ನವದೆಹಲಿ: ಪಬ್ಜಿ ಆನ್‌ಲೈನ್ ಗೇಮ್ ಆಡುವಾಗ ಪರಿಚಯವಾದ ಗ್ರೇಟರ್ ನೊಯ್ಡಾದ ಸಚಿನ್ ಮೀನಾ ಎಂಬ ಯುವಕನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿರುವ ಸೀಮಾ ಹೈದರ್ (Seema Haider) ಪ್ರಕರಣವು (Cross Border Love) ದೇಶಾದ್ಯಂತ ಸುದ್ದಿಯಾದ ಬೆನ್ನಲ್ಲೇ, ಭಾರತದ ಮಹಿಳೆಯೊಬ್ಬರು ಪ್ರಿಯತಮನನ್ನು ಭೇಟಿಯಾಗಲು ರಾಜಸ್ಥಾನದಿಂದ ಪಾಕಿಸ್ತಾನಕ್ಕೆ ತೆರಳಿದ್ದಾರೆ.
ಹೌದು, ರಾಜಸ್ಥಾನದ ಭಿವಾಡಿ ಜಿಲ್ಲೆಯ ಅಂಜು ಎಂಬ ಮಹಿಳೆಯು ಫೇಸ್‌ಬುಕ್‌ನಲ್ಲಿ ಪರಿಚಯವಾದ ಗೆಳೆಯನನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಿದ್ದಾರೆ. ಇಬ್ಬರೂ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿದೆ. ಹಾಗಾಗಿ, ಆತನನ್ನು ಭೇಟಿಯಾಗಲು ಮಹಿಳೆಯು ಗಡಿ ದಾಟಿ ನೆರೆ ರಾಷ್ಟ್ರಕ್ಕೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಪಾಕಿಸ್ತಾನದಲ್ಲಿ ಮಹಿಳೆಯನ್ನು ಬಂಧಿಸಿ, ದಾಖಲೆ ಪರಿಶೀಲನೆ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
A married Indian woman from Rajasthan’s Bhiwadi district has travelled all the way to Pakistan's northwestern Khyber Pakhtunkhwa province to meet a man she befriended and fell in love with on Facebook.#loveislandaftersun #Facebook #Love pic.twitter.com/k2wKhlt0M3
— Divyanshu Bhatt (@MRBHATTG) July 24, 2023
ಅಂಜು ಅವರಿಗೆ ಈಗಾಗಲೇ ಮದುವೆಯಾಗಿದ್ದು, ಪತಿ ಅರವಿಂದ್ ಜತೆ ಕೆಲ ದಿನಗಳ ಹಿಂದೆ ಜೈಪುರಕ್ಕೆ ತೆರಳಿದ್ದರು. ಇದೇ ವೇಳೆ ಅವರು ಪಾಕಿಸ್ತಾನಕ್ಕೆ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. “ವಾಟ್ಸ್‌ಆ್ಯಪ್‌ನಲ್ಲಿ ನನ್ನ ಪತ್ನಿ ಸಂಪರ್ಕದಲ್ಲಿದ್ದಾಳೆ. ಆಕೆ ಕಳೆದ ಮಂಗಳವಾರ (ಜುಲೈ 18) ಪಾಕಿಸ್ತಾನಕ್ಕೆ ತೆರಳಿದ್ದು, ಭಾನುವಾರ (July 23) ಸಂಜೆ 4 ಗಂಟೆಗೆ ಕರೆ ಮಾಡಿದ್ದಾಳೆ. ಲಾಹೋರ್‌ನಲ್ಲಿದ್ದೇನೆ, ಎರಡು-ಮೂರು ದಿನದಲ್ಲಿ ವಾಪಸ್ ಬರುತ್ತೇನೆ ಎಂಬುದಾಗಿ ಹೇಳಿದ್ದಾಳೆ” ಎಂದು ಪತಿ ಅರವಿಂದ್ ತಿಳಿಸಿರುವ ಕುರಿತು ವರದಿಯಾಗಿದೆ.
ಇದನ್ನೂ ಓದಿ: Seema Haider: ಪೌರತ್ವಕ್ಕಾಗಿ ನಟ ಅಕ್ಷಯ್ ಕುಮಾರ್ ಉದಾಹರಣೆ ಕೊಟ್ಟ ಸೀಮಾ; ಲೈಲಾ-ಮಜ್ನು ಲವ್ ಎಂದ ಮಹಿಳೆ
ಅಂಜು-ನಸ್ರುಲ್ಲಾ ಪ್ರೇಮಕತೆ
ಅಂಜು ಹಾಗೂ ನಸ್ರುಲ್ಲಾ ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದಾರೆ. ನಸ್ರುಲ್ಲಾ ಮೆಡಿಕಲ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾನೆ. ಇಬ್ಬರ ಪರಿಚಯ ಪ್ರೇಮಕ್ಕೆ ತಿರುಗಿದ್ದು, ಈಗ ಅಂಜು ಗಡಿ ದಾಟಿ ಹೋಗಿದ್ದಾರೆ. 2020ರಲ್ಲೇ ಅಂಜು ಪಾಸ್‌ಪಾರ್ಟ್ ಮಾಡಿಸಿದ್ದರು. ಗಂಡ ಏಕೆ ಎಂದು ಕೇಳಿದರೆ, ವಿದೇಶದಲ್ಲಿ ಕೆಲಸ ಹುಡುಕುತ್ತೇನೆ ಎಂದು ಹೇಳಿದ್ದರು. ಕೆಲ ದಿನಗಳ ಹಿಂದೆ ಪರಾರಿಯಾಗಿ ಅವರು ಅಚ್ಚರಿ ಮೂಡಿಸಿದ್ದಾರೆ. ಮತ್ತೊಂದೆಡೆ, ಪ್ರೀತಿ ಅರಸಿ ಭಾರತಕ್ಕೆ ಬಂದಿರುವ ಸೀಮಾ ಹೈದರ್ ಅವರು ಪಾಕಿಸ್ತಾನ ಗೂಢಚಾರಿಯೇ ಎಂಬ ಕುರಿತು ತನಿಖೆ ನಡೆಯುತ್ತಿದೆ.