ದೇಶದ ರಾಜಧಾನಿ ದಿಲ್ಲಿಯಲ್ಲಿ (New Delhi) ಜಿ20 ಶೃಂಗಸಭೆ ಆರಂಭವಾಗಿದೆ(G20 Summit 2023). ಶನಿವಾರ ನಡೆದ ಜಿ20 ಶೃಂಗ ಸಭೆಯ ಯಶಸ್ವಿಯಾಗಿದ್ದು, ಭಾನುವಾರ(ಸೆ.10) ಕೂಡ ಮಹತ್ವದ ಚರ್ಚೆಗಳು ಆರಂಭವಾಗಲಿವೆ. ಭಾನುವಾರದ ಕಾರ್ಯಕ್ರಮಗಳು ಆರಂಭವಾಗುವ ಮುನ್ನ ಜಾಗತಿಕ ನಾಯಕರು ಮಹಾತ್ಮ ಗಾಂಧೀಜಿಯವರ ಸಮಾಧಿ ಸ್ಥಳವಾದ ರಾಜ್‌ಘಾಟ್‌ಗೆ ಆಗಮಿಸಿ ಗೌರವ ನಮನ ಸಲ್ಲಿಸಿದರು. ಜಿ20 ಶೃಂಗ ಸಭೆಯ ಕ್ಷಣ ಕ್ಷಣದ ಮಾಹಿತಿ ನಿಮಗಾಗಿ…..(G20 Summit LIVE Updates)
ಎರಡನೇ ದಿನದ ಕಾರ್ಯಕ್ರಮಗಳ ಪಟ್ಟಿ
ಅಕ್ಷರಧಾಮಕ್ಕೆ ರಿಷಿ ಸುನಕ್ ಭೇಟಿ
: ಜಿ20 ಸಭೆಯ ಮೊದಲ ದಿನದ ಕಾರ್ಯಕ್ರಮಗಳ ನಂತರ, ಎರಡನೇ ದಿನದ ಕಾರ್ಯಕ್ರಮಗಳು ಆರಂಭವಾಗುವ ಮುನ್ನ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಪತ್ನಿ ಅಕ್ಷತಾ ಸಮೇತ ದಿಲ್ಲಿಯ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಮಾಡಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ 170 ಗಣ್ಯರಿಗೆ ವಿಶೇಷ ಔತಣಕೂಟ. ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಶ್ವದ ಗಣ್ಯರನ್ನು ಭಾರತ ಮಂಟಪದಲ್ಲಿ ಸ್ವಾಗತಿಸುತ್ತಿದ್ದಾರೆ. ಶೀಘ್ರದಲ್ಲೇ ಔತಣಕೂಟ ಆರಂಭವಾಗಲಿದೆ
ಮತ್ತೆ ಅಮೆರಿಕಕ್ಕೆ ಜಿ20 ಅಧ್ಯಕ್ಷತೆ, ಚೀನಾದಿಂದ ತೀವ್ರ ಆಕ್ಷೇಪ
2026ರಲ್ಲಿ ಅಮೆರಿಕವು (America) ಜಿ20 ಶೃಂಗಸಭೆಯನ್ನು (G20 Summit ) ಆಯೋಜಿಸಲು ಮುಂದಾಗಿರುವುದಕ್ಕೆ ಚೀನಾ (China) ಆಕ್ಷೇಪಿಸಿದೆ. ಈ ಕುರಿತು ಈಗಾಗಲೇ ಜೋ ಬೈಡೆನ್ (President Joe Biden) ಆಡಳಿತವು ಬಹಿರಂಗವಾಗಿ ಹೇಳಿದ್ದು, ಚೀನಾ ತನ್ನ ಅಸಮಾಧಾನವನ್ನು ಹೊರ ಹಾಕಿದೆ ಎಂಬ ಸಂಗತಿಯನ್ನು ಈ ಬೆಳವಣಿಗೆ ಗೊತ್ತಿರವವರು ಹೇಳಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ. ಜಿ20 ಸದಸ್ಯರ ನಡುವೆ ಜಿ20 ಅಧ್ಯಕ್ಷತೆಯು ರೊಟೇಟ್ ಆಗುತ್ತದೆ. ಇದರಲ್ಲಿ ವಿಶ್ವ ನಾಯಕರ ವಾರ್ಷಿಕ ಸಭೆಗಳು ಸೇರಿರುತ್ತವೆ. ಭಾರತ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದ ಬಳಿಕ ಜಿ20 ಅಧ್ಯಕ್ಷತೆಯನ್ನು ವಹಿಸಿಕೊಳ್ಳುವುದಾಗಿ ಈಗಾಗಲೇ ಅಮೆರಿಕ ಘೋಷಣೆ ಮಾಡಿದೆ. ಆದರೆ, ಅಮೆರಿಕದ ಈ ನಡೆಗೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ.
ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದಿಲ್ಲಿಗೆ ಆಗಮಿಸಿರುವ ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ (Britain PM Rishi Sunak) ಹಾಗೂ ಅವರ ಪತ್ನಿ ಅಕ್ಷಿತಾ ಮೂರ್ತಿ (Akshita Murthy) ಅವರು ಶುಕ್ರವಾರ ರಾತ್ರಿ ಕೇಂದ್ರ ದಿಲ್ಲಿ ರಸ್ತೆಗಳಲ್ಲಿ (Delhi Roads) ವಾಕ್ ಮಾಡುತ್ತಿರುವ ಚಿತ್ರಗಳು ವೈರಲ್ ಆಗಿವೆ. ಪಿಎಂ ಸುನಕ್ ಮತ್ತು ಪತ್ನಿ ಅಕ್ಷಿತಾ ಅವರು ಒಬ್ಬರಿಗೊಬ್ಬರು ಕೈ ಹಿಡಿದುಕೊಂಡು ನಡೆದುಕೊಂಡು ಹೋಗುತ್ತಿದ್ದಾರೆ ಮತ್ತು ಬೆಂಗಾಲ ಪಡೆ ಅವರಿಗೆ ಪಹರೆ ಮಾಡುತ್ತಿರುವುದನ್ನು ಕಾಣಬಹುದು. ಶುಕ್ರವಾರ ರಾತ್ರಿ ಇಂಗ್ಲೆಂಡ್ ಪಿಎಂ ರಿಷಿ ಸುನಕ್ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಉಭಯ ನಾಯಕರ ಭೇಟಿ ಸಾಧ್ಯವಾಗಿಲ್ಲ(G20 Summit 2023).