Star Travel Fashion: ಸ್ವಿಟ್ಜರ್‌ಲ್ಯಾಂಡ್‌ ಸ್ಟ್ರೀಟ್‌ ಸ್ಟೈಲ್‌ ಟ್ರಾವೆಲ್‌ ಫ್ಯಾಷನ್‌ಗೆ ಸೈ ಎಂದ ನಟಿ ಅದಿತಿ ಪ್ರಭುದೇವ - Vistara News

ಫ್ಯಾಷನ್

Star Travel Fashion: ಸ್ವಿಟ್ಜರ್‌ಲ್ಯಾಂಡ್‌ ಸ್ಟ್ರೀಟ್‌ ಸ್ಟೈಲ್‌ ಟ್ರಾವೆಲ್‌ ಫ್ಯಾಷನ್‌ಗೆ ಸೈ ಎಂದ ನಟಿ ಅದಿತಿ ಪ್ರಭುದೇವ

ಸ್ವಿಟ್ಜರ್‌ಲ್ಯಾಂಡ್‌ ಪ್ರವಾಸದಲ್ಲಿರುವ ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ ಪತಿಯೊಂದಿಗೆ ಸ್ಟ್ರೀಟ್‌ಸ್ಟೈಲ್‌ ಟ್ರಾವೆಲ್‌ ಫ್ಯಾಷನ್‌ಗೆ (Star Travel Fashion) ಸೈ ಎಂದಿದ್ದಾರೆ. ಅವರ ಈ ಲುಕ್‌ ಬಗ್ಗೆ ಫ್ಯಾಷನ್‌ ವಿಮರ್ಶಕರು ಏನು ಹೇಳಿದ್ದಾರೆ? ಇಲ್ಲಿದೆ ಡಿಟೇಲ್ಸ್‌.

VISTARANEWS.COM


on

Star Travel Fashion ADITI PRABHUDEVA image
ಚಿತ್ರಗಳು: ಅದಿತಿ ಪ್ರಭುದೇವ, ಸ್ಯಾಂಡಲ್‌ವುಡ್‌ ನಟಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ ಸ್ವಿಟ್ಜರ್‌ಲ್ಯಾಂಡ್‌ನ ಸ್ಟ್ರೀಟ್‌ ಸ್ಟೈಲ್‌ ಟ್ರಾವೆಲ್‌ ಫ್ಯಾಷನ್‌ಗೆ (Star Travel Fashion) ಸೈ ಎಂದಿದ್ದಾರೆ. ಸಿಂಪಲ್‌ ಶಾರ್ಟ್ ಫ್ಲೋರಲ್‌ ಫ್ರಾಕ್‌ ಇದಕ್ಕೊಂದುವಂತಹ ಎರಡು ಪೋನಿಟೇಲ್‌ನ ಹೇರ್‌ಸ್ಟೈಲ್‌ ಜೊತೆಗೆ ಬ್ಯಾಕ್‌ಪ್ಯಾಕ್‌ನೊಂದಿಗೆ ಟ್ರಾವೆಲ್‌ ಲುಕ್‌ನಲ್ಲಿ ಕಾಲೇಜು ಹುಡುಗಿಯಂತೆ ಕಾಣಿಸಿಕೊಂಡಿದ್ದಾರೆ. ಇವರ ಈ ಲುಕ್‌ ಬಗ್ಗೆ ಫ್ಯಾಷನ್‌ ವಿಮರ್ಶಕರು ಮಾತನಾಡಿದ್ದು, ಸ್ಟಾರ್‌ ಯಂಗ್‌ ಲುಕ್‌ ಟ್ರಾವೆಲ್‌ ಫ್ಯಾಷನ್‌ ಎಂದು ವಿಮರ್ಶಿಸಿದ್ದಾರೆ.

ADITI PRABHUDEVA on jokali

ಲೇಯರ್‌ ಲುಕ್‌ ಬದಲು ಸಿಂಪಲ್‌ ಲುಕ್‌

ಅಂದಹಾಗೆ, ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಭೇಟಿ ನೀಡುವ ಬಹುತೇಕ ಪ್ರವಾಸಿಗರೆಲ್ಲರೂ ಲೇಯರ್‌ ಲುಕ್‌ಗೆ ಮೊರೆ ಹೋಗುತ್ತಾರೆ. ಆ ಮಟ್ಟಿಗೆ ಅಲ್ಲಿನ ವಾತಾವರಣ ಕೂಲಾಗಿರುತ್ತದೆ. ಜೊತೆಗೆ ಸ್ನೋ ಫಾಲ್‌ ಆಗುತ್ತಲೇ ಇರುತ್ತದೆ. ತಡೆಯಲಾರದಷ್ಟು ಕೊರೆಯುವ ಚಳಿ ಇರುತ್ತದೆ. ಆದರೆ, ನಟಿ ಅದಿತಿ ಪ್ರಭುದೇವ ಮಾತ್ರ ಸಿಂಪಲ್‌ ಫ್ರಾಕ್‌ನಲ್ಲಿ ಕಾಣಿಸಿಕೊಂಡಿರುವುದನ್ನು ನೋಡಿದರೇ ಸದ್ಯಕ್ಕೆ ಅಲ್ಲಿ ಚಳಿಯ ಹಾವಳಿ ಇಲ್ಲ, ಹವಾಮಾನ ಬದಲಾಗಿದೆ ಎಂಬಂತಿದೆ. ಬಿಸಿಲು ಇಣುಕಿದೆ. ಹಾಗಾಗಿ ಅವರು ಫ್ಲೋರಲ್‌ ಕಾಟನ್‌ ಫ್ರಾಕ್‌ ಧರಿಸಿದ್ದಾರೆ. ಇನ್ನು ಇದಕ್ಕೆ ಪೂರಕ ಎಂಬಂತೆ, ವೈಟ್‌ ಬೆಲ್ಟ್‌, ಮ್ಯಾಚಿಂಗ್‌ ಆಗುವ ವೈಟ್‌ ಶೂ, ನೆಕ್‌ಚೈನ್‌ ಧರಿಸಿದ್ದಾರೆ. ಇನ್ನು ಅವರ 2 ಪೋನಿಟೇಲ್‌ ಹೇರ್‌ಸ್ಟೈಲ್‌ ಕಂಪ್ಲೀಟ್‌ ಇಮೇಜ್‌ಗೆ ಹೊಸ ಲುಕ್‌ ನೀಡಿದ್ದು, ಯಂಗ್‌ ಲುಕ್‌ ನೀಡಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಮಿನಿಮಲ್‌ ಆಕ್ಸೆಸರೀಸ್‌ನಲ್ಲೂ ಅವರು ಆಕರ್ಷಕವಾಗಿ ಕಾಣಿಸುತ್ತಿರುವುದು ಅವರ ಸೌಂದರ್ಯಕ್ಕೆ ಸಾಕ್ಷಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ADITI PRABHUDEVA with cat Star Travel Fashion

ಬ್ಯಾಕ್‌ಪ್ಯಾಕ್‌ ಲುಕ್‌

ಟ್ರಾವೆಲ್‌ ಔಟ್‌ಫಿಟ್‌ ಫ್ಯಾಷನ್‌ ಮಾತ್ರವಲ್ಲ, ಜೊತೆಗೆ ಬ್ಯಾಕ್‌ಪ್ಯಾಕ್‌, ವೇಸ್ಟ್‌ಲೈನ್‌ ಬ್ಯಾಗ್‌, ಎಲ್ಲವನ್ನೂ ಜತೆಗಿರಿಸಿಕೊಂಡಿದ್ದಾರೆ. ಸಿಂಪಲ್‌ ಹುಡುಗಿಯಂತೆ ಸ್ಟ್ರೀಟ್‌ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ADITI PRABHUDEVA Star Travel Fashion

ಪತಿಯೊಂದಿಗೆ ಕಲರ್‌ ಟ್ವಿನ್ನಿಂಗ್‌

ಅದಿತಿ ಪತಿ ಕೂಡ ಸೇಮ್‌ ಶೇಡ್‌ನ ಶ್ವೇತ ವರ್ಣದ ಹೂಡಿ ಧರಿಸಿದ್ದು, ಟ್ವಿನ್ನಿಂಗ್‌ ಮಾಡಿದ್ದಾರೆ. ಇವರಿಬ್ಬರ ಸಿಂಪಲ್‌ ಟ್ರಾವೆಲ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ ಫ್ಯಾಷನ್‌ ಪ್ರಿಯರನ್ನು ಸೆಳೆದಿದೆ. ಟ್ರಾವೆಲ್‌ ಮಾಡುವಾಗ ಈ ರೀತಿ ಸಿಂಪಲ್‌ ಔಟ್‌ಫಿಟ್‌ಗಳು ಹೆಚ್ಚು ಹೊರೆಯೆನಿಸುವುದಿಲ್ಲ! ಇದಕ್ಕೆ ಇವರು ಮಾದರಿ ಎನ್ನಬಹುದು ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

(ಲೇಖಕಿ : ಫ್ಯಾಷನ್‌ ಲೇಖಕಿ)

ಇದನ್ನೂ ಓದಿ: Star Beach Fashion: ಗ್ಲಾಮರಸ್‌ ಬೀಚ್‌ ಕಫ್ತಾನ್‌ನಲ್ಲಿ ನಟಿ ದೀಪಿಕಾ ದಾಸ್‌ ಮಸ್ತಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Summer Fashion: ಉರಿ ಬಿಸಿಲಿನಲ್ಲಿ ಗಮನ ಸೆಳೆವ ನಟ ಶೈನ್‌ ಶೆಟ್ಟಿಯ ಕೂಲ್‌ ಸ್ಮೈಲ್‌ & ಸ್ಟೈಲ್‌!

ನಟ ಹಾಗೂ ಬಿಗ್‌ಬಾಸ್‌ ಕಂಟೆಸ್ಟಂಟ್‌ ಶೈನ್‌ ಶೆಟ್ಟಿ ಈ ಸಮ್ಮರ್‌ನಲ್ಲಿ (Summer Fashion) ಕೂಲ್‌ ಆಗಿ ಕಾಣಿಸಿಕೊಂಡಿದ್ದಾರೆ. ಯಾವ ಮಟ್ಟಿಗೆ ಕೂಲಾಗಿ ಕಾಣಿಸಿಕೊಂಡಿದ್ದಾರೆ ಎಂದರೇ, ಹುಡುಗರು ಕೂಡ ಇವರ ಸ್ಟೈಲ್‌ ಸ್ಟೇಟ್‌ಮೆಂಟ್‌ ಫಾಲೋ ಮಾಡಲು ಸಿದ್ಧರಾಗಿದ್ದಾರೆ. ಅಂದ ಹಾಗೆ, ಇವರ ಲುಕ್‌ನಲ್ಲಿ ಅಂತಹದ್ದೇನಿದೆ? ಇಲ್ಲಿದೆ ಡಿಟೇಲ್ಸ್.‌

VISTARANEWS.COM


on

Shine Shetty Summer Fashion
ಚಿತ್ರಗಳು: ಶೈನ್‌ ಶೆಟ್ಟಿ, ನಟಿ, ಬಿಗ್‌ಬಾಸ್‌ ಕಂಟೆಸ್ಟಂಟ್‌, ಫೋಟೋಗ್ರಾಫಿ : ನಾಗರಾಜ ಸೋಮಾಯಾಜಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟ ಹಾಗೂ ಬಿಗ್‌ಬಾಸ್‌ ಕಂಟೆಸ್ಟಂಟ್‌ ಶೈನ್‌ ಶೆಟ್ಟಿ ಈ ಸಮ್ಮರ್‌ನಲ್ಲಿ (Summer Fashion) ಸಖತ್‌ ಕೂಲ್‌ ಆಗಿ ಕಾಣಿಸಿಕೊಂಡಿದ್ದಾರೆ.ಹೌದು, ಶೈನ್‌ ಶೆಟ್ಟಿಯವರ ಈ ಸೀಸನ್‌ನ ಸ್ಟೈಲ್‌ ಸ್ಟೇಟ್‌ಮೆಂಟ್ಸ್‌ ಯಾವ ಮಟ್ಟಿಗೆ ಪುರುಷರಿಗೆ ಇಷ್ಟವಾಗಿದೆ ಎಂದರೇ, ಇವರ ಫ್ಯಾನ್‌ ಫಾಲೋವಿಂಗ್‌ ಹುಡುಗರು ಮಾತ್ರವಲ್ಲ, ಕಾರ್ಪೋರೇಟ್‌ ಕ್ಷೇತ್ರದ ಹುಡುಗರು ಕೂಡ ಇವರ ಫ್ಯಾಷನ್‌ ಸ್ಟೇಟ್‌ಮೆಂಟ್‌ಗೆ ಮಾರು ಹೋಗಿದ್ದಾರೆ.

Shine Shetty Summer Fashion

ಶೈನ್‌ ಶೆಟ್ಟಿ ನ್ಯಾಚುರಲ್‌ ಲುಕ್‌

“ಶೈನ್‌ ಶೆಟ್ಟಿ ಮೊದಲಿನಿಂದಲೂ ನ್ಯಾಚುರಲ್‌ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇವರು ಮೂಲತಃ ಮಂಗಳೂರಿನವರಾಗಿರುವುದರಿಂದಲೋ ಏನೋ ಬಿಸಿಲಲ್ಲೂ ಆರಾಮಾಗಿ ಕಾಣಿಸಿಕೊಳ್ಳುತ್ತಾರೆ. ಅಲ್ಲದೇ, ತಮ್ಮ ಸಿಂಪಲ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ನಿಂದಲೇ ಎಲ್ಲರನ್ನು ಸೆಳೆಯುತ್ತಾರೆ. ಹುಡುಗಿಯರು ಮಾತ್ರವಲ್ಲ, ಹುಡುಗರು ಕೂಡ ಇವರ ಲುಕ್‌ಗೆ ಫಿದಾ ಆಗುತ್ತಾರಂತೆ. ತೀರಾ ಫ್ಯಾಷನ್‌ ಕಾನ್ಶಿಯಸ್‌ ಕೂಡ ಅಲ್ಲದ ಇವರ ಪ್ರತಿಯೊಂದು ಫ್ಯಾಷನ್‌ ಸ್ಟೇಟ್‌ಮೆಂಟ್‌ಗಳು ಕೂಡ ಇವರನ್ನು ಸದಾ ನ್ಯಾಚುರಲ್‌ ಲುಕ್‌ನಲ್ಲಿ ಬಿಂಬಿಸುತ್ತವಂತೆ. ಇನ್ನು, ಇವರ ತಿಳಿ ವರ್ಣದ ಸ್ಕಿನ್‌ ಟೋನ್‌ನಿಂದಾಗಿ ಅವರು ಧರಿಸುವ ಎಲ್ಲಾ ಬಗೆಯ ಔಟ್‌ಫಿಟ್ಸ್‌ ಕೂಡ ಇವರಿಗೆ ಮ್ಯಾಚ್‌ ಆಗುತ್ತವಂತೆ. ಎಲ್ಲದಕ್ಕಿಂತ ಹೆಚ್ಚಾಗಿ ಇವರ ಯೂನಿಕ್‌ ಫ್ಯಾಷನ್‌ನಲ್ಲಿ ಸೇರಿರುವ ಸಿಂಪಲ್‌ ಸ್ಮೈಲ್‌ ಇಡೀ ಲುಕ್‌ಗೆ ಸಾಥ್‌ ನೀಡುವುದನ್ನು ಗಮನಿಸಬಹುದು” ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ಅಮಿತ್‌ ಪಾಂಡ್ಯಾ ಅವರ ಪ್ರಕಾರ, ಕೆಲವು ನಟರು ತಮ್ಮ ನ್ಯಾಚುರಲ್‌ ಲುಕ್‌ನಿಂದಾಗಿಯೇ ಆಕರ್ಷಕವಾಗಿ ಕಾಣಿಸುತ್ತಾರೆ. ಇದು ಅವರ ಪ್ಲಸ್‌ ಪಾಯಿಂಟ್‌ ಎನ್ನುತ್ತಾರೆ.

Shine Shetty Summer Fashion

ಶೈನ್‌ ಶೆಟ್ಟಿ ಸಮ್ಮರ್‌ ಲುಕ್‌ನಲ್ಲಿ ಏನಿದೆ?

ಮನಸ್ಸಿಗೆ ಮುದ ನೀಡುವಂತಹ ಶೇಡ್‌ನ ಔಟ್‌ಫಿಟ್‌! ವೈಟ್‌ ಪ್ಯಾಂಟ್‌ ಕಾಟನ್‌ ಪ್ರಿಂಟೆಡ್‌ ಶರ್ಟ್.‌ ಜೊತೆಗೆ ಅದಕ್ಕೆ ಹೊಂದುವ ಹೇರ್‌ಸ್ಟೈಲ್‌, ಸಿಂಪಲ್‌ ಚಪ್ಪಲಿ ಎಲ್ಲವೂ ಶೈನ್‌ ಸಮ್ಮರ್‌ ಲುಕ್‌ನಲ್ಲಿ ಸೇರಿದೆ. ಸನ್‌ ಗ್ಲಾಸ್‌ ಇವರನ್ನು ಮತ್ತಷ್ಟು ಹ್ಯಾಂಡ್‌ಸಮ್‌ ಆಗಿ ಕಾಣುವಂತೆ ಬಿಂಬಿಸಿದೆ. ಇವರ ಒಟ್ಟಾರೆ ಲುಕ್ಗೆ ಫ್ಯಾಷನ್‌ ಸ್ಟೈಲಿಸ್ಟ್‌ಗಳಾದ ತೇಜಸ್ವಿನಿ ಹಾಗೂ ಖುಷಿಯವರ ಸ್ಟೈಲಿಂಗ್‌ ಸಪೋರ್ಟ್‌ ಇದೆ.

Shine Shetty Summer Fashion

ಶೈನ್‌ ಶೆಟ್ಟಿ ಫ್ಯಾಷನ್‌ ಮಂತ್ರ

ಇನ್ನು, ಕಳೆದ ಬಾರಿ ವಿಸ್ತಾರ ನ್ಯೂಸ್‌ನೊಂದಿಗೆ ತಮ್ಮ ಫ್ಯಾಷನ್‌ ಹಾಗೂ ಸ್ಟೈಲ್‌ಸ್ಟೇಟ್‌ಮೆಂಟ್‌ ಬಗ್ಗೆ ಮಾತನಾಡಿದ್ದ ಶೈನ್‌ ಶೆಟ್ಟಿ, ನಾನಂತೂ ಇದುವೆರಗೂ ಇಂತಹದ್ದೇ ಫ್ಯಾಷನ್‌ ಹಾಗೂ ಸ್ಟೈಲ್‌ ಫಾಲೋಮಾಡಬೇಕೆಂಬ ರೂಲ್ಸ್‌ ಹಾಕಿಕೊಂಡಿಲ್ಲ! ಯಾವುದಾದರೂ ಸರಿಯೇ ನೋಡುಗರಿಗೆ ಪ್ಲೆಸೆಂಟ್‌ ಆಗಿ ಕಾಣಿಸಬೇಕು. ಧರಿಸಿದ ಮನಕ್ಕೂ ಮುದ ನೀಡಬೇಕು. ಸೀಸನ್‌ಗೆ ತಕ್ಕಂತೆ ಉಡುಪುಗಳನ್ನು ಆಯ್ಕೆ ಮಾಡಿ ಧರಿಸಬೇಕು. ಇನ್ನು ಕಲರ್‌ಗಳ ವಿಷಯಕ್ಕೆ ಬಂದಲ್ಲಿ, ನಮ್ಮ ಮುಖಕ್ಕೆ ಹಾಗೂ ಸಿನ್‌ ಟೋನ್‌ಗೆ ಹೊಂದುವಂತಹ ಬಣ್ಣದ ಉಡುಗೆಗಳನ್ನು ಸೆಲೆಕ್ಟ್‌ ಮಾಡುವುದು ಉತ್ತಮ ಎಂದಿದ್ದರು. ಇನ್ನು, ತಾರೆಯರ ಫ್ಯಾಷನ್‌ ಫಾಲೋ ಮಾಡಲು ಬಯಸುವ ಹುಡುಗರು, ಮೊದಲಿಗೆ ತಾವು ಕಾಪಿ ಮಾಡುತ್ತಿರುವ ಸ್ಟೈಲಿಂಗ್‌ ಮ್ಯಾಚ್‌ ಆಗುತ್ತವೆಯೇ! ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅದನ್ನು ಬಿಟ್ಟು, ಸುಖಸುಮ್ಮನೇ, ಕಂಡ ಕಂಡ ಫ್ಯಾಷನ್‌ ಫಾಲೋ ಮಾಡುವುದಲ್ಲ. ಇಮಿಟೇಟ್‌ ಮಾಡುವಾಗಲು ಅದು ತಮಗೆ ಹೊಂದುತ್ತದೆಯೇ ಎಂಬುದನ್ನು ಅರಿಯಬೇಕು ಎಂದು ಹುಡುಗರಿಗೆ ಸಲಹೆ ನೀಡಿದ್ದರು.

ಹುಡುಗರಿಗೆ ಫ್ಯಾಷನ್‌ ವಿಮರ್ಶಕರ ಟಿಪ್ಸ್‌

ಶೈನ್‌ ಶೆಟ್ಟಿಯಂತೆ ಸಮ್ಮರ್‌ ಫ್ಯಾಷನ್‌ ಫಾಲೋ ಮಾಡುವವರು ಕೆಲವು ವಿಷಯಗಳನ್ನು ಮನದಲ್ಲಿಟ್ಟುಕೊಳ್ಳಬೇಕು.

ಇದನ್ನೂ ಓದಿ: Mega Shetty: ದಾವಣಿ-ಲಂಗದಲ್ಲಿ ನಟಿ ಮೇಘಾ ಶೆಟ್ಟಿಯಂತೆ ನೀವೂ ಕಾಣಬೇಕೆ? ಈ ಟಿಪ್ಸ್ ಪಾಲಿಸಿ!

  • 1. ಲೈಟ್‌ ಶೇಡ್‌ ಆಯ್ಕೆ ಮಾಡಬೇಕು.
  • 2. ಕಾಟನ್‌ ಶರ್ಟ್‌ ಆಯ್ಕೆ ಉತ್ತಮ.
  • 3. ಗಾಳಿಯಾಡುವಂತಹ ಪಾದರಕ್ಷೆಗಳು ಕೂಲ್‌ ಆಗಿರಿಸುತ್ತವೆ.
  • 4. ಸನ್‌ಗ್ಲಾಸ್‌ ಬಿಸಿಲಿನಿಂದ ಕಣ್ಣುಗಳನ್ನು ಸಂರಕ್ಷಿಸುತ್ತವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Mega Shetty: ದಾವಣಿ-ಲಂಗದಲ್ಲಿ ನಟಿ ಮೇಘಾ ಶೆಟ್ಟಿಯಂತೆ ನೀವೂ ಕಾಣಬೇಕೆ? ಈ ಟಿಪ್ಸ್ ಪಾಲಿಸಿ!

ನಟಿ ಮೇಘಾ ಶೆಟ್ಟಿಯ (Mega Shetty) ದಾವಣಿ-ಲಂಗದ ಸಿಂಪಲ್‌ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹೆಚ್ಚು ಖರ್ಚಿಲ್ಲದೇ, ಮೇಕಪ್‌ ಹಚ್ಚದೇ ಇರುವ ಅವರ ಈ ಲುಕ್‌ ಈ ಸೀಸನ್‌ಗೆ ಹೇಳಿಮಾಡಿಸಿದಂತಿದೆ. ಏನಿದು ಇವರ ಲುಕ್‌ ಇಲ್ಲಿದೆ ಕಿರುನೋಟ.

VISTARANEWS.COM


on

Mega Shetty
ಚಿತ್ರಗಳು : ಮೇಘಾ ಶೆಟ್ಟಿ, ನಟಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟಿ ಮೇಘಾ ಶೆಟ್ಟಿಯ (Mega Shetty) ದಾವಣಿ-ಲಂಗದ ಸಿಂಪಲ್‌ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಹೆಚ್ಚು ಖರ್ಚಿಲ್ಲದೇ, ಮೇಕಪ್‌ ಹಚ್ಚದೇ ಇರುವ ಅವರ ಈ ಸಿಂಪಲ್‌ ದಾವಣಿ -ಲಂಗದ ಲುಕ್‌ ಎಲ್ಲರನ್ನು ಆಕರ್ಷಿಸಿದೆ. ನೋಡಲು ಮಾತ್ರವಲ್ಲ, ಈ ಔಟ್‌ಫಿಟ್‌ನ ಡಿಸೈನ್‌ ಕೂಡ ಡಿಸೆಂಟ್‌ ಲುಕ್‌ ನೀಡಿದೆ. ಅಂದಹಾಗೆ, ನಟಿ ಮೇಘಾ ಶೆಟ್ಟಿ, ಕಿರುತರೆಯ ಧಾರವಾಹಿಯ ಮೂಲಕ ಹೆಸರು ಮಾಡಿದವರು. ಈ ಮಧ್ಯೆ ಸಿನಿಮಾಗಳ ಮೂಲಕ ಬೆಳ್ಳಿತೆರೆಯಲ್ಲೂ ಕಾಣಿಸಿಕೊಂಡಿದ್ದಾರೆ. ಆಗಾಗ್ಗೆ ಸಾಕಷ್ಟು ಫೋಟೋಶೂಟ್‌ಗಳ ಮೂಲಕ ಸೀಸನ್‌ನ ಟ್ರೆಂಡಿ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಅವರು ಧರಿಸುವ ಔಟ್‌ಫಿಟ್‌ಗಳು ಕೂಡ ಒಂದಕ್ಕಿಂತ ಒಂದು ಗಮನ ಸೆಳೆಯುವಂತಿರುತ್ತವೆ.

Mega Shetty image

ಮೇಘಾ ಶೆಟ್ಟಿಯ ದಾವಣಿ-ಲಂಗದ ಲವ್‌

ಮೇಘಾ ಶೆಟ್ಟಿ ಇತ್ತೀಚೆಗೆ ಅತಿ ಹೆಚ್ಚು ದಾವಣಿ-ಲಂಗ ಡಿಸೈನರ್‌ವೇರ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಅವುಗಳಲ್ಲಿ ಬಹಳಷ್ಟು ಡಿಸೈನರ್‌ವೇರ್‌ಗಳು ಸೆಲೆಬ್ರೆಟಿ ಲಕ್ಷ್ಮಿಕೃಷ್ಣ ಅವರದ್ದೇ ಆಗಿವೆ. ಸಿಂಪಲ್‌ ಡಿಸೈನ್‌ಗಳಿಂದಿಡಿದು ಟ್ರೆಡಿಷನಲ್‌ ಲುಕ್‌ ನೀಡುವ ಅವರ ನಾನಾ ಶೈಲಿಯ ಪ್ರಿಂಟ್ಸ್‌ನ ಹಾಗೂ ಬಾರ್ಡರ್‌ನ ದಾವಣಿ-ಲಂಗಗಳಲ್ಲಿ ಮೇಘಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಕೆಲವು ಹಬ್ಬದ ಸಮಯದಲ್ಲಿ ಧರಿಸಿ ಕಾಣಿಸಿಕೊಂಡರೇ ಮತ್ತೇ ಕೆಲವು ಸಾಮಾನ್ಯ ದಿನಗಳಲ್ಲಿ ಧರಿಸಿ, ಅಭಿಮಾನಿಗಳನ್ನು ಸೆಳೆದಿದ್ದಾರೆ. ಆ ಮಟ್ಟಿಗೆ ದಾವಣಿ-ಲಂಗದ ಅವರ ಫೋಟೋಗಳು ಹಿಟ್‌ ಆಗಿವೆ. ಸಾಮಾನ್ಯ ಹುಡುಗಿಯರನ್ನು ಮಾತ್ರವಲ್ಲ, ಎಲ್ಲಾ ಕೆಟಗರಿಯವರನ್ನು ಸೆಳೆದಿವೆ. ಸೆಲೆಬ್ರೆಟಿ ಡಿಸೈನರ್‌ ಲಕ್ಷಿಕೃಷ್ಣ ಅವರ ಈ ದಾವಣಿ-ಲಂಗ ಡಿಸೈನರ್‌ವೇರ್‌ಗಳು ಸ್ಥಳೀಯ ಸಂಸ್ಕೃತಿ ಬಿಂಬಿಸುವಂತಹ ಫ್ಯಾಬ್ರಿಕ್‌ ಹಾಗೂ ಸಿಂಪಲ್‌ ಡಿಸೈನ್‌ ಹೊಂದಿರುವುದು ಎಲ್ಲರ ಗಮನಸೆಳೆಯಲು ಕಾರಣವಾಗಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು. ಅವರ ಪ್ರಕಾರ, ಮೇಘಾ ಶೆಟ್ಟಿಯ ದಾವಣಿ-ಲಂಗದ ಲುಕ್‌ ಆವರನ್ನು ಪಕ್ಕದ ಮನೆ ಹುಡುಗಿಯಂತೆ ಬಿಂಬಿಸಿವೆ. ಇದು ಸಾಮಾನ್ಯ ಜನರನ್ನು ತಲುಪಲು ಸಾಧಯವಾಗಿಸಿವೆ ಎನ್ನುತ್ತಾರೆ.

Mega Shetty photo

‌ದಾವಣಿ-ಲಂಗ ಅಭಿಮಾನಿಗಳಿಗೆ ಟಿಪ್ಸ್‌

ದಾವಣಿ-ಲಂಗದಲ್ಲಿ ಮೇಘಾ ಶೆಟ್ಟಿಯಂತೆ ನೀವೂ ಕಾಣಿಸಬೇಕೇ! ಹಾಗಾದಲ್ಲಿ ಹೀಗೆ ಮಾಡಿ ನೋಡಿ ಎನ್ನುತ್ತಾರೆ ಸೆಲೆಬ್ರೆಟಿ ಡಿಸೈನರ್ ಲಕ್ಷ್ಮಿಕೃಷ್ಣ. ಅವರು ಹೇಳುವಂತೆ, ದಾವಣಿ-ಲಂಗದಲ್ಲಿ ಸೆಲೆಬ್ರೆಟಿ ಲುಕ್‌ ಪಡೆಯಲು ಆದಷ್ಟೂ ಡಿಸೈನರ್‌ ಔಟ್‌ಫಿಟ್‌ ಚೂಸ್‌ ಮಾಡಬೇಕು. ಇಲ್ಲವಾದಲ್ಲಿ ಸಿಂಪಲ್‌ ಲುಕ್‌ಗಾಗಿ ಹೀಗೂ ಮಾಡಬಹುದು. ಟ್ರೆಡಿಷನಲ್‌ ಲುಕ್‌ ಇರುವಂತಹ ಸಮ್ಮರ್‌ ಸೀಸನ್‌ಗೆ ಹೊಂದುವಂತಹ ಫ್ಯಾಬ್ರಿಕ್‌ ಆಯ್ಕೆ ಮಾಡಿ, ಸ್ಟಿಚ್‌ ಮಾಡಿಸಬೇಕು. ಬ್ಲೌಸ್‌ ಹಾಗೂ ಲಂಗ ಡಿಸೈನ್‌ ಹೆವ್ವಿಯಾಗಿರಬಾರದು. ಟ್ರೆಡಿಷನಲ್‌ ಲುಕ್‌ ಬೇಕಿದ್ದಲ್ಲಿ ಬಾರ್ಡರ್‌ ಇರುವಂತದ್ದನ್ನು ಮಾತ್ರ ಚೂಸ್‌ ಮಾಡಬೇಕು.

Mega Shetty picture

ಸೀಸನ್‌ ದಾವಣಿ-ಲಂಗದ ಫ್ಯಾಬ್ರಿಕ್‌ಗೆ ಆದ್ಯತೆ

ಇನ್ನು, ಈ ಸಮ್ಮರ್‌ನಲ್ಲಿ ತೀರಾ ಸಿಂಪಲ್‌ ಲುಕ್‌ ಬೇಕಿದ್ದಲ್ಲಿ ಆದಷ್ಟೂ ಕಾಟನ್‌ ಫ್ಯಾಬ್ರಿಕ್‌ಗೆ ಆದ್ಯತೆ ನೀಡುವುದು ಉತ್ತಮ. ಇನ್ನು, ಇದಕ್ಕೆ ಪೂರಕ ಎಂಬಂತೆ. ಇದೀಗ ಪರಿಸರ ಸ್ನೇಹಿ ಫ್ಯಾಬ್ರಿಕ್‌ಗಳು ಆಗಮಿಸಿವೆ.

ಇದನ್ನೂ ಓದಿ: Chaitra Achar: ನೋಡುಗರ ಹುಬ್ಬೇರಿಸಿದ ನಟಿ ಚೈತ್ರಾ ಆಚಾರ್‌ ಪಾರದರ್ಶಕ ನಿಟ್‌ವೇರ್

ಸಿಂಪಲ್‌ ದಾವಣಿ

ಸಿಂಪಲ್‌ ದಾವಣಿ ಇಡೀ ಲುಕ್ಕನ್ನು ಮನಮೋಹಕವಾಗಿಸುವುದಲ್ಲದೇ, ತೀರಾ ಸಿಂಪಲ್‌ ಲುಕ್‌ ನೀಡುವುದು. ಮೇಘಾ ಶೆಟ್ಟಿಯ ದಾವಣಿಗಳು ಎಲ್ಲವೂ ಮಾನೋಕ್ರೋಮ್‌ ಶೇಡ್‌ನದ್ದಾಗಿವೆ ಹಾಗೂ ಸಿಂಪಲ್‌ ಹಾಗೂ ಸಾದಾ ಆಗಿವೆ. ಹಾಗಾಗಿ ಅವರಿಗೆ ಡಿಸೆಂಟ್‌ ಲುಕ್‌ ನೀಡಿವೆ ಎನ್ನುತ್ತಾರೆ ಡಿಸೈನರ್‌ ಲಕ್ಷ್ಮಿ ಕೃಷ್ಣ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Chaitra Achar: ನೋಡುಗರ ಹುಬ್ಬೇರಿಸಿದ ನಟಿ ಚೈತ್ರಾ ಆಚಾರ್‌ ಪಾರದರ್ಶಕ ನಿಟ್‌ವೇರ್

ಸದಾ ಟ್ರೆಡಿಷನಲ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ಚೈತ್ರಾ ಆಚಾರ್‌ (Chaitra Achar), ಈ ಬಿರು ಬಿಸಿಲಿನಲ್ಲೂ ಪಾರದರ್ಶಕ ನಿಟ್‌ವೇರ್‌ ಧರಿಸಿ ಬಿಂದಾಸ್‌ ಆಗಿ ಕಾಣಿಸಿಕೊಂಡಿರುವುದು, ನೋಡುಗರ ಹುಬ್ಬೇರಿದೆ. ಅರರೆ, ಇದ್ಯಾವ ಡ್ರೆಸ್‌? ಎಂದು ಯೋಚಿಸುತ್ತಿದ್ದೀರಾ? ಈ ಬಗ್ಗೆ ಇಲ್ಲಿದೆ ಡಿಟೇಲ್ಸ್.‌

VISTARANEWS.COM


on

Chaitra Achar
ಚಿತ್ರಗಳು: ಚೈತ್ರಾ ಜೆ. ಆಚಾರ್‌, ಸ್ಯಾಂಡಲ್‌ವುಡ್‌ ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸದಾ ಟ್ರೆಡಿಷನಲ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ಚೈತ್ರಾ ಆಚಾರ್‌ (Chaitra Achar), ಈ ಬಿರು ಬಿಸಿಲಿನಲ್ಲಿ, ಪಾರದರ್ಶಕ ನಿಟ್‌ವೇರ್‌ ಧರಿಸಿ ಬಿಂದಾಸ್‌ ಆಗಿ ಕಾಣಿಸಿಕೊಂಡು, ನೋಡುಗರ ಹುಬ್ಬೇರಿಸಿದ್ದಾರೆ.

Chaitra Achar pic

ಪ್ರಯೋಗಾತ್ಮಕ ಹಾಟ್‌ ಲುಕ್‌

“ಬಿಸಿಲು ಕಾಲದಲ್ಲಿ ತಾರೆಯರು ನಾನಾ ಬಗೆಯ ಸಮ್ಮರ್‌ವೇರ್‌ ಧರಿಸುವುದು ಸಾಮಾನ್ಯ. ಇದರೊಂದಿಗೆ ಟ್ರೆಂಡ್‌ ಸೆಟ್‌ ಮಾಡುವುದರೊಂದಿಗೆ ಸೀಸನ್‌ಗೆ ತಕ್ಕಂತೆ ಕಾಣಿಸಿಕೊಳ್ಳುತ್ತಾರೆ. ಇನ್ನು ಕೆಲವು ನಟಿಯರು, ಒಂದು ಹೆಜ್ಜೆ ಮುಂದೆ ಇಡುತ್ತಾರೆ. ಸೀಸನ್‌ನಲ್ಲಿ ಟ್ರೆಂಡಿಯಾಗಿರದ ಉಡುಪುಗಳನ್ನು ಚಿತ್ರ-ವಿಚಿತ್ರವಾಗಿ ಧರಿಸಿ, ನೋಡುಗರನ್ನು ಸೆಳೆಯುತ್ತಾರೆ. ಇದಕ್ಕೆ ಸೋಷಿಯಲ್‌ ಮೀಡಿಯಾ ಕೂಡ ಸಾಥ್‌ ನೀಡುತ್ತದೆ. ಈ ನಿಟ್ಟಿನಲ್ಲಿ ಇದೀಗ ಸ್ಯಾಂಡಲ್‌ವುಡ್‌ ನಟಿ ಚೈತ್ರಾ ಆಚಾರ್‌ ಸರದಿ. ಮೊದಲಿನಿಂದಲೂ ಬಹುತೇಕ ಟ್ರೆಡಿಷನಲ್‌ ಹಾಗೂ ಕೂಲ್‌ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರು, ಇದ್ದಕ್ಕಿಂದ್ದಂತೆ ಪಾರದರ್ಶಕ ನಿಟ್ಟೆಡ್‌ವೇರ್‌ ಧರಿಸಿದ್ದಾರೆ. ಎಲ್ಲದಕ್ಕಿಂತ ಹುಬ್ಬೇರಿಸುವ ವಿಚಾರವೆಂದರೇ, ಅವರು ಈ ನಿಟ್ಟೇಡ್‌ವೇರ್‌ನೊಳಗೆ ಧರಿಸಿರುವ ಇನ್ನರ್‌ವೇರ್ಸ್‌ ಹೈ ಲೈಟಾಗಿರುವುದು. ಇದು ಬೇಕಂತಲೇ ಮಾಡಿರುವ ಸ್ಟೈಲಿಂಗ್‌. ಸಮ್ಮರ್‌ ಸ್ಟೈಲಿಂಗ್‌ ಎನ್ನಲು ಸಾಧ್ಯವಿಲ್ಲ! ಯಾಕೆಂದರೇ, ಅವರು ಧರಿಸಿರುವ ಟ್ರಾನ್ಸಪರೆಂಟ್‌ ಫುಲ್‌ಓವರ್ನಂತಹ ನಿಟ್ಟೆಡ್‌ವೇರ್‌ ಈ ಸೀಸನ್‌ನ ಔಟ್‌ಫಿಟ್‌ ಅಲ್ಲವೇ ಅಲ್ಲ. ಹಾಗಾಗಿ ಇದೊಂದು ಪ್ರಯೋಗಾತ್ಮಕ ಸ್ಟೈಲಿಂಗ್‌” ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ವಿದ್ಯಾ. ಅವರ ಪ್ರಕಾರ, ಇದೊಂದು ಮಿಕ್ಸ್‌ ಮ್ಯಾಚ್‌ ಇಂಡಿಪೆಂಟೆಂಡ್‌ ಸ್ಟೈಲಿಂಗ್‌. ಇದಕ್ಕಾಗಿ ಏನೂ ವೆಚ್ಚ ಮಾಡದೇ ಬಿಂಬಿಸಿಕೊಂಡಿರುವ ಲುಕ್‌ ಎನ್ನುತ್ತಾರೆ.

Chaitra Achar photo

ಏನಿದು ನಿಟ್ಟೆಡ್‌ವೇರ್‌ ಮೆಶ್‌ ಲುಕ್‌

ಮೆಶ್‌ ಲುಕ್‌ ಎಂದರೇ, ಪಾರದರ್ಶಕ ಉಡುಪಿನ ಲುಕ್‌. ಇದು ಯಾವುದೇ ಜಾಲರಿಯಂತಹ ಉಡುಪು ಧರಿಸಿದಾಗ ಹೇಳಲಾಗುತ್ತದೆ. ಅದು ಕೀ ಹೋಲ್‌, ಲೇಸ್‌ ಕಟೌಟ್‌ ಸೇರಿದಂತೆ ಜಾಲರಿಯಂತಹ ಯಾವುದೇ ಉಡುಪಾಗಬಹುದು. ನಿಟ್ಟೆಡ್ವೇರ್‌ ಎಂದಾಗ ಎಲ್ಲರಿಗೂ ತೋಚುವುದು ಚಳಿಗಾಲದಲ್ಲಿ ಧರಿಸುವ ಪುಲ್‌ಓವರ್‌ನಂತ ಸ್ವೆಟರ್ಗಳು. ಉಡುಪಿನ ಮೇಲೆ ಧರಿಸುವ ಉಲ್ಲನ್‌ನಿಂದ ಸಿದ್ಧಪಡಿಸಲಾದ ತೆಳುವಾದ ಮೇಲುಡುಗೆಗಳಿವು. ಇದೀಗ ಇದನ್ನೇ ನಟಿ ಚೈತ್ರಾ ಆಚಾರ್‌ ತಮ್ಮ ಸ್ಟೈಲಿಂಗ್‌ನಲ್ಲಿ ಸೇರಿಸಿಕೊಂಡು, ಇನ್ನರ್‌ವೇರ್‌ ಮೇಲೆ ಧರಿಸಿ, ಹಾಟ್‌ ಲುಕ್‌ಗೆ ನಾಂದಿ ಹಾಡಿದ್ದಾರೆ.

Chaitra Achar image

ಯಾರಿದು ಚೈತ್ರಾ ಆಚಾರ್‌

ಮಾಹಿರಾ ಚಿತ್ರದ ಮೂಲಕ ನಟನೆಗೆ ಕಾಲಿಟ್ಟ ಚೈತ್ರಾ ಆಚಾರ್‌, ಸಪ್ತ ಸಾಗರಾದಾಚೆ, ಬ್ಲಿಂಕ್‌, ಉತ್ತರಾಕಾಂಡ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದು, ಇವರು ಗಾಯಕಿ ಕೂಡ.

Chaitra Achar picture

ಚೈತ್ರಾ ಹಾಟ್‌ ಲುಕ್‌

ಸದಾ ಒಂದಲ್ಲ ಒಂದು ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಚೈತ್ರಾ ಆಚಾರ್‌ರ ಈ ಹೊಸ ಪ್ರಯೋಗಾತ್ಮಕ ಹಾಟ್‌ ಲುಕ್‌, ಪ್ರಯೋಗಾತ್ಮಕ ಬಿಂದಾಸ್‌ ಸ್ಟೈಲಿಂಗ್‌ಗೆ ಸೇರಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Saree Fashion: ಸೀರೆಯ ಹೊಸ ಟ್ರೆಂಡ್‌ ಬಗ್ಗೆ ರ‍್ಯಾಪರ್‌ ಇಶಾನಿಯ ವ್ಯಾಖ್ಯಾನ ಇದು!

Continue Reading

ಫ್ಯಾಷನ್

Saree Fashion: ಸೀರೆಯ ಹೊಸ ಟ್ರೆಂಡ್‌ ಬಗ್ಗೆ ರ‍್ಯಾಪರ್‌ ಇಶಾನಿಯ ವ್ಯಾಖ್ಯಾನ ಇದು!

ಕನ್ನಡ ರ‍್ಯಾಪರ್‌, ಬಿಗ್‌ ಬಾಸ್‌ ಕಂಟೆಸ್ಟಂಟ್‌ ಇಶಾನಿ ರಫಲ್‌ ಸೀರೆಯಲ್ಲಿ ಆಕರ್ಷಕವಾಗಿ (Saree Fashion) ಕಾಣಿಸಿಕೊಂಡಿದ್ದಾರೆ. ಈ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ಈ ಶೈಲಿಯ ಸೀರೆ ಯುವತಿಯರನ್ನು ಮಾತ್ರವಲ್ಲ, ಎಲ್ಲಾ ವರ್ಗದ ಮಹಿಳೆಯರನ್ನು ಕೂಡ ಸೆಳೆದಿದೆ. ಸದ್ಯ ಟ್ರೆಂಡಿಯಾಗಿರುವ ಈ ಶೈಲಿಯ ಸೀರೆಯ ಬಗ್ಗೆ ಖುದ್ದು ಅವರೇ ಮಾತನಾಡಿದ್ದಾರೆ. ಏನಿದು ರಫಲ್‌ ಸೀರೆ ಎಂಬುದರ ಬಗ್ಗೆ ಡಿಸೈನರ್‌ ಕೂಡ ವಿವರಿಸಿದ್ದಾರೆ.

VISTARANEWS.COM


on

Saree Fashion
ಚಿತ್ರಗಳು: ಇಶಾನಿ, ಕನ್ನಡ ರ‍್ಯಾಪರ್‌, ಬಿಗ್‌ಬಾಸ್‌ ಸ್ಪರ್ಧಿ, ಫೋಟೋಗ್ರಾಫಿ: ಅರುಣ್‌ ಕುಮಾರ್‌ ಪೋಟ್ರೈಟ್ಸ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕನ್ನಡ ರ‍್ಯಾಪರ್‌, ಬಿಗ್‌ ಬಾಸ್‌ ಕಂಟೆಸ್ಟಂಟ್‌ ಇಶಾನಿ ವಿಭಿನ್ನ ಡಿಸೈನರ್‌ ರಫಲ್‌ ಸೀರೆಯಲ್ಲಿ (Saree Fashion) ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ಈ ಶೈಲಿಯ ಸೀರೆ ಯುವತಿಯರನ್ನು ಮಾತ್ರವಲ್ಲ, ಎಲ್ಲಾ ವರ್ಗದ ಮಹಿಳೆಯರನ್ನು ಕೂಡ ಸೆಳೆದಿದೆ.

Saree Fashion

ಇಶಾನಿ ನೆವಿ ಬ್ಲ್ಯೂ ರಫಲ್‌ ಸೀರೆ ಪ್ರೇಮ

ಬಿಗ್‌ಬಾಸ್‌ 10ರಲ್ಲಿ ಪಾಲ್ಗೊಂಡಿದ್ದ ಇಶಾನಿ, ತಮ್ಮ ಕನ್ನಡ ರ‍್ಯಾಪರ್‌ ಹಾಡುಗಳ ಮೂಲಕ ನಾಡಿಗೆ ಚಿರಪರಿಚಿತರು. ಇದರೊಂದಿಗೆ ಇದೀಗ ಮತ್ತೊಂದು ಕಾಮಿಡಿ ರಿಯಾಲಿಟಿ ಶೋ ಮೂಲಕ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ ಭಾಷೆಯನ್ನು ಡಿಫರೆಂಟಾಗಿ ಮಾತನಾಡುವ ಇವರು, ತಮ್ಮ ಕ್ರಿಯೇಟಿವ್‌ ಕನ್ನಡ ಹಾಡುಗಳ ಆಲ್ಬಂ ಮೂಲಕ ಆಗಾಗ್ಗೆ ಅಭಿಮಾನಿಗಳನ್ನು ಸೆಳೆಯುತ್ತಿರುತ್ತಾರೆ. ಇವುಗಳೆಲ್ಲದರ ಮಧ್ಯೆ ನಾನಾ ಫೋಟೋಶೂಟ್‌ಗಳ ಮೂಲಕ ಕಾಣಿಸಿಕೊಳ್ಳುತ್ತಿರುತ್ತಾರೆ. ಇದಕ್ಕೆ ಪೂರಕ ಎಂಬಂತೆ, ಇದೀಗ ವಿಭಿನ್ನ ಡಿಸೈನರ್‌ವೇರ್‌ ನೆವಿ ಬ್ಲ್ಯೂ ಶೇಡ್‌ನ ಈ ರಫಲ್‌ ಸೀರೆಯಲ್ಲಿ ಮಿಂಚಿದ್ದಾರೆ. ಇಶಾನಿ ಉಟ್ಟಿರುವ ಈ ನೀಲಿ ಸೀರೆ, ರಫಲ್‌ ಸೀರೆಯಾಗಿದ್ದು, ಅದಕ್ಕೆ ಅವರು ಧರಿಸಿರುವ ಸ್ಟೋನ್‌ನಿಂದ ಸಿಂಗಾರಗೊಂಡಿರುವ ಡಿಸೈನರ್‌ ಸ್ಲಿವ್‌ಲೆಸ್‌ ಬ್ಲೌಸ್‌ ಅವರನ್ನು ಮತ್ತಷ್ಟು ಮನಮೋಹಕವಾಗಿ ಬಿಂಬಿಸಿದೆ. ಒಟ್ಟಿನಲ್ಲಿ, ಇಶಾನಿಯ ಈ ಸೀರೆಯಲ್ಲಿನ ಲುಕ್‌ ಸೀರೆ ಪ್ರಿಯರನ್ನು ಬರಸೆಳೆದಿದೆ ಎನ್ನಬಹುದು.

Saree Fashion

ಇಶಾನಿ ಸೀರೆ ಫ್ಯಾಷನ್‌ ಟಾಕ್‌

“ನನಗಂತೂ ಈ ರಫಲ್‌ ಸೀರೆ ಉಟ್ಟಾಗ ಉಲ್ಲಾಸ ಹೆಚ್ಚಾಯಿತು. ಸಾಮಾನ್ಯ ಸೀರೆಗಿಂತ ವಿಭಿನ್ನವಾಗಿ ಕಾಣಿಸಿಕೊಳ್ಳಲು ಸಾಧ್ಯವಾಯಿತು. ಇನ್ನು ಈ ಸೀರೆಗೆ ನಾನು ಧರಿಸಿರುವ ಡಿಸಿಲ್ವರ್‌ ಜ್ಯುವೆಲರಿಗಳು ಹಾಗೂ ದಿವ್ಯಾ ನಾಗರಾಜ್‌ರ ಮೇಕಪ್‌ ಮತ್ತು ಹೇರ್‌ಸ್ಟೈಲ್‌ ಮನಮೋಹಕ ಟಚ್‌ ನೀಡಿವೆ. ಒಟ್ಟಾರೆ, ಈ ಸೀರೆ ಲುಕ್‌ ಎಲ್ಲರನ್ನೂ ಸೆಳೆಯುವಲ್ಲಿ ಯಶಸ್ವಿಯಾಗಿದೆ” ಎನ್ನುವ ಇಶಾನಿಗೆ ಈ ಸೀರೆಯ ಸ್ಟೈಲಿಂಗ್‌ ಬಹಳ ಇಷ್ಟವಾಗಿದೆಯಂತೆ.

Saree Fashion

ಸೆಲೆಬ್ರೆಟಿ ಡಿಸೈನರ್‌ ಅಶ್ವಿನಿ ಡಿಸೈನರ್‌ ಸೀರೆ

ಇನ್ನು, ಸೆಲೆಬ್ರೆಟಿ ಡಿಸೈನರ್‌ ಅಶ್ವಿನಿ, ಇಶಾನಿಯ ಈ ಡಿಸೈನರ್‌ ಸೀರೆ ಡಿಸೈನ್‌ ಮಾಡಿದ್ದು, ಅವರಿಗೊಪ್ಪುವ ಸ್ಟೈಲಿಂಗ್‌ಗೆ ತಕ್ಕಂತೆ ರೂಪಿಸಿದ್ದಾರೆ. ಅಂದಹಾಗೆ, ಇದು ಸಿಂಪಲ್‌ ಆಗಿ ಧರಿಸುವ ರೆಡಿ ರಫಲ್‌ ಸೀರೆಯಾಗಿದೆ. ಉಡುವ ಅಥವಾ ಡ್ರೇಪಿಂಗ್‌ನ ತಲೆ ಬಿಸಿಯಿಲ್ಲ! ಈ ಸಿಂಪಲ್‌ ಸೀರೆಗೆ ಆಕರ್ಷಕವಾದ ಬ್ಲೌಸ್‌ ಮ್ಯಾಚ್‌ ಮಾಡಲಾಗಿದೆ. ಸ್ಟೋನ್‌ಗಳಿಂದ ಸಿಂಗಾರಗೊಂಡಿರುವ ಈ ಹ್ಯಾಂಡ್‌ವರ್ಕ್‌ ಇರುವಂತಹ ಶೋಲ್ಡರ್‌ಲೆಸ್‌ ಡಿಸೈನರ್‌ ಬ್ಲೌಸ್‌ ಇಂಡೋ-ವೆಸ್ಟರ್ನ್‌ ಲುಕ್‌ ನೀಡಿದೆ. “ಇಶಾನಿಗೆ ಡಿಸೈನ್‌ ಮಾಡಲಾದ ಈ ಡಿಸೈನರ್‌ ರಫಲ್‌ ಸೀರೆ ಯೂನಿಕ್‌ ಸ್ಟೈಲ್‌ ಲುಕ್‌ ನೀಡಿದ್ದು, ಅವರ ಇಂಡೋ-ವೆಸ್ಟರ್ನ್‌ ಲುಕ್‌ಗೆ ಸಾಥ್‌ ನೀಡಿದೆ” ಎನ್ನುತ್ತಾರೆ ಸೆಲೆಬ್ರೆಟಿ ಡಿಸೈನರ್‌ ಅಶ್ವಿನಿ.

Saree Fashion

ರಫಲ್‌ ಸೀರೆಯ ಹೈಲೈಟ್ಸ್‌

  • ಸೀಸನ್‌ಗೆ ತಕ್ಕಂತಿರುವ ಈ ಸೀರೆ ಆಕರ್ಷಕ ಲುಕ್‌ ನೀಡುತ್ತದೆ.
  • ಹೆಚ್ಚು ಜ್ಯುವೆಲರಿ ಧರಿಸುವ ಅಗತ್ಯವಿರುವುದಿಲ್ಲ.
  • ಇಂಡೋ-ವೆಸ್ಟರ್ನ್‌ ಲುಕ್‌ ನೀಡುವುದು ಗ್ಯಾರಂಟಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Actress Summer Fashion: ಬಾಲಿವುಡ್‌ನವರನ್ನು ಮೀರಿಸಿದ ನಟಿ ಶಿಲ್ಪಾ ಮಂಜುನಾಥ್‌ ಪೂಲ್‌ಸೈಡ್‌ ಹಾಟ್‌ ಲುಕ್‌!

Continue Reading
Advertisement
KL Rahul
ಕ್ರೀಡೆ7 mins ago

KL Rahul : ವಿಶ್ವ ಕಪ್​ ತಂಡದಲ್ಲಿ ರಾಹುಲ್​ಗೆ ಸ್ಥಾನ ನೀಡದಿರುವ ಬಗ್ಗೆ ಸ್ಪಷ್ಟನೆ ನೀಡಿದ ಆಯ್ಕೆಗಾರ ಅಜಿತ್ ಅಗರ್ಕರ್​​

T20 World Cup
ಕ್ರೀಡೆ30 mins ago

T20 World Cup : ವಿಶ್ವ ಕಪ್​ ಗೆಲ್ಲುವುದು ಭಾರತ; ವಿಶ್ವ ಕಪ್​ ವಿಜೇತ ಲಂಕಾ ಆಟಗಾರನ ಸ್ಪಷ್ಟ ನುಡಿ

Shine Shetty Summer Fashion
ಫ್ಯಾಷನ್50 mins ago

Summer Fashion: ಉರಿ ಬಿಸಿಲಿನಲ್ಲಿ ಗಮನ ಸೆಳೆವ ನಟ ಶೈನ್‌ ಶೆಟ್ಟಿಯ ಕೂಲ್‌ ಸ್ಮೈಲ್‌ & ಸ್ಟೈಲ್‌!

IPL 2024
ಕ್ರೀಡೆ56 mins ago

IPL 2024 : ಐಪಿಎಲ್​ ಮಧ್ಯದಲ್ಲಿಯೇ ಕೆಕೆಆರ್​ ತಂಡ ತೊರೆದ ಆರಂಭಿಕ ಆಟಗಾರ

assault Case
ಬೆಂಗಳೂರು57 mins ago

Assault Case : ಪೊಲೀಸ್‌ ಸ್ಟೇಷನ್‌ನಲ್ಲೇ ಇನ್‌ಸ್ಪೆಕ್ಟರ್‌ ಕಪಾಳಕ್ಕೆ ಹೊಡೆದ ಮಹಿಳೆ

Prajwal Revanna Case Centre says it has no power to revoke Prajwal diplomatic passport Big relief for MP
ಕರ್ನಾಟಕ1 hour ago

Prajwal Revanna Case: ಪ್ರಜ್ವಲ್‌ರ ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ ರದ್ದು ಮಾಡೋ ಅಧಿಕಾರ ನಮಗಿಲ್ಲ ಎಂದ ಕೇಂದ್ರ! ಸಂಸದನಿಗೆ ಬಿಗ್‌ ರಿಲೀಫ್‌?

Virat kohli
ಪ್ರಮುಖ ಸುದ್ದಿ1 hour ago

Virat Kohli : ಅಂಕಿ, ಅಂಶ ಪಂಡಿತರೇ ಬಾಯ್ಮುಚ್ಚಿ; ಕೊಹ್ಲಿಯನ್ನು ಟೀಕಿಸಿದವರ ಬೆಂಡೆತ್ತಿದ ಡಿ’ವಿಲಿಯರ್ಸ್​​

Brij Bhushan Singh
ದೇಶ1 hour ago

ಲೈಂಗಿಕ ಕಿರುಕುಳ ಆರೋಪಿ ಬ್ರಿಜ್‌ ಭೂಷಣ್‌ಗಿಲ್ಲ ಟಿಕೆಟ್‌; ಮಗನಿಗೆ ಮಣೆ, ರಾಯ್‌ಬರೇಲಿಗೂ ಅಭ್ಯರ್ಥಿ ಘೋಷಿಸಿದ ಬಿಜೆಪಿ

Murder case in Bengaluru
ಬೆಂಗಳೂರು1 hour ago

Murder Case : ನಡುರಸ್ತೆಯಲ್ಲೆ ಪತ್ನಿಗೆ ಚಾಕು ಇರಿದು ಕೊಂದ ಪತಿ

Prajwal Revanna Case Locked up as Prajwal arrives at Bengaluru airport
ಹಾಸನ1 hour ago

Prajwal Revanna Case: ಬೆಂಗಳೂರು ಏರ್‌ಪೋರ್ಟ್‌ಗೆ ಪ್ರಜ್ವಲ್‌ ಬರುತ್ತಿದ್ದಂತೆ ಲಾಕ್‌! ಏನಿದು SIT ಸೂಚನೆ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ14 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌