ಫ್ಯಾಷನ್
Ugadi Saree Fashion: ಯುಗಾದಿ ಸಂಭ್ರಮಕ್ಕೆ ಬಂತು ಪ್ರಿಂಟೆಡ್ ಶೈನಿಂಗ್ ರೇಷ್ಮೆ ಸೀರೆಗಳು
ಯುಗಾದಿ ಹಬ್ಬದ ಸಂಭ್ರಮ ಹೆಚ್ಚಿಸಲು ಈ ಬಾರಿ ಪ್ರಿಂಟೆಡ್ ಶೈನಿಂಗ್ ರೇಷ್ಮೆ ಸೀರೆಗಳು ಫ್ಯಾಷನ್ (Ugadi Saree Fashion) ಲೋಕಕ್ಕೆ ಎಂಟ್ರಿ ನೀಡಿವೆ. ಊಹೆಗೂ ಮೀರಿದ ಪ್ರಿಂಟೆಡ್ ವಿನ್ಯಾಸಗಳು ಮಾನಿನಿಯರನ್ನು ಸೆಳೆದಿವೆ. ಈ ಬಗ್ಗೆ ಇಲ್ಲಿದೆ ವರದಿ.
– ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ಯುಗಾದಿ ಹಬ್ಬದ ಸಂಭ್ರಮ ಹೆಚ್ಚಿಸಲು ವೈವಿಧ್ಯಮಯ ಪ್ರಿಂಟೆಡ್ ಶೈನಿಂಗ್ ರೇಷ್ಮೆ ಸೀರೆಗಳು ಫ್ಯಾಷನ್ (Ugadi Saree Fashion) ಲೋಕಕ್ಕೆ ಎಂಟ್ರಿ ನೀಡಿವೆ. ನೋಡಿದಾಕ್ಷಣ ಆಕರ್ಷಕವಾಗಿ ಕಾಣುವ ಈ ಪ್ರಿಂಟೆಡ್ ಶೈನಿಂಗ್ ರೇಷ್ಮೆ ಸೀರೆಗಳು (Printed Shining Silk Sarees) ಈ ಬಾರಿ ಒಂದಿಷ್ಟು ಹೊಸತನದೊಂದಿಗೆ ಕಾಲಿಟ್ಟಿವೆ. ಕಾಂಟೆಂಪರರಿ ವಿನ್ಯಾಸದೊಂದಿಗೆ ಮಿಕ್ಸ್ ಮ್ಯಾಚ್ ಕಾಂಟ್ರಸ್ಟ್ ಬಣ್ಣಗಳೊಂದಿಗೆ ಬಾರ್ಡರ್‌ನ ಹೈಲೈಟ್‌ನೊಂದಿಗೆ ಆಕರ್ಷಕ ಪಲ್ಲುವಿನ ವಿನ್ಯಾಸದಲ್ಲಿ ಮೂಡಿ ಬಂದಿವೆ.
ಯುಗಾದಿ ಹಬ್ಬಕ್ಕೆ ಮಿನುಗುವ ಪ್ರಿಂಟೆಡ್ ರೇಷ್ಮೆ
ಮೊದಲೆಲ್ಲಾ ಪ್ರಿಂಟೆಡ್ ರೇಷ್ಮೆ ಸೀರೆ (Printed Silk Saree) ಎಂದಾಕ್ಷಾಣ ಕ್ಲಾಸಿ ಲುಕ್ ನೀಡುವ ಡಲ್ ಫಿನಿಶಿಂಗ್‌ನಲ್ಲಿ ತಯಾರಾಗುತ್ತಿದ್ದವು. ಇದೀಗ ಟೀನೇಜ್ ಹೆಣ್ಣು ಮಕ್ಕಳಿಂದಿಡಿದು ವರ್ಕಿಂಗ್ ವಿಮೆನ್ ಹಾಗೂ ಗೃಹಿಣಿಯರಿಗೂ ಇಷ್ಟವಾಗುವಂತಹ ವಿನ್ಯಾಸದಲ್ಲಿ ಅದರಲ್ಲೂ ಗ್ರ್ಯಾಂಡ್ ಲುಕ್ ನೀಡುವ ಶೈನಿಂಗ್ ರೇಷ್ಮೆಯಲ್ಲಿ ಸಿದ್ಧಗೊಂಡಿವೆ. ಟೂ ಇನ್ ವನ್ ಕಾನ್ಸೆಪ್ಟ್ ಹೊಂದಿರುವ ಇವನ್ನು ಬ್ಲೌಸ್ ಬದಲಿಸಿ ಡಿಫರೆಂಟ್ ಡ್ರೆಪಿಂಗ್‌ನಲ್ಲಿ ಮತ್ತೊಮ್ಮೆ ಗ್ರ್ಯಾಂಡ್ ಸಮಾರಂಭಗಳಿಗೂ ಉಡಬಹುದು ಎಂಬುದು ಸ್ಟೈಲಿಸ್ಟ್‌ಗಳ ಲೆಕ್ಕಚಾರ.
ಏನಿದು ಪ್ರಿಂಟೆಡ್ ಶೈನಿಂಗ್ ಸೀರೆಗಳು?
ಟ್ರೆಡಿಷನಲ್ ಹಾಗೂ ಕಾಂಟೆಂಪರರಿ ವಿನ್ಯಾಸಗಳನ್ನು ಮಿಕ್ಸ್ ಮ್ಯಾಚ್ ಮಾಡಿದ ಇವುಗಳಲ್ಲಿ ನಾನಾ ಬಗೆಯ ಚಿತ್ತಾರಗಳು ಬ್ಯಾಕ್‌ಗ್ರೌಂಡ್ ವರ್ಣದೊಂದಿಗೆ ಮಿಕ್ಸ್ ಮಾಡಲಾಗಿರುತ್ತದೆ. ಉದಾಹರಣೆಗೆ., ಹೂವು-ಹಣ್ಣು, ಎಲೆ, ಪ್ರಾಣಿ-ಪಕ್ಷಿ, ಭಗವದ್ಗೀತೆ ಶ್ಲೋಕ, ಚಿತ್ರ, ವಕ್ರ-ಚಕ್ರ, ಅಡ್ಡಾ-ದಿಡ್ಡಿ , ನೇರ ಗೆರೆಗಳು, ವಿಚಿತ್ರ ರೇಖಾ ಚಿತ್ರಗಳನ್ನು ಸೀರೆಯ ಒಡಲಲ್ಲಿ ಚಿತ್ರಿಸಲಾಗಿರುತ್ತದೆ. ಸೀರೆಯ ಅಂಚು, ಪಲ್ಲು, ಬುಟ್ಟಾಗಳಲ್ಲೂ ಇದನ್ನು ಕಾಣಬಹುದು. ಇಡೀ ಸೀರೆ ಒಂದು ವರ್ಣದ್ದಾದರೇ, ಸೀರೆಯೊಳಗಿನ ಒಡಲಿನ ಚಿತ್ತಾರಗಳು ಒಂದು ವರ್ಣ ಹಾಗೂ ಬ್ಯಾಕ್‌ಗ್ರೌಂಡ್‌ನಲ್ಲಿ ಕಾಂಟ್ರಸ್ಟ್ ವರ್ಣ ಹೀಗೆ ಒಂದು ಸೀರೆ ಕಡಿಮೆಯೆಂದರೂ ಮೂರು ಶೇಡ್‌ಗಳನ್ನೊಳಗೊಂಡಿರುತ್ತದೆ. ಹಾಗಾಗಿ ಇದು ಶೈನಿಂಗ್ ಗೋಲ್ಡನ್ ವರ್ಣದಲ್ಲಿ ಹೆಚ್ಚು ಹೈಲೈಟ್ ಆಗಿರುತ್ತದೆ ಎನ್ನುತ್ತಾರೆ ಮಿಸೆಸ್ ಗ್ಲೋಬಲ್ ಯೂನಿವರ್ಸ್ (2019) ಸವಿತಾ ರೆಡ್ಡಿ.
ಹಬ್ಬಕ್ಕೆ ಕ್ಲಾಸಿಕ್ ಲುಕ್ ನೀಡುವ ಈ ಸೀರೆಗಳು
ಕ್ಲಾಸಿಕಲ್ ಲುಕ್ ನೀಡುವ ಟ್ರೆಂಡಿ ಪ್ಯಾಟರ್ನ್ಸ್ ಹೊಂದಿರುವ ವೈವಿಧ್ಯಮಯ ಬಣ್ಣಗಳಲ್ಲಿ ಲಭ್ಯವಿರುವ ನಾನಾ ಬ್ರಾಂಡ್‌ಗಳ ಕಾಂಚೀವರಂ, ಧರ್ಮವರಂ ಸೀರೆಗಳು, ನೇಕಾರರ ಕುಸುರಿ ಕೆಲಸ ಒಳಗೊಂಡಿರುವ ಪರಂಪರಾನಲ್ಲಿ, ಜಾಮದಾನಿ, ಬನರಾಸಿ, ಬಲುಚಾರಿ, ಮೈಸೂರ್ ಸಿಲ್ಕ್ಸ್, ಟುಸ್ಸಾರ್ ಹೀಗೆ ರಾಷ್ಟ್ರದಾದ್ಯಂತ ಇರುವ ಲೆಕ್ಕವಿಲ್ಲದಷ್ಟು ದೇಸಿ ಬ್ರಾಂಡ್‌ಗಳ ರೇಷ್ಮೆ ಸೀರೆಗಳಲ್ಲಿ ಈ ಬಾರಿ ಈ ವಿನ್ಯಾಸದವು ಬಿಡುಗಡೆಯಾಗಿದೆ. “ಅಮ್ಮನ ಕಾಲದ ರೇಷ್ಮೆ ಸೀರೆಗಳಂತೆ ತೀರಾ ಹಳೇ ಡಿಸೈನ್‌ಗಳಿಲ್ಲ, ಉಟ್ಟರೇ ತೂಕವಿಲ್ಲ! ಮೈಬಣ್ಣಕ್ಕೆ ಸೂಟ್ ಆಗುವ ಲೆಕ್ಕವಿಲ್ಲದಷ್ಟು ಶೇಡ್‌ಗಳು ದೊರೆಯುತ್ತಿವೆ” ಎನ್ನುತ್ತಾರೆ ಕಾಲೇಜು ಹುಡುಗಿ ಹಾಗೂ ಸೀರೆ ಪ್ರೇಮಿ ರಶಿಕಾ ಹಾಗೂ ಸುನೈನಾ.
ಪ್ರಿಂಟೆಡ್ ಶೈನಿಂಗ್ ರೇಷ್ಮೆ ಖರೀದಿದಾರರಿಗೆ ಒಂದಿಷ್ಟು ಟಿಪ್ಸ್
- ಗುಣಮಟ್ಟದ ರೇಷ್ಮೆ ಸೀರೆಯನ್ನು ಕೇಳಿ, ಪಡೆದು ಖರೀದಿಸಿ.
- ಫೇಕ್ ರೇಷ್ಮೆ ಸೀರೆಯೂ ಈ ವಿನ್ಯಾಸದಲ್ಲಿ ಲಭ್ಯ. ಹಾಗಾಗಿ ಮೊದಲೇ ಈ ಬಗ್ಗೆ ತಿಳಿದು ಕೊಂಡು ಖರೀದಿಸಿ.
- ಮೊದಲೇ ಶುದ್ಧ ಪ್ರಿಂಟೆಡ್ ರೇಷ್ಮೆ ಸೀರೆ ಸಿಗುವ ಕೇಂದ್ರಗಳನ್ನು ತಿಳಿದು ಭೇಟಿ ನೀಡಿ.
- ಈ ವರ್ಷದ ಟ್ರೆಂಡ್‌ನಲ್ಲಿರುವಂತಹ ಡಿಸೈನ್‌ನವನ್ನು ಆಯ್ಕೆ ಮಾಡಿ.
- ಪ್ರಿಂಟೆಡ್ ಶೈನಿಂಗ್ ರೇಷ್ಮೆ ಸೀರೆಗಳಲ್ಲಿ ಲೆಕ್ಕವಿಲ್ಲದಷ್ಟು ಡಿಸೈನ್ಸ್ ಲಭ್ಯ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion Interview: ಕಿರುತೆರೆಯ ಸ್ಟೈಲಿಶ್ ಐಕಾನ್‌ಗಳ ಟಾಪ್ ಲಿಸ್ಟ್‌ಗೆ ಸೇರಿದ ನಿರಂಜನ್ ದೇಶಪಾಂಡೆ
ಫ್ಯಾಷನ್
Star Summer Fashion: ಬೇಸಿಗೆ ಔಟ್‌ಫಿಟ್ಸ್‌ಗೆ ಸೈ ಎಂದ ಗ್ಲಾಮರಸ್ ನಟಿ ರಾಯ್ ಲಕ್ಷ್ಮಿ
ಬಹುಭಾಷಾ ತಾರೆ ರಾಯ್ ಲಕ್ಷ್ಮಿ, ಬೇಸಿಗೆ ಔಟ್‌ಫಿಟ್ಸ್‌ಗೆ (Star Summer Fashion) ಸೈ ಎಂದಿದ್ದಾರೆ. ಈ ಸೀಸನ್‌ಗೆ ಸೂಟ್ ಆಗುವಂತಹ ಗ್ಲಾಮರಸ್ ಉಡುಗೆಗಳಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ಸೀಸನ್ ಎಂಜಾಯ್ ಮಾಡುತ್ತಿದ್ದಾರೆ. ಈ ಬಗ್ಗೆ ಇಲ್ಲಿದೆ ಡಿಟೇಲ್ಸ್.
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೇಸಿಗೆ ಸೀಸನ್‌ಗೆ ಸಾಕಷ್ಟು ತಾರೆಯರ ಫ್ಯಾಷನ್ ಬದಲಾಗಿದೆ. ಪರಿಣಾಮ, ಆಯಾ ಹವಾಮಾನಕ್ಕೆ ತಕ್ಕಂತೆ ಅವರು ಧರಿಸುವ ಉಡುಪುಗಳು ಬದಲಾಗುತ್ತಿವೆ. ಇದೀಗ ಈ ಸಾಲಿಗೆ ಸ್ಯಾಂಡಲ್‌ವುಡ್ ಹಾಗೂ ಬಹುಭಾಷಾ ತಾರೆ ರಾಯ್ ಲಕ್ಷ್ಮಿ ಅವರು ಸೇರಿದ್ದಾರೆ. ಸಮ್ಮರ್ ಔಟ್‌ಫಿಟ್ಸ್‌ಗೆ ಸೈ ಎಂದಿದ್ದಾರೆ.
ಸಮ್ಮರ್‌ಗೆ ಟೊರ್ನ್ ಜೀನ್ಸ್
ನನ್ನದು ಮಿನಿಮಲ್ ಫ್ಯಾಷನ್ ಈ ಸೀಸನ್ ಮಂತ್ರ ಎನ್ನುವ ಅವರ ಚಾಯ್ಸ್ ಬಿಂದಾಸ್ ಕೆಟಗರಿಗೆ ಸೇರಿದೆ. ಒಮ್ಮೊಮ್ಮೆ ಡಿಸೆಂಟ್ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಅವರು ಕೆಲವೊಮ್ಮೆ ಹಾಟ್ ಆಗಿಯೂ ಕಾಣಿಸಿಕೊಂಡು, ಅಭಿಮಾನಿಗಳನ್ನು ಆಗಾಗ್ಗೆ ಸೆಳೆಯುತ್ತಿರುತ್ತಾರೆ. ಇತ್ತೀಚೆಗೆ ಅವರು ಟ್ರಾವೆಲ್ ಸಮಯದಲ್ಲಿ ಧರಿಸಿದ್ದ ಟೊರ್ನ್ ಜೀನ್ಸ್, ಅವರ ಸೋಷಿಯಲ್ ಮೀಡಿಯಾ ಅಕೌಂಟನ್ನು ಕಾಮೆಂಟ್‌ಗಳಿಂದ ತುಂಬಿಸಿತ್ತಂತೆ. ಇದಕ್ಕೆ ಪೂರಕ ಎಂಬಂತೆ, ರಾಯ್ ಲಕ್ಷ್ಮಿ, ನನ್ನದು ಮಾತ್ರ ಬಿಂದಾಸ್ ಫ್ಯಾಷನ್ ಎಂದು ಮುಂಬಯಿಯಲ್ಲಿ ಆನ್‌ಲೈನ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಬ್ಲ್ಯೂ ಟ್ರೆಂಡಿ ಸ್ಟೈಲ್‌ನಲ್ಲಿ ಕಾಣಿಸಿಕೊಂಡ ರಾಯ್ ಲಕ್ಷ್ಮಿ
ಅಂದಹಾಗೆ, ರಾಯ್ ಲಕ್ಷ್ಮಿ ಮೂಲತಃ ಸ್ಯಾಂಡಲ್‌ವುಡ್ ತಾರೆ. ಕನ್ನಡ , ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿರುವುದು ಮಾತ್ರವಲ್ಲದೇ ಇದೀಗ ಅವರ ಬಾಲಿವುಡ್‌ನಲ್ಲೂ ಕಾಣಿಸಿಕೊಂಡಿದ್ದಾರೆ. ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಮುಂಬಯಿಯಲ್ಲಿ ಬಿಝಿಯಾಗಿದ್ದಾರೆ. ನಿನ್ನೆಯಷ್ಟೇ ನಟಿ ಕಾಜಲ್‌ರೊಂದಿಗೆ ಸಿನಿಮಾ ಕುರಿತ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ರಾಯ್ ಲಕ್ಷ್ಮಿಯವರು ಈ ಸೀಸನ್‌ನ ಟ್ರೆಂಡಿ ಬ್ಲ್ಯೂ ಗ್ಲಾಮರಸ್ ಉಡುಪಿನಲ್ಲಿದ್ದರು. ಸಮ್ಮರ್ ಫ್ಯಾಷನ್‌ಗೆ ಸೂಟ್ ಆಗುವಂತಹ ಶೇಡ್ ಹಾಗೂ ವಿನ್ಯಾಸದ ಔಟ್‌ಫಿಟ್‌ನಲ್ಲಿ ಎಲ್ಲರ ಗಮನಸೆಳೆದರು.
ಇದನ್ನೂ ಓದಿ: Summer Fashion: ಬೇಸಿಗೆ ಫ್ಯಾಷನ್‌ಗೆ ಎಂಟ್ರಿ ಕೊಟ್ಟ ಹುಡುಗಿಯರ ಫಂಕಿ ಪ್ರಿಂಟೆಡ್ ಕ್ರಾಪ್ ಶರ್ಟ್ಸ್
ಪ್ಲೋರಲ್ ಪ್ರಿಂಟ್ಸ್ ಪ್ರಿಯೆ
ರಾಯ್ ಲಕ್ಷ್ಮಿ ಫ್ಲೋರಲ್ ಪ್ರಿಂಟ್ಸ್ ಪ್ರಿಯೆ ಎನ್ನಬಹುದು. ಯಾಕೆಂದರೆ, ಅವರು ಹಾಲಿಡೇ ಔಟ್‌ಫಿಟ್‌ಗಳಲ್ಲಿ ಈ ವಿನ್ಯಾಸದ ಔಟ್‌ಫಿಟ್‌ಗಳಲ್ಲೇ ಸಾಕಷ್ಟು ಬಾರಿ ಕಾಣಿಸಿಕೊಂಡಿದ್ದಾರೆ. ಇನ್ನು ಬೀಚ್‌ವೇರ್‌ಗಳಲ್ಲೂ ಅಷ್ಟೇ! ಈ ಪ್ರಿಂಟ್ಸ್ ಉಡುಗೆಯಲ್ಲೆ ಹಲವಾರು ಬಾರಿ ಕಾಣಿಸಿಕೊಂಡಿರುವುದನ್ನು ಗಮನಿಸಬಹುದು.
ಸ್ಟೈಲಿಸ್ಟ್‌ಗಳ ಪ್ರಕಾರ, ರಾಯ್ ಲಕ್ಷ್ಮಿ ಸಖತ್ ಫ್ಯಾಷೆನಬಲ್ ತಾರೆ. ಸೀಸನ್‌ಗೆ ತಕ್ಕಂತೆ ಸ್ಟೈಲಿಶ್ ಆಗಿದ್ದಾರೆ. ಅವರ ಪರ್ಸನಾಲಿಟಿಯೂ ಕೂಡ ಹಾಗೆಯೇ ಇದೆ. ಯಾವುದೇ ಇಮೇಜ್ ಬದಲಿಸುವ ಉಡುಪು ಕೂಡ ಮ್ಯಾಚ್ ಆಗಬಲ್ಲದು. ಹಾಗಿದೆ ಅವರ ಬಾಡಿ ಮಾಸ್ ಇಂಡೆಕ್ಸ್ ಎನ್ನುತ್ತಾರೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಫ್ಯಾಷನ್
Fashion Photoshoot: ವೆಡ್ಡಿಂಗ್ ಸೀಸನ್‌ನಲ್ಲಿ ಟ್ರೆಂಡಿಯಾದ ಕಪಲ್ ಎಂಗೇಜ್‌ಮೆಂಟ್ ಫ್ಯಾಷನ್ ಫೋಟೊಶೂಟ್
ಕೇವಲ ಮದುವೆ ಹಾಗೂ ಪ್ರಿ ವೆಡ್ಡಿಂಗ್‌ಗೆ ಮಾತ್ರ ಸೀಮಿತವಾಗಿದ್ದ ಫೋಟೊಶೂಟ್(Fashion Photoshoot) ಕಾನ್ಸೆಪ್ಟ್ ಇದೀಗ ನಿಶ್ಚಿತಾರ್ಥ ಅಥವಾ ಎಂಗೇಜ್‌ಮೆಂಟ್ ಸಮಾರಂಭಕ್ಕೆ ಧುಮ್ಮಿಕ್ಕಿದೆ. ಅದರಲ್ಲೂ ಎಥ್ನಿಕ್‌ವೇರ್ಸ್ ಧರಿಸಿದ ಫ್ಯಾಷೆನಬಲ್ ಫೋಟೊಶೂಟ್ ಕಾನ್ಸೆಪ್ಟ್ ಟ್ರೆಂಡಿಯಾಗಿದೆ. ಈ ಬಗ್ಗೆ ಇಲ್ಲಿದೆ ವಿವರ.
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮದುವೆಯಾಗುವ ಜೋಡಿಯ ನಿಶ್ಚಿತಾರ್ಥದ ಸಮಾರಂಭದಲ್ಲಿ ಎಥ್ನಿಕ್‌ವೇರ್ ಫೋಟೊಶೂಟ್ (Fashion Photoshoot) ಟ್ರೆಂಡ್ ಇದೀಗ ಹೆಚ್ಚಾಗಿದೆ. ಕೇವಲ ಮದುವೆ ಹಾಗೂ ಪ್ರಿ-ವೆಡ್ಡಿಂಗ್‌ಗೆ ಮಾತ್ರ ಸೀಮಿತವಾಗಿದ್ದ ಫೋಟೊಶೂಟ್ ಕಾನ್ಸೆಪ್ಟ್ ಇದೀಗ ನಿಶ್ಚಿತಾರ್ಥ ಅಥವಾ ಎಂಗೇಜ್‌ಮೆಂಟ್ ಸಮಾರಂಭಕ್ಕೂ ಧುಮ್ಮಿಕ್ಕಿದೆ. ಅದರಲ್ಲೂ ಟ್ರೆಂಡಿ ಎಥ್ನಿಕ್‌ವೇರ್ ಧರಿಸಿದ ಜೋಡಿಗಳ ಫ್ಯಾಷೆನಬಲ್ ಲವ್ ಪ್ರಪೋಸಿಂಗ್, ಎಂಗೇಜ್‌ಮೆಂಟ್ ರಿಂಗ್ ಹಾಕುವ ಹಾಗೂ ರಿಂಗ್ ತೋರಿಸುವ ಫೋಟೊಶೂಟ್ ಕಾನ್ಸೆಪ್ಟ್ ವೆಡ್ಡಿಂಗ್ ಸೀಸನ್‌ನಲ್ಲಿ ಸಾಕಷ್ಟು ಟ್ರೆಂಡಿಯಾಗಿದೆ.
ಎಂಗೇಜ್‌ಮೆಂಟ್ ಫೋಟೊಶೂಟ್
ವೆಡ್ಡಿಂಗ್ ಹಾಗೂ ಪ್ರಿ-ವೆಡ್ಡಿಂಗ್ ಫೋಟೋ ಶೂಟ್‌ಗಳು ಸಾಮಾನ್ಯ. ಆದರೆ, ಇವೆಲ್ಲದಕ್ಕಿಂತ ಮುನ್ನವೇ ನಡೆಯುವ ನಿಶ್ಚಿತಾರ್ಥ ಅಂದರೆ, ಸಾಮಾನ್ಯರ ಆಡು ಭಾಷೆಯಲ್ಲಿ ಕರೆಯಲ್ಪಡುವ ಎಂಗೇಜ್‌ಮೆಂಟ್ ಸಮಾರಂಭದ ದಿನವೇ ನಡೆಸುವ ಫೋಟೋಶೂಟ್ ಇದೀಗ ಸಾಮಾನ್ಯವಾಗುತ್ತಿದೆ. ಎಥ್ನಿಕ್‌ವೇರ್‌ನಲ್ಲಿಯೇ ಹುಡುಗ-ಹುಡುಗಿಯನ್ನು ಪ್ರಪೋಸ್ ಮಾಡುವ, ಕೈ ಬೆರಳುಗಳಿಗೆ ರಿಂಗ್ ಹಾಕುವ, ಇಲ್ಲವೇ ಉಂಗುರ ತೋರಿಸುವ ಹಾಗೂ ಹೂವು ಮುಡಿಸುವ ಶಾಸ್ತ್ರಗಳನ್ನೊಳಗೊಂಡಂತಹ ಫೋಟೊಶೂಟ್‌ಗೆ ಎಲ್ಲರೂ ಶರಣಾಗಿದ್ದಾರೆ. ಜತೆಗೆ ಇದಕ್ಕಾಗಿ ಸಮಾರಂಭದ ಸನ್ನಿವೇಶಗಳನ್ನು ಥೀಮ್ ಆಗಿ ಬಳಸಿಕೊಳ್ಳುವುದು ಅಧಿಕಗೊಳ್ಳುತ್ತಿದೆ.
“ಮದುವೆ ಹಾಗೂ ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ಗಳು ತೀರಾ ಕಾಮನ್. ಇದೀಗ ಮದುವೆಯಾಗುವ ಜೋಡಿಗಳು ಈ ಎಂಗೇಜ್‌ಮೆಂಟ್ ಸಮಾರಂಭಕ್ಕೂ ಫೋಟೊಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. ಖುಷಿಯ ವಿಚಾರ ಎಂದರೇ, ವೆಸ್ಟರ್ನ್ ಉಡುಪುಗಳನ್ನು ಸೈಡಿಗಿರಿಸಿ, ಇದೀಗ ಕಂಪ್ಲೀಟ್ ನಮ್ಮ ಸಂಸ್ಕೃತಿಗೆ ಮ್ಯಾಚ್ ಆಗುವಂತಹ ಉಡುಪುಗಳಲ್ಲಿ ಕಾಣಿಸಿಕೊಂಡು ಫೋಟೊಶೂಟ್ ಮಾಡಿಸುತ್ತಿದ್ದಾರೆ. ತಾವು ಎಂಗೇಜ್ ಆಗಿರುವುದನ್ನು ಇಂತಹ ಫೋಟೊಗಳ ಮೂಲಕ ಸಾರ್ವಜನಿಕರಿಗೆ ತಿಳಿಸುವುದು ಉದ್ದೇಶವಾಗಿದೆ. ಇದು ಉತ್ತಮ ಬೆಳವಣಿಗೆ” ಎನ್ನುತ್ತಾರೆ ಫ್ಯಾಷನ್ ಫೋಟೊಗ್ರಾಫರ್ ನಕುಲ್ ಹಾಗು ರಾಜನ್.
ಇದನ್ನೂ ಓದಿ: Summer Fashion: ಬೇಸಿಗೆ ಫ್ಯಾಷನ್‌ಗೆ ಎಂಟ್ರಿ ಕೊಟ್ಟ ಹುಡುಗಿಯರ ಫಂಕಿ ಪ್ರಿಂಟೆಡ್ ಕ್ರಾಪ್ ಶರ್ಟ್ಸ್
ಫೋಟೊಶೂಟ್‌ನಲ್ಲಿ ಎಥ್ನಿಕ್‌ವೇರ್‌ಗಳ ಸಂಭ್ರಮ
ಎಂಗೇಜ್‌ಮೆಂಟ್‌ನಲ್ಲಿ ಕೇವಲ ಹುಡುಗ-ಹುಡುಗಿಯರ ಫೋಟೊಶೂಟ್ ಮಾತ್ರವಲ್ಲ, ನೆರೆದಿರುವ ಕುಟುಂಬದವರನ್ನು ಸೇರಿಸಿ ಫೋಟೊಶೂಟ್ ಮಾಡುವುದು ಇಂದು ಕಾಮನ್ ಆಗಿದೆ. ಸಾಂಪ್ರಾದಾಯಿಕ ಉಡುಗೆ-ತೊಡುಗೆಗಳನ್ನು ಧರಿಸಿದ ಕುಟುಂಬದವರೊಂದಿಗೆ ಸಂಭ್ರಮಿಸುವಂತಹ ಫೋಟೋಶೂಟ್ ಕೂಡ ಪ್ರಚಲಿತದಲ್ಲಿದೆ. ಇವೆಲ್ಲವನ್ನು ಮದುವೆಯ ದಿನ ಆನ್‌ಸ್ಕ್ರೀನ್‌ನಲ್ಲಿ ತೋರಿಸುವುದು ಇದೀಗ ಚಾಲ್ತಿಯಲ್ಲಿದೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಫ್ಯಾಷನ್
Summer Fashion: ಬೇಸಿಗೆ ಫ್ಯಾಷನ್‌ಗೆ ಎಂಟ್ರಿ ಕೊಟ್ಟ ಹುಡುಗಿಯರ ಫಂಕಿ ಪ್ರಿಂಟೆಡ್ ಕ್ರಾಪ್ ಶರ್ಟ್ಸ್
ಬೇಸಿಗೆಯ ಫ್ಯಾಷನ್‌ಗೆ (Summer Fashion) ಲೆಕ್ಕವಿಲ್ಲದಷ್ಟು ಟ್ರೆಂಡಿವೇರ್‌ಗಳು ಎಂಟ್ರಿ ನೀಡುತ್ತವೆ. ಅವುಗಳಲ್ಲಿ ಇದೀಗ ಫಂಕಿ ಲುಕ್ ನೀಡುವ ಫ್ಲೋರಲ್ ಹಾಗೂ ವೈಬ್ರೆಂಟ್ ಶೇಡ್ಸ್‌ನ ಜೆಮೆಟ್ರಿಕಲ್ ಪ್ರಿಂಟೆಡ್ ಶರ್ಟ್‌ಗಳು ಸೇರಿವೆ. ಹುಡುಗಿಯರ ಫ್ಯಾಷನ್‌ನಲ್ಲಿರುವ ಇವುಗಳ ಬಗ್ಗೆ ಸ್ಟೈಲಿಸ್ಟ್ಸ್ ಒಂದಿಷ್ಟು ವಿವವರ ನೀಡಿದ್ದಾರೆ.
ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೇಸಿಗೆಗೆ ಇದೀಗ (Summer Fashion) ಕ್ರಾಪ್ ಟೀ ಶರ್ಟ್‌ನ ನಂತರ ಕ್ರಾಪ್ ಫ್ಲೋರಲ್ ಹಾಗೂ ವೈಬ್ರೆಂಟ್ ಶೇಡ್‌ನ ಜೆಮೆಟ್ರಿಕಲ್ ಪ್ರಿಂಟ್ಸ್‌ನ ಶರ್ಟ್‌ಗಳು ಎಂಟ್ರಿ ನೀಡಿವೆ. ನೋಡಲು ಬಿಂದಾಸ್ ಹಾಗೂ ಲೈವ್ಲಿಯಾಗಿ ಕಾಣುವ ಈ ಫಂಕಿ ಶರ್ಟ್ಸ್ ಈಗಾಗಲೇ ಟಿನೇಜ್ ಹುಡುಗಿಯರ ಮನ ಗೆದ್ದಿವೆ. ಅದರಲ್ಲೂ ಔಟಿಂಗ್‌ಗೆ ಹೇಳಿಮಾಡಿಸಿದಂತಿವೆ.
ಫಂಕಿ ಹೂಗಳ ಚಿತ್ತಾರದ ಶರ್ಟ್
ಕೆಲವು ಫಂಕಿ ಶರ್ಟ್‌ಗಳಲ್ಲಿ ನಾನಾ ಬಗೆಯ ಹೂವುಗಳ ಚಿತ್ತಾರ ಕಾಣಬಹುದು. ಗುಲಾಬಿ, ಸೇವಂತಿ, ಕಮಲ, ಬ್ರಹ್ಮಕಮಲ. ಸೂರ್ಯಕಾಂತಿ, ಮಲ್ಲಿಗೆ, ಕನಾಕಾಂಬರ, ಜಾಜಿ ಸೇರಿದಂತೆ ದೇಸಿ ಹೂವುಗಳ ಪ್ರಿಂಟ್ಸ್ ಮಾತ್ರವಲ್ಲ, ವಿದೇಶಿ ಹೂವುಗಳ ಚಿತ್ತಾರವು ಮೆಳೈಸಿವೆ. ಬೇಸಿಗೆಯ ಉರಿ ಬಿಸಿಲಲ್ಲಿ ತಂಪನ್ನೆರೆಯುವ ವಿನ್ಯಾಸಗಳಲ್ಲಿ ಮೂಡಿಬಂದಿವೆ ಎನ್ನುತ್ತಾರೆ ಸ್ಟೈಲಿಸ್ಟ್ ಹಾಗೂ ಡಿಸೈನರ್ ರಿಜಿನಾ ವರ್ಗೀಸ್. ಅವರ ಪ್ರಕಾರ, ಟೀ ಶರ್ಟ್‌ಗಳನ್ನು ಧರಿಸಲು ಇಚ್ಛಿಸದವರು ಈ ಶರ್ಟ್‌ಗಳನ್ನು ಟ್ರೈ ಮಾಡಬಹುದು ಎನ್ನುತ್ತಾರೆ.
ವೈಬ್ರೆಂಟ್ ಶೇಡ್ಸ್‌ನ ಜೆಮೆಟ್ರಿಕಲ್ ಪ್ರಿಂಟೆಡ್ ಶರ್ಟ್
ಜೆಮೆಟ್ರಿಕಲ್ ವಿನ್ಯಾಸದ ಕೆಟಗರಿಯಲ್ಲಿ ನಾನಾ ಕಲರ್ ಬ್ಲಾಕ್ ಡಿಸೈನ್‌ವು ಹಾಗೂ ಪೆಂಟಾಗನ್, ಅಕ್ಟಾಗನ್, ಚೌಕಾಕಾರ, ತ್ರೀಕೋನ ಸೇರಿದಂತೆ ನಾನಾ ವಿನ್ಯಾಸದ ಪ್ರಿಂಟೆಡ್ ಶರ್ಟ್‌ಗಳು ಲಭ್ಯ. ಅಷ್ಟು ಮಾತ್ರವಲ್ಲದೇ ಈ ಜೆಮಿಟ್ರಿಕಲ್ ಪ್ರಿಂಟ್‌ನ ಜೊತೆಗೆ ಮಿಕ್ಸ್ ಮ್ಯಾಚ್ ಇರುವಂತಹ ಹೂವುಗಳ ಹಾಗೂ ಇಲ್ಯೂಷನ್ ಕ್ರಿಯೆಟ್ ಮಾಡುವಂತಹ ವಿನ್ಯಾಸದವು ಇಂದು ಚಾಲ್ತಿಯಲ್ಲಿವೆ.
ರಂಗೋಲಿ ಡಿಸೈನ್ ಪ್ರಿಂಟ್ಸ್
ಇನ್ನು ಕೆಲವು ಡಿಸೈನರ್ ಕ್ರಾಪ್ ಶರ್ಟ್‌ಗಳಲ್ಲಿ ರಂಗೋಲಿ ಡಿಸೈನವು ಲಭ್ಯ. ತ್ರಿಡಿ ಆರ್ಟ್ ಎಫೆಕ್ಟ್ ಇರುವಂತವು ಪ್ರಚಲಿತದಲ್ಲಿವೆ. ಇನ್ನು ಸಾದಾ ಕ್ರಾಪ್ ಶರ್ಟ್‌ನವು ಈ ಸೀಸನ್‌ನಲ್ಲಿ ಅಷ್ಟಾಗಿ ಕಾಣಸಿಗುತ್ತಿಲ್ಲ. ಸಿಕ್ಕರೂ ಕಾರ್ಪೋರೇಟ್ ಕ್ಷೇತ್ರದ ಮಾನಿನಿಯರು ಧರಿಸುವುದು ಕಾಮನ್ ಆಗಿದೆ ಎನ್ನುತ್ತಾರೆ ಡಿಸೈನರ್ಸ್ ರಿಚಾ ಹಾಗೂ ರಾಧಾ..
ಕ್ರಾಪ್ ಶರ್ಟ ಅನ್ನು ಹೇಗೆಲ್ಲಾ ಸ್ಟೈಲಿಂಗ್ ಮಾಡಬಹುದು?
- ಫಾರ್ಮಲ್ ಪ್ಯಾಂಟ್ ಜೊತೆಗೂ ಧರಿಸಬಹುದು.
- ಜೀನ್ಸ್, ಸ್ಕರ್ಟ್, ಕೇಪ್ರೀಸ್ ನೊಂದಿಗೂ ಧರಿಸಬಹುದು.
- ಕಾಲರ್ ಇರುವುದರಿಂದ ಮಿನಿಮಲ್ ಆಕ್ಸೆಸರೀಸ್ ಧರಿಸುವುದು ಉತ್ತಮ.
- ಹೇರ್‌ಸ್ಟೈಲ್ ಟ್ರೈ ಮಾಡಿದರೇ ಉತ್ತಮ.
- ಫಂಕಿ ಪ್ರಿಂಟ್ ಶರ್ಟ ಅನ್ನು ಟೈ ಮಾಡಿದಲ್ಲಿ ಕ್ರಾಪ್ ಟಾಪ್ ನಂತೆ ಕಾಣುವುದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Summer Swimsuit Fashion: ಬೇಸಿಗೆಯ ಫ್ಯಾಷನ್‌ಗೆ ಲಗ್ಗೆ ಇಟ್ಟ ವೈಬ್ರೆಂಟ್ ಶೇಡ್ಸ್‌ನ ಟ್ರೆಂಡಿ ಸ್ವಿಮ್‌ಸೂಟ್ಸ್
ಫ್ಯಾಷನ್
Star Fashion: ‘ಜೆಂಡರ್ ಬಾರ್ಡರ್’ ಮುರಿದ ನಟ ಮಾಡೆಲ್ ವಿಜಯ್ ವರ್ಮಾ ಮೆಟಲ್ ಸೀರೆ ಕಹಾನಿ!
ಬಾಲಿವುಡ್ ನಟ ಹಾಗೂ ಮಾಡೆಲ್ ವಿಜಯ್‌ವರ್ಮಾ ಪ್ರತಿಷ್ಠಿತ ಫ್ಯಾಷನ್ ವೀಕ್‌ಗಳಲ್ಲಿ (Star Fashion) ವಾಕ್ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಇದೀಗ ಅವರು ಜೆಂಡರ್ ಬಾರ್ಡರ್ ಮುರಿದು ಡಿಸೈನರ್ ರಿಮ್‌ಜಿಮ್ ದಾದು ಅವರ ಮೆಟಲ್ ಸೀರೆಯಲ್ಲಿ ಕಾಣಿಸಿಕೊಂಡು ಫ್ಯಾಷನ್ ಪ್ರಿಯರ ಹುಬ್ಬೇರಿಸಿದ್ದಾರೆ.
ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾಲಿವುಡ್ ನಟ ಹಾಗೂ ಮಾಡೆಲ್ ವಿಜಯ್ ವರ್ಮಾ ಪ್ರತಿಷ್ಠಿತ ಫ್ಯಾಷನ್ ವೀಕ್‌ಗಳಲ್ಲಿ (Star Fashion) ರೆಗ್ಯುಲರ್ ಆಗಿ ವಾಕ್ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಇದೀಗ ಅವರು ವಿಭಿನ್ನ ವೇಷದಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ. ಫ್ಯಾಷನ್ ಪ್ರಿಯರ ಹುಬ್ಬೇರಿಸಿದ್ದಾರೆ. ಹೌದು. ಜೆಂಡರ್ ಫ್ಯಾಷನ್ ರೂಲ್ಸ್ ಮುರಿದಿದ್ದಾರೆ. ಅಂದರೆ, ಮಹಿಳೆಯರಿಗೆಂದು ಮೀಸಲಾಗಿರುವ ಸೀರೆಯನ್ನು ಉಟ್ಟು ಫ್ಯಾಷನ್ ಫೋಟೋಶೂಟ್‌ನಲ್ಲಿ ಪಾಲ್ಗೊಂಡು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುವ ಮೂಲಕ ಫ್ಯಾಷನ್ ಲೋಕದಲ್ಲಿ ಸುದ್ದಿಯಾಗಿದ್ದಾರೆ. ಜೊತೆಗೆ ಫ್ಯಾಷನ್‌ಗೆ ಯಾವುದೇ ಜೆಂಡರ್ ಡಿಸ್ಕ್ರಿಮಿನೇಷನ್ ಸಲ್ಲದು ಎಂದು ಮಾತನಾಡದೇ ಪ್ರತಿಪಾದಿಸಿದ್ದಾರೆ. ಇದು ಫ್ಯಾಷನ್ ಲೋಕದಲ್ಲಿ ನಟರ ಹೊಸ ಟ್ರೆಂಡ್‌ಗೆ ನಾಂದಿ ಹಾಡಿದೆ.
ವಿಜಯವರ್ಮಾ ಧರಿಸಿರುವ ಮೆಟಲ್ ಸೀರೆ
ಅಂದಹಾಗೆ, ನಟ ವಿಜಯ್ ವರ್ಮಾ ಧರಿಸಿರುವ ಡಿಸೈನರ್‌ವೇರ್ ಎನ್ನುವುದಕ್ಕಿಂತ ಅದು ಮೆಟಲ್ ಸೀರೆ ಎನ್ನಬಹುದು. ನೋಡಲು ತಕ್ಷಣಕ್ಕೆ ಇದೇನಿದು ಸೀರೆಯಾ ಎಂದುಕೊಳ್ಳಬಹುದು. ಆದರೆ, ಇದು ಸೀರೆಯೇ ಹಾಗೆ ಇದನ್ನು ಡಿಸೈನರ್ ರಿಮ್‌ಜಿಮ್ ದಾದು ವಿನ್ಯಾಸಗೊಳಿಸಿದ್ದಾರೆ.
ನಟ ವಿಜಯ್ ವರ್ಮಾ ಹೇಳುವುದೇನು?
ನಟನಾದವನು ಎಲ್ಲಾ ಬಗೆಯ ನಟನೆ ಹಾಗೂ ಫ್ಯಾಷನ್‌ಗೂ ರೆಡಿಯಾಗಬೇಕಾಗುತ್ತದೆ. ನನಗಂತೂ ಫ್ಯಾಷನ್ ವೀಕ್‌ಗಳಲ್ಲಿ ವಾಕ್ ಮಾಡುವುದು ಕ್ರಿಯಾತ್ಮಕ ಡಿಸೈನರ್‌ವೇರ್‌ಗಳಲ್ಲಿ ಕಾಣಿಸಿಕೊಳ್ಳುವುದು ಇಷ್ಟವಾಗುತ್ತದೆ. ಮೆಟಲ್ ಸೀರೆ ಒಂದು ಕಲಾ ಪ್ರಕಾರ, ಅದನ್ನು ಧರಿಸಿ, ಫ್ಯಾಷನ್ ಫೋಟೋಶೂಟ್‌ನಲ್ಲಿ ಕಾಣಿಸಿಕೊಂಡಿದ್ದೇನೆ ಅಷ್ಟೇ! ಎಂದು ವಿಜಯ್ ವರ್ಮಾ ಹೇಳಿಕೊಂಡಿದ್ದಾರೆ.
ಆರ್ಟ್ ಇನ್ ಮೋಷನ್ ಹೆಸರಿನಲ್ಲಿ ಥೀಮ್ ಸೀರೆ
ಆರ್ಟ್ ಆಫ್ ಮೋಷನ್ ಹೆಸರಲ್ಲಿ ಈ ಥೀಮ್ ಸೀರೆ ಸಿದ್ಧಪಡಿಸಿರುವ ಅವರು ಎಲ್ಲರಿಗೂ ಅರ್ಥವಾಗುವಂತೆ ಮೆಟಲ್ ಸೀರೆ ಎಂದು ಹೇಳಿದ್ದಾರೆ. ಇದಕ್ಕಾಗಿ ಸಾಕಷ್ಟು ಹಾರ್ಡ್ವರ್ಕ್ ಮಾಡಿದ್ದಾರಂತೆ ಕೂಡ. ಯಾವುದೇ ಫ್ಯಾಷನ್‌ಗೆ ಸೀಸನ್ ಎಂಬ ಬೌಂಡರಿ ಇಲ್ಲ, ಜೆಂಡರ್ ಬೌಂಡರಿ ಇಲ್ಲ ಹಾಗೂ ಯಾವುದೇ ವಿನ್ಯಾಸದ ಬೌಂಡರಿ ಇಲ್ಲ ಎಂದು ಡಿಸೈನರ್ ರಿಮ್‌ಜಿಮ್ ದಾದೂ ಪ್ರತಿಪಾದಿಸಿದ್ದಾರೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Fashion Interview: ಯೂನಿಕ್ ಫ್ಯಾಷನ್‌ಗೆ ನಟಿ ಸಾನ್ಯ ಅಯ್ಯರ್ ಫಿದಾ!
-
ಕರ್ನಾಟಕ15 hours ago
High Court order: ತುಮಕೂರು ಗ್ರಾಮಾಂತರ ಜೆಡಿಸ್ ಶಾಸಕ ಗೌರಿಶಂಕರ್ ಶಾಸಕತ್ವದಿಂದ ಅನರ್ಹ: ಕೋರ್ಟ್ ಆದೇಶ
-
ಕ್ರಿಕೆಟ್16 hours ago
IND VS PAK: ಏಕದಿನ ವಿಶ್ವಕಪ್; ತಟಸ್ಥ ತಾಣದಲ್ಲಿ ನಡೆಯಲಿದೆ ಪಾಕಿಸ್ತಾನದ ಪಂದ್ಯಗಳು!
-
ಕರ್ನಾಟಕ13 hours ago
Karnataka BJP: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆಗೆ ಬಿಜೆಪಿ ಚಿಂತನೆ: ಖಚಿತಪಡಿಸಿದ ಬಿ.ಎಸ್. ಯಡಿಯೂರಪ್ಪ
-
ಕ್ರಿಕೆಟ್13 hours ago
ICC World Cup 2023: ಭಾರತದಲ್ಲೇ ನಡೆಯಲಿದೆ ವಿಶ್ವ ಕಪ್ ಪಂದ್ಯ; ಐಸಿಸಿ ಸ್ಪಷ್ಟನೆ
-
ಕರ್ನಾಟಕ14 hours ago
Anjanadri Hill: 101 ಕೆಜಿ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ ಹನುಮನ ಭಕ್ತ
-
ಕ್ರಿಕೆಟ್11 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ14 hours ago
Karnataka BJP: ಮುಸ್ಲಿಂ ಬಾಂಧವರಿಗೆ ಬಿಜೆಪಿ ಅನ್ಯಾಯ ಮಾಡಿಲ್ಲ: ಮನವೊಲಿಸುತ್ತೇವೆ ಎಂದ ಬಿ.ಎಸ್. ಯಡಿಯೂರಪ್ಪ
-
ದೇಶ15 hours ago
ಸ್ಮೃತಿ ಇರಾನಿಯನ್ನು ಡಾರ್ಲಿಂಗ್ ಎಂದು ಬಿಜೆಪಿ ನಾಯಕ ಟ್ವೀಟ್, ಮಾನಹಾನಿ ನೋಟಿಸ್ ಕಳುಹಿಸಿದ ಕೈ ನಾಯಕ!