Site icon Vistara News

Ugadi Saree Fashion: ಯುಗಾದಿ ಸಂಭ್ರಮಕ್ಕೆ ಬಂತು ಪ್ರಿಂಟೆಡ್‌ ಶೈನಿಂಗ್‌ ರೇಷ್ಮೆ ಸೀರೆಗಳು

Ugadi Saree Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಈ ಬಾರಿಯ ಯುಗಾದಿ ಹಬ್ಬದ ಸಂಭ್ರಮ ಹೆಚ್ಚಿಸಲು ವೈವಿಧ್ಯಮಯ ಪ್ರಿಂಟೆಡ್‌ ಶೈನಿಂಗ್‌ ರೇಷ್ಮೆ ಸೀರೆಗಳು ಫ್ಯಾಷನ್‌ (Ugadi Saree Fashion) ಲೋಕಕ್ಕೆ ಎಂಟ್ರಿ ನೀಡಿವೆ. ನೋಡಿದಾಕ್ಷಣ ಆಕರ್ಷಕವಾಗಿ ಕಾಣುವ ಈ ಪ್ರಿಂಟೆಡ್‌ ಶೈನಿಂಗ್‌ ರೇಷ್ಮೆ ಸೀರೆಗಳು (Printed Shining Silk Sarees) ಈ ಬಾರಿ ಒಂದಿಷ್ಟು ಹೊಸತನದೊಂದಿಗೆ ಕಾಲಿಟ್ಟಿವೆ. ಕಾಂಟೆಂಪರರಿ ವಿನ್ಯಾಸದೊಂದಿಗೆ ಮಿಕ್ಸ್‌ ಮ್ಯಾಚ್‌ ಕಾಂಟ್ರಸ್ಟ್ ಬಣ್ಣಗಳೊಂದಿಗೆ ಬಾರ್ಡರ್‌ನ ಹೈಲೈಟ್‌ನೊಂದಿಗೆ ಆಕರ್ಷಕ ಪಲ್ಲುವಿನ ವಿನ್ಯಾಸದಲ್ಲಿ ಮೂಡಿ ಬಂದಿವೆ.

ಯುಗಾದಿ ಹಬ್ಬಕ್ಕೆ ಮಿನುಗುವ ಪ್ರಿಂಟೆಡ್‌ ರೇ‍ಷ್ಮೆ

ಮೊದಲೆಲ್ಲಾ ಪ್ರಿಂಟೆಡ್‌ ರೇಷ್ಮೆ ಸೀರೆ (Printed Silk Saree) ಎಂದಾಕ್ಷಾಣ ಕ್ಲಾಸಿ ಲುಕ್‌ ನೀಡುವ ಡಲ್‌ ಫಿನಿಶಿಂಗ್‌ನಲ್ಲಿ ತಯಾರಾಗುತ್ತಿದ್ದವು. ಇದೀಗ ಟೀನೇಜ್‌ ಹೆಣ್ಣು ಮಕ್ಕಳಿಂದಿಡಿದು ವರ್ಕಿಂಗ್‌ ವಿಮೆನ್‌ ಹಾಗೂ ಗೃಹಿಣಿಯರಿಗೂ ಇಷ್ಟವಾಗುವಂತಹ ವಿನ್ಯಾಸದಲ್ಲಿ ಅದರಲ್ಲೂ ಗ್ರ್ಯಾಂಡ್‌ ಲುಕ್‌ ನೀಡುವ ಶೈನಿಂಗ್‌ ರೇಷ್ಮೆಯಲ್ಲಿ ಸಿದ್ಧಗೊಂಡಿವೆ. ಟೂ ಇನ್‌ ವನ್‌ ಕಾನ್ಸೆಪ್ಟ್‌ ಹೊಂದಿರುವ ಇವನ್ನು ಬ್ಲೌಸ್‌ ಬದಲಿಸಿ ಡಿಫರೆಂಟ್‌ ಡ್ರೆಪಿಂಗ್‌ನಲ್ಲಿ ಮತ್ತೊಮ್ಮೆ ಗ್ರ್ಯಾಂಡ್‌ ಸಮಾರಂಭಗಳಿಗೂ ಉಡಬಹುದು ಎಂಬುದು ಸ್ಟೈಲಿಸ್ಟ್‌ಗಳ ಲೆಕ್ಕಚಾರ.

ಏನಿದು ಪ್ರಿಂಟೆಡ್‌ ಶೈನಿಂಗ್‌ ಸೀರೆಗಳು?

ಟ್ರೆಡಿಷನಲ್‌ ಹಾಗೂ ಕಾಂಟೆಂಪರರಿ ವಿನ್ಯಾಸಗಳನ್ನು ಮಿಕ್ಸ್‌ ಮ್ಯಾಚ್‌ ಮಾಡಿದ ಇವುಗಳಲ್ಲಿ ನಾನಾ ಬಗೆಯ ಚಿತ್ತಾರಗಳು ಬ್ಯಾಕ್‌ಗ್ರೌಂಡ್‌ ವರ್ಣದೊಂದಿಗೆ ಮಿಕ್ಸ್‌ ಮಾಡಲಾಗಿರುತ್ತದೆ. ಉದಾಹರಣೆಗೆ., ಹೂವು-ಹಣ್ಣು, ಎಲೆ, ಪ್ರಾಣಿ-ಪಕ್ಷಿ, ಭಗವದ್ಗೀತೆ ಶ್ಲೋಕ, ಚಿತ್ರ, ವಕ್ರ-ಚಕ್ರ, ಅಡ್ಡಾ-ದಿಡ್ಡಿ , ನೇರ ಗೆರೆಗಳು, ವಿಚಿತ್ರ ರೇಖಾ ಚಿತ್ರಗಳನ್ನು ಸೀರೆಯ ಒಡಲಲ್ಲಿ ಚಿತ್ರಿಸಲಾಗಿರುತ್ತದೆ. ಸೀರೆಯ ಅಂಚು, ಪಲ್ಲು, ಬುಟ್ಟಾಗಳಲ್ಲೂ ಇದನ್ನು ಕಾಣಬಹುದು. ಇಡೀ ಸೀರೆ ಒಂದು ವರ್ಣದ್ದಾದರೇ, ಸೀರೆಯೊಳಗಿನ ಒಡಲಿನ ಚಿತ್ತಾರಗಳು ಒಂದು ವರ್ಣ ಹಾಗೂ ಬ್ಯಾಕ್‌ಗ್ರೌಂಡ್‌ನಲ್ಲಿ ಕಾಂಟ್ರಸ್ಟ್ ವರ್ಣ ಹೀಗೆ ಒಂದು ಸೀರೆ ಕಡಿಮೆಯೆಂದರೂ ಮೂರು ಶೇಡ್‌ಗಳನ್ನೊಳಗೊಂಡಿರುತ್ತದೆ. ಹಾಗಾಗಿ ಇದು ಶೈನಿಂಗ್‌ ಗೋಲ್ಡನ್‌ ವರ್ಣದಲ್ಲಿ ಹೆಚ್ಚು ಹೈಲೈಟ್‌ ಆಗಿರುತ್ತದೆ ಎನ್ನುತ್ತಾರೆ ಮಿಸೆಸ್‌ ಗ್ಲೋಬಲ್‌ ಯೂನಿವರ್ಸ್ (2019) ಸವಿತಾ ರೆಡ್ಡಿ.

ಹಬ್ಬಕ್ಕೆ ಕ್ಲಾಸಿಕ್‌ ಲುಕ್‌ ನೀಡುವ ಈ ಸೀರೆಗಳು

ಕ್ಲಾಸಿಕಲ್‌ ಲುಕ್‌ ನೀಡುವ ಟ್ರೆಂಡಿ ಪ್ಯಾಟರ್ನ್ಸ್‌ ಹೊಂದಿರುವ ವೈವಿಧ್ಯಮಯ ಬಣ್ಣಗಳಲ್ಲಿ ಲಭ್ಯವಿರುವ ನಾನಾ ಬ್ರಾಂಡ್‌ಗಳ ಕಾಂಚೀವರಂ, ಧರ್ಮವರಂ ಸೀರೆಗಳು, ನೇಕಾರರ ಕುಸುರಿ ಕೆಲಸ ಒಳಗೊಂಡಿರುವ ಪರಂಪರಾನಲ್ಲಿ, ಜಾಮದಾನಿ, ಬನರಾಸಿ, ಬಲುಚಾರಿ, ಮೈಸೂರ್‌ ಸಿಲ್ಕ್ಸ್, ಟುಸ್ಸಾರ್‌ ಹೀಗೆ ರಾಷ್ಟ್ರದಾದ್ಯಂತ ಇರುವ ಲೆಕ್ಕವಿಲ್ಲದಷ್ಟು ದೇಸಿ ಬ್ರಾಂಡ್‌ಗಳ ರೇಷ್ಮೆ ಸೀರೆಗಳಲ್ಲಿ ಈ ಬಾರಿ ಈ ವಿನ್ಯಾಸದವು ಬಿಡುಗಡೆಯಾಗಿದೆ. “ಅಮ್ಮನ ಕಾಲದ ರೇಷ್ಮೆ ಸೀರೆಗಳಂತೆ ತೀರಾ ಹಳೇ ಡಿಸೈನ್‌ಗಳಿಲ್ಲ, ಉಟ್ಟರೇ ತೂಕವಿಲ್ಲ! ಮೈಬಣ್ಣಕ್ಕೆ ಸೂಟ್‌ ಆಗುವ ಲೆಕ್ಕವಿಲ್ಲದಷ್ಟು ಶೇಡ್‌ಗಳು ದೊರೆಯುತ್ತಿವೆ” ಎನ್ನುತ್ತಾರೆ ಕಾಲೇಜು ಹುಡುಗಿ ಹಾಗೂ ಸೀರೆ ಪ್ರೇಮಿ ರಶಿಕಾ ಹಾಗೂ ಸುನೈನಾ.

ಪ್ರಿಂಟೆಡ್‌ ಶೈನಿಂಗ್‌ ರೇಷ್ಮೆ ಖರೀದಿದಾರರಿಗೆ ಒಂದಿಷ್ಟು ಟಿಪ್ಸ್‌

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Fashion Interview: ಕಿರುತೆರೆಯ ಸ್ಟೈಲಿಶ್‌ ಐಕಾನ್‌ಗಳ ಟಾಪ್‌ ಲಿಸ್ಟ್‌ಗೆ ಸೇರಿದ ನಿರಂಜನ್‌ ದೇಶಪಾಂಡೆ

Exit mobile version