ದೇಶದ ರಾಜಧಾನಿ ದಿಲ್ಲಿಯಲ್ಲಿ (New Delhi) ಜಿ20 ಶೃಂಗಸಭೆ ಆರಂಭವಾಗಿದೆ(G20 Summit 2023). ಶನಿವಾರ ನಡೆದ ಜಿ20 ಶೃಂಗ ಸಭೆಯ ಯಶಸ್ವಿಯಾಗಿದ್ದು, ಭಾನುವಾರ(ಸೆ.10) ಕೂಡ ಮಹತ್ವದ ಚರ್ಚೆಗಳು ಆರಂಭವಾಗಲಿವೆ. ಭಾನುವಾರದ ಕಾರ್ಯಕ್ರಮಗಳು ಆರಂಭವಾಗುವ ಮುನ್ನ ಜಾಗತಿಕ ನಾಯಕರು ಮಹಾತ್ಮ ಗಾಂಧೀಜಿಯವರ ಸಮಾಧಿ ಸ್ಥಳವಾದ ರಾಜ್‌ಘಾಟ್‌ಗೆ ಆಗಮಿಸಿ ಗೌರವ ನಮನ ಸಲ್ಲಿಸಿದರು. ಜಿ20 ಶೃಂಗ ಸಭೆಯ ಕ್ಷಣ ಕ್ಷಣದ ಮಾಹಿತಿ ನಿಮಗಾಗಿ…..(G20 Summit LIVE Updates)
ಉಕ್ರೇನ್ ಬಿಕ್ಕಟ್ಟಿನ ವಿಷಯದ ಕುರಿತು ನಿರ್ಣಯ
ಉಕ್ರೇನ್‌ನಲ್ಲಿ ರಷ್ಯಾ ನಡೆಸುತ್ತಿರುವ ಆಕ್ರಮಣಕ್ಕೆ ವಿಷಯಕ್ಕೆ ಸಂಬಂಧಿಸಿದಂತೆ ಜಿ 20 ಶೃಂಗಸಭೆಯಲ್ಲಿ ತೆಗೆದುಕೊಂಡ ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. ಉಕ್ರೇನ್‌ನಲ್ಲಿ ಶಾಂತಿಸ್ಥಾಪನೆ ಕುರಿತು ಗ್ರೂಪ್‌ನ ಎಲ್ಲ ರಾಷ್ಟ್ರಗಳು ಒಂದೇ ಅಭಿಪ್ರಾಯ ಮಂಡಿಸಿವೆ ಎಂದು ತಿಳಿದುಬಂದಿದೆ. ನಿರ್ಣಯದ ಕುರಿತು ಕೆಲವೇ ಕ್ಷಣಗಳಲ್ಲಿ ಪ್ರಕಟಣೆ ಹೊರಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಮೋದಿ-ರಿಷಿ ಸುನಕ್ ಮಾತುಕತೆ
ಜಿ 20 ಶೃಂಗಸಭೆಯ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಭಾರತ ಹಾಗೂ ಬ್ರಿಟನ್ ಸಂಬಂಧ ವೃದ್ಧಿ ಸೇರಿ ಹಲವು ವಿಷಯಗಳ ಕುರಿತು ಉಭಯ ನಾಯಕರು ಮಾತುಕತೆ ನಡೆಸಿದರು.
पंतप्रधान @narendramodi यांनी ब्रिटनचे पंतप्रधान @RishiSunak यांच्यासमवेत #G20 शिखर परिषदेप्रसंगी द्विपक्षीय बैठक घेतली.#G20 #G20India2023 pic.twitter.com/d6bKWF0d2f
— PIB in Goa (@PIB_Panaji) September 9, 2023
ಖರ್ಗೆಗೆ ಆಹ್ವಾನ ನೀಡದಿರುವುದಕ್ಕೆ ಸಿದ್ದರಾಮಯ್ಯ ಅಸಮಾಧಾನ
ಜಿ20 ಶೃಂಗಸಭೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸದಿರುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು. “ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆ ಪ್ರತಿಪಕ್ಷ ನಾಯಕರು. ಅವರಿಗೆ ಆಹ್ವಾನ ನೀಡದಿರುವುದು ತಪ್ಪು” ಎಂದು ಸಿದ್ದರಾಮಯ್ಯ ಹೇಳಿದರು. ಇನ್ನು ಸಭೆಗೆ ಹಾಜರಾಗುವ ಕುರಿತು ಮಲ್ಲಿಕಾರ್ಜುನ ಖರ್ಗೆ ಅವರೂ ಪ್ರತಿಕ್ರಿಯಿಸಿದ್ದು, “ಆಹ್ವಾನವೇ ಇಲ್ಲದೆ ನಾನು ಹೇಗೆ ಭಾಗವಹಿಸಲಿ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೊದಲ ಸೆಷನ್‌ನಲ್ಲಿ ಭಾಗಿಯಾದ ಕುರಿತು ಮೋದಿ ಪೋಸ್ಟ್
Spoke at Session 1 of the G20 Summit on the subject of One Earth. Highlighted the need to further human centric development, which is also something Indian culture has always emphasised on.
— Narendra Modi (@narendramodi) September 9, 2023
It is with a spirit of One Earth that India has worked on initiatives such as LiFE… pic.twitter.com/lVB2OoBioI
ಜಿ20 ನಾಯಕತ್ವದ ಕುರಿತು ರಿಷಿ ಸುನಕ್ ಪೋಸ್ಟ್
“ಜಾಗತಿಕ ಆರ್ಥಿಕ ಬಿಕ್ಕಟ್ಟು ನಿವಾರಣೆಗಾಗಿ 15 ವರ್ಷಗಳ ಹಿಂದೆ ಜಿ20 ನಾಯಕರು ಒಟ್ಟಾಗಿ ಬಂದಿದ್ದರು. ಈಗಲೂ ಜಗತ್ತು ಜಿ20ಯ ನಾಯಕತ್ವಕ್ಕಾಗಿ ಹಂಬಲಿಸುತ್ತಿದೆ. ಎಲ್ಲರೂ ಒಗ್ಗೂಡಿ ಸವಾಲುಗಳನ್ನು ಹಿಮ್ಮೆಟ್ಟಿಸೋಣ” ಎಂದು ರಿಷಿ ಸುನಕ್ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
15 years ago, #G20 leaders came together for the first time to restore global growth after the financial crisis.
— Rishi Sunak (@RishiSunak) September 9, 2023
We meet at a time of enormous challenges – the world is looking to the G20 once again to provide leadership.
Together I believe we can address these challenges. pic.twitter.com/RFnry53YAf