Site icon Vistara News

VISTARA TOP 10 NEWS: ಸಿಎಂ ವಿರುದ್ಧ ವರ್ಗಾವಣೆ ದಂಧೆ ಆರೋಪ; ಭಾರತ-ಆಸ್ಟ್ರೇಲಿಯಾ ಫೈನಲ್ ಫೈಟ್​​ ಮತ್ತಿತರ ದಿನದ ಪ್ರಮುಖ ಸುದ್ದಿಗಳು

Top 10 news 1

1. ನನ್ನ ಲಿಸ್ಟೇ ಆಗಬೇಕು!‌ ಜನರ ಎದುರೇ ತಂದೆಗೆ ಫೋನ್‌ ಮಾಡಿ ಯತೀಂದ್ರ ತಾಕೀತು
ಮೈಸೂರು: ಸಿಎಂ ಸಿದ್ದರಾಮಯ್ಯ (CM siddaramaiah) ಅವರ ಸರ್ಕಾರದಲ್ಲಿ ಮಗ ಯತೀಂದ್ರ (Yathindra Siddaramaiah) ಹಸ್ತಕ್ಷೇಪ ಬಹಳವಾಗಿದೆ ಎಂಬ ಆರೋಪಕ್ಕೆ ಸಾಕ್ಷಿ ಎಂಬಂತೆ, ಯತೀಂದ್ರ ಅವರು ಫೋನ್‌ನಲ್ಲಿ ತಂದೆಯ ಜತೆ ಮಾತಾಡಿ ತನ್ನ ಕೆಲಸ ಮಾತ್ರ ಆಗುವಂತೆ ತಾಕೀತು ಮಾಡುತ್ತಿರುವ ವಿಡಿಯೋ ವೈರಲ್‌ (viral video) ಆಗಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
ಇದನ್ನೂ ಓದಿ: Yathindra Siddaramaih : ಯತೀಂದ್ರ ವರ್ಗಾವಣೆ ದಂಧೆಗೆ ಸಾಕ್ಷಿ; ಸಿಎಂ ರಾಜೀನಾಮೆಗೆ HDK ಆಗ್ರಹ
ಇದನ್ನೂ ಓದಿ: Yathindra Siddaramaiah: ಯತೀಂದ್ರ‌ ವರ್ಗಾವಣೆ ದಂಧೆ; ಮಾನ ಇದ್ದರೆ ಸಿಎಂ ರಾಜೀನಾಮೆ ಕೊಡಲಿ ಎಂದ ಎಚ್‌ಡಿಕೆ
ಇದನ್ನೂ ಓದಿ: CM Siddaramaiah : ಯತೀಂದ್ರ ಮಾತಾಡಿದ್ದು ವರ್ಗಾವಣೆ ಬಗ್ಗೆ ಅಲ್ಲ, CSR Fund ಬಗ್ಗೆ; ಸಿದ್ದರಾಮಯ್ಯ ಸ್ಪಷ್ಟನೆ

2. ದಕ್ಷಿಣ ಆಫ್ರಿಕಾ ಔಟ್​; ಭಾರತ- ಆಸ್ಟ್ರೇಲಿಯಾ ಫೈನಲ್ ಫೈಟ್​
ಕೋಲ್ಕೊತಾ: ಚೋಕರ್ಸ್​ ದಕ್ಷಿಣ ಆಫ್ರಿಕಾ ತಂಡ ಮತ್ತೊಂದು ಬಾರಿ ಬಾರಿ ಚೋಕರ್ಸ್ ಪಟ್ಟವನ್ನು ತನ್ನದಾಗಿಸಿಕೊಂಡು 2023ರ ವಿಶ್ವ ಕಪ್ (ICC World Cup 2023)​ ಅಭಿಯಾನವನ್ನು ಮುಗಿಸಿದೆ. ಕೋಲ್ಕೊತಾದಲ್ಲಿ ರೋಚಕವಾಗಿ ನಡೆದ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್​ ಆಸ್ಟ್ರೇಲಿಯಾ ವಿರುದ್ಧ 3 ವಿಕೆಟ್​ಗಳ ಸೋಲು ಅನುಭವಿಸಿ ತವರಿಗೆ ಮರಳುವಂತಾಗಿದೆ. ದಕ್ಷಿಣ ಆಫ್ರಿಕಾ ತಂಡ ಹಾಲಿ ಆವೃತ್ತಿ ಸೇರಿದಂತೆ ಒಟ್ಟು ಐದು ಬಾರಿ ಸೆಮಿ ಫೈನಲ್​ಗೆ ಪ್ರವೇಶ ಪಡೆದಿದ್ದು ಒಂದೇ ಒಂದು ಬಾರಿ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ ಎಂಬುದೇ ವಿಪರ್ಯಾಸ. 1992ರಲ್ಲಿ ಮೊದಲ ಬಾರಿಗೆ ವಿಶ್ವ ಕಪ್​ಗೆ ಪ್ರವೇಶ ಪಡೆದಿದ್ದ ಹರಿಣಗಳ ಪಡೆ ಎಂಟು ಆವೃತ್ತಿಯ ವಿಶ್ವ ಕಪ್​ನಲ್ಲಿ ಆಡಿದೆ. ಅದರಲ್ಲಿ ಐದು ಬಾರಿ ನಾಕೌಟ್ ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ. ಆದರೆ ತಂಡಕ್ಕೆ ಪ್ರಶಸ್ತಿ ಗೆಲ್ಲುವ ಅವಕಾಶ ಇನ್ನೂ ಒದಗಿ ಬಂದಿಲ್ಲ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.

3. ಕರಾವಳಿಯಲ್ಲಿ ಹಿಂದು ಕಾರ್ಯಕರ್ತರ ಮೇಲೆ ಗಡಿಪಾರು ಅಸ್ತ್ರ; ಐವರಿಗೆ ನೋಟಿಸ್‌
ಮಂಗಳೂರು: ದಕ್ಷಿಣ ಕನ್ನಡದಲ್ಲಿ ಹಿಂದು ಕಾರ್ಯಕರ್ತರ (Hindu Activists) ಮೇಲೆ ಗಡಿಪಾರು (Extradiction from District) ಅಸ್ತ್ರ ಪ್ರಯೋಗ ಮಾಡಲಾಗಿದೆ. ನೈತಿಕ ಪೊಲೀಸ್‌ಗಿರಿ, ಕೋಮುಗಲಭೆ, ದನ ಸಾಗಾಟ ಮತ್ತು ಇತರ ಪ್ರಕರಣಗಳಲ್ಲಿ ಭಾಗಿಯಾಗಿರುವ ನಿಮ್ಮನ್ನು ಯಾಕೆ ಗಡಿಪಾರು ಮಾಡಬಾರದು ಎಂದು ಕೇಳಿ ಪುತ್ತೂರಿನ ಐವರು ಬಜರಂಗ ದಳ ಕಾರ್ಯಕರ್ತರಿಗೆ (Bajaranga dal Activists) ಪೊಲೀಸ್‌ ಇಲಾಖೆ (Police Department) ನೋಟಿಸ್‌ ಜಾರಿಗೊಳಿಸಿದೆ. ಇದಕ್ಕೆ ಉತ್ತರವನ್ನು ಪಡೆದ ಬಳಿಕ ಮುಂದಿನ ಕ್ರಮ ಜರುಗಿಸಲಾಗುತ್ತದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.

4.Cabinet Meeting : ಗ್ರೂಪ್ ಸಿ, ಡಿ ನೌಕರರಿಗೆ ನಿರಾಸೆ; ಅಂತರ್‌ ಜಿಲ್ಲೆ ವರ್ಗಾವಣೆ ನಿರ್ಣಯ ಕೈಗೊಳ್ಳದ ಸಂಪುಟ
ಬೆಂಗಳೂರು: ಅಂತರ್‌ ಜಿಲ್ಲೆ ವರ್ಗಾವಣೆ (inter district transfer) ಬಯಸಿದ್ದ ಗ್ರೂಪ್‌ ಸಿ, ಡಿ ಹುದ್ದೆ ನೌಕರರಿಗೆ (Group C and D posts employees) ಮತ್ತೆ ನಿರಾಸೆಯಾಗಿದೆ. ಈ ಬಾರಿಯಾದರೂ ತಮ್ಮ ವರ್ಗಾವಣೆಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದ ನೌಕರರಿಗೆ ಆಶಾ ಭಾವನೆ ಮೂಡಿತ್ತು. ಗುರುವಾರದ (ನ. 16) ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಈ ಬಾರಿ ಅದರ ಬಗ್ಗೆ ಚರ್ಚೆ ಮಾಡಲಾಯಿತಾದರೂ ಯಾವುದೇ ನಿರ್ಣಯವನ್ನು ಕೈಗೊಂಡಿಲ್ಲ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.

5. 14 ತಿಂಗಳ ಜೈಲು ವಾಸದ ಬಳಿಕ ಕೊನೆಗೂ ಮುರುಘಾಶ್ರೀಗೆ ಬಂಧಮುಕ್ತಿ
ಚಿತ್ರದುರ್ಗ: ಚಿತ್ರದುರ್ಗದ ಮುರುಘಾಮಠಕ್ಕೆ (Chitradurga mugughamatt) ಸೇರಿದ ಹಾಸ್ಟೆಲ್‌ನಲ್ಲಿ ವಾಸವಾಗಿದ್ದ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ (Physical Abuse) ನಡೆಸಿದ ಆರೋಪದಲ್ಲಿ 2022ರ ಸೆಪ್ಟೆಂಬರ್‌ 1ರ ರಾತ್ರಿ ಬಂಧನಕ್ಕೆ ಒಳಗಾಗಿದ್ದ ಶ್ರೀ ಶಿವಮೂರ್ತಿ ಮುರುಘಾಶ್ರೀಗಳನ್ನು (Murugha Shri) ಕೊನೆಗೂ ಜೈಲಿನಿಂದ ಬಿಡುಗಡೆ (Released from Jail) ಮಾಡಲಾಗಿದೆ. ರಾಜ್ಯ ಹೈಕೋರ್ಟ್ (Karnataka High court) ಜಾಮೀನಿನಲ್ಲಿ ಬಿಡುಗಡೆಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಚಿತ್ರದುರ್ಗದ ಜೈಲಿನಿಂದ ಅವರನ್ನು ಬಿಡುಗಡೆ ಮಾಡಲಾಗಿದೆ. ಜೈಲಿಂದ ಬಿಡುಗಡೆಯಾದ ಅವರಿಗೆ ಚಿತ್ರದುರ್ಗ ಪ್ರವೇಶವನ್ನು ಹೈಕೋರ್ಟ್‌ ನಿರ್ಬಂಧಿಸಿದೆ. ಹೀಗಾಗಿ ಅವರು ದಾವಣಗೆರೆಯ ಶಿವಯೋಗಿ ಮಂದಿರದಲ್ಲಿ ವಾಸವಾಗಿರಲಿದ್ದಾರೆ ಎಂದು ತಿಳಿದುಬಂದಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.

6. ಹಮಾಸ್‌ ಮುಖಂಡನ ಮನೆಯನ್ನೇ ಬಾಂಬಿಟ್ಟು ಧ್ವಂಸ ಮಾಡಿದ ಇಸ್ರೇಲ್;‌ ಭೀಕರ ವಿಡಿಯೊ ನೋಡಿ
ಗಾಜಾ: ಸಾವಿರಾರು ರಾಕೆಟ್‌ಗಳ ಮೂಲಕ ದಾಳಿ ಮಾಡಿದ ಹಮಾಸ್‌ ಉಗ್ರರನ್ನು ನಿರ್ನಾಮ (Israel Palestine War) ಮಾಡುವ ಪಣತೊಟ್ಟಿರುವ ಇಸ್ರೇಲ್‌ ಸೇನೆಯು ಗಾಜಾ ನಗರದ ಪ್ರತಿಯೊಂದು ಮೂಲೆಗಳಲ್ಲೂ ಆವರಿಸಿದ್ದಾರೆ. ಸುರಂಗಗಳಲ್ಲಿ ಅಡಗಿದರೂ ಉಗ್ರರನ್ನು (Hamas Terrorists) ಬಿಡುತ್ತಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಹಮಾಸ್‌ ಉಗ್ರ ಸಂಘಟನೆಯ ಪ್ರಮುಖ ಉಗ್ರನೊಬ್ಬನ ಮನೆಯನ್ನೇ ಇಸ್ರೇಲ್‌ ಬಾಂಬಿಟ್ಟು ಧ್ವಂಸಗೊಳಿಸಿದೆ. ಈ ಸಿನಿಮೀಯ ವಿಡಿಯೊಗಳು (Viral Video) ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.

7. ಭೂಮಿಗೆ ವಾಪಸ್ ಎಂಟ್ರಿ ಕೊಟ್ಟ ಚಂದ್ರಯಾನ 3 ರಾಕೆಟ್ ಮೇಲ್ಭಾಗ!
ನವದೆಹಲಿ: ಚಂದ್ರಯಾನ 3 (Chandrayaan 3) ಲಾಂಚ್ ವೆಹಿಕಲ್ (Launch Vehicle) ಮೇಲ್ಭಾಗವು ಭೂಮಿಯ ವಾತಾವರಣಕ್ಕೆ ಮರು ಪ್ರವೇಶಿಸಿದ್ದು(Re Entered to Earth), ಉತ್ತರ ಫೆಸಿಪಿಕ್ ಸಮುದ್ರದಲ್ಲಿ (North Pacific Ocean) ಬಿದ್ದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಹೇಳಿದೆ. “ಎಲ್‌ವಿಎಂ3 ಎಂ4 ಉಡಾವಣಾ ವಾಹನದ ಕ್ರಯೋಜೆನಿಕ್ ಮೇಲಿನ ಹಂತವು ಭೂಮಿಯ ವಾತಾವರಣಕ್ಕೆ ಬುಧವಾರ ಮರು ಪ್ರವೇಶ ಮಾಡಿತು ಎಂದು ಇಸ್ರೋ ಹೇಳಿತು. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.

8. Narendra Modi: ಮೋದಿ ಕಾರಿನ ಎದುರು ಜಿಗಿದ ಮಹಿಳೆ; ಮೂವರು ಪೊಲೀಸರ ಅಮಾನತು!
ರಾಂಚಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದೇಶದ ಯಾವುದೇ ಮೂಲೆಗೆ ಹೋದರೂ ಬಿಗಿಭದ್ರತೆ ಒದಗಿಸಲಾಗುತ್ತದೆ. ಆದರೆ, ನರೇಂದ್ರ ಮೋದಿ ಅವರು ಬುಧವಾರ (ನವೆಂಬರ್‌ 16) ಜಾರ್ಖಂಡ್‌ನ ರಾಂಚಿಯಲ್ಲಿ ಮೋದಿ ಅವರು ತೆರಳುತ್ತಿದ್ದ ವಾಹನದ ಎದುರು ಮಹಿಳೆಯೊಬ್ಬರು ಅಡ್ಡ ಬಂದು ನಿಂತಿದ್ದಾರೆ. ಆ ಮೂಲಕ ಭದ್ರತಾ (Security Lapse) ಲೋಪವುಂಟಾಗಿದ್ದು, ಮೂವರು ಪೊಲೀಸರು ಅಮಾನತುಗೊಳಿಸಲಾಗಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.

9. ಸಣ್ಣ ಸಣ್ಣ ಕಾರಣಕ್ಕೆ ಸಾಯಲು ಹೊರಡುವವರು ಮೊಹಮ್ಮದ್‌ ಶಮಿ ಕತೆ ಕೇಳಬೇಕು!
ನಮಗೆ ಮೊಹಮ್ಮದ್ ಶಮಿ(Mohammed Shami) ಅವರ ನಿಜವಾದ ಮೌಲ್ಯ ಗೊತ್ತಾದದ್ದು ಈ ವಿಶ್ವಕಪ್ ಕೂಟದಲ್ಲಿಯೇ! (ICC World cup 2023) ಅದರಲ್ಲಿಯೂ ನಿನ್ನೆ (ನವೆಂಬರ್‌ 16) ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತದ ಬೇರೆಲ್ಲಾ ಬೌಲರ್‌ಗಳು ವಿಕೆಟ್ ಪಡೆಯಲು ಪರದಾಡುತ್ತಿದ್ದಾಗ ಮತ್ತು ದುಬಾರಿಯಾದಾಗ ಬರೋಬ್ಬರಿ ಏಳು ವಿಕೆಟ್ ಪಡೆದು ಭಾರತವನ್ನು ಫೈನಲ್ ಪಂದ್ಯಕ್ಕೆ (India enters into ICC World cup 2023) ಕರೆದುಕೊಂಡು ಹೋದದ್ದನ್ನು ಭಾರತವು ಯಾವತ್ತಿಗೂ ಮರೆಯುವುದಿಲ್ಲ. ಈ ವಿಶ್ವಕಪ್ ಕೂಟದ ಪ್ರತೀ ಪಂದ್ಯದಲ್ಲಿ ಎಂಬಂತೆ ಅವರು ವಿದೇಶದ ಪ್ರತಿಯೊಬ್ಬ ಬ್ಯಾಟರ್‌ಗಳನ್ನು ಕಾಡಿದ್ದಾರೆ. ಅವರ ಸ್ವಿಂಗ್, ಔಟ್ ಸ್ವಿಂಗ್, ರಿವರ್ಸ್ ಸ್ವಿಂಗ್ ಮತ್ತು ಯಾರ್ಕರ್ ಎಸೆತಗಳಿಗೆ ಬಲಿಷ್ಠ ಆಟಗಾರರು ಶರಣಾಗತ ಆದದ್ದು ನಿಜಕ್ಕೂ ಅದ್ಭುತ! ಮೊಹಮದ್ ಶಮಿ ವಿಶ್ವಕಪ್ ಕೂಟದಲ್ಲಿ 50 ವಿಕೆಟ್ ಪಡೆದ ಮೊದಲ ಭಾರತೀಯ ಎಂಬ ಕೀರ್ತಿ ಪಡೆದಿದ್ದಾರೆ. ಅವರು ಭಾರತಕ್ಕೆ ಕಪಿಲ್ ದೇವ್ ನಂತರ ದೊರೆತ ಅತ್ಯುತ್ತಮ ವೇಗದ ಬೌಲರ್ ಎಂಬುದನ್ನು ನಾವು ಒಪ್ಪದೇ ಇರಲು ಸಾಧ್ಯವೇ ಇಲ್ಲ! (Raja Marga Column) ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.

10. ಮಕ್ಕಳನ್ನು ಪ್ರಾಂಕ್‌ ಮಾಡಿದ ಪ್ರಧಾನಿ ಮೋದಿ! ವಿಡಿಯೋ ವೈರಲ್
ರಾಂಚಿ: ಜಾರ್ಖಂಡ್‌ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi), ಅಲ್ಲಿನ ರಾಜ್ಯಪಾಲರ ಭವನದಲ್ಲಿ ನಿನ್ನೆ ಮಕ್ಕಳೊಂದಿಗೆ ಮಗುವಾಗಿ ಬೆರೆತರು. ಈ ಸಂದರ್ಭದಲ್ಲಿ ಮಕ್ಕಳನ್ನು ಅವರು ಪ್ರಾಂಕ್‌ ಮಾಡುತ್ತಿರುವ ವಿಡಿಯೋ ಒಂದು ಇದೀಗ ವೈರಲ್ (Viral video) ಆಗುತ್ತಿದೆ. ‌ ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

Exit mobile version