Site icon Vistara News

ಭಾರತದಲ್ಲಿ ಬಡತನ 12% ಇಳಿಕೆ: ವಿಶ್ವಬ್ಯಾಂಕ್‌ ವರದಿ

world bank

world bank

ನವದೆಹಲಿ: ಭಾರತದಲ್ಲಿ ಬಡತನದ ಪ್ರಮಾಣದ ಬಗ್ಗೆ ವಿಶ್ವಬ್ಯಾಂಕ್‌ ಸಂಶೋಧನೆ ನಡೆಸಿ ವರದಿ ಬಿಡುಗಡೆ ಮಾಡಿದ್ದು, 2011-2019ರ ಅವಧಿಯಲ್ಲಿ ಸುಮಾರು 12.3%ರಷ್ಟು ಕುಸಿದಿದೆ ಎಂದು ಹೇಳಿದೆ. ಈ ಹಿಂದೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಕೂಡ ಭಾರತದಲ್ಲಿ ಕಡುಬಡತನ ಬಹತೇಕ ನಿರ್ಮೂಲನೆಯಾಗಿದೆ, ಇನ್ನೂ ಆಗುತ್ತಿದೆ ಎಂದು ಹೇಳಿತ್ತು. ಕಳೆದ 40 ವರ್ಷಗಳಲ್ಲೇ ಈಗ ಕನಿಷ್ಠಕ್ಕೆ ಕುಸಿದಿದೆ ಎಂದು ತಿಳಿಸಿತ್ತು. ಈಗ ವಿಶ್ವಬ್ಯಾಂಕ್‌ ಕೂಡ ಭಾರತದಲ್ಲಿ ಕಡುಬಡತನ ಕುಸಿದಿರುವ ಬಗ್ಗ ವರದಿ ಮಾಡಿದೆ. ಈದು ಹಣಕಾಸು ವಿಚಾರವಾದರೂ ರಾಜಕೀಯವಾಗಿ ಭಾರತದಲ್ಲಿ ಪರಿಣಾಮ ಬೀರುವ ಅಂದಾಜಿದೆ.

ನಗರಗಳಿಗಿಂತ ಹಳ್ಳಿಗಳಲ್ಲೇ ಬಡತನ ಕುಸಿತ:

ಭಾರತದ ನಗರಗಳಿಗಿಂತ ಹಳ್ಳಿಗಳಲ್ಲೇ ಬಡತನದ ಪ್ರಮಾಣ ಇಳಿಕೆಯಾಗಿದೆ ಎಂದು ವಿಶ್ವಬ್ಯಾಂಕ್‌ ಸಂಶೋಧನಾ ವರದಿ ತಿಳಿಸಿದೆ. 2011ರ ವರದಿಯಂತೆ ಭಾರತದಲ್ಲಿ ಕಡುಬಡತನದ ಪ್ರಮಾಣ 22.5% ಇತ್ತು. ಆದರೆ, ಕಳೆದ ಒಂದು ದಶಕದಲ್ಲಿ ಸುಮಾರು 12.3% ಕುಸಿದಿದ್ದು ಈಗ ದೇಶದಲ್ಲಿ ಕಡುಬಡತನದ ಪ್ರಮಾಣ 10.2 ಇದೆ ಎಂದು ವರದಿಯಾಗಿದೆ. ಆದರೆ, ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ನಗರ ಪ್ರದೇಶಗಳಲ್ಲಿ ಬಡತನದ ಪ್ರಮಾಣ 7.9% ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಬಡತನದ ಪ್ರಮಾಣ 14.7 ಇದೆ ಎಂದು ವರದಿ ಹೇಳಿದೆ.

ಈಗಿನ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಬಡತನ ಇಳಿಕೆಯಾಗಿದ್ದರೂ ಈ ಹಿಂದೆ ಅಂದುಕೊಂಡಷ್ಟು ಇಳಿಕೆಯಾಗಿಲ್ಲ ಎಂದು ವರದಿ ಹೇಳಿದೆ.

ವಿಶ್ವಬ್ಯಾಂಕ್‌ನ ಇಬ್ಬರು ಅರ್ಥಶಾಸ್ತ್ರಜ್ಞನರಾದ ಸುತೀರ್ಥ ಸಿನ್ಹಾ ರಾಯ್‌ ಹಾಗೂ ರಾಯ್‌ ವ್ಯಾನ್‌ಡೇರ್ ವೀಡ್‌ ಈ ವರದಿ ಸಿದ್ಧಪಡಿಸಿದ್ದಾರೆ. ಭಾರತದಲ್ಲಿ ಕಳೆದ ದಶಕದಲ್ಲಿ ಸಣ್ಣ ಕೃಷಿಕರ ನೈಜ ಆದಾಯ 10% ಹೆಚ್ಚಾಗಿದೆ. ಹಾಗೂ ದೊಡ್ಡ ಮಟ್ಟದ ಕೃಷಿಕರ ಆದಾಯ 2% ಮಾತ್ರ ಹೆಚ್ಚಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಹೆಚ್ಚಿನ ಓದಿಗಾಗಿ: Explainer: ಉಳಿತಾಯ ಯಥಾಸ್ಥಿತಿ, ಖರ್ಚು ಏರಿಕೆಗಿಲ್ಲ ಬ್ರೇಕ್:‌ ಹಣಕಾಸು ನೀತಿ ಹೇಳಿದ್ದೇನು?

Exit mobile version