Site icon Vistara News

Explainer: ಕಾಂಗ್ರೆಸ್‌ ಉಳಿಸೋಕೆ ಪ್ರಶಾಂತ್‌ ಕಿಶೋರ್‌ ಪ್ಲಾನ್‌ ಏನು?

Sonia Gandhi And Rahul Gandhi

ಕಾಂಗ್ರೆಸ್‌ ಒಂದು ರೀತಿಯಲ್ಲಿ ಈಗ ದುಗುಡ ಕವಿದ ಮನೆ. ಬಲಿಷ್ಠವಾಗಿ ಉಳಿದುಕೊಂಡಿದ್ದ ಪಂಜಾಬ್‌ ಕೂಡ ಕೈ ತಪ್ಪಿ ಹೋದ ಮೇಲೆ, ಪಕ್ಷದೊಳಗೆ ಆಂತರಿಕ ಅವಲೋಕನ ಆರಂಭವಾಗಿದೆ. ಪಕ್ಷದ ನೇತೃತ್ವ ವಹಿಸಿರುವ ಸೋನಿಯಾ ಗಾಂಧಿ, ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ ಅವರನ್ನು ಕರೆತಂದಿದ್ದಾರೆ. 2024ರ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವುದು ಹೇಗೆ ಎಂಬ ಬಗ್ಗೆ ವಿವರವಾದ ತಂತ್ರಗಾರಿಕೆ ಕೊಡುವುದು ಪಿಕೆ ಸದ್ಯದ ಡ್ಯೂಟಿ.

ಆದರೆ ಪ್ರಶಾಂತ್ ಕಿಶೋರ್ ಕಾರ್ಯತಂತ್ರ ಏನು? ಹಿರಿಯ ಪತ್ರಕರ್ತ ಅರುಣ್ ಶೌರಿ ಹೇಳುವಂತೆ, ಇದಕ್ಕಾಗಿ ರಹಸ್ಯ ದಾಖಲೆಗಳನ್ನೇನೂ ಹುಡುಕಾಡಬೇಕಿಲ್ಲ. ಈ ಹಿಂದಿನ ಇಂಟರ್‌ವ್ಯೂಗಳಲ್ಲಿ ಪಿಕೆ ಏನು ಹೇಳಿದ್ದಾರೆ ಎಂಬುದನ್ನು ಅನ್ವೇಷಿಸಿದರೆ ಸಾಕು. ಪಿಕೆ ಕಳೆದ ಮೂರು ತಿಂಗಳಿನಿಂದ ಹಲವಾರು ಸಂದರ್ಶನಗಳಲ್ಲಿ ಬಿಜೆಪಿಯನ್ನು ಸೋಲಿಸುವುದು ಅಥವಾ ಕಾಂಗ್ರೆಸ್ ಅನ್ನು ಪುನರುಜ್ಜೀವನಗೊಳಿಸುವುದು ಹೇಗೆ ಎಂಬುದರ ಕುರಿತು ಸಾಕಷ್ಟು ಸುಳಿವು ನೀಡಿದ್ದಾರೆ.

ಕಾರ್ಯತಂತ್ರದ ವಿಶಾಲ ರೂಪರೇಖೆಯನ್ನು ನೀಡಿದ್ದಾರೆ. ಮೂಲಭೂತವಾಗಿ ಪಿಕೆ ʼ4M’ ಸೂತ್ರವನ್ನು ಹೇಳುತ್ತಾರೆ- ಮೆಸೇಜ್‌ (ಸಂದೇಶ), ಮೆಸೆಂಜರ್‌ (ಸಂದೇಶವಾಹಕ), ಮೆಶಿನರಿ (ಉಪಕರಣಗಳು) ಮತ್ತು ಮೆಕ್ಯಾನಿಕ್ಸ್‌ (ಕಾರ್ಯವೈಖರಿ).

ಮೆಸೇಜ್‌ ಏನು?

ಬಿಜೆಪಿ ಯಾಕೆ ಸಫಲ ಆಗುತ್ತಿದೆ ಅನ್ನುವುದನ್ನು ಮೊದಲು ನೋಡಬೇಕು. ಅದರ ಯಶಸ್ಸಿನ ಹಿನ್ನೆಲೆಯಲ್ಲಿ ಮೂರು ಅಂಶಗಳಿವೆ- ಹಿಂದುತ್ವ, ರಾಷ್ಟ್ರೀಯತಾವಾದ ಮತ್ತು ಕಲ್ಯಾಣ ಕಾರ್ಯಗಳು. ಪಿಕೆ ಹೇಳುವ ಪ್ರಕಾರ ಎಲ್ಲ ಹಿಂದೂಗಳೂ ಬಿಜೆಪಿಗೆ ಮತ ಹಾಕಿಲ್ಲ. ಸುಮಾರು 50- 55% ಹಿಂದೂಗಳು ಹಾಕಿರಬಹುದು. ಉಳಿದವರಲ್ಲಿ ಲಿಬರಲ್‌ ಎನ್ನಿಸಿಕೊಂಡವರು ಇದ್ದಾರೆ. ಹೀಗಾಗಿ ಹಿಂದುತ್ವ ನೂರಕ್ಕೆ ನೂರು ಯಶಸ್ವಿ ಅಲ್ಲ. ಇವರನ್ನು ಕಾಂಗ್ರೆಸ್‌ ಗಳಿಸಿಕೊಳ್ಳಬೇಕು.

ಇನ್ನು ರಾಷ್ಟ್ರೀಯತಾವಾದ. ಸರ್ದಾರ್‌ ಪಟೇಲ್‌ ಅವರಂಥ ನಾಯಕನನ್ನು ಕಾಂಗ್ರೆಸ್‌, ಬಿಜೆಪಿಗೆ ಯಾಕೆ ಬಿಟ್ಟುಕೊಟ್ಟಿತು? ನೆಹರೂ ಅವರನ್ನು ಎಷ್ಟು ಕಾಂಗ್ರೆಸಿಗರು ಸಮರ್ಥಿಸಿಕೊಳ್ಳುತ್ತಾರೆ? ಯಾಕೆ ಸಮರ್ಥಿಸಿಕೊಳ್ಳುತ್ತಿಲ್ಲ? ತನ್ನ ಐಕಾನ್‌ಗಳನ್ನು ಗಟ್ಟಿಯಾಗಿ ಉಳಿಸಿಕೊಳ್ಳಲು ಕಾಂಗ್ರೆಸ್‌ ಯತ್ನಿಸಬೇಕು. ಇನ್ನು ಬಿಜೆಪಿಯ ಕಲ್ಯಾಣ ಕಾರ್ಯಕ್ರಮಗಳಿಗೆ ಉತ್ತರವಾಗಿ ಕಾಂಗ್ರೆಸ್‌ ತನ್ನದೇ ಆದ, ನಂಬಲರ್ಹವಾದ ಕಾರ್ಯಕ್ರಮಗಳನ್ನು ರೂಪಿಸಬೇಕು ಹಾಗೂ ಜನಪ್ರಿಯಗೊಳಿಸಬೇಕು.

ಸಂದೇಶವಾಹಕ

ಪಿಕೆ ಹೇಳುವ ಪ್ರಕಾರ, ಬಿಜೆಪಿಯಲ್ಲಿ ಮೋದಿ ಹಾಗೂ ಅಮಿತ್‌ ಶಾ ಅವರೇ ಪಕ್ಷವನ್ನು ಪೂರ್ತಿಯಾಗಿ ಆಳುತ್ತಾರೆ. ಆದರೆ ಪಕ್ಷದ ಅಧ್ಯಕ್ಷರ ಸ್ಥಾನದಲ್ಲಿ ಜೆ.ಪಿ.ನಡ್ಡಾ ಅವರನ್ನು ಕೂರಿಸಲಾಗಿದೆ. ಅಂದರೆ, ಪಕ್ಷದಲ್ಲಿ ಎಲ್ಲರಿಗೂ ಆದ್ಯತೆಯಿದೆ, ಒಬ್ಬ ಸಾಮಾನ್ಯ ಬೂತ್‌ ಮಟ್ಟದ ಕಾರ್ಯಕರ್ತನಿಗೂ ಇಲ್ಲಿ ಸ್ಥಾನವಿದೆ ಎಂಬಂಥ ಸನ್ನಿವೇಶವನ್ನು ಸೃಷ್ಟಿಸಬೇಕು, ಕಾಣಿಸಬೇಕು. ಇದು ತಳಮಟ್ಟದಲ್ಲಿ ಬೇರೆಯದೇ ಆದ ಸಂದೇಶವನ್ನು ಕೊಡುತ್ತದೆ.

ಪ್ರಧಾನಿ ಹುದ್ದೆಗೆ ಅಭ್ಯರ್ಥಿಯೇ ಪಕ್ಷವನ್ನೂ ಮುನ್ನಡೆಸಬೇಕಿಲ್ಲ. ಇಬ್ಬರ ಕೆಲಸವೂ ಬೇರೆ ಬೇರೆ.
ಒಂದು ಸಂದರ್ಶನದಲ್ಲಿ ಪಿಕೆ ಅವರು, ʻʻನೀವು ಒಂದು ಫ್ಯಾಮಿಲಿ ನಡೆಸುವ ಪಕ್ಷವಾಗಿ ಕಾಂಗ್ರೆಸ್‌ ಅನ್ನು ಉಳಿಸಿಕೊಂಡರೆ ಪ್ರಮುಖ ರಾಜಕೀಯ ಶಕ್ತಿಯಾಗಿ ಉಳಿಯಲಾರಿರಿʼʼ ಎಂದಿದ್ದರು. ಹೀಗಾಗಿ ಪಕ್ಷದ ಅಧ್ಯಕ್ಷತೆಗೆ ಬೇರೆ, ಪ್ರಧಾನಿ ಅಭ್ಯರ್ಥಿಯಾಗಿ ಬೇರೆ ಮುಖಗಳನ್ನು ಅವರು ಸೂಚಿಸುವುದು ಖಚಿತ. ಆದರೆ ಈ ವಿಷಯದಲ್ಲಿ ಪಿಕೆ ಸೂಚಿಸುವ ಬದಲಾವಣೆಗಳನ್ನು ಕಾಂಗ್ರೆಸ್‌ ಎಷ್ಟು ಅಳವಡಿಸಿಕೊಳ್ಳುತ್ತದೆ? ಅಳವಡಿಸಿಕೊಳ್ಳಲು ಸೋನಿಯಾ ಅಥವಾ ರಾಹುಲ್‌ ಎಷ್ಟರ ಮಟ್ಟಿಗೆ ಸಿದ್ಧರಿದ್ದಾರೆ- ಎಂಬುದೇ ಯಕ್ಷಪ್ರಶ್ನೆ.

ಬೂತ್‌ ಮಟ್ಟದಿಂದ

ಪಕ್ಷ ಬೂತ್‌ ಮಟ್ಟದಿಂದಲೇ ಬದಲಾಗಬೇಕು. ಆದರೆ ಹಾಗೆ ಆಗಬೇಕಿದ್ದರೆ ಅದರ ಅತ್ಯುನ್ನತವಾದ ಸ್ಥಾನದಿಂದಲೇ ಬದಲಾವಣೆ ಆರಂಭವಾಗಬೇಕು. ಉದಾಹರಣೆಗೆ, ರಣದೀಪ್‌ ಸುರ್ಜೇವಾಲಾ ಕಾಂಗ್ರೆಸ್‌ನ ಕಮ್ಯುನಿಕೇಶನ್‌ ವಿಭಾಗವನ್ನು ಏಳು ವರ್ಷದಿಂದ ಆಳುತ್ತಿದ್ದಾರೆ. ಏಳು ವರ್ಷದಲ್ಲಿ ಅವರ ಸಾಧನೆ ಏನು? ಪಕ್ಷದಲ್ಲಿ ಯುವ ನಾಯಕರು ಎಷ್ಟಿದ್ದಾರೆ ಮತ್ತು ಅವರ ಸ್ಥಾನ ಎಲ್ಲೆಲ್ಲಿ ಇದೆ? ರಾಹುಲ್‌ ಗಾಂಧಿ ಅವರ ಸುತ್ತಮುತ್ತ ಠಳಾಯಿಸುತ್ತಿರುವ ನಾಯಕರಲ್ಲಿ ಯಾರ್ಯಾರ ಸಾಧನೆ ಏನೇನು? ಇಂಥ ಕಠಿಣ ಪ್ರಶ್ನೆಗಳನ್ನು ಪಿಕೆ ಪಬ್ಲಿಕ್‌ ಆಗಿ ಕೇಳಿದ್ದಾರೆ. ಒಳಗೊಂದು ಹೊರಗೊಂದು ಅವರ ಸ್ವಭಾವ ಅಲ್ಲ ಎಂದು ಬಲ್ಲವರು ಹೇಳುತ್ತಾರೆ. ಹೀಗಾಗಿ ಅವರು ಮುಚ್ಚಿದ ಕೋಣೆಯಲ್ಲೂ ಕಾಂಗ್ರೆಸ್‌ ನಾಯಕತ್ವದ ಮುಂದೆ ಈ ಪ್ರಶ್ನೆಗಳನ್ನು ಇಡಬಹುದು. ಇವುಗಳನ್ನು ಕಾಂಗ್ರೆಸ್‌ ಲೀಡರ್‌ಶಿಪ್‌ ಹೇಗೆ ಸ್ವೀಕರಿಸುತ್ತದೆ ಎಂಬುದನ್ನು ನೋಡಬೇಕು.

ಕಾಂಗ್ರೆಸ್‌ಗೆ ಈಗ ಪಿಕೆ ಬೇಕೇ ಬೇಕು. ಯಾಕೆಂದರೆ,

ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಬಳಸಿದ 11 ಕಟು ಶಬ್ದಗಳು: ಇದು ಮಾಜಿ CMಗಳ ಸಮರ

Exit mobile version