ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ಯಾಂಡಲ್‌ವುಡ್ ನಟಿ ಮಿಲನಾ ನಾಗರಾಜ್, ಸದ್ಯ ಯೂರೋಪ್ ಪ್ರವಾಸದಲ್ಲಿದ್ದು, ಅಲ್ಲಿನ ಹವಾಮಾನಕ್ಕೆ ತಕ್ಕಂತೆ ನಾನಾ ಬಗೆಯ ಟ್ರಾವೆಲ್ ಫ್ಯಾಷನ್ (Star Travel Fashion) ಔಟ್‌ಫಿಟ್‌ಗಳಿಗೆ ಸೈ ಎಂದಿದ್ದಾರೆ. ಸಿಂಪಲ್ ಹಾಗೂ ಟ್ರೆಂಡಿ ಲೇಯರ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಮಿಲನಾ, ಎಲ್ಲಾ ಬಗೆಯ ಉಡುಪುಗಳಲ್ಲೂ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಅವರ ಈ ಫ್ಯಾಷನ್ ಸ್ಟೇಟ್‌ಮೆಂಟ್‌ಗೆ ಫ್ಯಾಷನ್ ವಿಮರ್ಶಕರು ಫುಲ್ ಮಾರ್ಕ್ಸ್ ನೀಡಿದ್ದಾರೆ. ಯಾವ್ಯಾವ ಬಗೆಯ ಔಟ್‌ಫಿಟ್‌ಗಳು ಅವರನ್ನು ಮನಮೋಹಕವಾಗಿಸಿವೆ ಎಂಬುದರ ಬಗ್ಗೆ ಫ್ಯಾಷನ್ ವಿಮರ್ಶಕರು ವಿವರಿಸಿದ್ದಾರೆ.
ಪ್ಯಾರಿಸ್‌ನಲ್ಲಿ ರೆಡ್ ಬಾರ್ಡಾಟ್ ಡ್ರೆಸ್
ನಟಿ ಮಿಲನಾ ನಾಗರಾಜ್ ಪ್ಯಾರಿಸ್‌ನಲ್ಲಿ ಧರಿಸಿರುವ ರೆಡ್ ಬಾರ್ಡಾಟ್ ಡ್ರೆಸ್ ಅವರನ್ನು ಆಕರ್ಷಕವಾಗಿಸಿದೆ. ಅದರಲ್ಲೂ ಐಫಿಲ್ ಟವರ್ ಮುಂದೆ ನಿಂತಿದ್ದ ಸಂದರ್ಭದಲ್ಲಿ, ಒಮ್ಮೆ ಜಾಕೆಟ್ ನಂತರ ಜಾಕೆಟ್‌ಲೆಸ್‌ನಲ್ಲಿರುವಂತಹ ಔಟ್‌ಫಿಟ್ ಬದಲಾವಣೆ ಅದರ ಜೊತೆಗೆ ಲೇಯರ್ ನೆಕ್‌ಚೈನ್, ಬ್ಲಾಕ್ ಸನ್‌ಗ್ಲಾಸ್ ಅವರ ಸಖತ್ ಸ್ಟೈಲ್‌ಸ್ಟೇಟ್‌ಮೆಂಟ್‌ಗೆ ಸಾಥ್ ನೀಡಿದೆ.
ಮೊನಾಕೊ ಸ್ಟ್ರೀಟ್ ಸ್ಟೈಲ್
ಫ್ರಾನ್ಸ್‌ನ ಮೊನಾಕೊದಲ್ಲಿನ ಸ್ಟ್ರೀಟ್ ಸ್ಟೈಲ್‌ಗೆ ಸಾಥ್ ನೀಡುವ ಹಾಗೂ ದೇಹವನ್ನು ಬೆಚ್ಚಗಿರಿಸುವ ಗ್ರೇ ಶೇಡ್‌ನ ಶಿರ್ರೆಡ್ ಫ್ರಾಕ್ ಹಾಗೂ ವುಲ್ಲನ್ ಕ್ಯಾಪ್ ಕಂಪ್ಲೀಟ್ ಟ್ರಾವೆಲ್ ಲುಕ್‌ಗೆ ಸಾಥ್ ನೀಡಿದೆ. ನಮ್ಮ ರಾಷ್ಟ್ರಕ್ಕೆ ತದ್ವಿರುದ್ಧವಾದ ಹವಾಮಾನ ಅಲ್ಲಿರುತ್ತದೆ. ಇದಕ್ಕೊಂದುವಂತೆ ಔಟ್‌ಫಿಟ್ ಮ್ಯಾಚ್ ಮಾಡಿರುವ ಮಿಲನಾ, ಈ ಕ್ಯಾಶುವಲ್ ಲುಕ್‌ನಲ್ಲಿ ಚೆನ್ನಾಗಿ ಕಾಣಿಸುತ್ತಿದ್ದಾರೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ವೆನಿಸ್‌ನಲ್ಲಿ ಪ್ಯಾಂಟ್ ಸೆಟ್‌ನಲ್ಲಿ ಮಿಲನಾ
ಗ್ರೀಸ್‌ನ ವೆನಿಸ್‌ನಲ್ಲಿ ಹಾಫ್ ವೈಟ್ ಶೇಡ್‌ನ ಮೊಕ್ ನೆಕ್ ಕ್ರಾಪ್ ಟಾಪ್ ಪ್ಯಾಂಟ್ ಸೆಟ್ ಜೊತೆಗೆ ಕ್ಯಾಪ್, ಸನ್‌ಗ್ಲಾಸ್‌ನಲ್ಲಿ ಸಿಂಪಲ್ ಆಗಿ ಕಾಣಿಸಿಕೊಂಡಿರುವ ಮಿಲನಾ ಕ್ರೂಸ್ ಜರ್ನಿ ಹಾಗೂ ವೆನಿಸ್‌ನ ಕಲರ್‌ಫುಲ್ ಹೌಸ್‌ಗಳ ನಡುವಿನ ಫೋಟೋಶೂಟ್‌ನಲ್ಲಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.
ಒಟ್ಟಾರೆ, ಮಿಲನಾ ಧರಿಸಿರುವ ಎಲ್ಲಾ ಔಟ್‌ಫಿಟ್‌ಗಳು ಆಕರ್ಷಕವಾಗಿವೆಯಾದರೂ ಈ ಮೇಲಿನ 3 ಔಟ್‌ಫಿಟ್‌ಗಳು ಟ್ರಾವೆಲ್ ಫ್ಯಾಷನ್ ಪ್ರಿಯರ ಮನಸ್ಸನ್ನು ಗೆದ್ದಿವೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Mens Fashion: ಸ್ಟ್ರೈಪ್ಡ್ ಶರ್ಟ್ ಧರಿಸುವ ಯುವಕರು ಪಾಲಿಸಬೇಕಾದ 5 ಫ್ಯಾಷನ್ ರೂಲ್ಸ್