Star Beach Fashion: ಗ್ಲಾಮರಸ್‌ ಬೀಚ್‌ ಕಫ್ತಾನ್‌ನಲ್ಲಿ ನಟಿ ದೀಪಿಕಾ ದಾಸ್‌ ಮಸ್ತಿ Vistara News
Connect with us

ಫ್ಯಾಷನ್

Star Beach Fashion: ಗ್ಲಾಮರಸ್‌ ಬೀಚ್‌ ಕಫ್ತಾನ್‌ನಲ್ಲಿ ನಟಿ ದೀಪಿಕಾ ದಾಸ್‌ ಮಸ್ತಿ

ಗ್ಲಾಮರಸ್‌ ಆಗಿ ಬಿಂಬಿಸುವ ಬೀಚ್‌ ಕಫ್ತಾನ್‌ನಲ್ಲಿ (Star Beach Fashion) ಕಿರುತೆರೆ ನಟಿ ದೀಪಿಕಾ ದಾಸ್‌ ಕಾಣಿಸಿಕೊಂಡಿದ್ದು, ಟ್ರೆಂಡಿ ಬೀಚ್‌ ವೇರ್‌ ಫ್ಯಾಷನ್‌ಗೆ ಪಕ್ಕಾ ಮ್ಯಾಚ್‌ ಆಗಿದೆ. ಅಲ್ಲದೇ ನೋಡಲು ಆಕರ್ಷಕವಾಗಿ ಬಿಂಬಿಸಿದೆ ಎನ್ನುತ್ತಿದ್ದಾರೆ ಫ್ಯಾಷನ್‌ ವಿಮರ್ಶಕರು. ನಟಿಯ ಈ ಬೀಚ್‌ವೇರ್‌ ಟ್ರೆಂಡ್‌ ಬಗ್ಗೆ ಅವರೇನು ಹೇಳಿದ್ದಾರೆ ಇಲ್ಲಿದೆ ವಿವರ.

VISTARANEWS.COM


on

Star Beach Fashion deepika das photo
ಚಿತ್ರಗಳು : ದೀಪಿಕಾ ದಾಸ್‌, ಕಿರುತೆರೆ ನಟಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಕಿರುತೆರೆ ನಟಿ ದೀಪಿಕಾ ದಾಸ್‌, ಗ್ಲಾಮರಸ್‌ ಬೀಚ್‌ ಕಫ್ತಾನ್‌ನಲ್ಲಿ (Star Beach Fashion) ಕಾಣಿಸಿಕೊಂಡಿದ್ದು, ಬೀಚ್‌ ಸೈಡ್‌ ಫ್ಯಾಷನ್‌ಗೆ ಸೈ ಎಂದಿದ್ದಾರೆ. ಅವರು ಧರಿಸಿರುವ ಟ್ರೆಂಡಿ ಬೀಚ್‌ ವೇರ್‌ ಕಫ್ತಾನ್‌ ಇದೀಗ ಬೀಚ್‌ ಪ್ರಿಯರನ್ನು ಸೆಳೆದಿದೆ.

Star Beach Fashion deepika das enjoy

ಪ್ರಿಂಟೆಡ್‌ ಬೀಚ್‌ ಕಫ್ತಾನ್‌

ಬೀಚ್‌ ಸೈಡ್‌ ಫ್ಯಾಷನ್‌ನಲ್ಲಿ ಒಂದಾಗಿರುವ ಬೀಚ್‌ವೇರ್‌ ಕಫ್ತಾನ್‌ಗಳು ತೀರಾ ತೆಳುವಾದ ಫ್ಯಾಬ್ರಿಕ್‌ನಿಂದ ಮಾಡಲ್ಪಟ್ಟಿರುತ್ತದೆ. ನಾನಾ ಬಗೆಯ ಟ್ರಾಪಿಕಲ್‌ ಪ್ರಿಂಟ್ಸ್‌, ಜೆಮೆಟ್ರಿಕಲ್‌, ಫ್ಲೋರಲ್‌ ಹೀಗೆ ಬಗೆಬಗೆಯ ಪ್ರಿಂಟೆಡ್‌ ಡಿಸೈನ್‌ನಲ್ಲಿ ದೊರೆಯುತ್ತವೆ. ತಕ್ಷಣಕ್ಕೆ ನೋಡಲು ಶೀರ್‌ ಫ್ಯಾಬ್ರಿಕ್‌ನಂತೆ ಕಂಡರೂ ಇದು ಅದಲ್ಲ! ಕಾಟನ್‌, ಜಾರ್ಜೆಟ್‌ ಹಾಗೂ ಕ್ರೆಪ್‌ನಲ್ಲಿ ಹೆಚ್ಚು ವಿನ್ಯಾಸಗಳು ದೊರೆಯುತ್ತವೆ. ಆದರೆ, ಇದೀಗ ಜಾರ್ಜೆಟ್‌ ಫ್ಯಾಬ್ರಿಕ್‌ನ ಕಫ್ತಾನ್‌ಗಳು ಹೆಚ್ಚು ಬೇಡಿಕೆ ಪಡೆದುಕೊಂಡಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Star Beach Fashion deepika das hot photo

ಕಫ್ತಾನ್‌ ಕಥೆ

ಈ ಹಿಂದೆ ಕಫ್ತಾನ್‌ಗಳು ಏಷ್ಯಾ ಹಾಗೂ ಮಧ್ಯಪ್ರಾಚ್ಯದ ಜನರು ಧರಿಸುತ್ತಿದ್ದ ಸಾಮಾನ್ಯ ದಿರಿಸಾಗಿತ್ತು. ಬೇಸಿಗೆಯ ಸೆಕೆಗೆ ಆರಾಮವಾಗಿ ಧರಿಸಬಹುದಾಗಿದ್ದ ಇವು ದೊಗಲೆ ಫಿಟ್ಟಿಂಗ್‌ನವಾಗಿದ್ದವು. ಕಾಲಕಳೆದಂತೆ ಇವು ಔಟಿಂಗ್‌, ವೀಕೆಂಡ್‌ ಹಾಗೂ ಟ್ರಾವೆಲ್‌ನಲ್ಲೂ ಧರಿಸುವುದು ಸಾಮಾನ್ಯವಾಗತೊಡಗಿತು. ಇದೀಗ ಇವು ಬೀಚ್‌ ವೇರ್‌ ಕೆಟಗರಿಗೂ ಕಾಲಿಟ್ಟಿದ್ದು, ಬೀಚ್‌ ಪ್ರಿಯರನ್ನು ಸೆಳೆದಿವೆ. ಧರಿಸಿದಾಗ ನೋಡಲು ಕೂಡ ಆಕರ್ಷಕವಾಗಿ ಕಾಣುತ್ತವಲ್ಲದೇ ಬಿಕಿನಿ ಹಾಗೂ ಶಾಟ್ರ್ಸ್ ಹಾಗೂ ಕ್ರಾಪ್‌ ಟಾಪ್‌ ಮೇಲೆ ಧರಿಸಲು ಸುಲಭವಾಗಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

deepika das pose with coconut

ದೀಪಿಕಾ ದಾಸ್‌ ಕಫ್ತಾನ್‌

ಇನ್ನು ನಟಿ ದೀಪಿಕಾ ದಾಸ್‌ ಇವೆಂಟ್‌ಗಳಲ್ಲಿ ಮಾತ್ರವಲ್ಲ, ಯಾವುದೇ ಪ್ರವಾಸದ ಸಮಯದಲ್ಲೂ ಕೂಡ ಆಯಾ ಸಂದರ್ಭಕ್ಕೆ ಮ್ಯಾಚ್‌ ಆಗುವಂತಹ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ. ನನಗಂತೂ ಫ್ಯಾಷನಬಲ್‌ ಆಗಿರುವುದು ಇಷ್ಟ ಎನ್ನುವ ನಟಿ ದೀಪಿಕಾ ದಾಸ್‌ ಸೀ ಶೆಲ್ಸ್‌ ದ್ವೀಪದ ಈ ಪ್ರವಾಸದಲ್ಲಿ ಕಫ್ತಾನ್‌ ಪ್ರೇಮವನ್ನು ಫೋಟೊಗಳ ಮೂಲಕ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ, ಅವರ ಈ ಕಫ್ತಾನ್‌ ಲುಕ್ ಹಾಟ್‌ ಇಮೇಜ್‌ ನೀಡಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Star Travel Fashion: ಸ್ಯಾಂಡಲ್‌ವುಡ್‌ ನಟಿ ಮಿಲನಾ ನಾಗರಾಜ್‌ ಟ್ರಾವೆಲ್‌ ಫ್ಯಾಷನ್‌ಗೆ ಫ್ಯಾಷನ್‌ ವಿಮರ್ಶಕರ ಫುಲ್‌ ಮಾರ್ಕ್ಸ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ

ಫ್ಯಾಷನ್

Monsoon Fashion 2023: ಫ್ಯಾಷನ್‌ ಲೋಕಕ್ಕೆ ಲಗ್ಗೆ ಇಟ್ಟ ಮಾನ್ಸೂನ್‌ ಸೀಸನ್‌ ವೈಬ್ರೆಂಟ್‌ ಔಟ್‌ಫಿಟ್ಸ್!

ಮಾನ್ಸೂನ್‌ ಫ್ಯಾಷನ್‌ಗೆ (Monsoon Fashion 2023) ರೆಡಿಯಾಗಿ ಎನ್ನುತ್ತಿದ್ದಾರೆ ಫ್ಯಾಷನಿಸ್ಟಾಗಳು. ಹೌದು. ಈಗಾಗಲೇ ಮಳೆಗಾಲ ಲಗ್ಗೆ ಇಟ್ಟಾಗಿದೆ. ಇನ್ನು ಈ ಸೀಸನ್‌ಗೆ ತಕ್ಕಂತೆ ಬದಲಾಗುವುದೊಂದೇ ಬಾಕಿ. ಇದಕ್ಕೆ ಪೂರಕ ಎಂಬಂತೆ ಫ್ಯಾಷನ್‌ ಲೋಕವು, ಲೆಕ್ಕವಿಲ್ಲದಷ್ಟೂ ಬಗೆಯ ಫ್ಯಾಷನ್‌ವೇರ್‌ಗಳನ್ನು ಬಿಡುಗಡೆಗೊಳಿಸಿದೆ. ಯಾವುದೆಲ್ಲಾ ಸದ್ಯಕ್ಕೆ ಲಭ್ಯ! ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಸಂಕ್ಷೀಪ್ತವಾಗಿ ವಿವರಿಸಿದ್ದಾರೆ.

VISTARANEWS.COM


on

Edited by

Monsoon Fashion 2023
ಚಿತ್ರಗಳು : ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಮಾನ್ಸೂನ್‌ ಫ್ಯಾಷನ್‌ (Monsoon Fashion 2023) ಲಗ್ಗೆ ಇಟ್ಟಿದೆ. ಹೌದು, ಸೀಸನ್‌ಗೆ ತಕ್ಕಂತೆ ಈಗಾಗಲೇ ಲೆಕ್ಕವಿಲ್ಲದಷ್ಟು ಬಗೆಯ ಡಿಸೈನರ್‌ವೇರ್‌ಗಳು ಹಾಗೂ ಆಕ್ಸೆಸರೀಸ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿದ್ದು, ಎಲ್ಲೆಡೆ, ಮಳೆಗಾಲದ ಫ್ಯಾಷನ್‌ನ ಬಿಸಿ ಹವಾ ಬೀಸಿದೆ. ಅಂದಹಾಗೆ, ಈ ಬಾರಿ ಸಮ್ಮರ್‌ನ ಫ್ಯಾಷನ್‌ವೇರ್‌ಗಳು ಯಾವ ಮಟ್ಟಿಗೆ ಜಾದೂ ಬೀಸಿದ್ದವೆಂದರೇ, ಇನ್ನೂ ಕೂಡ ಫ್ಯಾಷನ್‌ ಪ್ರಿಯರು ಆ ಗುಂಗಿನಿಂದ ಹೊರ ಬಂದಿಲ್ಲ! ಆಗಲೇ ಇಂಡಿಯನ್‌ ಮಾನ್ಸೂನ್‌ ಟ್ರೆಂಡಿ ಫ್ಯಾಷನ್‌ವೇರ್ಸ್ ಡಿಕ್ಲೇರ್‌ ಆಗಿದ್ದು, ಫ್ಯಾಷನ್‌ಲೋಕ ಫ್ಯಾಷನ್‌ ಪ್ರಿಯರನ್ನು ಸೆಳೆಯಲು ಸಜ್ಜಾಗಿದೆ.

Colorful Monsoon Fashion

ವರ್ಣಮಯವಾದ ಮಾನ್ಸೂನ್‌ ಫ್ಯಾಷನ್‌

ಇಂಡಿಗೋ, ವಾಯ್ಲೆಟ್‌, ಕೇಸರಿ, ವೈನ್‌ ರೆಡ್‌, ಬ್ಲಡ್‌ ರೆಡ್‌, ಕೊಬಾಲ್ಟ್‌, ಬ್ರಿಲಿಯಂಟ್‌ ಬ್ಲ್ಯೂ, ಸ್ಪೆಕ್ಟ್ರಮ್‌ ಶೇಡ್ಸ್‌, ರೆಡಿಯಂಟ್‌, ನಿಯಾನ್‌ನ ಆಕರ್ಷಕ ಹಸಿರು, ಲಿವಿಂಗ್‌ ಕೋರಲ್‌, ಪರ್ಪಲ್‌ ಆರ್ಕಿಡ್‌, ಚಾಕೊಲೇಟ್‌ ಟ್ರಫಲ್‌, ಆಯಿಸ್ಟರ್‌ ಗ್ರೇ, ಡೀಪ್‌ ಬ್ಲಾಕ್‌ನ ಡಾರ್ಕ್ ಲೈಟ್‌ ಮಿಕ್ಸ್‌ ಶೇಡ್‌ಗಳು ಸೇರಿದಂತೆ ನಾನಾ ಶೇಡ್‌ಗಳು ಮಾನ್ಸೂನ್‌ನ ಮೂಡ್‌ ಕಲರ್‌ಫುಲ್‌ ಆಗಿಸಲು ಔಟ್‌ಫಿಟ್‌ಗಳ ಮುಖಾಂತರ ಎಂಟ್ರಿ ನೀಡಿವೆ.

Unisex Monsoon Fashionwears

ಯೂನಿಸೆಕ್ಸ್‌ ಮಾನ್ಸೂನ್‌ ಫ್ಯಾಷನ್‌ವೇರ್ಸ್‌

ಈ ಸೀಸನ್‌ನಲ್ಲಿ ವೆಸ್ಟರ್ನ್ ಔಟ್‌ಫಿಟ್‌ ಕೆಟಗರಿಯಲ್ಲಿ ಜರ್ಸಿ- ರಿವರ್ಸಿಬಲ್‌ ರೈನ್‌ ಜಾಕೆಟ್ಸ್‌, ರೈನ್‌ ಸೂಟ್ಸ್‌, ವಾಟರ್‌ಪ್ರೂಫ್‌ ಗ್ಲೌಸ್‌, ಕ್ಯಾಪ್‌, ವ್ರಾಪ್‌ ಕೋಟ್ಸ್‌ ಕಾರ್ಡಿಗಾನ್ಸ್‌, ಲಾಂಗ್‌ ಕೋಟ್‌, ಕಲರ್‌ಫುಲ್‌ ಟ್ರಾನ್ಸ್‌ಪರೆಂಟ್ ರೈನ್‌ ಕೋಟ್ಸ್‌, ವಾಟರ್‌ ರೆಸಿಸ್ಟಂಟ್ಸ್‌ ಶಾಟ್ರ್ಸ್, ಬೂಟ್ಸ್, ಫ್ಲಿಪ್‌-ಫ್ಲಾಪ್ಸ್‌ ಹೊಸ ವಿನ್ಯಾಸದಲ್ಲಿ ಯೂನಿಸೆಕ್ಸ್‌ ಡಿಸೈನ್‌ನಲ್ಲಿ ಬಂದಿವೆ.

Monsoon Fashion wears for Young Women

ಯುವತಿಯರ ಮಾನ್ಸೂನ್‌ ಫ್ಯಾಷನ್‌ವೇರ್ಸ್‌

ಇ,ನ್ನು ಯುವತಿಯರಿಗೆ ಮೆಚ್ಚುಗೆಯಾಗುವಂತಹ ಲಾಂಗ್‌ ಸ್ಲೀವ್‌, ತ್ರೀ ಫೋರ್ತ್ ಸ್ಲೀವ್‌, ಬಲೂನ್‌ ಸ್ಲೀವ್‌ನ ಕ್ರಾಪ್‌ ಟೀ ಶರ್ಟ್, ಟೈಯಿಂಗ್‌, ಕಾರ್ಸೆಟ್‌, ಡಬ್ಬಲ್‌ ವೆರೈಟಿ ವಿನ್ಯಾಸದ ಫಿಟ್ಟಿಂಗ್‌ ಟಾಪ್‌ಗಳು ಕಾಣಿಸಿಕೊಂಡಿವೆ. ರೈನ್‌ ಪೊಂಚೋ, ಡೆನಿಮ್‌, ರಯಾನ್‌ ಫ್ಯಾಬ್ರಿಕ್‌ನ ಕೇಪ್ರೀಸ್‌, ಕ್ಯೂಲ್ಲೋಟ್ಸ್‌, ಶಾರ್ಟ್ ಪ್ಯಾಂಟ್‌, ಹಾಫ್‌ ಪಲ್ಹಾಜೂಗಳು ಡಿಫರೆಂಟ್‌ ಲುಕ್‌ನಲ್ಲಿ ಲಗ್ಗೆ ಇಟ್ಟಿವೆ. ಇನ್ನು ಸೆಮಿ ಎಥ್ನಿಕ್‌ ಹಾಗೂ ಇಂಡಿಯನ್‌ ಔಟ್‌ಫಿಟ್ಸ್‌ ಕೆಟಗರಿಯಲ್ಲಿ ಮಂಡಿ ಕೆಳಗಿನವರೆಗಿನ ವೈಬ್ರೆಂಟ್‌ ಶೇಡ್‌ನ ಟೈಟ್‌ ಲೆಗ್ಗಿಂಗ್ಸ್‌, ಜೆಗ್ಗಿಂಗ್ಸ್‌, ಟ್ರೆಗ್ಗಿಂಗ್ಸ್‌ ಹಾಗೂ ಸ್ಕಿನ್‌ ಟೈಟ್‌ ಕುರ್ತಾ ಶಾರ್ಟ್ ಪ್ಯಾಂಟ್‌ಗಳು ಮಾನೋಕ್ರೋಮ್‌ ಶೇಡ್‌ನಲ್ಲಿ ಆಗಮಿಸಿವೆ. ಲೇಯರ್‌ ಲುಕ್‌ ನೀಡುವ ಫ್ಲೋರಲ್‌ ಪ್ರಿಂಟ್ಸ್‌ನ ಶಾರ್ಟ್ ಕುರ್ತಾ ಹಾಗೂ ಶಾರ್ಟ್ ಸಲ್ವಾರ್‌ ಕಮೀಝ್‌ಗಳು ಈ ಸೀಸನ್‌ನಲ್ಲೂ ಮುಂದುವರೆದಿವೆ.

Changes in mens fashion in the interim

ಮಧ್ಯಂತರದಲ್ಲಿ ಮೆನ್ಸ್‌ ಫ್ಯಾಷನ್‌ನಲ್ಲಿ ಬದಲಾವಣೆ

ಇನ್ನು, ಪುರುಷರ ಫ್ಯಾಷನ್‌ನಲ್ಲಿ ಸದ್ಯಕ್ಕೆ ಹೆಚ್ಚೇನೂ ಬದಲಾವಣೆಗಳಾಗಿಲ್ಲ!‌ ಸೀಸನ್‌ನ ಮಧ್ಯಂತರದಲ್ಲಿ ಸಾಕಷ್ಟು ಬದಲಾವಣೆಗಳಾಗಲಿವೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಇದೀಗ ಕ್ಯಾಶುವಲ್‌ವೇರ್‌ಗಳಲ್ಲಿ ಟೋರ್ನ್ ಜೀನ್ಸ್‌ಗೆ ನಾನಾ ಶೇಡ್‌ನ ಕಾಲರ್‌, ಬಟನ್‌ ಟೀಶರ್ಟ್‌ಗಳು ಎಂಟ್ರಿ ನೀಡಿವೆ. ಹುಡುಗರಿಗೆ ಕಾರ್ಗೋ, ಕಾಂರ್ಪೆಂಟರ್‌ ಪ್ಯಾಂಟ್ಸ್‌ ಆಗಮಿಸಿವೆ. ಇನ್ನು ಫಾರ್ಮಲ್‌ ಲುಕ್‌ಗೆ ಸಾಥ್‌ ನೀಡುವ ಡಾರ್ಕ್ ಶೇಡ್‌ ಫುಲ್‌ ಸ್ಲೀವ್‌ ಶರ್ಟ್‌ಗಳು ರೀ ಎಂಟ್ರಿ ನೀಡಿವೆ,

mausam Monsoon Fashion 2023

ಮಾನ್ಸೂನ್‌ ಫ್ಯಾಷನ್‌ ಝಲಕ್‌

  • ಸ್ಟೈಲಿಸ್ಟ್‌ಗಳ ಪ್ರಕಾರ, ಯಾವಾಗಲೂ ಮಳೆಗಾಲ ಆರಂಭವಾದ ಕೆಲ ದಿನಗಳ ನಂತರವೇ ಬಹುತೇಕ ಫ್ಯಾಷನ್‌ವೇರ್‌ಗಳು ಎಂಟ್ರಿ ನೀಡುತ್ತವೆ.
  • ಸೀಸನ್‌ ಆರಂಭದಲ್ಲಿ ಮಿಕ್ಸ್‌-ಮ್ಯಾಚ್‌ ಫ್ಯಾಷನ್‌ ಟ್ರೆಂಡಿಯಾಗುತ್ತದೆ.
  • ಮೆನ್ಸ್‌ ಫ್ಯಾಷನ್‌ನಲ್ಲಿ, ಅಬ್‌ಸ್ಟ್ರಾಕ್ಟ್‌ ಪ್ರಿಂಟ್ಸ್‌ನ ಡಾರ್ಕ್ ಶೇಡ್‌ಗಳು ಮರುಕಳಿಸಿವೆ.
  • ಯೂನಿಸೆಕ್ಸ್‌ ವಾಟರ್‌ ಪ್ರೂಫ್‌ವೇರ್‌ಗಳನ್ನು ಪುರುಷ-ಮಹಿಳೆ ಇಬ್ಬರೂ ಧರಿಸಬಹುದು.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Corset Fashion: ಬಣ್ಣ ಬಣ್ಣದ ಕಾರ್ಸೆಟ್‌ ಕ್ರಾಪ್‌ ಟಾಪ್‌ ಜಾದೂ…

Continue Reading

South Cinema

Corset Fashion: ಬಣ್ಣ ಬಣ್ಣದ ಕಾರ್ಸೆಟ್‌ ಕ್ರಾಪ್‌ ಟಾಪ್‌ ಜಾದೂ…

ಕೇವಲ ಡೆನೀಮ್‌ ಹಾಗೂ ಬ್ಲಾಕ್‌ ಶೇಡ್‌ಗಳಿಗೆ ಸೀಮಿತವಾಗಿದ್ದ ಬಣ್ಣಬಣ್ಣದ ಕಾರ್ಸೆಟ್‌ ಕ್ರಾಪ್‌ ಟಾಪ್‌ಗಳು ಇಂದು ಯುವತಿಯರನ್ನು ಸೆಳೆದಿವೆ. ಅಲ್ಲದೇ, ಇವು ತಾರೆಯರ ನೆಚ್ಚಿನ ಔಟ್‌ಫಿಟ್‌ನಲ್ಲೊಂದಾಗಿವೆ. ಏನಿದು ಕಾರ್ಸೆಟ್‌ ಕ್ರಾಪ್‌ ಟಾಪ್‌ ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Edited by

Corset fashion
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಕಾರ್ಸೆಟ್‌ ಬಣ್ಣ ಬಣ್ಣದ ಕಾರ್ಸೆಟ್‌ ಟಾಪ್‌ಗಳು ಇದೀಗ ಯುವತಿಯರ ವೆಸ್ಟರ್ನ್ ಫ್ಯಾಷನ್‌ ಲಿಸ್ಟ್‌ಗೆ ಸೇರಿವೆ. ಈ ಹಿಂದೆ ಕೇವಲ ಡೆನೀಮ್‌ ಹಾಗೂ ಬ್ಲಾಕ್‌ ಶೇಡ್‌ಗಳಿಗೆ ಸೀಮಿತವಾಗಿದ್ದ ಕಾರ್ಸೆಟ್‌ ಟಾಪ್‌ ಇದೀಗ ಬಣ್ಣ ಬದಲಾಯಿಸಿವೆ. ಯುವತಿಯರ ನೆಚ್ಚಿನ ಟಾಪ್‌ಗಳಲ್ಲೊಂದಾಗಿರುವ ಇವು ಸಿನಿ ತಾರೆಯರ ನೆಚ್ಚಿನ ಔಟ್‌ಫಿಟ್‌ನಲ್ಲೂ ಸೇರಿವೆ.

ಏನಿದು ಕಾರ್ಸೆಟ್‌ ಕ್ರಾಪ್‌ ಟಾಪ್‌?

ಟಮ್ಮಿ ಭಾಗವನ್ನು ಸ್ಲಿಮ್‌ ಆಗಿ ಕಾಣಿಸಬಲ್ಲ ವಿನ್ಯಾಸ ಈ ಟಾಪ್‌ಗಿದೆ. ಮೂಲತಃ ಪಾಶ್ಚಿಮಾತ್ಯ ರಾಷ್ಟ್ರಗಳ ಫ್ಯಾಷನ್‌ ಆದ ಈ ಟಾಪ್‌, ಹೊಟ್ಟೆ ಭಾಗ ಸ್ಲಿಮ್‌ ಆಗಿ ಕಾಣಿಸುವಂತೆ ಮಾಡಬಲ್ಲ ತಂತ್ರಜ್ಞಾನ ಈ ಡಿಸೈನ್‌ನಲ್ಲಿಅಡಗಿದೆ. ಅಷ್ಟೇಕೆ! ಕರ್ವ್ಸ್ ಹೊಂದಿರುವವರಿಗೆ ಹೇಳಿ ಮಾಡಿಸಿದ ಟಾಪ್‌ ಇದು. ಕಾರ್ಸೆಟ್‌ ಟಾಪ್‌ ಫ್ಯಾಷನ್‌ನಲ್ಲಿಸಾಕಷ್ಟು ಡಿಸೈನ್‌ಗಳನ್ನು ನೋಡಬಹುದು. ಬಾಡಿಕವ್ರ್ಸ್ ಇರುವವರಿಗೆ ಹೇಳಿ ಮಾಡಿಸಿದ ಟಾಪ್‌ ಇದು ಎನ್ನುತ್ತಾರೆ ಸ್ಟೈಲಿಸ್ಟ್‌ ಚಿತ್ರಾ.

ಕಾರ್ಸೆಟ್‌ ಟಾಪ್‌ಗಳು ಯಾವ ಮಟ್ಟಿಗೆ ಫಿಟ್ಟಿಂಗ್‌ ಹೊಂದಿರುತ್ತವೆ ಎಂದರೇ, ಬಾಡಿ ಕರ್ವ್‌ಗೆ ತಕ್ಕಂತೆ ಅದರಲ್ಲೂ ವೇಸ್ಟ್‌ ಲೈನ್‌ ತೀರಾ ನಾಜೂಕಾಗಿ ರೂಪಿಸಲಾಗಿರುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಇಲ್ಲಿಇಂಚು ಇಂಚಿಗೂ ಫಿಟ್ಟಿಂಗ್‌ ಬಗ್ಗೆ ಗಮನಹರಿಸಲಾಗಿರುತ್ತದೆ. ಹಾಗಾಗಿ ಧರಿಸಿದವರ ಬಾಡಿ ಕವ್ರ್ಸ್ ನೋಡಲು ಫಿಟ್‌ ಆಗಿರುವಂತೆ ಈ ಟಾಪ್‌ಗಳು ಇಲ್ಯೂಷನ್‌ ಕ್ರಿಯೇಟ್‌ ಮಾಡುತ್ತವೆ.

ಇದನ್ನೂ ಓದಿ: Skinny Dresses | ಸ್ಕಿನ್ನಿ ಉಡುಪುಗಳು ದೇಹಕ್ಕೆ ಬಾಧಕವೇ?

ಕಾರ್ಸೆಟ್‌ ಕ್ರಾಪ್‌ ಟಾಪ್‌ ಆಯ್ಕೆ

ಕೊಂಚ ಉದ್ದಗಿರುವವರಿಗೆ ಯಾವ ಬಗೆಯ ಕಾರ್ಸೆಟ್‌ ಟಾಪ್‌ ಆದರೂ ಸರಿಯೇ ಸೂಟ್‌ ಆಗುತ್ತದೆ. ಪ್ಲಂಪಿಯಾಗಿರುವವರು ಟ್ರಯಲ್‌ ನೋಡಿಯೇ ಆಯ್ಕೆ ಮಾಡಬೇಕು ಎನ್ನುತ್ತಾರೆ ಫ್ಯಾಷನಿಸ್ಟ್‌ ಸೂರಜ್‌. ಅವರ ಪ್ರಕಾರ, ಕಾರ್ಸೆಟ್‌ ಟಾಪ್‌ಗಳು ಮಾಡರ್ನ್ ಲುಕ್‌ ಕಲ್ಪಿಸುತ್ತವೆ. ಹಾಗಾಗಿ ತಾರೆಯರ ನೆಚ್ಚಿನ ಕ್ರಾಪ್‌ ಟಾಪ್‌ಗಳಲ್ಲಿ ಇವು ಸೇರಿವೆ ಎನ್ನುತ್ತಾರೆ. ಆಯಾ ಬಾಡಿ ಹೈಟ್‌ಗೆ ತಕ್ಕಂತೆ ಮ್ಯಾಚ್‌ ಆಗುವ ವಿನ್ಯಾಸದ ಕ್ರಾಪ್‌ ಕಾರ್ಸೆಟ್‌ ಟಾಪ್‌ಗಳನ್ನು ಧರಿಸುವುದು ಅಗತ್ಯ. ಇಲ್ಲವಾದಲ್ಲಿ ನೋಡಲು ಚೆನ್ನಾಗಿ ಕಾಣದು ಎನ್ನುತ್ತಾರೆ ಅವರು.

ಇದನ್ನೂ ಓದಿ: Skinny Dresses | ಸ್ಕಿನ್ನಿ ಉಡುಪುಗಳು ದೇಹಕ್ಕೆ ಬಾಧಕವೇ?

ಪರ್ಫೆಕ್ಟ್‌ ಕಾರ್ಸೆಟ್‌ ಕ್ರಾಪ್‌ ಟಾಪ್‌

  • ಫಿಟ್ಟಿಂಗ್‌ ಸರಿಯಾಗಿರುವುದು ಅಗತ್ಯ.
  • ಬೆನ್ನು ನೋವಿರುವವರು ಫಿಟ್ಟಿಂಗ್‌ ಕಾರ್ಸೆಟ್‌ ಆವಾಯ್ಡ್‌ ಮಾಡಿ.
  • ಈ ಟಾಪ್‌ ಲೂಸಾಗಿರಕೂಡದು.
  • ಪಾಸ್ಟಲ್‌ ಶೇಡ್‌ನವು ಹೆಚ್ಚು ಪ್ರಚಲಿತದಲ್ಲಿವೆ.
  • ಜೀನ್ಸ್‌ ಪ್ಯಾಂಟ್‌-ಸ್ಕರ್ಟ್-ಲೆಹೆಂಗಾಗೂ ಮಿಕ್ಸ್‌ ಮ್ಯಾಚ್‌ ಮಾಡಬಹುದು.
  • ಬಾರ್ಡಟ್, ಕೋಲ್ಡ್‌ ಶೋಲ್ಡರ್‌ನವು ಚಾಲ್ತಿಯಲ್ಲಿವೆ.
  • ಹೈ ಹೀಲ್ಸ್‌ ಪರ್ಫೆಕ್ಟ್‌ ಲುಕ್‌ ನೀಡುತ್ತದೆ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Mens Fashion: ಸೀಸನ್‌ ಎಂಡ್‌ನಲ್ಲಿ ಮೆನ್ಸ್ ಫ್ಯಾಷನ್‌ಗೆ ಎಂಟ್ರಿ ಕೊಟ್ಟ ಲಿನನ್‌ ಶರ್ಟ್ ಜಾಕೆಟ್‌

ಈ ಸೀಸನ್‌ ಕೊನೆಯಲ್ಲಿ ಇದೀಗ ಲಿನಿನ್‌ ಶರ್ಟ್ ಜಾಕೆಟ್‌ಗಳು ಮೆನ್ಸ್‌ ಫ್ಯಾಷನ್‌ಗೆ (Mens Fashion) ಎಂಟ್ರಿ ನೀಡಿದ್ದು, ಪುರುಷರ ಸ್ಟೈಲ್‌ ಸ್ಟೇಟ್‌ಮೆಂಟ್‌ಗೆ ಸಾಥ್‌ ನೀಡುತ್ತಿವೆ. ಯಾವ್ಯಾವ ಬಗೆಯವು ಹೆಚ್ಚು ಚಾಲ್ತಿಯಲ್ಲಿವೆ ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ತಿಳಿಸಿದ್ದಾರೆ.

VISTARANEWS.COM


on

Edited by

ಚಿತ್ರಗಳು : ಅಭಿಮನ್ಯು ದಾಸನಿ, ನಟ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸೀಸನ್‌ನ ಫ್ಯಾಷನ್‌ನಲ್ಲಿ ಇದೀಗ ಮೆನ್ಸ್‌ ಫ್ಯಾಷನ್‌ಗೆ (Mens Fashion) ಸಾಥ್‌ ನೀಡುವ ಲಿನನ್‌ ಶರ್ಟ್ ಜಾಕೆಟ್‌ಗಳು ಎಂಟ್ರಿ ನೀಡಿವೆ. ಯುವಕರ ಸ್ಟೈಲ್‌ ಸ್ಟೇಟ್‌ಮೆಂಟ್‌ಗೆ ತಕ್ಕಂತೆ ಧರಿಸಬಹುದಾದ ಈ ಶರ್ಟ್ ಜಾಕೆಟ್‌ಗಳು ಇದೀಗ ಯುವಕರನ್ನು ಮಾತ್ರವಲ್ಲ, ಎಲ್ಲಾ ವಯಸ್ಸಿನ ಪುರುಷರನ್ನು ಬರಸೆಳೆಯುತ್ತಿವೆ.

ಆದರೆ, ಇದೀಗ ಮಲ್ಟಿಪಲ್‌ ಪಾಕೆಟ್‌ ಹೊಂದಿರುವ ಸಾಲಿಡ್‌ ಶೇಡ್‌ನ ಲಿನನ್‌ ಶರ್ಟ್ ಜಾಕೆಟ್‌ಗಳು ಟ್ರೆಂಡ್‌ನಲ್ಲಿದ್ದು, ನೋಡಲು ಆಕರ್ಷಕವಾಗಿ ಕಾಣುತ್ತಿವೆ. ಸಾಲಿಡ್‌ ಕಲರ್‌ಗಳಲ್ಲಿ ಲಭ್ಯವಿರುವ ಈ ಶರ್ಟ್ ಜಾಕೆಟ್‌ಗಳು ಪುರುಷರ ಫ್ಯಾಷನ್‌ನಲ್ಲಿ ನಾನಾ ಶೇಡ್‌ಗಳಲ್ಲೂ ಲಭ್ಯವಿದೆ. ಲೈಟ್‌ ಶೇಡ್ಸ್‌ ಪಾಸ್ಟೆಲ್‌ ಶೇಡ್ಸ್‌ ಹಾಗೂ ಫೆಮಿನೈನ್‌ ಜಾಕೆಟ್‌ ಶೇಡ್‌ಗಳು ದೊರೆಯುತ್ತಿವೆ. ಅಚ್ಚರಿ ಎಂಬಂತೆ ಯೂನಿಸೆಕ್ಸ್‌ ಡಿಸೈನ್‌ನ ಶರ್ಟ್ ಜಾಕೆಟ್‌ಗಳು ಕೂಡ ದೊಡ್ಡ ಬ್ರಾಂಡ್‌ಗಳಲ್ಲಿ ಸಿಗುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Abhimanyu Dasani fashion

ಕೂಲ್‌ ಲುಕ್‌

“ಲಿನನ್‌ ಶರ್ಟ್‌ಗಳು ಹಾಗೂ ಪ್ಯಾಂಟ್‌ ಸೂಟ್‌ಗಳು ಟ್ರೆಂಡಿಯಾಗಿದ್ದವು, ಇದೀಗ ಲಿನನ್‌ ಶರ್ಟ್ ಜಾಕೆಟ್‌ ಲಗ್ಗೆ ಇಟ್ಟಿದ್ದು, ಈ ಜಾಕೆಟ್‌ ಕೇವಲ ಈ ಸೀಸನ್‌ನಲ್ಲಲ್ಲ, ಇತರೇ ಯಾವುದೇ ಸೀಸನ್‌ನಲ್ಲೂ ಧರಿಸಬಹುದು. ನಟ ಅಭಿಮನ್ಯು ದಾಸನಿ ಧರಿಸಿರುವ ಈ ಜಾಕೆಟ್‌ ಸಾಕಷ್ಟು ಫ್ಯಾಷನ್‌ ಪ್ರಿಯರನ್ನು ಸೆಳೆದಿತ್ತು. ನೋಡಲು ಫಾರ್ಮಲ್‌ ಕೂಲ್‌ ಲುಕ್‌ ನೀಡುವ ಈ ಜಾಕೆಟನ್ನು ಆಫೀಸ್‌ವೇರ್‌ ಆಗಿಯೂ ಬಳಸಬಹುದು. ಔಟಿಂಗ್‌ನಲ್ಲೂ ಬಳಬಹುದು” ಎನ್ನುತ್ತಾರೆ ಮೆನ್ಸ್‌ ಸ್ಪೆಷಲ್‌ ಸ್ಟೈಲಿಸ್ಟ್‌ ರಿಚರ್ಡ್.

Abhimanyu Dasani Season End fashion

ಲಿನನ್‌ ಶರ್ಟ್ ಜಾಕೆಟ್‌ ಮಿಕ್ಸ್‌-ಮ್ಯಾಚ್‌

ಲಿನನ್‌ ಶರ್ಟ್ ಜಾಕೆಟನ್ನು ಪ್ಯಾಂಟ್‌ ಹಾಗೂ ಶರ್ಟ್ ಜೊತೆಗೆ ಸೆಟ್‌ ತೆಗೆದುಕೊಂಡಿದ್ದಲ್ಲಿ, ಮುಂದಿನ ಬಾರಿ ಧರಿಸುವಾಗ ಇತರೇ ಪ್ಯಾಂಟ್‌ ಹಾಗೂ ಶರ್ಟ್ ಜೊತೆಗೂ ಮ್ಯಾಚ್‌ ಮಾಡಬಹುದು. ಫಾರ್ಮಲ್‌ ಲುಕ್‌ ಜೊತೆಗೆ ಫಂಕಿ ಲುಕ್‌ ಕೂಡ ನೀಡಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ ರಾಜನ್‌. ಅವರ ಪ್ರಕಾರ, ಶರ್ಟ್ ಜಾಕೆಟ್‌ ಖರೀದಿಸುವಾಗ ಆದಷ್ಟೂ ಎಲ್ಲಾ ಬಗೆಯ ಶರ್ಟ್, ಟೀ ಶರ್ಟ್ ಅಥವಾ ಪ್ಯಾಂಟ್‌ಗೆ ಹೊಂದುವಂತಹ ಶೇಡ್‌ನದ್ದನ್ನು ಆಯ್ಕೆ ಮಾಡಬೇಕು ಎನ್ನುತ್ತಾರೆ.

Abhimanyu Dasani Cool fashion look

ಬರ್ಮಡಾ ಜೊತೆಗೆ ಔಟಿಂಗ್‌ ಲುಕ್‌

ಬರ್ಮಡಾ ಅಥವಾ ಜೀನ್ಸ್‌ ಶಾರ್ಟ್ಸ್​​ ಜೊತೆ ಧರಿಸಿದಲ್ಲಿ ಔಟಿಂಗ್‌ ಲುಕ್‌ ಪಡೆಯಬಹುದು. ಡಿಫರೆಂಟ್‌ ಲುಕ್‌ ನೀಡುವ ಇದು ನಿಮ್ಮ ಸ್ಟೈಲ್‌ ಸ್ಟೇಟ್‌ಮೆಂಟನ್ನು ಎತ್ತಿ ಹಿಡಿಯುತ್ತದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

ಲಿನಿನ್‌ ಶರ್ಟ್ ಜಾಕೆಟ್‌ ಟಿಪ್ಸ್‌

  • ಫಿಟ್ಟಿಂಗ್‌ ಇರುವಂತಹ ಲಿನನ್‌ ಶರ್ಟ್ ಜಾಕೆಟ್‌ ಆಯ್ಕೆ ಮಾಡಿ.
  • ಹಾಫ್‌ ವೈಟ್‌ಮ ಕ್ರೀಮಿಶ್‌, ಐವರಿ ವೈಟ್‌ ಟ್ರೆಂಡ್‌ನಲ್ಲಿದೆ.
  • ಸಂದರ್ಭಕ್ಕೆ ತಕ್ಕಂತೆ ಮ್ಯಾಚ್‌ ಮಾಡುವುದನ್ನು ಕಲಿಯಿರಿ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Fashion Pageant: ಯಶಸ್ವಿಯಾದ ಡ್ಯಾಜ್ಲಿಂಗ್‌ ಮಿಸೆಸ್‌ ಇಂಡಿಯಾ 2023 ಸೌಂದರ್ಯ ಸ್ಪರ್ಧೆ

Continue Reading

ಫ್ಯಾಷನ್

Season Fashion: ಸೆಲೆಬ್ರೆಟಿ ಲುಕ್‌ಗಾಗಿ ಹೈ ಫ್ಯಾಷನ್‌ ಲೋಕಕ್ಕೆ ಬಂತು ಒನ್‌ ಶೋಲ್ಡರ್‌ ಡ್ರೆಸ್‌!

ಹೈ ಫ್ಯಾಷನ್‌ ಲೋಕದಲ್ಲಿ (Season Fashion) ಇದೀಗ ಒನ್‌ ಶೋಲ್ಡರ್‌ ಡ್ರೆಸ್‌ಗಳು ಟ್ರೆಂಡಿಯಾಗಿವೆ. ನೋಡಿದಾಗ ಸೆಲೆಬ್ರೆಟಿ ಲುಕ್‌ ನೀಡುವ ಈ ಉಡುಪುಗಳು ವೈವಿಧ್ಯಮಯ ವಿನ್ಯಾಸದಲ್ಲಿ ಆಗಮಿಸಿವೆ. ಯಾವ ಬಗೆಯವು ಹೆಚ್ಚು ಪಾಪುಲರ್‌ ಆಗಿವೆ ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Edited by

Season Fashion
ಚಿತ್ರಗಳು : ಶಿಫಾಲಿ ಜರಿವಾಲ, ನಟಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಹೈ ಫ್ಯಾಷನ್‌ ಲೋಕದಲ್ಲಿ (Season Fashion) ಇದೀಗ ಒನ್‌ ಶೋಲ್ಡರ್ ಡ್ರೆಸ್‌ಗಳು ಟ್ರೆಂಡಿಯಾಗಿವೆ. ತಾರೆಯರು ಮಾತ್ರವಲ್ಲ, ಸೆಲೆಬ್ರೆಟಿ ಲುಕ್‌ಗಾಗಿ ಈ ಜನರೇಷನ್‌ ಹುಡುಗಿಯರು ಧರಿಸುವುದು ಹೆಚ್ಚಾಗಿದೆ. ಗ್ಲಾಮರ್ ಲುಕ್‌ ನೀಡುವ ಈ ಔಟ್‌ಫಿಟ್ಸ್‌ ಆನ್‌ಲೈನ್‌ ಫ್ಯಾಷನ್‌ನಲ್ಲಿ ವೈವಿಧ್ಯಮಯ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ.

Shifali Jariwala one shoulder dress

ಹಾಲಿವುಡ್‌ ತಾರೆಯರ ಟ್ರೆಂಡಿ ಡ್ರೆಸ್‌ಗಳಲ್ಲಿ ಒಂದಾಗಿದ್ದ ಒನ್‌ ಶೋಲ್ಡರ್‌ ಡ್ರೆಸ್‌ಗಳು, ಬಾಲಿವುಡ್‌ ತಲುಪಿ, ಅಲ್ಲಿನ ತಾರೆಯರ ಮೇಲೆ ಸವಾರಿ ಮಾಡಿದವು. ರ್ಯಾಂಪ್‌ ಲೋಕದಲ್ಲೂ ಹಂಗಾಮ ಎಬ್ಬಿಸಿದವು. ಪೇಜ್‌ ತ್ರೀ ಪಾರ್ಟಿಗಳಲ್ಲಿ ಕಾಮನ್‌ ಆಗಿದ್ದವು. ಇದೀಗ ಸಾಮಾನ್ಯ ಯುವತಿಯರನ್ನು ತಲುಪಿವೆ. ಹೈ ಫ್ಯಾಷನ್‌ ಲಿಸ್ಟ್‌ನಲ್ಲಿದ್ದ ಈ ಔಟ್‌ಫಿಟ್‌ ಇದೀಗ ಸೆಲೆಬ್ರೆಟಿ ಲುಕ್‌ ಪಡೆಯಲು ಬಯಸುವ ಹುಡುಗಿಯರನ್ನು ಸೆಳೆಯತೊಡಗಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Shifali Jariwala Season Fashion

ಒನ್‌ ಶೋಲ್ಡರ್‌ ಡ್ರೆಸ್‌ ವಿನ್ಯಾಸ

ತಕ್ಷಣಕ್ಕೆ ನೋಡಲು ಇವು ಹೆಚ್ಚು ವಿನ್ಯಾಸ ಇಲ್ಲದಂತೆ ಕಂಡರೂ ಇವುಗಳಲ್ಲಿ ಸ್ಟಿಚ್ಚಿಂಗ್‌ ಪ್ಯಾಟರ್ನ್ ಬೇರೆ ಬೇರೆಯಾಗಿರುತ್ತವೆ. ಉದಾಹರಣೆಗೆ., ಪ್ರೋಮೊ ಒನ್‌ ಶೋಲ್ಡರ್‌ ಡ್ರೆಸ್‌, ಶಿಫ್ಟ್‌, ಎ ಲೈನ್‌, ಶೀತ್‌, ಫೀಟ್‌ ಹಾಗೂ ಫ್ಲೇರ್‌, ವ್ರಾಪ್‌ ಸ್ಟೈಲ್‌, ರಫಲ್‌, ಬಾಡಿಕಾನ್‌, ಶಿರ್ರೆಡ್‌, ಸ್ಕೆಟರ್‌ ಡ್ರೆಸ್‌ ಸೇರಿದಂತೆ ನಾನಾ ಬಗೆಯವು ದೊರೆಯುತ್ತಿವೆ.

Shifali Jariwala one shoulder crop top

ಒನ್‌ ಶೋಲ್ಡರ್‌ ಆಯ್ಕೆ ಮಾಡುವುದು ಹೇಗೆ?

ಒನ್‌ ಶೋಲ್ಡರ್‌ ಡ್ರೆಸ್‌ ಆಯ್ಕೆ ಮಾಡುವವರು ಸಾಕಷ್ಟು ವಿಷಯಗಳ ಬಗ್ಗೆ ಗಮನವಹಿಸಬೇಕಾಗುತ್ತದೆ. ಮೊದಲು ಪರ್ಸನಾಲಿಟಿಗೆ ತಕ್ಕಂತೆ ವಿನ್ಯಾಸವಿರುವುದನ್ನು ಹುಡುಕಿ ಖರೀದಿಸಬೇಕು. ಟ್ರಯಲ್‌ ನೋಡದೇ ಕೊಳ್ಳಲೇಬಾರದು. ಒಳ ಉಡುಪು ಪಾರದರ್ಶಕವಾಗದಂತೆ ಎಚ್ಚರವಹಿಸಬೇಕು. ಇದಕ್ಕಾಗಿ ಸ್ಟೈಲಿಸ್ಟ್‌ಗಳ ಸಹಾಯ ಪಡೆಯಬಹುದು. ಸ್ಲಿಮ್‌ ಆಗಿರುವವರು ಆದಷ್ಟು ಬಾಡಿಕಾನ್‌ ಒನ್‌ ಶೋಲ್ಡರ್‌ ಔಟ್‌ಫಿಟ್‌ ಆವಾಯ್ಡ್‌ ಮಾಡಬೇಕು. ಅದರ ಬದಲು ರಫಲ್‌, ಸ್ಕೆಟರ್‌, ಫಿಟ್‌ ಹಾಗೂ ಫ್ಲೇರ್‌ನಂತವನ್ನು ಆಯ್ಕೆ ಮಾಡಬಹುದು. ಇನ್ನು ಪ್ಲಂಪಿಯಾಗಿರುವವರು ಬಾಡಿಕಾನ್‌, ಎ ಲೈನ್‌, ಶಿರ್ರೆಡ್‌ ವಿನ್ಯಾಸದವನ್ನು ಧರಿಸಬಹುದು.

Shifali Jariwala one shoulder gown

ಮ್ಯಾಚಿಂಗ್‌ ಹೀಗೆ

ಗ್ಲಾಮರ್‌ ಲುಕ್‌ಗಾಗಿ ಒನ್‌ ಶೋಲ್ಡರ್‌ ಡ್ರೆಸ್‌ ಧರಿಸುವವರು ಧರಿಸುವ ಜ್ಯುವೆಲರಿಗಳನ್ನು ಸೂಕ್ತ ರೀತಿಯಲ್ಲಿ ಆಯ್ಕೆ ಮಾಡಬೇಕು. ಹ್ಯಾಂಗಿಂಗ್ಸ್, ಚೋಕರ್‌, ಲೇಯರ್‌ ಚೈನ್ಸ್ ಧರಿಸಬಹುದು. ಹೇರ್‌ಸ್ಟೈಲ್‌ ಶೋಲ್ಡರ್‌ ಸ್ಲೀವ್‌ ಇಲ್ಲದ ಕಡೆಯೂ ಬರುವಂತಹ ಕೇಶ ವಿನ್ಯಾಸ ಮಾಡಬಹುದು. ಲೂಸ್‌ ಹೇರ್‌ ಸ್ಟೈಲ್‌ ಕೂಡ ಆಕರ್ಷಕವಾಗಿ ಕಾಣುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ಸ್.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Partywear Fashion: ಪಾರ್ಟಿವೇರ್‌ ಫ್ಯಾಷನ್‌ನಲ್ಲಿ ಬಿಂದಾಸ್‌ ಬ್ಯಾಕ್‌ಲೆಸ್‌ ಗೌನ್ಸ್ ಹಂಗಾಮ

Continue Reading
Advertisement
Liquor Consumption of poor man
ಕರ್ನಾಟಕ2 mins ago

Liquor Consumption: ಬಡವನ ಕುಡಿತದ ವಾರ್ಷಿಕ ಲೆಕ್ಕಾಚಾರ ಇಲ್ಲಿದೆ! ದಿನಕ್ಕೆ ಆತನ ಸರಾಸರಿ ಖರ್ಚೆಷ್ಟು?

Anganawadi worker
ಕರ್ನಾಟಕ2 mins ago

Anganawadi worker: ತಂಗಿಗೆ ನನ್ನ ಕೆಲಸ ಕೊಡಿ ಎಂದು ತನ್ನ ಬದುಕಿಗೆ ದುರಂತ ಅಂತ್ಯ ಹಾಡಿದ ಅಂಗನವಾಡಿ ಕಾರ್ಯಕರ್ತೆ!

Apsara Murder In Hyderabad
ಕ್ರೈಂ5 mins ago

Apsara Murder: ಪತ್ನಿ ಇದ್ದರೂ ಅರ್ಚಕನಿಗೆ ಬೇಕು ಲವ್ವರ್;‌ ಆಕೆ ಮದುವೆಯಾಗು ಎಂದಿದ್ದಕ್ಕೆ ಆದ ಕಿಲ್ಲರ್

Siddaramaiah as a conductor imaginary photo
ಕರ್ನಾಟಕ13 mins ago

Congress Guarantee: ಪಾರ್ಟ್‌ ಟೈಂ ಬಸ್ ಕಂಡಕ್ಟರ್‌ ಆಗಲಿದ್ದಾರೆ ಸಿಎಂ ಸಿದ್ದರಾಮಯ್ಯ!

Actress Nayanthara
South Cinema25 mins ago

Actress Nayanthara: ಅವಳಿ ಮಕ್ಕಳ ಜತೆ ಕ್ಯೂಟ್‌ ಆಗಿ ಫೋಟೊಶೂಟ್‌ ಮಾಡಿಸಿಕೊಂಡ ನಯನತಾರಾ!

rajeev sen and Charu Asopa divorce
ಕಿರುತೆರೆ26 mins ago

Celebrity Divorce: ಸಂಸಾರದಲ್ಲಿ ಬಿರುಕು, ಪತಿಯಿಂದ ದೂರವಾದ ಕಿರುತೆರೆ ನಟಿ

World Cup schedule
ಕ್ರಿಕೆಟ್31 mins ago

ICC World Cup 2023: ಏಕದಿನ ವಿಶ್ವಕಪ್‌ ವೇಳಾಪಟ್ಟಿ ಬಿಡುಗಡೆಗೆ ಮುಹೂರ್ತ ನಿಗದಿ

bhola shankar movie set
South Cinema33 mins ago

Chiranjeevi: ಅದ್ಧೂರಿಯಾಗಿದೆ ಭೋಲಾ ಶಂಕರ್‌ ಸೆಟ್‌; ಮತ್ತೊಮ್ಮೆ ಕ್ಯಾಬ್‌ ಡ್ರೈವರ್ ಪಾತ್ರದಲ್ಲಿ ಚಿರು

Darbar Movie Review
South Cinema37 mins ago

Darbar Movie Review: ಇದು ರಾಜಕಾರಣದ ʻದರ್ಬಾರ್‌ʼ, ಮತದಾರರ ಕಾರುಬಾರು!

western ghats in rain
ಪ್ರಮುಖ ಸುದ್ದಿ50 mins ago

Monsoon Travel: ಮಲೆನಾಡಿನ ಮಳೆಹಾಡಿನ ಹೊಸತನ! ರಾಜ್ಯದ ಈ ಟಾಪ್‌ 5 ತಾಣಗಳಿಗೆ ಮಳೆಯಲ್ಲೊಮ್ಮೆ ಭೇಟಿ ಕೊಡಿ

7th Pay Commission
ನೌಕರರ ಕಾರ್ನರ್7 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ4 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ13 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ4 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ4 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್3 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ6 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ7 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Teacher Transfer
ನೌಕರರ ಕಾರ್ನರ್8 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

smartphone
ವಾಣಿಜ್ಯ2 months ago

Mobile export : ಭಾರತದಿಂದ 2022-23ರಲ್ಲಿ 85,000 ಕೋಟಿ ರೂ. ಮೊಬೈಲ್‌ ಫೋನ್‌ ರಫ್ತು

Cancellation of tenders for 108 ambulances and Dinesh Gundu rao
ಆರೋಗ್ಯ5 hours ago

Dinesh Gundu Rao: ಬಿಜೆಪಿ ಅವಧಿಯ 108 ಆಂಬ್ಯುಲೆನ್ಸ್‌, ಡಯಾಲಿಸಿಸ್‌ ಟೆಂಡರ್‌ ರದ್ದು; ಆರೋಗ್ಯ ಇಲಾಖೆಯಲ್ಲಿ ಮೇಜರ್‌ ಸರ್ಜರಿ

Meghalaya Villagers Chase Bangladesh soldiers
ದೇಶ5 hours ago

Viral Video : ಗಡಿ ದಾಟಿ ಭಾರತಕ್ಕೆ ನುಗ್ಗಿದ ಬಾಂಗ್ಲಾ ಯೋಧರು! ಅಟ್ಟಾಟಿಸಿಕೊಂಡು ಒದ್ದೋಡಿಸಿದ ಹಳ್ಳಿಗರು

snake mate in chamarajnagar 2
ಕರ್ನಾಟಕ6 hours ago

Video Viral: ಚಾಮರಾಜನಗರದಲ್ಲಿ ಹಾವುಗಳ ಮಿಲನ; ಗಂಟೆಗೂ ಹೆಚ್ಚು ಸರಸ ಸಲ್ಲಾಪ! ವೈರಲ್‌ ಆಯ್ತು ವಿಡಿಯೊ

Rain in mangalore
ಉಡುಪಿ7 hours ago

Rain News: ಬಿಪರ್‌ಜಾಯ್‌ ಸೈಕ್ಲೋನ್ ಎಫೆಕ್ಟ್‌; ಮಂಗಳೂರಲ್ಲಿ ಚಿಟಪಟ ಮಳೆ

Rain in koppal
ಉಡುಪಿ22 hours ago

Weather Report: ಕರಾವಳಿಯಲ್ಲಿ ಗುಡುಗಲಿರುವ ಮಳೆ; ಮಲೆನಾಡು, ಒಳನಾಡಲ್ಲಿ ಹೇಗಿರಲಿದೆ ಪ್ರಭಾವಳಿ

youths rescued in Kaveri river
ಕರ್ನಾಟಕ23 hours ago

Video Viral: ತಲಕಾಡಿನ ಕಾವೇರಿ ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರು ಯುವಕರ ರಕ್ಷಣೆ!

Elephant attack in muttunga wildlife sanctuary
ಕರ್ನಾಟಕ1 day ago

Viral Video: ವನ್ಯಧಾಮದಲ್ಲಿ ಮೂತ್ರಕ್ಕೆಂದು ಕಾಡಿಗೆ ಹೋದ; ಆನೆ ದಾಳಿಗೆ ಹೆದರಿ ಪ್ಯಾಂಟ್‌ ಹಿಡಿದು ಓಡೋಡಿ ಬಂದ!

abhishek ambareesh wedding Reception
ಕರ್ನಾಟಕ2 days ago

Abhishek Ambareesh Reception: ಅಭಿ- ಅವಿವ ಅದ್ಧೂರಿ ಆರತಕ್ಷತೆ; ಲೈವ್‌ ವಿಡಿಯೊ ಇಲ್ಲಿದೆ

N Chaluvarayaswamy about Congress guarantee
ಕರ್ನಾಟಕ2 days ago

Video Viral: ಉಚಿತ ಗ್ಯಾರಂಟಿ ಯೋಜನೆ ಚುನಾವಣೆಯ ಚೀಪ್‌ ಗಿಮಿಕ್‌ ಎಂದ ಕೃಷಿ ಸಚಿವ ಚಲುವರಾಯಸ್ವಾಮಿ!

horoscope today love and horoscope
ಪ್ರಮುಖ ಸುದ್ದಿ3 days ago

Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!

ಟ್ರೆಂಡಿಂಗ್‌

error: Content is protected !!