ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ಯಾಂಡಲ್ವುಡ್ ನಟಿ ಅದಿತಿ ಪ್ರಭುದೇವ ಸ್ವಿಟ್ಜರ್ಲ್ಯಾಂಡ್ನ ಸ್ಟ್ರೀಟ್ ಸ್ಟೈಲ್ ಟ್ರಾವೆಲ್ ಫ್ಯಾಷನ್ಗೆ (Star Travel Fashion) ಸೈ ಎಂದಿದ್ದಾರೆ. ಸಿಂಪಲ್ ಶಾರ್ಟ್ ಫ್ಲೋರಲ್ ಫ್ರಾಕ್ ಇದಕ್ಕೊಂದುವಂತಹ ಎರಡು ಪೋನಿಟೇಲ್ನ ಹೇರ್ಸ್ಟೈಲ್ ಜೊತೆಗೆ ಬ್ಯಾಕ್ಪ್ಯಾಕ್ನೊಂದಿಗೆ ಟ್ರಾವೆಲ್ ಲುಕ್ನಲ್ಲಿ ಕಾಲೇಜು ಹುಡುಗಿಯಂತೆ ಕಾಣಿಸಿಕೊಂಡಿದ್ದಾರೆ. ಇವರ ಈ ಲುಕ್ ಬಗ್ಗೆ ಫ್ಯಾಷನ್ ವಿಮರ್ಶಕರು ಮಾತನಾಡಿದ್ದು, ಸ್ಟಾರ್ ಯಂಗ್ ಲುಕ್ ಟ್ರಾವೆಲ್ ಫ್ಯಾಷನ್ ಎಂದು ವಿಮರ್ಶಿಸಿದ್ದಾರೆ.
ಲೇಯರ್ ಲುಕ್ ಬದಲು ಸಿಂಪಲ್ ಲುಕ್
ಅಂದಹಾಗೆ, ಸ್ವಿಟ್ಜರ್ಲ್ಯಾಂಡ್ನಲ್ಲಿ ಭೇಟಿ ನೀಡುವ ಬಹುತೇಕ ಪ್ರವಾಸಿಗರೆಲ್ಲರೂ ಲೇಯರ್ ಲುಕ್ಗೆ ಮೊರೆ ಹೋಗುತ್ತಾರೆ. ಆ ಮಟ್ಟಿಗೆ ಅಲ್ಲಿನ ವಾತಾವರಣ ಕೂಲಾಗಿರುತ್ತದೆ. ಜೊತೆಗೆ ಸ್ನೋ ಫಾಲ್ ಆಗುತ್ತಲೇ ಇರುತ್ತದೆ. ತಡೆಯಲಾರದಷ್ಟು ಕೊರೆಯುವ ಚಳಿ ಇರುತ್ತದೆ. ಆದರೆ, ನಟಿ ಅದಿತಿ ಪ್ರಭುದೇವ ಮಾತ್ರ ಸಿಂಪಲ್ ಫ್ರಾಕ್ನಲ್ಲಿ ಕಾಣಿಸಿಕೊಂಡಿರುವುದನ್ನು ನೋಡಿದರೇ ಸದ್ಯಕ್ಕೆ ಅಲ್ಲಿ ಚಳಿಯ ಹಾವಳಿ ಇಲ್ಲ, ಹವಾಮಾನ ಬದಲಾಗಿದೆ ಎಂಬಂತಿದೆ. ಬಿಸಿಲು ಇಣುಕಿದೆ. ಹಾಗಾಗಿ ಅವರು ಫ್ಲೋರಲ್ ಕಾಟನ್ ಫ್ರಾಕ್ ಧರಿಸಿದ್ದಾರೆ. ಇನ್ನು ಇದಕ್ಕೆ ಪೂರಕ ಎಂಬಂತೆ, ವೈಟ್ ಬೆಲ್ಟ್, ಮ್ಯಾಚಿಂಗ್ ಆಗುವ ವೈಟ್ ಶೂ, ನೆಕ್ಚೈನ್ ಧರಿಸಿದ್ದಾರೆ. ಇನ್ನು ಅವರ 2 ಪೋನಿಟೇಲ್ ಹೇರ್ಸ್ಟೈಲ್ ಕಂಪ್ಲೀಟ್ ಇಮೇಜ್ಗೆ ಹೊಸ ಲುಕ್ ನೀಡಿದ್ದು, ಯಂಗ್ ಲುಕ್ ನೀಡಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಮಿನಿಮಲ್ ಆಕ್ಸೆಸರೀಸ್ನಲ್ಲೂ ಅವರು ಆಕರ್ಷಕವಾಗಿ ಕಾಣಿಸುತ್ತಿರುವುದು ಅವರ ಸೌಂದರ್ಯಕ್ಕೆ ಸಾಕ್ಷಿ ಎನ್ನುತ್ತಾರೆ ಸ್ಟೈಲಿಸ್ಟ್ಗಳು.
ಬ್ಯಾಕ್ಪ್ಯಾಕ್ ಲುಕ್
ಟ್ರಾವೆಲ್ ಔಟ್ಫಿಟ್ ಫ್ಯಾಷನ್ ಮಾತ್ರವಲ್ಲ, ಜೊತೆಗೆ ಬ್ಯಾಕ್ಪ್ಯಾಕ್, ವೇಸ್ಟ್ಲೈನ್ ಬ್ಯಾಗ್, ಎಲ್ಲವನ್ನೂ ಜತೆಗಿರಿಸಿಕೊಂಡಿದ್ದಾರೆ. ಸಿಂಪಲ್ ಹುಡುಗಿಯಂತೆ ಸ್ಟ್ರೀಟ್ ಸ್ಟೈಲ್ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್ಗಳು.
ಪತಿಯೊಂದಿಗೆ ಕಲರ್ ಟ್ವಿನ್ನಿಂಗ್
ಅದಿತಿ ಪತಿ ಕೂಡ ಸೇಮ್ ಶೇಡ್ನ ಶ್ವೇತ ವರ್ಣದ ಹೂಡಿ ಧರಿಸಿದ್ದು, ಟ್ವಿನ್ನಿಂಗ್ ಮಾಡಿದ್ದಾರೆ. ಇವರಿಬ್ಬರ ಸಿಂಪಲ್ ಟ್ರಾವೆಲ್ ಸ್ಟೈಲ್ ಸ್ಟೇಟ್ಮೆಂಟ್ ಫ್ಯಾಷನ್ ಪ್ರಿಯರನ್ನು ಸೆಳೆದಿದೆ. ಟ್ರಾವೆಲ್ ಮಾಡುವಾಗ ಈ ರೀತಿ ಸಿಂಪಲ್ ಔಟ್ಫಿಟ್ಗಳು ಹೆಚ್ಚು ಹೊರೆಯೆನಿಸುವುದಿಲ್ಲ! ಇದಕ್ಕೆ ಇವರು ಮಾದರಿ ಎನ್ನಬಹುದು ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
(ಲೇಖಕಿ : ಫ್ಯಾಷನ್ ಲೇಖಕಿ)
ಇದನ್ನೂ ಓದಿ: Star Beach Fashion: ಗ್ಲಾಮರಸ್ ಬೀಚ್ ಕಫ್ತಾನ್ನಲ್ಲಿ ನಟಿ ದೀಪಿಕಾ ದಾಸ್ ಮಸ್ತಿ