Site icon Vistara News

Explainer: ಬೆಲೆಯೇರಿಕೆ ತಡೆಯೋಕೆ ಬಡ್ಡಿದರ ಏರಿಕೇನಾ?

ದೇಶದಲ್ಲಿ ಗ್ರಾಹಕ ಮಾರುಕಟ್ಟೆಯಲ್ಲಿ ಹಣದುಬ್ಬರ ಮಾರ್ಚ್‌ನಲ್ಲಿ 7% ತಲುಪಿದೆ. ಇನ್ನಷ್ಟು ಏರುವ ಸೂಚನೆ ತೋರಿಸುತ್ತಿದೆ. ಇದಕ್ಕೆ ಕಾರಣ ಉಕ್ರೇನ್‌ ಯುದ್ಧದಿಂದಾಗಿ ಕಚ್ಚಾ ತೈಲದ ಜಾಗತಿಕ ಕೊರತೆ, ಗೋಧಿ ಮುಂತಾದ ಆಹಾರಧಾನ್ಯಗಳ ಕೊರತೆ ಇತ್ಯಾದಿ. ಜೂನ್‌ನಲ್ಲಿ ಇದು 8% ತಲುಪಬಹುದು ಎಂಬ ಅಂದಾಜು ಇದೆ.

ಹಿಂದೆಯೂ ಈ ಸ್ಥಿತಿ ಆದದ್ದುಂಟು. 2013ರಲ್ಲಿ ಇದು 12%ನ್ನೂ ಮೀರಿ ಹೋಗಿತ್ತು. ಇದು ಉದ್ಯಮಗಳನ್ನೂ ದೈನಂದಿನ ಬದುಕನ್ನೂ ದುರ್ಭರಗೊಳಿಸಿತ್ತು. ಸದ್ಯದ ಪಾಲಿಸಿಗಳು, ಅಂದಿನ ತಪ್ಪನ್ನು ಮರುಕಳಿಸದಂತೆ ಮಾಡಲು ಯತ್ನಿಸುತ್ತಿವೆ. ಹಣದುಬ್ಬರವನ್ನು 2-6% ನಡುವೆ ಕಾಪಾಡಲು ಆರ್‌ಬಿಐ ಯತ್ನಿಸುತ್ತಿದ್ದರೂ ಅದು ಮೀರಿ ಹೋಗಿಬಿಟ್ಟಿದೆ.

ಬಡ್ಡಿ ದರ ಏರಿಕೆ ಏಕೆ?

ಹಣದುಬ್ಬರ ಕಾಲದಲ್ಲಿ ಸರಕು ಮತ್ತು ಸೇವೆಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಇದನ್ನು ನಿಯಂತ್ರಿಸಲು ಇರುವ ಸಾಮಾನ್ಯ ಸೂತ್ರ ಎಂದರೆ, ಹೆಚ್ಚಿನ ಬಡ್ಡಿ ದರಗಳ ಮೂಲಕ, ಬೇಡಿಕೆಯನ್ನು ಇಳಿಸುವುದು. ಇದರಿಂದ ಏನಾಗುತ್ತದೆ?

ನೀವೊಂದು ಕಾರು ಕೊಳ್ಳಬೇಕು ಎಂದಿದ್ದೀರಿ ಎಂದಿಟ್ಟುಕೊಳ್ಳಿ. ಬಡ್ಡಿ ದರಗಳನ್ನು ಹೆಚ್ಚಿಸಿದರೆ ನೀವು ಕಟ್ಟಬೇಕೆಂದಿರುವ ಇಎಂಐ ಮೊತ್ತ ಹೆಚ್ಚುತ್ತದೆ. ಆಗ ನಿಮ್ಮ ಯೋಜನೆಯನ್ನು ಡ್ರಾಪ್‌ ಮಾಡುತ್ತೀರಿ. ತುಂಬಾ ಮಂದಿ ಹೀಗೆ ಮಾಡಿದಾಗ, ಕಾರುಗಳಿಗೆ ಬೇಡಿಕೆ ಕುಸಿಯುತ್ತದೆ. ಕಾರ್‌ ತಯಾರಕರು ತಮ್ಮ ಉತ್ಪನ್ನಗಳ ಬೆಲೆ ಏರಿಕೆಯನ್ನು ತಡೆಯಬೇಕಾಗಿ ಬರುತ್ತದೆ. ಕಾರಿನ ಈ ಉದಾಹರಣೆ ಇತರ ಉತ್ಪನ್ನಗಳಿಗೂ ಅನ್ವಯವಾಗುತ್ತದೆ.

ಹಣದ ಪ್ರಮಾಣ ತಗ್ಗಿಸುವುದು

ಹಣದುಬ್ಬರ ತಡೆಯಲು ಇನ್ನೊಂದು ಸೂತ್ರ ಎಂದರೆ, ಮಾರುಕಟ್ಟೆಯಲ್ಲಿ ಇರುವ ಹಣದ ಪ್ರಮಾಣವನ್ನು ಕುಗ್ಗಿಸುವುದು. ಹಣದ ಲಭ್ಯತೆ ಕಡಿಮೆಯಾದಾಗ ಸಹಜವಾಗಿ ಕೊಳ್ಳುವ ಪ್ರಮಾಣ ಕುಸಿಯುತ್ತದೆ. ಹೆಚ್ಚು ಹಣಕ್ಕೆ ಕಡಿಮೆ ಸಾಮಗ್ರಿ ಕೊಳ್ಳಲು ಯಾರೂ ಬಯಸುವುದಿಲ್ಲ.

ಆದರೆ ಕೆಲವೊಮ್ಮೆ ಇದು ತಿರುಗೇಟು ನೀಡಬಹುದು. ಇದು ಹೇಗಾಗುತ್ತದೆ ನೋಡಿ. ಹಣದುಬ್ಬರ ಹೆಚ್ಚಿದಾಗ, ಬೇಡಿಕೆ ಕುಸಿಯುವ ಬದಲು ಸರಕು ಸೇವೆಗಳ ಲಭ್ಯತೆಯೇ ಇದ್ದಕ್ಕಿದ್ದಂತೆ ಕುಸಿಯಬಹುದು. ಫ್ಯಾಕ್ಟರಿಗಳು ತಯಾರಿಕೆಯನ್ನೇ ಕಡಿತಗೊಳಿಸಬಹುದು. ಕಚ್ಚಾ ತೈಲ ಇದ್ದಕ್ಕಿದ್ದಂತೆ ಮಾರುಕಟ್ಟೆಯಿಂದ ಮಾಯವಾದರೆ ಏನಾಗಬಹುದು ಕಲ್ಪಿಸಿಕೊಳ್ಳಿ. ಹೀಗಾದಾಗ ವಾಣಿಜ್ಯ ಸ್ಥಗಿತತೆ (economic stagnation) ಮತ್ತು ಹಣದುಬ್ಬರ (Inflation) ಗಳೆರಡೂ ಉಂಟಾಗಿ stagflation ಉಂಟಾಗಬಹುದು. ಇಂಥ ಸನ್ನಿವೇಶದಲ್ಲಿ ಬಡ್ಡಿ ದರ ಏರಿಸಲು ಬ್ಯಾಂಕ್‌ಗಳು ಹಿಂಜರಿಯುತ್ತವೆ.

ಆದರೆ ಈಗ ಆರ್‌ಬಿಐ ಯಾಕೆ ಬಡ್ಡಿ ದರ ಏರಿಸುತ್ತಿದೆ?

ಇದನ್ನೂ ಓದಿ: ಈ ಗ್ರಾಮದ ಮಹಿಳೆಯರು ಮದುವೆಯಾಗಿ ಮೂರೇ ದಿನಕ್ಕೆ ಓಡಿ ಹೋಗುತ್ತಾರೆ !

Exit mobile version