ್ಟೈಲಿಂಗ್‌. ಸಮ್ಮರ್‌ ಸ್ಟೈಲಿಂಗ್‌ ಎನ್ನಲು ಸಾಧ್ಯವಿಲ್ಲ! ಯಾಕೆಂದರೇ, ಅವರು ಧರಿಸಿರುವ ಟ್ರಾನ್ಸಪರೆಂಟ್‌ ಫುಲ್‌ಓವರ್ನಂತಹ ನಿಟ್ಟೆಡ್‌ವೇರ್‌ ಈ ಸೀಸನ್‌ನ ಔಟ್‌ಫಿಟ್‌ ಅಲ್ಲವೇ ಅಲ್ಲ. ಹಾಗಾಗಿ ಇದೊಂದು ಪ್ರಯೋಗಾತ್ಮಕ ಸ್ಟೈಲಿಂಗ್‌” ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ವಿದ್ಯಾ. ಅವರ ಪ್ರಕಾರ, ಇದೊಂದು ಮಿಕ್ಸ್‌ ಮ್ಯಾಚ್‌ ಇಂಡಿಪೆಂಟೆಂಡ್‌ ಸ್ಟೈಲಿಂಗ್‌. ಇದಕ್ಕಾಗಿ ಏನೂ ವೆಚ್ಚ ಮಾಡದೇ ಬಿಂಬಿಸಿಕೊಂಡಿರುವ ಲುಕ್‌ ಎನ್ನುತ್ತಾರೆ.

Chaitra Achar photo

ಏನಿದು ನಿಟ್ಟೆಡ್‌ವೇರ್‌ ಮೆಶ್‌ ಲುಕ್‌

ಮೆಶ್‌ ಲುಕ್‌ ಎಂದರೇ, ಪಾರದರ್ಶಕ ಉಡುಪಿನ ಲುಕ್‌. ಇದು ಯಾವುದೇ ಜಾಲರಿಯಂತಹ ಉಡುಪು ಧರಿಸಿದಾಗ ಹೇಳಲಾಗುತ್ತದೆ. ಅದು ಕೀ ಹೋಲ್‌, ಲೇಸ್‌ ಕಟೌಟ್‌ ಸೇರಿದಂತೆ ಜಾಲರಿಯಂತಹ ಯಾವುದೇ ಉಡುಪಾಗಬಹುದು. ನಿಟ್ಟೆಡ್ವೇರ್‌ ಎಂದಾಗ ಎಲ್ಲರಿಗೂ ತೋಚುವುದು ಚಳಿಗಾಲದಲ್ಲಿ ಧರಿಸುವ ಪುಲ್‌ಓವರ್‌ನಂತ ಸ್ವೆಟರ್ಗಳು. ಉಡುಪಿನ ಮೇಲೆ ಧರಿಸುವ ಉಲ್ಲನ್‌ನಿಂದ ಸಿದ್ಧಪಡಿಸಲಾದ ತೆಳುವಾದ ಮೇಲುಡುಗೆಗಳಿವು. ಇದೀಗ ಇದನ್ನೇ ನಟಿ ಚೈತ್ರಾ ಆಚಾರ್‌ ತಮ್ಮ ಸ್ಟೈಲಿಂಗ್‌ನಲ್ಲಿ ಸೇರಿಸಿಕೊಂಡು, ಇನ್ನರ್‌ವೇರ್‌ ಮೇಲೆ ಧರಿಸಿ, ಹಾಟ್‌ ಲುಕ್‌ಗೆ ನಾಂದಿ ಹಾಡಿದ್ದಾರೆ.

Chaitra Achar image

ಯಾರಿದು ಚೈತ್ರಾ ಆಚಾರ್‌

ಮಾಹಿರಾ ಚಿತ್ರದ ಮೂಲಕ ನಟನೆಗೆ ಕಾಲಿಟ್ಟ ಚೈತ್ರಾ ಆಚಾರ್‌, ಸಪ್ತ ಸಾಗರಾದಾಚೆ, ಬ್ಲಿಂಕ್‌, ಉತ್ತರಾಕಾಂಡ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದು, ಇವರು ಗಾಯಕಿ ಕೂಡ.

Chaitra Achar picture

ಚೈತ್ರಾ ಹಾಟ್‌ ಲುಕ್‌

ಸದಾ ಒಂದಲ್ಲ ಒಂದು ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಚೈತ್ರಾ ಆಚಾರ್‌ರ ಈ ಹೊಸ ಪ್ರಯೋಗಾತ್ಮಕ ಹಾಟ್‌ ಲುಕ್‌, ಪ್ರಯೋಗಾತ್ಮಕ ಬಿಂದಾಸ್‌ ಸ್ಟೈಲಿಂಗ್‌ಗೆ ಸೇರಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Saree Fashion: ಸೀರೆಯ ಹೊಸ ಟ್ರೆಂಡ್‌ ಬಗ್ಗೆ ರ‍್ಯಾಪರ್‌ ಇಶಾನಿಯ ವ್ಯಾಖ್ಯಾನ ಇದು!

Continue Reading

ಫ್ಯಾಷನ್

Saree Fashion: ಸೀರೆಯ ಹೊಸ ಟ್ರೆಂಡ್‌ ಬಗ್ಗೆ ರ‍್ಯಾಪರ್‌ ಇಶಾನಿಯ ವ್ಯಾಖ್ಯಾನ ಇದು!

ಕನ್ನಡ ರ‍್ಯಾಪರ್‌, ಬಿಗ್‌ ಬಾಸ್‌ ಕಂಟೆಸ್ಟಂಟ್‌ ಇಶಾನಿ ರಫಲ್‌ ಸೀರೆಯಲ್ಲಿ ಆಕರ್ಷಕವಾಗಿ (Saree Fashion) ಕಾಣಿಸಿಕೊಂಡಿದ್ದಾರೆ. ಈ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ಈ ಶೈಲಿಯ ಸೀರೆ ಯುವತಿಯರನ್ನು ಮಾತ್ರವಲ್ಲ, ಎಲ್ಲಾ ವರ್ಗದ ಮಹಿಳೆಯರನ್ನು ಕೂಡ ಸೆಳೆದಿದೆ. ಸದ್ಯ ಟ್ರೆಂಡಿಯಾಗಿರುವ ಈ ಶೈಲಿಯ ಸೀರೆಯ ಬಗ್ಗೆ ಖುದ್ದು ಅವರೇ ಮಾತನಾಡಿದ್ದಾರೆ. ಏನಿದು ರಫಲ್‌ ಸೀರೆ ಎಂಬುದರ ಬಗ್ಗೆ ಡಿಸೈನರ್‌ ಕೂಡ ವಿವರಿಸಿದ್ದಾರೆ.

VISTARANEWS.COM


on

Saree Fashion
ಚಿತ್ರಗಳು: ಇಶಾನಿ, ಕನ್ನಡ ರ‍್ಯಾಪರ್‌, ಬಿಗ್‌ಬಾಸ್‌ ಸ್ಪರ್ಧಿ, ಫೋಟೋಗ್ರಾಫಿ: ಅರುಣ್‌ ಕುಮಾರ್‌ ಪೋಟ್ರೈಟ್ಸ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕನ್ನಡ ರ‍್ಯಾಪರ್‌, ಬಿಗ್‌ ಬಾಸ್‌ ಕಂಟೆಸ್ಟಂಟ್‌ ಇಶಾನಿ ವಿಭಿನ್ನ ಡಿಸೈನರ್‌ ರಫಲ್‌ ಸೀರೆಯಲ್ಲಿ (Saree Fashion) ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ಈ ಶೈಲಿಯ ಸೀರೆ ಯುವತಿಯರನ್ನು ಮಾತ್ರವಲ್ಲ, ಎಲ್ಲಾ ವರ್ಗದ ಮಹಿಳೆಯರನ್ನು ಕೂಡ ಸೆಳೆದಿದೆ.

Saree Fashion

ಇಶಾನಿ ನೆವಿ ಬ್ಲ್ಯೂ ರಫಲ್‌ ಸೀರೆ ಪ್ರೇಮ

ಬಿಗ್‌ಬಾಸ್‌ 10ರಲ್ಲಿ ಪಾಲ್ಗೊಂಡಿದ್ದ ಇಶಾನಿ, ತಮ್ಮ ಕನ್ನಡ ರ‍್ಯಾಪರ್‌ ಹಾಡುಗಳ ಮೂಲಕ ನಾಡಿಗೆ ಚಿರಪರಿಚಿತರು. ಇದರೊಂದಿಗೆ ಇದೀಗ ಮತ್ತೊಂದು ಕಾಮಿಡಿ ರಿಯಾಲಿಟಿ ಶೋ ಮೂಲಕ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ ಭಾಷೆಯನ್ನು ಡಿಫರೆಂಟಾಗಿ ಮಾತನಾಡುವ ಇವರು, ತಮ್ಮ ಕ್ರಿಯೇಟಿವ್‌ ಕನ್ನಡ ಹಾಡುಗಳ ಆಲ್ಬಂ ಮೂಲಕ ಆಗಾಗ್ಗೆ ಅಭಿಮಾನಿಗಳನ್ನು ಸೆಳೆಯುತ್ತಿರುತ್ತಾರೆ. ಇವುಗಳೆಲ್ಲದರ ಮಧ್ಯೆ ನಾನಾ ಫೋಟೋಶೂಟ್‌ಗಳ ಮೂಲಕ ಕಾಣಿಸಿಕೊಳ್ಳುತ್ತಿರುತ್ತಾರೆ. ಇದಕ್ಕೆ ಪೂರಕ ಎಂಬಂತೆ, ಇದೀಗ ವಿಭಿನ್ನ ಡಿಸೈನರ್‌ವೇರ್‌ ನೆವಿ ಬ್ಲ್ಯೂ ಶೇಡ್‌ನ ಈ ರಫಲ್‌ ಸೀರೆಯಲ್ಲಿ ಮಿಂಚಿದ್ದಾರೆ. ಇಶಾನಿ ಉಟ್ಟಿರುವ ಈ ನೀಲಿ ಸೀರೆ, ರಫಲ್‌ ಸೀರೆಯಾಗಿದ್ದು, ಅದಕ್ಕೆ ಅವರು ಧರಿಸಿರುವ ಸ್ಟೋನ್‌ನಿಂದ ಸಿಂಗಾರಗೊಂಡಿರುವ ಡಿಸೈನರ್‌ ಸ್ಲಿವ್‌ಲೆಸ್‌ ಬ್ಲೌಸ್‌ ಅವರನ್ನು ಮತ್ತಷ್ಟು ಮನಮೋಹಕವಾಗಿ ಬಿಂಬಿಸಿದೆ. ಒಟ್ಟಿನಲ್ಲಿ, ಇಶಾನಿಯ ಈ ಸೀರೆಯಲ್ಲಿನ ಲುಕ್‌ ಸೀರೆ ಪ್ರಿಯರನ್ನು ಬರಸೆಳೆದಿದೆ ಎನ್ನಬಹುದು.

Saree Fashion

ಇಶಾನಿ ಸೀರೆ ಫ್ಯಾಷನ್‌ ಟಾಕ್‌

“ನನಗಂತೂ ಈ ರಫಲ್‌ ಸೀರೆ ಉಟ್ಟಾಗ ಉಲ್ಲಾಸ ಹೆಚ್ಚಾಯಿತು. ಸಾಮಾನ್ಯ ಸೀರೆಗಿಂತ ವಿಭಿನ್ನವಾಗಿ ಕಾಣಿಸಿಕೊಳ್ಳಲು ಸಾಧ್ಯವಾಯಿತು. ಇನ್ನು ಈ ಸೀರೆಗೆ ನಾನು ಧರಿಸಿರುವ ಡಿಸಿಲ್ವರ್‌ ಜ್ಯುವೆಲರಿಗಳು ಹಾಗೂ ದಿವ್ಯಾ ನಾಗರಾಜ್‌ರ ಮೇಕಪ್‌ ಮತ್ತು ಹೇರ್‌ಸ್ಟೈಲ್‌ ಮನಮೋಹಕ ಟಚ್‌ ನೀಡಿವೆ. ಒಟ್ಟಾರೆ, ಈ ಸೀರೆ ಲುಕ್‌ ಎಲ್ಲರನ್ನೂ ಸೆಳೆಯುವಲ್ಲಿ ಯಶಸ್ವಿಯಾಗಿದೆ” ಎನ್ನುವ ಇಶಾನಿಗೆ ಈ ಸೀರೆಯ ಸ್ಟೈಲಿಂಗ್‌ ಬಹಳ ಇಷ್ಟವಾಗಿದೆಯಂತೆ.

Saree Fashion

ಸೆಲೆಬ್ರೆಟಿ ಡಿಸೈನರ್‌ ಅಶ್ವಿನಿ ಡಿಸೈನರ್‌ ಸೀರೆ

ಇನ್ನು, ಸೆಲೆಬ್ರೆಟಿ ಡಿಸೈನರ್‌ ಅಶ್ವಿನಿ, ಇಶಾನಿಯ ಈ ಡಿಸೈನರ್‌ ಸೀರೆ ಡಿಸೈನ್‌ ಮಾಡಿದ್ದು, ಅವರಿಗೊಪ್ಪುವ ಸ್ಟೈಲಿಂಗ್‌ಗೆ ತಕ್ಕಂತೆ ರೂಪಿಸಿದ್ದಾರೆ. ಅಂದಹಾಗೆ, ಇದು ಸಿಂಪಲ್‌ ಆಗಿ ಧರಿಸುವ ರೆಡಿ ರಫಲ್‌ ಸೀರೆಯಾಗಿದೆ. ಉಡುವ ಅಥವಾ ಡ್ರೇಪಿಂಗ್‌ನ ತಲೆ ಬಿಸಿಯಿಲ್ಲ! ಈ ಸಿಂಪಲ್‌ ಸೀರೆಗೆ ಆಕರ್ಷಕವಾದ ಬ್ಲೌಸ್‌ ಮ್ಯಾಚ್‌ ಮಾಡಲಾಗಿದೆ. ಸ್ಟೋನ್‌ಗಳಿಂದ ಸಿಂಗಾರಗೊಂಡಿರುವ ಈ ಹ್ಯಾಂಡ್‌ವರ್ಕ್‌ ಇರುವಂತಹ ಶೋಲ್ಡರ್‌ಲೆಸ್‌ ಡಿಸೈನರ್‌ ಬ್ಲೌಸ್‌ ಇಂಡೋ-ವೆಸ್ಟರ್ನ್‌ ಲುಕ್‌ ನೀಡಿದೆ. “ಇಶಾನಿಗೆ ಡಿಸೈನ್‌ ಮಾಡಲಾದ ಈ ಡಿಸೈನರ್‌ ರಫಲ್‌ ಸೀರೆ ಯೂನಿಕ್‌ ಸ್ಟೈಲ್‌ ಲುಕ್‌ ನೀಡಿದ್ದು, ಅವರ ಇಂಡೋ-ವೆಸ್ಟರ್ನ್‌ ಲುಕ್‌ಗೆ ಸಾಥ್‌ ನೀಡಿದೆ” ಎನ್ನುತ್ತಾರೆ ಸೆಲೆಬ್ರೆಟಿ ಡಿಸೈನರ್‌ ಅಶ್ವಿನಿ.

Saree Fashion

ರಫಲ್‌ ಸೀರೆಯ ಹೈಲೈಟ್ಸ್‌

  • ಸೀಸನ್‌ಗೆ ತಕ್ಕಂತಿರುವ ಈ ಸೀರೆ ಆಕರ್ಷಕ ಲುಕ್‌ ನೀಡುತ್ತದೆ.
  • ಹೆಚ್ಚು ಜ್ಯುವೆಲರಿ ಧರಿಸುವ ಅಗತ್ಯವಿರುವುದಿಲ್ಲ.
  • ಇಂಡೋ-ವೆಸ್ಟರ್ನ್‌ ಲುಕ್‌ ನೀಡುವುದು ಗ್ಯಾರಂಟಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Actress Summer Fashion: ಬಾಲಿವುಡ್‌ನವರನ್ನು ಮೀರಿಸಿದ ನಟಿ ಶಿಲ್ಪಾ ಮಂಜುನಾಥ್‌ ಪೂಲ್‌ಸೈಡ್‌ ಹಾಟ್‌ ಲುಕ್‌!

Continue Reading

ಫ್ಯಾಷನ್

Wedding Eye Makeup Tips: ಮದುವೆಯಲ್ಲಿ ಮದುಮಗಳ ಐ ಮೇಕಪ್‌ಗೆ 5 ಸಿಂಪಲ್‌ ಸೂತ್ರ

ಬ್ಯೂಟಿ ಎಕ್ಸ್‌ಫರ್ಟ್ಸ್‌ ಯಾವುದೋ ವಿಡಿಯೋ, ಫೋಟೋಗಳನ್ನು ತೋರಿಸಿ ಈ ರೀತಿಯ ಮೇಕಪ್‌ (Wedding Eye Makeup Tips) ಮಾಡುತ್ತೇವೆ ಎಂದು ಹೇಳಿ, ಅದು ನಿಮಗೆ ಹೊಂದುತ್ತದೆ ಎಂದು ಒಪ್ಪಿಸಿ, ಕೆಲವೊಮ್ಮೆ ಕೊನೆಗೆ ಮದುವೆಯ ದಿನ ಬದಲಿಸುತ್ತಾರೆ. ಇದು ಮದುಮಗಳ ಇಡೀ ಲುಕ್ಕನ್ನು ಹಾಳು ಮಾಡಬಹುದು. ಮದುಮಗಳ ಐ ಮೇಕಪ್‌ ಮದುವೆಯಲ್ಲಿ ಎಲ್ಲರ ಗಮನ ಸೆಳೆಯುವಂತಿರಬೇಕು. ಇದಕ್ಕಾಗಿ ಏನು ಪಾಲಿಸಬೇಕು? ಏನು ಪಾಲಿಸಬಾರದು ಎಂಬುದರ ಬಗ್ಗೆ ಮೇಕಪ್‌ ಪರಿಣತರಾದ ಮಂಗಲಾ ಇಲ್ಲಿ ಸಿಂಪಲ್ಲಾಗಿ ವಿವರಿಸಿದ್ದಾರೆ.

VISTARANEWS.COM


on

Wedding Eye Makeup Tips
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮದುಮಗಳ ಐ ಮೇಕಪ್‌ (Wedding Eye Makeup Tips) ಮದುವೆಯಲ್ಲಿ ಎಲ್ಲರ ಗಮನ ಸೆಳೆಯುವಂತಿರಬೇಕು. ಅದನ್ನು ಬಿಟ್ಟು ಇಡೀ ಲುಕ್ಕನ್ನು ಓವರ್‌ಟೇಕ್‌ ಮಾಡಬಾರದು. ನೋಡುಗರಿಗೆ ಆಭಾಸ ಎಂದೆನಿಸುವಂತಿರಬಾರದು. ಎಲ್ಲದಕ್ಕಿಂತ ಹೆಚ್ಚಾಗಿ ಪಾರ್ಟಿ ಲುಕ್‌ ನೀಡಬಾರದು ಎನ್ನುತ್ತಾರೆ ಮೇಕಪ್‌ ಎಕ್ಸ್ಪರ್ಟ್ಸ್‌ ಮಂಗಲಾ. “ಮದುವೆಯಲ್ಲಿ ಮೇಕಪ್‌ಗಾಗಿ ಸಾಕಷ್ಟು ಹೆಣ್ಣು ಮಕ್ಕಳು ಹಣ ಸುರಿಯುತ್ತಾರೆ. ಬ್ಯೂಟಿ ಎಕ್ಸ್‌ಫರ್ಟ್ಸ್‌ ಕೂಡ ಯಾವುದೋ ವಿಡಿಯೋ ಹಾಗೂ ಫೋಟೋಗಳನ್ನು ತೋರಿಸಿ ಈ ರೀತಿಯ ಮೇಕಪ್‌ ಮಾಡುತ್ತೇವೆ ಎಂದು ಹೇಳಿ, ಅದು ನಿಮಗೆ ಹೊಂದುತ್ತದೆ ಎಂದು ಒಪ್ಪಿಸಿ, ಕೆಲವೊಮ್ಮೆ ಕೊನೆಗೆ ಮದುವೆಯ ದಿನ ಬದಲಿಸುತ್ತಾರೆ. ಇದು ಮದುಮಗಳ ಇಡೀ ಲುಕ್ಕನ್ನು ಹಾಳು ಮಾಡಬಹುದು. ಅಲ್ಲದೇ ಮದುವೆಯ ಮೇಕಪ್‌ ಬದಲು ಇತರೇ ಲುಕ್‌ ನೀಡಬಹುದು. ಅದಕ್ಕಾಗಿ ಮದುವೆಯಾಗುವ ಪ್ರತಿ ಹೆಣ್ಣುಮಕ್ಕಳು ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯ. ಮೊದಲೇ ಬ್ಯೂಟಿ ಎಕ್ಸ್‌ಫರ್ಟ್ಸ್‌ಗಳ ಬಳಿ ಮಾತನಾಡಿಕೊಂಡು ಡಿಸೈಡ್‌ ಮಾಡುವುದು, ಟ್ರಯಲ್‌ ಮಾಡಿ ನೋಡುವುದು ಉತ್ತಮ” ಎನ್ನುತ್ತಾರೆ ಸೌಂದರ್ಯ ಪರಿಣಿತರು.

Wedding Eye Makeup

ಸೀರೆ/ಔಟ್‌ಫಿಟ್‌ಗೆ ಮ್ಯಾಚ್‌ ಆಗುವಂತಿರಲಿ

ಮದು ಮಗಳು ಧರಿಸುವ ಲೆಹೆಂಗಾ, ಗೌನ್‌ ಅಥವಾ ಮಹೂರ್ತದ ಸೀರೆಗೆ ಮದುಮಗಳ ಐ ಮೇಕಪ್‌ ಮ್ಯಾಚ್‌ ಆಗುವಂತಿರಬೇಕು. ಹಾಗೆಂದು ಅಭಾಸ ಹುಟ್ಟಿಸುವಂತಹ ಶೇಡ್‌ಗಳ ಬಳಕೆ ಬೇಡ. ತೀರಾ ಡಿಟ್ಟು ಡಿಟ್‌ ಮ್ಯಾಚಿಂಗ್‌ ಮಾಡುವುದೂ ಕೂಡ ಬೇಡ. ನೋಡಲು ವಿಚಿತ್ರವಾಗಿ ಕಾಣಿಸಬಹುದು. ತಿಳಿಯಾದ ಶೇಡ್ಸ್‌ ಆಕರ್ಷಕವಾಗಿ ಕಾಣಿಸುವುದು.

ಐ ಮೇಕಪ್‌ ಹಿತ ಮಿತವಾಗಿರಲಿ

ಮದುಮಗಳ ಐ ಮೇಕಪ್‌ ನೋಡಲು ಹಿತ ಮಿತವಾಗಿರಬೇಕು. ಯಾಕೆಂದರೇ, ಹೆಚ್ಚಾದರೂ ಅದು ಪಾರ್ಟಿ ಲುಕ್‌ ನೀಡಬಹುದು. ಕಡಿಮೆಯಾದರೂ ಪರವಾಗಿಲ್ಲ. ಆದಷ್ಟೂ ನೋಡುಗರಿಗೆ ಹಿತವೆನಿಸುವ ಶೇಡ್‌ಗಳ ಬಳಕೆ ಮಾಡಲು ಬ್ಯೂಟಿ ಎಕ್ಸ್‌ಫರ್ಟ್ಸ್‌ಗೆ ತಿಳಿಸಿ. ಲೈಟ್‌ ಶೇಡ್‌ಗಳ ಬಳಕೆ ಉತ್ತಮ. ಕಂಗಳ ಸೌಂದಯ ಕುಂದಿಸುವಂತಹ ಡಾರ್ಕ್‌ ಶೇಡ್‌ ಬಳಕೆ ಬೇಡ, ಉದಾಹರಣೆಗೆ ಬ್ಲ್ಯೂ, ಹಸಿರು, ಪಿಂಕ್‌ ಹೀಗೆ ಇವುಗಳ ಬಳಕೆ ಹೆಚ್ಚಾಗದಿರಲಿ. ಇನ್ನು, ಕಾಜಲ್‌, ಐ ಲೈನರ್‌ ತೆಳುವಾಗಿ ಹಚ್ಚುವುದು ಉತ್ತಮ.

Wedding Eye Makeup

ಸ್ಮಡ್ಜ್‌ ಪ್ರೂಫ್‌ ಐ ಮೇಕಪ್‌ಗೆ ಆದ್ಯತೆ

ಮದುವೆಯಲ್ಲಿ ಮದು ಮಗಳು ಆದಷ್ಟೂ ಸ್ಮಡ್ಜ್‌ ಫ್ರೂಫ್‌ ಐ ಮೇಕಪ್‌ಗೆ ಆದ್ಯತೆ ನೀಡುವುದು ಉತ್ತಮ. ಅದರಲ್ಲೂ ಮಹೂರ್ತದ ನಂತರ ತವರು ಮನೆಯವರ ವಿದಾಯದ ಸಮಯದಲ್ಲಿ ಕಣ್ಣಿರು ಹಾಕಿದಾಗ, ಕಣ್ಣಿನ ಮೇಕಪ್‌ ಹರಡಿ ನೋಡಲು ವಿಚಿತ್ರವಾಗಿ ಕಾಣಿಸಬಹುದು. ಹಾಗಾಗಿ ಆ ದಿನ ವಾಟರ್‌ ಪ್ರೂಫ್‌ ಮತ್ತು ಸ್ಮಡ್ಜ್‌ ಫ್ರೂಫ್‌ ಐ ಮೇಕಪ್‌ಗೆ ಪ್ರಾಮುಖ್ಯತೆ ನೀಡುವುದು ಬೆಸ್ಟ್.‌

ಕಂಗಳು ಅರಳಿದಂತಹ ಲುಕ್‌

ಯಾವುದೇ ಕಾರಣಕ್ಕೂ ಕಂಗಳು ಚಿಕ್ಕದಾಗಿ ಕಾಣಿಸುವಂತಹ ಐ ಮೇಕಪ್‌ ಬೇಡ. ಯಾಕೆಂದರೇ, ಇದು ಇಡೀ ಮುಖದ ಲುಕ್‌ ಬದಲಿಸುತ್ತದೆ. ಹಾಗಾಗಿ ಆದಷ್ಟೂ ಕಣ್ಣುಗಳ ಅಗಲವಾಗಿ ಕಾಣಿಸುವಂತಹ ಮೇಕಪ್‌ಗೆ ಸೈ ಎನ್ನಿ. ಮುಖದ ಮೇಕಪ್‌ಗೆ ಹೊಂದುವಂತಿರಲಿ.

Wedding Eye Makeup

ಲೆನ್ಸ್‌ ಹಾಕಿದ ಐ ಮೇಕಪ್‌

ಕೆಲವು ಹೆಣ್ಣುಮಕ್ಕಳು ಡಿಫರೆಂಟ್‌ ಲುಕ್‌ ಹಾಗೂ ಸೆಲೆಬ್ರೆಟಿ ಲುಕ್‌ಗಾಗಿ ಐ ಬಾಲ್‌ ಬಣ್ಣ ಬದಲಿಸಲು ಲೆನ್ಸ್‌ ಹಾಕುತ್ತಾರೆ. ಕೆಲವೊಮ್ಮೆ ಇದು ಹೊಂದುವುದಿಲ್ಲ. ಇಂತಹವರು ಆದಷ್ಟೂ ಮೊದಲೇ ಪ್ರಯೋಗಾತ್ಮಕವಾಗಿ ಈ ಮೇಕಪ್‌ ಮಾಡಿ ನೋಡಿ. ಮುಖಕ್ಕೆ ಮ್ಯಾಚ್‌ ಆದರೆ ಮಾತ್ರ ಮುಂದುವರೆಯಿರಿ. ಲೆನ್ಸ್‌ ತೆಗೆಯುವಾಗ, ಹಾಕುವಾಗ ಸಾವಧಾನವಿರಲಿ. ಇಲ್ಲವಾದಲ್ಲಿ, ಕಣ್ಣು ಕೆಂಪಾಗಾಗಬಹುದು.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Actress Summer Fashion: ಬಾಲಿವುಡ್‌ನವರನ್ನು ಮೀರಿಸಿದ ನಟಿ ಶಿಲ್ಪಾ ಮಂಜುನಾಥ್‌ ಪೂಲ್‌ಸೈಡ್‌ ಹಾಟ್‌ ಲುಕ್‌!

Continue Reading
Advertisement
IPL 2024
ಕ್ರೀಡೆ2 mins ago

IPL 2024 : ಐಪಿಎಲ್​ ಮಧ್ಯದಲ್ಲಿಯೇ ಕೆಕೆಆರ್​ ತಂಡ ತೊರೆದ ಆರಂಭಿಕ ಆಟಗಾರ

assault Case
ಬೆಂಗಳೂರು4 mins ago

Assault Case : ಪೊಲೀಸ್‌ ಸ್ಟೇಷನ್‌ನಲ್ಲೇ ಇನ್‌ಸ್ಪೆಕ್ಟರ್‌ ಕಪಾಳಕ್ಕೆ ಹೊಡೆದ ಮಹಿಳೆ

Prajwal Revanna Case Centre says it has no power to revoke Prajwal diplomatic passport Big relief for MP
ಕರ್ನಾಟಕ9 mins ago

Prajwal Revanna Case: ಪ್ರಜ್ವಲ್‌ರ ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ ರದ್ದು ಮಾಡೋ ಅಧಿಕಾರ ನಮಗಿಲ್ಲ ಎಂದ ಕೇಂದ್ರ! ಸಂಸದನಿಗೆ ಬಿಗ್‌ ರಿಲೀಫ್‌?

Virat kohli
ಪ್ರಮುಖ ಸುದ್ದಿ19 mins ago

Virat Kohli : ಅಂಕಿ, ಅಂಶ ಪಂಡಿತರೇ ಬಾಯ್ಮುಚ್ಚಿ; ಕೊಹ್ಲಿಯನ್ನು ಟೀಕಿಸಿದವರ ಬೆಂಡೆತ್ತಿದ ಡಿ’ವಿಲಿಯರ್ಸ್​​

Brij Bhushan Singh
ದೇಶ20 mins ago

ಲೈಂಗಿಕ ಕಿರುಕುಳ ಆರೋಪಿ ಬ್ರಿಜ್‌ ಭೂಷಣ್‌ಗಿಲ್ಲ ಟಿಕೆಟ್‌; ಮಗನಿಗೆ ಮಣೆ, ರಾಯ್‌ಬರೇಲಿಗೂ ಅಭ್ಯರ್ಥಿ ಘೋಷಿಸಿದ ಬಿಜೆಪಿ

Murder case in Bengaluru
ಬೆಂಗಳೂರು30 mins ago

Murder Case : ನಡುರಸ್ತೆಯಲ್ಲೆ ಪತ್ನಿಗೆ ಚಾಕು ಇರಿದು ಕೊಂದ ಪತಿ

Prajwal Revanna Case Locked up as Prajwal arrives at Bengaluru airport
ಹಾಸನ31 mins ago

Prajwal Revanna Case: ಬೆಂಗಳೂರು ಏರ್‌ಪೋರ್ಟ್‌ಗೆ ಪ್ರಜ್ವಲ್‌ ಬರುತ್ತಿದ್ದಂತೆ ಲಾಕ್‌! ಏನಿದು SIT ಸೂಚನೆ?

Andre Russell
ಕ್ರಿಕೆಟ್43 mins ago

Andre Russell : ಬ್ರಾವೊ ರೀತಿಯಲ್ಲೇ ಬಾಲಿವುಡ್​ಗೆ ಎಂಟ್ರಿ ಪಡೆದ ಆ್ಯಂಡ್ರೆ ರಸೆಲ್​

Jolly LLB 3
ಸಿನಿಮಾ44 mins ago

Jolly LLB 3: ಬರ್ತಿದೆ ಅಕ್ಷಯ್‌ ಕುಮಾರ್‌ ನಟನೆಯ ಜಾಲಿ ಎಲ್‌ಎಲ್‌ಬಿ 3; ಈ ಬಾರಿ ಇದೆ ಸರ್‌ಪ್ರೈಸ್!

Davanagere lok sabha constituency bjp candidate gayatri siddeshwar election campaign in harapanahalli
ರಾಜಕೀಯ46 mins ago

Lok Sabha Election: ಹರಪನಹಳ್ಳಿಯಲ್ಲಿ ರೋಡ್‌ ಶೋ ನಡೆಸಿದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ13 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌