ಕಿರುತೆರೆ
Fashion Interview: ಕಿರುತೆರೆಯ ಸ್ಟೈಲಿಶ್ ಐಕಾನ್‌ಗಳ ಟಾಪ್ ಲಿಸ್ಟ್‌ಗೆ ಸೇರಿದ ನಿರಂಜನ್ ದೇಶಪಾಂಡೆ
ನಟ ಹಾಗೂ ಜನಪ್ರಿಯ ನಿರೂಪಕರಾಗಿರುವ ನಿರಂಜನ್ ದೇಶಪಾಂಡೆ (Fashion Interview) ಸದ್ಯಕ್ಕೆ ಟೆಲಿವಿಷನ್ ಲೋಕದ ಸ್ಟೈಲಿಶ್ ಐಕಾನ್ ಎಂದೇ ಖ್ಯಾತಿ ಗಳಿಸಿದ್ದಾರೆ. ತಮ್ಮದೇ ಆದ ಫ್ಯಾಷನ್ ಲುಕ್‌ಗೆ ಹೆಸರಾಗಿದ್ದಾರೆ. ಈ ಬಗ್ಗೆ ಅವರು ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿದ್ದಾರೆ.
ಸಂದರ್ಶನ: ಶೀಲಾ ಸಿ. ಶೆಟ್ಟಿ
ಕಿರುತೆರೆಯಲ್ಲಿ ಸದ್ಯಕ್ಕೆ ಸ್ಟೈಲಿಶ್ ಹಾಗೂ ಆಕರ್ಷಕವಾಗಿ ಕಾಣಿಸುವವರ ಸಾಲಿನಲ್ಲಿ ನಟ ಹಾಗೂ ನಿರೂಪಕ ನಿರಂಜನ್ ದೇಶಪಾಂಡೆ ಮೊದಲ ಸ್ಥಾನದಲ್ಲಿದ್ದಾರೆ. ಪ್ರತಿ ಕಾರ್ಯಕ್ರಮಗಳಲ್ಲೂ ಸಖತ್ ಫ್ಯಾಷೆನಬಲ್ ಆಗಿ ಕಾಣಿಸಿಕೊಳ್ಳುವ ಯುವ ನಿರೂಪಕ ನಿರಂಜನ್ (niranjan deshpande) ಅವರು ಫ್ಯಾಷನ್ ವಿಮರ್ಶಕರ ಫೇವರೇಟ್ ಕೂಡ ಹೌದು. ಆ ಮಟ್ಟಿಗೆ ಟ್ರೆಂಡಿಯಾಗಿ ಕಾಣಿಸಿಕೊಳ್ಳುತ್ತಾರೆ. ಜತೆಗೆ ತಮ್ಮದೇ ಆದ ಯೂನಿಕ್ ಫ್ಯಾಷನ್ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಉದ್ಯಾನನಗರಿಯ ವೆಲ್ಹೋಜ್ಹ್ ಇವ್ ಸಂಸ್ಥೆ ಆಯೋಜಿಸಿದ್ದ ವಿಮೆನ್ಸ್ ಆಚಿವರ್ಸ್ ಆವಾರ್ಡ್ ಸಮಾರಂಭಕ್ಕೆ ಅತಿಥಿಯಾಗಿ ಆಗಮಿಸಿದ್ದ ನಿರಂಜನ್ ದೇಶಪಾಂಡೆ, ವಿಸ್ತಾರ ನ್ಯೂಸ್‌ನೊಂದಿಗೆ ತಮ್ಮ ಫ್ಯಾಷನಬಲ್ ಲೈಫ್‌ಸ್ಟೈಲ್ ಬಗ್ಗೆ ಮಾತನಾಡಿದ್ದಾರೆ.
ಫ್ಯಾಷನಬಲ್ ನಿರೂಪಕರ ಟಾಪ್ ಲಿಸ್ಟ್‌ನಲ್ಲಿದ್ದಿರಲ್ಲ! ನಿಮ್ಮ ಫ್ಯಾಷನ್ ಮಂತ್ರ ಏನು ?
ಧನ್ಯವಾದಗಳು. ನಾನು ಆದಷ್ಟೂ ಸೀಸನ್‌ವೈಸ್ ಫ್ಯಾಷನ್ ಅಳವಡಿಸಿಕೊಳ್ಳುತ್ತೇನೆ. ಉದಾಹರಣೆಗೆ., ಬೇಸಿಗೆ ತಕ್ಕಂತೆ ನನ್ನ ಡ್ರೆಸ್‌ಕೋಡ್ ಇರುತ್ತದೆ. ಬಿಸಿಲಿಗೆ ಸನ್‌ಗ್ಲಾಸ್, ಇನ್ನು ಚಳಿಗಾಲಕ್ಕೆ ಲೆಯರ್ ಲುಕ್ ನೀಡುವ ಜಾಕೆಟ್ಸ್ ಹೀಗೆ ಬದಲಾಗುತ್ತಿರುತ್ತದೆ.
ನಿಮ್ಮ ಸಿಗ್ನೇಚರ್ ಸ್ಟೈಲ್ ಬಗ್ಗೆ ಹೇಳಿ?
ನನಗೆ ಚೈನಾ ಕಾಲರ್ಸ್ ಇರುವಂತಹ ಶರ್ಟ್ಸ್, ಟೋರ್ನ್ ಜೀನ್ಸ್ ಹಾಗೂ ಸನ್‌ಗ್ಲಾಸ್ ನನ್ನ ಸಿಗ್ನೇಚರ್ ಸ್ಟೈಲ್ ಲಿಸ್ಟ್‌ನಲ್ಲಿದೆ.
ನಿಮ್ಮ ಸ್ಟೈಲ್‌ಸ್ಟೇಟ್‌ಮೆಂಟ್‌ಗೆ ಸಾಥ್ ನೀಡುವ ಅಂಶಗಳ್ಯಾವುವು?
ಮುಗುಳ್ನಗೆ. ಹೌದು. ಮುಖದ ಮೇಲಿನ ಒಂದು ಮುಗುಳ್ನಗೆ ಇಡೀ ಲುಕ್‌ಗೆ ಕಿರೀಟವಿದ್ದಂತೆ. ನೋಡಲು ಆಕರ್ಷಕವಾಗಿ ಕಾಣಲು ಇದು ಪ್ಲಸ್ ಪಾಯಿಂಟ್. ಹುಡುಗಿಯರೇ ಆಗಲಿ ಹುಡುಗರೇ ಆಗಲಿ, ಎಷ್ಟೆಲ್ಲಾ ಫ್ಯಾಷನಬಲ್ ಆಗಿ ರೆಡಿಯಾಗಿದ್ದರೂ ಕೊನೆಗೆ ಮುಖದ ಮೇಲಿನ ನಗು ಮತ್ತಷ್ಟು ಸುಂದರವಾಗಿ ಕಾಣುವಂತೆ ಬಿಂಬಿಸುತ್ತದೆ. ನಗು ಇಲ್ಲದಿದ್ದರೇ ಎಷ್ಟು ದುಬಾರಿ ಉಡುಪು ಧರಿಸಿದರೂ ಸಪ್ಪೆಯೆಂದೆನಿಸಬಹುದು.
ನಿಮಗೆ ಎಥ್ನಿಕ್ ಅಥವಾ ವೆಸ್ಟರ್ನ್ ಯಾವ ಬಗೆಯ ಫ್ಯಾಷನ್‌ವೇರ್‌ಗಳಿಷ್ಟ?
ಹಾಗೇನಿಲ್ಲ! ಕಂಫರ್ಟಬಲ್ ಹಾಗೂ ಗುಡ್ ಲುಕ್ಕಿಂಗ್ ಕಾಣುವಂತಹ ಯಾವುದೇ ಉಡುಪಾದರೂ ಸರಿಯೇ!
ಟೆಲಿವಿಷನ್‌ನಲ್ಲಿ ನೀವು ಧರಿಸುವ ಫ್ಯಾಷನ್‌ವೇರ್‌ಗೂ ಅಭಿಮಾನಿಗಳು ಇದ್ದಾರಂತಲ್ಲ! ಸೋ, ಪ್ರತಿಬಾರಿ ಸ್ಟೈಲಿಶ್ ಲುಕ್ ಹೇಗೆ ನಿರ್ಧರಿಸುತ್ತೀರಿ?
ಹೌದು. ಅಭಿಮಾನಿಗಳಿದ್ದಾರೆ. ಖುಷಿಯಾಗುತ್ತದೆ. ಕೆಲವೊಂದು ಸ್ಟೈಲಿಶ್ ಲುಕ್‌ಗಳನ್ನು ಖುದ್ದು ನಿರ್ಧರಿಸುತ್ತೀನಿ. ಆದರೆ, ಇದೀಗ ಆಯಾ ಕಾರ್ಯಕ್ರಮಗಳಿಗೆ ತಕ್ಕಂತೆ ಚಾನೆಲ್‌ಗಳೇ ಹೀಗಿರಬೇಕೆಂದು ತೀರ್ಮಾನಿಸಿ ಆಪ್ಷನ್ ನೀಡುತ್ತವೆ. ಪರಿಣಾಮ, ಎಲ್ಲರ ಅಭಿಪ್ರಾಯಗಳು ಒಟ್ಟಿಗೆ ಸೇರಿ ಸ್ಟೈಲಿಶ್ ಲುಕ್ ನನ್ನದಾಗುತ್ತದೆ.
ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯವಾಗಿರುವ ನೀವು ನೆಟ್ಟಿಗರಿಗೆ ಯಾವ ಬಗೆಯ ಫ್ಯಾಷನ್ ಟಿಪ್ಸ್ ನೀಡುತ್ತೀರಾ?
ಫ್ಯಾಷನ್ ಲುಕ್ ನಿಮಗೆ ಹೊಂದುವಂತಿರಲಿ, ಬೇರೆಯವರ ಫ್ಯಾಷನ್ ಫಾಲೋ ಮಾಡಲು ಹೋಗಿ ನಗೆಪಾಟಲಿಗೀಡಾಗಬೇಡಿ. ಆದಷ್ಟೂ ನಿಮ್ಮ ಬಾಡಿ ಟೈಪ್‌ಗೆ ಹೊಂದುವಂತದ್ದನ್ನು ಧರಿಸಿ. ಸ್ಮಾರ್ಟ್ ಆಗಿ ಕಾಣಿಸಿಕೊಳ್ಳಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಕಿರುತೆರೆ
Akshata Kuki: ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಮಾಜಿ ಒಟಿಟಿ ಸ್ಪರ್ಧಿ ಅಕ್ಷತಾ ಕುಕಿ
ಮಾರ್ಚ್ 27ರಂದು ಅಕ್ಷತಾ ಕುಕ್ಕಿ (Akshata Kuki) ಅವರು ಅವಿನಾಶ್ ಜತೆ ಸಪ್ತಪದಿ ತುಳಿದಿದ್ದಾರೆ. ಮದುವೆ ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಕನ್ನಡ ʻಒಟಿಟಿ ಸೀಸನ್ 1′ ಶೋನಲ್ಲಿ ಉತ್ತರ ಕರ್ನಾಟಕದ ಭಾಷೆ ಮಾತನಾಡುತ್ತ ಮನಸ್ಸು ಗೆದ್ದಿದ್ದ ಅಕ್ಷತಾ ಕುಕಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮಾರ್ಚ್ 27ರಂದು ಅಕ್ಷತಾ ಕುಕ್ಕಿ ಅವರು ಅವಿನಾಶ್ ಜತೆ ಸಪ್ತಪದಿ ತುಳಿದಿದ್ದಾರೆ. ಮದುವೆ ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಬಂಗಾರದ ಬಣ್ಣದ ಸೀರೆ ಉಟ್ಟು, ಹಸಿರು ಬಣ್ಣದ ಸರವನ್ನು ಧರಿಸಿ ಅಕ್ಷತಾ ಅವರು ಮಿಂಚುತ್ತಿದ್ದರು.
ಕೆಂಪು ಬಣ್ಣದ ಲೆಹೆಂಗಾ ಕೂಡ ಧರಿಸಿದ್ದರು. ಅವಿನಾಶ್ ಬಿಳಿ ಬಣ್ಣದ ಶರ್ಟ್ ಪಂಚೆಯಲ್ಲಿ ಕಂಗೊಳಿಸುತ್ತಿದ್ದರು.
ಅಕ್ಷತಾ ಅವರು ಕನ್ನಡದ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ಧ್ರುವ ಸರ್ಜಾ ನಟಿಸುತ್ತಿರುವ ‘ಮಾರ್ಟಿನ್’ ಸಿನಿಮಾದಲ್ಲಿ ಅಕ್ಷತಾ ಬಣ್ಣ ಹಚ್ಚಿದ್ದರು.
ಈ ವರ್ಷ ಫೆಬ್ರವರಿಯಲ್ಲಿ ಅಕ್ಷತಾ ಅವರು ಎಂಗೇಜ್ಮೆಂಟ್ ವಿಷಯ ತಿಳಿಸಿದ್ದರು.
ಕಿರುತೆರೆ
Weekend With Ramesh: ʻನಾನು ಆಡೋದೇ ಇಲ್ಲ.. ನನ್ನ ಬಾಡಿನೇ ಆಡೋದುʼ ಎಂದ ಪ್ರಭುದೇವ: ಹೇಗಿದೆ ಪ್ರೋಮೊ?
Weekend With Ramesh ಎರಡನೇ ಅತಿಥಿಯಾಗಿ ಪ್ರಭುದೇವ ಬರುತ್ತಿದ್ದಾರೆ. ಸಾಧಕರ ಸೀಟಿನಲ್ಲಿ ಕೂತು ತಮ್ಮ ಬದುಕಿನ ಅನಾವರಣವನ್ನು ಮಾಡಿರುವ ಪ್ರಭುದೇವ ಅವರ ಪ್ರೋಮೊ ಜೀ ವಾಹಿನಿ ಹಂಚಿಕೊಂಡಿದೆ.
ಬೆಂಗಳೂರು: ಈ ವಾರ ಸಾಧಕರ ಕುರ್ಚಿಯಲ್ಲಿ ಮೋಡಿ ಮಾಡುವುದಕ್ಕೆ ವೀಕೆಂಡ್ ವಿತ್ ರಮೇಶ್ (Weekend With Ramesh) ಕಾರ್ಯಕ್ರಮದಲ್ಲಿ ಭಾರತದ ಮೈಕೆಲ್ ಜಾಕ್ಸನ್ ಪ್ರಭುದೇವ ಬರಲಿದ್ದಾರೆ. ಮೊದಲ ಎಪಿಸೋಡ್‌ನಲ್ಲಿ ನಟಿ ರಮ್ಯಾ ಅವರು ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೀಗ ಎರಡನೇ ಅತಿಥಿಯಾಗಿ ಪ್ರಭುದೇವ ಬರುತ್ತಿದ್ದಾರೆ. ಸಾಧಕರ ಸೀಟಿನಲ್ಲಿ ಕೂತು ತಮ್ಮ ಬದುಕಿನ ಅನಾವರಣವನ್ನು ಮಾಡಿರುವ ಪ್ರಭುದೇವ ಅವರ ಪ್ರೋಮೊ ಜೀ ವಾಹಿನಿ ಹಂಚಿಕೊಂಡಿದೆ. ಈ ಸಂಚಿಕೆಯಲ್ಲಿ ಆತ್ಮೀಯರು, ಕುಟುಂಬಸ್ಥರು ಆಗಮಿಸಿ ಪ್ರಭುದೇವ ಬಗ್ಗೆ ಮಾಹಿತಿಯನ್ನು ರಿವೀಲ್ ಮಾಡಿದ್ದಾರೆ.
ರಮ್ಯಾ ಅವರು ಇಂಗ್ಲೀಷ್‌ನಲ್ಲಿಯೇ ಮಾತನಾಡಿದ್ದರಿಂದ ಟ್ರೋಲ್‌ಗೆ ಗುರಿಯಾಗಿದ್ದರು. ಆದರೆ ಇದೀಗ ಪ್ರೋಮೊ ನೋಡಿ ನೆಟ್ಟಿಗರು ಪ್ರಭುದೇವ ಅವರ ಕನ್ನಡವನ್ನು ಹೊಗಳಿದ್ದಾರೆ. ಕಮೆಂಟ್ ಮೂಲಕ ಸಂತಸ ಹೊರಹಾಕಿದ್ದಾರೆ. “ಸೀಸನ್ 5ಗೇ ಇವರ ಎಪಿಸೋಡ್ ಮೊದಲು ಪ್ರಸಾರ ಮಾಡಬೇಕಿತ್ತು. ನಮ್ ಕರ್ನಾಟಕದ ಹಳ್ಳಿ ಹೈದ”ಎಂದು ಕಮೆಂಟ್ ಮಾಡಿದ್ದಾರೆ. ʻವೀಕೆಂಡ್ ವಿತ್ ರಮೇಶ್’ನಲ್ಲಿ ಪ್ರಭುದೇವ ಎಪಿಸೋಡ್ ಇದೇ ಶನಿವಾರ (ಏಪ್ರಿಲ್ 1) ಪ್ರಸಾರ ಆಗಲಿದೆ.
ಈ ಪ್ರೋಮೊದಲ್ಲಿ ಮೂಗೂರು ಸುಂದರ್ ಅವರ ಮಗನ ಹುಟ್ಟಿನ ರಹಸ್ಯವನ್ನು ರಿವೀಲ್ ಮಾಡಿದ್ದಾರೆ. ಬ್ಯಾಕ್‌ಗ್ರೌಂಡ್‌ನಲ್ಲಿ ಪ್ರಭುದೇವ ಅವರ ತಂದೆ, ಮಗ “ಅಮಾವಾಸ್ಯೆಯಲ್ಲಿ ಹುಟ್ಟಿದ್ದಾನೆʼʼ ಎಂದು ಹೇಳಿದ್ದಾರೆ. ಇದು ಇಡೀ ಎಪಿಸೋಡ್‌ನ ಕುತೂಹಲಕ್ಕೆ ಕಾರಣವಾಗಿದೆ. ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲೂ ಪ್ರಭುದೇವ ಅವರು ಸ್ಟೆಪ್ಸ್ ಹಾಕಿದ್ದಾರೆ. ತಂದೆ ಮೂಗೂರು ಸುಂದರ್ ಜತೆ ಹುಟ್ಟಿದರೆ “ಕನ್ನಡ ನಾಡಿನಲ್ಲಿ ಹುಟ್ಟಬೇಕು” ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇದರೊಂದಿಗೆ ರಮೇಶ್ ಅರವಿಂದ್ ಜತೆ ಪ್ರಭುದೇವ ಮೂನ್ ವಾಕ್ ಮಾಡಿದ್ದಾರೆ.
ವಿಕೇಂಡ್ ವಿತ್ ರಮೇಶ್ ಶೋ ಪ್ರಮೋ
“ನಾನು ಆಡೋದೇ ಇಲ್ಲ.. ನನ್ನ ಬಾಡಿನೇ ಆಡೋದು” ಎಂದು ಪ್ರಭುದೇವ ಅವರು ಡ್ಯಾನ್ಸಿಂಗ್ ಸೀಕ್ರೆಟ್ ಬಗ್ಗೆ ಸುಳಿವನ್ನು ನೀಡಿದ್ದಾರೆ. ನಿರ್ದೇಶಕ ಯೋಗರಾಜ್ ಭಟ್ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ನೃತ್ಯ ಸಂಯೋಜಕ, ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಮತ್ತು ನಟ, ಇವರು ಪ್ರಧಾನವಾಗಿ ತಮಿಳು, ಹಿಂದಿ, ತೆಲುಗು ಮತ್ತು ಕನ್ನಡ ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅತ್ಯುತ್ತಮ ನೃತ್ಯ ಸಂಯೋಜನೆಗಾಗಿ ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗಳಿಸಿದ್ದಾರೆ.2009ರಲ್ಲಿ ನೃತ್ಯಕ್ಕೆ ನೀಡಿದ ಕೊಡುಗೆಗಳಿಗಾಗಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು.ಕನ್ನಡ ಚಲನಚಿತ್ರ H 2 Oನಲ್ಲಿ ಉಪೇಂದ್ರ ಅವರೊಂದಿಗೆ ಅಭಿನಯಿಸಿದ್ದಾರೆ.
ಕಿರುತೆರೆ
Weekned With Ramesh: ರಮ್ಯಾ ʻಎಕ್ಸ್‌ಕ್ಯೂಸ್ ಮಿʼ ಸಿನಿಮಾ ಒಪ್ಪಿಕೊಂಡಿದ್ಯಾಕೆ? ಅಸಲಿ ಕಾರಣ ಬಿಚ್ಚಿಟ್ಟ ನಟಿ
ಸ್ಯಾಂಡಲ್‌ವುಡ್ ಕ್ವೀನ್ (Weekned With Ramesh) ಎಂತಲೇ ಖ್ಯಾತಿ ಪಡೆದಿರುವ ರಮ್ಯಾ ಅವರು ಸಾಧಕರ ಸೀಟ್‌ನಲ್ಲಿ ಕುಳಿತುಕೊಳ್ಳಬೆಕೆಂಬುದು ಅವರ ಅಭಿಮಾನಿಗಳ ಮಹಾದಾಸೆಯಾಗಿತ್ತು. ರಮ್ಯಾ ತಾವು ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದು, ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅಭಿ ಸಿನಿಮಾಗೆ ತಾವು ಎಂಟ್ರಿ ಕೊಟ್ಟ ಸನ್ನೀವೇಶವನ್ನೂ ಬಹಿರಂಗಪಡಿಸಿದ್ದಾರೆ.
ಬೆಂಗಳೂರು: `ವೀಕೆಂಡ್ ವಿತ್ ರಮೇಶ್’ (Weekned With Ramesh) ಸೀಸನ್ 5ರಲ್ಲಿ ರಮ್ಯಾ ಮೊದಲನೇ ಅತಿಥಿಯಾಗಿ ಭಾಗಿಯಾಗಿದ್ದಾರೆ. ಸ್ಯಾಂಡಲ್‌ವುಡ್ ಕ್ವೀನ್ ಎಂತಲೇ ಖ್ಯಾತಿ ಪಡೆದಿರುವ ರಮ್ಯಾ ಅವರು ಸಾಧಕರ ಸೀಟ್‌ನಲ್ಲಿ ಕುಳಿತುಕೊಳ್ಳಬೆಕೆಂಬುದು ಅವರ ಅಭಿಮಾನಿಗಳ ಮಹಾದಾಸೆಯಾಗಿತ್ತು. ರಮ್ಯಾ ತಾವು ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದು, ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅಭಿ ಸಿನಿಮಾಗೆ ತಾವು ಎಂಟ್ರಿ ಕೊಟ್ಟ ಸನ್ನೀವೇಶವನ್ನೂ ಬಹಿರಂಗಪಡಿಸಿದ್ದಾರೆ.
ರಮ್ಯಾ ಸಿನಿಮಾರಂಗಕ್ಕೆ ಬಂದು 20 ವರ್ಷಗಳಾಗಿವೆ. ಅವರ ಯಶಸ್ವಿ ಚಿತ್ರ ʻಎಕ್ಸ್‌ಕ್ಯೂಸ್ ಮಿʼ ಸಿನಿಮಾವನ್ನು ಮೊದಲು ರಮ್ಯಾ ರಿಜೆಕ್ಟ್ ಮಾಡಿದ್ದರಂತೆ. ಈ ಬಗ್ಗೆ ಕಾರಣವನ್ನೂ ಹೇಳಿಕೊಂಡಿದ್ದಾರೆ. ದಿವ್ಯಾ ಸ್ಪಂದನ ರಮ್ಯಾ ಮೊದಲು ಆಡಿಷನ್ ಕೊಟ್ಟಿದ್ದು, ಪುನೀತ್ ನಟನೆಯ ʻಅಪ್ಪು’ ಚಿತ್ರಕ್ಕೆ ಆದರೆ ಈ ಸಿನಿಮಾಗೆ ರಮ್ಯಾ ರಿಜೆಕ್ಟ್ ಆಗಿದ್ದರು. ಬಳಿಕ ಮತ್ತೆ ʻವಜ್ರೇಶ್ವರಿ ಕಂಬೈನ್ಸ್’ ರಮ್ಯಾ ಅವರನ್ನು ಸಂಪರ್ಕ ಮಾಡಿ ʻಅಭಿʼ ಚಿತ್ರಕ್ಕೆ ಆಫರ್ ನೀಡಿದರು. ಆಡಿಷನ್ ಮಾಡದೆ ಅಭಿ ಚಿತ್ರಕ್ಕೆ ರಮ್ಯಾ ಸೆಲೆಕ್ಟ್ ಆಗಿದ್ದರು. ಈ ಮೂಲಕ ರಮ್ಯಾ ಪುನೀತ್ ರಾಜ್‌ಕುಮಾರ್‌ಗೆ ನಾಯಕಿಯಾಗಿ ಎಂಟ್ರಿ ಕೊಟ್ಟರು. ಈ ಚಿತ್ರದ ರಿಲೀಸ್‌ಗೂ ಮೊದಲೇ ರಮ್ಯಾಗೆ ʻಎಕ್ಸ್‌ಕ್ಯೂಸ್ ಮಿ’ ಸಿನಿಮಾಗೆ ಆಫರ್ ಬಂದಿತ್ತು. ನಿರ್ದೇಶಕ ಪ್ರೇಮ್ ನಿರ್ದೇಶನದಲ್ಲಿ ರಮ್ಯಾ ನಾಯಕಿಯಾಗಿ ಮಿಂಚಿದರು. ಆದರೆ ಈ ಸಿನಿಮಾದಲ್ಲಿ ನಟಿಸಲು ಇಷ್ಟವಿರಲಿಲ್ಲ ಎಂದು ರಮ್ಯಾ ರಿವೀಲ್ ಮಾಡಿದ್ದಾರೆ.
ಇದನ್ನೂ ಓದಿ: Weekend With Ramesh: ನನಗೆ ವೈಯಕ್ತಿಕವಾಗಿ ರಮ್ಯಾ ಇಷ್ಟ: ಪತ್ರ ಬರೆದು ಕಾರಣ ಹೇಳಿದ ಪೂಜಾ ಗಾಂಧಿ
ನಿರ್ದೇಶಕ ಪ್ರೇಮ್ ಅವರು ಈ ಸಿನಿಮಾದ ಆಫರ್ ಮಾಡಿದಾಗ ರಮ್ಯಾ ಅವರಿಗೆ ಸ್ವತಃ ಇಷ್ಟವಿರಲಿಲ್ಲವಂತೆ. ಆದರೆ ರಮ್ಯಾ ಅವರ ಅಮ್ಮ ನಮ್ಮ ಮಂಡ್ಯ ಗೌಡ್ರು ಅಂದ ಕಾರಣಕ್ಕೆ ಒಪ್ಪಿಕೊ ಎಂದು ಹೇಳಿದಕ್ಕೆ ಒಪ್ಪಿಕೊಂಡಿರುವ ಬಗ್ಗೆ ರಿವೀಲ್ ಮಾಡಿದ್ದಾರೆ.
ಪ್ರೇಮ್ ಅವರು ಸಿನಿಮಾ ಕ್ಲೈಮ್ಯಾಕ್ಸ್ ಅನ್ನು ಸೆಟ್‌ನಲ್ಲಿಯೇ ಕುಳಿತು ಬರೆದರು. ಕೊನೆಗೆ ಸಿನಿಮಾ ರಿಲೀಸ್ ಆಗಿ ಹಿಟ್ ಕಂಡಿತು. ಎಂದು ನೆನಪುಗಳನ್ನು ಹಂಚಿಕೊಂಡರು. ಎಕ್ಸ್‌ಕ್ಯೂಸ್ ಮೀ ಸಿನಿಮಾದ ನಿರ್ಮಾಪಕರು, ಆ ಸಿನಿಮಾದ ಇಬ್ಬರು ನಾಯಕರಾದ ಸುನಿಲ್ ರಾವ್ ಹಾಗೂ ಅಜಯ್ ಅವರುಗಳು ರಮ್ಯಾ ಕುರಿತಾಗಿ ಮಾತನಾಡಿದರು. ಇನ್ನು ಎರಡನೇ ಅತಿಥಿ ಪ್ರಭುದೇವ ಎಪಿಸೋಡ್‌ಗೆ ಕಾಯುತ್ತಿದ್ದಾರೆ. ರಮ್ಯಾ ಇನ್ನಷ್ಟು ತಮ್ಮ ಮನದ ಮಾತುಗಳನ್ನು ಹಂಚಿಕೊಳ್ಳಲಿದ್ದಾರೆ.
South Cinema
Weekend With Ramesh: ನಿರೀಕ್ಷೆಯಲ್ಲಿದ್ದ ವೀಕ್ಷಕರಿಗೆ ವೀಕೆಂಡ್ ವಿತ್ ರಮೇಶ್ ಕೊಂಚ ನಿರಾಸೆ, ರಶ್ಮಿಕಾ ಎಳೆದು ತಂದ ನೆಟ್ಟಿಗರು
ನಿರೀಕ್ಷೆಯಲ್ಲಿದ್ದ ವೀಕ್ಷಕರಿಗೆ ಕೊಂಚ ನಿರಾಸೆಯಾಗಿದ್ದು (Weekend With Ramesh), ಸೋಷಿಯಲ್ ಮೀಡಿಯಾ ಮೂಲಕ ವ್ಯಕ್ತಪಡಿಸಿದ್ದಾರೆ. ಒಂದು ವರ್ಗ ರಮ್ಯಾ ಅವರನ್ನು ಸಾಧಕರ ಸೀಟ್‌ನಲ್ಲಿ ನೋಡಬೇಕು ಎಂದು ಆಸೆಯನ್ನು ವ್ಯಕ್ತಪಡಿಸಿದ್ದರೂ ನಟ ಹೆಚ್ಚಾಗಿ ಇಂಗ್ಲೀಷ್‌ನಲ್ಲಿಯೇ ಮಾತನಾಡಿದ್ದರಿಂದ ಟ್ರೋಲ್‌ಗೆ ಗುರಿಯಾಗಿದ್ದಾರೆ.
ಬೆಂಗಳೂರು: `ವೀಕೆಂಡ್ ವಿತ್ ರಮೇಶ್ ಸೀಸ್‌ನ್ 5ರ'(Weekend With Ramesh) ಮೊದಲ ಸಂಚಿಕೆ ಮಾರ್ಚ್ 25ರಂದು ಪ್ರಸಾರವಾಗಿದೆ. ಮೊದಲ ಅತಿಥಿಯಾಗಿ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಭಾಗಿಯಾಗಿದ್ದರು. ಆದರೆ ನಿರೀಕ್ಷೆಯಲ್ಲಿದ್ದ ವೀಕ್ಷಕರಿಗೆ ಕೊಂಚ ನಿರಾಸೆಯಾಗಿದ್ದು, ಸೋಷಿಯಲ್ ಮೀಡಿಯಾ ಮೂಲಕ ವ್ಯಕ್ತಪಡಿಸಿದ್ದಾರೆ. ಒಂದು ವರ್ಗ ರಮ್ಯಾ ಅವರನ್ನು ಸಾಧಕರ ಸೀಟ್‌ನಲ್ಲಿ ನೋಡಬೇಕು ಎಂದು ಆಸೆಯನ್ನು ವ್ಯಕ್ತಪಡಿಸಿದ್ದರೂ ನಟಿ ಹೆಚ್ಚಾಗಿ ಇಂಗ್ಲೀಷ್‌ನಲ್ಲಿಯೇ ಮಾತನಾಡಿದ್ದರಿಂದ ಟ್ರೋಲ್‌ಗೆ ಗುರಿಯಾಗಿದ್ದಾರೆ.
ಇಡೀ ಕಾರ್ಯಕ್ರಮದಲ್ಲಿ ರಮ್ಯಾ ಅವರು ಕನ್ನಡ ಬಳಸಿದ್ದು ಕಡಿಮೆ ಎಂದು ನೆಟ್ಟಗರು ಟ್ರೋಲ್ ಮಾಡಿದ್ದಾರೆ. ಯಾವುದೋ ಕಂಗ್ಲಿಷ್ ಕಾರ್ಯಕ್ರಮದಂತೆ ಇತ್ತು. “ಕನ್ನಡಕ್ಕಿಂತ ಯಾರು ದೊಡ್ಡವರಿಲ್ಲ, ಇಂಗ್ಲಿಷ್ ಊಟದ ಜೊತೆ ಉಪ್ಪಿನಕಾಯಿ ತರ ಇರಲಿ. ಆದರೆ ಅದೇ ಊಟ ಆಗುವುದು ಬೇಡ.” ಎಂಬ ಉಪೇಂದ್ರ ಕನ್ನಡದ ಬಗ್ಗೆ ಮಾತಾಡಿದ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
ರಮ್ಯಾ ಜತೆ ರಶ್ಮಿಕಾರನ್ನು ನೆಟ್ಟಗರು ಎಳೆದಿದ್ದು, “ರಮ್ಯಾ ತದ್ಭವ, ರಶ್ಮಿಕಾ ಮಂದಣ್ಣ ತತ್ಸಮ. ಹೆಚ್ಚಿನ ಮಾಹಿತಿಗಾಗಿ ವೀಕೆಂಡ್ ವಿತ್ ಇಂಗ್ಲಿಷ್ ನೋಡಿ” ಎಂದು ಟ್ರೋಲ್ ಮಾಡುತ್ತಿದ್ದಾರೆ. ಮೊದಲ ಎಪಿಸೋಡ್‌ನಲ್ಲಿ ನೆನಪುಗಳನ್ನು ಹಂಚಿಕೊಂಡರೆ, ಭಾನುವಾರ (ಮಾರ್ಚ್ 26) ಪ್ರಸಾರವಾಗುವ ಎಪಿಸೋಡ್‌ನಲ್ಲಿ ರಮ್ಯಾರ ಜೀವನ ಪಯಣದ ಇನ್ನೊಂದು ಮಜಲು ತೆರೆದುಕೊಳ್ಳಲಿದೆ.
ನಾಲ್ಕು ವರ್ಷಗಳಿಂದ ಕಾದು ಕೂತಿದ್ದವರಿಗೆ ಮೊದಲ ಎಪಿಸೋಡ್‌ನಲ್ಲಿ ಅತಿ ಹೆಚ್ಚು ಬಾರಿ ರಮ್ಯಾ ಕನ್ನಡ ಮರೆತು ಇಂಗ್ಲಿಷ್ ಮಾತಾಡಿದ್ದಕ್ಕೆ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಎರಡನೇ ಅತಿಥಿ ಪ್ರಭುದೇವ ಎಪಿಸೋಡ್‌ಗೆ ಕಾಯುತ್ತಿದ್ದಾರೆ.
-
ಕರ್ನಾಟಕ14 hours ago
Karnataka Election: ಮೇ 10ರಂದು ಕರ್ನಾಟಕ ಚುನಾವಣೆ; ಮೇ 13ಕ್ಕೆ ಫಲಿತಾಂಶ ಎಂದು ಘೋಷಿಸಿದ ಚುನಾವಣಾ ಆಯೋಗ
-
ಕರ್ನಾಟಕ15 hours ago
Karnataka Election 2023 LIVE: ಕರ್ನಾಟಕದಲ್ಲಿ ಮೇ 10ಕ್ಕೆ ಮತದಾನ, 13ಕ್ಕೆ ರಿಸಲ್ಟ್, ಒಂದೇ ಹಂತದ ಎಲೆಕ್ಷನ್
-
ಕರ್ನಾಟಕ18 hours ago
Karnataka Election: ಕರ್ನಾಟಕ ಚುನಾವಣೆ ದಿನಾಂಕ ಇಂದು ಘೋಷಣೆ, ಇಂದಿನಿಂದಲೇ ನೀತಿ ಸಂಹಿತೆ ಜಾರಿ
-
ಕರ್ನಾಟಕ13 hours ago
Karnataka Election: ನೀತಿ ಸಂಹಿತೆಗೆ ಮೊದಲೇ ತುಂಬಿತು ಅಕ್ರಮದ ಪಾತ್ರೆ: 2018ರ ಹಣದ ಹೊಳೆಯನ್ನು ಈಗಲೇ ಮೀರಿಸಿದ ಕರ್ನಾಟಕ !
-
ಪ್ರಮುಖ ಸುದ್ದಿ9 hours ago
UPI transactions : ಯುಪಿಐ ಬಳಕೆ ಗ್ರಾಹಕರಿಗೆ ಸಂಪೂರ್ಣ ಉಚಿತ ಎಂದ ಎನ್ಪಿಸಿಐ, ಹಾಗಾದರೆ 1.1% ಶುಲ್ಕ ಯಾರಿಗೆ?
-
ಗ್ಯಾಜೆಟ್ಸ್10 hours ago
Google: ಗೂಗಲ್ಗೆ 1337 ಕೋಟಿ ರೂ. ದಂಡ, 30 ದಿನದಲ್ಲಿ ಪಾವತಿಸಲು ನ್ಯಾಯಮಂಡಳಿ ಆದೇಶ!
-
ಕರ್ನಾಟಕ12 hours ago
Karnataka Elections 2023 : ವಲಸಿಗ ಸಚಿವರ ಮೇಲೆ ಬೊಮ್ಮಾಯಿ ನಿಗಾ; ಹೆಬ್ಬಾರ್, ಮುನಿರತ್ನ ಕರೆಸಿಕೊಂಡು ಚರ್ಚೆ
-
ಕರ್ನಾಟಕ16 hours ago
Karnataka Elections 2023 : 8 ಸಚಿವರ ಸಹಿತ 35 ಶಾಸಕರಿಗೆ ಸೋಲಿನ ಭೀತಿ, ಈ ಬಾರಿ ಬಿಜೆಪಿಯಲ್ಲಿ 50 ಹೊಸ ಮುಖ?