Raja Marga Column : ಸಣ್ಣ ಸಣ್ಣ ಕಾರಣಕ್ಕೆ ಸಾಯಲು ಹೊರಡುವವರು ಮೊಹಮ್ಮದ್‌ ಶಮಿ ಕತೆ ಕೇಳಬೇಕು! - Vistara News

ಅಂಕಣ

Raja Marga Column : ಸಣ್ಣ ಸಣ್ಣ ಕಾರಣಕ್ಕೆ ಸಾಯಲು ಹೊರಡುವವರು ಮೊಹಮ್ಮದ್‌ ಶಮಿ ಕತೆ ಕೇಳಬೇಕು!

Raja Marga Column : ಅವನಿಗೆ ಎದುರಾಗಿದ್ದು ಒಂದೆರಡು ಸವಾಲಲ್ಲ. ಪ್ರತಿ ಕ್ಷಣವೂ ಅವನಿಗೆ ಮಾನಸಿಕ ಕಿರುಕುಳವೇ. ಆದರೆ, ಯಾವುದನ್ನೂ ತಲೆಗೆ ಹಾಕಿಕೊಳ್ಳದೆ ಅವನು ನಿರ್ಲಿಪ್ತವಾಗಿ ಆಡಿದ್ದಾನೆ. ಅದಕ್ಕಾಗಿಯೇ ನಿರ್ಲಿಪ್ತ ಪಿಚ್‌ಗಳಲ್ಲೂ ಅವನಿಗೆ ಏಳು ವಿಕೆಟ್‌ ಪಡೆಯಲು ಸಾಧ್ಯವಾಗಿದೆ. ಸಣ್ಣ ಸಣ್ಣ ಕಾರಣಕ್ಕಾಗಿ ಪ್ರಾಣ ಕಳೆದುಕೊಳ್ಳಲು ಮುಂದಾಗುವ ಮಂದಿ ಒಮ್ಮೆ ಶಮಿ ಎದುರಿಸಿದ, ಎದುರಿಸುತ್ತಿರುವ ಸಂಕಷ್ಟಗಳ ಕತೆಯನ್ನು ಕೇಳಬೇಕು.

VISTARANEWS.COM


on

Mohammed Shami
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
RAJAMARGA Rajendra Bhat

ನಮಗೆ ಮೊಹಮ್ಮದ್ ಶಮಿ(Mohammed Shami) ಅವರ ನಿಜವಾದ ಮೌಲ್ಯ ಗೊತ್ತಾದದ್ದು ಈ ವಿಶ್ವಕಪ್ ಕೂಟದಲ್ಲಿಯೇ! (ICC World cup 2023) ಅದರಲ್ಲಿಯೂ ನಿನ್ನೆ (ನವೆಂಬರ್‌ 16) ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತದ ಬೇರೆಲ್ಲಾ ಬೌಲರ್‌ಗಳು ವಿಕೆಟ್ ಪಡೆಯಲು ಪರದಾಡುತ್ತಿದ್ದಾಗ ಮತ್ತು ದುಬಾರಿಯಾದಾಗ ಬರೋಬ್ಬರಿ ಏಳು ವಿಕೆಟ್ ಪಡೆದು ಭಾರತವನ್ನು ಫೈನಲ್ ಪಂದ್ಯಕ್ಕೆ (India enters into ICC World cup 2023) ಕರೆದುಕೊಂಡು ಹೋದದ್ದನ್ನು ಭಾರತವು ಯಾವತ್ತಿಗೂ ಮರೆಯುವುದಿಲ್ಲ. ಈ ವಿಶ್ವಕಪ್ ಕೂಟದ ಪ್ರತೀ ಪಂದ್ಯದಲ್ಲಿ ಎಂಬಂತೆ ಅವರು ವಿದೇಶದ ಪ್ರತಿಯೊಬ್ಬ ಬ್ಯಾಟರ್‌ಗಳನ್ನು ಕಾಡಿದ್ದಾರೆ. ಅವರ ಸ್ವಿಂಗ್, ಔಟ್ ಸ್ವಿಂಗ್, ರಿವರ್ಸ್ ಸ್ವಿಂಗ್ ಮತ್ತು ಯಾರ್ಕರ್ ಎಸೆತಗಳಿಗೆ ಬಲಿಷ್ಠ ಆಟಗಾರರು ಶರಣಾಗತ ಆದದ್ದು ನಿಜಕ್ಕೂ ಅದ್ಭುತ! ಮೊಹಮದ್ ಶಮಿ ವಿಶ್ವಕಪ್ ಕೂಟದಲ್ಲಿ 50 ವಿಕೆಟ್ ಪಡೆದ ಮೊದಲ ಭಾರತೀಯ ಎಂಬ ಕೀರ್ತಿ ಪಡೆದಿದ್ದಾರೆ. ಅವರು ಭಾರತಕ್ಕೆ ಕಪಿಲ್ ದೇವ್ ನಂತರ ದೊರೆತ ಅತ್ಯುತ್ತಮ ವೇಗದ ಬೌಲರ್ ಎಂಬುದನ್ನು ನಾವು ಒಪ್ಪದೇ ಇರಲು ಸಾಧ್ಯವೇ ಇಲ್ಲ! (Raja Marga Column)

ಅಂತಹ ಶಮ್ಮಿ ಸಾಗಿ ಬಂದ ದಾರಿ..

ಮೊಹಮ್ಮದ್ ಶಮಿ ಬದುಕಿನ ಹಿನ್ನೆಲೆಯನ್ನು ಗಮನಿಸಿದಾಗ ನೀವು ಖಂಡಿತಾ ಆತನನ್ನು ಹೆಚ್ಚು ಪ್ರೀತಿ ಮಾಡುತ್ತೀರಿ.

1990ರ ಸೆಪ್ಟೆಂಬರ್ 3ರಂದು ಉತ್ತರ ಪ್ರದೇಶದ ಆಮ್ರೋಹದ ಒಂದು ಹಳ್ಳಿಯಲ್ಲಿ ಒಬ್ಬ ರೈತನ ಮಗನಾಗಿ ಜನಿಸಿದ ಶಮಿ ಬಡತನ, ಹಸಿವು, ಅಪಮಾನ ಎಲ್ಲವನ್ನೂ ದಾಟಿಕೊಂಡು ಬರಬೇಕಾಯಿತು. 15 ವರ್ಷ ಪ್ರಾಯದಲ್ಲಿ ಬದ್ರುದ್ದೀನ್ ಸಿದ್ದೀಕ್ ಎಂಬ ಕೋಚ್ ಆತನ ಪ್ರತಿಭೆಯನ್ನು ಗುರುತಿಸಿ ತರಬೇತಿ ಕೊಡಲು ಆರಂಭ ಮಾಡಿದ್ದರು.

Mohammed Shami father and mother

ಆತನು ಬಾಲ್ಯದಿಂದಲೂ ಕಠಿಣ ಪರಿಶ್ರಮದ ಹಾಗೂ ದುಡಿಮೆಯ ಮೇಲೆ ನಂಬಿಕೆ ಇಟ್ಟ ಹುಡುಗ. ಕೋಚ್ ಹೇಳಿದ ಎಲ್ಲ ಕೌಶಲಗಳನ್ನು ಶ್ರದ್ಧೆಯಿಂದ ಕಲಿಯುತ್ತಾ ಹೋದ ಶಮಿ ಕನಸು ಅಂಡರ್ 19 ವಿಶ್ವಕೂಟದಲ್ಲಿ ಭಾರತಕ್ಕೋಸ್ಕರ ಆಡುವುದು. ಆಗಲೇ ಆತನ ಬೌಲಿಂಗ್ ವೇಗ 140km/h ದಾಟಿತ್ತು ಮತ್ತು ಹೆಚ್ಚಿನ ವಿಕೆಟ್ ಬೌಲ್ಡ್ ಮಾಡಿ ಪಡೆಯುತ್ತಿದ್ದರು. ಆತನಿಗೆ ಯಾವ ಪ್ರಾಯೋಜಕರೂ ಇರಲಿಲ್ಲ. ಒಂದು ಹೊತ್ತಿನ ಊಟಕ್ಕೂ ಆತ ಪರದಾಡುವ ಸ್ಥಿತಿ ಇತ್ತು. ಆದರೆ ಭಾರತದ ಕ್ರಿಕೆಟ್ ರಾಜಕೀಯ ಶಮಿ ಅಂಡರ್ 19 ಕನಸನ್ನು ನುಚ್ಚುನೂರು ಮಾಡಿತ್ತು!

ಆಗ ಆತನ ಕೋಚ್ ಆತನ ಪ್ರತಿಭೆ ಸಾಯಬಾರದು ಎಂಬ ಕಾರಣಕ್ಕೆ ಯಾರದೋ ಅಡ್ರೆಸ್ ಹುಡುಕಿ ಆತನನ್ನು ಕೊಲ್ಕೊತಾ ಕರೆದುಕೊಂಡು ಬಂದರು. ಅವಕಾಶಗಳಿಗಾಗಿ ಶಮಿ ಯಾರ್ಯಾರದೋ ಮನೆ ಬಾಗಿಲು
ಬಡಿಯಬೇಕಾಯಿತು.

Mohammed Shami

‘ಹಸಿವನ್ನಾದರೂ ತಡೆಯಬಹುದು. ಆದರೆ ಅಪಮಾನಗಳ ಅಗ್ನಿದಿವ್ಯ ತಡೆಯುವುದು ಕಷ್ಟ’ ಎಂದು ಶಮ್ಮಿ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. ಹೆಚ್ಚು ಓದಿಲ್ಲ ಎಂಬ ಕಾರಣಕ್ಕೆ ಕೂಡ ಆತನು ಹಲವು ಬಾರಿ ಬಿಸಿಸಿಐ ಮತ್ತು ಆಯ್ಕೆ ಮಂಡಳಿಯ ಅವಕೃಪೆಗೆ ಪಾತ್ರ ಆಗಬೇಕಾಯಿತು ಅಂದರೆ ನೀವು ನಂಬಲೇಬೇಕು.

ಶಮಿ ಬದುಕಿನ ಕರಾಳ ಅಧ್ಯಾಯ ಆರಂಭ ಆದದ್ದು ಮದುವೆಯಿಂದ!

ಶಮಿ 2014ರಲ್ಲಿ ಹಸೀನ್ ಜಹಾನ್ ಎಂಬ ಹುಡುಗಿಯನ್ನು ಪ್ರೀತಿಸಿ ಮದುವೆಯಾದರು. ಒಂದು ಮಗು ಕೂಡ ಜನಿಸಿತು. ಆದರೆ ಅದೇ ಹಸೀನ್ ಜಹಾನ್ ಆತನ ಬದುಕಿನ ವಿಲನ್ ಆದದ್ದು ದುರಂತ. ಸ್ವತಃ ಹೆಂಡತಿ ಆತನ ಮೇಲೆ ಲೈಂಗಿಕ ಹಿಂಸೆ ಮತ್ತು ವ್ಯಭಿಚಾರದ ಕೇಸ್ ದಾಖಲಿಸಿದಳು! ತನ್ನ ಗಂಡನ ಮಾನಸಿಕ ಆರೋಗ್ಯ ಸರಿ ಇಲ್ಲ ಎಂಬ ಆರೋಪ. ಎಲ್ಲದಕ್ಕೂ ನನ್ನ ಹತ್ತಿರ ಸಾಕ್ಷಿ ಇದೆ ಎನ್ನುವ ಧಿಮಾಕು! ಶಮಿ ಬದುಕಿನ ಅತ್ಯಂತ ಕರಾಳ ದಿನಗಳವು. ಒಮ್ಮೆ ವಿದೇಶದ ಪ್ರವಾಸದಲ್ಲಿ ಇದ್ದಾಗ 2018ರಲ್ಲಿ FIR ಆಗಿ ಅರೆಸ್ಟ್ ವಾರಂಟ್ ಹೊರಟಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಶಮಿ ಅರೆಸ್ಟ್ ಆಗುವುದು ತಪ್ಪಿತು.

Mohammed Shami family

ಮೂರು ಬಾರಿ ಆತ್ಮಹತ್ಯೆಗೆ ಪ್ರಯತ್ನ!

ಈ ಸಂದರ್ಭದಲ್ಲಿ ತಾನು ಮೂರು ಬಾರಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದೆ ಎಂದು ಶಮಿ ಒಪ್ಪಿಕೊಂಡಿದ್ದಾರೆ. ಕ್ರಿಕೆಟ್ ಮೇಲೆ ಫೋಕಸ್ ಔಟ್ ಆಗಿತ್ತು. ತಾನು ನಿರಪರಾಧಿ ಎಂದು ಎಷ್ಟೇ ಬಾರಿ ಹೇಳಿದರೂ ಆತನನ್ನು ಯಾರೂ ನಂಬಲಿಲ್ಲ. ನಿರಂತರ ಕೋರ್ಟ್ ವಿಚಾರಣೆ, ಪೊಲೀಸ್ ಸ್ಟೇಶನ್ ಅಲೆದಾಟ ಶಮಿಯನ್ನು ಹೈರಾಣ ಮಾಡಿತ್ತು. ಆಗ ವಿರಾಟ್‌ ಕೊಹ್ಲಿಯಂತಹ ಸ್ನೇಹಿತರು ಆತನ ಪರವಾಗಿ ನಿಂತು ನೈತಿಕ ಬೆಂಬಲ ನೀಡಿದ್ದನ್ನು ಆತನು ಇಂದಿಗೂ ಮರೆತಿಲ್ಲ. ಆ ಕೇಸಿನಿಂದ ಹೊರಬರಲು ಶಮಿಗೆ ತುಂಬಾ ಕಷ್ಟ ಆಯಿತು. ಶಮಿ ತುಂಬಾ ಜರ್ಜರಿತ ಆದರು.

ಇದನ್ನೂ ಓದಿ: Raja Marga Column : ನಿಮ್ಮ ಮಕ್ಕಳು ಮೊಬೈಲ್‌ಗೆ ಅಡಿಕ್ಟ್‌ ಆಗಿದ್ದಾರಾ? ಚಟ ಬಿಡಿಸಲು ಇಲ್ಲಿದೆ TIPS

ಇದನ್ನೂ ಓದಿ: Mohammed Shami : ನ್ಯೂಜಿಲ್ಯಾಂಡ್ ವಿರುದ್ಧ 7 ವಿಕೆಟ್​ ಉರುಳಿಸಿದ ಶಮಿ ಸೃಷ್ಟಿಸಿದ ದಾಖಲೆಗಳು ಹಲವು

ಮ್ಯಾಚ್ ಫಿಕ್ಸಿಂಗ್ ಎಂಬ ಬೆಂಬಿಡದ ಭೂತ!

‘ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಲ್ಲಿ’ ಎಂಬ ಗಾದೆ ಮಾತಿನಂತೆ ಶಮಿ ಬದುಕಿನಲ್ಲಿ ಎರಡನೇ ಬಿರುಗಾಳಿ ಬೀಸಿತ್ತು. ಅದು ‘ಮ್ಯಾಚ್ ಫಿಕ್ಸಿಂಗ್’ ಆರೋಪ! ದುಡ್ಡು ತೆಗೆದುಕೊಂಡು ವಿದೇಶಗಳ ತಂಡಕ್ಕೆ ಫೇವರ್ ಮಾಡಿದ್ದಾರೆ ಎನ್ನುವ ದೂರು ಬಂದಾಗ ಶಮಿ ಕುಗ್ಗಿಹೋದರು. ಅವರಂತಹ ದೇಶಪ್ರೇಮಿ ಕ್ರಿಕೆಟರ್‌ಗೆ ಆ ಆರೋಪವು ಸಾವಿಗೆ ಸಮ ಆಗಿತ್ತು. ಬಿಸಿಸಿಐ ಆತನ ಯಾವ ಮಾತನ್ನೂ ಕೇಳದೆ ವಿಚಾರಣಾ ಸಮಿತಿ ರಚನೆ ಮಾಡಿತು. ಪತ್ರಿಕೆಗಳು ಆತನ ವಿರುದ್ಧ ಬರೆದವು. ಹೆಂಡತಿಯ ಕಡೆಯವರು ಆತನ್ನು ಬಹಿರಂಗವಾಗಿ ನಿಂದಿಸಿದರು. ಆಗಲೂ ಆತನ ಪರವಾಗಿ ನಿಂತವರು ವಿರಾಟ್ ಮೊದಲಾದ ಸ್ನೇಹಿತರೇ. ಈ ಆರೋಪವೂ ಮುಂದೆ ಸುಳ್ಳು ಎಂದು ಸಾಬೀತಾಯಿತು. ಆ ಹಂತದಲ್ಲಿ ಶಮಿ ಕ್ರಿಕೆಟ್ ಬಿಟ್ಟು ಹೋಗುವ ತೀರ್ಮಾನಕ್ಕೆ ಬಂದಿದ್ದರು. ಆಗಲೂ ನೆರವಿಗೆ ನಿಂತವರು ಚಿನ್ನದಂತಹ ಗೆಳೆಯರೇ!

Mohammed Shami in Distress

ನಿಂದನೆಗೆ ನಿಂತ ಟ್ರೊಲ್ ಪೇಜ್‌ಗಳು!

2021ರ ಅಕ್ಟೋಬರ್ ಹೊತ್ತಿಗೆ ಶಮಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಒಬ್ಬರೇ ಮುಸ್ಲಿಂ ಆಟಗಾರ ಆಗಿದ್ದರು. ಆಗ ಪಾಕಿಸ್ತಾನ್ ವಿರುದ್ಧ ಭಾರತವು ಸೋತಿತ್ತು. ದುರ್ದೈವ ಏನೆಂದರೆ ಶಮಿ 43 ರನ್ ಕೊಟ್ಟು ದುಬಾರಿ ಆಗಿದ್ದರು. ಯಾವುದೇ ಆಟಗಾರ ಎಲ್ಲಾ ಪಂದ್ಯಗಳನ್ನೂ ಗೆಲ್ಲಿಸಲು ಸಾಧ್ಯವಿಲ್ಲ ಎನ್ನುವ ಸತ್ಯ ನಮಗೆ ಅರ್ಥ ಆಗಬೇಕಲ್ಲಾ? ಆದರೆ ಕೆಲವು ವಿಕೃತ ಮನಸ್ಸಿನ ಮಂದಿ ಶಮಿ ವಿರುದ್ಧ ಟ್ರೊಲ್ ಪುಟಗಳನ್ನು ತೆರೆದರು. ಸಾಮಾಜಿಕ ಜಾಲತಾಣದಲ್ಲಿ ನಿರಂತರ ನಿಂದನೆ ನಡೆಯಿತು. ಭಾರತ ಪಾಕ್ ಪಂದ್ಯಗಳಿಗೆ ಹೈಪ್ ಕ್ರಿಯೇಟ್ ಮಾಡುವ ಕೆಲವು ಮಾಧ್ಯಮಗಳು
‘ಯಾವ ಹುತ್ತದಲ್ಲಿ ಯಾವ ಹಾವೋ! ಯಾರಿಗ್ಗೊತ್ತು?’ ಮೊದಲಾದ ಶೀರ್ಷಿಕೆ ನೀಡಿ ಆತನ ತೇಜೋವಧೆಗೆ ಇಳಿದವು. ಆಗಲೂ ಶಮಿ ಪರವಾಗಿ ನಿಂತವರು ವಿರಾಟ್ ಅಂತಹ ಗೆಳೆಯರೇ! ಈ ಅಗ್ನಿದಿವ್ಯವನ್ನು ಗೆಲ್ಲುವುದು
ಶಮಿಗೆ ತುಂಬಾ ಕಷ್ಟ ಆಯಿತು.

Mohammed Shami  with Virat Kohli

ಅದೇ ಶಮಿ ಇಂದು ಭಾರತಕ್ಕೆ ಚಿನ್ನದಂತಹ ಬೌಲರ್ ಆಗಿದ್ದಾರೆ.

ಶಮಿ ಜಾಗದಲ್ಲಿ ಬೇರೆ ಯಾರಿದ್ದರೂ ಕ್ರಿಕೆಟಿಗೆ ವಿದಾಯ ಹೇಳಿ ಓಡಿಹೋಗುತ್ತಿದ್ದರು. ಆದರೆ ಮೊಹಮ್ಮದ್ ಶಮಿ ಈ ಸಾಲು ಸಾಲು ಅಗ್ನಿಪರೀಕ್ಷೆಗಳ ನಡುವೆ ಕ್ರಿಕೆಟ್ ಬಿಟ್ಟು ಹೋಗಿಲ್ಲ ಅನ್ನುವುದು ಭಾರತದ ಭಾಗ್ಯ. ಇಂತಹ ದೈತ್ಯ ಪ್ರತಿಭೆ ಇದ್ದರೂ ಆತನಿಗೆ ಕ್ರಿಕೆಟ್ ಆಯ್ಕೆ ಮಂಡಳಿ ತೋರಿದ ಅವಕೃಪೆ, ಮಾಡಿದ ಅನ್ಯಾಯ ಯಾವುದನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳದೆ ನಗು ನಗುತ್ತ ಭಾರತವನ್ನು ಪ್ರತೀ ಪಂದ್ಯದಲ್ಲಿಯೂ ಗೆಲ್ಲಿಸುವುದು ಇದೆಯಲ್ಲ, ಯಾವ ಬಂಜರು ಕ್ರಿಕೆಟ್ ಪಿಚ್‌ನಲ್ಲಿಯೂ ಸ್ವಿಂಗ್ ಪಡೆದು ಭಾರತದ ನೆರವಿಗೆ ನಿಲ್ಲುವುದಿದೆಯಲ್ಲಾ ಆ ಕಾರಣಕ್ಕಾದರೂ ನೀವು ಶಮಿಗೆ ಹ್ಯಾಟ್ಸಾಫ್ ಹೇಳಬೇಕು!

Mohammed Shami after taking wicket

ಅದರಲ್ಲಿಯೂ ಬೇರೆ ಬೇರೆ ಕ್ರಿಕೆಟರುಗಳ ಪತ್ನಿಯರು ಮ್ಯಾಚ್ ನೋಡಲು ಬಂದು ತಮ್ಮ ಗಂಡಂದಿರ ನೆರವಿಗೆ ನಿಲ್ಲುತ್ತಿರುವಾಗ, ಒಂದಿಷ್ಟೂ ಬೇಜಾರು ಮಾಡದೆ ಪ್ರತೀ ವಿಕೆಟ್ ಪಡೆದಾಗಲೂ ಆಕಾಶ ನೋಡುವ ಶಮಿಯ ನೋವು ನಮಗೆ ಅರ್ಥ ಆದರೆ ಸಾಕು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

ದಶಮುಖ ಅಂಕಣ: ಮಸಣದಲ್ಲಿ ಕೆಲವು ಕ್ಷಣ

ದಶಮುಖ ಅಂಕಣ: ಸ್ಮಶಾನದ ವರ್ಣನೆಗಳನ್ನು ನೋಡಿದಾಗ, ಅದರ ಕಲ್ಪನೆ ಭೀಕರವೋ, ಅದು ತನ್ನೊಳಗೆ ಹುದುಗಿಸಿಕೊಳ್ಳುವ ಸಾವು ಭೀಕರವೋ ಎಂಬುದೇ ತಿಳಿಯದೆ ಗೊಂದಲಕ್ಕೆ ಬಿದ್ದರೆ ಅಚ್ಚರಿಯಿಲ್ಲ.

VISTARANEWS.COM


on

graveyard
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

dashamukha column logo

ದಶಮುಖ ಅಂಕಣ: ಒಂದಿಷ್ಟು ಮಕ್ಕಳು ಕಥೆ ಕೇಳುತ್ತಿದ್ದರು. ಕಥೆಯೊಂದರ ನಡುವೆ ಸ್ಮಶಾನದ ಪ್ರಸ್ತಾಪ ಬಂತು. ಮಕ್ಕಳೆಲ್ಲರೂ ಮುಂದೇನಾಗುವುದೆಂದು ಗೊತ್ತಿರುವವರಂತೆ, ʻಯಬ್ಬಾ…!ʼ ಎಂದು ಕಣ್ಣು-ಬಾಯಿ ಬಿಡುತ್ತಾ ಹುಬ್ಬೇರಿಸಿದರು. ಅಲ್ಲೊಂದು ಭೂತ ಬರುತ್ತದೆಂದು ಅವರಾಗಲೇ ನಿರ್ಧರಿಸಿಬಿಟ್ಟಿದ್ದರು. ಹಾಗಾಗಿ ಉಸಿರು ಹಿಡಿದು, ಪಕ್ಕದಲ್ಲಿ ಕೂತವರ ಕೈಯೂ ಹಿಡಿದು, ಭೂತಚೇಷ್ಟೆಗೆ ತಯಾರಾಗಿಯೇ ಕಥೆಯಲ್ಲಿರುವ ಸ್ಮಶಾನ ಹೊಕ್ಕಿದ್ದರು. ಕಥೆಯಲ್ಲಿ ಭೂತ ಬಂತಾ, ಬಂದೇನು ಮಾಡಿತು ಇತ್ಯಾದಿಗಳು ನಮಗಿಲ್ಲಿ ಬೇಡದಿದ್ದರೂ, ಅವರ ವರ್ತನೆಗಳು ಒಂದಿಷ್ಟು ಚಿಂತನೆಗೆ ಹಚ್ಚಿದ್ದು ಹೌದು. ಸ್ಮಶಾನವೆಂದರೆ ನಾವಷ್ಟು ಇರಿಸುಮುರುಸು ಮಾಡಿಕೊಳ್ಳುತ್ತೇವಲ್ಲ, ಯಾಕೆ? ಆ ಮಕ್ಕಳ ಹಾಗೆ, ಸ್ಮಶಾನದೊಂದಿಗೆ ನಮ್ಮ ಭಾವಕೋಶದಲ್ಲಿ ಅಡಗಿ ಹೆದರಿಸುವ ಭೂತಕ್ಕೋ ಅಥವಾ ವ್ಯಕ್ತಿಗಳೇ ಸತ್ತು ಭೂತಕಾಲ ಸೇರುತ್ತಾರೆಂಬ ಸತ್ಯಕ್ಕೋ? ಯಾವುದು ನಮಗೆ ಹೆಚ್ಚು ಅಹಿತವಾಗುವ ವಿಷಯ ಮತ್ತು ಯಾಕೆ?

ಬದುಕು ಎಷ್ಟು ನಶ್ವರ ಎಂಬುದನ್ನು ಇಲ್ಲಿ ಹೇಳುತ್ತಿಲ್ಲ; ಸಾವಿನ ಬಗ್ಗೆ ಚರ್ಚಿಸುವುದಕ್ಕೆ ಇಲ್ಲಿ ಖಂಡಿತಕ್ಕೂ ಕುಳಿತಿಲ್ಲ; ಈ ಬಗ್ಗೆ ಮಾತಾಡಲಿ ಬಿಡಲಿ, ಅದೊಂದು ನಿತ್ಯ ಸತ್ಯ ಎಂಬುದು ಎಲ್ಲರಿಗೂ ತಿಳಿದಿದ್ದೇ. ಸ್ಮಶಾನದ ಬಗ್ಗೆ, ಅಲ್ಲಿದೆಯೆಂದು ಭಾವಿಸಲಾದ ಸಾವಿನಾಚೆಯ ಬದುಕುಗಳ ಬಗ್ಗೆ ಹೇಳಿ ಬೆದರಿಸುವ ಉದ್ದೇಶವಂತೂ ಮೊದಲೇ ಇಲ್ಲ. ಹಾಗಾದರೆ ಸ್ಮಶಾನದ ಬಗೆಗಿನ ಪ್ರಸ್ತಾಪ ಬಂದಿದ್ದೇಕೆ? ನಮಗೆಷ್ಟೇ ಅಹಿತವಾದ ವಿಷಯಗಳೂ ಬದುಕಿನಲ್ಲಿ ನಮಗರಿವಿಲ್ಲದಂತೆಯೇ ಹಾಸುಹೊಕ್ಕಾಗಿ ಬರುತ್ತವಲ್ಲ ಎಂಬ ಸೋಜಿಗವೊಂದು ನಿಶ್ಚಿತವಾಗಿ ಇದರ ಹಿಂದಿದೆ. ನಮಗಿಷ್ಟವಾಗದ ವಿಷಯವನ್ನೇ ಮಣಮಣಿಸುತ್ತಿದ್ದರೆ ಆ ಕುರಿತ ನಮ್ಮ ಸಹಿಷ್ಣುತೆ ಹೆಚ್ಚಾದೀತೇ ಎಂಬ ಜಿಜ್ಞಾಸೆಯೂ ಈ ಲಹರಿಗೆ ಕಾರಣವಾಗಿರಬಹುದು.

ಹದಿನೆಂಟನೇ ಶತಮಾನದ ಕೆಲವು ಇಂಗ್ಲಿಷ್‌ ಕವಿಗಳು ನೆನಪಾಗುತ್ತಿದ್ದಾರೆ. ಸ್ಮಶಾನ ಕವಿಗಳು ಅಥವಾ ಗ್ರೇವ್‌ಯಾರ್ಡ್‌ ಪೊಯೆಟ್ಸ್‌ ಎಂದೆಲ್ಲಾ ಕರೆಯಲಾಗುತ್ತಿತ್ತು ಇವರನ್ನು. ಬದುಕಿನ ನಶ್ವರತೆಯನ್ನು ಬಿಂಬಿಸುತ್ತಾ ಅಧ್ಯಾತ್ಮದೆಡೆಗಿನ ತುಡಿತವನ್ನು ಹೇಳುವಂಥ ಕವಿತೆಗಳು ಈ ಸಾಹಿತ್ಯ ಪ್ರಕಾರದಲ್ಲಿದ್ದವು. ಮುಖ್ಯವಾಗಿ ನೋವು, ದುಃಖ, ವಿಯೋಗದಂಥ ಭಾವತೀವ್ರತೆಯ ವಿಷಯಗಳ ಬಗ್ಗೆ ಹೇಳುವುದಕ್ಕೆ ಸ್ಮಶಾನ, ಗೋರಿ, ಶವಪೆಟ್ಟಿಗೆ ಇತ್ಯಾದಿಗಳನ್ನು ರೂಪಕಗಳಂತೆ ಈ ಕವಿಗಳು ಬಳಸಿಕೊಂಡಿದ್ದರು. ರಾಬರ್ಟ್‌ ಬ್ಲೇರ್‌, ಥಾಮಸ್‌ ಗ್ರೇ, ಎಡ್ವರ್ಡ್‌ ಯಂಗ್ ಮುಂತಾದ ಹೆಸರಾಂತ ಕವಿಗಳು ಸ್ಮಶಾನ ಮತ್ತು ಸಾವನ್ನು ತಮ್ಮ ಅಭಿವ್ಯಕ್ತಿ ರೂಪಕವಾಗಿ ಬಳಸಿದ್ದಾರೆ.

ಇಂಗ್ಲಿಷ್‌ ಕವಿಗಳು ಮಾತ್ರವೇ ಅಲ್ಲ, ನಮ್ಮದೇ ನೆಲದ ಕವಿಗಳು ಸಹ ಸ್ಮಶಾನದ ಉಲ್ಲೇಖಗಳನ್ನು ಬಳಸಿದ್ದಾರೆ. ಈ ನಿಟ್ಟಿನಲ್ಲಿ ಫಕ್ಕನೆ ನೆನಪಾಗುವುದು ರಾಘವಾಂಕ ಕವಿಯ ʻಹರಿಶ್ಚಂದ್ರ ಕಾವ್ಯʼ. ಮಡಿದ ಮಗನಿಗಾಗಿ ವಿಲಪಿಸುತ್ತಾ, ಆತನನ್ನು ಸ್ಮಶಾನಕ್ಕೆ ಹೊತ್ತು ತರುತ್ತಾಳೆ ಆತನ ತಾಯಿ, ಹರಿಶ್ಚಂದ್ರನ ಮಡದಿ ಚಂದ್ರಮತಿ. ರಾತ್ರಿಯ ಆ ಹೊತ್ತು ಸ್ಮಶಾನ ಹೇಗಿತ್ತು ಎಂಬುದನ್ನು ರಾಘವಾಂಕ ಹೀಗೆ ವರ್ಣಿಸುತ್ತಾನೆ-

“ಹಸಿಯ ತೊಗಲುಡಿಗೆ ಹಿಂಡಿಲುಗರುಳ ಚಲ್ಲಣದ/ ಕುಸುರಿಗಂಡದ ತೊಂಡಲಸ್ಥಿಗಳ ತೊಡಿಗೆ ದ/ ಟ್ಟಿಸುವ ರಕ್ತದ ಭಾರಿಗಣ್ಣಾಲಿಗಳ ಸೊಡರು ಕಾಳಿಜದ ಚರುಗುಗಡುಬು|| ಸಸಿದು ಕೊಬ್ಬಿದ ಮಿದುಳ ರಾಸಿಗೂಳೆಸೆಯೆ ಮಾ/ ಮಸಕದಿಂ ಚಾಮುಂಡಿ ಕಮಲಾಕ್ಷಿಯರ ನಡುವೆ/ ಹೊಸತನಿಕ್ಕುವ ಭೂತವೇತಾಳರಾಡಿದರು ಮಾನಿನಿಯ ಮನ ಬೆದರಲು||”

(ಸ್ಥೂಲಾರ್ಥದಲ್ಲಿ ಹೇಳುವುದಾದರೆ- ಹಸಿ ಚರ್ಮದ ಉಡಿಗೆ, ಕರುಳುಗೊಂಚಲಿನ ಕುಸುರಿಯ ಆಭರಣ, ಅಸ್ಥಿ ಕಿರೀಟದ ತೊಡಿಗೆ, ರಕ್ತಗೆಂಪು ಬಣ್ಣದ ಸೊಡರಿನಂಥ ಕಣ್ಣು, ಪಿತ್ತಜನಕಾಂಗದ ಬಲಿ ಪಡೆದ, ಕೊಬ್ಬಿದ ಮಿದುಳಿನ ರಾಶಿಗಳನ್ನೇ ಊಟವಾಗಿಸಿಕೊಂಡಿರುವ ಕಡುಕೋಪದ ಚಾಮುಂಡಿ ಕಮಲಾಕ್ಷಿಯರ ನಡುವೆ ಹೊಸದಾಗಿ ಸೇರಿದ್ದ ಭೂತಬೇತಾಳಗಳು ಮಾನಿನಿಯನ್ನು ಬೆದರಿಸುವಂತೆ ವರ್ತಿಸುತ್ತಿದ್ದವು)

ಇಲ್ಲೀಗ ಹೆದರಿಸುವಂಥ ವರ್ಣನೆಗಳು ಮಾತ್ರವೇ ಅಲ್ಲ, ಭಯಾನಕ, ಭೀಕರ, ಭೀಭತ್ಸ ಎನಿಸುವಂಥ ಬಣ್ಣನೆಗಳು ಕಾಣುತ್ತವೆ. ಖಂಡಿತಕ್ಕೂ ಇಂಥವನ್ನು ಕವಿ ಖುದ್ದಾಗಿ ಕಂಡಿರಲಾರ. ಆದರೆ ಈ ವರ್ಣನೆಗಳನ್ನು ನೋಡಿದಾಗ, ಸ್ಮಶಾನವೆಂಬ ಕಲ್ಪನೆ ಭೀಕರವೋ, ಅದು ತನ್ನೊಳಗೆ ಹುದುಗಿಸಿಕೊಳ್ಳುವ ಸಾವು ಭೀಕರವೋ ಎಂಬುದೇ ತಿಳಿಯದೆ ಗೊಂದಲಕ್ಕೆ ಬಿದ್ದರೆ ಅಚ್ಚರಿಯಿಲ್ಲ.

ಕುವೆಂಪು ಅವರ ʻಶ್ಮಶಾನ ಕುರುಕ್ಷೇತ್ರʼ ನಾಟಕವನ್ನೂ ಇಲ್ಲಿ ಉಲ್ಲೇಖಿಸಬಹುದು. ಮೊದಲ ಮಹಾಯುದ್ಧದ ನಂತರ ಬರೆದಂಥ ಈ ನಾಟಕವು, ಯುದ್ಧಗಳು ಹೇಗೆ ವಿಶಾಲವಾದ ಸ್ಮಶಾನಗಳನ್ನು ಹುಟ್ಟು ಹಾಕುತ್ತವೆ ಎಂಬುದನ್ನು ವಿಸ್ತರಿಸುತ್ತದೆ. ವಿನಾಶದ ಪರಿಕಲ್ಪನೆಗೆ ಪರ್ಯಾಯವಾಗಿ ಸ್ಮಶಾನವೆಂಬ ಪ್ರತಿಮೆ ಇಲ್ಲಿ ರೂಪುಗೊಂಡಿದೆ. ಆದರೆ ಇದಕ್ಕೆ ರೂಪಕವಾಗಿ ನಾಟಕದಲ್ಲಿ ಮೂಡಿಬಂದಿರುವುದು ಮಹಾಭಾರತದ ಕುರುಕ್ಷೇತ್ರ. ಯುದ್ಧಭೂಮಿಗಳ ಭೀಕರತೆಯನ್ನು ವಿವರಿಸುವುದಕ್ಕೆ ಭೂತಬೇತಾಳಗಳ ಕಲ್ಪನೆಯನ್ನು ಪಂಪನಾದಿಯಾಗಿ ಹಲವಾರು ಕವಿಗಳು ಬಳಸಿದ್ದಾರೆ.

ಥೋ! ಇದೆಂಥಾ ಸುಡುಗಾಡು ವರ್ಣನೆಗಳು, ಮಾಡೋಕೆ ಬೇರೆ ಕೆಲಸ ಇಲ್ವೇ ಎಂದು ಬೈಯ್ದುಕೊಂಡರೆ… ವಿಷಯ ಸುಡುಗಾಡಿನದ್ದೇ ಅಲ್ಲವೆ! ಈ ಕಠೋರ ವರ್ಣನೆಗಳನ್ನು ಬಿಟ್ಟು ಜನಮಾನಸದಲ್ಲಿ ಸ್ಮಶಾನದ ಬಗೆಗಿನ ಕಲ್ಪನೆಗಳನ್ನು ಗಮನಿಸೋಣ. ಜನಪದರಲ್ಲಿ ಬೈಗುಳಕ್ಕೆ ಅತಿ ಪ್ರಿಯವಾದ ವಿಷಯವೆಂದರೆ ಸ್ಮಶಾನ ಮತ್ತು ಹೆಣ! ಯಾವುದಕ್ಕೂ ಸಲ್ಲದವನನ್ನು ʻಮನೆಗೆ ಮನುಷ್ಯನಲ್ಲ, ಮಸಣಕ್ಕೆ ಹೆಣವಲ್ಲʼ ಎಂದು ಮೂದಲಿಸುವುದಿದೆ. ಪ್ರಾಂತ್ಯಾವಾರು ಮಟ್ಟದಲ್ಲಿ ಬೈಗುಳಗಳನ್ನು ವಿಂಗಡಿಸಿದರೆ, ಹಳೆ ಮೈಸೂರಿನ ಜನ ಈ ವಿಷಯದಲ್ಲಿ ಗಟ್ಟಿಗರು. (ಉತ್ತರ ಕರ್ನಾಟಕದ ಬೈಗುಳದ ರೀತಿಗಳೇ ಬೇರೆ. ಅದಿಲ್ಲಿ ಬೇಡ ಬಿಡಿ) ʻಅವ್ನ ಹೆಣ ಎತ್ತʼ ಎನ್ನುವುದರಿಂದ ಶುರು ಮಾಡಿದರೆ, ʻಮುಖಾ ಮುಚ್ಚ, ಹೆಜ್ಜೆ ಅಳಸ, ಹೊಗೆ ಹಾಕ, ಹೊತ್ಗಂಡ್ಹೋಗ, ಬಾಯಿಗ್‌ ಮಣ್ಹಾಕ, ಕರಿನಾಗ ಕಚ್ಚ, ಮನೆ ಮಶಾಣಾಗ, ಎಕ್ಕುಟ್ಹೋಗ (ಎಕ್ಕ-ಹುಟ್ಟಿ-ಹೋಗ, ಅಂದರೆ ನಾಶವಾಗು), ಸೀಮೆ ಸುಡುಗಾಡಾಗ…ʼ ಎಂದು ಸಹಸ್ರನಾಮಾವಳಿಯಂತೆ ಸಾವಿನ ಶಾಪಾವಳಿಯನ್ನೇ ಕರೆಯಬಲ್ಲರು. ಅದರಲ್ಲೂ ಕೆಲವು ಹಳೆಯ ತಲೆಮಾರಿನವರು ರಾಗವಾಗಿ ಬೈಗುಳ ಪ್ರಾರಂಭಿಸಿದರೆಂದರೆ ತಾಸುಗಟ್ಟಲೆ ತಡೆ ರಹಿತವಾಗಿ ಬೈಯಬಲ್ಲರು. ಈ ಬೈಗುಳಗಳು ಹಾರೈಸುವುದು ಸಾವು, ನಾಶವನ್ನೇ ಹೊರತು ಮತ್ತೇನಲ್ಲ.

ಯಾವುದೇ ಜನಪದ ಕಲ್ಪನೆಗಳಲ್ಲಿ, ಮಕ್ಕಳ ಕಥೆಗಳಲ್ಲಿ ಸ್ಮಶಾನಕ್ಕೂ, ಹುಣಸೇಮರಕ್ಕೂ, ಭೂತಕ್ಕೂ, ಒಂಥರಾ ನಂಟು. ಊರಾಚೆಗೊಂದು ಸ್ಮಶಾನ, ಅಲ್ಲೊಂದು ಭೂತದಂಥ ಒಂಟಿ ಹುಣಸೆಮರ, ಅದರಲ್ಲೊಂದು ನೇತಾಡುವ ದೆವ್ವ… ಇಂಥ ಕಲ್ಪನೆಯ ಕಥೆಗಳನ್ನು ಬಾಲ್ಯದಲ್ಲಿ ಲೆಕ್ಕವಿಲ್ಲದಷ್ಟು ಕೇಳಿದ್ದಿದೆ. ʻಒಂದಾನೊಂದು ಊರಿನ ಹೊರಗೆ ಭಾರೀ ಹುಣಸೆಮರ/ ಅದರಲ್ಲಿತ್ತು ಒಂದಾನೊಂದು ದೆವ್ವ ಹುಚ್ಚಿ ಥರʼ ಎಂಬ ಎಚ್‌.ಎಸ್‌. ವೆಂಕಟೇಶಮೂರ್ತಿಗಳ ಕವನ ಮಕ್ಕಳಿಗೆ ಕಚುಗುಳಿ ಇಡುವಂತಿದೆ.

ಈ ಹೊತ್ತಿನಲ್ಲಿ ಸುಡುಗಾಡು ಸಿದ್ಧರು ನೆನಪಾಗುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ಜಾದೂಗಾರರಂತೆ ಕಂಡು ಬರುತ್ತಿದ್ದ ಅಲೆಮಾರಿ ಜನಾಂಗವಿದು. ಈಗ ಇವರ ಮುಂದಿನ ತಲೆಮಾರುಗಳು ವಿದ್ಯಾಭ್ಯಾಸದೆಡೆಗೆ ಹೊರಳಿರುವುದರಿಂದ ಇವರ ಜೀವನಕ್ರಮ ಬದಲಾಗುತ್ತಿದೆ. ಹಣೆಗೆ ಬೂದಿ ಬಳಿದುಕೊಂಡು, ಕೊರಳಿಗೆ ರುದ್ರಾಕ್ಷಿ ಧರಿಸಿ, ಶುಭಾಶುಭಗಳ ಭವಿಷ್ಯ ಹೇಳುತ್ತಾ, ಇಂದ್ರಜಾಲಿಕರಂತೆ ಏನೇನೋ ಜಾದೂ ಮಾಡುವ ಇವರು, ಸುಡುಗಾಡುಗಳಲ್ಲಿದ್ದು ಸಿದ್ಧಿಗಳನ್ನು ಕರಗತ ಮಾಡಿಕೊಳ್ಳುತ್ತಾರೆಂಬ ಪ್ರತೀತಿಯಿದೆ. ಸುಡುಗಾಡುಗಳೆಂದರೆ ಬರೀ ಇಂಥ ಭಾವಗಳೇ ಬರಬೇಕಿಲ್ಲ ಎಂಬಂತೆ, ಶಿರಸಿಯ ʻನೆಮ್ಮದಿ ಕುಟೀರʼ ಕೆಲಸ ಮಾಡಬಹುದು; ʻಸ್ಮಶಾನವೇ ನಮ್ಮ ನಿತ್ಯ ಭೇಟಿಯ ತಾಣʼ ಎನ್ನುವ ಗೆಳೆಯರ ಬಳಗವೂ ಇರಬಹುದು.

ಇದನ್ನೂ ಓದಿ: ದಶಮುಖ ಅಂಕಣ: …. ನೋಡಲಿಕ್ಕೆ ಹೋಗೋಣು ಬಾರೆ!

ಭಾಷೆಯ ಜಾಯಮಾನದಲ್ಲೂ ಇದರ ಬಗ್ಗೆ ಸಾಕಷ್ಟು ವಿಚಾರಗಳು ಚಾಲ್ತಿಯಲ್ಲಿವೆ. ಭಯಾನಕ ನಿಶ್ಶಬ್ದವನ್ನು ʻಸ್ಮಶಾನ ಮೌನʼ, ಸತ್ತಾಗ ಹುಟ್ಟುವ ವೈರಾಗ್ಯವನ್ನು ʻಸ್ಮಶಾನ ವೈರಾಗ್ಯʼ, ಭೀಕರವಾದ ಅವಸ್ಥೆಯನ್ನು ʻಸ್ಮಶಾನ ಸದೃಶ್ಯʼ, ಯಾರಿಗೂ ಬೇಡದ್ದನ್ನು ʻಮಸಣದ ಹೂವುʼ, ಕಡೆಯ ಯಾತ್ರೆಯನ್ನು ʻಸ್ಮಶಾನ ಯಾತ್ರೆʼ… ನೋಡಿ, ನಮಗೆ ಅಹಿತವಾಗುವ ವಿಷಯವನ್ನೇ ಎಷ್ಟೆಲ್ಲ ರೀತಿಯಲ್ಲಿ ಬಳಸಿಕೊಳ್ಳುತ್ತೇವೆ ನಾವು.

ಇಷ್ಟು ಹೇಳಿದ ಮೇಲೆ ಸ್ಮಶಾನವಾಸಿಯ ಬಗ್ಗೆ ಹೇಳದಿದ್ದರೆ ವಿಷಯವೇ ಅಪೂರ್ಣ. ಮೊದಲೆಲ್ಲ ಊರಿನ ದಕ್ಷಿಣ ದಿಕ್ಕಿನಲ್ಲಿ ಸ್ಮಶಾನಗಳು ಇರುತ್ತಿದ್ದುದರಿಂದ ಈ ದಿಕ್ಕೇ ಅಶುಭ ಎನ್ನುವ ಕಲ್ಪನೆ ಜನಮಾನಸದಲ್ಲಿದೆ. ಹಾಗೆಂದು ʻಆತʼ ದಕ್ಷಿಣ ದಿಕ್ಕಿನ ಒಡೆಯ. ಹೆಸರು ರುದ್ರ, ಇರುವುದು ರುದ್ರಭೂಮಿಯಲ್ಲಿ. ರುಂಡಮಾಲಿ, ಕಪಾಲಿ, ಭೂತಗಣಗಳ ನಾಥ, ಬೂದಿಬಡುಕ… ಇಂಥ ಹಲವು ಹೆಸರುಗಳು ಆತನಿಗೆ. ಜಗತ್ತಿನಲ್ಲಿ ಸೃಷ್ಟಿ ಮತ್ತು ಸ್ಥಿತಿಯನ್ನು ಕಾಪಾಡುವ ಹೊಣೆ ಬ್ರಹ್ಮ ಮತ್ತು ವಿಷ್ಣುವಿಗಿದ್ದರೆ ಈತನಿಗೆ ಲಯದ ಕೆಲಸ. ಹೌದು, ಲಯಕರ್ತನಾದ ಶಿವನ ಬಗೆಗಿನ ಮಾತಿದು. ಇನ್ನೇನು ಬರಲಿರುವ ಶಿವರಾತ್ರಿಯ ಹಿನ್ನೆಲೆಯಲ್ಲಿ ʻಲಯʼ ಎನ್ನುವುದಕ್ಕಿರುವ ಘನತೆಯನ್ನು ಗಮನಿಸಬೇಕಿದೆ ನಾವು. ಜಗತ್ತಿನ ಮುಂದುವರಿಕೆಗೆ ಇದು ಅಗತ್ಯ. ಹಾಗೆಂದೇ ʻಇಲ್ಲʼ ಎನ್ನುವುದಕ್ಕೆ ನಮ್ಮ ಭಾವಕೋಶದಲ್ಲಿ ಯಾವುದೇ ಅರ್ಥವಿದ್ದರೂ, ಅದಕ್ಕೊಂದು ದೈವತ್ವವನ್ನು ಕಲ್ಪಿಸಿದ್ದೇವೆ; ಅದಕ್ಕೊಂದು ಅಧ್ಯಾತ್ಮವನ್ನೂ ಸೃಷ್ಟಿಸಿದ್ದೇವೆ. ʻಮದುವೆಗೋ ಮಸಣಕೋ ಹೋಗೆಂದ ಕಡೆ ಹೋಗು/ ಪದ ಕುಸಿಯೆ ನೆಲವಿಹುದು ಮಂಕುತಿಮ್ಮʼ ಎಂಬುದರ ಅರ್ಥವನ್ನು ಈ ಹಿನ್ನೆಲೆಯಲ್ಲೂ ಗ್ರಹಿಸಬಹುದೇ.

ಇದನ್ನೂ ಓದಿ: ದಶಮುಖ ಅಂಕಣ: ಬಾಗಿಲನು ತೆರೆದು…

Continue Reading

ಸ್ಫೂರ್ತಿ ಕತೆ

Raja Marga Column : ಅಪವಾದ ಎಲ್ಲರಿಗುಂಟು ಈ ಲೋಕದ ದೃಷ್ಟಿಯಲಿ; ಗೆಲ್ಲೋದು ಹೇಗೆ?

Raja Marga Column : ಅಪವಾದ ಮತ್ತು ಅಪಮಾನಗಳಿಲ್ಲದ ವ್ಯಕ್ತಿಗಳಿಲ್ಲ. ಯಾರು ಅದನ್ನು ಮೆಟ್ಟಿ ನಿಂತು ಮುನ್ನುಗ್ಗುತ್ತಾರೋ ಅವರು ಗೆಲ್ಲುತ್ತಾರೆ. ಹಾಗಿದ್ದರೆ ಇದನ್ನು ಮೆಟ್ಟಿ ನಿಲ್ಲುವುದು ಹೇಗೆ? ಇಲ್ಲಿದೆ ಆಪ್ತ ಸಲಹೆ

VISTARANEWS.COM


on

Raja Marga Column depressed
Koo
RAJAMARGA

Raja Marga Column : ನನ್ನ ಸ್ನೇಹಿತರೊಬ್ಬರು ತುಂಬಾನೆ ಡಿಪ್ರೆಸ್ (Friend in Depression) ಆಗಿದ್ದರು. ಅವರು ಹೇಳುವ ಪ್ರಕಾರ ಅವರಿಗೆ ಸಾಯುವಷ್ಟು ಅಪಮಾನ (Faced Insult) ಆಗಿತ್ತು. ಅವರು ತುಂಬಾ ನಂಬಿದ್ದ ವ್ಯಕ್ತಿಗಳು ಒಟ್ಟಾಗಿ ಅವರ ಮೇಲೆ ಬಹಳ ದೊಡ್ಡ ಆರೋಪ ಹೊರಿಸಿ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದರು. ಅವರ ಇಡೀ ಜೀವನದಲ್ಲಿ ಪೊಲೀಸ್ ಸ್ಟೇಷನ್ (Police station) ಮೆಟ್ಟಿಲು ಏರದಿದ್ದ ಅವರು ಈಗ ಅಲ್ಲಿಗೆ ಹೋಗಿ ವಿಚಾರಣೆ ಎದುರಿಸಬೇಕಾಗಿತ್ತು. ನನ್ನ ಯಾವ ತಪ್ಪೂ ಇಲ್ಲ ಎಂದವರು ಹೇಳಿದರು.

ಅವರ ನೋವು ಏನೆಂದರೆ ಅವರು ಯಾರನ್ನು ತುಂಬಾ ನಂಬಿದ್ದರೋ, ಯಾರು ಅವರಿಂದ ಹೆಚ್ಚು ಪ್ರಯೋಜನ ಪಡೆದಿದ್ದರೋ ಅವರು ಬೆನ್ನ ಹಿಂದೆ ಚೂರಿ ಹಾಕಿದ್ದಾರೆ. ನಂಬಿಕೆ ದ್ರೋಹ ಮಾಡಿದ್ದಾರೆ ಅನ್ನೋದು ಅವರ ಅಳಲು. ಅವರು ನನ್ನ ಮುಂದೆ ಕೂತು ಕಣ್ಣೀರು ಸುರಿಸಿ ಅವರ ಮನಸನ್ನು ಹಗುರ ಮಾಡಿಕೊಂಡರು. ನಾನು ಅವರನ್ನು ತಡೆಯಲಿಲ್ಲ. ಹಲವು ಬಾರಿ ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಯೋಚನೆ ಕೂಡ ಬಂದಿತ್ತು ಎಂದರು. ಅವರ ಮಾತು ಪೂರ್ತಿ ಮುಗಿಯುವತನಕ ನಾನು ಮಾತಾಡಲಿಲ್ಲ.

Raja Marga Column : ಅಪವಾದಗಳು ಎಂಬ ಅಗ್ನಿ ದಿವ್ಯಗಳು

ಇದು ಪ್ರತಿಯೊಬ್ಬರ ಬದುಕಿನಲ್ಲಿಯೂ ಬರುವ ಒಂದು ಮಾನಸಿಕ ಸ್ಥಿತಿ. ಅವರ ದುಃಖಕ್ಕೆ ಪ್ರಮುಖ ಕಾರಣ ಅಂದರೆ…

facing accusations

1. ಅವರು ತಪ್ಪು ವ್ಯಕ್ತಿಗಳನ್ನು ನಂಬಿದ್ದು ಮತ್ತು ಅವರನ್ನು ಭಾರಿ ಬೆಳೆಸಿದ್ದು.
2. ಪ್ರಾಕ್ಟಿಕಲ್ ಆಗಿ ಯೋಚನೆ ಮಾಡದೆ ಭಾವನಾತ್ಮಕ ಆಗಿ ಯೋಚನೆ ಮಾಡಿದ್ದು.
3. ತನ್ನ ಬಗ್ಗೆ ಒಳ್ಳೆಯ ಭಾವನೆ ಹೊಂದಿರುವ ವ್ಯಕ್ತಿಗಳನ್ನು ನಿರ್ಲಕ್ಷ್ಯ ಮಾಡಿದ್ದು.
4. ಇಂತಹ ಸೂಕ್ಷ್ಮ ವಿಷಯಗಳನ್ನು ತನ್ನ ಕುಟುಂಬದ ಜೊತೆಗೆ ಗುಟ್ಟು ಮಾಡಿದ್ದು. ಅವರ ನಿಜವಾದ ಸಮಸ್ಯೆಗಳು ಅವರ ಹೆಂಡತಿಗೂ ಗೊತ್ತಿರಲಿಲ್ಲ.
5. ತಾನು ತುಂಬಾ ಕ್ಲೀನ್ ಇಮೇಜ್ ವ್ಯಕ್ತಿ ಎಂದು ಗಾಢವಾಗಿ ನಂಬುತ್ತ ಬಂದದ್ದು. (ಅದು ತಪ್ಪಲ್ಲ)

depression

6. ತನ್ನದೇ ಬಲೆಯಲ್ಲಿ ತಾನೇ ಸಿಲುಕಿ ಒದ್ದಾಡುವ ಜೇಡದ ಹಾಗೆ ಉಸಿರುಗಟ್ಟಿ ಹೋದದ್ದು.
7. ಸಮಸ್ಯೆಗಳಿಂದ ಹೊರಬರಲು ಒಂದಿಷ್ಟೂ ಪ್ರಯತ್ನ ಮಾಡದೆ ಆ ಸಮಸ್ಯೆಯೇ ದೊಡ್ಡದು ಎಂದು ಭಾವಿಸಿದ್ದು.
8. ಯಾವುದಾದರೂ ಒಬ್ಬ ಒಳ್ಳೆಯ ನ್ಯಾಯವಾದಿಯನ್ನು ಸಂಪರ್ಕ ಮಾಡಿ ಕಾನೂನು ರಕ್ಷಣೆ ಪಡೆಯದೆ ಹೋದದ್ದು.
9. ನನಗೆ ಹೇಳಿದ ಹಾಗೆ ಹತ್ತಾರು ಮಂದಿಗೆ ಅವರ ಸ್ಟೋರಿ ಹೇಳಿ ಕಣ್ಣೀರು ಹಾಕಿ ಸಿಂಪಥಿ ಪಡೆಯಲು ಪ್ರಯತ್ನ ಮಾಡಿದ್ದು.
10. ಪೊಲೀಸ್ ಸ್ಟೇಷನ್‌ಗೆ ಹೋಗುವುದು ಮತ್ತು ವಿಚಾರಣೆ ಎದುರಿಸುವುದು ಅಪಮಾನ ಎಂದು ತಪ್ಪು ಯೋಚನೆಯನ್ನು ಮಾಡಿದ್ದು.

ಕೆಲವರು ಇರೋದೇ ಹೀಗೆ!

ಅವರು ಸಮಸ್ಯೆಯ ಒಳಗೇ ಕೂತು ಪರಿಹಾರ ಹುಡುಕುತ್ತಾರೆ. ಯಾವುದೇ ಸಮಸ್ಯೆಗೆ ಪರಿಹಾರ ದೊರೆಯಬೇಕು ಅಂತಾದರೆ ಆ ಸಮಸ್ಯೆಯಿಂದ ಹೊರಗೆ ನಿಂತು ಪರಿಹಾರ ಹುಡುಕಬೇಕು. ತನ್ನ ಮೇಲೆ ನಂಬಿಕೆ ಇಟ್ಟು ಯಾರು ನಮ್ಮ ಜೊತೆಗೆ ನಿಲ್ಲುತ್ತಾರೋ ಅವರ ಬೆಂಬಲ ಪಡೆಯಬೇಕು. ತನಗೆ ನೈತಿಕ ಬೆಂಬಲ ಕೊಡುವ ವ್ಯಕ್ತಿಗಳ ಪಟ್ಟಿ ಮಾಡಿ ಅವರ ಜೊತೆಗೆ ಹೆಚ್ಚು ಮನಸು ಬಿಚ್ಚಿ ಮಾತಾಡಬೇಕು. ಮುಖ್ಯವಾಗಿ ತನ್ನ ಕುಟುಂಬದ ವಿಶ್ವಾಸವನ್ನು ಹೆಚ್ಚು ಉಪಯೋಗ ಮಾಡಬೇಕು. ಹೆಂಡತಿಯ ಜೊತೆಗೆ ಇಂತಹ ಸಂಗತಿ ಗುಟ್ಟು ಮಾಡಬಾರದು.

ಯಾವುದೇ ಸಮಸ್ಯೆಯ ಪರಿಹಾರಕ್ಕೆ ಹಲವು ಮಾರ್ಗಗಳು ಇರುತ್ತವೆ. ಅವುಗಳನ್ನು ಪಟ್ಟಿ ಮಾಡಿ ಅವುಗಳಲ್ಲಿ ಕಡಿಮೆ ರಿಸ್ಕ್ ಇರುವ ಮಾರ್ಗವನ್ನು ಮತ್ತು ಕ್ಷಿಪ್ರವಾಗಿ ಪರಿಹಾರವನ್ನು ಕೊಡುವ ಮಾರ್ಗವನ್ನು ಆರಿಸಿಕೊಂಡರೆ ಇಂತಹ ಸಾವಿರ ಸಮಸ್ಯೆ ಬಂದರೂ ಗೆಲ್ಲುವುದು ಖಚಿತ.

ಇದನ್ನೂ ಓದಿ : Raja Marga Column : ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಇಲ್ಲಿದೆ 10 ಸೂತ್ರ

Raja Marga Column accusations

ನಾನು ಅವರಿಗೆ ಹೇಳಿದ ಸಾಂತ್ವನದ ಮಾತುಗಳು

1. ಅಪವಾದಗಳು ರಾಮಾಯಣದಲ್ಲಿ ಶ್ರೀರಾಮನನ್ನು ಕೂಡ ಬಿಡಲಿಲ್ಲ. ಹರಿಶ್ಚಂದ್ರ ಕೂಡ ಅದಕ್ಕೆ ಹೊರತಲ್ಲ. ಈಶ್ವರ ದೇವರ ಕೈಗೆ ಬ್ರಹ್ಮ ಕಪಾಲ ಅಂಟಿಕೊಂಡು ಭಿಕ್ಷೆ ಬೇಡುವುದು ತಪ್ಪಲಿಲ್ಲ.
2. ಈ ಅಪವಾದಗಳು ನಮ್ಮನ್ನು ಟೆಸ್ಟ್ ಮಾಡಲು ಬರುತ್ತವೆ. ನಿಮ್ಮನ್ನು ಮುಳುಗಿಸಲು ಅಲ್ಲ. ವಿಲ್ ಪವರ್ ಸ್ಟ್ರಾಂಗ್ ಮಾಡಿಕೊಂಡರೆ ಗೆಲ್ಲುವುದು ಖಚಿತ.
3. ಖ್ಯಾತ ಹಾಸ್ಯ ಸಾಹಿತಿ ಬೀಚಿ ಹೇಳಿದ ಹಾಗೆ ಸಮಸ್ಯೆಗಳು ಅಂದರೆ ಸಿಟಿ ಬಸ್ಸುಗಳು ಹಾಗೆ. ಬಂದರೆ ಹಿಂದೆ ಹಿಂದೆ ಬರ್ತಾ ಇರುತ್ತವೆ. ಇಲ್ಲಾಂದರೆ ಬರೋದೇ ಇಲ್ಲ!
4. ಅಪವಾದಗಳು ತಾತ್ಕಾಲಿಕ. ಮೋಡ ಮುಸುಕಿದ ಸೂರ್ಯನ ಹಾಗೆ. ಆ ಮೋಡಗಳು ಕರಗಿ ಹೋಗಿ ಹೊರಬಂದ ಸೂರ್ಯ ಇನ್ನಷ್ಟು ಬೆಳಗುತ್ತಾನೆ.
5. ಜೀವನದ ಯಾವುದೇ ಘಟ್ಟದಲ್ಲಿಯೂ ನಮ್ಮನ್ನು ಪ್ರೀತಿಸುವವರ ಸಂಖ್ಯೆಯು ನಮ್ಮನ್ನು ದ್ವೇಷ ಮಾಡುವವರ ಸಂಖ್ಯೆಗಿಂತ ಹೆಚ್ಚಾಗಿರುತ್ತದೆ.

pains are like clouds

6. ಅಪವಾದಗಳನ್ನು ಗೆದ್ದುಬಂದ ನಂತರ ನಾವು ಮೊದಲಿಗಿಂತ ಹೆಚ್ಚು ಸ್ಟ್ರಾಂಗ್ ಆಗಿರುತ್ತೇವೆ.
7. ನಿಮ್ಮ ಆತ್ಮವಿಶ್ವಾಸ ಮತ್ತು ತಾಳ್ಮೆ ನಿಮ್ಮನ್ನು ಸದಾ ಗೆಲ್ಲಿಸುತ್ತದೆ. ದುಡುಕು ನಿರ್ಧಾರ ತೆಗೆದುಕೊಳ್ಳುವ ಮುನ್ನ ನೂರು ಬಾರಿ ಯೋಚಿಸಿ.
8. ಯಾರನ್ನು ನಂಬಬೇಕು, ಯಾರನ್ನು ಎಷ್ಟು ನಂಬಬೇಕು, ಯಾರನ್ನು ನಿಮ್ಮ ಭಾವನಾ ವಲಯದ ಒಳಗೆ ತೆಗೆದುಕೊಳ್ಳಬೇಕು ಎಂದು ನಿರ್ಧರಿಸುವವರು ನೀವೇ! ತಪ್ಪು ವ್ಯಕ್ತಿಗಳು ನಮಗೆ ಜೀವನ ಪಾಠ ಕಲಿಸುತ್ತಾರೆ.

9. ಕಾನೂನು ಯಾವಾಗಲೂ ಸಂತ್ರಸ್ತರಿಗೆ ರಕ್ಷಣೆ ಕೊಡುತ್ತದೆ ಮತ್ತು ಸತ್ಯದ ಪರವಾಗಿ ಇರುತ್ತದೆ. ಮಳೆ ಬಂದಾಗ ಮಳೆ ಬಂತಲ್ಲ ಎಂದು ದುಃಖ ಪಡುವುದಲ್ಲ. ಕೊಡೆ ಬಿಡಿಸಿ ಮುನ್ನಡೆಯಬೇಕು.

10. ಜಗತ್ತಿನ ಯಾವ ಪುರಾಣಗಳಲ್ಲಿಯೂ ಕೊನೆಗೆ ಗೆದ್ದದ್ದು ಒಳ್ಳೆಯತನ. ರಾಮಾಯಣದಲ್ಲಿ ಗೆದ್ದವನು ರಾಮ. ರಾವಣ ಅಲ್ಲ. ಮಹಾಭಾರತದಲ್ಲಿ ಗೆದ್ದವರು ಪಾಂಡವರು.ಕೌರವರು ಅಲ್ಲ.

pains and hugs

ಭರತ ವಾಕ್ಯ

ನೀವು ನಾನು ಹೇಳಿದ ಅಂಶಗಳನ್ನು ಅಪ್ಲೈ ಮಾಡಿ ಗೆದ್ದು ಬನ್ನಿ ಎಂದು ಅವರನ್ನು ಬೀಳ್ಕೊಟ್ಟೆ. ಎರಡು ದಿನಗಳ ನಂತರ ಇವತ್ತು ಬೆಳಿಗ್ಗೆ ಅವರದೇ ಕಾಲ್ ಬಂತು. ಅವರ ಧ್ವನಿಯಲ್ಲಿ ಗೆದ್ದ ಖುಷಿ ಇತ್ತು. ನಾನು ಆ ಕೇಸನ್ನು ಗೆದ್ದೆ ಸರ್ ಎಂದರು. ಅವರಿಗೆ ಅಭಿನಂದನೆ ಹೇಳಿ ಫೋನ್ ಇಟ್ಟೆ.

Continue Reading

ಸ್ಫೂರ್ತಿ ಕತೆ

Raja Marga Column : ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಇಲ್ಲಿದೆ 10 ಸೂತ್ರ

Raja Marga Column : ಫೆ. 28 ರಾಷ್ಟ್ರೀಯ ವಿಜ್ಞಾನ ದಿನ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು ಎನ್ನುವ ಸಂಕಲ್ಪ ಮಾಡುವ ದಿನ. ಹಾಗಿದ್ದರೆ ಅದನ್ನು ಬೆಳೆಸುವ ಆಯಾಮಗಳೇನು?

VISTARANEWS.COM


on

Raja Marga Column National science day
Koo
RAJAMARGA Rajendra Bhat

Raja Marga Column : ಇಂದು (ಫೆಬ್ರುವರಿ 28) ರಾಷ್ಟ್ರೀಯ ವಿಜ್ಞಾನ ದಿನ. ಭಾರತೀಯರು ಹೆಮ್ಮೆ ಪಡಬೇಕಾದ ದಿನ. ಭಾರತರತ್ನ ಡಾ. ಸಿ.ವಿ ರಾಮನ್ ಅವರು ತಮ್ಮ ಶ್ರೇಷ್ಠವಾದ ಸಂಶೋಧನೆಯಾದ ರಾಮನ್ ಪರಿಣಾಮವನ್ನು (Raman Effect) ಜಗತ್ತಿಗೆ ತೋರಿಸಿಕೊಟ್ಟ ದಿನ. ಮುಂದೆ ಅದೇ ಸಂಶೋಧನೆಯು ನೊಬೆಲ್ ಪುರಸ್ಕಾರವನ್ನು ಪಡೆಯಿತು ಅನ್ನುವುದು ಭಾರತದ ಹೆಮ್ಮೆ.

Raja Marga Column : ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು ಹೇಗೆ?

ವೈಜ್ಞಾನಿಕ ಮನೋಭಾವವನ್ನು (Scientific Attitude) ಮಕ್ಕಳಲ್ಲಿ ಬೆಳೆಸಬೇಕು ಅನ್ನುವುದು ಈ ದಿನದ ಸಂಕಲ್ಪ. ಅದು ನಮ್ಮೆಲ್ಲರ ಯೋಚನಾ ವಿಧಾನವನ್ನು ಅವಲಂಬಿಸಿಕೊಂಡಿದೆ. ಅದರ ಕೆಲವು ಆಯಾಮಗಳು ಇಲ್ಲಿವೆ.

Raja Marga Column National science day

1. ಪ್ರಶ್ನಿಸುವುದು ಮತ್ತು ಉತ್ತರ ಕಂಡುಕೊಳ್ಳುವುದು (Questioning and finding Answer)

ಮಕ್ಕಳಲ್ಲಿ ವೈಜ್ಞಾನಿಕವಾಗಿ ಪ್ರಶ್ನಿಸುವ ಮನೋಭಾವವನ್ನು ಬೆಳೆಸುವುದು ಅತ್ಯಂತ ಮುಖ್ಯ. ಅದರಲ್ಲಿಯೂ ಯಾಕೆ ಮತ್ತು ಹೇಗೆ ಎಂಬ ಪ್ರಶ್ನೆಗಳು ಹೆಚ್ಚು ಜ್ಞಾನವನ್ನು ಕೊಡುತ್ತವೆ. ಪ್ರಶ್ನೆ ಮಾಡಿ ಅಲ್ಲಿಗೆ ಬಿಟ್ಟರೆ ಜ್ಞಾನ ದೊರೆಯುವುದಿಲ್ಲ. ಉತ್ತರವನ್ನು ಪಡೆಯುವ ತನಕ ವಿರಮಿಸಬಾರದು ಎನ್ನುವುದು ಮುಖ್ಯ. ಪ್ರಶ್ನೆಗಳನ್ನು ಕೇಳುವುದರಿಂದ ಮಕ್ಕಳ ಬಲ ಮೆದುಳು ಚುರುಕಾಗುತ್ತದೆ ಮತ್ತು ಮಕ್ಕಳು ಹೆಚ್ಚು ಕ್ರಿಯೇಟಿವ್ ಆಗುತ್ತಾರೆ.

Raja Marga Column National science day2

2. ತಾರ್ಕಿಕ ಮತ್ತು ಕ್ರಮಬದ್ಧವಾದ ಯೋಚನೆ (Logical thinking and Reasoning)

ಮಕ್ಕಳ ಮೆದುಳು ಲಾಜಿಕಲ್ ಯೋಚನೆ ಮಾಡುವುದು ತುಂಬಾ ಮುಖ್ಯ. ಅನ್ವೇಷಣೆಯ ಪ್ರತೀ ಹಂತವನ್ನು ಬರೆದಿಟ್ಟು, ಅದಕ್ಕೆ ಕಾರಣವನ್ನು ಕೊಟ್ಟು ಮುನ್ನಡೆಯುವುದು ತುಂಬಾ ಮುಖ್ಯ. ಹಂತ ಹಂತವಾಗಿ ಮತ್ತು ತರ್ಕಬದ್ಧವಾಗಿ ಯೋಚನೆ ಮಾಡುವಂತೆ ಮಕ್ಕಳ ಮೆದುಳಿಗೆ ತರಬೇತು ಕೊಟ್ಟರೆ ಮಕ್ಕಳು ಅಸಾಧ್ಯವಾದದ್ದನ್ನು ಸಾಧಿಸುತ್ತಾರೆ. ಪ್ರಯೋಗಾತ್ಮಕ ಫಲಿತಾಂಶಗಳನ್ನು ದಾಖಲಿಸಲು ಮಕ್ಕಳು ಕಲಿಯುವುದು ಅಗತ್ಯ.

Raja Marga Column National science day Logical Reasoning

3. ವೀಕ್ಷಣಾ ಪ್ರವೃತ್ತಿ (Observation)

ಪ್ರಕೃತಿಯು ಅನೂಹ್ಯ ರಹಸ್ಯಗಳ ಮೂಟೆ. ನಮ್ಮ ಸುತ್ತಲೂ ಇರುವ ಹಲವು ಜೀವಿಗಳು, ಹಕ್ಕಿಗಳು, ಸಸ್ಯಗಳು, ಕೀಟಗಳು, ಸರೀಸೃಪಗಳು, ಇರುವೆಗಳು, ಚಿಟ್ಟೆಗಳು…… ಹೀಗೆ ಎಲ್ಲವನ್ನೂ ಗಮನಿಸುತ್ತಾ ಹೋದ ಹಾಗೆ ಮಗುವಿನ ಜ್ಞಾನವು ವಿಕಸಿತ ಆಗುತ್ತದೆ. ಆ ವೀಕ್ಷಣೆಗಳು ಮುಂದಿನ ಮಹಾ ಸಂಶೋಧನೆಗಳಿಗೆ ನಾಂದಿ ಹಾಡಿದ ನೂರಾರು ನಿದರ್ಶನಗಳು ಇವೆ.

Raja Marga Column National science day observations

4 ಸಂಶೋಧನಾ ಪ್ರವೃತ್ತಿ(Inventions)

ಆರಂಭದಿಂದಲೂ ಮನುಷ್ಯನ ಸಹಜ ಪ್ರವೃತ್ತಿ ಅಂದರೆ ಸಂಶೋಧನೆ. ಪ್ರಕೃತಿಯ ಒಂದೊಂದೇ ರಹಸ್ಯಗಳನ್ನು ಮಾನವನು ಬೇಧಿಸುತ್ತ ಮುಂದುವರಿದಂತೆ ಹೊಸ ಆವಿಷ್ಕಾರಗಳು ಹುಟ್ಟು ಪಡೆದವು. ಕಾಡಿನ ಗುಹೆಗಳಲ್ಲಿ ಬದುಕುತ್ತಿದ್ದ ಮನುಷ್ಯನು ಇಂದು ನಾಗರೀಕತೆಯ ಕಡೆಗೆ ಮುಖ ಮಾಡಲು ಕಾರಣ ಆದದ್ದು ಅದೇ ಅನ್ವೇಷಣಾ ಪ್ರವೃತ್ತಿಯಿಂದ.

Raja Marga Column National science day inventions

5. ಸಮಸ್ಯೆ ಬಿಡಿಸುವ ವಿಧಾನ (Problem Solving Method)

ನಮ್ಮ ದೈನಂದಿನ ಜೀವನದಲ್ಲಿ ಸಮಸ್ಯೆಗಳು ಬಂದಾಗ ಅವುಗಳಿಗೆ ಬೆನ್ನು ಹಾಕದೆ ಸಮಸ್ಯೆಗೆ ಪರಿಹಾರ ಹುಡುಕಲು ಹೊರಟದ್ದು ನಿಜಕ್ಕೂ ಅದ್ಭುತ. ತನ್ನ ದ್ವೀಪವಾಸಿಗಳು ಸಮುದ್ರದ ಬದಿಯಲ್ಲಿ ದೀಪದ ಬೆಳಕಿನಲ್ಲಿ ಕಷ್ಟ ಪಡುವುದನ್ನು ಕಂಡು ಥಾಮಸ್ ಆಲ್ವಾ ಎಡಿಸನನ ನಿದ್ರೆ ಹಾರಿಹೋಗಿತ್ತು. ಆ ಸಮಸ್ಯೆಗೆ ಪರಿಹಾರ ಹುಡುಕಲು ಆತ ಮಾಡಿದ ಹೋರಾಟವೇ ಬಲ್ಬಿನ ಅನ್ವೇಷಣೆ. ವಿಜ್ಞಾನದ ಹೆಚ್ಚಿನ ಸಂಶೋಧನೆಗಳು ಆಗಿರುವುದು ಈ ಸಮಸ್ಯಾಪೂರಣ ವಿಧಾನದಿಂದ. ಹೌದಲ್ಲ. ಯೋಚನೆ ಮಾಡಿ.

Raja Marga Column National science day problem Solving

6. ಸೃಜನಶೀಲ ಯೋಚನೆ (Creative Thinking)

ತಾನು ಬೇರೆಯವರಿಗಿಂತ ಭಿನ್ನವಾಗಿ ಮತ್ತು ಅನನ್ಯವಾಗಿ ಯೋಚನೆ ಮಾಡಲು ಹೊರಡುವುದೇ ಸೃಜನಶೀಲ ಮನೋಭಾವ. ಇದು ಕೂಡ ಬಲ ಮೆದುಳಿನ ಚಮತ್ಕಾರ. If NECCESSITY is the mother of inventions then CREATIVITY is the father.

Raja Marga Column National science day Creative Thinking

7. ಉನ್ನತೀಕರಣ (Improvisation)

ಮಾನವ ಮೆದುಳಿನ ಅದ್ಭುತ ಸಾಮರ್ಥ್ಯ ಎಂದರೆ ಪರಿಪೂರ್ಣತೆಯ ಕಡೆಗೆ ಹೋಗುವುದು. ಅದರ ಫಲಿತಾಂಶಗಳು ಪ್ರತೀ ಹಂತದಲ್ಲಿ ಉನ್ನತೀಕರಣವನ್ನು ಪಡೆಯುತ್ತಾ ಮುಂದೆ ಹೋಗುತ್ತವೆ. ಉದಾಹರಣೆಗೆ ಚಾರ್ಲ್ಸ್ ಬ್ಯಾಬೇಜ್ ಜಗತ್ತಿನ ಮೊದಲ ಕಂಪ್ಯೂಟರ್ ಕಂಡುಹಿಡಿದಾಗ ಅದು ದೊಡ್ಡ ಕಟ್ಟಡದಷ್ಟು ದೊಡ್ಡದಿತ್ತು. ಮುಂದೆ ಟೇಬಲ್ ಟಾಪ್, ಲಾಪ್ ಟಾಪ್, ಪಾಮ್ ಟಾಪ್, ಫಿಂಗರ್ ಟಾಪ್….. ಹೀಗೆ ಉನ್ನತೀಕರಣ ಆಗುತ್ತಾ ಹೋಯಿತು. ಎಡಿಸನ್ ಮೊದಲ ಬಲ್ಬ್ ಕಂಡುಹಿಡಿದಾಗ ಕಾರ್ಬನ್ ಫಿಲಮೆಂಟ್ ಇತ್ತು. ಮುಂದೆ ಟಂಗ್‌ಸ್ಟನ್‌ ಫಿಲಮೆಂಟ್‌ ಬಂತು. ಮುಂದೆ CFL ಇತ್ಯಾದಿ ಬಂದವು.

Raja Marga Column National science day Improvisations

8. ಜ್ಞಾನದ ವಿಕಾಸ (Knowledge Explode)

ನೂರು ವರ್ಷಗಳ ಹಿಂದೆ ಜ್ಞಾನ ವಿಕಾಸವಾಗಲು ದಶಕಗಳೇ ಬೇಕಾದವು. ನಂತರ ಪ್ರತೀ ವರ್ಷಕ್ಕೊಮ್ಮೆ ಜ್ಞಾನವು ಡಬಲ್ ಆಯಿತು. ಈಗ ಪ್ರತೀ ದಿನವೂ ಜಗತ್ತಿನ ಜ್ಞಾನವು ಡಬ್ಬಲ್ ಆಗ್ತಾ ಇದೆ ಎಂದರೆ ನೀವು, ನಾವು ನಂಬಲೇಬೇಕು. ಇದಕ್ಕೆ ಕಾರಣ ಮಾನವನ ಜ್ಞಾನತೃಷೆ ಮತ್ತು ಮೆದುಳಿನ ಅದ್ಭುತವಾದ ವಿಕಾಸ.

9. ಮೌಢ್ಯ ಮತ್ತು ಅಂಧಶೃದ್ಧೆಗಳ ವಿರುದ್ಧ ಹೋರಾಟ

ಶತಮಾನಗಳಿಂದ ಜಗತ್ತನ್ನು ಆವರಿಸಿದ್ದ ಮೌಢ್ಯಗಳ ವಿರುದ್ಧ ವಿಜ್ಞಾನವು ಭಾರಿ ಹೋರಾಟವನ್ನು ಆರಂಭ ಮಾಡಿತು. ಅದುವರೆಗಿನ ನಂಬಿಕೆಗಳಿಗೆ ಸಾಕ್ಷಿ ಹುಡುಕುತ್ತ ಮುಂದೆ ಹೋದಂತೆ ಎಷ್ಟೋ ನಂಬಿಕೆಗಳಿಗೆ ಆಧಾರ ಸಿಗದೆ ಅವುಗಳು ಮೌಢ್ಯಗಳಾಗಿ ಬದಲಾದವು. ಉದಾಹರಣೆಗೆ ಸಹಸ್ರಮಾನಗಳಿಂದ ಜಗತ್ತನ್ನು ಆಳುತ್ತಿದ್ದ ಭೂಮಿಯೇ ಸೌರವ್ಯೂಹದ ಕೇಂದ್ರ ಎಂಬ ನಂಬಿಕೆ ಸುಳ್ಳು ಎಂದು ಸಾಬೀತಾದಾಗ ಸೂರ್ಯನೇ ಸೌರವ್ಯೂಹದ ಕೇಂದ್ರ ಎಂಬ ಸಿದ್ಧಾಂತವು ಮುನ್ನೆಲೆಗೆ ಬಂದಿತು. ಮುಂದೆ ಗೊತ್ತಿಲ್ಲ!

ಇದನ್ನೂ ಓದಿ : Raja Marga Column : ಗಝಲ್ ಕೀ ಮಿಟಾಸ್ ಪಂಕಜ್ ಉಧಾಸ್ ; ಹಾಡು ನಿಲ್ಲಿಸಿದ ಗಝಲ್‌ ಸಾಮ್ರಾಟ

Raja Marga Column National science day Blis

10. ಆತ್ಮಾನಂದದ ಅನ್ವೇಷಣೆ (Invention of BLISS)

ವೈಜ್ಞಾನಿಕ ಸಂಶೋಧನೆಗಳು ಮಾನವನ ಬದುಕನ್ನು ಹೆಚ್ಚು ಸಂಭ್ರಮ ಮತ್ತು ಸಂತಸದಾಯಕವಾಗಿ ಮಾಡಿವೆ ಎನ್ನುವುದು ನಮ್ಮ ಕಣ್ಣ ಮುಂದಿದೆ. ಮಹಾಮಾರಿ ರೋಗಗಳಿಗೆ ಲಸಿಕೆ ಕಂಡು ಹಿಡಿದದ್ದು, ಮಾನವನ
ತ್ರಾಸದಾಯಕವಾದ ಕೆಲಸಗಳನ್ನು ನೂರಾರು ಯಂತ್ರಗಳ ಮೂಲಕ ಆರಾಮದಾಯಕ ಮಾಡಿದ್ದು ವಿಜ್ಞಾನದ ಕೊಡುಗೆ ಹೌದಲ್ಲ. ಆದ್ದರಿಂದ ನಮ್ಮೊಳಗಿನ ಸಂತೋಷವನ್ನು ಹುಡುಕುವುದೇ ವೈಜ್ಞಾನಿಕ ಸಂಶೋಧನೆಯ ಉದ್ದೇಶ.

ನಮ್ಮ ಮುಂದಿನ ಜನಾಂಗವಾದ ಮಕ್ಕಳು ಈ ವೈಜ್ಞಾನಿಕ ಮನೋಭಾವವನ್ನು ಮೈಗೂಡಿಸಲಿ ಅನ್ನುವುದೇ ಇಂದಿನ ವಿಜ್ಞಾನ ದಿನದ ಸಂಕಲ್ಪ.

Continue Reading

ಸ್ಫೂರ್ತಿ ಕತೆ

Raja Marga Column : ಗಝಲ್ ಕೀ ಮಿಟಾಸ್ ಪಂಕಜ್ ಉಧಾಸ್ ; ಹಾಡು ನಿಲ್ಲಿಸಿದ ಗಝಲ್‌ ಸಾಮ್ರಾಟ

Raja Marga Column : ಪಂಕಜ್‌ ಉಧಾಸ್‌ ಎಂಬ ಮಾಧುರ್ಯ ಧ್ವನಿ ನಿಂತು ಹೋಗಿದೆ. ಪ್ರೇಮಿಗಳಿಗೆ ಉತ್ತೇಜನ ನೀಡುವ ಮತ್ತು ವಿರಹಿಗಳಿಗೆ ಸಾಂತ್ವನ ನೀಡುವ ಶಕ್ತಿ ಹೊಂದಿದ್ದ ಹಾಡುಗಳ ಅಮರ ಗಾಯಕ ಪಂಕಜ್‌ ಉಧಾಸ್‌ ಇನ್ನಿಲ್ಲ.

VISTARANEWS.COM


on

Raja Marga Column Pankaj Udhas no more
Koo

Raja Marga Column : ಭಾರತದಲ್ಲಿ ಗಝಲ್ ದೊರೆ (Gazhal King) ಎಂದು ಕರೆಸಿಕೊಂಡವರು ಜಗಜಿತ್ ಸಿಂಗ್. ಆದರೆ ಗಝಲ್ ಜಗತ್ತಿನಲ್ಲಿ ಮಾಧುರ್ಯದ ಅಲೆಗಳ ಮೂಲಕ ಗೆದ್ದವರು ಪಂಕಜ್ ಉಧಾಸ್ (Pankaj Udhas). ಅವರು ಸಿನಿಮಾ ಹಾಡುಗಳನ್ನು ಹೆಚ್ಚು ಹಾಡಿದ್ದು ಇಲ್ಲ (Indian playback singer). ಆದರೆ ಹಾಡಿದ್ದೆಲ್ಲವೂ ಸೂಪರ್ ಹಿಟ್ ಆಗಿವೆ ಅನ್ನುವುದು ನಿಜಕ್ಕೂ ಗ್ರೇಟ್. ಅಂತಹ ಪಂಕಜ್ ಉಧಾಸ್ ಈ ಸೋಮವಾರ ನಮ್ಮನ್ನು ಆಗಲಿದ್ದಾರೆ. 72 ವರ್ಷದ ಅವರ ನಿರ್ಗಮನದಿಂದ ಗಝಲ್ ಜಗತ್ತಿನಲ್ಲಿ ಒಂದು ದೊಡ್ಡ ಶೂನ್ಯ ಕ್ರಿಯೇಟ್ ಆಗಿದೆ. ಆ ಸ್ಥಾನವನ್ನು ತುಂಬುವ ಇನ್ನೊಬ್ಬ ಗಝಲ್ ಗಾಯಕ ಸದ್ಯಕ್ಕಿಲ್ಲ ಅನ್ನುವುದೇ ಒಂದು ವಿಷಾದ ಯೋಗ.

Raja Marga Column Pankaj Udhas

Raja Marga Column : ಸಂಗೀತದ ಪರಂಪರೆಯಿಂದ ಬಂದವರು ಪಂಕಜ್

ಗುಜರಾತ್ ರಾಜ್ಯದ ಜೇಟ್ಪೂರ ಎಂಬ ನಗರದಿಂದ ಬಂದ ಪಂಕಜ್ ಅತ್ಯಂತ ಶ್ರೀಮಂತ ಕುಟುಂಬದ ಹಿನ್ನೆಲೆಯವರು. ಅವರ ಅಜ್ಜ ಭಾವನಗರ ರಾಜ್ಯದ ದಿವಾನರಾಗಿ ಸೇವೆ ಸಲ್ಲಿಸಿದವರು. ಪಂಕಜ್ ಅವರ ಅಣ್ಣಂದಿರಾದ ಮನಹರ್ ಉಧಾಸ್ ಮತ್ತು ನಿರ್ಮಲ್ ಉಧಾಸ್ ಕೂಡ ಗಾಯಕರಾಗಿ ಜನಪ್ರಿಯರಾಗಿದ್ದವರು. ಮುಂದೆ ಮುಂಬೈಗೆ ಬಂದ ಆ ಕುಟುಂಬ ಸಂಗೀತಕ್ಕೆ ತನ್ನನ್ನು ಸಮರ್ಪಣೆ ಮಾಡಿಕೊಂಡಿತು. ಪಂಕಜ್ ಗ್ವಾಲಿಯರ್ ಘರಾಣೆಯ ಗುರುಗಳಿಂದ ಹಿಂದೂಸ್ಥಾನಿ ಸಂಗೀತವನ್ನು ಕಲಿತರು. ಅದರ ಜೊತೆಗೆ ಹಾರ್ಮೋನಿಯಂ, ವಯಲಿನ್, ತಬಲಾ, ಗಿಟಾರ್, ಪಿಯಾನೋ ಎಲ್ಲವನ್ನೂ ಕಲಿತು ಒಬ್ಬ ಪರಿಪೂರ್ಣ ಸಂಗೀತ ಕಲಾವಿದರಾದರು.

ಇದನ್ನೂ ಓದಿ : Raja Marga Column : ಬದುಕಿನ ಅಗ್ನಿ ಪರೀಕ್ಷೆಗಳೇ ನಮ್ಮನ್ನು ಸ್ಟ್ರಾಂಗ್‌ ಮಾಡೋ ಶಕ್ತಿಗಳು

ನೂರಾರು ಸಂಗೀತ ಆಲ್ಬಮ್‌ ಗಳು

1980ರಲ್ಲಿ ಅವರು ಹೊರತಂದ ಆಹತ್ ಎಂಬ ಆಲ್ಬಂ ಮೂಲಕ ಅವರು ಭಾರೀ ಕೀರ್ತಿ ಪಡೆದರು. ಅವರ ಹೆಚ್ಚಿನ ಹಾಡುಗಳಿಗೆ ಅವರೇ ಸಂಗೀತ ಸಂಯೋಜನೆ ಮಾಡಿದರು. ಅವರ ಧ್ವನಿಯಲ್ಲಿ ವೈವಿಧ್ಯತೆ ಕಡಿಮೆ ಇದ್ದರೂ ಒಂದು ಮಾಧುರ್ಯದ ಸಿಗ್ನೇಚರ್ ಇತ್ತು. ಪ್ರೇಮಿಗಳಿಗೆ ಉತ್ತೇಜನ ನೀಡುವ ಮತ್ತು ವಿರಹಿಗಳಿಗೆ ಸಾಂತ್ವನ ನೀಡುವ ಶಕ್ತಿ ಅವರ ಹಾಡುಗಳಿಗೆ ಇದ್ದವು. ಮುಂದೆ ಅವರು ನೂರಾರು ಆಲ್ಬಂ ಹೊರತಂದರು. ನಶಾ, ಮುಕರಾರ್, ತರನ್ನಮ್, ನಯಾಬ್, ಖಜಾನಾ, ಶಗುಫ್ತ, ಆಶಿಯಾನ ಅವರ ಅತ್ಯಂತ ಜನಪ್ರಿಯ ಸಂಗೀತ ಆಲ್ಬಂಗಳು. ಅವರು ಗಝಲ್ ಮತ್ತು ಪ್ರೇಮಗೀತೆ ಎರಡನ್ನೂ ತುಂಬಾ ಅದ್ಭುತವಾಗಿ ಹಾಡಿದರು. ದೇಶ ವಿದೇಶಗಳಲ್ಲಿ ಸ್ಟೇಜ್ ಶೋಗಳನ್ನು ನೀಡಿದರು. ಒಂದು ವರ್ಷ ಅಮೆರಿಕದಲ್ಲಿ ಇದ್ದುಕೊಂಡು ಸಾವಿರಾರು ಅಭಿಮಾನಿಗಳನ್ನು ಪಡೆದರು.

ಚಿಟ್ಟಿ ಆಯಿ ಹೈ ಆಯಿ ಹೈ

1983ರಲ್ಲೀ ಹೊರಬಂದ ನಾಮ್ ಸಿನಿಮಾದಲ್ಲಿ ಅವರು ಹಾಡಿದ ‘ಚಿಟ್ಟಿ ಆಯಿ ಹೈ’ ಹಾಡು ಸೂಪರ್ ಹಿಟ್ ಆಯಿತು. ಅದು ಎವರ್ ಗ್ರೀನ್ ಹಾಡು. ಅದರ ಬೆನ್ನಿಗೆ ಬಂದ ಬಾಜಿಗರ್ ಸಿನಿಮಾದ ‘ಚೂಪಾನಾ ಭೀ ನಹೀಂ ಆತಾ’ ಹಾಡು, ಮೈನ್ ಖಿಲಾಡಿ ತೂ ಅನಾರಿ ಸಿನಿಮಾದ ‘ಹಾತೋ ಪೇ ತೇರಾ ನಾಮ್’ ಮಾಧುರ್ಯದ ಶಿಖರವಾದ ಹಾಡುಗಳು. ಸಾಜನ್ ಸಿನಿಮಾದ ‘ಜಿಯೆ ತೋ ಜಿಯೇ ಕೈಸೇ ‘ ಹಾಡು ಮತ್ತು ಮೋಹರಾ ಸಿನಿಮಾದ ‘ ನಾ ಕಝರೆ ಕೀ ಧಾರ್ ‘ ಘಾಯಲ್ ಸಿನಿಮಾದ ‘ಮಾಹಿಯ ತೇರಿ ಕಸಮ್ ‘ ಹಾಡುಗಳಿಗೆ ಶರಣಾಗದ ಸಂಗೀತ ಪ್ರೇಮಿಗಳೇ ಇಲ್ಲ. ಸಿನಿಮಾಗಳಲ್ಲಿ ಅವರು ಹಾಡಿದ್ದು ಕಡಿಮೆ. ಆದರೆ ಅಷ್ಟೂ ಹಾಡುಗಳು ಸೂಪರ್ ಹಿಟ್ ಆದವು ಎಂಬಲ್ಲಿಗೆ ಅವರು ಮಾಧುರ್ಯದ ಅಲೆಗಳನ್ನು ಸೃಷ್ಟಿ ಮಾಡಿದರು.

Raja Marga Column Pankaj udhas

ಚಾಂದಿನಿ ರಾತ್ ಮೇ, ಔರ್ ಆಹಿಸ್ಥಾ ಕೀಜಿಯೆ, ಏಕ್ ತರಫ್ ಉಸ್ಕ ಘರ್, ತೋಡಿ ತೋಡಿ ಪಿಯಾ ಕರೇ ಅವರ ಅತ್ಯಂತ ಜನಪ್ರಿಯ ಹಾಡುಗಳು. ಅವರು ಹಾರ್ಮೋನಿಯಂ ನುಡಿಸುತ್ತಾ ವೇದಿಕೆಗಳಲ್ಲಿ ಹಾಡಲು ತೊಡಗಿದರೆ ಪ್ರೇಕ್ಷಕರು ಕಣ್ಣು ಮುಚ್ಚಿ ಭಾವತೀವ್ರತೆಯ ಅನುಭವ ಮಾಡುತ್ತಿದ್ದರು.

ಅವರು ಎಲ್ಲ ವೇದಿಕೆಗಳಲ್ಲಿ ಚಿಟ್ಟಿ ಆಯಿ ಹೈ ಮತ್ತು ನಾ ಕಜರೆ ಕೀ ಧಾರ್ ಹಾಡುಗಳನ್ನು ಹಾಡದೆ ಅಭಿಮಾನಿಗಳು ಅವರನ್ನು ಕೆಳಗೆ ಇಳಿಯಲು ಬಿಡುತ್ತಿರಲಿಲ್ಲ!

ಇದನ್ನೂ ಓದಿ : Raja Marga Column : ನಾವು ಬೆಳೆಯಬೇಕಾಗಿರುವುದು ಹೊರಗಿನಿಂದ ಅಲ್ಲ, ಒಳಗಿನಿಂದ! ಇಲ್ಲಿದೆ 12 ಸೂತ್ರ

ಕನ್ನಡದಲ್ಲಿಯೂ ಹಾಡಿದರು

ಭಾರತದ ಹೆಚ್ಚಿನ ಭಾಷೆಗಳಲ್ಲಿ ಅವರು ಹಾಡಿದ್ದಾರೆ. ಅವರ ಬಂಗಾಲಿ ಭಾಷೆಯ ಆಲ್ಬಂ ತುಂಬಾ ಜನಪ್ರಿಯ ಆಗಿದೆ. ಅಂತಹ ಪಂಕಜ್ ಉಧಾಸ್ ಅವರನ್ನು ‘ಸ್ಪರ್ಶ’ ಸಿನಿಮಾದ ಮೂಲಕ ಹಂಸಲೇಖ ಕನ್ನಡಕ್ಕೂ ಕರೆತಂದರು. ಅದು ಕಿಚ್ಚ ಸುದೀಪ್ ಅವರ ಮೊದಲ ಸಿನೆಮಾ ಆಗಿತ್ತು.

ಅದರಲ್ಲಿ ಅವರು ಅತ್ಯಂತ ಭಾವಪೂರ್ಣವಾಗಿ ಹಾಡಿರುವ ‘ಚಂದಕ್ಕಿಂತ ಚಂದ ನೀನೇ ಸುಂದರ’ ಮತ್ತು ‘ಬರೆಯದ ಮೌನದ ಕವಿತೆ ಹಾಡಾಯಿತುʼ ಅವರ ಮಾಧುರ್ಯದ ಸಿಗ್ನೇಚರ್ ಹಾಡುಗಳು. ಅವರು ನೂರಾರು ಸ್ಟೇಜ್ ಶೋಗಳನ್ನು ಕರ್ನಾಟಕದಲ್ಲಿಯೂ ನೀಡಿದ್ದಾರೆ. ಅವರು ತಮ್ಮ ಸಂಗೀತ ಯಾತ್ರೆಯ 25ನೆಯ ಹಾಗೂ 50ನೆಯ ವರ್ಷಗಳ ಆಚರಣೆಯನ್ನು ಹಲವು ಚಾರಿಟಿ ಶೋಗಳ ಮೂಲಕ ಮಾಡಿ ಕ್ಯಾನ್ಸರ್ ರೋಗಿಗಳಿಗೆ ನೆರವಾದದ್ದನ್ನು ಮರೆಯಲು ಸಾಧ್ಯವೇ ಇಲ್ಲ.

ಅವರಿಗೆ ಭಾರತ ಸರಕಾರದ ಪದ್ಮಶ್ರೀ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ, ಗಝಲ್ ವಿಭಾಗದಲ್ಲಿ ಸೈಗಲ್
ರಾಷ್ಟ್ರಪ್ರಶಸ್ತಿಗಳು ದೊರೆತಿವೆ. ಅಂತಹ ಸಂಗೀತ ಮಾಂತ್ರಿಕ ನಿನ್ನೆ (ಫೆಬ್ರುವರಿ 26) ನಮ್ಮನ್ನು ಅಗಲಿದ್ದಾರೆ. ಅವರಿಗೆ ನಮ್ಮ ಭಾವಪೂರ್ಣ ಶೃದ್ಧಾಂಜಲಿ.

Continue Reading
Advertisement
Doctor listens to the human lungs
ಆರೋಗ್ಯ12 mins ago

Health Tips For Lungs: ಈ ಆಹಾರ ತಿನ್ನಿ, ನಿಮ್ಮ ಶ್ವಾಸಕೋಶದ ಆರೋಗ್ಯ ಹೆಚ್ಚಿಸಿಕೊಳ್ಳಿ

kannada sign boards
ಪ್ರಮುಖ ಸುದ್ದಿ34 mins ago

ಕನ್ನಡ ನಾಮಫಲಕ ಅಳವಡಿಕೆಗೆ ಇಂದೇ ಕೊನೆಯ ದಿನ, ಇಲ್ಲದಿದ್ದರೆ ಬೀಗ ಖಚಿತ

graveyard
ಪ್ರಮುಖ ಸುದ್ದಿ42 mins ago

ದಶಮುಖ ಅಂಕಣ: ಮಸಣದಲ್ಲಿ ಕೆಲವು ಕ್ಷಣ

KAS Recruitment 2024 invited for 384 KAS posts Apply from March 4
ಉದ್ಯೋಗ42 mins ago

KAS Recruitment 2024: 384 ಕೆಎಎಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ; ಮಾರ್ಚ್‌ 4ರಿಂದಲೇ ಅರ್ಜಿ ಸಲ್ಲಿಸಿ

Raja Marga Column depressed
ಸ್ಫೂರ್ತಿ ಕತೆ52 mins ago

Raja Marga Column : ಅಪವಾದ ಎಲ್ಲರಿಗುಂಟು ಈ ಲೋಕದ ದೃಷ್ಟಿಯಲಿ; ಗೆಲ್ಲೋದು ಹೇಗೆ?

slim woman good health digestion
ಆರೋಗ್ಯ1 hour ago

Health Tips For Digestion: ಹೊಟ್ಟೆಬಿರಿಯುವಂತೆ ಉಂಡ ಬಳಿಕ ಜೀರ್ಣಿಸಿಕೊಳ್ಳುವುದು ಹೇಗೆ? ಇಲ್ಲಿದೆ ಸರಳೋಪಾಯ!

Karnataka Weather Rain for first week of March
ಕರ್ನಾಟಕ2 hours ago

Karnataka Weather : ಕರ್ನಾಟಕದಲ್ಲಿ ಹೆಚ್ಚುತ್ತಿದೆ ಸೆಕೆ; ಮಾರ್ಚ್‌ ಮೊದಲ ವಾರಕ್ಕೆ ಮಳೆ?

Electricity Bil
ಸಂಪಾದಕೀಯ2 hours ago

ವಿಸ್ತಾರ ಸಂಪಾದಕೀಯ: ವಿದ್ಯುತ್‌ ದರ ಇಳಿಕೆ ಶ್ಲಾಘನೀಯ ಕ್ರಮ

dina bhavishya read your daily horoscope predictions for February 28 2024
ಭವಿಷ್ಯ3 hours ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Jain (Deemed-to-be University)
ಬೆಂಗಳೂರು8 hours ago

ಜೈನ್ ‘ಸ್ಕೂಲ್ ಆಫ್ ಸೈನ್ಸಸ್‌’ನಲ್ಲಿ ಯಶಸ್ವಿಯಾಗಿ ನೆರವೇರಿದ SciCon-2024; 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for February 28 2024
ಭವಿಷ್ಯ3 hours ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ2 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

Ghar Wapsi ST Somashekhar and Shivaram Hebbar to quit BJP
ರಾಜಕೀಯ2 days ago

Ghar Wapsi: ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಬಿಜೆಪಿಗೆ ಗುಡ್‌ ಬೈ? ಇಂದೇ ರಾಜೀನಾಮೆ?

Rajyasabha Elections 42 Congress MLAs contacted by JDS candidate says DK Shivakumar
ರಾಜಕೀಯ2 days ago

Rajya sabha Election: ಕಾಂಗ್ರೆಸ್‌ನ 42 ಶಾಸಕರನ್ನು ಸಂಪರ್ಕ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್

read your daily horoscope predictions for february 27 2024
ಭವಿಷ್ಯ2 days ago

Dina Bhavishya : ಇಂದು ಆಪ್ತರಿಂದಲೇ ಈ ರಾಶಿಯವರಿಗೆ ಕಂಟಕ!

Crowd mistakes Arabic words as Quran Verses on the kurta and Pak Women mobbed
ವಿದೇಶ3 days ago

Pak Woman: ಕುರ್ತಾ ಮೇಲಿನ ಅರೇಬಿಕ್ ಪದಗಳನ್ನು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಯತ್ನ

read your daily horoscope predictions for february 26 2024
ಭವಿಷ್ಯ3 days ago

Dina Bhavishya : ಈ ಮೂರು ರಾಶಿಯವರು ಇಂದು ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ಆಪ್ತರೊಂದಿಗೆ ಗೌಪ್ಯ ವಿಷಯವನ್ನು ಹೇಳುವಾಗ ಎಚ್ಚರ!

Video Viral Student falls under school bus He escaped with minor injuries
ವೈರಲ್ ನ್ಯೂಸ್5 days ago

Video Viral: ಸ್ಕೂಲ್ ಬಸ್‌ನಡಿ ಬಿದ್ದ ವಿದ್ಯಾರ್ಥಿ; ಪಾರಾಗಿದ್ದೇ ಪವಾಡ!

ಟ್ರೆಂಡಿಂಗ್‌