-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನವರಾತ್ರಿಯ ೬ ನೇ ದಿನದ ಅಪರೂಪದ ಬಣ್ಣ ಬೂದು ಬಣ್ಣ. ಈ ವರ್ಣದ ಸೀರೆಯಾಗಲಿ ಅಥವಾ ಎಥ್ನಿಕ್ ಉಡುಪುಗಳನ್ನು ಧರಿಸುವವರು ತೀರಾ ಕಡಿಮೆ. ಕಾಂಬಿನೇಷನ್ ಕೂಡ ಅಷ್ಟೇ, ಇತರೇ ವರ್ಣಗಳಂತೆ ಇದು ಹೆಚ್ಚು ಶೇಡ್‌ಗಳಲ್ಲಿ ಲಭ್ಯವಿರುವುದಿಲ್ಲ. ಧರಿಸುವಾಗ ಇದಕ್ಕೆ ಸೂಟ್ ಆಗುವಂತಹ ಆಕ್ಸೆಸರೀಸ್ ಹಾಗೂ ಮೇಕಪ್ ಮಾಡಿದಾಗ ಮಾತ್ರ ನೋಡಲು ಆಕರ್ಷಕವಾಗಿ ಕಾಣುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಬೂದು ಬಣ್ಣದ ಕಮೀಝ್ ಅಥವಾ ಕುರ್ತಾ
ಚಿಕನ್‌ಕಾರಿಯಲ್ಲಿ ಬೂದು ವರ್ಣದ ಕಮೀಝ್ ಅಥವಾ ಕುರ್ತಾ ವೈಟ್ ಥ್ರೆಡ್ ವರ್ಕ್ನ ಕಾಂಬಿನೇಷನ್‌ನಲ್ಲಿ ದೊರೆಯುತ್ತದೆ. ಇನ್ನು ಇಂಡೋ –ವೆಸ್ಟರ್ನ್ ಶೈಲಿಯ ಔಟ್‌ಫಿಟ್‌ಗಳಲ್ಲಿ ಈ ಶೇಡ್‌ನವು ಅತಿ ಹೆಚ್ಚು ಲಭ್ಯ. ವೆಸ್ಟರ್ನ್ ಔಟ್‌ಫಿಟ್‌ಗಳು ಈ ಕಾಮನ್ ಶೇಡ್‌ಗಳಲ್ಲಿ ದೊರೆಯುತ್ತವೆ. ಈಗಾಗಲೇ ಈ ವರ್ಣದ ಉಡುಪು ನಿಮ್ಮ ಬಳಿ ಇದ್ದಲ್ಲಿ ಅದಕ್ಕೆ ಹೊಸ ರೂಪ ನೀಡಿ ಧರಿಸಬಹುದು.
ಗ್ರೇ ವರ್ಣಕ್ಕೆ ಆಕ್ಸೆಸರೀಸ್‌ಗಳಿಂದ ಹೊಸ ರೂಪ
ಬೂದು ವರ್ಣದ ಕುರ್ತಾ ಹಾಗೂ ಡ್ರೆಸ್‌ಗಳಿಗೆ ಬ್ಲಾಕ್ ಮೆಟಲ್ ಇಲ್ಲವೇ ವೈಟ್ ಮೆಟಲ್‌ನ ಜ್ಯುವೆಲರಿ ಧರಿಸಬಹುದು. ಕಿವಿಗೆ ಹ್ಯಾಂಗಿಂಗ್ಸ್ ಧರಿಸಬಹುದು. ಇದು ಬೂದು ವರ್ಣದ ಉಡುಪುಗಳಿಗೆ ಸೂಟ್ ಆಗುತ್ತದೆ.
ಬೂದು ಬಣ್ಣದ ಸೀರೆಯ ಲುಕ್
ಬೂದು ಬಣ್ಣದ ಸೀರೆಗೆ ಗೋಲ್ಡ್ ಲುಕ್ ಮಿಕ್ಸ್ ಮಾಡುವುದು ಬೇಡ. ಹಾಗಾಗಿ ವೈಟ್ ಅಥವಾ ಬ್ಲಾಕ್ ಮೆಟಲ್‌ನ ಸೆಟ್ ಮ್ಯಾಚ್ ಆಗುತ್ತದೆ. ಬ್ಲಾಕ್ ಬೀಡ್ಸ್‌ನ ನೆಕ್‌ಸೆಟ್‌ಗಳು ಕೂಡ ಮ್ಯಾಚ್ ಆಗುತ್ತವೆ. ಇದಕ್ಕೆ ವೈಟ್ ಮೆಟಲ್‌ನ ಕಮರ್‌ಬಾಂದ್ ಅಥವಾ ಬ್ಲಾಕ್ ಬೆಲ್ಟ್ ಧರಿಸಿ. ಇಂಡೋ-ವೆಸ್ಟರ್ನ್ ಲುಕ್ ನೀಡಬಹುದು. ಎಲ್ಲದಕ್ಕಿಂತ ಹೆಚ್ಚಾಗಿ ಆದಷ್ಟೂ ಫಂಕಿ ಲುಕ್ ಆವಾಯ್ಡ್ ಮಾಡಿ. ಬೂದು ಬಣ್ಣಕ್ಕೆ ಸಿಲ್ವರ್ ಲುಕ್ ನೀಡಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಇನ್ನು ಹಣೆಗೆ ಬ್ಲಾಕ್ ಬಿಂದಿ ಇರಿಸಬಹುದು.
ಆಕರ್ಷಕ ಐ ಮೇಕಪ್ ಮಾಡಿ
ಬೂದು ಬಣ್ಣದ ಡ್ರೆಸ್‌ಕೋಡ್‌ಗೆ ಆದಷ್ಟೂ ಮೇಕಪ್ ಸಿಂಪಲ್ಲಾಗಿರಲಿ. ಕಾಜಲ್ ಜೊತೆಗೆ, ರೆಪ್ಪೆಗೆ ಮಸ್ಕರಾ, ಐ ಲೈನರ್, ಬ್ಲಾಕ್ ಲಿಟಲ್ ಸ್ಮೋಕಿ ಐ ಶೆಡ್ ಲುಕ್ ನೀಡಬಹುದು. ಶಿಮ್ಮರಿಂಗ್ ಲುಕ್ ಬೇಡವೇ ಬೇಡ. ಇನ್ನು ನಾನಾ ಬಗೆಯ ಹೇರ್‌ಸ್ಟೈಲ್ ಮಾಡಬಹುದು.
ಬೂದು ಬಣ್ಣದ ಡ್ರೆಸ್‌ಕೋಡ್ ಟಿಪ್ಸ್
*ಇಂಡೋ-ವೆಸ್ಟರ್ನ್ ಸ್ಟೈಲಿಂಗ್ ಮಾಡಿ ನೋಡಿ.
*ಬ್ಲಾಕ್ ಅಥವಾ ವೈಟ್ ಮೆಟಲ್ ಆಭರಣಗಳನ್ನು ಧರಿಸಿ.
*ಬ್ಲಾಕ್ ಐ ಮೇಕಪ್ ಸೂಟ್ ಆಗುತ್ತದೆ.
* ಐ ಲ್ಯಾಶ್ ಹೈಲೈಟ್ ಮಾಡಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)